Tuesday, March 30, 2010

ಸರ್ವಕಾಲಕ್ಕೂ ನಿಲ್ಲುವ ಈಹಾಡು ಕನ್ನಡ ಚಿತ್ರದ್ದು !!! ಗೀ�

ಕನ್ನಡ ಚಿತ್ರಗಳಲ್ಲಿ ಏನೂ ಇಲ್ಲ ರೀ ಅಂತ ಮೂಗು ಮುರಿಯುವ ನಮಗೆ ೧೯೭೦ ರಲ್ಲಿ ತೆರೆಕಂಡ ಭೂಪತಿ ರಂಗ ಚಿತ್ರದ ವಿಜಯ ಭಾಸ್ಕರ್ ಸಂಗೀತ ನಿರ್ದೇಶನದಲ್ಲಿ , ಗೀತ ಪ್ರಿಯ ಅವರು ಸರ್ವಕಾಲಕ್ಕೂ ಸಲ್ಲುವ ಒಂದು ಗೀತೆ ರಚನೆ ಮಾಡಿದ್ದಾರೆ.ಈ ಮಹನೀಯ ೧೯೭೦ ರಲ್ಲೇ ಬರೆದ ಈ ಗೀತೆ ಇಂದಿನ ಪ್ರಪಂಚದ ಕನ್ನಡಿಯಂತಿದೆ!! ಯಾವ ಕಲ್ಪನೆ ಆವಾಹನೆ ಯಾಗಿತ್ತೋ ಕಾಣೆ ಗೀತ ಪ್ರಿಯರು ಈ ಹಾಡಿನಲ್ಲಿ ತಾವೆಷ್ಟು ಪ್ರಭುದ್ದರು ಎಂಬುದನ್ನು ನಿರೂಪಿಸಿಬಿತ್ತಿದ್ದಾರೆ. ಆಗಿಂದಾಗ್ಗೆ ನನ್ನ ನೆನಪಿಗೆ ಬರುವ ಈ ಹಾಡು ಯಾಕೋ ಕಾಣೆ ನನ್ನ ಮನದಲ್ಲಿ ಅಚ್ಚಾಗಿ ನಿಂತಿದೆ. ಈ ಹಾಡನ್ನು ಕೇಳಿದರೆ ನಿಮಗೂ ಈ ಅನುಭವ ಖಂಡಿತ. ಒಮ್ಮೆನೋಡಿ ಹಾಗು ಕೇಳಿ ಮತ್ತೆ!!

Saturday, March 27, 2010

ಕನ್ನಡ ಚಿತ್ರದ ಹಾಡಿನಲ್ಲಿ ಆಟಾ ಆಡಿದ ಕಿಶೋರ್ ಕುಮಾರ್

ನಾನು ಚಿಕ್ಕವನಿದ್ದಾಗ ಈ ಹಾಡನ್ನು ತಪ್ಪು ತಪ್ಪಾಗಿ ಹಾಡಿ, ನಲಿಯುತ್ತಿದ್ದೆ. ಕನ್ನಡದ ಕುಳ್ಳ ದ್ವಾರಕೀಶ್ ತಮ್ಮ ಚಿತ್ರ ಕುಳ್ಳಾ ಏಜೆಂಟ್ ೦೦೦ ಚಿತ್ರಕ್ಕೆ ಇವರನ್ನು ಕರೆಸಿ ಕಿಶೋರ್ ಕುಮಾರ್ ಹಾಡಿನ ಮೋಡಿಯ ಜಲಕ್ ಕನ್ನಡ ನಾಡಿಗೆ ನೀಡಿದರು . ಕಿಶೋರ್ ನ ಲೂಡ್ಲಿಂಗ್ ಮಜಾ ಈ ಹಾಡಿನಲ್ಲಿ ಮೆರೆದಿದೆ. ಕನ್ನಡ ಚಿತ್ರ ದ ಒಂದೇ ಹಾಡಿನಲ್ಲಿ ಮೆರೆದ ಇವರೂ ಸಹ ನಂತರ ಇತ್ತ ಬರಲಿಲ್ಲ . ಆದರೂ ಈ ಹಾಡಿನ ಮೋದಿ ಈಗಲೂ ಚಾಲ್ತಿಯಲ್ಲಿದೆ.ಬನ್ನಿ ಈ ಹಾಡು ಕೇಳ್ತಾ ಆಟಾ ಆಡೋಣ !!1

ಮೊಹಮದ್ ರಫಿ ಹಾಡಿದ ಕನ್ನಡ ಶೋಕ ಗೀತೆ !! ನೀನೆಲ್ಲಿ ನಡೆವ�

ಮಹಮದ್ ರಫಿ ಕಂಟಕ್ಕೆ ಸೋಲದ ಸಂಗೀತ ಪ್ರಿಯರು ಯಾರು?? ಈ ಮೇರು ಕಲಾವಿದ ಕನ್ನಡ ದಲ್ಲಿ ಒಂದೇ ಒಂದು ಹಾಡನ್ನು ಒಂದೇ ಬಳ್ಳಿಯ ಹೂಗಳು ಚಿತ್ರದಲ್ಲಿ ಹಾಡಿದ್ದಾರೆ.ಈ ಹಾಡು ಹಾಗು ಸಾಹಿತ್ಯ ಎಂದೆಂದು ಮರೆಯದ ಹಾಡಾಗಿ ಅಮರವಾಗಿ ಉಳಿದಿದೆ.ರಫಿ ಇನ್ನಷ್ಟು ಕನ್ನಡ ಹಾಡುಗಳನ್ನು ಹಾಡಿದ್ದಿದ್ರೆ ಚೆನ್ನಾಗಿತ್ತು ಅಂತ ಯಾರಿಗಾದರೂ ಅನ್ನಿಸುತ್ತೆ.ಈ ಅಮರ ಗಾಯಕ ಎಸ.ಪಿ. ಬಾಲಸುಬ್ರಮಣ್ಯಂ ರವರ ಮೆಚ್ಚಿನ ಗಾಯಕನೂ ಹೌದು, ಗುರುವೂ ಹೌದು. ತಂದೆ ಮಕ್ಕಳು ಚಿತ್ರದ ರಾಧಿಕೆ ನಿನ್ನ ಸರಸವಿದೇನೆ ಹಾಡನ್ನು ಎಸ.ಪಿ.ಬಿ. ರಫಿಯ ರಾಧಿಕೆ ತೂನೇ ಭಾಂಸುರಿ ಚುರಾಯೇ ಎಂಬ ಹಾಡನ್ನು [ ಹಿಂದಿಯ ಬೇಟಿ-ಬೇಟಾ ಚಿತ್ರ] ಮನದಲ್ಲಿ ಇಟ್ಟುಕೊಂಡು ರಫಿಯನ್ತೆಯೇ ಹಾಡಿ ಗುರು ಕಾಣಿಕೆ ನೀಡಿದರು.ಈ ಅಮರ ಗಾಯಕನ ಹಾಡು ಕೇಳಿ ನೆನೆಯೋಣ ಬನ್ನಿ.

ಕನ್ನಡ ದಲ್ಲಿ ಲತಾ ಮಂಗೇಶ್ಕರ್ ಹಾಡಿದ ಈ ಹಾಡು ಎಷ್ಟು ಚಂ�

ಲತಾ ಮಂಗೇಶ್ಕರ್ ಕನ್ನಡ ಚಿತ್ರ ಸಂಗೊಳ್ಳಿ ರಾಯಣ್ಣ ದಲ್ಲಿ ಹಾಡಿದ ಈ ಹಾಡು ಕೇಳಲು ಹಿತವಾಗಿದೆ. ಭಾಷೆ ಉತ್ತರ ಕರ್ನಾಟಕದ ಕನ್ನಡ ಆದರೂ ಏನೋ ಮೋಹಕ ಸೆಳೆತ ಈ ಹಾಡಿಗಿದೆ. ಒಮ್ಮೆ ಕೇಳಿ ಖುಷಿ ಪಡಿ.

Thursday, March 25, 2010

ಆಶಾ ಭೋಂಸ್ಲೆ ಹಾಡಿದ ಮೊದಲ ಕನ್ನಡ ಹಾಡು ಇದು ಸ್ವಾಮೀ!!...

ಇತ್ತೀಚಿಗೆ ಹಿಂದಿಯ ಪ್ರಖ್ಯಾತ ಗಾಯಕಿ ಆಶಾ ಭೋಂಸ್ಲೆ ಇದುವರೆಗೂ ಕನ್ನಡದಲ್ಲಿ ಹಾಡಿರಲಿಲ್ಲವೆಂದೂ ತಾವು ಅವರನ್ನು ಸಂಪರ್ಕಿಸಿ ಅವರಿಂದ ಕನ್ನಡ ಹಾಡನ್ನು ಹಾಡಿಸಿ ಕನ್ನಡ ಚಿತ್ರರಂಗವನ್ನು ಪಾವನ ಗೊಳಿಸಿದವರು ನಾವೆಂದು ಬೀಗುತ್ತಾ ಮೂರ್ಖರ ಪೆಟ್ಟಿಗೆಯ ಕೆಲವು ವಾಹಿನಿಗಳಲ್ಲಿ ಹೇಳಿ ಕುಣಿದರು. ಆಶಾ ಭೋಂಸ್ಲೆ ದೇಶದ ಉತ್ತಮ ಗಾಯಕರು ಎಂಬ ಬಗ್ಗೆ ಅನುಮಾನವಿಲ್ಲ .ಆದ್ರೆ ಈ ವಿಚಾರದಲ್ಲಿ ಕನ್ನಡಿಗರ ಕಿವಿಗೆ ಹೂ ಇದುವ ಸಾಹಸ ಎಷ್ಟು ಸರಿ ?? ಆಶಾ ಭೋಂಸ್ಲೆ ರಾಜ್ಕುಮಾರ್ ಭಾರತಿ ಅಭಿನಯದ ದೂರದ ಬೆಟ್ಟ ಚಿತ್ರದಲ್ಲಿ ಈಗಾಗಲೇ ಹಾಡಿ ಆ ಹಾಡು ಜನಪ್ರೀಯವಾಗಿತ್ತು ಎಂಬುದು ಕನ್ನಡಿಗರಿಗೆ ಗೊತ್ತಿದೆ. ಕನ್ನಡ ಚಿತ್ರಗಳಲ್ಲಿ ಮೊಹಮದ್ ರಫಿ,ಮನ್ನಾಡೆ, ಕಿಶೋರ್ ಕುಮಾರ್ , ಲತಾ ಮಂಗೇಶ್ಕರ್ , ಸುಮನ್ ಕಲ್ಯಾನ್ಪುರ್,ಹಾಡಿದ್ದಾರೆ. ಆದ್ರೆ ಮಹೇಂದ್ರ ಕಪೂರ್, ಮುಕೇಶ್,ಸೈಗಾಲ್, ಮುಂತಾದ ಇವರುಗಳು ಹಾಡಿಲ್ಲ ಈಗ ಮುಕೇಶ್ ಸೈಗಾಲ್,ಇಲ್ಲ ಬಿಡಿ, ಆದ್ರೆ ಮಹೇಂದ್ರ ಕಪೂರ್ ಇದ್ದಾರೆ ಸಾಧ್ಯಾ ಆದ್ರೆ ಸ್ವಾಮೀ ಅವರಿಂದ ಹಾಡಿಸಿ ದಾಖಲೆ ಬರೆದು ನಲಿಯಿರಿ!!! ಕನ್ನಡದಲ್ಲೂ ಅವರ ಗಾನ ಸುಧೆ ಹರಿದು ಬರಲಿ!!!

Monday, March 22, 2010

ಭಾರತ ಪಾಕಿಸ್ತಾನ ಗಡಿಯನ್ನು ಕಾಯಲು ನಿಂತ ಧೀರ ಮಹಿಳೆಯರ�

ಭಾರತ ಪಾಕಿಸ್ತಾನದ ಗಾಡಿಯಲ್ಲಿ ದೇಶವನ್ನು ಕಾಯಲು ಧೀರ ಮಹಿಳಾ ಪಡೆ ಪ್ರಾರಂಭಿಸಿದೆ. ಭಾರತೀಯ ಮಹಿಳೆಯರು ಬೇರೆದೇಶದ ಯಾವ ಮಹಿಳೆಗೂ ಕಮ್ಮಿ ಇಲ್ಲ ಅಂತ ಸಾರಿ ಹೇಳುವ ಈ ವೀಡಿಯೊ ನೋಡಿ. ಎಲ್ಲ ಭಾರತೀಯರೂ ಈ ಧೀರ ಮಹಿಳೆಯರಿಗೆ ಜೈ ಹೋ ಅನ್ನೋಣ ಬನ್ನಿ,. ಭಾರತಾಂಬೆ ಇವರನ್ನು ಪಡೆದ ನೀನು ಧನ್ಯೆ. ಹಾಗು ಇವರನ್ನು ಹೆತ್ತವರು ನಿಜವಾಗಿಯೂ ಭಾಗ್ಯವಂತರು.

Sunday, March 21, 2010

ಪಾಕಿಸ್ತಾನ ಹಾಗು ಭಾರತದ ವಾಘಾ ಬಾರ್ದೆರ್ ನಲ್ಲಿನ ವಿಸ್

ಪ್ರತಿದಿನ ಈ ವಾಘ ಗಾಡಿಯಲ್ಲಿ ಮುಂಜಾನೆ ಹಾಗು ಸಂಜೆ ಫ್ಲಾಗ್ ಮಾರ್ಚ್ ನಡೆತುತ್ತದೆ . ನೋಡಲು ಸುಂದರ ಹಾಗು ಎರದುಕದೆ ಆ ದೇಶಗಳ ಜನರು ನೆರೆದು ಇದನ್ನು ನೋಡಿ ನಲಿಯುತ್ತಾರೆ. ಹಾಗು ದೇಶಪ್ರೇಮ ಮೆರೆಯುತ್ತಾರೆ.!! ಈ ವೀಡಿಯೊ ಪಾಕಿಸ್ತಾನದ ಕಡೆಯಿಂದ ತೆಗೆಯಲಾಗಿದೆ.

Wednesday, March 17, 2010

ಹಾಸ್ಯ ರಾಜ ನರಸಿಂಹ ರಾಜು !! ನಕ್ಕು ಬಿಡಿ ಭಾಗ ..1

ಕನ್ನಡ ಚಿತ್ರರಂಗದ ಹಾಸ್ಯ ಚಕ್ರವರ್ತಿ ನರಸಿಂಹ ರಾಜು ಅಚ್ಚಳಿಯದೆ ಎಲ್ಲರ ಮನದಲ್ಲಿ ನಿಂತುಬಿಟ್ಟಿದ್ದಾರೆ. ತನ್ನ ಹಲ್ಲುಬ್ಬನ್ನೇ ಬಳಸಿಕೊಂಡು ನಗೆಯ ಅಲೆ ಎಬ್ಬಿಸಿ ಹಲವು ದಶಕಗಳ ಕಾಲ ಕನ್ನಡ ಚಿತ್ರ ರಂಗವನ್ನು ಆಳಿದ ಮಹನೀಯ ಬನ್ನಿ ಒಮ್ಮೆ ಈ ಹಾಸ್ಯ ತುಣುಕನ್ನು ನೋಡಿ ನಕ್ಕುಬಿಟ್ಟು ಇವರನ್ನು ನೆನೆಯೋಣ.ಇವರನ್ನು ನೆನೆಯೋಣ.

Saturday, March 13, 2010

Swami Vivekananda Chicago Speech - Why we disagree

ಸ್ವಾಮೀ ವಿವೇಕಾನಂದ ರವರು ಭಾರತ ದೇಶದ ಹೆಮ್ಮೆಯ ಪ್ರತಿನಿಧಿಯಾಗಿ ತಾಯಿ ಭಾರತಿಯ ಕೀರ್ತಿಯನ್ನು ಬೆಳಗಿ ವಿಶ್ವ ಸಮುದಾಯಕ್ಕೆ ಹೆಮ್ಮೆಯ ಭಾರತೀಯ ಪರಂಪರೆ ಬಗ್ಗೆ ತಿಳಿಸಿದ ಈ ಸಂದೇಶ .ಚಿರಾಯುವಾಗಿ ನಿಂತಿದೆ.

Friday, March 12, 2010

No boundaries... Just watch this effort... Very Motivating...

kamal naath

ಕಮಲನಾಥ್ ಪಟೇಲ್ ಕಾಲಿಲ್ಲದ ಡಾನ್ಸ್ ಪಟು.!!ಸಾಧಿಸುವ ಛಲ ವಿರಲು ಅಂಗವಿಕಲತೆ ಅಡ್ಡಿ ಬರಲಿಲ್ಲ ಇವರಿಗೆ!!!

ಕೈ ಕಾಲು ಎಲ್ಲ ಸರಿ ಯಿದ್ದರೂ  ಸೋಮಾರಿಗಳಾಗಿ , ಏನೂ ಸಾಧಿಸದೆ  ಯಾರಿಗೂ ಮಾಧರಿ ಯಾಗದ  ನನ್ನಂತವರ  ನಡುವೆ ಇವರೂ ಮಹಾಪುರುಷರಾದಾಗ  ಆಶ್ಚರ್ಯ ದಿಂದ  ನೋಡಿ ನಾಚಬೇಕಾದ  ಸರದಿ ನಮ್ಮದಾಗುತ್ತದೆ.ಹೌದು ಇಂತಹ ಸಾಲಿನಲ್ಲಿ ಇತ್ತೀಚಿಗೆ ನಿಂತ ವ್ಯಕ್ತಿ ಇವರೇ ಶ್ರೀ ಕಮಲನಾಥ್ ಪಟೇಲ್.ಗುಜರಾತ್ ರಾಜ್ಯದ ಬರೋದ ಇವರು ಕಾಲಿಲ್ಲದ ನೃತ್ಯಪಟು.ಐದು ವರ್ಷದ  ಬಾಲ್ಯ ದಲ್ಲಿ ಅನಾರೋಗ್ಯದ ನಿಮಿತ್ತ ಸ್ಥಳೀಯ  ವೈದ್ಯರು  ನೀಡಿದ ಚುಚ್ಚುಮದ್ದು ಪಡೆದು ಮನೆಗೆ ಬಂದ ಸ್ವಲ್ಪ ಕಾಲಕ್ಕೆ ಎರಡೂ ಕಾಲುಗಳ  ಸ್ವಾಧೀನ ತಪ್ಪಿ ವಿಕಲತೆ ಹೊಂದಿದರು.ಬೆಂಗಳೂರೂ ಸೇರಿದಂತೆ ದೇಶವೆಲ್ಲ ಅಲೆದರೂ ಗುಣ ಕಾಣದೆ ಕಡೆಗೆ ಅಂಗವಿಕಲ ಕಾಲುಗಳ ಜೊತೆ ರಾಜಿಯಾಗಿ  ಸಾಧನೆಯ ಕಿಚ್ಚು ಹತ್ತಿಸಿಕೊಂಡರು.ಜೀವನದಲ್ಲಿ ಏನನ್ನಾದರೂ  ಸಾಧಿಸಿಯೇ ತೀರಬೇಕೆಂಬ ಛಲದಲ್ಲಿ ನಯೂತ್ಯಾ ಕಲಿಯ ತೊಡಗಿ  ಪ್ರಾವೀಣ್ಯತೆ ಪಡೆದು ದೇಶಾದ್ಯಂತ ಸುಮಾರು ಒಂದು ಸಾವಿರಕ್ಕೂ ಹೆಚ್ಚಿನ ಡಾನ್ಸ್ ಕಾರ್ಯಕ್ರಮ ನೀಡಿ ಸಾಧನೆಯ ದಾರಿಯಲ್ಲಿ ಮುನ್ನಡೆದರು.ಇವರ ಸಾಧನೆ ಜಗ ಜಾಹೀರಾಗಿದ್ದು  ಹಿಂದಿಯ ಜೇ ಟಿ.ವಿ ಯಾ ಡಾನ್ಸ್ ಇಂಡಿಯಾ ಡಾನ್ಸ್  ಕಾರ್ಯಕ್ರಮದಲ್ಲಿ  ಇವರ ಹಂ ಹೇ ಹಿಂದುಸ್ತಾನಿ ಹಾಡಿನ ಡಾನ್ಸ್ ನೋಡಿ ಬೆರಗಾಗಿ  ಹೀಗೂ ನರ್ತಿಸ ಬಹುದೇ ಅಂತ ದೇಶಾದ್ಯಂತ ಜನ ವಿಸ್ಮಯ ಪಟ್ಟರು.ಇವರ ಸಾಧನೆ ಬಗ್ಗೆ ಈಗ  ಮಾನವ ಸಂಪನ್ಮೂಲದ ,ತರಬೇತಿ ನೀಡುವ ಹಲವಾರು ಸಂಸ್ಥೆ ಗಳು  ಉದಾಹರಿಸಿ ಇವರ ಡಾನ್ಸ್ ವೀಡಿಯೊ ವನ್ನು ಪಟ್ಯ ಕ್ರಮದಲ್ಲಿ ಅಳವಡಿಸಿಕೊಂಡಿವೆ.ಇಂತಹ ಸಾಧನೆಗೈದ ಈ ಧೀರ ಭಾರತೀಯ ಕಮಲ್ ನಾಥ್ ಪಟೇಲ್ ಗೆ ನೀವು ಜೈ ಹೋ  ಅನ್ನಿ.http://www.youtube.com/watch?v=w1giVyFW7Kk ನ್ನು ಕ್ಲಿಕ್ಕಿಸಿ   ಇವರ ವೀಡಿಯೊ ನೋಡಿ  ಆಶ್ಚರ್ಯ ಪಡಿ . ಇವರ ಸಾಧನೆ ನಮಗೆ ಸ್ಪೂರ್ತಿಯ ಸೆಲೆಯಾಗಲಿ.ಮೇಲಿನ ಪುಟದಲ್ಲಿ ಕಮಲನಾಥ್ ಪಟೇಲ್ ಡಾನ್ಸ್ ನ ಮೋಡಿ ನೋಡಿ ಆನಂದಿಸಿ.ಹೆಮ್ಮೆಯ ಭಾರತಿಯನಿಗೆ ಸಲಾಂ ಮಾಡೋಣ !!1

Wednesday, March 10, 2010

ಹೊರಲೋಕಕ್ಕೆ ತೆರೆದುಕೊಳ್ಳದ ಬರ್ಮಾ ದೇಶದಲ್ಲಿನ ಒಂದು ಅದ್ಭುತ ಇಲ್ಲಿದೆ!!!

ನಮ್ಮ ದೇಶದ ಪಕ್ಕದ ಬರ್ಮಾ ದೇಶ ಜಗತ್ತಿಗೆ ತೆರೆದುಕೊಳ್ಳದೆ  ನಿಘೂಡ ವಾಗೆ ಇದೆ .ಹೊರಜಗತ್ತಿಗೆ ಅಲ್ಲೇನು ನಡೆಯುತ್ತಿದೆ ಎಂಬ ಮಾಹಿತಿಯೇ  ಸಿಗದು. ಆದರೂ ನನಗೆ  ಒರಿಸ್ಸಾ ರಾಜ್ಯದ ಸಂಬಾಲ್ಪುರ್ ನಿಂದ ಸ್ನೇಹಿತ ಕಳುಹಿಸಿದ ಈ ಮೇಲ್  ಅಚ್ಚರಿ ಹುಟ್ಟಿಸಿದೆ.ಅಂತರ್ಜಾಲ ಜಾಲಾಡಿದಾಗ ಈ ಮೇಲ್ ಕೆಲವು ವರ್ಷಗಳಿಂದ  ಹರಿದಾದುತ್ತಿರುವುದಾಗಿ ತಿಳಿದು ಬಂತು.ಈ ಚಿತ್ರಗಳನ್ನು ನೋಡಿ  ವಸಂತ ಕಾಲದಲ್ಲಿ ಒಂದು ದಿನ ಮಾತ್ರ ಈ ನೋಟ ಲಭ್ಯವೆಂದೂ  ಈ ಚಿತ್ರಗಳನ್ನು ೧೯೮೩ ರಲ್ಲಿ ತೆಗೆಯಲಾಯಿತೆಂದು ತಿಳಿಯಿತು. ಚಿತ್ರಗಳಲ್ಲಿ  ತಾಯಿ ಹಾಗು ಮಗ ಪ್ರಾರ್ಥನೆ  ಮಾಡುತ್ತಿರುವಂತೆ ಗೋಚರಿಸುವುದು ವಿಶೇಷ ನೀವು ನೋಡಿ ಆನಂದಿಸಿ .

Friday, March 5, 2010

ಚಂದದ ಅಡುಗೆ ಕಲಿಸುವ ಸುಮ್ಸ್ ಕಸಿನ್ [sum's cuisine] ನೀವು ನೋಡಿ ಕಲಿಯಿರಿ !!! ಒಂದು ಚಂದದ ಬ್ಲಾಗ್ ಸ್ವಾಮೀ!!!




ಬ್ಲಾಗ್ಸ್ಪಾಟಿನ  ಗೆಳೆಯರೇ. ಬಾಗ್ಸ್ಪಾಟಿನ ಬ್ಲಾಗುಗಳಲ್ಲಿ  ಹಲವಾರು ವಿಚಾರಗಳು  ಹರಿದು ಬರುತ್ತಿರುವ ಸಮಯದಲ್ಲಿ ,ಇಲ್ಲೊಂದು ಬ್ಲಾಗು ಅಡಿಗೆಗೆ ಮೀಸಲಾಗಿ ಉತ್ತರ ಹಾಗು ದಕ್ಷಿಣ ಭಾರತದ  ವಿವಿಧ ಬಗೆಯ ಅಡುಗೆಗಳ ಪರಿಚಯ ,ತಯಾರಿಸ್ಸುವ ವಿಧಾನ ,ಅಡಿಗೆಗೆ ಬೇಕಾಗುವ ಸಾಮಗ್ರಿಗಳ  ಮಾಹಿತಿ , ಮುಂತಾದ ಸಮಗ್ರ ವಿವರಗಳನ್ನು ನೀಡುತ್ತಾ  ತನ್ನದೇ ದಾರಿಯಲ್ಲಿ ನಡೆದು ಬರುತ್ತಿದೆ. ಮೂಲತಹ ಸಾಫ್ಟ್ ವೇರ್ ಎಂಜಿನೀರ್ ಆದ  ಸಹೋದರಿ  ಸುಮನ ದೀಪಕ್  ಅಡಿಗೆಮನೆಯಲ್ಲಿ  ಅಡಿಗೆ ಕಲೆಯ ಅನಾವರಣ ಗೊಳಿಸಿ ಪೋಷಿಸಿ  ಬ್ಲಾಗ್ ಲೋಕಕ್ಕೆ ಹಂಚುತ್ತಿದ್ದಾರೆ  ಅದಕ್ಕೆ ಪೂರಕವಾಗಿ  ಅಡಿಗೆಯ ರುಚಿನೋಡಿ ,ಅಡಿಗೆ ತಯಾರಿಯ ವಿವಿಧ ಹಂತದ  ಛಾಯ ಚಿತ್ರ ತೆಗೆದು ಹೆಂಡತಿಯ ಮೆಚ್ಚಿನ ಗಂಡನಾಗಿ ಬ್ಲಾಗಿನಲ್ಲಿ ಪ್ರಕಟಿಸಲು  ಸಹಕರಿಸುತ್ತಿರುವ ಗೆಳೆಯ ದೀಪಕ್ ವಸ್ತಾರೆ  ಸಹ ಅಭಿನಂದನಾರ್ಹರು .ಇವರೂ ಸಹ ಸಾಫ್ಟ್ ವೇರ್  ಇಂಜಿನಿಯರ್  ಆಗಿದ್ದು  ಟೆಕ್ಕಿಗಳ ಲೋಕದಲ್ಲಿ ಬೇರೆಯದೇ  ಸಾಧನೆ ತೋರುತ್ತಿದ್ದಾರೆ. ಕೆಲಸದ ಒತ್ತಡದ ನಡುವೆಯೂ ಅಡಿಗೆಯವರನ್ನು ನೇಮಿಸದೆ ತಮ್ಮ ಮನೆಯ ಅಡಿಗೆಯ ಕಾರ್ಯ ತಾವೇ ಮಾಡಿಕೊಂಡು ಸಂತಸದ ಜೀವನ ನಡೆಸುತ್ತಿರುವ ಇವರು ಮೇಡ್ ಫಾರ್  ಈಚ್ ಅದರ್ಸ್  ಅನ್ನಲು ಅಡ್ಡಿಯಿಲ್ಲ. ಒಮ್ಮೆ ಇವರ ಬ್ಲಾಗನ್ನು ಹೊಕ್ಕಿನೋಡಿ  ನೀವು ಅಡಿಗೆ ತಯಾರಿಸಿ ರುಚಿ ನೋಡಿ ಆನಂದಿಸಿ.ನಿಮಗಾಗಿ ಕೆಲವು  ಅಡಿಗೆ ಚಿತ್ರಗಳು !! ಇವರ  ಬಾಗ್ ಸ್ಪಾಟಿನ   ಸುಮ್ಸ್  ಕಸಿನ್              ತಾಣಕ್ಕೆ ಭೇಟಿಕೊಡಿ  ನಿಮ್ಮ ಬಾಯಲ್ಲಿ ನೀರೂರಿಸದಿದ್ದರೆ  ಕೇಳಿ !!!

Wednesday, March 3, 2010

ಇವ ಕಾವಿಯೊಳಗಿನ ಕಾಮಿ !!! ಆದರೂ ಜನ ಇವನನ್ನು ನಂಬಿದ್ರಲ್ಲ!!!

ಅಂದು ವಿವೇಕಾನಂದ  ಅಮೆರಿಕಾದ ಚಿಕಾಗೋ ದಲ್ಲಿ ಡಿಯರ್ ಬ್ರದರ್ ಅಂಡ್ ಸಿಸ್ಟರ್ಸ್ ಅಂತ ಹೇಳಿ ಭಾರತಾಂಬೆಯ ಹಿರಿಮೆಯ ಸಾರಿ  ಹೆಮ್ಮೆಯ ಭಾರತದ  ಮಾಣಿಕ್ಯ ವಾಗಿ ಪ್ರಕಾಶಿಸಿದರು. ಆದ್ರೆ ಈ  ಕಾವಿಯೊಳಗಿನ ಕಾಮಿ ಭಾರತಾಂಬೆಯ  ನೆಲದಲ್ಲಿ  ರಾಸಲೀಲೆ ಹೇಗೆ ಮಾಡಬಹುದು ಅಂತ ಜಗಕ್ಕೆತೋರಿಸಿ  ಕಾವಿಯೆಡೆಗೆ ಜನರು  ಛೀ ಥೂ  ಅಂತ  ಉಗಿದು ದೂರ ವಿರುವಂತೆ  ಮಾಡಿದ್ದಾನೆ.ವೇದಾ ಹೇಳೋಕೆ  ಬದನೇಕಾಯಿ ತಿನ್ನೋಕೆ ಅಂತ ಇಂತಹವರನ್ನು ನೋಡಿ ಹೇಳಿರಬೇಕು.ಜನಗಳೇ ಇಂತಹವರನ್ನು ದೂರವಿರಿಸಬೇಕು. ಎಲ್ಲಿಯವರೆಗೂ  ಜನ ಇಂತಹವರಿಗೆ ತಲೆಭಾಗುತ್ತಾರೋ ಅಲ್ಲಿಯವರೆಗೂ  ಇವರು,ಇವರನ್ನು  ನಂಬಿದ ಭಕ್ತ ಜನರ ಹೆಣ್ಣು ಮಕ್ಕಳನ್ನು ಹೀಗೆ  ಕಾಡುತ್ತಾರೆ.ಇಷ್ಟೆಲ್ಲಾ ಆದರೂ ಇನ್ನೂ  ಇವರ ??ಅಲ್ಲ ಇವನ ಪರವಾಗಿ  ಮಾಧ್ಯಮಗಳಲ್ಲಿ ಮಾತಾಡಲು ಜನ ಬರುತ್ತಾರೆ ಅಂದ್ರೆ ಏನು ಹೇಳೋದು.. ಆದರೂ ಎಚ್ಚರ ನಿಮ್ಮೊರಬಳಿಯಲ್ಲೂ ಇನತಹವರು ಇದ್ದಾರು.ಸಾಧನೆ ಮಾಡಿದರೆ ಹಿಮಾಲಯ ಪರ್ವತ ಶ್ರೇಣಿಯಲ್ಲಿ  ಕುಳಿತು  ಸಾಧಿಸಿ ಇಲ್ಲ ದಿದ್ರೆ ಕುಕ್ಕೆ ಶ್ರೀ ಆಗಿದ್ದ ವಿದ್ಯಾ ಭೂಷಣ ರಂತೆ ಗೌರವವಾಗಿ ಮಾಡುವೆ ಮಾಡಿಕೊಂಡು ಕಾವಿ ತ್ಯಜಿಸಿ !!! ಕಾವಿ ಮರ್ಯಾದೆ ಯಾಕೆ ಕಳೀತೀರಿ ಕಾವಿಯೊಳಗಿನ  ಕಾಮಿ ಸ್ವಾಮಿಗಳೇ?? 

Monday, March 1, 2010

ಈ ಮೇಲ್ ನಲ್ಲಿ ಟೋಪಿ ಹಾಕುವ ಖದೀಮರು.!!! ಎಚ್ಚರ ಹಳ್ಳಕ್ಕೆ ಬಿದ್ದೀರಿ !!

೨೦೧೦ ರ ಫೆಬ್ರವರಿ ೨೭ ರಂದು ನನಗೆ ಒಂದು ಮೇಲ್ ಬಂತು .ಪಕ್ಕದಲ್ಲಿ ಇದ್ದ ನನ್ನ ಹೆಂಡತಿ ಖುಷಿಯಿಂದ ಅಭಿನಂಧನೆ ಹೇಳಿ ಸಂಭ್ರಮಿಸಲು  ಶುರು ಮಾಡಿದಳು.ವಿಷಯ  ಏನೂ ಅಂತ ಕೇಳ್ತಿರ ಬನ್ನಿ ಹೇಳ್ತೀನಿ . ಕ್ಲೈಮ್ಸ್ಗ್ ಗ್ರೂಪ್ ೨೦೧೦ @ಯಾಹೂ .ಕಾಮ್. ಯು.ಕೆ. [ದೂರವಾಣಿ  +೪೪ ೭೦೧೦೦೩೩೮೯೨]  ಇವರಿಂದ ನನಗೆ ಯು.ಕೆ. ನ್ಯಾಷನಲ್  ಲಾಟರಿ  ಮೂಲಕ ಒಂದು ಮಿಲಿಯನ್ ಯು.ಕೆ. ಪೌಂಡ್ಸ್  ಬಂದಿರುವುದಾಗಿಯೂ  ಅದನ್ನು ಕ್ಲೈಂ ಮಾಡಲು ಹೆಸರು ವಿಳಾಸ , ಇತ್ಯಾದಿ ನೀಡಿ  ಸಂಪರ್ಕಿಸಲು ತಿಳಿಸಲಾಗಿತ್ತು. ನನಗೆ  ಆಶ್ಚರ್ಯ  ನಾನು ಮೊದಲೇ ಲಾಟರಿ ವಿರೋಧಿ  ಅಂಥದ್ರಲ್ಲಿ ನಾನು ಯಾವಾಗ ಲಾಟರಿ ಖರೀದಿ ಮಾಡಿದ್ದೆ ತಿಳಿಯಲಿಲ್ಲ,ಅದೂ  ವಿದೇಶಿ ಲಾಟರಿ ನನಗೆ ಗೊತ್ತಿಲ್ಲದ ವಿಚಾರ.ಆದರೂ ತಲೆ ಕೆಡಿಸಿಕೊಂಡು ಮೂಲ ಹುಡುಕಲು  ಅಂತರ್ಜಾಲ ಹೊಕ್ಕು  ಯು.ಕೆ ನ್ಯಾಷನಲ್ ಲಾಟರಿ  ಅಧಿಕೃತ  ತಾಣ ನೋಡಿದ್ರೆ  ಮೇಲ್ನಲ್ಲಿ ತಿಳಿಸಿದ ಯಾವುದೇ ವಿಚಾರ ನಾಪತ್ತೆ .ಜೊತೆಗೆ  ನಮ್ಮ ವಿಳಾಸಹಾಕಿಕೊಂಡು  ಜನರನ್ನು ಮೋಸ ಮಾಡುವವರ ಬಗ್ಗೆ  ಎಚ್ಚರ ಅಂತ ಬುದ್ದಿವಾದದ  ವಿವರ ತಿಳಿಸಿ  ಮೊಸಹೊಗದಂತೆ ತಿಳಿಸಿದ್ದಾರೆ!!ನನ್ನ ಹೆಂಡತಿಯ ಆಸೆಯ ಬಲೂನು ತುಸ್ಸೆನ್ದಿತ್ತು...!!! ಆದ್ರೆ ನಾನು ದೊಡ್ಡ ಹಳ್ಳಕ್ಕೆ ಬೀಳುವ ಅವಾಂತರ ತಪ್ಪಿತ್ತು. ಎಲ್ಲಾ ಬ್ಲಾಗಿಗರ ಮಾಹಿತಿಗೆ ಮೇಲ್ ನ  ಪ್ರತಿ  ಫೋಟೋ ಮೂಲಕ ನೀಡಿದ್ದೇನೆ. ನಿಮಗೂ  ಈ ತರ ಮೇಲ್ ಬಂದರೆ  ಸುಮ್ನೆ  ನಕ್ಕು  ಮೇಲ್ ಡಿಲಿಟ್  ಮಾಡಿ ಆಯ್ತಾ!!