Monday, December 27, 2010

ಕೈಮರದ ಹಾದಿ !! ಕಾನನದ ಮಡಿಲಲ್ಲಿ ಹೀಗೂ ಉಂಟೆ !!!

ಓಡುತಿರುವ  ಜಿಂಕೆಗಳು


ಕಳೆದ ಸಂಚಿಕೆಯಲ್ಲಿ  ಡಿ.ಬಿ.ಕುಪ್ಪೆ ಬಗ್ಗೆ [ಎರಡೂ ರಾಜ್ಯಗಳ ನಡುವೆ ತೇಲಾಡಿದ ] ಬರೆದವನೇ , ಮತ್ತೆ ಕಾಡಿಗೆ ಎಸ್ಕೇಪ್ ಆಗಿದ್ದೆ.ಹೊಸ ಹುರುಪು ಉತ್ಸಾಹ ತುಂಬಿಕೊಂಡು ನಿಮ್ಮ ಮುಂದೆ ಹಾಜರಾಗಿದ್ದೇನೆ.ಬನ್ನಿ ಕೈಮರ ಎಂಬ ಕಾನನದ ಪ್ರದೇಶಕ್ಕೆ ಹೋಗೋಣ.


ಕೈಮರ  ಬಂಗಲೆ


ಈ ಪ್ರದೇಶ ಯಾಕೋ ಕಾಣೆ ಪ್ರತೀಬಾರಿಯೂ ನಮಗೆ  ವಿಚಿತ್ರ ಅನುಭವ ನೀಡಿದೆ.ಸುಮಾರು ಮೂರು ಬಾರಿ ಹೋದಾಗಲೂ ನಮ್ಮ ಕಾರು ಕೆಟ್ಟಿರುವುದು ವಿಶೇಷ ಹಾಗು ವಿಚಿತ್ರ




ಕೈಮರ ಬಂಗಲೆಯ ಒಂದು ನೋಟ



.ಕೈಮರ ಎಂಬ ಜಾಗ ದಲ್ಲಿ 1932 ರಲ್ಲಿ ನಿರ್ಮಿತವಾದ ಒಂದು ಹಳೆಯ ಬಂಗಲೆ ಇದ್ದು ಇದರಲ್ಲಿ ಹಿಂದೆ ಮಹಾರಾಜರು /ಆಂಗ್ಲ ಅಧಿಕಾರಿಗಳು  ಬೇಟೆಯಾಡಲು ಬಂದಾಗ  ಉಳಿಯುತ್ತಿದ್ದರೆಂದು ತಿಳಿದುಬಂತು.ದಟ್ಟ ಕಾನನದಲ್ಲಿ ಅಡಗಿ ಕುಳಿತಿರುವ ಇದು ಇಂದು ಒಂದು " anti poaching camp '' ಆಗಿದ್ದು ಕೇರಳ ರಾಜ್ಯದ ಗಡಿ ಇಲ್ಲಿಂದ ಸುಮಾರು ಇಪ್ಪತ್ತು ಅಡಿ ಅಷ್ಟೇ  ಇದಕ್ಕೆ ಪೂರಕವಾಗಿ ಬಹಳ ಹಿಂದೆ ಗಡಿ ಗುರುತಿಸಿ ನೆಟ್ಟ ಕಲ್ಲಿದ್ದು




ಎರಡು ಪ್ರಾಂತಗಳ ಗುರುತಿಸಲು  ಗಡಿ ಕಲ್ಲು


ಅದರಲ್ಲಿ ಕನ್ನಡ ಹಾಗು ಆಂಗ್ಲ ಭಾಷೆಯಲ್ಲಿ ವಿವರಣೆ ನೀಡಲಾಗಿದೆ. ಅದರಲ್ಲಿ ಕನ್ನಡದಲ್ಲಿ  "ಮೈಸೂರು ಹಾಗು ಮಲಬಾರು ಸೀಮೆ ಗಡಿ "ಎಂದಿದ್ದರೆ , ಇಂಗ್ಲೀಶ್ ನಲ್ಲಿ " boundary stone between mysore and malabaar " ಎಂದು ಬರೆಯಲಾಗಿದೆ. ಆದ್ರೆ ಅಚ್ಚರಿ ಎಂದರೆ ಇಲ್ಲಿ ಮಲೆಯಾಳಂ  ಭಾಷೆ ನಾಪತ್ತೆ!!!. ನಾವು ಸುಮ್ಮನೆ ಹಾಗೆ ನಡೆಯುತ್ತಾ  ಕೈಮರದಿಂದ ಈ ಗಡಿ ಗುರುತನ್ನು ದಾಟಿ ನಮಗೆ ಅರಿವಿಲ್ಲದೆ ಕೇರಳ ರಾಜ್ಯದ ಕಾಡಿಗೆ ಹೋಗಿದ್ದೆವು.ನಂತರ  ಸ್ವಲ್ಪ ದೂರ ಕ್ರಮಿಸಿ ವಾಪಸ್ಸು ಬಂದೆವು. ಈ ಪ್ರದೇಶದಲ್ಲಿ ಸುತ್ತ ಮುತ್ತ ಹಲವಾರು   "anti poaching camp"  ಅವುಗಳ ಹೆಸರು ವಿಚಿತ್ರವಾಗಿವೆ " ಕುದುರೆ ಸತ್ತ ಹಳ್ಳ ಕ್ಯಾಂಪು " "ಹತ್ತನೇ ಮೈಲಿ ಕ್ಯಾಂಪು" ಇತ್ಯಾದಿ .ಇನ್ನು ಇಲ್ಲಿಗೆ ಹೋಗಲು ಅಸಾಧ್ಯವಾದ ಕಾಡಿನ ದಾರಿ ಇದೆ. ಮೊದಲ ಬಾರಿ ಇಲ್ಲಿಗೆ ಬರುವಾಗ   ನಮ್ಮ ಜೀಪು ಕೆಟ್ಟು , ಹುಲಿಯ ಸನಿಹ  ಜೀಪಿನಲ್ಲಿ ಕುಳಿತು ಅನುಭವಿಸಿದ  ಅನುಭವದ ವಿವರ ಈಗಾಗಾಗಲೇ ನಿಮಗೆ ಹೇಳಿದ್ದೇನೆ. ಇನ್ನು ಎರಡನೇ ಸಾರಿಯದು ಮೊದಲನೆಯದಕ್ಕಿಂತ ಸ್ವಲ್ಪ ವಿಭಿನ್ನ . ನಮ್ಮ ಪ್ರತೀ ಭೇಟಿಯಲ್ಲೂ   ನಾವುಗಳು ಕೈಮರ ಜಾಗಕ್ಕೆ ಬರಲು ಪ್ರಯತ್ನಿಸುತ್ತೇವೆ. ಹಾಗೆ ಇಲ್ಲಿಗೆ  ಒಮ್ಮೆ ಬಂದಾಗ  ಇಲ್ಲಿ ಸಂಜೆಯಾಗಿತ್ತು.  .ಹಾಗೆ ಅಡ್ಡಾಡಿ ವಾಪಸ್ಸು ನಮ್ಮತಂಗುದಾಣ ತಲುಪಲು ಹೊರಟೆವು. ಕಾಡಿನ ಕತ್ತಲಲ್ಲಿ  ನಿಧಾನವಾಗಿ ದಾರಿಯಲ್ಲದ ದಾರಿಯಲ್ಲಿ ನಮ್ಮ ವಾಹನ ಚಲಿಸುತ್ತಿತ್ತು. ಸುಮಾರು ದೂರ ಕಾಡಿನ ಹಾದಿ ಸವೆಸಿದ್ದ ನಮಗೆ "ಬಾಲು, ಯಾಕೋ ಗಾಡಿ ಒಂದೇ ಕಡೆ ಎಳಿತಾ ಇದೆ "  ಅಂತಾ ವೇಣು ಕಾರನ್ನು ನಿಲ್ಲಿಸಿದಾಗಲೇ  ವಾಸ್ತವದ ಅರಿವಾಗಿದ್ದು. ನಮ್ಮ ಜೊತೆ ಇದ್ದ ಫಾರೆಸ್ಟ್ ಗಾರ್ಡ್  ಮೊದಲು ನಂತರ ನಾವು ಕಾರಿನಿಂದ ಇಳಿದು  ನೋಡಿದರೆ ಕಾರಿನ ಎಡಗಡೆ  ಮುಂದಿನ ಚಕ್ರ  ಅಪ್ಪಚ್ಚಿ ಯಾಗಿ ನಿಂತಿದೆ !!!,ಏನ್ಮಾಡೋದು  ಕಗ್ಗತ್ತಲೇ ಕಾಡಿನಲ್ಲಿ ನಿಧಾನವಾಗಿ ಸುತ್ತ ಮುತ್ತ ಪರೀಕ್ಷಿಸಿ ನಮ್ಮಲ್ಲಿದ್ದ  ಟಾರ್ಚ್ ಬೆಳಕನ್ನು ಹತ್ತಿಸಿ , ಕಾರಿನಲ್ಲಿದ್ದ ಸ್ಪೇರ್ ಚಕ್ರ ಬದಲಿಸಲು ಶುರು ಮಾಡಿದೆವು,ಮೂರು ಜನ ಚಕ್ರ ಬದಲಿಸುವ ಕಾರ್ಯ ಕೈಗೊಂಡರೆ ನಾನು ಹಾಗು ಫಾರೆಸ್ಟ್ ಗಾರ್ಡ್ ಇಬ್ಬರೂ  ಕಾವಲು ನಿಂತೆವು.ದಟ್ಟ ಕಾಡಿನಲ್ಲಿ  ನಮ್ಮ ವೀಕ್ಷಣೆ ಸಾಗಿತ್ತು. ನಮ್ಮ ಕಾರು ನಿಂತಿದ್ದ ಕಡೆ   ಕಗ್ಗತ್ತಲ ಕೋಟೆಯಂತೆ ಭಾರಿ ಮರಗಳಿದ್ದು  ಯಾವ ಮರದಲ್ಲಿ ಯಾವ ಪ್ರಾಣಿ ಇದೆಯೋ ಎನ್ನುವ ಯೋಚನೆ ಒಂದೆಡೆ, ಅಪ್ಪಿತಪ್ಪಿ ಮರದ  ಮೇಲಿಂದ  ಹೆಬ್ಬಾವು ಬಿದ್ದರೆ ಗತಿ ಏನು?? ಎನ್ನುವ , {ನಾವು ನಿಂತ ಜಾಗ ಆನೆ ಹುಲ್ಲಿನಿಂದ ಕೂಡಿದ್ದು ಪೊದೆಗಳಿಂದ ಸುತ್ತುವರೆದಿತ್ತು,ಅಪ್ಪಿತಪ್ಪಿ ಯಾವುದೇ ಪ್ರಾಣಿ ಅಲ್ಲಿ ಬಂದರೂ ನಮಗೆ ತಿಳಿಯುತ್ತಿರಲಿಲ್ಲಾ }ದೂರದಲ್ಲಿ ನಮ್ಮ ಟಾರ್ಚ್ ಬೆಳಕಿಗೆ ಹೊಳೆಯುವ  ಜಿಂಕೆಗಳ ಕಣ್ಣುಗಳು ಕಾಡಿಗೆ ಸೀರಿಯಲ್ ಲೈಟ್ ಹಾಕಿದಂತೆ ಅನೀಸಿದರೂ ಎಲ್ಲೋ ಮನದ ಮೂಲೆಯಲ್ಲಿ ಅಳುಕಿದ್ದರೂ ಸಹ ,ಯಾವುದೇ ಪ್ರಸಂಗ ಬಂದರೂ ಎದುರಿಸಲು ಸಿದ್ದವಾಗಿ ನಿಂತಿದ್ದೆ. ಸುಮಾರು ಅರ್ಧ ಘಂಟೆಗೂ ಮೀರಿ ಕಷ್ಟಪಟ್ಟು ಕಾರಿಗೆ ಜಾಕ್ ಹಾಕಿ ಮುಂದಿನ ಚಕ್ರ ಬದಲಿಸಿ  ಖುಷಿಯಿಂದ ಹೊರಟೆವು  ಸುಮಾರು ನೂರು ಅಡಿಗಳು ಮುಂದೆ ಹೋಗಿದ್ದೆವೂ ಅಷ್ಟೇ ಮತ್ತೆ ಕಾರು ಎಡಗಡೆ ಎಳೆಯಲು ಶುರು ಮಾಡಿತ್ತು!!!,ಒಳ್ಳೆ ರಾಮಾಯಣ ಆಯ್ತು ಅಂತಾ ಮತ್ತೆ ನಿಲ್ಲಿಸಿ ನೋಡಿದರೆ  ಎಡಗಡೆ ಹಿಂದಿನ ಚಕ್ರವೂ ಅಪ್ಪಚ್ಚಿಯಾಗಿತ್ತು.ಇದ್ದ ಒಂದು ಸ್ಪೇರ್ ಚಕ್ರ ಆಗಲೇ ಮುಂದೆ ಫಿಟ್ ಆಗಿಹೋಗಿತ್ತು , ಎರಡನೇ ಸ್ಪೇರ್ ಎಲ್ಲಿಂದ ತರೋದು,??ಅಂತಾ ಯೋಚಿಸಿದೆವು, ಈಗ ಏನು ಮಾಡಬೇಕೂ ಅಂತಾ ತಿಳಿಯದೆ ಬೆಪ್ಪಾಗಿ ನಿಂತೆವು. ರಾತ್ರಿವೇಳೆ ಕಾಡಿನಲ್ಲಿ ವಾಹನ ಇಲ್ಲೇ  ಬಿಟ್ಟು  ನಾವು ನಡೆದು ಹೋಗೋದೇ ?[  ಹೀಗೆ ಮಾಡಿದಲ್ಲಿ  ಆನೆಗಳ ಹೊಡೆತಕ್ಕೆ  ಸಿಕ್ಕಿ ಕಾರು ನಜ್ಜು ಗುಜ್ಜಾಗುವ ಸಂಭವ ಇತ್ತು ]ಅಥವಾ ನಾವು ಕಾರಿನ ಜೊತೆ ಇಲ್ಲೇ ಮಲಗುವುದೇ ? [ ಹೀಗಾಗಿದ್ದಲ್ಲಿ ಕೊರೆಯುವ ಚಳಿಯಲ್ಲಿ ನಮ್ಮ ಕಥೆ ಏನ್ ಆಗ್ತಿತ್ತೋ ಗೊತ್ತಿಲ್ಲಾ!! ]ಹೀಗೆ ಚರ್ಚೆಗಳ ಸರಮಾಲೆ, ಆಗಲೇ ರಾತ್ರಿ ಒಂಭತ್ತು ಸಮೀಪಿಸಿ ನಾವು ಏನಾದರೂ ಮಾಡಲೇ ಬೇಕಿತ್ತು.ಸರಿ ಆದದ್ದು ಆಗಲಿ ಅಂತಾ ಪಂಚರ್ ಆದ ಕಾರನ್ನು ನಿಧಾನವಾಗಿ ಚಲಾಯಿಸುತ್ತಾ ಸುಮಾರು ಎಂಟು ಕಿ.ಮಿ. ಕ್ರಮಿಸಿ  " ಬಳ್ಳೆ"   ಗೇಟಿನ ಹತ್ತಿರ ಬಂದು ಕಾರನ್ನು ನಿಲ್ಲಿಸಿದೇವು.



ನಮ್ಮನ್ನು ಎಲ್ಲ ಕಾಡಿಗೂ ಕರೆದುಕೊಂಡು ಹೋದ ಗೆಳೆಯ ಇವನು
 


ಅಲ್ಲೇ  ಇದ್ದ ಅರಣ್ಯ ಸಿಬ್ಬಂದಿ ಅವರ ಜೀಪಿನಲ್ಲಿ ನಮ್ಮನ್ನು ಡಿ.ಬಿ.ಕುಪ್ಪೆ  ಐ.ಬಿ.  ಗೆ ನಮ್ಮನ್ನು ತಲುಪಿಸಿದರು. ಮಾರನೆದಿನ ಒಂದು ಜೀಪನ್ನು ಬಾಡಿಗೆಗೆ ಪಡೆದು  ಬಂದು ನಮ್ಮ ಕಾರಿನ ಬಳಿ ಬಂದು ನೋಡಿದರೆ  ಹಿಂದಿನ ಚಕ್ರ ಅಪ್ಪಚ್ಚಿ ಯಾಗಿತ್ತು!!,ಅದರಲ್ಲಿ ನ ಟ್ಯೂಬು  ಪುಡಿ ,ಪುಡಿಯಾಗಿ ಹೋಗಿತ್ತು . ಸರಿ ಅಂತಾ ಚಕ್ರವನ್ನು ಜೀಪಿನಲ್ಲಿ ಹಾಕಿಕೊಂಡು ಕೇರಳದ  ಮಾನಂದವಾಡಿ ಕಡೆ ಹೊರಟೆವು !!!! ಕಾಡಿನ ಪಯಣದಲ್ಲಿ ಇಂತಹ ಹಲವಾರು ಘಟನೆಗಳು ಎದುರಾಗುವುದು ಸಾಮಾನ್ಯ ಇದನ್ನು ಎದುರಿಸಿ ಮುಂದೆ ಸಾಗಿದರೆ


ವನ ಸಿರಿಗಳು



ಕಾಡನ್ನು ನೋಡಲು ಸಾಧ್ಯ.  .............!!!!!!  ನಮ್ಮ ಕಾರಿಗೆ ಟೈರ್ ಬದಲಾಯಿಸಿ ನಂತರ ಮತ್ತೆ ಸಿಗುತ್ತೇನೆ ಓ.ಕೆ.             

Sunday, December 19, 2010

ಇತ್ತ ಕರ್ನಾಟಕ! ಅತ್ತ ಕೇರಳ!! ಎರಡು ರಾಜ್ಯಗಳನಡುವೆ ತೇಲುತ್ತಾ ನಾವು !!!ಡಿ.ಬಿ. ಕುಪ್ಪೆ ಮಹಿಮೆ !!!

ಬಾಲು ಬನ್ನಿ ಡಿ.ಬಿ. ಕುಪ್ಪೆಗೆ ಹೋಗಬೇಕಂತೆ ಅಂತಾ ವೇಣು ಕರೆದಾಗನೆನಪಿನ ಲೋಕದಿಂದ ಜಾರಿ ವಾಸ್ತವಕ್ಕೆ ಬಂದೆ 

" ಬಳ್ಳೆ"

  ಕ್ಯಾಂಪ್ ಬಿಟ್ಟು ಡಿ.ಬಿ.ಕುಪ್ಪೆ ಯಲ್ಲಿರುವ ಐ.ಬಿ.ಯಲ್ಲಿ  ಸಾಮಾನ್ಯ ವಾಗಿ ನಮಗೆ ವಾಸ್ತವ್ಯಕ್ಕೆ  ನೀಡಲಾಗುತ್ತದೆ.ಹೊರಡಲು ನಮ್ಮಲಗ್ಗೇಜುಗಳನ್ನು ಕಾರಿನಲ್ಲಿ ತುಂಬಿಸಿ ಹೊರಡಲು ಅನುವಾದೆವು. ಅಡಿಗೆ ಮನೆಯಲ್ಲಿ ಆನೆಗಳಿಗೆ ಮುದ್ದೆ ತಯಾರಿಸುವ   ತಯಾರಿ ನಡೆದಿತ್ತು ಇನ್ನೂ ಊಟ ರೆಡಿ ಇಲ್ವಾ ಅನ್ನೋತರಹ  ಒಂದು ಸಾಕಿದ ಆನೆ ಅಡಿಗೆ ಮನೆ ಹತ್ತಿರ ಬಂದು ನಿಂತಿತ್ತು !!    ಅತ್ತ ಅಡಿಗೆ ಮನೆಯಲ್ಲಿ ಆನೆಗೆ ಅಡಿಗೆ ತಯಾರಿ ನಡೆದಿತ್ತು.                                                                                                                                                                                                                                                                                                                                                                                                                   
ಏನಪ್ಪಾ  ಅಡಿಗೆ ಆಗಿಲ್ವಾ

ಅಡಿಗೆ ಮನೆ

                                                                                                                              ಇನ್ನೇನು ನಮ್ಮ  ಕಾರು ಹೊರಡ ಬೇಕು ಎನ್ನುವ ಸಮಯ ಇಬ್ಬರು ವ್ಯಕ್ತಿಗಳು ನಾವಿದ್ದಲ್ಲಿಗೆ ಬಂದು ಮಲಯಾಳಂ ನಲ್ಲಿ   ಪ್ರಶ್ನೆ ಕೇಳಲು ಶುರು ಮಾಡಿದರು!! ನಾವು ಕನ್ನಡ ದಲ್ಲಿ ನಿಮಗೆ ಏನು ಬೇಕು ಎಂದು ಕೇಳಿದಾಗಇಂಗ್ಲೀಶ್ ನಲ್ಲಿ ಮಾತಾಡಿ ತಾವು  "ಮಲೆಯಾಳ ಮನೋರಮಾ" ನ್ಯೂಸ್ ಚಾನಲ್  ರವರೆಂದು ಪರಿಚಯ ಮಾಡಿ ಕೊಂಡರು.ನಂತರ ನಾನು  ಇಲ್ಲಿ ಯಾವ ವಿಚಾರ ದ ವರದಿ ಬಗ್ಗೆ ನೀವು ಬಂದಿದ್ದೀರಿ ಎಂದು ಕೇಳಿದೆ [ ನನ್ನ ಉದ್ದೇಶ ಇವರು ಇಂತಹ ಕಾಡಿನ ಬಗ್ಗೆ ಜನರಿಗೆ ಮಾಹಿತಿ ನೀಡಲು ಬಂದಿರಬಹುದೆಂದು ಅನ್ನಿಸಿತ್ತು ] ಅದಕ್ಕೆ ಅವರು ನೋಡಿ ಈ ಊರಿನ ಮೂಲಕ ಹೋಗುವ ರಸ್ತೆ ಎಷ್ಟು ಕೆಟ್ಟದಾಗಿದೆ  ಇದರಿಂದ ಪ್ರತಿದಿನಾ ಕೇರಳದಿಂದ ಕರ್ನಾಟಕಕ್ಕೇ ಬರುವ ಜನರಿಗೆ ತುಂಬಾ ತೊಂದರೆಯಾಗಿದೆ.ನಮ್ಮ ಸರ್ಕಾರ ಎಷ್ಟೊಂದು ಮನವಿ ಮಾಡಿ ಕೊಂಡಿದೆ ಗೊತ್ತ .... ಅಂತಾ ? ಒಂದೇ ಸಮನೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಎಸೆಯುತ್ತಾ  ಬಂದರು . 

 

 

ಇಲ್ಲೂ ಹಾಜರ್ ನಾವು

                                                                                                                                                   

ಇದು ಹೇಗಿದ್ದರೆ ಚೆನ್ನ

ಮುಂದುವರೆದು ಒಂದೇ ಸಮನೆ  ಕೇಳುತ್ತಾ , ಸಾರ್ವಜನಿಕರ ತೊಂದರೆ ಬಗ್ಗೆ ಯಾರಿಗೂ ಕಾಳಜಿ ಇಲ್ಲ ಇದರಬಗ್ಗೆ ನೀವೇನಂತೀರಾ ??? ಅಂತ ನನ್ನ ಹತ್ತಿರ ಕ್ಯಾಮರ ತಿರುಗಿಸಿ ಮೈಕ್ ಹಿಡಿದ , ಕೆಟ್ಟ ಸಿಟ್ಟು ಬಂದರೂ ತಡೆದು ಕೊಂಡು ಅಲ್ಲಾ ನೀವು ಕೇರಳದ ಜನರ ಕಷ್ಟದ ಬಗ್ಗೆ ವರದಿ ಮಾಡಲು ಬಂದಿರುವುದು ಸ್ಪಷ್ಟವಾಯಿತು. ಆದರೆ ಈ ರಸ್ತೆಗೆ ಪರ್ಯಾಯವಾಗಿ  ಮಾನಂದವಾಡಿ ಯಿಂದ ಕಾಟಿಕುಲಂ ,ಕುಟ್ಟ, ಗೋಣಿಕೊಪ್ಪ ,ತಿತಿಮತ್ತಿ, ಹುಣಸೂರು  ಮೂಲಕ ಮೈಸೂರಿಗೆ ಬರಲು ದಾರಿಯಿದೆ.ಇಲ್ಲಿ ರಸ್ತೆ ಚೆನ್ನಾಗಿ ಮಾಡಿ ವಾಹನ ದಟ್ಟಣೆ ಹೆಚ್ಚಾದರೆ ಇಲ್ಲಿನ ಪ್ರಾಣಿಗಳ ಚಲನೆಗೆ ತೊಂದರೆ ಯಾಗದೆ ಅಂದೇ !!! ಇಲ್ಲ ಸಾರ್  "ನಮ್ಮ ರಾಜ್ಯದ ಸಾರ್ವಜನಿಕರಿಗೆ ಇಂದನ ಹಾಗು ಸಮಯ ಎಷ್ಟು ವೇಸ್ಟ್ ಆಗುತ್ತೆ ಗೊತ್ತ!!!!" ಅಂದ. "ಇಷ್ಟೆಲ್ಲಾ ನಿಮ್ಮ ರಾಜ್ಯದ ನಾಗರೀಕರ ಬಗ್ಗೆ ಕಾಳಜಿ ಇರುವ ನೀವು ಇಲ್ಲಿ ಇರುವ ವನ್ಯ ಜೀವಿಗಳ ಬಗ್ಗೆ ಯಾಕೆ ಯೋಚಿಸುತ್ತಿಲ್ಲಾ"!!!! ಅಂದೇ.ಆದ್ರೆ ಆ ಮಾತು ಕೇಳುವ ಸ್ಥಿತಿಯಲ್ಲಿ ಆ ಪುಣ್ಯಾತ್ಮ ಇರಲಿಲ್ಲ ." ಕ್ಯಾಮರ ಆಫ್ ಮೈಕ್ ಗಾನ್".  ಕಾಡಿನಲ್ಲಿ ಟಿ. ವಿ ಗೆ ಸಂದರ್ಶನ ನೀಡಿದ ಹಿಗ್ಗು ಇತ್ತಾದರೂ ಅದು ಪ್ರಸಾರ ವಾಗುವ ಸಾಧ್ಯವೇ ಇಲ್ಲವೆಂದು ಗೊತ್ತಾಗಿತ್ತು. ಅಲ್ಲಿಂದ ಡಿ.ಬಿ.ಕುಪ್ಪೆ ಗೆ ಹೊರಟೆವು."ಸಾ ಹುಸಾರು ಮುಂದೆ ದಾರಿಲೀ  ಒಂದು ಆನೆ ಅದೆ!! ಚಾರ್ಜ್ ಮಾಡ್ತದೆ ನಿದಾನಕ್ಕೆ ಹೋಗಿ "ಅಂದ ಅಲ್ಲಿದ್ದ ಒಬ್ಬ ವ್ಯಕ್ತಿ. ನಾವು ನಕ್ಕು ಮುಂದುವರೆದೆವು ನಾವು ಬರುವ ವೇಳೆಗೆ ಆ ಆನೆ ದಾರಿಯಲ್ಲಿ ಸಿಗಲಿಲ್ಲ.  ದಾರಿಯಂತೂ ಅಸಾಧ್ಯ ವಾಗಿತ್ತು ಆದರೆ ಎರಡೂ ಬದಿಯಲ್ಲಿ ಕಾಡು ಇದ್ದ ಕಾರಣ ನಿಧಾನ ವಾಗಿಚಲಿಸಿ ಡಿ.ಬಿ.ಕುಪ್ಪೆಗೆ ಬಂದಿಳಿದೆವು. ಡಿ.ಬಿ.ಕುಪ್ಪೆ [ ದೊಡ್ಡ ಬ್ಯಾಡರ ಕುಪ್ಪೆ ] ಕರ್ನಾಟಕದ ಗಡಿಯ ಅಂಚಿನ ಗ್ರಾಮ ಕಾಡಿನ ಸಮೀಪ ವಿದೆ. ಈ ಊರಿನ ಸಮೀಪದಲ್ಲೇ ಕಬಿನಿ ಹರಿದು ಕರ್ನಾಟಕ ಹಾಗು ಕೇರಳ ರಾಜ್ಯದ ಕಬಿನಿ ನದಿ ಎರಡೂ  ರಾಜ್ಯಗಳ ಗಡಿಯಾಗಿ ಪರ್ವರ್ತಿತ ವಾಗಿದೆ. ಐ.ಬಿ.  ತಲುಪಿದ ನಮಗೆ

 

ಆಶ್ರಯ ತಾಣ

                                                                                                                   ಅಲ್ಲಿನ ಮೇಟಿ ಶ್ರೀಧರ್ ರಿಂದ ಆತ್ಮೀಯ ಸ್ವಾಗತ . "ಸಾ ಚೆನ್ನಾಗಿದ್ದೀರಾ!! ಖುಸಿಯಾಯ್ತು ಬನ್ನಿ ಸಾ" ಅಂತಾ ಹೇಳಿ ನಮ್ಮ ಲಗ್ಗೆಜನ್ನು ಚಕ ಚಕನೆ ಇಳಿಸಲು ಸಹಾಯ ಮಾಡಿ ತಕ್ಷಣ ಕಾಫಿ ತಂದಿಡುವ ಆಸಾಮಿ.ಯಾವಾಗಲೂ ನಗುಮುಖ ಒಳ್ಳೆಯ ರುಚಿಕಟ್ಟಾದ ಅಡಿಗೆ ಮಾಡುವ ಬಾಣಸಿಗ,ಕಾಡಿನ ಮಾಹಿತಿ ನೀಡುವ ಗೈಡು ಎಲ್ಲಾ ಅವರೇ. ಕಾಫಿಕುಡಿದು  ಆಡಿಗೆ ಆಗುವ ತನಕ ನಾವು ಊರು ಸುತ್ತುವ ಕಾಯಕ ಶುರು ಮಾಡುತ್ತೇವೆ ಬನ್ನಿ ಡಿ.ಬಿ.ಕುಪ್ಪೆ ಫೋಟೋಗಳನ್ನು ನೋಡೋಣ.

Friday, December 17, 2010

ಮುಂಜಾನೆ ವಾಕಿಂಗ್ ನ ಈ ಪರಿ !!! ನಾ ಕಂಡ ಹಾಸ್ಯ ಲೋಕ !!! ಇವ್ರೂ ಯಾಕಿಂಗೆ ವ್ಯಾಕಿಂಗ್ ಮಾಡ್ತಾರೆ !!!

  • ಈಗೀಗ ಯಾಕೋ ಆರೋಗ್ಯದ ಕಡೆ ಗಮನ ಹರಿಸಬೇಕೂ ಅಂತಾ ನನ್ನ ಗೆಳೆಯ ವಾಕಿಂಗ್ ಶುರುಮಾಡಿದ್ದಾನೆ.ನಾನೇನು ಕಡಿಮೆ ಇಲ್ಲ ಬಿಡಿ. ಬೆಳಗಿನ ಜಾವ ಎದ್ದು ಮನೆಯ ಹತ್ತಿರ ವಿರುವ ಕುಕ್ಕರಹಳ್ಳಿ ಕೆರೆ ಸುತ್ತ ಒಂದು ಸುತ್ತು ಹಾಕಿ ಅಲ್ಲೇ ಸಿಗುವ ಹರ್ಬಲ್ ಜೂಸು ಕುಡಿದು ಬೆವರಿನ ವಾಸನೆಯೊಂದಿಗೆ ಮನೆಗೆ ಬಂದು ಕಂಪ್ಯೂಟರ್ ಮುಂದೆ ಕುಕ್ಕರಿಸುತ್ತೇನೆ.ಆಹಾ ಎಂತಾ ಪ್ರಪಂಚ ಗೊತ್ತ !!! ಮಬ್ಬಿನ  ಬೆಳಕಿನಲ್ಲಿ ವಾಕಿಂಗ್ ಮಾಡುವ ಸಮಯದಲ್ಲಿ ಅನೇಕ ವಿಚಿತ್ರ ವ್ಯಕ್ತಿಗಳು ,ಸನ್ನಿವೇಶಗಳನ್ನು ದಿನವೂ ನೋಡುತ್ತೇನೆ.ಬನ್ನಿ ಪರಿಚಯ ಮಾಡಿಕೊಳ್ಳೋಣ.  ಮುಂಜಾವಿನ ತಂಗಾಳಿ ನಡಿಗೆ, ಮನಸ್ಸಿಗೆ ಹರ್ಷ ಉಂಟುಮಾಡಿ,ಕೆರೆಯಲ್ಲಿ ಕಾಣಸಿಗುವ ಹಕ್ಕಿ ಪಕ್ಷಿಗಳ ಕಲರವ, ಸೂರ್ಯ ರಶ್ಮಿಯ ಚೆಲ್ಲಾಟ, ಸುಂದರ ನೋಟ ಮನಸಿಗೆ ಉಲ್ಲಾಸ ನೀಡಿ  ಪ್ರಶಾಂತ ಚಿತ್ತ ಮೂಡುತ್ತದೆ. ಆದ್ರೆ ಯಾಕೋ ಕೆಲವರು ಇದನ್ನು ಆನಂದಿಸದೇ ಅಲ್ಲೂ ವಿಚಿತ್ರವಾಗಿ ಆಡ್ತಾರೆ.                                                                        ಸನ್ನಿವೇಶ ಒಂದು : ಎದರುಗಡೆ ನಾಲ್ಕು ಜನ  ಬರುತ್ತಿದ್ದಾರೆ, ಅವರ ಬಳಿ ಇದ್ದ ಮೊಬೈಲ್ ನಲ್ಲಿ ವೆಂಕಟೇಶ್ವರ ಸುಪ್ರಭಾತ  ಬರುತ್ತಿದೆ !!! ಮಾತು ನೋಡಿ  ಇವತ್ತು "ಏನಾರ ಆಗ್ಲಿ ಅವ್ನ್ತವು ಬಡ್ಡಿ ವಸೂಲಿ ಮಾಡಲೇ ಬೇಕು ಕಣ್ಲಾ, ######@### !! "ಅಂತಾ ಇವರು ತಮ್ಮ   ಸುಪ್ರಭಾತ  ಹೇಳುತ್ತಾ, "ಇವತ್ತು ಎತ್ತಾಕಂಡು ಬದ್ನು ಎರಡು ತದುಕಿ ವಸೂಲಿ ಮಾಡುವ" ಅಂತಾ ಬಡ್ಡಿ ವ್ಯವಹಾರದ ಮಾತು ಆಡ್ತಾ ತಮ್ಮ ಗಿರಾಕಿಗಳನ್ನು ಬಯ್ತಾ  ಬಯ್ತಾ ವೆಂಕಟೇಶ್ವರ ಸುಪ್ರಭಾತ ದಜೋತೆಗೆ  ವಾಕಿಂಗ್ ಮಾಡುವ ಪರಿ ಆಹಾ ವೆಂಕಟೇಶ್ವರನಿಗೆ ಅರ್ಪಿತ.                                                                                        ಸನ್ನಿವೇಶ ಎರಡು: ಒಮ್ಮೆ ವಾಕಿಂಗ್ ಹೋಗುವ ಮಾರ್ಗದಲ್ಲಿ ಒಬ್ಬ ಮಹಿಳೆ ಒಂದು ನಾಯಿಯೊಡನೆ  ಬರ್ತಿದ್ರೂ !!! ನಾಯಿಗೆ ವಾಕಿಂಗ  ಅಥವಾ ಅವರಿಗೆ ವಾಕಿಂಗಾ ಗೊತ್ತಾಗಲಿಲ್ಲ!!. ನಾಯಿ ಚೈನು ಬಿಡಿಸಿಕೊಂಡು ಓಡುವ ಆಸೆ ಇಂದಾ ಜೋರಾಗಿ  ಸರಪಣಿ  ಎಳೆಯುತ್ತಿತ್ತು ಇವರು ಹರ ಸಾಹಸ ಮಾಡಿ ಅದನ್ನು ನಿಯಂತ್ರಿಸುತ್ತಿದ್ದರು , ಆದ್ರೆ ಅವ್ರ ಹತ್ತಿರ ಇದ್ದ ಮೊಬೈಲ್ '' ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವನೆಂದೂ "" ಅಂತಾ ಹಾಡುತ್ತಿತ್ತು.                                                                                                                         ಸನ್ನಿವೇಶ ಮೂರು:ಮತ್ತೊಮ್ಮೆ ಎದುರಿನಿಂದ  ಇಂದ ಒಬ್ಬ ಹುಡುಗಿ  ಓಡಿಕೊಂಡು ಬರುತ್ತಿದ್ದಳು !!! ಅವಳ ಓಟಕ್ಕೆ  ತಕ್ಕ ಹಾಗೆ ಅವಳ  ಕಟ್ಟಿದ ಜುಟ್ಟು ಎಗರಾಡುತ್ತಿತ್ತು !! ಪಾಪ ಅವಳು ಯಾರಿಗೂ ತೊಂದರೆಯಾಗದಿರಲಿ ಅಂತಾ ತನಗೆ ತಾನೇ ತುಟಿ ಕುಣಿಸುತ್ತಾ ಎರಡೂ  ಕಿವಿಗಳಿಗೆ ಇಯರ್ ಫೋನ್ ಹಾಕಿಕೊಂಡು ಓಡಿ  ಬರುತ್ತಿದ್ದಳು,   ಅವಳ ಎದುರಾಗಿ ಹೋಗುತ್ತಿದ್ದ ವಯಸ್ಸಾದ ಮಹಿಳೆಯರಲ್ಲಿ ಒಬ್ಬರು '' ಅಲ್ನೋಡು  ಆ ದೇವರಿಗೆ ಒಂಚೂರು ಕರುಣೆ ಇಲ್ಲ !!  ಪಾಪ ಆ ಹುಡ್ಗಿಗೆ ಕಿವಿ ಕೇಳದಂಗೆ ಮಾಡಿ ಕಿವಿಗೆ ಮಿಸೀನು ಮಡಗಿ ಕೊಳ್ಳೋ ಹಂಗೆ ಮಾಡವ್ನೆ " ಅಂದ್ರೆ ಇನ್ನೊಬ್ಬರು  "ಅಯ್ಯೋ ಪಾಪ  ಸ್ವಲ್ಪ ತಲೇನೂ ಸರಿ ಇಲ್ಲ ಅನ್ನೋಹಂಗೆ  ಕಾಣ್ತದೆ ತನಗೆ ತಾನೇ ಮಾತಾಡ್ತಾ ಐತೆ"  ಅಂದ್ರೂ , ಪಾಪಾ ಆ ಹುಡುಗಿ ಇದ್ಯಾವುದರ ಪರಿವೆ ಇಲ್ಲದೆ  ಮೊಬೈಲ್ ಸಂಗೀತ ಕೇಳ್ತಾ ಹಾಡ್ಕೊತಾ  ಹೋಯ್ತು.                                                                                    ಸನ್ನಿವೇಶ ನಾಲ್ಕು::ನಾನು ದಿನಾ ನೋಡುವ ಒಬ್ಬ ಆಸಾಮಿಯದು ಇನ್ನೊದು ರೀತಿ !! ನಾನು ವಾಕಿಂಗ್ ಮಾಡ್ತಾ ಬರುವ ಸಮಯಕ್ಕೆ ಎದುರಾಗಿ ಬರುತ್ತಾರೆ. ಹಳೆಯ ಕನ್ನಡ ಚಿತ್ರ ಗೀತೆಗಳನ್ನು ಮೊಬೈಲ್ ನಲ್ಲಿ  ಕೇಳುತ್ತಾ !!.ಅಲ್ಲಲ್ಲಾ ಬೇರೆಯವರಿಗೆ  ಕೇಳಿಸುತ್ತಾ ಸಾಗುವ ಈತ ಬಲು ವಿಚಿತ್ರ ಆಸಾಮಿ , ಅಶುದ್ದ ಗಾಳಿಯನ್ನು ಶಬ್ದ ಸಹಿತ  ದೇಹದಿಂದ ಬಿಡುವ ಹಾಗು ವಾಯು ಮಾಲಿನ್ಯ ಮಾಡುವುದರಲ್ಲಿ ನಿಸ್ಸೀಮ. ಒಮ್ಮೆ ನಡೆದು ಬರುವ ಹಾದಿಯಲ್ಲಿ ಹಾವು ಮಲಗಿದ್ದರೂ  ನೋಡದೆ ತನ್ನ ಲೋಕದಲ್ಲೇ ವಿಹರಿಸುತ್ತಾ  ಹಾವು  ದಾಟಿ ಅದು ಸರಿದಾಗ  ಬೆಚ್ಚಿ ಮುಗ್ಗರಿಸಿ ಬಿದ್ದರು.ಆದ್ರೆ  ಇವರ ಮೊಬೈಲ್ ನಿಂದ ಹಾಡು "ಚೆಲುವಾಂತ ಚೆನ್ನಿಗನೆ ನಲಿದಾಡು ಬಾ "ಅಂತಾ ಹಾಡ್ತಿತ್ತು                                                                                                                                        .ಇನ್ನೊಂದು ಮಜಾ ಹೇಳ್ತೀನಿ ತಾಳಿ !! ಇಲ್ಲೋಬ್ಬರಿದ್ದಾರೆ , ವಯಸ್ಸಾದ  ಇವರೂ ಮೊಬೈಲ್ ಗಿರಾಕಿನೆ !!! ಇವರು ಸುಂದರ ಹೆಂಗಸರು ಅಥವಾ  ಹುಡ್ಗೀರು ಬಂದ್ರೆ  ತಾನು ಹುಡುಗಾ ಅಂತಾ ನಟಿಸುವ ಚೂಲುಗಾರ. ನಿಧಾನವಾಗಿ ನಡೆಯುವ ಇವರು ದೂರದಲ್ಲಿ ಸುಂದರ ಹೆಣ್ಣು ಕಂಡೊಡನೆ  ತನ್ನ ಮೊಬೈಲ್ ನಿಂದ ಪ್ರೀತಿಗೆ ಸಂಬಂದಿಸಿದ ಹಾಡನ್ನು ಜೋರಾಗಿ ಹಾಕಿಕೊಳ್ಳುತ್ತಾನೆ. ಈ ಯಪ್ಪನನ್ನು  ಕಾಯಲು ಚುಡಾಯಿಸಲು ಒಂದು ಎರಡು ಹುಡುಗರು ಕಾದಿರುತ್ತಾರೆ." ಏನ್ ತಾತ  ಭಾರಿ ಸ್ಮಾರ್ಟ್ ಆಗಿ  ಕಾಣ್ತಿದೀರಾ ಅಂದ್ರೆ ಸಾಕು ನಾಚಿ ನೀರಾಗುವ ಈತ  "ನಮ್ಮ ಕಾಲದಲ್ಲಿ ಹಿಂಗಿರ್ಲಿಲ್ಲಾ ಕಣ್ರಪ್ಪಾ ಹೆಂಗಸರೂ ಹಾಳಾಗ್ಬುಟ್ರೂ" ಅಂತಾ ಪುರಾಣ ಹೇಳ್ತಾ   ಇರ್ತಾನೆ. ಜನ ಸಹ ಇವನ ಬಗ್ಗೆ ಗೊತ್ತಿರೋದ್ರಿಂದ  ವ್ಯಾಕರಿಸಿ ಹೋಗುತ್ತಾರೆ.  ಏನ್ ತಾತಾ ನಿಮಗೆ ಮದುವೆ   ªಮಾಡಿದ್ರೆ ಮಾಡ್ಕೊತೀರ ಅಂದ್ರೆ ಘಾಟಿ ಮುದುಕ " ನಮ್ಗ್ಯಾರಪ್ಪಾ ಹೆಣ್ಣು ಕೊಡ್ತಾರೆ ಅಂತಾನೆ "

    Wednesday, December 15, 2010

    ರಂಗೈಯ್ಯನ ಲಡ್ಡೂ ಪರ್ಸಾದ ಪುರಾಣ !!!! ಚಿತ್ರವಿಲ್ಲದ ಈ ಕಥೆ.

    ಯಾಕೋ ಕಾಣೆ ಕಾಡಿನ ಕಥೆಗಳಿಗೆ ನೂರೆಂಟು ವಿಘ್ನ ,ಕಾಡಿನ ನೆನಪುಗಳ ಮಾಲಿಕೆ ಯಲ್ಲಿ ಸ್ವಲ್ಪ ವಿರಾಮ ಪಡೆದು ವೈಧ್ಯರ "ಗೀತ ಗಾತಾ ಚಲ್" ಕಾರ್ಯಕ್ರಮ ಹಾಕುವ ಅನಿವಾರ್ಯ ಉಂಟಾಯಿತು. ತಾಳು ಮತ್ತೆ ಕಾಡಿನ ನೆನಪಿಗೆ ಜಾರೋಣ ಅಂತಾ ಕಂಪ್ಯೂಟರ್ ಮುಂದೆ ಕೂತರೆ  ಅರೆ ಇದೇನು ಕಂಪ್ಯೂಟರ್ ನಲ್ಲಿದ್ದ ಅಮೂಲ್ಯವಾದ ಫೋಟೋಗಳೇ ಮಾಯಾ !!!ನೋಡಿದ್ರೆ ಹಾರ್ಡ್ ಡಿಸ್ಕ್ ತೊಂದರೆಯಾಗಿ ಫೋಟೋ ಎಲ್ಲಾ ಅಳಿಸಿಹೊಗಿತ್ತು.ಮತ್ತೆ ಅವನ್ನು ಕಲೆಹಾಕಿ ಮತ್ತೆ ಕಾಡಿನ ನೆನಪಿನ ಯಾನಕ್ಕೆ ಸ್ವಲ್ಪ ವಿಳಂಭ ವಾಗುತ್ತೆ , ಆ ಕಾರಣದಿಂದ ಏನ್ ಮಾಡೋದು ಅಂತಾ ಕೂತಿದ್ದೆ.ನನ್ನ ಸ್ನೇಹಿತ ಅನಿಲ್ ಅದಕ್ಕೆ ಪರಿಹಾರ ಹೇಳಿಬಿಡೋದೇ.ಅಲ್ಲ ಕಣ್ಲಾ ನಿನ್ ಬ್ಲಾಗ್ ನಲ್ಲಿ ಯಾವದೇ ಲೇಖನ ನೋಡಿದರೂ ಚಿತ್ರಗಳೇ ಇವೆ.ಅಲ್ಲಾ ನಿಂಗೆ ಚಿತ್ರ ಇಲ್ದೆ ಲೇಖನ ಬರಿಯೋಕೆ ಬರಲ್ವಾ?? ಈ ಸರಿ ಚಿತ್ರ ಹಾಕದೆ ಹಾಸ್ಯವಾಗಿ ಬರಿ ನೋಡೋಣ !! ಅಂತಾ ಕೆಣಕಿದ.ಅದಕ್ಕೆ ಈ ಹಾಸ್ಯ ರಸಾಯನ ನಿಮಗಾಗಿ. ..   !!!                                                                                                                                       ನಮ್ಮ ಕಚೇರಿಯಲ್ಲಿ ರಂಗಯ್ಯ ಅಂತಾ ಒಬ್ಬ ಗ್ರೂಪ್ '' ಡಿ'' ನೌಕರ  ಇದ್ದ.ಗಿಡ್ಡನೆಯ ಇವನು ,ಒಳ್ಳೆಯ ಕೆಲಸ ಗಾರ ಕೆಲವರು ಇವನನ್ನು ಗುಳ್ಳೆ ನರಿ ಅಂತಾ ಕರೀತಿದ್ರು.ಆದರೂ ಇವನು ಒಮ್ಮೊಮ್ಮೆ ಇದ್ದಕ್ಕಿದಂತೆ ಎರಡು ,ಮೂರು ದಿನಗಳು ಪತ್ತೆ ಇರುತ್ತಿರಲಿಲ್ಲ , ನಂತರ ಕಚೇರಿಗೆ ಬಂದು  " ಹೇ ಹೇ ಹೇ ಸಾ ನಾನು ದೇವಸ್ಥಾನಕ್ಕೆ  ಒಗಿದ್ದೆ ಸಾ" ಅಂತಾ ತಲೆಕೆರೀತಾ ಬಂದು , "ಸಾ ಪರಸಾದ ತಂದೀವ್ನಿ ತಗಳಿ  ಸಾ" ಅಂತಾ , ಎಲ್ಲರಿಗೂ ಪರಸಾದ ಹಂಚೋವ್ನು.ಇಷ್ಟೆಲ್ಲಾ ಇದ್ರೂ ತಾನು ಕಚೇರಿಯಲ್ಲಿ ಡ್ಯೂಟಿಯಲ್ಲಿ ಇದ್ದಾಗ ಬೇಗ   ಕೆಲಸ ಮುಗಿಸೋವ್ನು  . ಹೀಗೆ ಸಾಗಿತ್ತು ಇವನ ಕಾರ್ಯ ವೈಖರಿ.ಒಮ್ಮೆಯಂತೂ   ಒಂದು ವಾರ ಪತ್ತೆ ಇಲ್ಲದೆ ನಂತರ ಆಫಿಸ್ ಗೆ ಬಂದೂ ಸಾ ಮನೆವ್ರಾ ಕೂಡ ತಿರುಪತಿ ಗೆ ಹೋಗಿದ್ದೆ " ಹಿ ಹಿ ಹಿ ಬೇಜಾರ್ ಮಾಡ್ಕಾ ಬ್ಯಾಡಿ" ಅಂತಾ ಪೂಸಿಹೊಡೆದು  ಗೋಗರೆದು ಆಫಿಸ್ನವ್ರ್ಗೆಲ್ಲಾ  ಲಡ್ಡೂ ಜೊತೆ  ಮೈಸೂರ್ ಪಾಕು ಹಂಚಿದಾ !! ನಾವು ಕೆಲವರು ಅಲ್ಲಾ ರಂಗಯ್ಯ ತಿರುಪತಿಯಲ್ಲಿ ಲಡ್ಡೂ ಜೊತೆ ಮೈಸೂರು ಪಾಕು ಕೊಡೋಕೆ ಯಾವಾಗ ಶುರುಮಾಡಿದರೂ ಅಂತಾ ಹಾಸ್ಯ ಮಾಡಿ ನಕ್ಕೆವು.       " ಹೇ ಹೇ ಬುಡಿ ಸಾ ತಮಾಸೆ ಮಾಡ್ಬ್ಯಾಡಿ" ಅಂತಾ ಆಚೆ ಹೋದ.ನಂತರ  ಯಥಾ ಸ್ಥಿತಿ . ಹಾಗೆ ಒಮ್ಮೆ ನಾನು ನನ್ನ ಸ್ನೇಹಿತನ ಸಹೋದರಿ  ಮದುವೆ     ಗಾಗಿ ರಜಾ ಹಾಕಿ ತೆರಳಿದ್ದೆ .  ಮದುವೆ ಮನೆಯಲ್ಲಿ ಯಾಂತ್ರಿಕವಾಗಿ  ಉಡುಗೊರೆ  ನೀಡಿ  ಊಟಕ್ಕೆ ಬಂದು ಕುಳಿತೆ , ಅರೆ ಇದೇನಿದು ಅಂತಾ ನೋಡಿದರೆ ನಮ್ಮ ರಂಗಯ್ಯ ನನ್ನ ಮುಂದಿನ ಸಾಲಿನ ತುದಿಯಲ್ಲಿ ಊಟಕ್ಕೆ ಕುಳಿತಿದ್ದ.ಪಕ್ಕದಲ್ಲಿ ಒಂದು ಬ್ಯಾಗು ಬೇರೆ ಇತ್ತು.ಪಾಪ ಇಲ್ಯಾಕೆ ಇವನನ್ನು ಮಾತಾಡಿಸಿ ತೊಂದ್ರೆ  ಕೊಡೋದು ಅಂತಾ ಯೋಚಿಸಿ ಊಟ ಮಾಡಲು ಶುರು ಮಾಡಿದೆ. ಊಟ ಎಲ್ಲಾ ಸಾಂಗವಾಗಿ  ಮುಗಿತೂ . ಕೈತೊಳೆಯುವ ಸರದಿ ಬಂದು ಅಲ್ಲಿ ರಶ್ ಆಗುವ ಮೊದಲು ಕೈ ತೊಳಿಯೋಣ ಅಂತಾ ಬೇಗ ಕೈ ತೊಳೆಯುವ   ಕೆಲಸ ಮುಗಿಸಿದೆ. ಅಲ್ಲೇ ಇದ್ದ ಸ್ನೇಹಿತ " ಬಾರೋ ಲೋ ಯಾಕೆ ಓಡ್ತಿಯಾ" ಅಂತಾ ತಡೆದು  ಮಾತಾಡ್ತಾ ನಿಲ್ಲಿಸಿಕೊಂಡ . ಊಟ ಮಾಡಿದ ಎಲ್ಲಾ ಜನರು ಊಟ ಮುಗಿಸಿ ತೆರಳಿದ್ದರು ,ಆದ್ರೆ ಒಬ್ಬ ವ್ಯಕ್ತಿ ಮಾತ್ರಾ ಎಲ್ಲಾ ಎಲೆಗಳಲ್ಲಿ ಉಳಿದಿದ್ದ ಲಡ್ಡು  ತೆಗೆದು ತನ್ನಾ ಬ್ಯಾಗಿಗೆ ತುಂಬಿ ಕೊಳ್ಳುತ್ತಿದ್ದಾ!!. ಅರೆ ಇದೇನು ಅಂಥಾ ನೋಡಿದ್ರೆ ಅವನೇ ನಮ್ಮ ಕಚೇರಿ ರಂಗಯ್ಯ !! ಅವನ ಜೊತೆ ಇದ್ದ ಬ್ಯಾಗು ಆಗಲೇ ಹೊಟ್ಟೆ ತುಂಬಾ ಲಡ್ಡು ಗಳನ್ನೂ ತುಂಬಿಕೊಂಡು ಜೋಲಾಡುತಿತ್ತು.           ನಾನು ಅವನಿಗೆ  ತಿಳಿಯದಂತೆ   ನೋಡ್ತಾ ಇದ್ದೆ !! ಎಲಾ ಇವನ ಅಂದು ಕೊಂಡು, ಮನದಲ್ಲಿ ಶಪಿಸುತ್ತಾ ಮನೆಹಾದಿ ಹಿಡಿದೇ.ಮಾರನೆದಿನ ಯಥಾ ಸ್ತಿತಿ "" ಹಿ ಹಿ ಹಿ ಸಾ ನಿನ್ನೆ ಚಾಮುಂಡಿ ಬೆಟ್ಟಕ್ಕೆ  ಹೋಗಿದ್ದೆ ಸಾ!!! ತಕಳಿ ಪರ್ಸಾದ" ಅಂತಾ ಒಳಗೆ ಬಂದಾ .ಬಂದಿತ್ತು ಕೆಟ್ಟ ಸಿಟ್ಟು!!! ಆದರೂ ಇವನಿಗೆ ಬುದ್ದಿ ಕಲಿಸೋಣ ಅಂದು ಕೊಂಡು "ಇರು ರಂಗಯ್ಯ ಎಲ್ಲರ ಜೊತೆ ತಿನ್ನೋಣ!!"  ಅಂದು ಎಲ್ಲರನ್ನೂ ಬರಹೇಳಿ ಒಟ್ಟಿಗೆ ಸೇರಿಸಿದೆ ,"ಈಗ ಬಾ ರಂಗಯ್ಯ ನಿನ್ ಪರ್ಸಾದ ಹಂಚುವಂತೆ ಅಂಥಾ ಅಂದೇ. "ಅವನು ಖುಷಿಯಾಗಿ ಬ್ಯಾಗಿನಿಂದಾ ತೆಗೆದು ಪೇಪರ್ ಮೇಲೆ ಸುರಿದ !!! ಅರೆ ಅದೇ ನಿನ್ನೆ ಮದುವೆ  ಮನೆ ಲಡ್ಡು ಗಳ  ಕರಾಮತ್ತು ಇಲ್ಲಿ ಬಂದಿತ್ತು !! "ಸಾ ಪರ್ಸಾದ ಕೊಡ್ಲಾ "ಅಂದಾ , " ತಡಿ ರಂಗಯ್ಯ ನಿನ್ ಪರ್ಸಾದದ ಮಹಿಮೆ ಹೇಳ್ತೀನಿ ಆಮೇಲೆ ಕೊಡಿವಂತೆ" ಅಂದು, ಕಚೇರಿ ಸ್ನೇಹಿತರಿಗೆ "ನೋಡ್ರಯ್ಯ ನಮ್ಮ ರಂಗಯ್ಯ ಪಾಪ ಇಷ್ಟು ದಿನಾ ಪುಣ್ಯ ಕ್ಷೇತ್ರ ದರ್ಶಿಸಿ ನಮಗೆ ಪರ್ಸಾದ ಕೊಟ್ಟಿದ್ದಾನೆ. ಇವತ್ತು ಅವನ ಪುಣ್ಯಕ್ಕೆ ನಮ್ಮ ಕಾಣಿಕೆಕೊಡೋಣ" ಎಂದೇ. ಅವನಿಗೆ ಅಚ್ಚರಿಯಾಗಿ "ಹೇ ಹೇ ಹೇ ಯಾನು ಬ್ಯಾಡ ಬುಡಿ ಸಾ ಅಂದಾ !!." "ಇರು ರಂಗಯ್ಯ ಅಂತಾ ಹೇಳಿ ಅವನು ನಿನ್ನೆ ಮಧುವೆ ಮನೆಯಲ್ಲಿ  ಮಾಡಿದ ಘನ ಕಾರ್ಯದ ವಿವರಣೆಯನ್ನು ಎಲ್ಲರಿಗೂ ದರ್ಶನ ಮಾಡಿಸಿ ರಂಗಯ್ಯನ ಪರ್ಸಾದದ ಮಹಿಮೆ ಸಾರಿದೆ. ಇಷ್ಟುದಿನ ಎಲ್ಲರನ್ನೂ  ಮಂಗಗಳನ್ನಾಗಿ ಮಾಡಿದ್ದ ರಂಗಯ್ಯ  ಇಂದು ತಾನೇ ಮಂಗಯ್ಯ ಆಗಿದ್ದಾ !! ಆಗ ನೋಡಬೇಕಿತ್ತು ಎಲ್ಲರ ಮುಖವನ್ನು !! ಆಹಾ ಪ್ರಸಾದ ಅಂಥಾ ಭಕ್ತಿ ಇಂದ ಕಣ್ಣಿಗೆ ಒತ್ತಿಕೊಂಡು ಸ್ವೀಕರಿಸಿ ದೇವರ ಪ್ರಸಾದವೆಂದು ತಿಳಿದು ಮನೆಗೂ ತೆಗೆದುಕೊಂಡು ಹೋಗಿ  ಧನ್ಯತೆ ಮೆರೆಯುತ್ತಿದ್ದ ಆ  ಮಖಗಳು ಕಿವುಚಿಕೊಂಡು ಅವನಿಗೆ ಶಾಪಾ ಹಾಕಿ ಎರಡೆರಡು ತದುಕಲು ಮುಂದಾಗಿದ್ರೂ . ಅವನಿಗೂ ಈ ಅನಿರೀಕ್ಷಿತ ಬೆಳವಣಿಗೆ ಇಂದಾಗಿ ಸರಿಯಾದ ಮಂಗಳಾರತಿ ಎತ್ತಿಸಿಕೊಳ್ಳುವ ಸರದಿಯಾಗಿತ್ತು. ಇನ್ಮುಂದೆ ಹೀಗೆ ಮಾಡುವುದಿಲ್ಲ ವೆಂದು ಪ್ರಮಾಣ ಮಾಡಿ ಕ್ಷಮೆಕೋರಿದ .ಏನೋ ಹಾಳಾಗ್ಲಿ ಅಂತಾ ಎಲ್ಲರು ತಲಾ ಒಂದೊಂದು ಮಾತಾಡಿ ತಮಗೆ ತಾವೇ ಸಮಾಧಾನ ಪಟ್ಟುಕೊಂಡರು. ಆದರೂ ಈ ಪುಣ್ಯಾತ್ಮಾ ಪ್ರತೀಭಾರಿ ನಮಗೆ ಚಳ್ಳೆ ಹಣ್ಣು ತಿನ್ನಿಸಿ  ಇಂತಹ ಪರ್ಸಾದ ತಿನ್ನಿಸಿ ತನ್ನ ಮಹಿಮೆ ಸಾರಿ ನಮ್ಮನ್ನು ಮೂರ್ಖ ರನ್ನಾಗಿ ಮಾಡಿದ್ದ. ಹಿಂಗಿತ್ತು ನೋಡಿ ನಮ್ಮ ರಂಗಯ್ಯನ ಲಡ್ಡೂ ಪರ್ಸಾದ ಪುರಾಣ.                                                                                                    

    Wednesday, December 8, 2010

    ಕಾಡಿನ ನೆನಪಿಗೆ ಸ್ವಲ್ಪ ವಿರಾಮ.!! ಈಗ ಗೀತ್ ಗಾತಾ ಚಲ್!!!ಮೈಸೂರಿನಲ್ಲಿ ವೈಧ್ಯರ ಕಲರವ. !!! ಚಿತ್ರನಟಿ ಸುಮಲತಾ ಅಂಬರೀಶ್ ಹಾಡ್ತಾರೆ ಗೊತ್ತ!!!





    ಪ್ರತಿನಿತ್ಯ ರೋಗಿಗಳ ಒಡನೆ ಮಿಂದು ಅವರ ನೋವಿಗೆ ಮಿಡಿದ ವೈಧ್ಯರು ಮೈಸೂರಿನಲ್ಲಿ ಪ್ರತೀವರ್ಷ "" ಗೀತ ಗಾತಾ ಚಲ್ "" ಅಂತಾ ಹಾಡಿ ಕುಣಿದು, ಸುಮಧುರ ಹಾಡುಗಳ  ರಸದೌತಣವನ್ನು ಮೈಸೂರ ಜನರಿಗೆ ನೀಡುತ್ತಾರೆ.ಈ ಕಾರ್ಯ ಕಳೆದ ಹತ್ತು ವರ್ಷಗಳಿಂದ  ನಿರಂತರವಾಗಿ ನಡೆದುಕೊಂಡು ಬಂದಿದೆ.ಬನ್ನಿ ಈ ಬಾರಿಯ ವಿಶೇಷವನ್ನು ಸವಿಯುವ. ಅಚ್ಚರಿಯ ವಿಷಯವೆಂದರೆ ಈ ಬಾರಿ ವೈಧ್ಯರ ಮಕ್ಕಳೂ ಸಹ ವೇದಿಕೆ ಏರಿದ್ದು.ಜೊತೆಗೆ ತಾರಾ ಸ್ಪರ್ಶ .ಕಳೆದ ಭಾನುವಾರ ಸಂಜೆ ನನ್ನ ಪಾಲಿಗಂತೂ ಗಾನದ ಸ್ವರ ಮಾಧುರ್ಯದ  ಸವಿ ಸಂಜೆಯಾಗಿ ಬಂದಿತ್ತು