Thursday, October 4, 2012

ಸಿರ್ಸಿ [ ಶಿರಸಿ ] ನೆನಪು ಕಾಡ್ತಾ ಇದೆ.....ಪಯಣ.4 ಅರ್ಥವಾಗದ ಇತಿಹಾಸದ ಒಡಲಲ್ಲಿ !!!!


ಅಡಗಿ ಕುಳಿತ  ಇತಿಹಾಸ 
 ಬೈಕ್  ಸಾಗುತ್ತಾ ಇತ್ತು, ಅಂಕು ಡೊಂಕಿನ  ರಸ್ತೆ , ಕೆಲವುಕಡೆ ಕಚ್ಚಾ ರಸ್ತೆ , ಹರ್ಷಾ ಮಾತ್ರ  ಹರ್ಷ ಚಿತ್ತನಾಗಿ ಬೈಕ್  ಓಡಿಸುತ್ತಿದ್ದ,  ಒಂದು ಐದು ಅಥವಾ ಆರು ಕಿ.ಮೀ . ದೂರ ಕ್ರಮಿಸಿದ್ದೆವು,  ಅಲ್ಲಿ ಕಂಡಿದ್ದು  ಪೊದೆಗಳ ನಡುವೆ ಕಂಡ   ಒಂದು  ಪಾಳು  ಕಟ್ಟಡ........!!! ಇದು ಏನು ಹರ್ಷಾ??   ಎಂದೇ,  ...... ಇದಾ ಸಾರ್ !!!...............ಬನ್ನಿ ನೋಡೋಣ   ನಾನೂ ಇದೆ ಮೊದಲು ಒಳಗೆ ಬರ್ತಿರೋದು ಅಂತಾ ಹೇಳಿದ. ಇಬ್ಬರು ಬೈಕನ್ನು   ರಸ್ತೆಯ  ಪಕ್ಕದಲ್ಲಿ ನಿಲ್ಲಿಸಿ, ಹಾಕಿದ್ದ ಬೇಲಿ ದಾಟಿ ಒಳಗೆ ನಡೆದೆವು, ಅಷ್ಟರಲ್ಲಿ , ಮತ್ತೊಬ್ಬರು  ಆ ಜಾಗದ ಮಾಲಿಕರೆಂದು ಗುರುತಿಸಿಕೊಂಡವರು ನಮ್ಮ ಜೊತೆ ಸೇರಿದರು, ಹರ್ಷನಿಗೆ ಅವರ ಪರಿಚಯ ಇದ್ದ ಕಾರಣ  ನಮ್ಮನ್ನು ನೋಡಲು ಒಳಗೆ ಕರೆದೊಯ್ದರು.



ಸೋಂದೆ ಅರಸರ ಸ್ಮಾರಕ??


ವಿಶಾಲವಾದ ಪ್ರದೇಶ  ಮರ ಗಿಡಗಳಿಂದ ಸುತ್ತುವರಿದಿತ್ತು, ಒಣ ಎಲೆಗಳ  ಹಾಸಿಗೆ ಯೊಳಗೆ  ಅಡಗಿದ ಮುಳ್ಳುಗಳು , ಹಾದಿಯಲ್ಲಿ ಸ್ವಾಗತ ಕೋರಿದ್ದವು. ತಲೆಯ ಮೇಲೆ  ಸೂರ್ಯ ತನ್ನ  ಬಿಸಿಲ ಮಳೆಯನ್ನು   ನಮ್ಮ ತಲೆಗಳ ಮೇಲೆ ಸುರಿಯುತ್ತಿದ್ದ, ನಿಧಾನವಾಗಿ  ಸಾಗಿದೆವು.  ಹತ್ತಿರ ಹೋಗಿ ಸುತ್ತಾಡುತ್ತಾ  ನನ್ನ ಕಣ್ಣು  ಅಲ್ಲಿ ಏನಾದರೂ ಶಾಸನ  ಇದೆಯೇ ಎಂದು ಹುಡುಕುತ್ತಿತ್ತು.  ಊ ಹೂ  ಏನೋ ಪ್ರಯೋಜನ ವಿಲ್ಲ.  ಆದರೂ ಪ್ರಯತ್ನಾ ಸಾಗಿತ್ತು, ನನ್ನ ಕ್ಯಾಮರ ಸಿಕ್ಕ ನೋಟವನ್ನು ತಪ್ಪಿಸದೇ ಸೆರೆಹಿಡಿದು  ತನ್ನ ಒಡಲಲ್ಲಿ ತುಂಬಿ ಕೊಳ್ಳುತ್ತಿತ್ತು.

ಇಲ್ಲೆನಿತ್ತು. ನಿಮಗೆ ಗೊತ್ತಾ ??



ಅರೆ ಇದೇನಿದು  ಅಂತಾ ಹತ್ತಿರ ಹೋದರೆ ಅಲ್ಲಿ ಕಾಣಿಸಿದ್ದು ಒಂದು ಚೌಕಾಕಾರದ  ವೇದಿಕೆ  ನಾಲ್ಕೂ ಕಡೆಯೂ ಮೆಟ್ಟಿಲು ಗಳನ್ನೂ ಹೊಂದಿದ  ಕಲ್ಲಿನ ವೇದಿಕೆ  ಪೊದೆಗಳ  ಅಲಂಕಾರ ಹೊತ್ತು  ಮಲಗಿತ್ತು. ಸಾರ್ ಹುಷಾರು ಇಲ್ಲಿ ಪೊದೆಗಳಿವೆ  ಹಾವುಗಳು ಇರುತ್ತೆ  ಅಂತಾ ಜೊತೆಯಲ್ಲಿದ್ದವರ  ಸೂಚನೆ  ಹಾಗು ಎಚ್ಚರಿಕೆ.  ಯಾವುದೂ ಕಾಣಿಸಲಿಲ್ಲ ಬಿಡಿ.

ಗೋಪುರವನ್ನು ಸುತ್ತುವರೆದ ಗಿಡಗಳು 


ಗೋಪುರದ ಸನಿಹ ದೃಶ್ಯ.


ಬನ್ನಿ ಮುಂದೆ ಹೋಗೋಣ ಅಂತಾ ಹರ್ಷ ಕರೆದ, ನೋಡಿ ಸಾರ್ ಆ ಗೋಪುರಾ ಅದೇನು ಗೊತ್ತಾ ನಿಮಗೆ ?? ಅಂತಾ ಕೇಳಿ,..........ಸಾರ್ ಫೋಟೋ ತೆಗೀರಿ ಚೆನ್ನಾಗಿರುತ್ತೆ ಅಂತಾ  ಪ್ರೋತ್ಸಾಹಿಸಿದ  ಈ ತಮ್ಮ. ಒಂದು ಪಾರ್ಶ್ವದಲ್ಲಿ ಗಿಡ ಗಂಟಿಗಳು ಗೋಪುರವನ್ನು ಶಿಥಿಲಗೊಳಿಸುತ್ತಿದ್ದವು , ಮತ್ತೊಂದು ಪಾರ್ಶ್ವದಲ್ಲಿ  ಗೋಪುರ ಕಾಣುತ್ತಿತ್ತು, ಕ್ಯಾಮರ ಲೆನ್ಸೆ ಹೊಂದಿಸಿ  ಹತ್ತಿರ ಮಾಡಿ ಗೋಪುರದ ಫೋಟೋ ತೆಗೆದೇ ,ಗೋಪುರದ  ಸೌಂದರ್ಯ ಸೆರೆಯಾಯಿತು.

ಇದು ಸೋಂದೆ ಅರಸರ  ಗದ್ದಿಗೆ ಯಾಗಿತ್ತಾ??




ಇದನ್ನು ಯಾವ ಹೆಸರಿನಿದ ಕರೆಯುತ್ತಾರೆ ಹರ್ಷಾ?? ಅಂತಾ ಕೇಳಿದೆ ಸಾರ್ ಇದನ್ನು ಸ್ಥಳಿಯರು "ಕೊಪ್ಪಳ ತೋಟಾ" ಅಂತಾರೆ , ಮತ್ತೆ ಕೆಲವು ಹಿರಿಯರು  ಇದನ್ನು" ಸೋಂದೆ ಅರಸರ  ಗದ್ದಿಗೆ" ಅಂತಾರೆ , ಇನ್ನೂ ಕೆಲವರು  "ಸೋಂದೆ ರಾಜರ ಹೆಂಡತಿಯರ  ಗದ್ದಿಗೆ" ಅಂತಾರೆ  ಇದರಲ್ಲಿ ಯಾವುದು ನಿಜವೋ ಗೊತ್ತಿಲ್ಲಾ,  ನಿಮಗೆ ಇಲ್ಲಿನ ವಿವರ ಸಿಕ್ಕಿದ ಮೇಲೆ ನೀವೇ ತೀರ್ಮಾನಿಸಿ ಅಂತಾ   ಹೇಳುತ್ತಾ  ಬನ್ನಿ ಸಾರ್ ಒಳಗಡೆ ಹೋಗೋಣಾ ಅಂತಾ ಕರೆದ.


ಒಳಗಡೆ ಹೀಗಿದೆ ನೋಡಿ 



ಇಲ್ಲೂ ಕಾಣುತ್ತದೆ ಸೌಂದರ್ಯ 

ಸರಿ ಅಂತಾ ಒಳಗೆ ಹೊರಟೆವು, ಒಳಗಡೆ ಬಹಳಷ್ಟು ಕತ್ತಲೆ ಇತ್ತು , ಬಾವಲಿಗಳ ಹಾರಾಟ ಬೇರೆ  ಸಾಧ್ಯ ವಾದಷ್ಟೂ  ಜಾಗರೂಕರಾಗಿ  ಸಾಗಿ ಒಂದು ಹಜಾರ ತಲುಪಿದೆವು ಅಲ್ಲಿ ಬೆಳಕು ಕಾಣಿಸಿತು,   ಚಾವಣಿಯನ್ನು ನೋಡಿದೆ ಅಲ್ಲಿ ಕಂಡಿತು ಒಂದು ಸುಂದರ  ಕಲೆಯ  ದೃಶ್ಯ.   ಆದರೆ ಮತ್ತಿನ್ನೇನು ವಿಶೇಷ ಕಾಣಲಿಲ್ಲ


ಅಂದಿನ ಕಾಲದ ಬಾಗಿಲು ಹೀಗಿತ್ತು.




ಕಣ್ಣುಗಳು ಹುಡುಕಾಟಾ ನಡೆಸಿದ್ದರೂ ಅಲ್ಲಿ   ಶಾಸನಗಳು  ಒಂದೂ ಕಾಣಲಿಲ್ಲ. ಕಾಣಿಸಿದ  ಒಂದು ಸಣ್ಣ ಕಮಾನು ಬಾಗಿಲ ಮೂಲಕ  ಹೊರಗೆ ಬಂದೆವು,  ಒಳಗಡೆ ಕೆಟ್ಟ ಗಾಳಿ ಯಿಂದ ಉಸಿರು ಒಮ್ಮೊಮ್ಮೆ ಕಟ್ಟಿದಂತೆ ಅನ್ನಿಸುತ್ತಿತ್ತು, ಆದರೆ ಹೊರಗೆ ಬಂದು  ಒಂದು ದೊಡ್ಡ ಉಸಿರನ್ನು ಎಳೆದುಕೊಂಡೆ  ಮನಸು ಹಗುರವಾಯಿತು.  ಹೊರಗೆ ಬಂದು  ಹಿಂತಿರುಗುವ  ಬಗ್ಗೆ ಮನಸಾಯಿತು,

ಗೋಪುರದಲ್ಲಿ  ಕಂಡ ಶಿವಲಿಂಗ  ಹಾಗು ನಂದಿ.

 ಅಂತೂ ಇಂತೂ ಹೊರಡಲು ಸಿದ್ದವಾದೆವು  , ಆದರೂ ಯಾವುದೇ ಶಾಸನ ಸಿಗದೇ  ಇದು ಏನೂ ಎಂದು ಅರ್ಥ ವಾಗದೆ  ಪೆಚ್ಚಾಗಿ ನಿಂತೇ,  ಯಾಕೋ ನನ್ನ ದೃಷ್ಟಿ  ಮತ್ತೊಮ್ಮೆ ಗೋಪುರವನ್ನು ನೋಡಿತು,  ಆ ಗೋಪುರದಲ್ಲಿ  ಶಿವಲಿಂಗದ ಅಕ್ಕ ಪಕ್ಕ  ನಂದಿ ವಿಗ್ರಹಗಳ ಚಿತ್ರಣ ಕಂಡಿತು.  ಅರೆ ಹೌದಲ್ವಾ  ಸಹಸ್ರ ಲಿಂಗದಲ್ಲೀ ಕಂಡಂತ  ಶಿವಲಿಂಗ  ಹಾಗೂ ನಂದಿ ಇಲ್ಲಿಯೂ ಇವೆ,  ಹಾಗಿದ್ರೆ  ಇವು "ಸೋಂದೆ ಅರಸರ ಕಾಲದ  ಸ್ಮಾರಕ"  ಅಂತೂ ನಿಜ  ಆದರೆ ಇದು ಗದ್ದಿಗೆಯೋ, ಅರಮನೆಯೂ, ಅಥವಾ ದೇವಾಲಯವೋ,  ಎಂಬ ಬಗ್ಗೆ ಗುಟ್ಟು ಮಾತ್ರಾ ತಿಳಿಯಲಿಲ್ಲ. ಹಿಂತಿರುಗುತ್ತಿದ್ದ ನನ್ನನ್ನು  ಇತಿಹಾಸದ ಈ ಸ್ಮಾರಕ  ಎಂತಹ  ಮಹಾನ್ ಜನರಿಗೆ ನಾವು ಅರ್ಥಾ ಆಗಿಲ್ಲ  ಇನ್ನು   ಮೂರ್ಖ ನೀನೂ ಅರಿಯಲು ಸಾಧ್ಯವೇ ??  ಎಂಬ ಪ್ರಶ್ನೆ ಕೇಳಿದಂತೆ ಅನ್ನಿಸಿತು. ಸಮಾಜದ  ಅಸಡ್ಡೆಯಿಂದ  ನಿರಾಸಕ್ತಿಯಿಂದ ಅಳಿಯುತ್ತಿರುವ  ಸೋಂದೆ ಅರಸರ  ವೈಭವದ ಸ್ಮಾರಕಗಳು  ಅವನತಿಯತ್ತ  ಸಾಗುತ್ತಾ  ಕನ್ನಡ ನಾಡಿನ ಒಂದು ಭಾಗದ ಇತಿಹಾಸವನ್ನು  ಅಳಿಸಿಹಾಕುತ್ತಿರುವುದು ಸುಳ್ಳಲ್ಲ. ಆದರೆ ಉಳಿಸುವ  ಮನಸು ನಮ್ಮಲಿಲ್ಲ, ಮುಂದೊಮ್ಮೆ ಸೋಂದೆ ಅರಸರ  ಬಗೆಗಿನ ಇತಿಹಾಸ ಸುಳ್ಳು ಅಂತಾ  ನಮ್ಮ ಮಕ್ಕಳು ಹೇಳುವ ಕಾಲ ದೂರವಿಲ್ಲಾ ಅನ್ನಿಸುತ್ತದೆ.   ಮನ ಕರಗಿ  ಭಾರವಾದ ಹೆಜ್ಜೆ ಇಡುತ್ತಾ  ಮತ್ತೆ ರಸ್ತೆಗೆ ಬಂದು ಬೈಕ್ ಹತ್ತಿರ ಬಂದೆ .



ಇದು ಮುತ್ತಿನ ಕೆರೆಯೇ 




ಹರ್ಷ ಮೊದಲು ಹೋಗೋಣ ನಡೆ ಮಾರಾಯ ಅಂತಾ ಬೈಕ್  ಏರಿದೆ  ಸುಮಾರು ಎರಡು ಮೂರು ಕಿ.ಮೀ. ಕ್ರಮಿಸಿದ ನಮ್ಮನ್ನು ಸ್ವಾಗತ ಮಾಡಿದ್ದು ಒಂದು ಮುತ್ತಿನ ಕೆರೆ  , ಅದರ ಸನಿಹ ಒಂದು ವೆಂಕಟರಮಣ ದೇವಾಲಯ.............ಅದರ ಹೆಸರು ಸುಧಾಪುರ !!!!!




  

19 comments:

ನಿಮ್ಮ ಪ್ರೀತಿಯ ಹುಡುಗ said...

ತುಂಬಾ ಚೆನ್ನಾಗಿವೆ ನಿಮ್ಮ ಲೇಖನಗಳು ..))

Srikanth Manjunath said...

ಭಯಾನಕ ಭೂತ ಬಂಗಲೆಯಾ ಚಿತ್ರ ತೋರಿಸಿ ಕಳೆದ ಲೇಖನ ನಿಲ್ಲಿಸಿದಾಗ..ಓಹ್ ಒಳ್ಳೆಯ ಪತ್ತೇದಾರಿ ಅಥವಾ ರೋಚಕ ತಿರುವಿದೆ ಅಂದುಕೊಂಡು ಕಣ್ಣು, ಕಿವಿ, ಹಾಗು ಕೀ ಬೋರ್ಡ್ ಕಾಯ್ತಾ ಇತ್ತು...ಆಹಾ..ಎಂತಹ ತಿರುವು ಇತಿಹಾಸಕ್ಕೆ ಬೆಳಕು ಹಿಡಿಯುವ ತಾಕತ್ ಇರುವ ಲೇಖನ..ಸಹಸ್ರಲಿಂಗದ ಬುಡಕ್ಕೆ ಪ್ರಾಯಶಃ ರಾವಣ ಕೈಲಾಸ ಎತ್ತಿದ ಸಾಹಸಕ್ಕೆ ಕೈ ಹಾಕುವಂತ ಲೇಖನ...ಸೂಪರ್ ಸರ್ಜಿ ಬಹಳ ಖುಷಿ ಆಯಿತು....ಮುತ್ತಿನ ಹಾರದ ಕೆರೆಗೆ ಹಾರೋಕೆ ನಾನು ಈಗಲೇ ಈಜುವುದನ್ನ ಅಭ್ಯಾಸ ಮಾಡುತಿದ್ದೇನೆ (ನೆಲದ ಮೇಲೆ :-))
ಮುಂದಿನ ವಾರ ಬಹುಶಃ ಸಿರ್ಸಿಗೆ ಶಿರಬಾಗಿ ನಮಿಸುವ ಸೌಭಾಗ್ಯ ಒದಗುವ ಎಲ್ಲ ಲಕ್ಷಣಗಳು ಇವೆ..
ಅರೆ ದೋಸೆ ಬಂತು, ಚಟ್ನಿ ಬಂತು...ಸಂಬಾರ ಬಂತು...ಅರೆ ಮಾರಾಯ್ರೆ ಬಟಾಟೆ ಪಲ್ಯ ಬರಲಿ..!!!

Guruprasad . Sringeri said...

ಲೇಖನ ಹಾಗೂ ಚಿತ್ರಗಳು ಚೆನ್ನಾಗಿದೆ ಸರ್...

Santosh Hegde Ajjibal said...

ತುಂಬಾ ಚೆನ್ನಾಗಿವೆ

nenapina sanchy inda said...

ನಮಗೂ ಈ ಚಾಳಿ ಇದೆ ಬಾಲು ಅವರೆ...ಹಳೆ ಕಟ್ಟಡ ನೋಡೊದು..ಅದರ ಬಗ್ಗೆ ಸ್ಥಳೀಯರಲ್ಲಿ ವಿಚಾರಿಸಿ ಅದರ ಇತಿಹಾಸ form ಮಾಡೋದು..etc.. ನಮ್ಮ ಭಾರತದೇಶದಲ್ಲಿ ಇಂತಹ ವಿಸ್ಮಯಗಳು ಹಲವಾರು.
enjoyed!!thanks for the link
:-)
ಮಾಲತಿ ಎಸ್

Sriii :-) said...

sooper aagide. sirsi kade omme tour hakbeku anista ide....Thank you so much for the details....Expecting few more :-)

Ranjita said...

chennagide

ಗಿರೀಶ್.ಎಸ್ said...

ಇದೆ ರೀತಿ ತುಂಬ ಸ್ಮಾರಕಗಳು ಸಮಾಜ ಮತ್ತು ಸರ್ಕಾರದ ನಿರ್ಲಕ್ಷ್ಯದಿಂದ ಹಾಳು ಬಿದ್ದಿವೆ.... ಒಳ್ಳೆಯ ಚಿತ್ರಗಳೊಂದಿಗೆ ಮಾಹಿತಿ ಕೊಟ್ಟಿದ್ದಿರಿ... ಮುತ್ತಿನ ಕೆರೆಯ ಮಾಹಿತಿಯ ನಿರೀಕ್ಷೆಯಲ್ಲಿ...

ಸಂಧ್ಯಾ ಶ್ರೀಧರ್ ಭಟ್ said...

Nice sir

Sulatha Shetty said...

Chennagide Balanna:)

Unknown said...

Good capture...........nice touch of history.

Ittigecement said...

ಬಾಲಣ್ಣ...

ಮೊದಲಿಗೆ ನಿಮ್ಮ ಇತಿಹಾಸ ಪ್ರೀತಿಗೆ ಪ್ರೀತಿಯ ವಂದನೆಗಳು...

ಮದುವೆಗೆ ಅಂತ ಹೋದವರು ಎಷ್ಟೆಲ್ಲ ವಿಷಯಗಳನ್ನು ಹೊತ್ತು ತಂದಿದ್ದೀರಿ... ನಿಜಕ್ಕೂ ಜೈ ಎನ್ನಲೇ ಬೇಕು... !

ನಿಜ ನಮ್ಮೂರಲ್ಲಿ ಇಂಥಹ ಹಲವಾರು ಸ್ಮಾರಕಗಳು ಇವೆ..
ನಮಗೂ...
ನಮ್ಮ ಘನ ಸರಕಾರಕ್ಕೂ ಆಸಕ್ತಿ ಇಲ್ಲ...

ನಮ್ಮೂರ ಹತ್ತಿರ "ಕರೂರು " ಅಂತ ಇದೆ...
ಅಲ್ಲಿ ಒಂದು ಕೋಟೆ ಕೂಡ ಇದೆ..
ಅದರ ಬಗೆಗೆ ಹೆಚ್ಚಿನ ವಿವರಗಳು ನಮಗೆ ಗೊತ್ತಿಲ್ಲ...
ಅಲ್ಲಿಯೂ ಕೂಡ ಸ್ಮಾರಕಗಳು ಇವೆ....

ಅಲ್ಲಿನ ಹಳ್ಳಿಗಳಲ್ಲಿ ಮಾಸ್ತಿ ಕಲ್ಲು.. ವೀರಗಲ್ಲುಗಳು ತುಂಬಾ ಇವೆ..

ನಮ್ಮೂರಲ್ಲಿ ಒಂದು ಮಾಸ್ತಿಕಲ್ಲನ್ನು ಒಂದು ಸಣ್ಣ ಹಳ್ಳಕ್ಕೆ ಅಡ್ಡವಾಗಿ ಸಂಕದ ಥರಹ ಬಳಸಿದ್ದು ನನಗಿನ್ನೂ ನೆನಪಿದೆ...

ನಮ್ಮೂರ ಪ್ರೀತಿಗಾಗಿ ನಿಮಗೆ ನಮ್ಮೆಲ್ಲರ ಪ್ರೀತಿಯ ವಂದನೆಗಳು...

ಮುಂದಿನ ಸಂಚಿಕೆಗಾಗಿ ಕಾಯುತ್ತಿರುವೆವು... ಜೈ ಹೋ ಬಾಲಣ್ಣ....!

Badarinath Palavalli said...

ನಮ್ಮ ಜಾಯಮಾನವೇ ಅಂತದು, ನಾವು ಇತಿಹಾಸವನ್ನು ಗೌರವಿಸುವುದೇ ಇಲ್ಲ. ನಮ್ಮದೇನಿದ್ದರೂ ’ಬಳಸು - ಬಿಸಾಕು’ ಪ್ರವೃತ್ತಿ. ಅಲ್ಲಿನ ಶಾಸನಗಳು ಕಂಡಿತ ಯಾರದೋ ಮನೆಯ ತಳಪಾಯವಾಗಿ ಬಹು ಕಾಲವೇ ಸಂದಿರಬಹುದು.

ಹಳೆಯ ಕಟ್ಟಡಗಳೆಂದರೆ, ಅನೈತಿಕ ಚಟುವಟಿಕೆಯ ತಾಣಗಳು. ಚಾಮರಾಜನಗರದ ಒಡೆಯರು ಹುಟ್ಟಿದ ಮನೆಯೂ ಇದಕ್ಕೆ ಸಾಕ್ಷಿ.

ಶ್ರೀರಂಗಪಟ್ಟಣವನ್ನು ನೀವು ಸಂಶೋಧಿಸಿ ಕೊಡಲಿಲ್ಲವೆಂದರೆ ನಮಗೆ ಅದೂ ಒಂದು ಊರೇ.

ಸರ್ಕಾರಗಳು, ಜಿಲ್ಲಾಡಳಿತ ಇಂತಹ ಅವಗಣನೆಗೆ ಗುರಿಯಾದ ಸ್ಮಾರಕಗಳನ್ನು ಕಾಯ್ದುಕೊಳ್ಳ ಬೇಕು.

ಮುಮ್ದುವರೆಯಲಿ ಸಾರ್.

ಚಿನ್ಮಯ ಭಟ್ said...

ನಾನು ನೋಡಿದ್ದು ಬರಿಯ ಕರಡ ಬೆಳೆದ ಸೋಂದೆ,
ಅದೂ ಕೂಡ ಚಿಕ್ಕವನಾಗಿದ್ದಾಗ,ಅಂದರೆ ಬಹಳ ಹಿಂದೆ...
ಬಾಲು ಸರ್ ಲೇಖನದಿಂದ ಮತ್ತೊಮ್ಮೆ ಅಲ್ಲಿಗೆ ಹೋಗೆ ಬಂದೆ..
ಕಂಡಿತು ಅಂದು ಕಾಣದ ಹೊಸ ಸೋಂದೆ, ನನ್ನ ಕಣ್ಣ ಮುಂದೆ....

ನಮಸ್ತೆ....

ಮನಸು said...

ಹೀಗೆ ನಮ್ಮ ರಾಜ್ಯದ ಹಲವು ರಾಜ ಮನೆತನದ ಇತಿಹಾಸಗಳು ಮಣ್ಣಾಗಿ ಹೋಗಿವೆ. ನಮಗೂ ಕುತುಹಲ ಎನಿಸಿತು ಇಷ್ಟು ಚೆನ್ನಾಗಿರೋ ಸ್ಥಳ ಪಾಳು ಬಿದ್ದಿದೆಯಲ್ಲಾ ಎಂದೆನಿಸಿತು. ಮುಂದಿನ ಮಾಹಿತಿಗಾಗಿ ಕಾಯುತ್ತೇವೆ. ಧನ್ಯವಾದಗಳು

bilimugilu said...

ಸರ್,
ಇತಿಹಾಸದ ಬಗ್ಗೆ ಆಸಕ್ತಿ ಇರೋವ್ರಿಗೆ ಮಾತ್ರ ಇಂತಹ ಸ್ಥಳಗಳ ಪರಿಚಯವಾಗುತ್ತಾ.... ಅಥವಾ ಕಣ್ಣಿಗೆ ಬೀಳುತ್ತಾ?
ನಿಮ್ಮ ಲೇಖನ ಒದುಒದುತ್ತ ಕುತೂಹಲವನ್ನು ಉಂಟು ಮಾಡಿತು ಚಿತ್ರಗಳು.....
ತುಂಬಾ ಇಷ್ಟವಾಯ್ತು ಬಾಲು ಸರ್
roopa

ದಿನಕರ ಮೊಗೇರ said...

nimma jote naanu hoda haagittu sir..
super narration....

nimma kaaLajige salaam....

Sandeep K B said...

Nice Sir...

ಸೀತಾರಾಮ. ಕೆ. / SITARAM.K said...

nice Balanna