Monday, May 24, 2010

ಬನ್ನಿ ಬ್ಲಾಗಿನ ಹಕ್ಕಿಗಳೇ ಗುಂಪು ಸೇರೋಣ !!! ಜೊತೆಯಾಗಿ ಹಾರೋಣ!!

ಬನ್ನಿ ಬ್ಲಾಗಿನ ಹಕ್ಕಿಗಳೇ ಗುಂಪು ಸೇರೋಣ !! ಜೊತೆಯಾಗಿ ಹಾರೋಣ ,ಅತ್ತ ಅಕ್ಕ ಪಕ್ಕದ ಕಾನನದಲ್ಲಿ  ಗುಂಪು ಸೇರುವ ಬಗ್ಗೆ ಚರ್ಚೆ ಶುರುವಾಗಿದೆ .ನೀವು ಯಾವದಿಕ್ಕಿನ ಹಕ್ಕಿಯಾಗಿದ್ದರೂ ನಿಮಗೆ ಇಲ್ಲಿ ತೆರೆದ ಹೃದಯದ  ಸ್ವಾಗತ!!!  .ಮೈಸೂರು ,ಚಾಮರಾಜನಗರ ಹಾಗು  ಮಂಡ್ಯ ಜಿಲ್ಲೆಯ  ಬ್ಲಾಗ್ ಹಕ್ಕಿಗಳು  ನನ್ನ ಮೇಲ್ ಗೆ [balusmiles@gmail.com] ಸಂಪರ್ಕ ಬೆಳೆಸ ಬಹುದು .ಪರಸ್ಪರ ಸೇರಿ ನಂತರ ಮಾತಾಡಿ ಒಂದು ಬ್ಲಾಗಿಗರ ಕೂಟ ರಚಿಸೋಣ , ಹಾಗು ಹಲವಾರು ಬ್ಲಾಗ್ ಗೆಳೆಯರು ಈ ಗಾಗಲೇ ಈ ಕಾರ್ಯ ಹಮ್ಮಿಕೊಂಡಿದ್ದು ನಾವು ಅವರೊಡನೆ ಸಾಗೋಣ .
ಬನ್ನಿ ನಿಮ್ಮ ಆಲೋಚನೆಗಳನ್ನು ,ಜ್ಞಾನವನ್ನು ಹಂಚಿಕೊಂಡು ನಿಮ್ಮ ಸ್ನೇಹಲೋಕವನ್ನು  ವಿಶಾಲ ಒಂದು ಉತ್ತಮ ವೇದಿಕೆ ಇದು .ಬನ್ನಿ ಗುಂಪು ಕಟ್ಟೋಣ ಜೊತೆಯಾಗಿ ಸೇರೋಣ. ಬ್ಲಾಗ್ ಗೆಳೆಯರ ಲೋಕಕ್ಕೆ ನಿಮಗೆ ಸ್ವಾಗತ.ಸೇರಬಯಸುವವರು  ಮೊದಲ ಕಂತಿನ ಪ್ರೀತಿ ತುಂಬಿದ ಮಾತುಗಳನ್ನು ನನ್ನ ಮೇಲ್  ವಿಳಾಸಕ್ಕೆ ತಕ್ಷಣ ಭರ್ತಿಮಾಡಿ.ನಿಮ್ಮ ಆಗಮನಕ್ಕೆ ಕಾದವ .... ಬಾಲು

Tuesday, May 11, 2010

ಮೈಸೂರು ಬೆಂಗಳೂರು ಪಯಣದ ಹಾದಿಯಲ್ಲಿ!!! ನೋಡಿಸ್ವಾಮಿ ನಾವಿರೋದೆ ಹೀಗೆ ಭಾಗ-೦೨
ಚೆನ್ನಪಟ್ಟಣದಲ್ಲಿ ನಮ್ಮ ಪಯಣ ಮುಂದುವರೆದು ಸಾಗಿತು.ನೀವು ಯಾವ ಊರಿಗೆ ಪ್ರವೇಶಿಸಿ  ಅಲ್ಲಿ ನಿಮಗೆ ಕಾಣುವುದು ಸಾಮಾನ್ಯವಾಗಿ ತಯಾರಾಗುವ ಉತ್ಪನ್ನಗಳ ಅಂಗಡಿಗಳು.ಆದ್ರೆ ಮರದ ಬೊಂಬೆಗಳ ತಯಾರಿಕೆಯಲ್ಲಿ ಪ್ರಸಿದ್ದಿಹೊಂದಿದ , ಗೊಂಬೆಗಳ ನಗರ ಎಂದು ಕರೆಸಿಕೊಂಡ ಈ ಊರಿನಲ್ಲಿ ಇಂದು ಮೊದಲು ಕಂಡಕಂಡಲ್ಲಿ  ಗೊಂಬೆಗಳ  ಅಂಗಡಿಗಳು ಕಾಣಿಸುತ್ತಿದ್ದವು !!! ಆದ್ರೆ ಇತ್ತೀಚಿನ ದಿನಗಳಲ್ಲಿ ಚೀನಾ ದೇಶದ ಗೊಂಬೆಗಳು ಮಾರುಕಟ್ಟೆಗೆ ನುಗ್ಗಿ  ಈ ಊರಿನ ಗೊಂಬೆ ತಯಾರಕರ ಬಾಳನ್ನು ಸಂಕಷ್ಟಕ್ಕೆ ನೂಕಿವೆ !!!.ಮೊದಲಿದ್ದ ಗೊಂಬೆ ಅಂಗಡಿಗಳು ಒಂದೊಂದಾಗಿ  ಮರೆಯಾಗಿ ಹೋಗಿದ್ದು , ಈಗ ಅಲ್ಲೊಂದು ಇಲ್ಲೊಂದು ಅಂಗಡಿ ಜೀವ ಹಿಡಿದು ನಿಂತಿವೆ !!! ಭಾರವಾದ ಮನಸ್ಸಿನೊಡನೆ ಮುಂದುವರಿದು ಬಸ್ ನಿಲ್ದಾಣದ  ಬಳಿ ಬಂದಾಗ ಕಂಡುಬಂದ ದೃಶ್ಯ [ಚಿತ್ರ ೦೧]ಅದೇ ಗಡಿಬಿಡಿ, ಬೆಂಗಳೂರಿಗೆ ಜನರ ಕರೆದೊಯ್ಯಲು ಖಾಸಗಿ ಹಾಗು ಸರ್ಕಾರಿ ಬಸ್ಸುಗಳ ನಡುವೆ ಪೈಪೋಟಿ  ನಡೆದಿತ್ತು.ಸ್ವಾಮೀ ಕೆಲವೊಮ್ಮೆ ಬಸ್ಸಿನ ಸಿಬ್ಬಂದಿ ಗಳು ಹೊಡೆದಾಟ ಮಾಡಿ ಪ್ರಯಾಣಿಕರನ್ನುಎಳೆದಾಡುವುದು  ಉಂಟು!!ಹಾಗೆ ಮುಂದುವರೆದು ಹೋಗುವಾಗ
ತಾನುಬೇಳೆದ ತೆಂಗಿನ ಕಾಯಿಗಳ ಜೊತೆಯಲ್ಲಿ ಯಾವ ಹಳ್ಳಿ ಇಂದಲೋ ಬೆಂಗಳೂರಿಗೆ ಕಾರ್ಗೋ ಮಿನಿ ಲಾರಿಯಲ್ಲಿ  ಹೋರಾಟ ರೈತ ಕಾಣಿಸಿದ
ಈ ಬೆಂಗಳೂರೆಂಬ ಮಾಯದ ರಕ್ಕಸನ ಹೊಟ್ಟೆಗೆ ಇಂತಹ ಎಷ್ಟು ಮೂಟೇಗಳಲ್ಲಿ ತೆಂಗಿನ ಕಾಯಿ ಬಂದರೂ ಸಾಲದೆಂದು ಅನ್ನಿಸಿತು.[ಚಿತ್ರ ..೦೨]ಮುಂಜಾನೆ ಹಳ್ಳಿಬಿಟ್ಟು ತಾನು ಬೆಳೆದ ತೆಂಗಿಕಾಯಿಯನ್ನು ಬೆಂಗಳೂರಿನ ಮಾರುಕಟ್ಟೆಯಲ್ಲಿ ಮಾರಿದಾಗ ಬರುವ ಲಾಭದ ಬಗ್ಗೆ ಕನಸ ಹೊತ್ತು  ಈ ಜೀವ ಪಟ್ಟಣದ ಕಡೆಗೆ ಹೊರಟಿತ್ತು!!!.ಕೂರಲು ಜಾಗವಿಲ್ಲದಿದ್ರೂ  ಇರುವಷ್ಟರಲ್ಲೇ ಮುದುರಿ ಕುಳಿತು ಕನಸಿನ ಬೆನ್ನಟ್ಟಿ ಹೋಗುತ್ತಿರುವ ಇವನಿಗೆ ದಲ್ಲಾಳಿಗಳಿಂದ ಮುಕ್ತಿಸಿಕ್ಕಿ ಲಾಭವಾದರೆ ಅದೇ ಪುಣ್ಯ ಅನ್ನಿಸಿತು.ಅರೆ ಇದೇನಿದು
ಇಲ್ಲೊಂದು  ತಳ್ಳೋ ಕಾರ್ ಹೋಗುತ್ತಿದೆ ಹೌದು ಸ್ವಾಮೀ ವಾಹನಗಳು ಯಾವಾಗ ಕೈಕೋಡುತ್ತೋ ಗೊತ್ತಾಗೊಲ್ಲ ಕಾರ್ ಕೈಕೊಟ್ಟು ಪಾಪ [ಚಿತ್ರ ..೦೩]ಮನೆಯ ಗಂಡಸರು ತಳ್ಳುತಿದ್ದರೆ ಪಾಪ ಮನೆಯ  ಹೆಂಗಸು ಕಾರು ಸ್ಟಾರ್ಟ್ ಆದ್ರೆ ಸಾಕಪ್ಪಾ ಅಂತ ಹಿಂಬಾಲಿಸುತ್ತಿದ್ದಾಳೆ !!! ಜೀವನವೂ ಹಾಗೆ ಅಲ್ವೇ  ಚೆನ್ನಾಗಿದ್ರೆ ಸರಿ ಈ ಕಾರಿನಂತೆ ಕೈಕೊಟ್ರೆ??? ಅದೊಗತಿ ಆಲ್ವಾ???ಅಂತ ಮುಂದೊದ್ವಿ  ಅಗೋ ಅಲ್ಲಿ ಕಾಣಿಸಿತು ನನ್ನ ಬಾಲ್ಯದ ನೆಚ್ಚಿನ ಐಸ ಕ್ಯಾಂಡಿ ಮಾರುವವನು!!![ಚಿತ್ರ ..೦೪]
ನಾನು ಚಿಕ್ಕವನಾಗಿದ್ದಾಗ ಸೈಕಲ್ಲಿನ ಮೇಲೆ ಐಸ ಕ್ಯಾಂಡಿ ಮಾರುವವನು ಬಂದು ಪೊಂ ಪೊಂ ಅಂತ ಹಾರ್ನ್ ಮಾಡಿದ್ರೆ ಸಾಕು ಹಳ್ಳಿ ಮಕ್ಕಳೆಲ್ಲ ಅವನ ಸುತ್ತ ಹಾಜರ್ ಕೆಂಪು, ಹಳದಿ ,ಬಿಳಿಬಣ್ಣದ ಮೋಹಕ ಐಸ ಕ್ಯಾಂಡಿಗಳನ್ನು ಪೆಟ್ಟಿಗೆ ಯೋಳಗಿನಿಂದ ತೆಗೆದು ಕೊಟ್ಟಾಗ ನಮಗೆ ಹಿಗ್ಗೋ ಹಿಗ್ಗು ಅಂದು ಸೈಕಲ್ಲು ಮೇಲೆ ಏರಿದ್ದ ಐ ಸ ಪೆಟ್ಟಿಗೆ ಇಂದು ಟಿ.ವಿ.ಎಸ  ಮೊಪೆಡ್ ಏರಿಕುಳಿತು ಯಾವ ಹಳ್ಳಿಗೋ  ಸವಾರಿ ಹೊಂಟಿತ್ತು.!!! ಎಷ್ಟು ಮಕ್ಕಳು ಕಾದುಕುಳಿತ್ತಿದ್ದರೋ ಕಾಣೆ!! ಹೀಗೆ  ನೋಡುತ್ತಾ ಬರುವಾಗ ರಾಮನಗರ ಪ್ರವೇಶ ಮಾಡಿದ್ದು ಗೊತ್ತೆಆಗ್ಲಿಲ್ಲ
ಯಾಕೋ ತಲೆ ತೆತ್ತಿನೋಡಿದರೆ ವಿದ್ಯುತ್ ತಂತಿಗಳ ಬಲೆ  ಕಾಣಿಸಿತು [ಚಿತ್ರ..೦೫]ಇಡಿ ರಾಮನಗರ ಪಟ್ಟಣವನ್ನು ವಿದ್ಯುತ್ ತಂತಿಗಳ ಬಲೆಯಲ್ಲಿ ಬಂಧಿಸಿದಂತೆ  ಭಾಸವಾಯಿತು.ಅರೆ ಇದೂ ಕೂಡ ನಮ್ಮ ವಿಜ್ಞಾನದ ಕೊಡುಗೆ ಅಲ್ವೇ ಅಂತ ಅನ್ನಿಸಿ ನಾವೆಲ್ಲಾ ಇಂಥಹ ಹಲವಾರು ಬಳೆಗಳಲ್ಲಿ ಬಂಧಿಗಳಲ್ವೆ !! ಅನ್ನಿಸಿ ನಗು ಬಂದಿತ್ತು!! ಈ ನಡುವೆ ಮಲೆ ಮಾದೇಶ್ವರ  ಬಸ್ಸು
ಎತ್ತಲಿಂದಲೋ ಅಡ್ಡಾದಿಡ್ಡಿ ಬಂದು ಅಡ್ಡಲಾಗಿ ನುಗ್ಗಿ ಬಿಡೋದೇ!!ಪುಣ್ಯ ನಮ್ಮ ಚಾಲಕ ಚಾಲಾಕಿನಿಂದ ಅದನ್ನು ತಪ್ಪಿಸಿದ್ದ [ಚಿತ್ರ..೦೬]ರಾಮನಗರ ರೇಷ್ಮೆ ಗೂಡಿನ ಮಾರುಕಟ್ಟೆಗೆ ಪ್ರಸಿದ್ದಿ
ದೂರ ದೂರದ ಊರುಗಳಿಂದ ಬಹಳ ಹಿಂದಿನಿಂದಲೂ ರೈತರು ರೇಷ್ಮೆ ಗೂಡನ್ನು ತಂದು ಮಾರುತ್ತಾರೆ.ಹಲವಾರು ಊರುಗಳಲ್ಲಿ ರೇಷ್ಮೆ ಮಾರುಕಟ್ಟೆ ಈಗ ನಿರ್ಮಿಸಿದ್ದರೂ ಕೂಡ ಇಂದೂ ಸಹ ರಾಮನಗರದ ರೇಷ್ಮೆ ಮಾರುಕಟ್ಟೆ  ಮೇಲೆ ವಿಶ್ವಾಸವಿರಿಸಿ ಇಲ್ಲಿಗೆ ಬರುವ ರೈತರು ಬಹಳ ಇದ್ದಾರೆ.ಅಗೋ ಅಲ್ಲಿ ನೋಡಿ [ಚಿತ್ರ೦೭]ಹಳ್ಳಿ ಇಂದ ರೇಷ್ಮೆ ಗೂಡನ್ನು ತಂದಿರುವ ರೈತರು ಮಾರುಕಟ್ಟೆ ತೆರೆಯುವುದನ್ನು ಕಾಯುತ್ತಾ ರಸ್ತೆ ಬಳಿಯಲ್ಲಿ ಕುಳಿತು ಲಾಭದ ಲೆಕ್ಕಾ ಹಾಕುತ್ತಿದ್ದಾರೆ!! ಈ ಮಧ್ಯೆ ನರಿ ಬುದ್ದಿಯ ದಲ್ಲಾಳಿಗಳು ಹೊಂಚು ಹಾಕಿ ಕಾಯುವವರಿಗೆನೂ ಬರ  ಇಲ್ಲಾ !!!ಒಟ್ಟಿನಲ್ಲಿ ರೇಷ್ಮೆ ಗೂಡಿನ ವ್ಯವಹಾರ ಇಲ್ಲಿ ಭರದಿಂದ ನಡೆಯುತ್ತದೆ.ಮುಂದೆ ಸಾಗಿದ ನಮಗೆ ದಾರಿಯಲ್ಲಿ
ಕೆಟ್ಟು ನಿಂತಿದ್ದ ಒಂದು ಲಾರಿ ಕಣ್ಣಿಗೆ ಬಿತ್ತು!![ಚಿತ್ರ ೦೮]ಲಾರಿ ಕೆಟ್ಟಿದೆ ಎಂದು ಬೇರೆ ವಾಹನದವರಿಗೆ ತಿಳಿಸಲು ಪಕ್ಕದ ಮರದ ಕೊಂಬೆ ಮುರಿದು ಲಾರಿಗೆ ಸಿಕ್ಕಿಸಿ  ಲಾರಿ  ಸುತ್ತ ಕಲ್ಲನ್ನು ಇಟ್ಟು  ಹೋಗಿದ್ದರು!! ಅಲ್ಲ ಈ ರೀತಿ  ಸಿಗ್ನಲ್ ಬಗ್ಗೆ ಮೋಟಾರ್ ವೆಹಿಕಲ್  ಆಕ್ಟ್ ನಲ್ಲಿ ಹೇಳಿಲ್ಲವಲ್ಲ ಅಂತ ಅನ್ನಿಸಿ ಸೋಜಿಗವಾಯಿತು!!ಸ್ವಲ್ಪ ದೂರ ಕ್ರಮಿಸಿದ ನಮಗೆ ಯಾವುದೋ ಫಾರಂ ನಿಂದ
ಕೋಳಿಗಳು ಪಂಜರದಲ್ಲಿ ಕುಳಿತು ಬೆಂಗಳೂರಿಗೆ ಪಯಣ ಬೆಳಸಿದ್ದವು!!!ಪಾಪ ಕೋಳಿಗಳಿಗೆ ಏನು  ಗೊತ್ತು ಬೆಂಗಳೂರಿಗರ ಹೊಟ್ಟೆ ತುಂಬಿಸಲು ತಾವು ಬಲಿಯಾಗಬೇಕೆಂದು!!. ಪ್ರತಿನಿತ್ಯ ಎಷ್ಟು ಸಾವಿರ  ಕೋಳಿಗಳು ಹಿಂಗೆ ಮರಣದೆಡೆಗೆ ಪಯಣ ಬೆಳಸುತ್ತವೋ ಯಾರಿಗೆ ಗೊತ್ತು???ಹಾಗೆ ಈ ವಾಹನ ಹಿಂದಿಕ್ಕಿ ಹೋರಾಟ ನಮಗೆ ಅಡ್ಡಲಾಗಿ[ಚಿತ್ರ೦೯] ಒಂದು  ಗ್ರಾಮ ಸಿಂಹ ಓಡಿತ್ತು ಪ್ರತಿದಿನ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ವಾಹನಗಳಿಗೆ ಸಿಕ್ಕಿ  ಹಲವಾರು ನಾಯಿಗಳು,ಕೋಳಿಗಳು,ಕುರಿಗಳು, ಜಾನುವಾರುಗಳು,ಸಾಯುವುದು ನಡದೇ ಇದೆ !!! ಅಲ್ಲ ಈ ರಸ್ತೆ/ವಾಹನಗಳಿಗೂ ಒಮ್ಮೊಮ್ಮೆ ಮಾಂಸ ತಿನ್ನುವ ಆಸೆ ಆಗಿ ಬಲಿ ತೆಗೆದುಕೂಳುತ್ತಲೇ ಇರುತ್ವೆ!!ಬಿಡದಿ ತಲುಪಿದ
ನಮಗೆ ಎದುರಾದದ್ದು  ವಾಹನ ಗಳ ವೇಗ ನಿಯಂತ್ರಿಸಲು ಹಾಕಿದ್ದ  ಈ ಬ್ಯಾರಿಕೇದುಗಳು!![ಚಿತ್ರ..೧೦]ನೀವು ಯಾವ ಊರಿಗೆ ಹೋಗಿ ಈ ಬ್ಯಾರಿಕೇದುಗಳು ಅಡ್ಡ ದಿಡ್ಡಿ ನಿಂತು ನಿಮ್ಮ ಪಯಣಕ್ಕೆ ಅಡ್ಡಿ ಉಂಟು ಮಾಡುತ್ತವೆ.ಇಂತಹ ಬ್ಯಾರಿಕೆದುಗಳಿಂದ ಅಪಘಾತ ಸಂಭವಿಸಿದ ಘಟನೆಗಳು ಬಹಳಷ್ಟಿವೆ !! ಆದರೂ ಇದಕ್ಕೆ ಪರ್ಯಾಯ ಇನ್ನೂ ಪೋಲಿಸ್ ಇಲಾಖೆ ಕಂಡು ಕೊಂಡಿಲ್ಲ.ಬಿಡದಿ ಯಲ್ಲಿ ಪ್ರಸಿದ್ದ  ಬಿಸಿಬಿಸಿ ತಟ್ಟೆ  ಇಡ್ಲೀ ಬೆಣ್ಣೆ ತಿಂದ ನಾವು [ಹೌದೂ ರೀ ಈ ಊರಿಗೆ ಬಂದ್ರೆ ನೀವು ಮಿಸ್ ಮಾಡಿಕೊಳ್ಳ ಬೇಡಿ ] ಮುಂದೆ ಹೊರಡಲು ಕಾಣಿಸಿತು[ಚಿತ್ರ ..೧೧]
ಈ ಕಾರು ಹಿಂಬದಿಯ ಗಾಜಿನ ಮೇಲೆ ಮುದ್ದು ಗಣಪ ಛತ್ರಿ ಹಿಡಿದು ಮೂಷಿಕ ದೊಡನೆ ವಾಕಿಂಗ್ ಹೊರಟಿದ್ದ!!ಇಲಿಯ ವೇಗಕ್ಕೆ ಗಣಪ ಓಡುವನೇ ಅಂತ ಅನ್ನಿಸಿ ನಗು ಬಂತು.ಅನತಿ ದೂರದಲ್ಲಿ[ಚಿತ್ರ..೧೨]
  ಒಂದು ಮರಳಿನ ಲಾರಿ ಹಿಂದಿನ ವಾಹನ ಸವಾರರ ಕಣ್ಣಿಗೆ ಮರಳನ್ನು ಯೆರಚುತ್ತಾ ಸಾಗಿತ್ತು!!!ಅಲ್ಲ ಈ ಹೆದ್ದಾರಿಯಲ್ಲಿ ಹೀಗೆ ಮರಳಿನ ಕಣಗಳು ಹಿಂದಿನ ದ್ವಿಚಕ್ರ ಸವಾರರ ಕಣ್ಣಿಗೆ ಬಿದ್ದು ಕಣ್ಣು ಕಳೆದುಕೊಳ್ಳುವ ಸಂಭವದ  ಬಗ್ಗೆ ಯಾರಿಗೂ ಚಿಂತೆ ಇರಲಿಲ್ಲ ಇದು ಸಹ ಹೆದ್ದಾರಿ ಮಹಿಮೆ ಸ್ವಾಮೀ!!!.ಹಾಗು ಹೀಗೂ ಬೆಂಗಳೂರು ಹತ್ತಿರ ವಾಗುತ್ತಿತ್ತು ವಾಹನಗಳ ದಟ್ಟನೆ ರಸ್ತೆಯಲ್ಲಿ ಹೆಚ್ಚಾಗುತ್ತಿತ್ತು[ಚಿತ್ರ ..೧೩]
.ಮುಂದೆ ಒಬ್ಬ ಬೈಕ್  ಸವಾರ ವಾಹನಗಳ  ಮಧ್ಯೆ ಸಿಲುಕಿ ಚಕ್ರವ್ಯುಹದೊಳಗೆ ಸಿಲುಕಿದ ಅಭಿಮನ್ಯುವಿನಂತೆ  ಪರದಾಟ ನಡೆಸಿದ್ದ!!ವಾಹನಗಳಿಂದ ಹೊಮ್ಮಿಬರುತ್ತಿದ್ದ ಹೊಗೇ ಅವನನ್ನು ಆವರಿಸಿ  ಬೆಂಗಳೂರಿನ ಟ್ರಾಫಿಕ್ ದರ್ಶನ ಮಾಡಿಸಿತ್ತು.ಅಷ್ಟರಲ್ಲಿ ನಾವು ಕುಂಬಳಗೊಡು ದಾಟಿ ಕೆಂಗೇರಿ ಬಳಿಯ ನೈಸ್  ರಸ್ತೆಗೇಟಿನ ಬಳಿ ಬಂದಿದ್ದೆವು.ನೈಸ್ ರಸ್ತೆಯಲ್ಲಿ ಶುಲ್ಕ ತೆತ್ತು ಹೊರಟ  ನಮಗೆ ಪಯಣ ಸುಗಮವಾಗಿ ಸಾಗಿತ್ತು.[ಚಿತ್ರ ..೧೪]
ಶಿಸ್ತು ಬದ್ದ ಲೈನಿನಲ್ಲಿ ವಾಹನಗಳು ಶಿಸ್ತಾಗಿ ಸಾಗಿದ್ದವು!!ಮುಂದೆ ಹೋದ ನಮಗೆ ರಸ್ತೆಗೆ
ಅಡ್ಡಲಾಗಿ ಸರ್ರನೆ ವಾಹನ ನಿಲ್ಲಿಸಿ ತಳ್ಳುವ ಬ್ಯಾರಿಕೆಡನ್ನು ಅಡ್ಡ ಹಾಕಿ ದನ ಕಾರುಗಳನ್ನು ರಸ್ತೆ ದಾಟಲು ಒಬ್ಬ ವ್ಯಕ್ತಿ  ಅನುವು ಮಾಡಿ ಕೊಟ್ಟ !! [ಚಿತ್ರ ..೧೫] ಖಂಡಿತ ಇದು ನಮ್ಮ ಮಾಜಿ ಪ್ರಧಾನಿ ದೇವೇಗೌಡರ ಎಫೆಕ್ಟ್ ಇರಬೇಕು ಅನ್ನಿಸಿತು.ನಂತರ ಮುಂದೆ ಚಲಿಸಿದ ನಮಗೆ  ಒಂದು ಲಾರಿ ನಿಧಾನವಾಗಿ ಸಾಗುತ್ತ ಇದ್ದದ್ದು ಕಣ್ಣಿಗೆ ಬಿತ್ತು .[ಚಿತ್ರ..೧೬]
ಸ್ವಾಮೀ ಯಾಕೆ ಹೇಳ್ತೀರಿ!!! ಲಾರಿ ದಾಟಿ ಮುಂದೆ ಹೋಗೋ ಅಷ್ಟರಲ್ಲಿ ಎಲ್ಲರೂ ಕೆಮ್ಮಿದ್ದೆ ಕೆಮ್ಮಿದ್ದು  ಅಷ್ಟರ ಮಟ್ಟಿಗೆ ಹೊಗೇ ಕಾರುತ್ತ  ಈ ಲಾರಿ ಸಾಗಿತ್ತು!!!!.ಪಾಪ ಬೆಂಗಳೂರಿನ ಜನತೆಗೆ ಇಂತಹ ಎಷ್ಟು ಸಾವಿರ ವಾಹನಗಳು ಹೀಗೆ ಹೊಗೆಕುಡಿಸಿ ನರಳಾಟ ಆಡಿಸುತ್ತವೆಯೋ  ಅಂತ ಅನ್ನಿಸಿ ಸಂಕಟವಾದರೂ!!  ಇದೂ ಒಂತರ ಹೈ ಟೆಕ್ ಜೀವನದ ಒಂದು ಭಾಗ ಅಂತ ಸಮಾಧಾನ ಪಡೆದೆ.ನೈಸ್ ರಸ್ತೆ ಇಂದ ಬನ್ನೇರುಘಟ್ಟ  ರಸ್ತೆ ತಲುಪಿ ಹುಳಿಮಾವು ಪ್ರವೇಶಿಸುತ್ತಿದಂತೆ  ಮುಂದೆ ಒಂದು ನೀರಿನ ಟ್ಯಾಂಕರ್ ರಸ್ತೆ ಯುದ್ದಕ್ಕೂ ನೀರು ಸುರಿಸಿಕೊಂಡು ತೆವಳುತ್ತಿತ್ತು!![ಚಿತ್ರ ..೧೭]
"ನೀರು ಅಮೂಲ್ಯ ಅದನ್ನು ಪೋಲು ಮಾಡಬೇಡಿ" ಎನ್ನುವ ಘೋಷಣೆ ಕಣ್ಣ ಮುಂದೆ ಅಣಕಿಸಿ ನಕ್ಕಿತ್ತು.ಒಟ್ಟಿನಲ್ಲಿ ದಾರಿಯುದ್ದಕ್ಕೂ ನಾನು ಕಂಡ ದೃಶ್ಯಗಳು ಹೇಳಿದ್ದು ಇಷ್ಟೇ ,ನಮ್ಮ ದೇಶದಲ್ಲಿ ಯಾರಿಗೂ ಯಾರು ಕೇರ್  ಮಾಡಲ್ಲ,ಯಾವುದೇ ನಿಯಮಗಳ ಹಂಗು ನಮಗೆ ಬೇಕಿಲ್ಲಾ!! ನಮಗೆ ನಮ್ಮದೇ ಕಾನೂನು.ಅಂತ ಅನ್ನಿಸಿತು ಕಾರಿನೊಳಗೆ  ಎಫ್ ಎಂ ರೇಡಿಯೋ ದಲ್ಲಿ ''ನೋಡಿ ಸ್ವಾಮೀ ನಾವಿರೋದೆ ಹೀಗೆ "ಅಂತ  ಹಾಡು ಬಂದಿತ್ತು..ನಾನು ತಲುಪಬೇಕಾದ ಜಾಗ ಬಂದು ಬೆಂಗಳೂರಿನ ಜನಸಾಗರದಲ್ಲಿ ಲೀನವಾಗಿ ಹೋದೆನು!!!ನನ್ನ ಆ ದಿನದ ಈ ಯಾನದ ನೆನಪು ನಿಮಗಾಗಿ ತಂದಿದ್ದೇನೆ . ಓದಿ ಇಷ್ಟ ಆದ್ರೆ ನನಗೆ ತಿಳಿಸಿ..ನಮಸ್ಕಾರ .