Sunday, August 18, 2013

"ಐ ಲವ್ ಯೂ" ಅಂದಾ ಆ ಹುಡುಗ ತಲುಪಿದ್ದು ..................... !!

{ಈ ಚಿತ್ರಕ್ಕೆ ಮಾಲಿಕರ ಅನುಮತಿ ಪಡೆಯಲಾಗಿದೆ }


ಇಲ್ಲೊಂದು ಕಥೆ ಇದೆ ,  ಸುಮಾರು  ಇಪ್ಪತೈದು ವರ್ಷಗಳ  ಹಿಂದೆ ನಡೆದ ಕಥೆ  ಇದು , ಇದರ  ನಾಯಕ  ಪ್ರತಾಪ್ ,  ನಮ್ಮ ನಾಯಕನ ಪರಿಚಯ ಮಾಡಿಕೊಳ್ಳೋಣ ಬನ್ನಿ , ಇದು ಕೆಲವು ವರ್ಷಗಳ ಹಿಂದೆ ಪ್ರತಾಪ್ ಇದ್ದ  ಒಂದು ಚಿತ್ರಣ
"ಪ್ರತಾಪ್  ಒಂದು ಮಧ್ಯಮ ವರ್ಗದ ಕುಟುಂಬದ ಹುಡುಗ, ತಂದೆ  ಇಲ್ಲಾ,ತಾಯಿಯ ಆಸರೆ , ಅಮ್ಮ ತರುವ ಅಲ್ಪ ಸಂಬಳ  ಆ ಮನೆಯ ಆದಾಯ. ಇನ್ನು ಈ ಹುಡುಗ ಪಿ .ಯೂ .ಸಿ. ಯಲ್ಲಿ   ಡುಮ್ಕಿ ಹೊಡೆದು ಡ್ರಾಪ್ ಔಟ್ ,ಆಗಿದ್ದ ಹುಡುಗ . ನಂತರ ಯಾವುದೋ ಖಾಸಗಿ ಹಣಕಾಸು ಸಂಸ್ಥೆಯಲ್ಲಿ  ಏಜೆಂಟ್ ಆಗಿ ಕೆಲಸಕ್ಕೆ ಹೋಗುತ್ತಿದ್ದ  . ಇವನಿಗೆ ಒಬ್ಬ ಅಕ್ಕನಿದ್ದು  ಅವಳು ಹೆರಿಗೆಗಾಗಿ  ಆಸ್ಪತ್ರೆ ಸೇರಿದ್ದಳು , ಇನ್ನು ನಮ್ಮ ಹೀರೋ  ಕೆಲಸ  ಸಧ್ಯಕ್ಕೆ ಪ್ರತೀ ದಿನ ಮಧ್ಯಾಹ್ನ   ತನ್ನಮನೆ ಇರುವ  ಸ್ವಪ್ನ ನಗರದಿಂದ  ಬಸ್ಸಿನಲ್ಲಿ ತೆರಳಿ  ವೈಭವಿ  ಚಿತ್ರಮಂದಿರದ  ಬಳಿ ಇದ್ದ  ಹೆರಿಗೆ ಆಸ್ಪತ್ರೆಗೆ  ಊಟ ಕೊಂಡೊಯ್ಯುವುದಾಗಿತ್ತು , ನಮ್ಮ ಹೀರೋ ಕೂಡ ಈ ಕೆಲಸವನ್ನು ಶ್ರದ್ಧೆ ಯಿಂದ ಮಾಡುತ್ತಿದ್ದ  ಹೀಗಿರಲು ಒಂದು ದಿನ ..... !ಬನ್ನಿ ಫ್ಲಾಶ್ ಬ್ಯಾಕಿಗೆ ಹೋಗೋಣ .
{ನಮ್ಮ ಹೀರೋ ಕಾಲದಲ್ಲಿ ಮೊಬೈಲ್ ಇರಲಿಲ್ಲ, ಇಷ್ಟೊಂದು ತಾಂತ್ರಿಕತೆ  ಆ ಪೀಳಿಗೆಗೆ ಪರಿಚಯ ಆಗಿರಲಿಲ್ಲ   ಹಾಗಾಗಿ ನೀವೀಗ ಕಾಣುತ್ತಿರುವ ಜೀವನ ಶೈಲಿಗೆ  ಈ ಕಥೆ ಹೊಂದಾಣಿಕೆ  ಆಗದಿರಬಹುದು . }
ಆಸ್ಪತ್ರೆಗೆ ಊಟ ಕೊಟ್ಟು ವಾಪಸ್ಸು ಬರಲು  ವೈಭವಿ ಚಿತ್ರಮಂದಿರದ  ಬಳಿ ಇದ್ದ ಬಸ್ ನಿಲ್ದಾಣದಲ್ಲಿ  ಕಾಯುತ್ತಿದ್ದ, ಆದರೆ ಬರಬೇಕಾದ ಬಸ್ ನಾಪತ್ತೆ ಯಾಗಿತ್ತು, ಕಾಯುತ್ತಾ ಕಾಯುತ್ತಾ  ಅಡ್ಡಾಡುತ್ತಿದ್ದ  ಅವನಿಗೆ  ಎದುರುಗಡೆ ಯಿಂದ   ಒಬ್ಬ ಬಾಬ್ ಕಟ್ ಹುಡುಗಿ ಬರುತಿದ್ದಳು , ವಯಸ್ಸಿನ ಸಹಜ ವಾಗಿ ಆ ಹಾ ಸುಂದರವಾಗಿದ್ದಾಳೆ ಅಂದು ಕೊಂಡ , ಅಷ್ಟರಲ್ಲಿ ಬಸ್ ಬಂತು ಹತ್ತಿ ಮನೆಕಡೆಗೆ ಜಾರಿದ, ಆದರೆ ಆ  ಹುಡುಗಿ  ಮುಖ  ಪದೇ  ಪದೆ ಜ್ಞಾಪಕಕ್ಕೆ ಬರುತ್ತಿತ್ತು, ಹಾಗೂ ಹೀಗೂ ಆ ದಿನ ಕಳೆಯಿತು , ಹೀಗೆ ಒಂದೆರಡು ದಿನ ಕಳೆಯಿತು,  ಪ್ರತಿ ನಿತ್ಯ ಆ ಹುಡುಗಿಯ ದರ್ಶನ ಆಗುತ್ತಿತ್ತು, ಆದರೆ ಹುಡುಗನ ಮನಸು ಆ ಹುಡುಗಿಯ ಸೆಳೆತಕ್ಕೆ ಮನಸೋತಿತ್ತು, ಅದಕ್ಕಾಗಿ ಅವಳ ಬಗ್ಗೆ ವಿಚಾರ ಕಲೆಹಾಕಲು  ಅಡ್ಡಾಡಿದ  , ಒಂದಷ್ಟು ಮಾಹಿತಿ ಸಿಕ್ಕಿತು,  ಅವಳ ಗಮನ ಸೆಳೆಯಲು ಹಿಂದೆ ಮುಂದೆ  ಸುತ್ತಲು ಶುರು ಮಾಡಿದ , ಅವಳ ನೆನಪಲ್ಲಿ  ಕನಸುಗಳ ಸಾಮ್ರಾಜ್ಯ ಕಟ್ಟಿದ . ಆದರೆ ಆ ಹುಡುಗಿಗೆ ಇದ್ಯಾವುದೂ ಗೊತ್ತಿರಲಿಲ್ಲ,

ಆದರೆ ಅವಳ ಗೆಳತಿ  ಮಮತಾ  ಇದನ್ನು ಗಮನಿಸಿ ಹೇಳಿದಳು ."ಲೇ ನೋಡೇ ನಿನಗೆ ಒಬ್ಬ ಸುಂದರ ಹುಡುಗ  ಪ್ರಪೋಸ್ ಮಾಡಲು ಹಿಂದೆ ಬಿದ್ದಿದ್ದಾನೆ" , "ಪಾಪ  ನೋಡಿದ್ರೆ ಅಯ್ಯೋ ಅನ್ನಿಸುತ್ತದೆ " , ನಾನಾಗಿದ್ರೆ ....!!! ಅಂತಾ ರಾಗ  ತೆಗೆದಳು . ಅವನ ಕಡೆ ನೋಡಿದ ಆ ಹುಡುಗಿ  "ಹೂ ಕಣೆ ಪರವಾಗಿಲ್ಲ"'  "ಆದ್ರೆ   ಇವನಿಗೆ ನನ್ನ ಸಾಕುವಷ್ಟು ಹಣ ಇದೆಯೋ ಇಲ್ಲವೋ ಗೊತ್ತಿಲ್ಲ ", "ಬೇಕಾದ್ರೆ  ನೀನು  ಅವನನ್ನು ಒಪ್ಪಿಕೊ" "ನನ್ನ ಅಭ್ಯಂತರ ಇಲ್ಲಾ"  ಅಂದು ನಗುತ್ತಾ ಸುಮ್ಮನಾದಳು . ಅವಳೇ ನಮ್ಮ ಕಥೆಯ ನಾಯಕಿ "ಸ್ಪಂದನ" ಇವಳೂ ಸಹ  ಈಗ ದ್ವಿತೀಯ  ಪಿ. ಯೂ .ಸಿ ಓದುತ್ತಿದ್ದಾಳೆ, ಮನೆಯಲ್ಲಿ ಅಪ್ಪಾ ಬಹಳ ಶಿಸ್ತಿನ ಮನುಷ್ಯ , ಅಮ್ಮಾ ಬಹಳ ಮ್ರುದು. ಹಾಗಾಗಿ ಅಪ್ಪನ ಅಮ್ಮನ ಮುದ್ದಿನ ಮಗಳು ಇವಳು .

"ಸ್ಪಂದನ" ಳ  ಹಿಂದೆ ಬಿದ್ದ ನಮ್ಮ "ಪ್ರತಾಪ"   ಅವಳಲ್ಲಿ ಪ್ರೀತಿ ನಿವೇದನೆ ಮಾಡಲು ಪ್ರಯತ್ನಿಸಿ ವಿಫಲನಾಗಿದ್ದ , ಯಾಕೋ ಕಾಣೆ  ಇವತ್ತು ಅವಳನ್ನು ಮಾತನಾಡಿಸಿಯೇ ಸಿದ್ದ ಎಂದು ಹೊರಟರೆ , ಅವಳು ಎದುರು  ಬಂದೊಡನೆ  ಎದೆ ಬಡಿತ ಜೋರಾಗಿ  ಬಾಯಲ್ಲಿ ನೀರೆಲ್ಲಾ ಒಣಗಿ ಮಾತಾಡಲು ಸ್ವರವೇ  ಹೊರಡುತ್ತಿರಲಿಲ್ಲ .  ಈ ದಿನಗಳಲ್ಲಿ ಅಂತಹ ಸಮಸ್ಯೆ ಇಲ್ಲಾ ಬಿಡಿ, ಮೊಬೈಲ್ ನಲ್ಲಿ ಒಂದು ಮೆಸೇಜು  ಕಳುಹಿದರೆ ಮುಗೀತು , ಆದರೆ ಆ ದಿನಗಳಲ್ಲಿ ಮೊಬೈಲ್ ಹೆಸರೇ ಇರಲಿಲ್ಲ, ಇದ್ದ ಟೆಲೆಫೋನ್ ಗಳು ಸಾಮನ್ಯರ ಕೈಗೆ ನಿಲುಕುವಂತಿರಲಿಲ್ಲ , ಹಾಗಾಗಿ ಪತ್ರ ಬರೆಯುವುದೇ ಇದ್ದ ಒಂದು ಉಪಾಯ ,  ಹಾಗೂ ಹೀಗೂ ವಾರಗಟ್ಟಲೆ ಕಷ್ಟ  ಪಟ್ಟು  ಒಂದು "ಪ್ರೇಮ ನಿವೇದನೆ ಪತ್ರ"  ಅಲ್ಲಲ್ಲ "ಪ್ರೇಮ ನಿವೇದನೆ ಅರ್ಜಿ" ತಯಾರು ಮಾಡಿದ , ಹೂ ಕಣ್ರೀ  ಜೀವನದ ಮೊದಲ ಪ್ರೇಮ ಪತ್ರ  ಅವನದು,  ಅದನ್ನು ಬರೆಯಲು ಎಷ್ಟು ಕಷ್ಟಪಟ್ಟ  ಅಂತಾ ಅವನಿಗೆ ಮಾತ್ರ ಗೊತ್ತು, ಸಾವಿರಾರು ಹಾಳೆಗಳ  ಬಲಿಯಾಗಿತ್ತು, ಈ ಕಾರ್ಯಕ್ಕೆ . ಇದನ್ನು ನೋಡೇ ಇರಬೇಕು ಜಗಜಿತ್ ಸಿಂಗ್  ತನ್ನ ಘಜಲ್ ನಲ್ಲಿ ಹೀಗೆ ಹಾಡಿದ್ದಾನೆ

Pyar Ka Pehla Khat Likhne Mein Waqt To Lagta Hai
Naye Parindo Ko Udne Mein Waqt To Lagta Hai

Jism Ki Baat Nahi Thi
Unke Dil Tak Jana Tha
Jism Ki Baat Nahi Thi
Unke Dil Tak Jana Tha

Lambi Doori Tai Karne Mein Waqt To Lagta Hai
Lambi Doori Tai Karne Mein Waqt To Lagta Hai

Pyar Ka Pehla Khat Likhne Mein Waqt To Lagta Hai

Gaanth Agar Lag Jaye To Phir Rishte Ho Ya Dori
Gaanth Agar Lag Jaye To Phir Rishte Ho Ya Dori

Laakh Kare Koshish Khulne Mein Waqt To Lagta Hai
Laakh Kare Koshish Khulne Mein Waqt To Lagta Hai

Pyar Ka Pehla Khat Likhne Mein Waqt To Lagta Hai

Humne Ilaaj-e-Jakhme-Dil To Dhoondh Liya Lekin
Humne Ilaaj-e-Jakhme-Dil To Dhoondh Liya Lekin
Gehre Zakhmo Ko Bharne Me Waqt To Lagta Hai
Gehre Zakhmo Ko Bharne Me Waqt To Lagta Hai

Pyar Ka Pehla Khat Likhne Mein Waqt To Lagta Hai
Naye Parindo Ko Udne Mein Waqt To Lagta Hai

ಅಂತಾ . .
ಒಂದು  ದಿನ ಏನಾಯ್ತು ಗೊತ್ತಾ ..??

ನಮ್ಮ ಹೀರೋ ಪ್ರತಾಪ್ ಧೈರ್ಯ ಮಾಡಿ ತನ್ನ ಅರ್ಜಿಯನ್ನು  ಸ್ಪಂದನಳಿಗೆ  ಅವಳ ಕಾಲೇಜಿನ ಸಮೀಪ  ನೀಡಿಯೇ ಬಿಟ್ಟ , ಹೇಗೆ ಕೊಟ್ಟ ಅವೆಲ್ಲಾ ಸಿನಿಮಾದಂತೆ ಬಿಡಿ, ಹಲೋ ಅಂದು ಹತ್ತಿರ  ತೆರಳಿ ಅವಳು ಚೆತರಿಕೊಳ್ಳುವಷ್ಟರಲ್ಲಿ ಬರೆದ ಚೀಟಿಯನ್ನು ಅವಳ ಕಾಲಿನ ಸಮೀಪ ಬೀಳಿಸಿ  ಎಸ್ಕೇಪ್  ಆಗಿಬಿಟ್ಟ,  ಇನ್ನು ಅವಳಿಗೋ  ಇವನ ವರ್ತನೆ ಕೋಪ ತಂದಿತ್ತು, ಆದರೆ ಪುಣ್ಯ ಯಾರೂ  ನೋಡಿರಲಿಲ್ಲ,ಒಂದು ವೇಳೆ  ಆ ಪತ್ರವನ್ನು ಬೀದಿಯಲ್ಲೇ ಬಿಟ್ಟಿದ್ದರೆ  ತನಗೆ ತೊಂದರೆ  ಎಂದು ಯೋಚಿಸಿ ಹಾಗೆ ಬಗ್ಗಿ ಕಾಲಿನ ಸಮೀಪ ಇದ್ದ ಪತ್ರವನ್ನು  ಎತ್ತಿ ಕೊಂಡು ತನ್ನ ಬ್ಯಾಗಿನಲ್ಲಿ ಹಾಕಿಕೊಂಡಳು ಮನೆಯಲ್ಲಿ ಹರಿದು ಹಾಕೋಣ  ಎಂದು ಕೊಂಡು  ಕಾಲೇಜಿನ ಹಾದಿ ಹಿಡಿದಳು .

ಇತ್ತ ನಮ್ಮ ಹೀರೋ "ಪ್ರತಾಪ"   ಅವಳ ಸಿಟ್ಟು ಕಂಡು ಎರಡು ದಿನ ನಾಪತ್ತೆ ಯಾಗಿ ಬಿಟ್ಟ, ಪ್ರೇಮ ನಿವೇದನೆ ಅರ್ಜಿ ಕೊಟ್ಟವನ ಧೈರ್ಯ ಹಾರಿ ಹೋಗಿತ್ತು,  ಏನೇನೋ ಕೆಟ್ಟ ಯೋಚನೆಗಳು , ಕಣ್ಣಿಗೆ ಸರಿಯಾಗಿ ನಿದ್ದೆ ಬಾರದೆ  ಒದ್ದಾಡ ತೊಡಗಿದ,  ಆಸ್ಪತ್ರೆ ಕೆಲಸಕ್ಕೆ ಬೇರೆ ದಾರಿಯಲ್ಲಿ ಕದ್ದು ಓದಾದ ಬೇಕಾದ  ಅನಿವಾರ್ಯ ಒದಗಿತ್ತು,

 ಇತ್ತ ನಮ್ಮ ನಾಯಕಿ "ಸ್ಪಂದನ" ಮನೆಗೆ ಬಂದು ಅವನ ಪತ್ರ ಹರಿಯಲು  ಕೈ ಹಾಕುತ್ತಾಳೆ, ಅದರಲ್ಲಿನ ಸುಂದರ ಅಕ್ಷರ ಮನ ಸೆಳೆಯುತ್ತದೆ ಓದುತ್ತಾಳೆ  ಅದರಲ್ಲಿ  ಪ್ರೇಮ  ಪತ್ರವಾಗಿರದೆ  ಅರ್ಜಿಯಾಗಿತ್ತು. "Application for the post of life partner"  ಎಂದು ಬರದು ವಿಚಿತ್ರವಾಗಿ ತನ್ನ ಬಗ್ಗೆ ವಿವರ ನೀಡಿ  ತನ್ನ ಆಸೆಯನ್ನು ತಿಳಿಸಿದ್ದಾನೆ, ಎಲ್ಲಿಯೂ  ಅಸಹ್ಯ ಪಡುವ ಪದಗಳಿಲ್ಲ  , ಆದರೆ ಇದನ್ನು ಏನು ಮಾಡುವುದು  ತಿಳಿಯುತ್ತಿಲ್ಲ , ಕೊನೆಗೆ ಯೋಚಿಸಿ  ಒಂದು ನಿರ್ಧಾರಕ್ಕೆ ಬಂದಳು, ಈ ವಿಚಾರವನ್ನು  ತಾನೇ ನಿರ್ವಹಿಸಲು ನಿರ್ಧಾರ ಮಾಡಿದಳು , ಅವನಿಗೆ  ಉತ್ತರದ ಪತ್ರ ಸಿದ್ದಪಡಿಸಿದಳು  " your application for the post of good friend is approved " ಎಂದು ಬರದ ಪತ್ರ ಸಿದ್ದ ಪಡಿ ಅದನ್ನು ಅವನಿಗೆ ನೀಡುವ ಅವಕಾಶ ಕ್ಕಾಗಿ ಕಾಯ್ದಳು  ಆದರೆ ಪುಣ್ಯಾತ್ಮ ಎರಡು ದಿನ ಪತ್ತೆ ಇರಲಿಲ್ಲ. ಕೊನೆಗೆ ಮೂರನೇ ದಿನ ಅವನಿಗೆ  ಪತ್ರವನ್ನು ಹೇಗೋ ದಾಟಿಸಿದಳು . ಇಂತಹ ಪತ್ರಗಳ ವ್ಯವಹಾರ  ಹಲವು ದಿನ ನಡೆದು, ಪರಸ್ಪರರ ಬಗ್ಗೆ  ತಿಳಿದುಕೊಂಡರು . ಕೊನೆಗೆ ಒಮ್ಮೆ  ಇಬ್ಬರು ಪರಸ್ಪರ ಭೇಟಿ ಮಾಡಲು  ನಿರ್ಧಾರ ಮಾದಿದರು. ಆ ದಿನ ಬಂತು . ಮುಂದೆ ...?

 ಹೌದು ಆ ದಿನ ಬಂತು  ಇಬ್ಬರಲ್ಲೂ ಮಾತಿಲ್ಲಾ,  ಮೌನ  ಅಲ್ಲಿ ಮನೆಮಾಡಿತ್ತು, ಕೊನೆಗೆ ಅವಳೇ ಮೌನ ಮುರಿದಳು
ಸ್ಪಂದನ :- ಅಂತೂ ಬಂದಿದ್ದಕ್ಕೆ ಥ್ಯಾಂಕ್ಸ್
 ಪ್ರತಾಪ್ :- ಹಾಗೇನಿಲ್ಲ, ಒಂತರ ಖುಷಿಯಾಯಿತು,
ಸ್ಪಂದನ :- ನೀವು ಬಹಳ ಸ್ಮಾರ್ಟ್ ಆಗಿದ್ದೀರಾ ..!!
ಪ್ರತಾಪ್ :- {ಮನದಲ್ಲೇ ಆಕಾಶಕ್ಕೆ ನೆಗೆದು ಬಿಟ್ಟ}  ನಾಚಿಕೊಳ್ಳುತ್ತಾ ಥ್ಯಾಂಕ್ಸ್  
ಸ್ಪಂದನ :- ಅದ್ಸರಿ  ,  "ಒಂದು ವೇಳೆ ನನ್ನನ್ನು ನೀವು ಮದುವೆ ಆದರೆ ಹೇಗೆ ಸಾಕುತ್ತೀರಿ",  ..??
ಪ್ರತಾಪ್ :- "ಅದಕ್ಕೇನಂತೆ  ನನ್ನಲ್ಲಿ ಜಾಣ್ಮೆ ಇದೆ ಹಣ ಗಳಿಸುವುದು ಹೇಗೆ ಅಂತಾ ನನಗೆ ಗೊತ್ತು" , "ನಿಮ್ಮನ್ನು ಮಹಾರಾಣಿ       ತರಹ ನೋಡಿಕೊಳ್ಳುತ್ತೇನೆ" .
ಸ್ಪಂದನ:- ಏನು ಕಳ್ಳ ತನ ಮಾಡ್ತೀರ ??
ಪ್ರತಾಪ್ :- "ಇಲ್ಲಪ್ಪಾ , ಕಷ್ಟಪಟ್ಟು ಕೆಲಸ ಮಾಡುತ್ತೇನೆ"  "ಹಣ ಸಂಪಾದನೆ ಮಾಡುತ್ತೇನೆ " .
ಸ್ಪಂದನ :- "ನೋಡಿ ಈ ಸಿನಿಮಾ ಡೈಲಾಗ್ ಎಲ್ಲಾ ಬೇಡ" . "ಮೊದಲು ವಾಸ್ತವವಾಗಿ ಯೊಚಿಸಿ."  "ನಿಮ್ಮ ಕ್ವಾಲಿಫಿಕೇಶನ್ ಗೆ ಯಾರು ಕೆಲಸ ಕೊಡ್ತಾರೆ '' "ಕೆಲಸ ಸಿಕ್ಕರೂ ಬರುವ ಸಂಪಾದನೆ ನಿಮಗೆ ಸಾಲಲ್ಲ" "ಇನ್ನು  ಅದರಲ್ಲಿ ಜೀವನ ಮಾಡುವ ನನ್ನ ಪಾಡೇನು? , "ಅದಕಾಗಿ  ಮುಂದೆ ನಾವಿಬ್ಬರು ನರಕ ಅನುಭವಿಸ ಬೇಕಾಗುತ್ತೆ",  "ನನ್ನ ಮೇಲೆ ನಿಜವಾಗಿಯೂ ಪ್ರೀತಿ ಇದ್ದಲ್ಲಿ,  ಅರ್ಧಕ್ಕೆ ನಿಲ್ಲಿಸಿರುವ ಎರಡನೆ  ಪಿ ಯೂ .ಸಿ. ಪರೀಕ್ಷೆ ಮತ್ತೆ ಬರೆಯಿರಿ", "ನಿಮ್ಮ ಮನೆಯ ಪರಿಸ್ಥಿತಿ  ಗೊತ್ತು, ನಿಮ್ಮ ತಾಯಿಯ ಸಂಪಾದನೆ ಅಷ್ಟೇ"    "ಜೀವನ ನೀವು ಅಂದುಕೊಂಡಷ್ಟು  ಸುಲಭ ಅಲ್ಲಾ" , "ಮೊದಲು ಓದು ಮುಂದು ವರೆಸಿ, ಜೊತೆಗೆ ಅಮ್ಮನಿಗೆ ಸಹಾಯ ಮಾಡಲು  ಪಾರ್ಟ್ ಟೈಮ್ ಕೆಲಸ ಮಾಡಿರಿ '
ಪ್ರತಾಪ :- "ಹಾಗೇನಿಲ್ಲ  ನಾನು ಮುಂದೆ ಓದುತ್ತೇನೆ, ಹಣ ಗಳಿಸುತ್ತೇನೆ"  "ಜೀವನದಲ್ಲಿ ಎಷ್ಟೊಂದು ಜನ  ಹಣವಿಲ್ಲದೆ ಜೀವನ ಮಾಡ್ತಾ ಇಲ್ವಾ?  ಹಾಗೆ  ನಾವಿಬ್ಬರು ಪ್ರೀತಿಯಿಂದ ಜೀವನ ಮಾಡೋಣ" ಎಂದ
ಸ್ಪಂದನ :- ಇವೆಲ್ಲಾ ವಾಸ್ತವಿಕ ನೆಲೆ ಇಲ್ಲದ  ಒಣ ಪುರಾಣಗಳು, ಇಂದಿನ ಜೀವನ ನಿರ್ವಹಣೆಗೆ ಹಣ ಬೇಕು, ಹಣ ಬೇಕಾದರೆ  ಒಳ್ಳೆಯ ಕೆಲಸ ಬೇಕು, ಒಳ್ಳೆಯ ಕೆಲಸಕ್ಕೆ  ಅಗತ್ಯ ಒಳ್ಳೆಯ ಕ್ವಾಲಿಫಿಕೇಶನ್  ಅದನ್ನು ಮೊದಲು ಪಡೆದು ಬಾ ಆನಂತರ  ನಿನ್ನನ್ನು ನನ್ನ ಲೈಫ್ ಪಾರ್ಟನರ್ ಎಂದು ಒಪ್ಪಿಕೊಳ್ಳುತ್ತೇನೆ .
ಎಂದು ಹೇಳಿದ ಸ್ಪಂದನ "ನಿನ್ನ ವಿಧ್ಯಾಭ್ಯಾಸ ಮುಂದುವರೆಸಲು ನನ್ನ ಪ್ರೀತಿಯ ಕಾಣಿಕೆ " ಎಂದು ಹೇಳಿ  ಐದು ನೂರು ರೂಪಾಯಿ ಅವನ ಜೇಬಿಗೆ ತುರುಕಿ  , ಇನ್ನು ಎರಡು ತಿಂಗಳಿಗೆ ಮಾತ್ರ ಒಮ್ಮೆ ಭೇಟಿ  ಎಂದು ಹೇಳಿ ಅವನ ಉತ್ತರಕ್ಕೆ ಕಾಯದೆ ಹೊರಟು  ಹೋದಳು,
 ಸ್ಪಂದನಳ ಉತ್ತರದಿಂದ  ತತ್ತರಿಸಿದ  ನಮ್ಮ ಹೀರೋ  ಪ್ರತಾಪ್ ವಾಸ್ತವಕ್ಕೆ ಬರಲು ಬಹಳ ಸಮಯ ಬೇಕಾಯಿತು,  ಅಲ್ಲೇ ಸನಿಹದಲ್ಲಿದ್ದ  ನದಿಯ ಸಮೀಪ ಕುಳಿತು, ಸ್ಪಂದನ ಹೇಳಿದ ಮಾತುಗಳನ್ನು   ಅವಲೋಕನ ಮಾಡತೊಡಗಿದ, ಅಲ್ಲೇ ಸನಿಹದಲ್ಲಿ  ಒಬ್ಬ ಹುಡುಗ ಹಾಗು ಹುಡುಗಿ ಜಗಳ  ಆಡುತ್ತಿದ್ದರು
 ಹುಡುಗ :- ಸಾರಿ ಕಣೆ  ಎಲ್ಲೂ ಹಣ ಸಿಗುತ್ತಿಲ್ಲಾ
 ಹುಡುಗಿ :- ಏನೋ ಹಾಗಂದ್ರೆ ನನ್ನ ಗತಿ ಏನು ಈಗ ?
ಹುಡುಗ :- ಸಾರಿ ಕಣೆ ಮನೆಯಲ್ಲಿ ಹೇಳೋಕೆ ಭಯ , ಸಂಪಾದನೆ ಮಾಡದ ನನ್ನ ಕಂಡರೆ ಎಲ್ಲರಿಗೂ  ಅಸಡ್ಡೆ .
ಹುಡುಗಿ:- ಮತ್ತೆ ಎಲ್ಲಾದ್ರೂ ಓಡಿಹೋಗಿ ಮದುವೆ  ಆಗೋಣ  ಇಲ್ಲದಿದ್ರೆ ಮಾನ ಹೋಗುತ್ತೆ,
ಹುಡುಗ :- ಲೇ ದಯವಿಟ್ಟು ಹೆದರಿಸ ಬೇಡ ಸ್ವಲ್ಪ ದಿನ  ಅಡ್ಜಸ್ಟ್ ಮಾಡಿಕೊ ಪ್ಲೀಸ್ , ಸ್ವಲ್ಪ ಯೋಚಿಸ್ತೀನಿ,
ಹುಡುಗಿ:- ಈಡಿಯಟ್  ಅವತ್ತು ಬೇಡಾ ಬೇಡಾ ಅಂದ್ರು  ಕೇಳಲಿಲ್ಲ , ಇವತ್ತು ನೋಡು ಕನ್ಸೀವ್  ಆಗಿದ್ದೀನಿ .
ಹುಡುಗ:- ಆ  ಏನ್ ಹೇಳ್ತಾ ಇದ್ದೀಯ, ಲೇ ಪ್ಲೀಸ್  ಹೇಗಾದರೂ ಮಾಡಿ ಇದನ್ನು ತೆಗೆಸು  ಅಂತಾ ಅಂಗಲಾಚುತ್ತಿದ್ದ .

ಆ ಹುಡುಗನ ಮಾತನ್ನು ಕೇಳಿ ಯೂ ಚೀಟ್  ಅಂತಾ ಅಳುತ್ತಾ   ನದಿಯ ಕಡೆಗೆ ಆ ಹುಡುಗಿ  ಹೋಗತೊಡಗಿದಳು , ಅವಳ ಹಿಂದೆ ಆ ಹುಡುಗ ಬೇಡಿಕೊಳ್ಳುತ್ತಾ  ಸಾಗಿದ  ಇಬ್ಬರೂ  ಪ್ರತಾಪ್  ದೃಷ್ಟಿಯಿಂದ ಮರೆಯಾದರು .

ಅವರಿಬ್ಬರ ಗೋಳಾಟ  ಪ್ರತಾಪ್ ಗೆ  ಚಾಟಿ ಯ ಹೊಡೆತ ನೀಡುತ್ತಿತ್ತು, ಇದನ್ನು ನೋಡಿ ಸ್ಪಂದನ ಮಾತು ಸರಿ ಎಂಬ  ಅರಿವಾಯಿತು. ಮನೆಗೆ ಬಂದವನೇ  ಮೂಲೆಗೆ ಬಿಸಾಡಿದ್ದ  ಹಳೆಯ ಮಾರ್ಕ್ಸ್ ಕಾರ್ಡ್ , ಹಾಗು ಇತರ ದಾಖಲೆಗಳನ್ನು ತೆಗೆದು  ಓದಲು  ಮುಂದು ವರೆದ  ಈ ಮಧ್ಯೆ  ಸ್ಪಂದನ ಪ್ರತೀ ಎರಡು ತಿಂಗಳಿಗೆ ಇವನನ್ನು ಭೇಟಿ ಮಾಡಿ ಸಲಹೆ ನೀಡುತ್ತಿದ್ದಳು ,

ಪ್ರತಾಪ್   ಬೆಳಕಿನ  ಹಾದಿ  ತೆರದು ಕೊಂಡಿತು , ಓದುತ್ತಾ ಜೊತೆಯಲ್ಲಿ ಪಾರ್ಟ್ ಟೈಮ್ ಕೆಲಸ ಮಾಡುತ್ತಾ  ತನ್ನ ಜೀವನದ ಪಥದಲ್ಲಿ ಸಾಗಿದ , ಹಾಗೂ ಹೀಗೂ ಪಿ .ಯು .ಸಿ . ಮುಗಿಸಿದ  , ನಂತರ ಬಿ.ಕಾಮ್   ಸೇರಿದ  ಜೊತೆಗೆ  ಮಕ್ಕಳಿಗೆ ಪಾಠ  ಮಾಡಲು ಶುರುಮಾಡಿದ,   ಆದರೆ ಅವನ ಹಾಗು  "ಸ್ಪಂದನ" ಳ  ಭೇಟಿ ಪ್ರತೀ ಎರಡು ತಿಂಗಳಿಗೆ  ನಡೆಯುತ್ತಿತ್ತು,  ಅವನ ಪ್ರತೀ ಯಶಸ್ಸಿನ  ಹಿಂದೆ "ಸ್ಪಂದನ" ಲ   ಸಲಹೆ  ಸಹಕಾರ ಇರುತ್ತಿತ್ತು,  ಮುಂದೆ ಎಂ,ಕಾಂ ಮಾಡಿ,  ಜೊತೆಗೆ   ಮ್ಯಾನೆಜ್ಮೆಂಟ್ ಪದವಿ ಪಡೆದು  ಮುನ್ನುಗ್ಗಿದ ,  ಹಲವು ವರ್ಷ ಕಳೆದ ಮೇಲೆ  ಯಶಸ್ಸು ಅವನಾದಾಗಿತ್ತು,  ಹೌದು ಅವನಿಂದು ಒಂದು ಕಂಪನಿಯ ಸಿ,ಈ .ಒ . ಅವಳು ಸಹ ಕಡಿಮೆ ಇಲ್ಲದಂತೆ  ಎಮ್. ಎಸ್.ಸಿ  , ಪಿ. ಎಚ್. ಡಿ   ಮುಗಿಸಿ, ನಂತರ ಒಂದು ಶಿಕ್ಷಣ  ಸಂಸ್ಥೆಯಲ್ಲಿ  ಉಪನ್ಯಾಸಕಿಯಾದಳು .   ಜೀವನದ  ದಡ  ಸೇರಿದ ಇಬ್ಬರು  ಹಣಕಾಸಿನಲ್ಲಿ ಸ್ವಾವಲಂಬಿಗಳು  ಇಬ್ಬರು ತಮ್ಮ ನಿರ್ಧಾರ ತಿಳಿಸಿ  ಮನೆಯವರನ್ನು ಒಪ್ಪಿಸಿ  ಜೋಡಿಯಾದರು,


ವಾಸ್ತವದ ನೆಲೆಗಟ್ಟಿನಲ್ಲಿ ಜೋಡಿ ಹಕ್ಕಿ ನೀವಾಗಿ

ಮದುವೆಯ ದಿನ ಮೊದಲ ರಾತ್ರಿ :-
ಪ್ರತಾಪ್ :- "ಅಂತೂ ಜೀವನದಲ್ಲಿ ಈ ಕಗ್ಗಲ್ಲನ್ನು  ಒಂದು ಸುಂದರ ಮೂರ್ತಿಯನ್ನಾಗಿ ಮಾಡಿದ ಕೀರ್ತಿ ನಿನ್ನದು" ಚಿನ್ನಾ  
ಸ್ಪಂದನ:- ವಯಸ್ಸಿನ ಆತುರದಿಂದ  ಪ್ರೀತಿಯೆಂಬ  ಆಟದ ಬ್ರಮೆಯಲ್ಲಿ ಬೀಳದೆ  ನನ್ನ ಮಾತಿಗೆ ಗೌರವ ಕೊಟ್ಟ  ನನ್ನ ಮುದ್ದು  ಗಂಡ ನೀನು
ಪ್ರತಾಪ್ :- ಹೌದಮ್ಮಾ  ನಿನ್ನನ್ನು ಮಾತಿನಲ್ಲಿ ಗೆಲ್ಲಲಾರೆ , ಜೀವನದಲ್ಲಿ ಅಮೃತ ಸಿಂಚನ ಮಾಡಿದ ನೀನು ಇಂದು  ಹೊಸ ಬಾಳಿನ ಅಮೃತ ನೀಡು ಎಂದು  ಕೈ ಚಾಚಿದ.......!!!!

17 comments:

umesh desai said...

ಬಾಲು ಸರ್ ನಾ ಹೇಳಿದ್ದೆ ನಿಮ್ಮಲ್ಲಿ ಒಬ್ಬ ಅಪರೂಪದ ಕತೆಗಾರನಿದ್ದಾನೆ ಅಂತ..
ಸರಳ ಕತೆ..ಸೊಗಸಾಗಿನೂ ಹೇಳಿದೀರಿ..ಅಂತ್ಯ ಸ್ವಲ್ಪ ಅವಸರ ಆತೇನೋ...
ಈಗಿನ ಹುಡುಗಿಯರು ನಿಜಕ್ಕೂ ನಿಮ್ಮ ನಾಯಕಿಯ ತರಹ ಯೋಚಿಸಬಲ್ಲರೆ..ಇದು ಪ್ರಶ್ನೆ..

Chandru Gunda said...

ತುಂಬಾ ಚೆನ್ನಾಗಿದೆ.... :)

ದಿನಕರ ಮೊಗೇರ said...

tumbaa chennaagide sir... katheyannu nimma reeti heLodu kashTa...
Umesh sir heLida haage eegina huDugiyaru ee riti irodu kashTa...

Chandru Gunda said...

ಒಂದ್ಸಲಕ್ಕೆ ಇದು ಕಥೆಯಲ್ಲ ಜೀವನ ಅನ್ನಿಸ್ಬಿಡ್ತು.... :D

ISHWARA BHAT said...

ಚೆನ್ನಾಗಿದೆ ಗುರುಗಳೆ.. ಚಿತ್ರವೂ..

shivachenna.blogspot.com said...

ಜೀವನ ನಾವಂದು ಕೊಂಡಂತೆ ಸಾಗಲು, ಕಲ್ಲು ಮುಳ್ಳಿನ ದಾರಿ ಸವೆಸಲು ಎಲ್ಲರಲ್ಲೂ ಧೈರ್ಯ ಸ್ಥೈರ್ಯವಿದ್ದರೆ ಸಾಲದು; ಸಾಧನೆಯ ಮುನ್ನುಡಿಗೆ ಸೂಕ್ತ ಸಮಯದಲ್ಲಿ ಸಲಹೆ ಸಹಕಾರವ ಕೊಡಲು ಪ್ರೋತ್ಸಾಹಿಸಲು ಪ್ರತಿಯೊಬ್ಬರಿಗೂ ಒಂದು ವ್ಯಕ್ತಿ ಅವಶ್ಯಕ. ತುಂಬಾ ಚೆನ್ನಾಗಿ ವರ್ಣಿಸಿರುವಿರಿ.

Badarinath Palavalli said...

ಪ್ರೀತಿ ಹೆಪ್ಪುಗಟ್ಟಲು ಹಿಡಿಯುತ್ತೇ ಕಾಲ. ಪರಿಚಯ - ಸ್ನೇಹವಾಗಿ ಮತ್ತದು ಅನುರಾಗವಾಗಿ ಆಮೇಲೆ ತಾನೇ ತಾನಾಗಿ ನಂಬುಗೆಯ ತಳಹದಿ ಭದ್ರವಾದ ಮೇಲೆ ನಿಜವಾದ ಕದ ತೆರೆದುಕೊಳ್ಳಬೇಕು ಪ್ರೇಮ. And ಮದುವೆಗೂ ಮುನ್ನ ಕಾಮ ನಿಷಿದ್ಧ.

ಒಂದು ಪ್ರೇಮ ಕಥೆ ಆಳದಲ್ಲಿ ಸ್ವಾವಲಂಬಿಯಾಗೋ ಪಾಠ ಹೇಳುವ ಮೇಸ್ಟ್ರು ನಮ್ಮ ಬಾಲು ಸಾರ್.

ಮನಸು said...

ವಾಹ್!..!! ಭೇಷ್... ಸುಂದರ ಕಥೆ ನಿಜಕ್ಕೂ ಇದು ಮಾದರಿ ಕಥೆ. ಎಲ್ಲರೂ ತಿಳಿದುಕೊಳ್ಳಬೇಕಾದಂತದು

ನೀವು ಹಾಕಿರುವ ಪೋಟೋ ಯಾರದು ಅಂತಾ ಗೊತ್ತಯ್ತು... ಜೀವ ಜೋಡಿಗಳದು ಹಹಹ

Swarna said...

ಸುಂದರ ಕಥೆಗೆ ಸುಂದರ ಚಿತ್ರಗಳು
ಚೆನ್ನಾಗಿದೆ

ಸೀತಾರಾಮ. ಕೆ. / SITARAM.K said...

nice

bhagya bhat said...

super ji :)
nijakkoo ellaraddoo intadde preetiyaagidre chanda anistu :)

kathaa naayaki haageye manadalle ulidubitlu nodi ..

ಸಂಧ್ಯಾ ಶ್ರೀಧರ್ ಭಟ್ said...

Adbhuta annayya... :) Tumbaa ishtavaaytu.... preetiya jeevana mattu jeevanadalli preeti eradannu saralikarisi heliddeeraa... :)

anda haage meliruva jodi hakki mattu kelagiruva jodi hakki gala eradoo chitra sogasaagide....:)

Chandrashekar Ishwar Naik said...

ಒಂದು ಸುಂದರ ಕಥೆ.ಕಥೆಗೆ ತಕ್ಕ ಚಿತ್ರ ನೋಡಿ ನನ್ನನ್ನು ಓದುವಂತೆ ಮಾಡಿತು.

ಚಿನ್ಮಯ ಭಟ್ said...

ಬಾಲೂ ಸರ್...ನಮಸ್ಕಾರ..
ಪ್ರಾಯಶಃ ನಾ ಓದಿದ ನಿಮ್ಮ ಮೊದಲ ಕಥೆ ಇರ್ಬೇಕು ಇದು :)...
ಚೆನಾಗಿದೆ ಆದರೆ ಅದ್ಭುತ ಅನ್ನೊ ಅಂಥದ್ ಎಂತಾ ಕಾಣ್ಸ್ಲಿಲ್ಲಾ ಸಾರ್..ನಿರೂಪಣೆ ಲಿ ಇನ್ನೂ ಸ್ವಲ್ಪ ಬಿಗಿತನ ಇದ್ರೆ ಒಳ್ಳೇದಿತ್ತೇನೋ..ಮಧ್ಯದಲ್ಲಿ ಘಜಲಿನ ಉದಾಹರಣೆ ಬೇಕೇ ಬೇಕಿತ್ತಾ???ಗೊತ್ತಿಲ್ಲಾ ಸರ್...
ಇನ್ನೊಂದ್ ಸಲ ನೋಡಿ ...ಏನಾದ್ರೂ ಬದಲಾವಣೆ ಬೇಕು ಅನ್ಸಿದ್ರೆ ಮಾಡಿ ಸರ್..
ಬರೀತಾ ಇರಿ...
ನಮಸ್ತೆ :)

Srikanth Manjunath said...

ಜೀವನದ ಇಳಿಜಾರಿನಲ್ಲಿ ಜಾರದೆ.. ಏರು ಹಾದಿಯಲ್ಲಿ ತಡವರಿಸದೆ ಸಾಗುವ ಪಯಣದಾಟದಲ್ಲಿ ಗೆದ್ದ ಇಬ್ಬರೂ ನಿಜಕ್ಕೂ ಪ್ರಶಂಸೆಗೆ ಅರ್ಹರು. ನಾನು ಗಂಡು ಎಂಬ ಗತ್ತಿಲ್ಲದೆ ನಿಜ ಪರಿಸ್ಥಿತಿಯ ಆಳವನ್ನು ಅರಿತು ಮತ್ತೆ ನಾಯಕ.. ಪ್ರೇಮ ಭಿಕ್ಷೆ ಕೇಳಿದ ಹುಡುಗನನ್ನು ಹೀಯಾಳಿಸಿ ಆತ್ಮಹತ್ಯೆಗೆ ಎಳೆಯಬಹುದಾಗಿದ್ದ ಹುಡುಗಿ ಶಾಂತ ಚಿತ್ತದಿಂದ ವರ್ತಿಸಿ ತನ್ನ ಬಾಳ ಸಂಗಾತಿಯಾಗ ಬಲ್ಲ ಹುಡುಗನನ್ನು ಜೀವನ ಸಂಗಾತಿಯಾಗಿಸಿಕೊಳ್ಳಲು ಬೇಕಿದ್ದ ಅರ್ಹತೆಯನ್ನು ಸಂಪಾದಿಸಿಕೊಳ್ಳಲು ದಾರಿ ಮಾಡಿ ಕೊಟ್ಟ ಪರಿ ಸುಂದರವಾಗಿ ಅನಾವರಣಗೊಂಡಿದೆ. ಸೂಪರ್ ಲೇಖನ ಸರ್ ಇಷ್ಟವಾಯಿತು

ನೆನಪಿನ ಅಲೆಗಳ ಜೊತೆ ನನ್ನ ಪಯಣ said...

Kathe Mamuli adru Nirupane Bhinnavagide...

Manushyanige Talme mukhya anno Paata helidira...

Praveen Hegde said...

Nijavadaddu bari kate alla...