ಶಿರಸಿ ಮಾರಿಕಾಂಬೆ ಪ್ರಸೀದತು |
ವೇಳೆ ನಾಲ್ಕು ಘಂಟೆ ಆಗಿತ್ತು. ಸಂಜೆ ಮೈಸೂರಿಗೆ ತೆರಳುವ ಬಸ್ಸು 7 ಘಂಟೆಗೆ ಇದ್ದ ಕಾರಣ ಹೊರಡುವ ಸಿದ್ದತೆ ಆಗಬೇಕಿತ್ತು......!!! ಶಿರಸಿಗೆ ವಿದಾಯ ಹೇಳುವ ಸಮಯ ಬಂದಿತ್ತು. ................!!!! ಹೌದು ಈ ಅಲೆದಾಟದಲ್ಲಿ ಎರಡು ದಿನ ಕಳೆದದ್ದೇ ಗೊತ್ತಾಗಲಿಲ್ಲ. ಮೈಸೂರಿಗೆ ಹೊರಡಲು ಸಿದ್ದತೆ ನಡೆಸಬೇಕಾಗಿತ್ತು. ಶಿರಸಿ ಜಾತ್ರೆಯಿಂದ ಅತ್ತೆಮನೆಗೆ ದೌಡಾಯಿಸಿದೆ. ನಮ್ಮ ಹರ್ಷ ತನ್ನ ಬೈಕನ್ನು ಮಿಂಚಿನ ವೇಗವಾಗಿ ಚಾಲನೆ ಮಾಡಿ ಕೇವಲ ಹತ್ತು ನಿಮಿಷದಲ್ಲಿ ಮನೆಯನ್ನು ತಲುಪಿಸಿದ. ಮನೆಯ ಬಳಿ ಇಳಿದ ನಾನೂ ಹರ್ಷ ಹೆಗಡೆಗೆ ವಿದಾಯ ಹೇಳುವ ಕ್ಷಣ ಬಂದಿತ್ತು, ನನಗೆ ಅರಿವಿಲ್ಲದಂತೆ ಮನದಲ್ಲಿ ಅವನ ಬಗ್ಗೆ ಪ್ರೀತಿ ಹಾಗು ಅವನನ್ನು ಬಿಟ್ಟು ಊರಿಗೆ ತೆರಳಬೇಕಲ್ಲಾ ಎನ್ನುವ ಬೇಸರ ಕಾಡಿತು.
ಗೆಳೆಯ ಹರ್ಷ ಹೆಗ್ಡೆ. |
ಎರಡು ದಿನದಿಂದ ತನ್ನ ಬೈಕಿನಲ್ಲಿ ನನ್ನನ್ನು ಅಲೆದಾಡಿಸಿ ಒಂದು ಹನಿ ಪೆಟ್ರೋಲ್ ಸಹ ನನ್ನ ಕೈನಿಂದ ಹಾಕಿಸಲು ಅವಕಾಶ ಕೊಡದೆ ಮೊದಲ ದಿನ ಸಹಸ್ರಲಿಂಗ, ಸೋಂದೆ ಅರಸರ ಗದ್ದಿಗೆ, , ಸೋಂದೆ ಅರಸರ ಕೋಟೆ, ಮುತ್ತಿನ ಕೆರೆ, ಶ್ರೀ ಸ್ವರ್ಣವಲ್ಲಿ ಮಠ, ಶ್ರೀ ವಾಧಿರಾಜ ಮಠ, ಬನವಾಸಿ, ದರ್ಶನ ಮಾಡಿಸಿ, ಎರಡನೆಯ ದಿನ ಶಿರಸಿ ಮಾರಿಕಾಂಬಾ ದೇವಾಲಯ, ಕೊಳಗಿ ಬೀಸ್ , ಭೀಮನೇರಿ ಗುಡ್ಡ, ಶಿರಸಿ ಜಾತ್ರೆ ಇವೆಲ್ಲವನ್ನೂ ಉತ್ಸಾಹದಿಂದ ತೋರಿಸಿ ಸಂಭ್ರಮ ಪಟ್ಟ ಹುಡುಗ. ಯಾವ ಜನ್ಮದ ಮಿತ್ರನೋ ಕಾಣೆ ಆರ್ಕುಟ್ ಸಾಮಾಜಿಕ ತಾಣದಿಂದ ಪರಿಚಯವಾಗಿ ಬಹಳ ದಿನಗಳ ಪರಿಚಯವೇನೋ ಎಂಬಂತೆ ನನ್ನನ್ನು ಆತ್ಮೀಯವಾಗಿ ಆದರಿಸಿದ ಗೆಳೆಯ ಇವನು. ಇವನ ಸಹಾಯ ವಿಲ್ಲದಿದ್ದರೆ ಶಿರಸಿಯ ಪ್ರವಾಸ ಸಾಧ್ಯವೇ ಇಲ್ಲವಾಗಿತ್ತು. " ಬಾಲೂ ಸಾರ್ ಬಹಳ ಖುಷಿಯಾಗಿತ್ತು ಎರಡು ದಿನ ನಿಮ್ಮ ಜೊತೆ ಕಳೆದದ್ದು ಈಗ ಬೇಸರವಾಗುತ್ತಿದೆ " ಎಂದು ಹೇಳಿ ಅಲ್ಲಿಂದ ಹರ್ಷ ಹೊರಟೇಬಿಟ್ಟ .
ಮನೆ ಸೇರಿದ ನಾನು ನನ್ನ ಅತ್ತೆಯ ಮನೆ ಸೇರಿದೇ ಎರಡು ದಿನಗಳಿಂದ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ನನ್ನ ವಸ್ತುಗಳನ್ನು ಕಿಟ್ ಬ್ಯಾಗಿಗೆ ತುರುಕಿ, ಕ್ಯಾಮರಾ ಹಾಗು ಲೆನ್ಸ್ ಜೋಪಾನ ಮಾಡಿಕೊಂಡು ಪ್ಯಾಕ್ ಮಾಡಿದೆ., ಎಲ್ಲರೊಡನೆ ಆತ್ಮೀಯವಾಗಿ ಒಂದಷ್ಟು ಹರಟೆ ಹೊಡೆದು ಎಲ್ಲರಿಗೂ ಪ್ರೀತಿಯ ವಿದಾಯ ಹೇಳಿ ಬಸ್ ನಿಲ್ದಾಣದ ಕಡೆಗೆ . ಹೊರಟೆ. ಯೆಲ್ಲಾಪುರ ದಿಂದ ಬರಬೇಕಾದ ಬಸ್ಸು ಬರಲು ಬಹಳ ಸಮಯ ತೆಗೆದು ಕೊಂಡಿತು .ಶಿರಸಿಯ ಹೊಸ ಬಸ್ ನಿಲ್ದಾಣ ಜನಗಳಿಂದ ತುಂಬಿ ಹೋಗಿತ್ತು, ಯಾವುದೇ ಬಸ್ ಬಂದರೂ ಇರುವೆಗಳಂತೆ ಜನ ಮುತ್ತುತ್ತಿದ್ದರು. ಕೊನೆಗೂ ನಮ್ಮ ಬಸ್ ಬಂತು, ಮೊದಲೇ ಟಿಕೆಟ್ ಕಾಯ್ದಿರಿಸಿದ್ದ ಕಾರಣ, ನನಗೆ ಆಸನಕ್ಕೆ ತೊಂದರೆಯಾಗಲಿಲ್ಲ , ನನ್ನ ಲಗ್ಗೆಜನ್ನು ಬಸ್ನಲ್ಲಿ ಇಟ್ಟು ಹಾಗೆ ಕಣ್ಣು ಹಾಯಿಸಿದೆ , ಅರೆ ಹರ್ಷ ನನ್ನ ಕಿಟಕಿಯ ಬಳಿ ನಗುತ್ತಾ ನಿಂತಿದ್ದ, ನನಗೆ ಅಚ್ಚರಿ ಅಲ್ಲಾ ಈ ಹುಡುಗನಿಗೆ ಯಾಕೆ ಇಷ್ಟೊಂದು ಆತ್ಮೀಯತೆ ನನ್ನಲ್ಲಿ ಅಂತಾ ಅನ್ನಿಸಿ ಅಚ್ಚರಿಯಾಯಿತು. ಮನೆಗೆ ಹೋಗಿದ್ದವ ಮನಸು ತಡೆಯದೆ ಮತ್ತೆ ಓಡಿಬಂದಿದ್ದ ನನ್ನನ್ನು ನೋಡಲು. ಇದೆಂತಾ ಆತ್ಮೀಯತೆ ಅನ್ನಿಸಿ ಮನ ತುಂಬಿ ಬಂತು. ಇಬ್ಬರೂ ಸ್ವಲ್ಪ ಹೊತ್ತು ಎರಡು ದಿನಗಳ ಪ್ರವಾಸದ ಮೆಲುಕು ಹಾಕಿದೆವು. "ಬಾಲೂ ಸರ್ ಮತ್ತೊಮ್ಮೆ ಬನ್ನಿ ಇನ್ನಷ್ಟು ನೋಡೋಣ" "ನಿಮ್ಮ ಜೊತೆ ಇದ್ರೆ ನನಗೆ ಭಾರೀ ಖುಷಿ ಗೊತ್ತಾ"? ಎಂದಾಗ ಏನು ಹೇಳೋದು ಅಂತಾ ತಿಳಿಯಲಿಲ್ಲ . ಕೊನೆಗೆ ಮನ ತುಂಬಿಬಂದು ಮನಸಾರೆ ವಂದಿಸಿ ಅವನಿಂದ ಬೀಳ್ಕೊಂಡೆ. ಮನದಲ್ಲಿ " ಶಿರಸಿ ನಿನಗೆ ಧನ್ಯವಾದಗಳು ಮತ್ತೊಮ್ಮೆ ಜ್ಞಾನಾರ್ಜನೆಗೆ ನಿನ್ನಲ್ಲಿಗೆ ಬರುವೆ " ಎಂದುಕೊಂಡೆ . ನಮ್ಮ ಬಸ್ ಅಲ್ಲಿಂದ ನಿಧಾನವಾಗಿ ಹೊರಟಿತು, ಎರಡು ದಿನದ ಅಲೆದಾಟದ ಆಯಾಸದಿಂದ ಬಸ್ಸು ಹೊರಟ ತಕ್ಷಣ ನಿದ್ದೆಗೆ ಜಾರಿದೆ. ............................................ !!! ಶಿರಸಿಯಿಂದ ಹೊರಟ ಬಸ್ಸು ಮೈಸೂರಿನ ಕಡೆಗೆ ಬಿರುಸಿನಿಂದ ಸಾಗಿತ್ತು.
ಈ ಪ್ರವಾಸ ಲೇಖನ ಮಾಲಿಕೆಯಲ್ಲಿ ಹಲವಾರು ಗೆಳೆಯರು ಪ್ರೀತಿಯಿಂದ ಕರೆ ಮಾಡಿ ಖುಷಿಪಟ್ಟರು, ಹಾಗು ಹಲವಾರು ಗೆಳೆಯರು ಚಂದದ ಕಾಮೆಂಟ್ ಹಾಕಿ ಸಂಭ್ರಮಿಸಿದರು . ಬನ್ನಿ ಆತ್ಮೀಯ ಓದುಗರು ಪ್ರೀತಿಯಿಂದ ಹೇಳಿದ್ದನ್ನು ಒಮ್ಮೆ ಓದೋಣ. ದಯಮಾಡಿ 01 ರಿಂದ ಮೊದಲು ಪ್ರಾರಂಭವಾಗಿ 15 ಕೊನೆಯದಾಗಿರುವಂತೆ ಓದಲು ಕೋರುತ್ತೇನೆ.
| |||||||
ಸಂಚಿಕೆ :-)02 | |||||||
| |||||||
ಸಂಚಿಕೆ :-) 03 | |||||||
| |||||||
ಸಂಚಿಕೆ :-) 04 | |||||||
| |||||||
ಸಂಚಿಕೆ 05 | |||||||
| |||||||
ಸಂಚಿಕೆ 06 | |||||||
| |||||||
ಸಂಚಿಕೆ:-) 07 | |||||||
| |||||||
ಸಂಚಿಕೆ :-) 08 | |||||||
11 comments:
| |||||||
ಸಂಚಿಕೆ :-) 09 | |||||||
| |||||||
ಸಂಚಿಕೆ :-) 10 | |||||||
| |||||||
| |||||||
ಸಂಚಿಕೆ :-) 12 | |||||||
| |||||||
ಸಂಚಿಕೆ :-) 13 | |||||||
| |||||||
ಸಂಚಿಕೆ :-) 14 | |||||||
| |||||||
ಸಂಚಿಕೆ :-) 15 | |||||||
| |||||||||
ಪ್ರೀತಿಯ ಮಾತುಗಳಿಗೆ ಕೃತಜ್ಞ .ಅನಿಸಿಕೆ ತಿಳಿಸಿದ ಎಲ್ಲರಿಗೂ ಪ್ರೀತಿಯ ಶುಭ ಕಾಮನೆಗಳು. | |||||||||