|
ಮುತ್ತಿನ ಕೆರೆ |
"ಸೋಂದೆ ಅರಸರ ಗದ್ದಿಗೆ" ಯಿಂದ ಸುಮಾರು ಎರಡು ಮೂರು ಕಿ.ಮೀ. ಕ್ರಮಿಸಿದ ನಮ್ಮನ್ನು ಸ್ವಾಗತ ಮಾಡಿದ್ದು ಒಂದು
ಮುತ್ತಿನ ಕೆರೆ ,ಅದರ ಸನಿಹ ಒಂದು ವೆಂಕಟರಮಣ ದೇವಾಲಯ.............ಅದರ ಹೆಸರು
ಸುಧಾಪುರ !!!!! ಪಕ್ಕದಲ್ಲೇ ಒಂದು ಜೈನ ದಿಗಂಬರ ದೇವಾಲಯ ಸುಂದರ ಪ್ರಶಾಂತವಾದ ಪ್ರದೇಶ. ಸುತ್ತಲೂ ಹಸಿರು ಪರಿಸರದ ನಡುವೆ "ಸುಧಾಪುರ" ಇತಿಹಾಸ ಬೆರೆತು ಹೋಗಿದೆ.
|
ಮುತ್ತಿನ ಕೆರೆಗೂ ಒಂದು ಇತಿಹಾಸವಿದೆ. |
ಬನ್ನಿ ಮೊದಲು ಮುತ್ತಿನ ಕೆರೆಗೆ ಹೋಗೋಣ , ಸಾಮಾನ್ಯವಾಗಿ ನಾವು ನೋಡುವ ಯಾವುದೇ ಕೆರೆ ಬಗ್ಗಡದ ನೀರನ್ನು ಹೊಂದಿ ಪಾಚಿ ತುಂಬಿಕೊಂಡು ದರ್ಶನ ನೀಡುತ್ತವೆ. ಆದರೆ ಅಚ್ಚರಿ ಎಂದರೆ ಈ ಮುತ್ತಿನ ಕೆರೆ ತಿಳಿ ನೀರಿನಿಂದ ಕೂಡಿ ತನ್ನ ಸುತ್ತಲ ಪರಿಸರಕ್ಕೆ ಕನ್ನಡಿಯಾಗಿ ಕಂಗೊಳಿಸಿತ್ತು. ಸುತ್ತಲೂ ಮೆಟ್ಟಿಲುಗಳನ್ನು ನಿರ್ಮಿಸಿದ್ದು ಚೌಕಾಕೃತಿಯನ್ನು ಹೊಂದಿದೆ .ಈ ಕೆರೆಯನ್ನು" ಜೈನ ಮಹಾರಾಣಿ ಬೈಲಾದೇವಿ" ತನ್ನ ಪತಿಯ ಕಾಯಿಲೆ ವಾಸಿಯಾಗುವಂತೆ ಹರಸಿಕೊಂಡು ತನ್ನ ಮೂಗುತಿಯ ನತ್ತಿನಲ್ಲಿದ್ದ ಮುತ್ತಿನ ಬೆಲೆಯಿಂದ ಈ ಕೆರೆಯನ್ನು ನಿರ್ಮಿಸಿದಳೆಂದೂ , ಅದಕ್ಕೆ ಈ ಕೆರೆಯನ್ನು ಮುತ್ತಿನ ಕೆರೆ ಎಂದು ಕರೆಯುವುದಾಗಿ ಹೇಳಲಾಗುತ್ತದೆ. ಮತ್ತೊಂದು ವಿಚಾರ ಮುತ್ತಿನಕೆರೆ , ಸೋಂದಾ , ಸುಧಾಪುರ , ಸ್ವಾದಿ ಎಲ್ಲಾ ಹೆಸರುಗಳನ್ನೂ ಒಂದೇ ಪ್ರದೇಶಕ್ಕೆ ಕರೆಯುತ್ತಾರೆ ಈ ಬಗ್ಗೆ ಮುಂದೆ ತಿಳಿಯೋಣ. .
|
ಸ್ವಾದಿ ದಿಗಂಬರ ಅಕಲಂಕ ಪೀಟ [ ಜೈನ ಬಸದಿ] |
ಈ ಕ್ಷೇತ್ರ ಜೈನ ಕ್ಷೇತ್ರ ಆಗಿತ್ತೆಂಬ ಬಗ್ಗೆ ಸನಿಹದಲ್ಲೇ ಜೈನ ಧರ್ಮದ ದಿಗಂಬರ ಬಸದಿ ದರ್ಶನ ನೀಡುತ್ತದೆ.ಇದು ಜೈನರಿಗೂ ಕೊಡ ಪವಿತ್ರ ಯಾತ್ರಾ ಸ್ಥಳ. ಬಸದಿ ಬಾಗಿಲು ಮುಚ್ಚಿದ್ದ ಕಾರಣ ಒಳಗಡೆ ಹೋಗಿ ನೋಡಲಾಗಲಿಲ್ಲ . ಅಲ್ಲಿಂದ ತೆರಳಿ ಸನಿಹದಲ್ಲೇ ಇದ್ದ ಮುತ್ತಿನಕೆರೆ ಸಂಕಟ ಹರ ವೆಂಕಟರಮಣ ದೇವಾಲಯ ತಲುಪಿದೆವು.ಹಾಗೆ ಮತ್ತೊಂದು ವಿಚಾರ ಸ್ವಾದಿ ಕ್ಷೇತ್ರಕ್ಕೆ ಜೈನ ಧರ್ಮವು ಬಹಳ ಹಿಂದೆ ಅಂದರೆ ಸುಮಾರು 2 ಅಥವಾ 3 ನೇ ಶತಮಾನದಲ್ಲಿ ಬಂತೆಂದು ಹೇಳುತ್ತಾರೆ. ಈ ದೇವಾಲಯದಲ್ಲಿ ಆದಿನಾಥ ಹಾಗು ಚಂದ್ರ ಪ್ರಭ ಮೂರ್ತಿಗಲಿರುವುದಾಗಿ ತಿಳಿದು ಬರುತ್ತದೆ.ಕ್ರಿ.ಷ.900 ರಲ್ಲಿ ಸ್ವಾಧಿ ಕ್ಷೇತ್ರಕ್ಕೆ ಶ್ರವಣಬೆಳಗೊಳದ ರುವಾರಿ "ಚಾವುಂಡ ರಾಯರ " ಮಗ "ಜಿನದೇವ " ಹಲವು ಸೌಲಭ್ಯಗಳನ್ನು ಕಲ್ಪಿಸಿದನೆಂದು ಹೇಳುತ್ತಾರೆ.
|
ಮುತ್ತಿನಕೆರೆ ಶ್ರೀ ವೆಂಕಟರಮಣ ದೇವಾಲಯ. |
ದೇವಾಲಯದ ಆವರಣಕ್ಕೆ ಬಂದ ನಮಗೆ ಒಂದು ಗುಂಪಿನೊಡನೆ ದೇವಾಲಯದ ಅರ್ಚಕರು ಹೊರಗೆ ಬರುತ್ತಿದ್ದರು ನಾವು ದೇವಾಲಯವನ್ನು ಪ್ರವೇಶಿಸಲು ಹೋಗುತ್ತಿದ್ದಂತೆ ತಮಗೂ ಇದಕ್ಕೂ ಸಂಬಂಧ ವಿಲ್ಲದಂತೆ ಆವರಣದ ಗೇಟ್ ಮುಚ್ಚಿಕೊಂಡು ಬೀಗಹಾಕದೆ ತೆರಳಿದರು. ಇನ್ನೇನು ಮಾಡೋದು ನಾವೇ ಬಾಗಿಲನ್ನು ತೆಗೆದು ದೇವಾಲಯದ ಪ್ರವೇಶ ಪಡೆದೆವು. ಮೆಟ್ಟಿಲುಗಳನ್ನು ಹತ್ತಿದ ನಮಗೆ ಸ್ವಾಗತ ನೀಡಿದ್ದೆ ವಿಶಿಷ್ಟ ವಾದ "ಗರುಡ ಕಂಭ" , ಎತ್ತರದ ಕಲ್ಲಿನ ಕಂಭ ತನ್ನದೇ ಆದ ವೈಶಿಷ್ಟ್ಯ ಹೊಂದಿದೆ . ಕ್ಯಾಮರದಲ್ಲಿ ಲೆನ್ಸ್ ಜೂಮ್ ಮಾಡಿದೆ ಅಚ್ಚರಿಯಾಯಿತು,
|
ಎತ್ತರದ ಗರುಡ ಕಂಭ |
ನಾನು ಬಹುಷಃ ಯಾವುದೇ ದೇವಾಲಯದಲ್ಲಿ ನೋಡಿರಲಿಲ್ಲ ಎತ್ತರದ "ಗರುಡ ಕಂಭ " ದ ಮೇಲಿನ ತುತ್ತ ತುದಿಯಲ್ಲಿ ಒಂದು ಸುಂದರ ಮಂಟಪ ಸಿರ್ಮಿಸಿ ವಿಷ್ಣು ವಾಹನ "ಗರುಡ ಮೂರ್ತಿ" ಯನ್ನು ಸ್ಥಾಪಿಸಿದ್ದರು . ಬಹಳ ಅಪರೂಪದ ಚಿತ್ರ ಮನಸೆಳೆಯಿತು.
|
ಸುಂದರ ಕೆತ್ತನೆಯ ಕಲ್ಲಿನ ಗೋಡೆ |
|
ಕಲ್ಲಿನಲ್ಲಿ ಅರಳಿದ ಕಲೆ |
|
ದೇವಾಲದ ಸುತ್ತಲೂ ಅಂದದ ಚಲುವಿನ ಚಿತ್ತಾರ |
|
ದೇವಾಲಯ ಚಾವಣಿಯ ದೃಶ್ಯ |
ದೇವಾಲಯ ಪ್ರದಕ್ಷಿಣೆ ಹೊರಟೆ ಆ ದೇವಾಲಯದಲ್ಲಿ ಹಾಕಿದ್ದ ಫಲಕದಲ್ಲಿ ಈ ದೇವಾಲಯ ಹದಿನೇಳನೆ ಶತಮಾನದಲ್ಲಿ ನಿರ್ಮಾಣವಾಯಿತೆಂದು ತಿಳಿಸಲಾಗಿದೆ. ಹಾಗಿದ್ದರೆ ಹದಿನೇಳನೆ ಶತಮಾನದಲ್ಲಿ ಈ ಪ್ರದೇಶದಲ್ಲಿ ಆಳ್ವಿಕೆಯಲ್ಲಿದ್ದ "ಸೋಂದಾ ರಾಜ ಇಮ್ಮಡಿ ಸದಾಶಿವ ರಾವ್ " ಕಾಲದಲ್ಲಿ ನಿರ್ಮಿತ ಆಗಿರುವುದೇ ಎಂಬ ಬಗ್ಗೆ ಸಂಶೋಧನೆ ಅಗತ್ಯ ವಿದೆ. ದೇವಾಲಯದಲ್ಲಿನ ಕಲಾಕೃತಿಗಳು "ವಿಜಯನಗರ " ಹಾಗು "ಕದಂಭ "ಶೈಲಿಯನ್ನು ಹೋಲುತ್ತವೆ ಆದರೂ ಈ ದೇವಾಲಯದಲ್ಲಿ ನನ್ನ ಕಣ್ಣಿಗೆ ಯಾವುದೇ ಶಾಸನ ಕಂಡು ಬರಲಿಲ್ಲ. ದೇವಾಲಯ ಹೊರ ಆವರಣ ಪ್ರದಕ್ಷಿಣೆ ಬಂದು ದೇವಾಲಯ ಪ್ರವೇಶ ಮಾಡಿದೆವು.
|
ದೇವಾಲಯ ಒಳ ಆವರಣ. |
|
ಮುತ್ತಿನಕೆರೆ ಶ್ರೀ ವೆಂಕರಮಣ ಸ್ವಾಮೀ ದರ್ಶನ |
ಹೊರಗೆ ಬಿಸಿಲಿನ ಝಳ ಜೋರಿದ್ದರೆ ದೇವಾಲಯ ಒಳಗೆ ತಣ್ಣನೆ ವಾತಾವರಣ ಮನಸಿಗೆ ಶಾಂತಿ ನೀಡಿತು. ಒಳ ಆವರಣದಲ್ಲಿ ಹಾಗೆ ಕಣ್ಣು ಆಡಿದವು ವಿಷ್ಣುವಿನ ವಿವಿಧ ಅವತಾರಗಳ ಸುಂದರ ಮೂರ್ತಿಗಳ ಅನಾವರಣ ಆಲ್ಲಿ ಆಗಿತ್ತು , ಗರ್ಭ ಗುಡಿಯ ಬಾಗಿಲಿಗೆ ಬೀಗ ಹಾಕಲಾಗಿತ್ತು, ಆದರೂ ಬಾಗಿಲಿನಲ್ಲಿ ನಿರ್ಮಿಸಲಾಗಿದ್ದ ಎರಡು ಚಿಕ್ಕ ವೃತ್ತಾಕಾರದ ಕಂಡಿಯಲ್ಲಿ ಸರಳುಗಳನ್ನು ಅಳವಡಿಸಿ ಕಿಟಕಿಯಂತೆ ಮಾಡಲಾಗಿತ್ತು. ಮೊದಲು ದೇವರ ದರ್ಶನ ಪಡೆದು ನಂತರ ನನ್ನ ಕ್ಯಾಮರ ಲೆನ್ಸ್ ಸರಿ ಹೊಂದಿಸಿ ಚಿತ್ರ ತೆಗೆದೆ . ಮನಸಿನಲ್ಲಿ ಏನೋ ಒಂದುತರಹ ಖುಷಿ ಮೂಡಿತ್ತು, ಉತ್ಸಾಹ ಮತ್ತಷ್ಟು ಮೂಡಿತು,
|
ಈ ನದಿಯಲ್ಲಿ ಹರ್ಷ ಬೈಕ್ ಓಡಿಸಿದ್ದು |
ದೇವಾಲಯದ ಹೊರಗೆ ಬಂದು ಮುತ್ತಿನ ಕೆರೆಯ ದಡದಲ್ಲಿ ಸ್ವಲ್ಪ ಹೊತ್ತು ನಾನೂ ಹರ್ಷ ಕುಳಿತೆವು. ಎರಡು ಹಕ್ಕಿಗಳು ಹಾರಾಡುತ್ತಾ ಇಳಿಯುತ್ತಾ ನೀರಲ್ಲಿ ಆಟ ಆಡುತ್ತಿದ್ದವು , ಹೆಚ್ಚು ಕಾಲಹರಣ ಮಾಡುವುದು ಬೇಡವೆಂದು ಬೈಕ್ ಬಳಿ ಬಂದೆವು. ನಮ್ಮ ಹರ್ಷ''ಸಾರ್ ಎಂತಹ ದೇವಾಲಯ ಸಾರ್ ಇಲ್ಲಿಂದ ವಾಪಸ್ಸು ಹೋಗೋಕೆ ಮನಸು ಬರ್ತಾ ಇಲ್ಲ''. "ಆದರೂ ಮತ್ತೊಂದು ಜಾಗ ನೋಡಲೇ ಬೇಕು ಬನ್ನಿ ಹೋಗೋಣ " ಅಂತಾ ಬೈಕ್ ಸ್ಟಾರ್ಟ್ ಮಾಡಿದ ನಮ್ಮ ಪಯಣ ಹೊರಟಿತು , ಇಲ್ಲಿಂದ ನಾವು ಸ್ವಲ್ಪ ಕಾಡಿನ ಹಾದಿ ಯಲ್ಲಿ ಸಾಗಿದೇವು , ಬೈಕ್ ಓಡಿಸುತ್ತಿದ್ದ ಹರ್ಷ ತನ್ನ ಬೈಕ್ ಅನ್ನು ಅಲ್ಲೇ ಅಡ್ಡಲಾಗಿ ಸಿಕ್ಕಿದ ಒಂದು ಸಣ್ಣ ನದಿಯೊಳಗೆ ಓಡಿಸಿಯೇ ಬಿಟ್ಟ ನನಗೋ ಅಚ್ಚರಿ , ಆದರೂ ಅನಿರೀಕ್ಷಿತ ಚಾಲನೆಯಿಂದ ಸ್ವಲ್ಪ ಗಲಿಬಿಲಿ ಗೊಂಡೆ , "ಇದೇನು ಹರ್ಷ ನದಿಯೊಳಗೆ ಓಡಿಸಿದ್ದು ಯಾಕೆ ? ಇಳಿದು ಹೊಗೊಬಹುದಿತ್ತು" ಅಂದೇ ಅದಕ್ಕೆ :"ಸಾರ್ ಹೆದರ ಬೇಡಿ ನಾನು ಇಲ್ಲಿಗೆ ಬಂದಿದ್ದೇನೆ " ಎಂಬ ಅಭಯದ ಮಾತುಗಳು ಬಂತು. ಸಾವರಿಸಿಕೊಂಡು "ಹರ್ಷ ಈ ನದಿ ಯಾವುದು?" ಎಂದೇ " ಇದಾ ಸಾರ್ ಸಹಸ್ರಲಿಂಗದಲ್ಲಿ ಕಂಡಿತಲ್ಲಾ ಅದೇ ಶಾಲ್ಮಲಾ ನದಿ ಸಾರ್" .
|
ಪೊದೆಗಳ ನಡುವೆ ಕಂಡ ಪಿರಂಗಿ |
ನದಿ ದಾಟಿ ಸ್ವಲ್ಪ ದೂರದಲ್ಲಿ ಬೈಕ್ ನಿಲ್ಲಿಸಿ ನಡೆಯಲು ಆರಂಭಿಸಿದೆವು ಅಲ್ಲೇ ಇದ್ದ ಒಂದು ಸಣ್ಣ ಗುಡ್ಡ ಏರಿದ ನಾವು ಕಾಡಿನ ವಾತಾವರಣ ಇದ್ದ ಜಾಗದ ಒಳಗೆ ಬಂದಿದ್ದೆವು ಅಲ್ಲಿ ಎತ್ತರದ ಪ್ರದೇಶದಲ್ಲಿ ಪೊದೆಗಳ ನಡುವೆ ನಮ್ಮತ್ತ "ದುರುಗುಟ್ಟುತ್ತಾ " ನೋಡುತ್ತಿತು ಒಂದು ಪಿರಂಗಿ....................!!!
17 comments:
ಅದ್ಬುತ ಫೋಟೋಗಳು ಬಾಳು ಸರ್ ..ನಾವೂ ಪಿಯು ದಲ್ಲಿ ಎನ್ ಎನ್ ಎಸ್ ಕ್ಯಾಂಪ್ ಅಲ್ಲಿ ಹಾಕಿ ಆ ಕಡೆ ಎಲ್ಲ ಕೊಚ್ಚಿ ,ಅಗೆದು ,ಚೊಕ್ಕ ಮಾಡಿ ಬಂದಿದ್ದೆವು ಆದರೆ ಅವದರ ಮಹತ್ವ , ಹಿನ್ನೆಲೆ ಗೊತ್ತಿರಲಿಲ್ಲ .. ನಿಮ್ಮಿಂದ ಎಲ್ಲ ತಿಳಿದು ಕೊಳ್ಳುತ್ತಿದ್ದೇವೆ .. ನೀವು ಹೇಳುತ್ತಿರುವ ಹರ್ಷನ ದರ್ಶನವನ್ನೂ ಮಾಡಿಸಿ
ಮುತ್ತಿನಂತ ಮಾತೊಂದು ಗೊತ್ತೇನಮ್ಮ..ನಿಮಗೆ ಗೊತ್ತೇನಮ್ಮ..ರೇಡಿಯೋದಲ್ಲಿ ಅಣ್ಣಾವ್ರ ಹಾಡು ಬರುತಿತ್ತು...ಕಂಪ್ಯೂಟರ್ ಪರದೆಯ ಮೇಲೆ ಮುತ್ತಿನ ಕೆರೆಯ ಬಗ್ಗೆ ಲೇಖನ..ವಾಹ್..
ಒಂದೊಂದು ಚಿತ್ರವೂ ಮುತ್ತು..ಚೊಕ್ಕದಾದ, ಶುಚಿಯಾಗಿದ್ದ ತಿಳಿ ಕೊಳ..ಆಹಾ..ಅದರ ಸವಿ ನಿರೂಪಣೆ..ಇತಿಹಾಸವನ್ನು ಒಮ್ಮೆ ತಡಕುವ ಪ್ರಯತ್ನ, ಜೈನರ ಬಸದಿ..ಒಂದಕ್ಕೊಂದು ಮಿಗಿಲು..
ಪ್ರತಿಯೊಂದನ್ನು ಕೂಲಂಕುಶವಾಗಿ ನೋಡುವ, ನಿಮ್ಮ ಕಣ್ಣುಗಳು, ಕ್ಯಾಮೆರಾ ಕಣ್ಣುಗಳು ನಿಜವಾಗಿಯೂ ಪುಣ್ಯ ಮಾಡಿವೆ..ನೀವು ಪ್ರತಿಯೊಂದನ್ನು ಶೂಟ್ ಮಾಡಿ ಮಾಡಿ ನಮಗೆ ದರ್ಶನ ನೀಡಿದರೆ..ನಿಮ್ಮ ಕಡೆಯೇ ಗುರಿ ಮಾಡಿಕೊಂಡು ಕಣ್ಣುಗಳನ್ನ ಹುರಿ ಮಾಡಿಕೊಂಡು ನಿಂತಿರುವ ಪಿರಂಗೆ ತನ್ನ ಕತೆಯನ್ನ ಹೇಳಲು ಬಾಯಿ ತೆರೆದು ಕುಳಿತಿದೆ..
ಅರೆ ದೋಸೆ ಬಂತು, ಚಟ್ನಿ ಬಂತು, ಸಾಂಬಾರ್ ಬಂತು, ಪಲ್ಯ ಬಂತು...ಆಹಾ...ಈಗ ಬಜ್ಜಿ ಬೇಕು..ಬರಲಿ ಬರಲಿ...
Baalu sir,
namgoo matte matte sirsi nenp madta ideera !
Nimma sirsi payana adeshtu dinavo na kane ,illi matra dina sirsige hogi baruvante agta ide nijwaglu .
Sondakke hodwi ,munde tapovana ,saatoddi ,magod ,jenkal gudda ,kavadikere goo suttisi banni nammannoo ,,,
inchu inchoo parachayisuttiddiri ,,
sundaravaagi saaguttide sirsi payana .
Dhanyavaadagalu
Sir,i can just say it is a beautiful journey and excellent information.Nice photos.Only a passionate traveler like you can research the history of any place..I enjoyed all the articles of your Sirsi trip..
ಶಿರಸಿಯ ಪಯಣ ಬಾಲು ... ನಿಮ್ಮ ಜೊತೆ ಚನ್ನಾಗಿ ನಡೆಯುತ್ತಿದೆ..
ಗರುಡಗಂಭದ ವಿಷಯ ನಿಜಕ್ಕೂ ನನಗೆ ಹೊಸದು..
ಮುಂದೆ ಏನು ? ಫಿರಂಗಿ ಯಿಂದ ಗುಂಡು ಹಾರಿಸುವಿರೋ ??
Nice Photos and articles. Belur, Halebeedu nenapaaythu:)
ಕೆಲ ವರ್ಷಗಳ ಹಿಂದೆ ಒಂದು ಬಾರಿ ಶಿರಸಿ ಗೆ ಹೋಗಿದ್ದೆ , ನನ್ ಸಹೋದ್ಯೋಗಿ ಯೊಬ್ಬರ ಮದುವೆಗೆ.. ೬-೭ ಜನರ ಗುಂಪು ಒಂದೇ ಒಂದು ಆಟೋ ಬಾಡಿಗೆಗೆ ಪಡೆದು ಬನವಾಸಿಗೆ ಹೋದ ನೆನಪು ಇನ್ನು ಹಾಗೆ ಇದೆ. ನಿಮ್ಮ ಲೇಖನ ಫೋಟೋ ನೋಡ್ತಿದ್ರೆ ಇನ್ನು ಹಲವಾರು ವೀಕ್ಷಿಸ ಬೇಕಾದ ಜಾಗಗಳು ಅಲ್ಲಿವೆ ಅನ್ನಿಸುತ್ತಿದೆ ...
sir tumba channagide nimma nirupana shili tumba ista aytu
ಬಾಲು ಸರ್,
ನಿಮ್ಮ ಸಿರಸಿಯ ಪ್ರಯಾಣ ತುಂಬಾ ಚೆನ್ನಾಗಿದೆ...ಮುತ್ತಿನ ಕೆರೆ, ವೆಂಕಟರಮಣ ದೇವಾಲಯ, ಅದರ ಕೆತ್ತನೆಗಳು ಇತ್ಯಾದಿಗಳ ಸುಂದರ ಫೋಟೊಗಳ ಜೊತೆಗೆ ಅಲ್ಲಿನ ವಿವರವನ್ನು ನೀಡಿದ್ದೀರಿ...ಮುಂದುವರಿಸಿ ಸರ್..
ಧನ್ಯವಾದಗಳು.
with your guidance sirsi looks different to me..so many places of interest as usual your narrative and photos score 10+
ಹಲವು ಅರಸರು ಹರಕೆ ಮತ್ತು ಜನೋಪಯೋಗಿ ಕಾರಣಗಳಿಂದ ತಮ್ಮ ಸಮಸ್ತ ಭಂಡಾರವನ್ನು ಮಾರಿಯಾದರು ಕೆರೆ ಕಟ್ಟೆ ನಿರ್ಮಿಸಿಕೊಡುತ್ತಿದ್ದರು.
ಮುತ್ತಿನ ಕೆರೆ ಮತ್ತು ಕೃಷ್ಣರಾಜ ಸಾಗರ ಅಣೆಕಟ್ಟು ಇದಕ್ಕೆ ಉದಾಹರಣೆ.
ಮೈಸೂರು ಮಂಡ್ಯ ಭಾಗಕ್ಕೆ ನೀರುಣಿಸಲು ನಿರ್ಮಿಸಿದ ಕೆ.ಆರ್.ಎಸ್ ಇಂದು ತಮಿಳುನಾಡಿಗೆ ನೀರು ಹರೆಸಲು ಸಂಗ್ರಹಕವಾಗಿರುವುದು ಸೋಚನೀಯ!
ಸುಧಾಪುರ ಹೆಸರು ಅದೆಷ್ಟು ಶ್ರಾವ್ಯವಾಗಿದೆ ಸಾರ್.
ದೇಗುಲದ ವಿಶ್ಲೇಷಣೆ ಚೆನ್ನಾಗಿದೆ. ವಿಜಯನಗರ ಮತ್ತು ಕದಂಭ ಶೈಲಿಯ ಲಘು ಪರಿಚಯವಾಯಿತು.
ಮುತ್ತಿನಕೆರೆ ಶ್ರೀ ವೆಂಕರಮಣ ಸ್ವಾಮೀ ಬಲು ಮುದ್ದಾಗಿದ್ದಾರೆ.
ಮುಂದಿನ ಬಾರಿ ಪಿರಂಗಿ ಸಿಡಿಸಿರಿ, ಎದೆಯೊಡ್ಡಿ ಕಾಯುತ್ತಿದ್ದೇವೆ.
ಬಾಲಣ್ಣ...
ಇಂಥಹ ಹತ್ತು ಹಲವಾರು ಗುಡಿ ಗೋಪುರಗಳು ಅಲ್ಲಿವೆ...
ನಮಗೆ ಹಾಗು ಘನ ಸರಕಾರಕ್ಕೆ ಇಬ್ಬರಿಗೂ ಅವುಗಳ ಮಹತ್ವ ಗೊತ್ತಿಲ್ಲ..
ನಿಮಗೆ ಇನ್ನೊಂದು ಕುತೂಹಲಕರವಾದ ವಿಷಯ...
ಸಾಗರ ತಾಲೂಕಿನಲ್ಲಿ ಇರುವ ಹಲವಾರು ಹಳ್ಳಿಗಳ ಹೆಸರು ಸಿರ್ಸಿ.. ಸಿದ್ದಾಪುರ ತಾಲ್ಲೂಕುಗಳಲ್ಲಿವೆ...
ಇದು ಹೇಗೆ ಸಾಧ್ಯ ಎಂದು ನಮ್ಮಲ್ಲಿನ ಹಿರಿಯರೊಬ್ಬರನ್ನು ಕೇಳಿದೆವು..
"ಒಂದು ಕಾಲದಲ್ಲಿ ಸಾಗರ ತಾಲೂಕಿನಲ್ಲಿ ಭೀಕರ ಬರಗಾಲ ಬಂದಿತ್ತು..
ಅಲ್ಲಿನ ಜನರೆಲ್ಲ ಸಿರ್ಸಿ.. ಸಿದ್ದಾಪುರದ ಕಡೆ ಬಂದರು..
ತಮ್ಮ ಊರಿನ್ನ್ನು ಮರೆಯಲಾಗದೆ ಅದೇ ಹೆಸರನ್ನು ಇಟ್ಟುಕೊಂಡರು..
ಮುಂಡಿಗೆಸರ..
ಕಾನುಗೋಡು...
ಬಾಳೆಸರ..
ಭೀಮನ ಕೋಣೆ.. ಇತ್ಯಾದಿ ಸುಮಾರು ಇಪ್ಪತ್ತು ಊರುಗಳ ಹೆಸರು ಪಟ್ಟಿ ಮಾಡಿದ್ದೆವು..
(ಇದು ನಾವು ಕಾಲೇಜಿಗೆ ಹೋಗುವಾಗ..
ಆ ಹಿರಿಯರು ಈಗಿಲ್ಲ..
ಅವರು ಬರಗಾಲ ಬಂದ ವರ್ಷವನ್ನೂ ಹೇಳಿದ್ದರು.. ಈಗ ನೆನಪಿಲ್ಲ)
ಆ ಹಿರಿಯರು ನಿಮ್ಮ ಥರಹವೆ ಇದ್ದರು..
ಕೃಷಿ ಉದ್ಯೋಗವಾಗಿದ್ದರೂ..
ಅವರ ಇತಿಹಾಸ ಪ್ರೇಮದ ಬಗೆಗೆ ಎರಡು ಮಾತಿಲ್ಲ..
ನಿಮ್ಮನ್ನು ನಮ್ಮೂರಿಗೆ ಅಪಹರಿಸಿಕೊಂಡು ಹೋಗಿಬಿಡುತ್ತೇವೆ..
ನಮ್ಮೂರಿನ ಜಾಗಗಳನ್ನೆಲ್ಲ ತೋರಿಸಬೇಕಾಗಿದೆ...
ಜೈ ಹೋ ಬಾಲಣ್ಣ...
ಈ ಲೇಖನವನ್ನು ಓದುತ್ತಾ ಹೋದರೆ ನಮ್ಮನೆಯನ್ನು ಬೇರೆಯಾರೋ "ಇದು ಅರಮನೆ ಕಣಪ್ಪಾ "ಎಂದಾಗ ಎಷ್ಟು ಸಂತೋಷವಾಗುತ್ತ್ತದೆಯೋ ಅಷ್ಟು ಖುಷಿ ಆಗ್ತಾ ಇದೆ....
ಏನಿಲ್ಲಾ ನನಗೊಂದೇ ಬೇಸರ್.... ೨೦ ವರ್ಷ ಅದೇ ಊರಿನಲ್ಲೇ ಇದ್ದರೂ ನನಗೆ ಒಂದು ದಿನವೂ ಇವನ್ನೆಲ್ಲಾ ಈ ತರಹ ಇತಿಹಾಸ ಕೆದಕಿ ನೋಡಬೇಕು ಅನಿಸಿರಲೇ ಇಲ್ಲ...ಒಂದು ಸ್ಥಳವನ್ನು ಹೇಗೆ ನೋಡಬೇಕು ಎಂದುದನ್ನು ತಿಳಿಸಿಕೊಡ್ತಾ ಇರೋದಕ್ಕೆ ನಿಮಗೆ ಅಭಾರಿಯಾಗಿದ್ದೇನೆ...
ಖುಷಿ ಆಗ್ತಿದೆ ಶಿರಸಿಯ ಬಗ್ಗೆ ಓದ್ತಾ ಇರೋದಕ್ಕೆ...ಜೊತೆಗೆ ಪ್ರವಾಸ ಕಥನವನ್ನೂ ಹೇಗೆ ಬ್ಲಾಗಿಸಬೇಕು ಎನ್ನುವುದೂ ಚೂರ್ಚೂರು ಗೊತ್ತಾಗ್ತಾ ಇದೆ...
ಧನ್ಯವಾದ ಬಾಲು ಸರ್..
ಮುಂದಿನ ಸಲ ಶಿರಸಿಗೆ ಬಂದಾಗ ಹೇಳಿ,ಸತ್ಕಾರ ಹೋಟೆಲ್ಲಿನಲ್ಲಿ "ಮಸಾಲೆ ದೋಸೆ"ಪಾರ್ಟಿ ನಿಮ್ಗೆ,ಶಿರಸಿಯವರೆಲ್ಲರ ಪರವಾಗಿ..ಹಾ ಹಾ....
ನಮಸ್ತೆ ....
ಸರ್ ಈ ಲೇಖನಗಳನ್ನು ಓದಿ ಬಹಳ ಖುಷಿ ಆಯ್ತು. ಎಷ್ಟೋಂದು ಮಾಹಿತಿಗಳನ್ನು ಕೊಡ್ತನೇ ಇದ್ದೀರಿ ಮುಂದುವರಿಸಿ ಸರ್ ಓದುವ ಆಸೆ ನಮಗಿದೆ.
ಸೊಗಸಾಗಿ ಪರಿಚಯಿಸಿದ್ದೀರಿ ಮುತ್ತಿನಕೆರೆಯನ್ನು.. ಒಳ್ಳೆಯ ಚಿತ್ರಗಳು ಲೇಖನಕ್ಕೆ ಇನ್ನಷ್ಟು ಕಳೆ ನೀಡಿದೆ.. tnq :)
ತುಂಬಾ ಚೆನ್ನಾಗಿದೆ ಸಚಿತ್ರ ಲೇಖನ..
Post a Comment