Tuesday, January 24, 2012

ಕಾಡಿನಲ್ಲಿ ಜಗದ ಕಣ್ಣಿಗೆ ಕಾಣದೆ ಅಡಗಿದೆ ವಿಸ್ಮಯಗಳ ಬುರುಡೆ ಕ್ಯಾಂಪು !!!! ನೆನಪಿನ ಪುಟ --03

ಬುರುಡೆ ಕ್ಯಾಂಪು


ಕಳೆದ ಸಂಚಿಕೆಯಲ್ಲಿ ಗುಂಡಾಲ್ ಅಣೆಕಟ್ಟಿನಿಂದ ಬುರುಡೆ ಹಾದಿಯ ಅನುಭವಗಳನ್ನು ಓದಿ ಮೆಚ್ಚಿದ್ದೀರಿ , ಬನ್ನಿ  ಮುಂದೆ  ಸಾಗೋಣ ............... ಗುಂಡಾಲ್ ನಿಂದ  ಬಂದ ನಮಗೆ ಈ ಬುರುಡೆ ಕ್ಯಾಂಪ್ ನಲ್ಲಿ ಇಂದಿನ ವಾಸ್ತವ್ಯ ಆಗಿತ್ತು.ನಮ್ಮ ಲಗೇಜುಗಳನ್ನು ಕಾರಿನಿಂದ ಇಳಿಸಿ , ತಂದಿದ ರೇಶನ್ , ಹಾಗು ರೆಡಿ ಟು ಈಟ್ ನ ಕೆಲವು ಸಾಮಗ್ರಿಗಳನ್ನು ಅಲ್ಲಿನ ಸಿಬ್ಬಂದಿಗಳ ಕೈಗೆ ಹಸ್ತಾಂತರಿಸಿದೆವು. ಅಲ್ಲಿನ ಸಿಬ್ಬಂದಿಗೆ ನಾವು ಬರುವ ಮಾಹಿತಿ ಮೊದಲೇ ತಿಳಿದಿದ್ದ ಕಾರಣ. ನಮಗೆ ಆ ತಾಣದಲ್ಲಿ  ರೂಂ ಗಳನ್ನು ಒದಗಿಸಿದರು.  ಆಯಾಸವಾಗಿ ಸ್ವಲ್ಪ ವಿಶ್ರಾಂತಿ ಪಡೆಯುತ್ತಿದ್ದ ನಮಗೆ ತಿನ್ನಲು ಬಿಸ್ಕತ್ತು , ಮಿಕ್ಸ್ಚರ್ ಹಾಗು ಟೀ ತಂದ ಒಬ್ಬ ಸಿಬ್ಬಂದಿ ಸಾ ತಗಳಿ, ಅಂತಾ ತಂದಿಟ್ಟರು. ತಂದಿಟ್ಟ ಕಪ್ಪುಗಳ ಮೇಲೆ ಅರಣ್ಯ ಇಲಾಖೆಯ ಮುದ್ರೆ ಹಾಗು ಹುಲಿಯ ಚಿತ್ರ ನೋಡಿ  ಸಂತಸವಾಯಿತು.

ಕಪ್ಪಿನ ಮೇಲೂ ವನ್ಯ ಜೀವಿ ಚಿತ್ರ 

ಬಹಳ ಖುಷಿಯಿಂದ ಇದನ್ನು ತಿಂದು ಮುಗಿಸಿದ ನಾವು ಅಲ್ಲಿನ  ಸುತ್ತ ಮುತ್ತ ಪರಿಸರ ಪರಿಚಯ ಮಾಡಿಕೊಳ್ಳಲು ಕ್ಯಾಮರ ಹೊತ್ತು ನಡೆದೆವು. ಬನ್ನಿ ಇಲ್ಲಿನ ಪರಿಸರ ಪರಿಚಯ ಮಾಡಿಕೊಳ್ಳೋಣ.

Tuesday, January 17, 2012

..ಗುಂಡಾಲು ಅಣೆಕಟ್ಟಿನಿಂದ ಬುರುಡೆ ಕ್ಯಾಂಪಿನ ಕಾನನದ ಹಾದಿಯಲ್ಲಿ !!!ಕಾಡಿನ ಅಡಚಣೆಗಳ ದಾಟಿ ....ನೆನಪಿನ ಪುಟ ..02 ...

ನಮ್ಮ ಕಾಡಿಗೂ  ಬಂದಿರಾ !!!!


ನಮಸ್ಕಾರ ಮೊದಲ ಸಂಚಿಕೆಯನ್ನು ಆಪ್ತವಾಗಿ ಸ್ವೀಕರಿಸಿದ ನಿಮಗೆ ಧನ್ಯವಾದಗಳು. ಬನ್ನಿ ಎರಡನೇ ಸಂಚಿಕೆಯಲ್ಲಿ ನಿಮಗೆ ಕಾಡಿನ ಹಾದಿಯಲ್ಲಿ ಎದುರಾಗುವ ಅಡಚಣೆಗಳ ಪರಿಚಯ ಮಾಡಿಸುತ್ತೇನೆ. ಹೌದು ನಾವೀಗ ಹೋಗುವ ಜಾಗವೇ ಹಾಗಿದೆ ................???????

ಮೊದಲ ಸಾರಿ ಇಲ್ಲಿಗೆ ಬರುವ ಮೊದಲು  "ಕಾಕನ ಕೋಟೆಯ" ಕಾಡನ್ನು ನೋಡಿದ್ದ ನಮಗೆ ಈ ಕಾಡು ಸಹ ಅದೇ ರೀತಿ ಇರಬಹುದೆಂಬ ಅನಿಸಿಕೆ ಇತ್ತು ...!!! ಬಂದಮೇಲೆ ಇಲ್ಲಿನ ಪರಿಸರ ಒಡ್ಡುವ ಸವಾಲು ನಮಗೆ ಪ್ರಕೃತಿಯ ಹೊಸ ವಿಚಾರಗಳನ್ನು ಕಲಿಸಿಕೊಟ್ಟಿತು.ನಮ್ಮ ತಂಡ ಇಲ್ಲಿಗೆ ಸುಮಾರು ಎರಡು ಸಾರಿ ಹೋದಾಗಲೂ  ಹೊಸ ಹೊಸ ಅನುಭವ ಹೊತ್ತು ಬಂದಿದೆ.

   ಕೊಳ್ಳೆಗಾಲದಿಂದ  ಗುಂದಾಲ್ ಆಣೆಕಟ್ಟು ಹಾದಿಯಲ್ಲಿ  ಅಣೆಕಟ್ಟೆ ಪ್ರದೇಶದ ಸಮೀಪ ಎಡಕ್ಕೆ ಒಂದು ಹಾದಿ ನಿಮ್ಮನ್ನು ಅಲ್ಲೇ ಇರುವ ಚೆಕ್ ಪೋಸ್ಟ್ ಬಳಿ ಕರೆದುಕೊಂಡು ಹೋಗುತ್ತದೆ.  ಚೆಕ್ ಪೋಸ್ಟ್ ಬಳಿ ಸ್ವಲ್ಪ ನಿಲ್ಲೋಣ ಬನ್ನಿ ,    

ಗುಂಡಾಲ್ ಅಣೆಕಟ್ಟಿನ  ವಿಹಂಗಮ ಸುಂದರ ನೋಟ

        ನಿಮಗೆ ಅಲ್ಲಿ ಸುಂದರ ಪರಿಸರದ ಅನಾವರಣ ಆಗುತ್ತದೆ.

 ಸುಂದರ ನಿರ್ಮಲವಾದ ವಾತಾವರಣ ನೀಡುವ ಸ್ವಾಗತ ಇದು 


ಗುಂದಾಲ್ ದ್ಯಾಮಿನಿಂದ ಬುರುಡೆ ಕ್ಯಾಂಪಿಗೆ ಸುಮಾರು ೨೩ ಕಿ.ಮೀ  ದೂರದ ದಟ್ಟ ಕಾನನದ ಹಾದಿ !! ಒಂದು ಬದಿ ಆಳವಾದ ಕಣಿವೆ ಇನ್ನೊದು ಬದಿ ಕಾಡಿನ ಬೆಟ್ಟದ ಗೋಡೆ ಮಧ್ಯೆ ಸಾಗಿದ ನಮ್ಮ ಕಾರು ಸುಮಾರು ೧೦ ಕಿ.ಮೀ/ಘಂಟೆಗೆ  ವೇಗದಿಂದ ತೆವಳುತ್ತಿತ್ತು !! ಮೊದಲ ಸ್ವಾಗತ ನೀಡಿದ ಸಾರಂಗಗಗಳ  ಜೋಡಿ ಮೊಡಿಮಾಡಿತ್ತು!!!  

ಸ್ವಾರ್ಥ ವಿಲ್ಲದ ನಮ್ಮ ಕಾಡಿಗೆ ಸ್ವಾಗತ ನಿಮಗೆ

     

                                                   

 

 



.

 

 

 

 

ದಾರಿಯಲ್ಲಿ  ಕಡಿದಾದ   ಬಂಡೆಗಳು  ನೀರಿನ  ಜಾರಿಯಲ್ಲಿ  ಅಡಗಿ ವಾಹನಗಳು ತೊಂದರೆಗೆ ಈಡಾಗುವ ಸಂಭವ ವಿದ್ದುಆತಂಕದಲ್ಲೇ ಸಾಗಿ ಗುರಿ ಮುಟ್ಟಿದೆವು. ಕಾನನದ ಹಾದಿಯ ಪಯಣ ನಮ್ಮನ್ನು ಮುಧಗೊಳಿಸಿ  ಮೋಡಿ ಮಾಡಿತ್ತು !!! 



ಹಾದಿಯಲ್ಲಿ  ಸಿಕ್ಕ  ಸಾರಂಗ 




ಹಾಗೆ ತೆವಳಿದ ನಾವು ಕಾಡಿನೊಳಗೆ ಲೀನವಾಗಿ ಸಾಗಿದೆವುಮುಂದೆ  ನಮಗೆ ಲಾಂಗೂರ್ ಕೋತಿಗಳ ಹಿಂಡು ಹಾದಿಯ ಪಕ್ಕದಲ್ಲಿದ್ದ ಮರಗಳಲಿ ಗೋಚರಿಸಿದವು.ನಾವೂ ಸಹ ನಿಧಾನವಾಗಿ ಕಾರಿನಿಂದ ಇಳಿದು ನೋಡಿದರೆ ನಮ್ಮನ್ನು ಕಂಡು ಕೋತಿಗಳು ಪರಾರಿಯಾಗಲು ಆರಂಭಿಸಿದವು. ಕ್ಷಣಾರ್ಧದಲ್ಲಿ ಇಡೀ ತಂಡ ಮಾಯವಾಗಿತ್ತು    ಫೋಟೋ ತೆಗೆಯಲು ಆಗಲಿಲ್ಲವಲ್ಲಾ ಅಂತಾ ಯೋಚಿಸುತ್ತಾ ನಿಂತಿದ್ದ ನಮಗೆ ಅದ್ಭುತ ಚಿತ್ರ ಒಂದು ಸಿಕ್ಕಿತು.

ಲಾಂಗೂರ್ ಕೋತಿ ಹಾರಿದೆ ನೋಡಿ !!!

  ಲಾಂಗೂರ್ ಕೋತಿಯೊಂದು ಮರದಿಂದ ಇನ್ನೊಂದು ಮರಕ್ಕೆ ಹಾರುವ ಸಾಹಸ ಕಂಡು ವಿಸ್ಮಯ ವಾಯಿತು ಕಾಡಿನ ಹಾದಿಯೇ ಹಾಗೆ  ಯಾವ ಕ್ಷಣದಲ್ಲಿ ಯಾವ ಪವಾಡ ಬೇಕಾದರೂ ಆಗಬಹುದು , ಕ್ಷಣಾರ್ಧದಲ್ಲಿ ನಿಮಗೆ ಅರಿವಿಲ್ಲದೆ   ಅಪಾಯ ಎದುರಾಗಬಹುದು , ಅಥವಾ ನೀವೂ ಊಹಿಸದೇ ಇರುವ ಪ್ರಾಣಿಯ ದರ್ಶನವಾಗಬಹುದು ,  ಕಾಡಿನ ಹಾದಿಯಲ್ಲಿ  ಇಂತಹ ಹಲವಾರು  ಘಟನೆಗಳು  ನಮಗೆ ಆಗಿದೆ  .ಆದರೆ  ಇಂತಹ ಘಟನೆಗಳಿಂದ   ನಮ್ಮ ತಾಳ್ಮೆ  ಹೆಚ್ಹಾಗಿ  ಪರಿಸರದ ಜೊತೆ  ಹೇಗೆ  ಹೊಂದಿಕೊಳ್ಳಬೇಕೂ  ಎಂಬ  ರೀತಿಯನ್ನು  ನಾವು  ಕಲಿತೆವು .

ಕಾಡಿನ ಹಾದಿಯಲ್ಲಿ ತೆವಳುತ್ತಾ ಕಾಡಿನ ಪರಿಸರ ಅನುಭವಿಸುತ್ತಾ ತೆರಳಿದ್ದ , ಸವಾಲಿನ ರಸ್ತೆಯಲ್ಲಿ ನಗು ನಗುತ್ತಾ ಕಾರ್ ಡ್ರೈವ್ ಮಾಡುತ್ತಿದ್ದರೂ ವೇಣುಗೋಪಾಲ್ , ನಮ್ಮ ತಂಡದ ಕಾರು ಚಾಲನೆಯ ಅತ್ಯಂತ ಅನುಭವಿ ಇವರು , ಕಾಡಿನ ದುರ್ಗಮ ಹಾದಿಯಲಿ ತಾಳ್ಮೆಯಿಂದ ಯಾವುದೇ ಕಾರಣಕ್ಕೂ ಪರಿಸರಕ್ಕೆತೊಂದರೆ  ಮಾಡದೆ ಕಾರ್ ಚಾಲನೆ ಮಾಡುವ ಕಾರ್ಯದಲ್ಲಿದ್ದರು. [ನಾವಿದ್ದ ಚಿಕ್ಕ ಕಾಡಿನ  ಹಾದಿಯಲ್ಲಿ ಒಂದು ಕಡೆ ಬೆಟ್ಟ ಹಾಗು ಕಾಡು ಮತ್ತೊಂದು ಬದಿಯಲ್ಲಿ ಆಳವಾದ ಪ್ರಪಾತ ಇದ್ದು ವಾಹನ ಚಾಲನೆಯಲ್ಲಿ ಸ್ವಲ್ಪ ತಪ್ಪಿದರೂ ಕಾರು ಇಲ್ಲಾ ಬೆಟ್ಟಕ್ಕೆ ಡಿಕ್ಕಿ ಯಾಗುವುದು  ಅಥವಾ ಪ್ರಪಾತಕ್ಕೆ ಜಾರುವುದು ಆಗುತ್ತಿತ್ತು. ] ಸ್ವಲ್ಪ ಹಾದಿ ಕ್ರಮಿಸಿದ ನಮಗೆ ಎದುರಾಗಿದ್ದು  ಒಂದು ಬಂಡೆಯ ಇಳಿಜಾರು ಹಾದಿ ಅದರಮೇಲೆ ಹರಿಯುತ್ತಿರುವ ಜರಿ !!!   

ಕಾಡಿನ ಮದ್ಯೆ ಎದುರಿಸಿದ ಸವಾಲು

          

ಸ್ವಲ್ಪ ತಪ್ಪಿದರೂ ಪ್ರಪಾತ ಸೇರಿಸುವ ಹಾದಿಯಲ್ಲಿ ವೇಣು  ಮೆರೆದ ಸಾಹಸ.


ನಮ್ಮ ಕಾರು ಇಳಿಜಾರಿನ ಬಂಡೆಯ ಮೇಲೆಹರಿವ  ಜರಿಯೊಳಗೆ ಹಾದು ಹೇರ್ ಪಿನ್ ನಂತಹ ಏರುಮುಖದ ಹಾದಿಯ ದಿನ್ನೆಯನ್ನು ಹತ್ತ ಬೇಕಾಗಿತ್ತು. ಜೊತೆಗೆ ಬಂಡೆಯ ಮೇಲೆ ಹರಿವ ನೀರಿನ ಒಳಗೆ ಕಲ್ಲಿದ್ದು ಅದು ಕಾರಿನ ಎಂಜಿನ್ಗೆ ಹಾನಿಮಾಡುವ ಭಯ ಒಂದು ಕಡೆ , ಆದರೂ ನಮ್ಮಲ್ಲಿ ಕೆಲವರು ಕಾರಿನಿಂದ ಇಳಿದು ಸುತ್ತಲ ಪರಿಸರ ಅವಲೋಕನ ಮಾಡಿ ಯಾವುದೇ  ಅಪಾಯ ವಿಲ್ಲವೆಂದು ಕಾತರಿ ಪಡಿಸಿಕೊಂಡು ಕಾರನ್ನು ಆ ಹಾದಿಯಲ್ಲಿ ಮೇಲೆತರಲು  ವೇಣುಗೋಪಾಲ್ ಗೆ  ಅನುವುಮಾಡಿದೆವು. ಅವರೂ ಸಹ ಚಾಕಚಕ್ಯತೆ ಯಿಂದ  ಕಾರನ್ನು ಬಂಡೆ ದಾಟಿಸುವಲ್ಲಿ  ಯಶಸ್ವಿಯಾದರು .ಇಪ್ಪತ್ತ  ಮೂರು ಕಿ.ಮಿ ದಾರಿಯನ್ನು ಕ್ರಮಿಸಲು ಸುಮಾರು ನಾಲ್ಕು ಘಂಟೆ  ಕಾಲ ತೆಗೆದು ಕೊಂದು ಸಾಹಸದಿಂದ  ಬುರುಡೆ ಕ್ಯಾಂಪಿಗೆ ಬಂದೆವು...............................................ಇಲ್ಲಿ ವೀರಪ್ಪನ್ ಇದ್ದನಂತೆ .!!!!!!

ಬುರುಡೆ  ಕ್ಯಾಂಪ್ 

ಸುಸ್ತಾಯ್ತು  ಇವತ್ತು ಇಲ್ಲೇ ರಾತ್ರಿ  ಕಳಿಬೇಕೂ ಮತ್ತೆ ಸಿಕ್ತೀನಿ ಮುಂದಿನ ಸಂಚಿಕೆಯಲ್ಲಿ .............ನೀವೂ ಸಹ ಸ್ವಲ್ಪ ವಿಶ್ರಮಿಸಿ.


Monday, January 9, 2012

ಬಿಳಿಗಿರಿಯ ಬನದಲ್ಲಿ ,ದೊಡ್ಡ ಸಂಪಿಗೆ ಮರದ ಸನಿಹದಲ್ಲಿ !!! ನೆನಪಿನ ಪುಟಗಳಿಂದ ...1 ನೇ ಸಂಚಿಕೆ.



ದೊಡ್ಡ ಸಂಪಿಗೆ ಮರ 
 ನಮಸ್ಕಾರ  ೨೦೧೨ ರ ಶುಭಾಶಯಗಳು ತಮಗೆ, ಈ ವರ್ಷದಲ್ಲಿ ನನ್ನ ಬ್ಲಾಗ್ ಪುಟವನ್ನು ವಿಶೇಷವಾಗಿ ಪ್ರಾರಂಭಿಸಬೇಕೆಂಬ ಕಾರಣ  ಬಿಳಿಗಿರಿ ಬನದಲ್ಲಿ ಸರಣಿಯ ಲೇಖನವನ್ನು ಪುನಃ  ನಿಮ್ಮೊಡನೆ ಪ್ರೀತಿಯಿಂದ ಹಂಚಿಕೊಳ್ಳುತ್ತಿದ್ದೇನೆ. ಕಳೆದ ಬಾರಿ ಪ್ರಕಟಗೊಂಡಾಗ ಹೆಚ್ಚಿನ ಜನ ಈ ಲೇಖನ ಓದಲು ಸಾಧ್ಯವಾಗದ ಕಾರಣ  ನನ್ನ ಪ್ರೀತಿಯ ಕಾಡಿನ ಅನುಭವಗಳ ಸರಣಿ ಮತ್ತೊಮ್ಮೆ  ಪರಿಷ್ಕರಿಸಿದ ಲೇಖನವನ್ನು  ಎಲ್ಲರೊಡನೆ ಹಂಚಿಕೊಳ್ಳಲು ಸಂತಸವಾಗುತ್ತಿದೆ. ವೀರಪ್ಪನ್ ಓಡಾಡಿದ ದಟ್ಟ ಕಾನನದಲ್ಲಿ ಓಡಾಡಿದ ಅನುಭವಗಳ  ಹಲವರು ನೋಡದ ಸುಂದರ ಕಾಡಿನ ತಾಣಗಳ ಚಿತ್ರಗಳೊಡನೆ ಈ ಸರಣಿ ನಿಮ್ಮ ಮಡಿಲಿಗೆ ಹಾಕಿದ್ದೇನೆ . ಎಂಟು ಸಂಚಿಕೆಯ ಮೊದಲ ಕಂತು ಈ ಸಂಚಿಕೆಯಿಂದ ಪ್ರಾರಂಭವಾಗುತ್ತಿದೆ. ಬನ್ನಿ ಸುಂದರ ಬಿಳಿಗಿರಿ ಬನದೊಳಗೆ ಹೋಗೋಣ.