Thursday, July 29, 2010

ಜಿನುಗುವ ಮಳೆಯಲ್ಲಿ !! ಮೋಡಗಳ ನಲಿದಾಟದಲ್ಲಿ!! ಸ್ವಲ್ಪ ಇತಿಹಾಸ .....?ಚಿಕ್ಕಮಗಳೂರು ದರ್ಶನ ...2

ಸೊಗಸಾದ  ಹಳದಿ ಅಣಬೆ ಸೌಂದರ್ಯ ನೋಡುತ್ತಾ , ನಮ್ಮ ಸುಜಲ್  ಪ್ರಶ್ನೆಗಳಿಗೆ ಉತ್ತರ ನೀಡುತ್ತಾ  ಇದ್ದ ನನಗೆ ಚಿಕ್ಕಮಂಗಳೂರ್ ಅಲ್ಲ ಮರಿ ಚಿಕ್ಕಮಗಳೂರ್ ಅನ್ನ್ನುವಷ್ಟರಲ್ಲಿ  ಹಿಂದೆ ಆಹ್ ಅಂದದ್ದು ಕೇಳಿಸಿತು !! ಓ ಅದಾ ಜಿಗಣೆ ಅಂತ  ಸ್ವಲ್ಪ ರಕ್ತ ಕುಡಿದು  ಬಿದ್ದೊಯ್ತದೆ ಅಂತ ಅಲ್ಲೇ ಇದ್ದ  ಒಬ್ಬ ಕೆಲಸಗಾರ ಅಂದಾ.ಕಹಿ ಇದ್ದರೆ ಸಿಹಿಯ ಬೆಲೆ ತಿಳಿಯುತ್ತದೆ  ಅನ್ನುವಹಾಗೆ  ಸ್ವರ್ಗ ನೋಡಲು ಈ ಜಿಗಣೆ ಕಾಟ ವನ್ನು ಮಲೆನಾಡು,ಮತ್ತು  ಕಾಡುಗಳ ಒಳಗೆ ತೆರಳಿದಾಗ ಸಹಿಸಿಕೊಳ್ಳಬೇಕು.''donate blood for the cause of nature" ಅನ್ನೋ ಮಾತು ನೆನಪಾಗುತ್ತೆ!!  ಹಾಗೆ ಬಂದವನಿಗೆ ಗೆಳೆಯ  ಶ್ರೀನಿವಾಸ್ ಅವರಿಗೆ ಜಿಗಣೆ ಹಿಡಿದದ್ದು ಗೊತ್ತಾಯ್ತು.ನಾನು jeans  ಪ್ಯಾಂಟ್ ಲೆದರ್ ಶೂ ಹಾಕಿದ್ದರಿಂದ ನನಗೆ ಅಷ್ಟಾಗಿ ಜಿಗಣೆ ಕಾಡಲಿಲ್ಲ .ಸ್ವಾಮೀ ಬನ್ನಿ ನಮ್ಮ ಗೆಳೆಯ ಜಿಗಣೆ ರಾಯರ ಬಗ್ಗೆ ಒನ್ ಚೂರು ತಿಳಿಯೋಣ ಸಣ್ಣಗೆ ದಾರದಂತ ಇದು ಬುಗುರಿ ಆಟದಲ್ಲಿ ಕೈಬೆರಳಿನಿಂದ ಗೇಣು ಹಾಕಿದಂತೆ ಸಾಗುತ್ತದೆ.ಸೂರ್ಯನ ಕಿರಣ ಇದಕ್ಕೆ ಅಲರ್ಜಿ ,ಕತ್ತಲು ತುಂಬಿದ ಶೀತ ನೆಲದ ಜರಿ,ತೊರೆ, ಗಿಡ ಇದರ ವಾಸಸ್ತಾನ .ಇದು ನಾನು ಹಿಂದೆ ಚಾಮರಾಜ ನಗರ ಸಮೀಪ ಬೇಡಗುಳಿ ಜೋಡಿಗೆರೆ ಕಾಡಿನಲ್ಲಿ ಚಾರಣ ಹೋಗಿದ್ದಾಗ ಜಿಗಣೆ  ಕಾಡಿದ ಬಗ್ಗೆ ಇನ್ನೂ  ನೆನಪು ಕಾಡುತ್ತದೆ. ನಿಮ್ಮ ಶೂ ಲೇಸಿನ ಸಂದಿಯಲ್ಲಿ ಸಾಗಿ ಶೂ ಒಳಗೆ ನುಗ್ಗಿ ಕಾಲಿನ ರಕ್ತ ಹೀರುವ ಚಾಣಾಕ್ಷಾ ಇದು.ಒಮ್ಮೆ ಅಂಟಿಕೊಂಡರೆ ಕನಿಷ್ಠ ೧೦ ರಿಂದ ೨೦ ಮಿಲಿ ರಕ್ತ ಹೀರಿ  ತನಗೆ ತಾನೇ ಬಿದ್ದು ಹೋಗುತ್ತದೆ.ಸಣ್ಣಗಿನ ದಾರವಾಗಿದ್ದ ಇದು ರಕ್ತಕುಡಿದಾಗ ಡುಮ್ಮಗಾಗಿರುತ್ತದೆ.ಮದ್ಯದಲ್ಲಿ ನಿಮಗೆ ಅರಿವಾಗಿ ಇದನ್ನು ಕೀಳಲು ಶುರುಮಾಡಿದಿರೋ ಆಗುವ ನೋವು ನಿಮಗೆ ಸಹಿಸಲು ಅಸಾಧ್ಯವಾಗಿರುತ್ತದೆ..ಇಂತಹ ನೆನಪುಗಳ ಮೆಲಕು ಹಾಕುತ್ತಾ ನಾನೇ ಅಂದುಕೊಂಡೆ ಹೌದು ಈ ಜಿಲ್ಲಾ ಕೇಂದ್ರ ದ ಊರಿಗೆ ಚಿಕ್ಕಮಗಳೂರ್ ಅಂಥಾ ಯಾಕೆ ಹೆಸರು ಬಂತು ಅಂತಾ !!!

History

Chikkamagaluru is the region where the Hoysala rulers started and spent the early days of their dynasty. According to a legend, it was at Sosevur, now identified with Angadi in Mudigere Taluk that Sala, the founder of the Hoysala dynasty, killed the legendary tiger, immortalised in the Hoysala crest[2]. However, scholars have found lot of inconsistencies in this story and it seems to be more of a folklore[3]. However, it is known that Veera Ballala II (1173 - 1220 CE), the great king of Hoysala empire, has built the Amriteshwara temple at Amrithapura in Tarikere Taluk.
Coffee was introduced into India through the Chikkamagaluru district when the first coffee crop was grown in the Baba Budan Giri Hills during 1670 AD. According to the article Origins of Coffee, the saint Baba Budan on his pilgrimage to Mecca travelled through the seaport of Mocha, Yemen where he discovered coffee. To introduce its taste to India, he wrapped seven coffee beans around his belly and got them out of Arabia. On his return home, he planted the beans in the hills of Chikkamagaluru, which are now named Baba Budan Hills in his honour.
In recent history, Chikkamagaluru was the centre of global attention in the year 1978 when the former Indian Prime Minister, Indira Gandhi stood for elections here and got elected to Lok Sabha, the Indian Parliament.
ಆಗ ಇತಿಹಾಸ ನೆನಪಿಗೆ ಬಂತು  ವಿಕಿಪಿಡಿಯಾ  ದಲ್ಲಿ ಹುಡುಕಿದರೆ ಸಿಕ್ಕಿದ್ದು ಅದು ಹೊಯ್ಸಳರ ಆಳ್ವಿಕೆಗೆ ಒಳಪಟ್ಟ ಪ್ರದೇಶ ಅಂತ ಆದ್ರೆ ಚಿಕ್ಕಮಗಳೂರಿಗೆ ಚಿಕ್ಕಮಗಳೂರ್ ಅಂತ ಹೆಸರು ಬಂದ ವಿಚಾರ  ಹೇಳಿಲ್ಲಾ !!! 
i!ಆದ್ರೆ ಕರ್ನಾಟಕ ರಾಜ್ಯ  ಗೆಜೆತೀರ್  ನಲ್ಲಿ ಸ್ವಲ್ಪ ಮಾಹಿತಿ ಸಿಕ್ಕಿದೆ.ಚಿಕ್ಕಮಗಳೂರು ಮೊದಲು ಹೊಯ್ಸಳ  ಆಳ್ವಿಕೆಗೆ ಒಳಪಟ್ಟ ಪ್ರದೇಶವಾಗಿತ್ತು.ಮೊದಲು ಈ ಊರು ಕಿರಿಯ ಮುಗಳಿ ಎಂಬ ಅಗ್ರಹಾರ ಹಾಗು ಇದರ ಪಕ್ಕದಲ್ಲಿ ಮತ್ತೊಂದು ಪಿರಿಯ ಮುಗಳಿ ಎಂಬ ಅಗ್ರಹಾರ ವಿತ್ತು  ಎರಡೂ ಅಗ್ರಹಾರವನ್ನು ಮದುವೆಯ  ಉಡುಗೊರೆಯಾಗಿ ಮಕ್ಕಳಿಗೆ ನೀಡಲಾಯಿತೆಂದು ಹೇಳುತ್ತಾರೆ.ಹೆಚ್ಚಿಗೆ ವಿಚಾರ ತಿಳಿದುಬರುವುದಿಲ್ಲ .ನಂತರ ಕಿರಿಯ ಮುಗಳಿ  ಚಿಕ್ಕ ಮುಗಳಿ ಯಾಗಿ,ಪೆರಿಯ  ಮುಗಳಿ ಹಿರೆ ಮುಗಳಿ ಯಾಗಿ ಕರೆಯಲಾಗಿದೆ.ಕಾಲಾನಂತರ ಇಂದು ಚಿಕ್ಕ ಮುಗಳಿ ಚಿಕ್ಕಮಗಳೂರು, ಹಿರೆ ಮುಗಳಿ ಹಿರೇಮಗಳೂರು ಎಂದೂ ಚಾಲ್ತಿಗೆ ಬಂದು ಇಂದು ಎರಡೂ ಊರುಗಳು ಸೇರಿ ಜಿಲ್ಲಾ ಕೇಂದ್ರವಾಗಿದೆ.ಬಾಬಾಬುಡನ್ ಗಿರಿ ಬೆಟ್ಟ ಶ್ರೇಣಿಯ ದಕ್ಷಿಣ ಭಾಗದಲ್ಲಿರುವ ಈ ಊರು ಬೆಂಗಳೂರಿನಿಂದ ಸುಮಾರು   260 ಕಿ.ಮಿ. ಆಗುತ್ತದೆ.ಹಾಗೆ ಮಾತಾಡ್ತಾ ರಸ್ತೆಗೆ ಬಂದು ನೋಡಿದರೆ ವಾವ್ ಅದ್ಭತ ಮುಳ್ಳಯ್ಯನ ಗಿರಿ ಶ್ರೇಣಿ ಬೆಟ್ಟಗಳ ಸುಂದರ ನೋಟ ಅವುಗಳ ಮೇಲೆ ಮೋಡಗಳ ತೆರೆ ಮರೆಯ ಚೆಲ್ಲಾಟ ಸಾಗಿತ್ತು ಈ ಮೋಹ ಕ ನೋಟ ನೋಡ್ತಾ  ನೋಡ್ತಾ ನಾವು ಪಕ್ಕದ  ಎಸ್ಟೇಟ್ ಒಳಗೆ ನುಗ್ಗಿದ್ದೆವು .............??????
ಮೋಡಗಳ ಲೋಕದೊಳಗೆ ವಿಹರಿಸುತ್ತಿರಿ  ಮುಂದಿನ ಸಂಚಿಕೆಯಲ್ಲಿ  ಭೇಟಿಯಾಗೋಣ ....................!!!!!!!!!ಮುಂದಿನ ಸಂಚಿಕೆ ಅಂತಿಮ ಅನುಭವ ????ಸುಂದರ  ಪುಷ್ಪಗಳ ಲೋಕ ,ಜೀರುಂಡೆ ಹಾಡು ..................ಪಾಂಡುರಂಗ ಕಾಫಿ ,ಮಯೂರ ಹೋಟೆಲ್ ತಿಂಡಿ,ಟೌನ್ ಕ್ಯಾಂಟೀನ್   ತುಪ್ಪದ ದೋಸೆ.......ಇತ್ಯಾದಿ


Thursday, July 22, 2010

ಚಿಕ್ಕ ಮಂಗಳೂರ್ ಅಲ್ಲ ,ಚಿಕ್ಕಮಗಳೂರ್ ಮರಿ !!! ಚಿಕ್ಕಮಗಳೂರು.ತುಂತುರು ಮಳೆಯಲ್ಲಿ ದರ್ಶನ ..!!

ಲೇಯ್  ಬಾಲು ನಾಳೆ ನೀನು ಚಿಕ್ಕಮಂಗಳೂರಿಗೆ ಅನಿ ಜೊತೆ ಬರಬೇಕು ಆಯ್ತಾ , ಬರ್ಲಿಲ್ಲ ಅಂದ್ರೆ ಗೊತ್ತಲ್ಲ !!! ಅಂತ ಕಳೆದ ಶನಿವಾರ ರಾತ್ರಿ  ಬೆಂಗಳೂರಿನ  ಗೆಳೆಯ ಬಿಂದುಕುಮಾರ್ ಮೊಬೈಲ್ ನಿಂದ ಜಬರ್ದಸ್ತಾಗಿ  ಆದೇಶ ಮಾಡಿದ . ನಾನು ಅಲ್ಲಾ  ಬಿಂದು, ಸ್ವಲ್ಪ ಕೆಲಸ ಇದೆ ತಾಳಪ್ಪ ನೋಡ್ತೀನಿ, ನಂತರ ನಿನಗೆ ಫೋನ್ ಮಾಡ್ತೀನಿ ಅಂದೇ ,ಆದ್ರೆ ಪಾರ್ಟಿ ಕೇಳಬೇಕಲ್ಲ  ಅಮ್ಮನಿಗೆ ಫೋನ್ ಕೊಡು ಅಂದ! ಕೊಟ್ರೆನನ್ನ ತಾಯಿ ಹತ್ರ  ನನ್ನಮೇಲೆ ಫಿಟ್ಟಿಂಗು!! ನಮ್ಮ ತಾಯಿ ಪಾಪ ಕರಿತಿದಾನೆ ಹೊಗೊಕಾಗಲ್ವ ಅನ್ನೋದೇ!!.ಅದಕ್ಕೆ ನನ್ನ ಹೆಂಡತಿ ಸಾತ್ ಬೇರೆ. ಸರಿ ಬಿಡಪ್ಪಾ ಬರ್ತೀನಿ ಅಂತ ಹೇಳಿ ನಾನು ಅನಿ  ಮೈಸೂರಿನಿಂದ ಚೆನ್ನರಾಯ ಪಟ್ಟಣಕ್ಕೆ ಬರ್ತಿವಿ ನೀನು ಬೆಂಗಳೂರಿನಿಂದ  ಅಲ್ಲಿಗೆ ಬಾ  ಅಲ್ಲಿಂದ ನಿನ್ನ ಬೋಲಾರೋದಲ್ಲಿ ಹೋಗೋಣ ಅಂತ ಹೇಳಿ ಫೋನ್ ಇಟ್ಟೆ.ನನ್ನ ಕ್ಯಾಮರಾ ಬ್ಯಾಟರಿ ಚಾರ್ಜ್ ಗೆ ಹಾಕಿ  ಮಾರನೆಯದಿನ ಹೊರಡಲು ಸಿದ್ದನಾಗಲು ಶುರುಮಾಡಿದೆ.ಭಾನುವಾರ ಬೆಳಿಗ್ಗೆ ಪಯಣ ಆರಂಭ  ಮುಂಜಾನೆ ಮನೆ ಇಂದ  ಬಸ್ ಸ್ಟ್ಯಾಂಡ್ ಗೆ  ನಂತರ ಮೈಸೂರಿನಿಂದ ಚನ್ನರಾಯ ಪಟ್ಟಣದ ವರೆಗೆ  ನಾನು ನನ್ನ ಗೆಳೆಯ ಅನಿಲ್, ಅವನಮಗ ಅಜಂತ್ ತಲುಪಿದೆವು.ಚನ್ನರಾಯ ಪಟ್ಟಣದಲ್ಲಿ ತಿಂಡಿ ತಿಂದು ಹೊರಗೆ ಬರುವಷ್ಟರಲ್ಲಿ ಬಿಂದು ಕುಮಾರ್ ಎಲ್ಲಿದ್ದಿರೋ??? ಅಂತ ಫೋನ್ ಮಾಡಿದ .ನಾವು ಇದ್ದ ಜಾಗಕ್ಕೆ ಹತ್ತಿರ ಇದ್ದ ಅವನನ್ನು ತಲುಪಿ ಅವನ ಬೋಲಾರೋದಲ್ಲಿ ಕುಳಿತೆವು.ಅಲ್ಲಿ ಅವನ ತಾಯಿ ತಂಗಿ,ಚಿಕ್ಕಮ್ಮ, ಅವನ ಮಗ ಸುಜಲ್ ಇದ್ದರು.ಸಾರಿ ಕಣೋ ಬಾಲು ನಿನಗೆ ವಿಷಯ ತಿಳಿಸಲು ಆಗ್ಲಿಲ್ಲ ಚಿಕ್ಕಮಂಗಳೂರಿನ  ಹತ್ತಿರದಲ್ಲಿ  ಜಮೀನು ಖರೀದಿಸಿದ್ದಿನಿ ಅಲ್ಲಿಗೆ ನಿನ್ನನ್ನು ತೋರಿಸುವ ಸಲುವಾಗಿ ಬರೋದಿಕ್ಕೆ ಹೇಳ್ದೆ ಅಂದ .ಹೌದ ಸರಿ ನಡೀ ಅಂದೇ ಪಯಣ ಚನ್ನರಾಯ ಪಟ್ಟಣದಿಂದ  ಹಾಸನ,ಬೇಲೂರು  ಮಾರ್ಗವಾಗಿ ಅವನ ಬೋಲಾರೋ ಸಾಗಿತ್ತು.ತಣ್ಣೀರ ಭಾವಿ ಸಮೀಪ ಒಂದು ತಿರುವಿನಲ್ಲಿ
  ಗಾಡಿ ನಿಲ್ಲಿಸಿದ ಬಿಂದು, ಬಾಲು ನೋಡು!! ಇಲ್ಲೇ ಗುರು ನಾನು ಆಕ್ಸಿಡೆಂಟ್ ನಿಂದ ಬಚಾವಾಗಿದ್ದು.ಅಂದ ಸ್ವಲ್ಪ ದಿನಗಳ ಹಿಂದೆ ಇವನ ಬೋಲಾರೋ ಈ ತಿರುವಿನಲ್ಲಿ ಎದುರುಗಡೆ ವಾಹನ  ಗುದ್ದುವುದನ್ನು ತಪ್ಪಿಸಲು ಪಕ್ಕಕ್ಕೆ ಸರಿದು ಉರುಳಿ ಈ ಜಾಗದಲ್ಲಿ ಪಲ್ಟೀ ಹೊಡೆದು  ಜಖಂ  ಗೊಂಡಿತ್ತು ಇವನು ಸಾವನ್ನು ಗೆದ್ದುಬಂದಿದ್ದ. ಆ ಜಾಗವೂ ಸಹ ಅಪಘಾತಗಳ ತಾಣವಾಗಿದ್ದು ಬದುಕಿಬಂದವರು ಬಹಳ ಅಪರೂಪವೆಂದು ತಿಳಿಯಿತು.ಎಲ್ಲರ ಮುಖದಲ್ಲೂ ಬೇಸರ ಛಾಯೆ ಗಮನಿಸಿದ ನಾನು ಸರಿ ಬಿಡಪ್ಪ ನನ್ನ ಕ್ಯಾಬಿನೆಟ್ಟಿನಲ್ಲಿ ಬಿಲ್ ಪಾಸ್ ಮಾಡಿ ಇಲ್ಲಿ ನಿನ್ನ ಹೆಸರಿನಲ್ಲಿ ಒಂದು ಅಪಘಾತ ಸ್ಮಾರಕ ಕಟ್ಟಿಸಲು ಪ್ರಯತ್ನಿಸುತ್ತೇನೆ ಅಂದೇ ಎಲ್ಲರೂ ಗೊಳ್ ಎಂದು ನಗುತ್ತ ಪಯಣ ಮುಂದುವರೆಸಿ ಚಿಕ್ಕಮಗಳೂರಿನ ಮೂಲಕ ಜಮೀನಿದ್ದ ಹಳ್ಳಿ ಎಮ್ಮೆಕಾನ್ ಹತ್ತಿರ ಗಾಳಿಪೂಜೇ ಎಂಬ ಹಳ್ಳಿಗೆ ಬಂದೆವು
ಸ್ಥಳೀಯರಾದ  ಇಬ್ಬರು ಸ್ನೇಹಿತರು ಅಲ್ಲಿ ಜೊತೆಗೂಡಿ ಖರೀದಿಸಲು ಉದ್ದೇಶಿಸಿದ್ದ ಕಾಫಿ ತೋಟವನ್ನು ತೋರಿಸಲು ಸಹಕರಿಸಿದರು.ಚಿಕ್ಕಮಗಳೂರು  ಶಿವಮೊಗ್ಗ ರಸ್ತೆಯಲ್ಲಿರುವ  ಒಂದು ತೋಟ ಒಳಗಡೆ ಪ್ರವೇಶಿಸಿದರೆ ಒಂದು ಸುಂದರ ಮನೆ  ಪಕ್ಕದಲ್ಲಿ ತೋಟ ಬನ್ನಿ ಸಾರ್ ತೋಟ ನೋಡೋಣ ಅಂದ್ರು ಶ್ರೀನಿವಾಸ್ ಸರಿ ನಡೀರಿ  ಅಂತ ತುಂತುರು ಮಳೆಹನಿಯಲ್ಲಿ  ತೋಯುತ್ತಾ ತೋಟ ನೋಡಲು ಹೊರಟೆವು.ಅಲ್ಲೇ ಪಕ್ಕದಲ್ಲಿ ಕಲ್ಲಿನ ಪುಟ್ಟ ಮನೆಯಲ್ಲಿ
ನಾಯಿಯೊಂದು ತನ್ನ ಮರಿಗಳಿಗೆ ಹಾಲು ಉಣಿಸುತ್ತಿತ್ತು ತಾಯಿ ಹಾಗು ಕಂದಮ್ಮಗಳ ವಾತ್ಸ್ಯಲ್ಲ್ಯ ಭರಿತ ನೋಟ ಮುದನೀಡಿತು.ನಡಿಗೆ ಸಾಗಿ ತೋಟ ಹೊಕ್ಕೆವು  ಕಡಿದಾದ ಗುಡ್ಡ ಏರಲು ತುಂತುರು ಮಳೆಯ ಪ್ರೇರಣೆ ಹಿತವಾಗಿತ್ತು . ಏದುಸಿರು ಬಿಡುತ್ತ ಸಾಗಿದ ನಮಗೆ
ತಣ್ಣನೆ ಗಾಳಿ ಸಾತ್ ನೀಡಿ ಚಳಿ ಚಳಿ ಯಾಗಿತ್ತು.ಪಟ್ಟಣದ ಜೀವನಕ್ಕೆ ಹೊಂದಿಕೊಂಡಿದ್ದ ಜೀವಗಳು ಸಣ್ಣ ಗುಡ್ಡ ಏರಲು ತಿನುಕಾದಿದ್ದವು  ಹಾಗೆ ಸಾಗಿದ್ದ ನಮಗೆ
ಮಳೆಯ ಸಿಂಚನಕ್ಕೆ ನಲಿದಾಡಿ ಮುದದಿಂದ ಮರ ನರ್ತಿಸಿ  ನಾಟ್ಯ ವಾಡಿತ್ತು. ಕಾಫಿ ಗಿಡಗಳ ಮಧ್ಯೆ ಸಾಗಿದ್ದ
ನಮಗೆ ಮಳೆಯ ಹನಿ ನೆಲಕ್ಕೆ ಬಿದ್ದು ಸುವಾಸನೆ ಭರಿತ ವಾತಾವರಣ ಮುದನೀಡಿತ್ತು.ಹಸಿರು ಗೋಲಿಗಳಂತೆ ಕಾಫಿ ಕಾಯಿ ಗಿಡದಲ್ಲಿ ತೊನೆದಾಡುತ್ತಿದ್ದವು.ಮುಂದೆ ನಿಧಾನವಾಗಿ ಸಾಗಿದ್ದ ನಮಗೆ
ಅಪರೂಪದ ಹಳದಿ  ಬಣ್ಣದ ಅಣಬೆ ಕಣ್ಣಿಗೆ ಬಿತ್ತು. ಅರೆ ಇದೇನು ಅಣಬೆ ಬಿಳಿ ಬಣ್ಣದಲ್ವ ಅಂತ ಹತ್ತಿರ ಹೋದರೆ ಹಳದಿ ಚೆಂಡಿನಂತೆ ಹಸಿರ ಮರೆಯಲ್ಲಿ ನಸುನಗುತ್ತ ಕುಳಿತಿತ್ತು ,ತುಂತುರು ಮಳೆಯಲ್ಲಿ  ನನ್ನ ಕ್ಯಾಮರ ಅದನ್ನು ವಿವಿಧ ಕೋನಗಳಿಂದ ಸೆರೆಹಿಡಿಯಲು ತಿನುಕಾಡುತ್ತಿತು.
ಅಷ್ಟರಲ್ಲಿ  ನನ್ನ  ಸ್ನೇಹಿತನ ಮಗ ಬಾಲು ಅಂಕಲ್ ಚಿಕ್ಕಮಂಗಳೂರ್ ಚೆನ್ನಾಗಿದೆ ಅಲ್ವ ಅಂದಾ ಹೌದು ಮರಿ ಆದ್ರೆ ಈ ಊರು ಚಿಕ್ಕಮಂಗಳೂರ್ ಅಲ್ಲಾ ಚಿಕ್ಕ ಮಗಳೂರು ಅಂಥಾ ಅಂದೇ , ಅಷ್ಟರಲ್ಲಿ  ಹಸಿರ ಗಿಡಗಳ ಮಧ್ಯೆ ಅಪರೂಪದ ಅಣಬೆ ಮುಧ ಗೊಳಿಸುತ್ತಿದ್ದರೆ, ಅಲ್ಲಲ್ಲೇ ಇದ್ದ ಕಳ್ಳ ಸೈನಿಕರಂತೆ ಜಿಗಣೆಗಳು ಕೆಲವರ ಕಾಲಿನ ಮೇಲೆ ಸದ್ದಿಲ್ಲದೇ ಹತ್ತಲು ಶುರುಮಾಡಿದ್ದವು ........!!!!!.ನಂತರ.......?????..ಮುಂದಿನ ಸಂಚಿಕೆಯಲ್ಲಿ ಹೇಳ್ತೇನೆ .

Saturday, July 17, 2010

ಸಾರಿ ಕಣಯ್ಯ ನಾನು ನಿನ್ನ ಮರ್ತೆ ಬಿಟ್ಟಿದ್ದೆ.!!! ನನ್ನ ಬಾಲ್ಯದ ಗೆಳೆಯನಿಗೆ ನೆನಪಿನ ಕಾಣಿಕೆ!!!ನಾನು ಆಗತಾನೆ ಒಂದನೇ ತರಗತಿಗೆ ಕಾಲಿಟ್ಟದ್ದ  ಸಮಯ ನಮ್ಮ ಮನೆಗೆ ಅಕ್ಕರೆಯ ಸ್ನೇಹಿತನ ಆಗಮನವಾಯಿತು.ಅವನೋ ಮಹಾ ಮಾತುಗಾರ , ಸಂಗೀತಗಾರ ,ವಾರ್ತಾವಾಚಕ ,ಒಟ್ಟಿನಲ್ಲಿ ನಮ್ಮ ಮನೆಗೆ ವಿಶ್ವದ ದ್ವನಿ ಯಾಗಿದ್ದ. ಹಳ್ಳಿಯಲ್ಲಿ ಬಾಲ್ಯದ ಬದುಕು ಶುರುಮಾಡಿದ್ದ  ನನಗೆ  ಬಾಲ್ಯದ ಗೆಳೆಯನಾಗಿ  ಬಂದಿದ್ದ . ನಾನು ನನ್ನ ಜೀವನದಲ್ಲಿ   ನಾನು ನೋಡಿದ್ದ ಅಚ್ಚರಿಯ ನೋಟದ ಸ್ನೇಹಿತ ಇವನಾಗಿದ್ದ.ಬಾಲ್ಯದಲ್ಲಿ ದೊಡ್ಡವರು ಹಾಕಿದ್ದನ್ನಷ್ಟೇ ಕೇಳುವ ಸುಯೋಗ ನಮಗೆ.ಹಾಸಿಗೆ ಬಿಟ್ಟು ಏಳುವ  ಮುನ್ನ ಬೆಂಗಳೂರು ಆಕಾಶವಾಣಿಯ  ಬೆಳಗಿನ ಗೀತಾರಾಧನ , ನಂತರ ಚಿಂತನ , ಓದುವ ಸಮಯದಲ್ಲಿ ಬರುತಿದ್ದ  ಕನ್ನಡ ವಾರ್ತೆಗಳು. ನಂತರ ಕನ್ನಡ ಚಿತ್ರಗೀತೆಗಳು . ಅದರಲ್ಲಿ ಎಲ್.ಆರ್. ಈಶ್ವರಿಯ  ಕ್ಯಾಬರೆ ಹಾಡುಗಳು ಬಂದರೆ ನಮ್ಮಪ್ಪ ಎಲ್ಲೇ ಇದ್ದರೂ  ಓಡಿಬಂದು ರೇಡಿಯೋ  ಸ್ವಿಚ್ ಆಫ್  ಮಾಡುತ್ತಿದ್ದರು. ಬಹುಷಃ ಮಕ್ಕಳಿಗೆ ಒಳ್ಳೆಯ ಮಾತುಗಳು ಮಾತ್ರ ಕಿವಿಗೆ ಬೀಳಲಿ ಎಂಬ ಉದ್ದೇಶವಿರಬಹುದು.ಹೀಗೆ ಬಂದ ಇವನು ನಿಧಾನವಾಗಿ ಮನೆಯ ಸದಸ್ಯರ ನೆಚ್ಚಿನ ಗೆಳೆಯನಾದ.ನಾನು ಪ್ರಾಥಮಿಕ ಶಾಲೆ ಯಿಂದ ನಾಲ್ಕನೇ ತರಗತಿ ಮುಗಿಸಿ ಮಳವಳ್ಳಿ ಪಟ್ಟಣಕ್ಕೆ ಮಿಡಲ್ ಸ್ಕೂಲ್ ಗೆ ಐದನೇ ಕ್ಲಾಸಿಗೆ ಸೇರಿದ ಮೇಲೆ ಇವನ ಸ್ನೇಹ ಬಲವಾಗಿ ನಾನು ಇವನ ಸನಿಹ ಕೂರತೊಡಗಿದೆ.ಇವನ ಆಕಾರ ನನಗೆ ಮೆಚ್ಚುಗೆ ಯಾಗಿ ನಾನು ಇವನ ಸೇವೆಗೆ ತೊಡಗಿ ಇವನ ಮಾಲಿಶ್ ಮಾಡುವಷ್ಟು  ಆತ್ಮಿಯನಾದೆ

.


ಇವನೋ ನನಗೆ ತನ್ನ ವಿಶ್ವ ರೂಪದ ದರುಶನ ಹಂತ ಹಂತವಾಗಿ ಮಾಡಿಸತೊಡಗಿದ.ಇವನೇ ಸ್ವಾಮೀ  ನನ್ನ ನೆಚ್ಚಿನ ಗೆಳೆಯ ಫಿಲಿಪ್ಸ್ ಪ್ರೆಸ್ಟೀಜ್ ರೇಡಿಯೋ . ಪಟ್ಟಣದ ಶಾಲೆಯ ಹುಡುಗನಾದ ನಾನು ಹೊಸ ಹೊಸ ವಿಚಾರಗಳ ಬಗ್ಗೆ  ಮಾಹಿತಿ ತಿಳಿಯುವ ಹಾಗೆ ಮಾಡಿದವರು ನಮ್ಮಪುಷ್ಪಾವತಿ ಮೇಡಂ , ಹೌದು ಅವರು ಮಕ್ಕಳಾದ ನಮಗೆ ರೇಡಿಯೋ ಬಗ್ಗೆ  ಅನೇಕ ಕುತೂಹಲಕಾರಿ ವಿಚಾರ ತಿಳಿಸಿ ನನಗೆ ಆಸಕ್ತಿ ಕೆರಳಲು ಕಾರಣವಾದರು
.ಈ ನನ್ನ ಗೆಳೆಯನೋ ಮನೆಯಲ್ಲಿ ತನಗಾಗಿ ಇಡಲಾಗಿದ್ದ ಮರದ  ಪೆಟ್ಟಿಗೆಯ ಒಳಗೆ ಕುಳಿತು ದರ್ಭಾರು ಮಾಡಿದ್ದ.ಉತ್ತಮ ರೋಜ್ ವುಡ್ ಮರದ ಕ್ಯಾಬಿನೆಟ್ ಹೊಂದಿ ನಾಲ್ಕು ಬ್ಯಾಂಡ್ ಗಳನ್ನೂ ಹೊಂದಿ ಸುರ ಸುಂದರಾಂಗ ತಾನೆಂದು ಬೀಗಿದ್ದಇನ್ನು ಇವನನ್ನು ಸ್ವ್ಟಿಚ್ ಆನ್ ಮಾಡಿದರೆ ನಿಧಾನವಾಗಿ ಎಲ್ಲ ಭಾಗಗಳಿಗೆ  ವಿಧ್ಯುತ್ ಹರಿದು ಇವನು ಮಾತಾಡಲು ಶುರುಮಾಡಲು ಕನಿಷ್ಠ ಐದು ನಿಮಿಷ ಬೇಕಿತ್ತು.ಪುಣ್ಯಾತ್ಮನ ದೇಹದೊಳಗೆ ಯೊಳಗೆ .ಅರ್ತವಾಗದ

ಗಾಜಿನ ಗುಪ್ಪೆಗಳ ಆಕಾರದ  ಬಲ್ಬುಗಳು ವೈರುಗಳ ಸರಮಾಲೆ, ಕಾರ್ಬನ್ ತುಂಡು , ಸ್ಪೀಕರ್ ಇತ್ಯಾದಿಗಳ  ಸಾಮ್ರಾಜ್ಯ !!! ಮುಖದಲ್ಲಿ ನಗು ತುಂಬಿದ ಹಾಗೆ ಕಾಣುವ ವಿವಿಧ ಆಕಾರದ ಗುಂಡಗಿನ ತಿರುಗುವ ನಾಬ್ ಗಳು. ತನ್ನ ಸಾಮರ್ಥ್ಯದಲ್ಲಿ  ಸಿಗುವ

 ಭಾರತದ ವಿವಿಧ ಆಕಾಶವಾಣಿ ಕೇಂದ್ರಗಳ


 


ವಿವರ ಹೊಂದಿದ ಡಿಸ್ ಪ್ಲೇ  ಹೊಂದಿದ್ದ  ಒಟ್ಟಿನಲ್ಲಿ ಸುರ ಸುಂದರ.ಇನ್ನು ನಾನು ಇವನನ್ನು ಅರ್ಥಮಾಡಿಕೊಳ್ಳುತ್ತ ಹೋದಂತೆ ನನ್ನ ಜ್ಞಾನಕ್ಕೆ ಸಮೃದ್ದ ಭೋಜನ ನೀಡುವ ಕೆಲಸ ಇವನದಾಯಿತು. ಪ್ರತಿ ಭಾನುವಾರದಲ್ಲಿ ಬೆಂಗಳೂರಿನ ಆಕಾಶವಾಣಿಯ   ಬಾಲಜಗತ್ತಿನ ಕಾರ್ಯಕ್ರಮ ನನಗೆ ಮೊದಲ ಪ್ರಿಯವಾದ ಕಾರ್ಯಕ್ರಮ  ಅದರಲ್ಲಿ ಬರುತ್ತಿದ್ದ ನಿರೂಪಕಿ  ನಿರ್ಮಲ ರವರ ದ್ವನಿ ಹಾಗು ಅವರು ಹೇಳುತ್ತಿದ್ದ ಕಥೆಗಳು , ಕಾರ್ಯಕ್ರಮದ ನಿರೂಪಣೆ  ಅವರ ಮುಖ ನೋಡದಿದ್ದರೂ  ಅವರ ಧ್ವನಿ ಇಂದಿಗೂ ಮರೆಯದೆ ಹಾಗೆ ಇದೆ.ನಾನು ಮರೆಯಲಾಗದ ಸಂಗೀತ ದಿಗ್ಗಜರ ಧ್ವನಿ ಕೇಳಿದ್ದು ಇದೆ ರೇಡಿಯೋ ದಿಂದ ,ಚಿಕ್ಕವಯಸ್ಸಿನಲ್ಲೇ ನನಗೆ ಕಾಳಿಂಗ ರಾಯರ , ಸುಬ್ಬಲಕ್ಷ್ಮಿಯವರ,ವಸಂತಕುಮಾರಿಯವರ ,ಭೀಮಸೇನ ಜೋಷಿಯವರ , ಮಲ್ಲಿಕಾರ್ಜುನ ಮನ್ಸೂರರ ಹಾಗು ಇನ್ನೂ ಬಹಳಷ್ಟು ಮಹನೀಯರ   ಹಾಡುಗಳ ಕೇಳುವ ಸೌಭಾಗ್ಯ ಕರುಣಿಸಿದ ಇವನು.ಇನ್ನು ವಾರ್ತಾವಾಚಕರಾದ  ಶ್ರೀಯುತರಾದ ಉಪೇಂದ್ರ ರಾವ್, ರಂಗರಾವ್, ಶುಭಾದಾಸ್, ರಾಮ್ ಕೃಷ್ಣ , ಪ್ರದೇಶ ಸಮಾಚಾರ ವಾಚಕರಾದ  ಎಂ. ಎಸ. ಪುರುಷೋತ್ತಮ್ , ನಾಗಮಣಿ ಎಸ. ರಾವ್. ಕೃಷಿ ದರ್ಶನ ಕಾರ್ಯಕ್ರಮದ ಜಯಣ್ಣ , ಮನೆಯ ಮಾತಿನ ಏ.ಎಸ ಮೂರ್ತಿ , ಇವರೆಲ್ಲರೂ ನನಗೆ ಪ್ರತಿನಿತ್ಯ ರೇಡಿಯೋ ದಲ್ಲಿ ಸ್ವಚ್ಛ ಕನ್ನಡ  ಮಾತಾಡಿ ಅಂದಿನ ಸೂಪರ್ ಸ್ಟಾರ್ ಗಳಾಗಿ ಪ್ರತಿ ಕನ್ನಡಿಗನ ಮನದಲ್ಲಿ ನೆಲೆ ಕಂಡಿದ್ದರು.ಹಾಗೂ ಹೀಗೂ ಹೈ ಸ್ಕೂಲ್ ತಲುಪಿದ ನನಗೆ ಕನ್ನಡ ಕಾರ್ಯಕ್ರಮದ ಜೊತೆಗೆ ಹಿಂದಿ ಹಾಡುಗಳು ಪ್ರಿಯವೆನಿಸಿ ಶ್ರೀ ಲಂಕಾ ಬ್ರಾಡ್ ಕಾಸ್ಟಿಂಗ್  ಕಾರ್ಪೋರೇಶನ್ , ಹಾಗು ವಿವಿಧ ಭಾರತಿ  ಕೇಂದ್ರಗಳ ಪರಿಚಯವಾಗಿ,ಮನ್ನಾಡೇ, ಮೊಹಮದ್ ರಫಿ,ಮುಖೇಶ್, ಮಹೇಂದ್ರ ಕಪೂರ್,ಕಿಶೋರ್ ಕುಮಾರ್, ಲತಾ,,ಉಷಾ, ಮಂಗೇಶ್ಕರ್ ಗಳು ,ಆಶಾ ಭೋಂಸ್ಲೆ , ಗೀತಾ ದತ್, ಇವರ ಹಾಡಿನ  ಮೋಡಿಗೆ ಬಿದ್ದಿದ್ದೆ.ನಂತರ ಮೈಸೂರಿನ ನನ್ನ ಸಂಭಂದಿ ಕೇಳಿಸಿದ ಇಂಗ್ಲೀಶ್ ಹಾಡಿನ ಸಂಗೀತಕ್ಕೆ  ಮನಸೋತು ಅಂತರಾಷ್ಟ್ರೀಯ ರೇಡಿಯೋ ಕೇಂದ್ರಗಳ ಹುಡುಕಾಟ ನಡೆಸಲು ಶುರುಮಾಡಿದೆ.   25   ನೆ  ಮೀಟರ್ ಬ್ಯಾಂಡಿನಲ್ಲಿ ಶ್ರೀಲಂಕಾ ಬ್ರಾಡ್ ಕಾಸ್ಟಿಂಗ್ ಕಾರ್ಪೋರೇಶನ್ , ಬಿ.ಬಿ. ಸಿ. ರೇಡಿಯೋ ದೊಇ ಛೆ ಬೆಲ್ಲ  ಜರ್ಮನಿ,ಅರ್ಥವಾಗದ ಅರೇಬಿಯನ್ , ಜಪಾನಿ,ಚೀನಿ ಭಾಷೆಗಳ   ಕಾರ್ಯಕ್ರಮಗಳ ಭರಾಟೆ., 31 ನೆ ಬ್ಯಾಂಡಿನಲ್ಲಿ ರೇಡಿಯೋ ಮಾಸ್ಕೋ , ವಿ.ಓ.ಏ .[ವಾಯ್ಸ್ ಆಫ್  ಅಮೇರಿಕ , ವಿವಿಧ ಭಾರತಿ, ಶ್ರೀಲಂಕಾ ಬ್ರಾಡ್ಕಾಸ್ಟಿಂಗ್  ಕೋ. ಇಂಗ್ಲಿಷ್ , ಇವುಗಳ ಜಾಲ,13 , 16 , 19  ಮೀಟರ್ ಬ್ಯಾಂಡಿನಲ್ಲಿ ರೇಡಿಯೋ ಆಸ್ಟ್ರೇಲಿಯ , ಬಿ ಬಿ ಸಿ , ಏ. ಬಿ. ಸಿ. ಕೊರಿಯನ್ , ಉರ್ದು  ,ಇವುಗಳ ಜಾಲ ಹರಿದಾಡುತ್ತಿತ್ತು. ರಜೆ ಬಂತೆಂದರೆ  ಇವುಗಳ ಜಾಲಾಟದಲ್ಲಿ ದಿನ ಕಳೆದದ್ದು ತಿಳಿಯುತ್ತಿರಲಿಲ್ಲ.ಇವುಗಳ ಜಾಲಾಟದಲ್ಲಿ ನಾನು ಮೈಕೆಲ್  ಜಾಕ್ಸನ್ , ಲೈಒನೆಲ್  ರಿಚಿ , ಬೀಟಲ್ಸ್ , ಒಸಿಬಿಸ್ಸಾ , ಬೋನಿ ಎಂ,ಅಬ್ಬಾ ಡೋನಾ ಸುಮ್ಮರ್, ಎಲ್ವಿಸ್ ಪ್ರೀಸ್ಲೆ, ಬಕಾರ , ಬಹಳಷ್ಟು ಪಾಪ್  ಗಾಯಕರ  ಸಂಗೀತ ಕೇಳಿದ್ದೆ.ಬಿ.ಬಿ.ಸಿ ವಾರ್ತೆ ಕೇಳಿದ್ದೆ, ರೇಡಿಯೋ ಆಸ್ಟ್ರೇಲಿಯಾದ  ನಿರೂಪಕ ಭಾರತೀಯ ಸಂಜಾತ ಚಕ್ರಪಾಣಿ ದ್ವನಿ ಕೇಳಿದ್ದೆ. ನನ್ನ ಜೀವನದಲ್ಲಿ ಅರ್ಥ ಪೂರ್ಣ ಮಾಹಿತಿ ನೀಡಿದ ನನ್ನ ಗೆಳೆಯ ಇಂದು ಬೆಲೆ ಇಲ್ಲದವನಾಗಿ  ಅರೋಗ್ಯ ಸರಿ ಇಲ್ಲದೆ ಮೂಲೆ ಯಲ್ಲಿ  ಕುಳಿತಿದ್ದಾನೆ. ಇವನನ್ನು ಸರಿಪಡಿಸಲು ಬಿಡಿ ಬಾಗ   ಸಿಗದೆಂದು ತಾಂತ್ರಿಕ ಪರಿಣಿತರು ಕೈಚೆಲ್ಲಿ ಕುಳಿತ್ತಿದ್ದಾರೆ. ಕೆಲವರು ಇವನನ್ನು ನೋಡಿದರೆ ಏನ್ ಸಾರ್ ಈ ಟೀ. ವಿ ಕಾಲದಲ್ಲಿ ಇದನ್ನು ಯಾಕೆ ರಿಪೇರಿ ಮಾಡಿಸಲು ಹೆಣಗುತ್ತಿರಿ ಅಂಥಾ ಬುದ್ದಿ ಹೇಳುತ್ತಾರೆ. ಮೂಲೆಯಲ್ಲಿ ನನ್ನ ಅಸಹಾಯಕ ರೇಡಿಯೋ ನಮ್ಮಿಬ್ಬರ ಸಂಭಂದಕ್ಕೆ ಬೆಲೆ ಇಲ್ಲ ವೆಂದು ಅರಿತು , ಗತಕಾಲದ ನೆನಪು ಗಳ ಮೆಲಕು ಹಾಕುತ್ತಾ ಮೂಲೆಯಲ್ಲಿ ಕುಳಿತಿದೆ.ಇವತ್ತು ಕಣ್ಣಿಗೆ ಬಿದ್ದ ಈ ಅಪರೂಪದ ಜೀವದ ಗೆಳೆಯನಿಗೆ ಜೀವ ಕೊಡಲಾಗದೆ  ಅಸಹಾಯಕನಾಗಿ ನೆನಪಿನ ಕಥೆಗಳ ಕಾಣಿಕೆ ನೀಡಿ ಸ್ಮರಿಸಿದ್ದೇನೆ.[ಹಾಗೆ ಇವನ ಅರೋಗ್ಯ ಸರಿ ಮಾಡುವ  ನುರಿತ ತಂತ್ರಜ್ಞರಿದ್ದರೆ ದಯಮಾಡಿ ತಿಳಿಸಿ
.

ನನ್ನ ಬಾಲ್ಯದ ಗೆಳೆಯನನ್ನು ಉಳಿಸಿಕೊಳ್ಳುತ್ತೇನೆ.]ಗೆಳೆಯ ನಮ್ಮ ಸ್ನೇಹದ ದಿನಗಳು ಚಿರಾಯು ನಿನ್ನನ್ನು ಇಷ್ಟುದಿನ  ಮರೆತದಕ್ಕೆ  ನನ್ನ ಕ್ಷಮಿಸಿಬಿಡು!!!

Monday, July 5, 2010

ಈ ಅದ್ಭುತ ಹೆಣ್ಣು ಹುಡುಗಿ ಮಕ್ಕಳನ್ನು ಹೆರಲಿಲ್ಲ !!! ಆದರೆ ನೂರಾರು ಮಕ್ಕಳನ್ನು ಸೃಷ್ಟಿಸಿದ್ದಾಳೆ
ನಮ್ಮ ಭೂಮಿ ಮೇಲೆ ಅದ್ಭುತ ಸೃಷ್ಟಿ ಮಾಡುವ  ಹಲವರು ಇದ್ದಾರೆ.ಇದರಲ್ಲಿ ಕೆಲವರ ಕಾರ್ಯ  ವಾಹ್ ಅನ್ನಿ ಸಿದರೆ ಕೆಲವರದು ಇವರು ಇಷ್ಟುದಿನ ಎಲ್ಲಿದ್ದರಪ್ಪಾ ಅನ್ನಿಸದೆ ಇರದು.ಅಂಥಹ  ಒಂದು ಪ್ರತಿಬೆ ಇಲ್ಲಿದೆ .                                                                                                                                                                                                                                                                                         ಅಮೆರಿಕಾದ ಒಂದು ಅಪ್ಪಟ ಪ್ರತಿಭೆ  ಕ್ಯಾಮಿಲ್ಲಿ ಆಲ್ಲೆನ್ .ಇವಳು ಮಕ್ಕಳನ್ನು ಹೆರದಿದ್ದರೂ ತನ್ನ ಕೈಚಳಕದಿಂದ  ನೂರಾರು ಸಾವಿರಾರು ಮಕ್ಕಳನ್ನು ಸೃಷ್ಟಿಸಿ ವಿಶ್ವಕ್ಕೆ ತನ್ನ ಪ್ರತಿಬೆ ಪರಿಚಯಿಸಿ ವಿಸ್ಮಯಗೊಳಿಸಿದ್ದಾಳೆ .ಅಲ್ಲ ಸ್ವಾಮಿ ಬಾದಾಮಿ, ಸಕ್ಕರೆ, ಮೊಟ್ಟೆ, ಮತ್ತು ಕೇಕ್ ತಯಾರಿಸಲು ಬಳಸುವ ಹಾಗು ಅಗತ್ಯವಾದ ಸಾಮಗ್ರಿಗಳಿಂದ ಇವಳು ಮಕ್ಕಳನ್ನು ಸೃಷ್ಟಿಕರ್ಥನ ತಲೆ ಮೇಲೆ ಹೊಡೆದಂತೆ ತಯಾರುಮಾದುತ್ತಾಳೆ.ಇವಳು ಎರಡು ಇಂಚಿನಿಂದ ಐದು ಇಂಚಿನವರೆಗೆ,ಸಣ್ಣ ಗಾತ್ರದ ಹಾಗು ನಿಜಗಾತ್ರದ ಮಕ್ಕಳ ಬೊಂಬೆ ಮಾಡುವುದಾಗಿ ತಿಳಿದು  ಬರುತ್ತದೆ.ಹೆಚ್ಚಿನ ಮಾಹಿತಿಗೆ www.camilleallen.com  ಗೆ ಭೇಟಿಕೊಡಿ.ಬನ್ನಿ   ಕೆಲವು  ಮಕ್ಕಳಚಿತ್ರ ನೋಡುವ .ಕೆಳಗಿನ ಚಿತ್ರ..
01[ ಅಮ್ಮ ನ  ಮಮತೆಯ ಬೆರಳಿನಲ್ಲಿ } ಇನ್ನು ಎರಡನೆಯ
[ಅಮ್ಮ ನಿನ್ನ ಕೈಯಲ್ಲಿ ಕಂದಾ ನಾನು] ಅಂಥಾ ಅಂತಿದೆ, ವಿಸ್ಮಯ  ಮಕ್ಕಳ ಮನಸೂರೆಗೊಳ್ಳುವ ಇನ್ನಷ್ಟು ಚಿತ್ರಗಳು
ನಿಮಗಾಗಿ.
[ ಮುದ್ದು ಕಂದನ ಎತ್ತರ !!]