Monday, October 15, 2012

ಸಿರ್ಸಿ [ ಶಿರಸಿ ] ನೆನಪು ಕಾಡ್ತಾ ಇದೆ.....ಪಯಣ.8, ಸೊಂಧೆ ವಾಧಿರಾಜರ ಭಕ್ತಿ ದರ್ಶನ ಮಾಡೋಣ ಬನ್ನಿ .






ಬನ್ನಿ ನಿಮಗೆ ಸ್ವಾಗತ 


ಸ್ವರ್ಣವಲ್ಲಿ ಮಠದ ದರ್ಶನ ಮಾಡಿ ತೆರಳಿದ ನಾವು  ಬೈಕ್ ಹತ್ತಿ    ಸಾಗಿದೆವು...................ಐದು ಕಿ.ಮೀ. ದೂರದ  ಶ್ರೀ ವಾಧಿರಾಜ ಮಠದ  ಸನ್ನಿಧಿ  ನೋಡಲು. ಬೈಕ್  ಸೋಂದಾ ವಾಧಿರಾಜ ಮಠದ ಅಂಗಳ ತಲುಪಿದಾಗ  ಸೂರ್ಯನ ಪ್ರತಾಪ ಜೋರಾಗಿತ್ತು. ವಾಧಿರಾಜರು ನಡೆದಾಡಿದ ಪುಣ್ಯ ಭೂಮಿ ನಮ್ಮನ್ನು ಸ್ವಾಗತಿಸಿತು. ಸೋಂದೆ ನೆಲದ ವಿಶೇಷ ಎಂದರೆ  ಜೈನ ಧರ್ಮ,  ಶಂಕರಾಚಾರ್ಯರು  ಪ್ರತಿಪಾದಿಸಿದ ಅಧ್ವೈತ  ಸಿದ್ಧಾಂತ ತಳಹದಿಯ  ಸ್ವರ್ಣವಲ್ಲಿಮಠ,  ಮಧ್ವಾಚಾರ್ಯರು  ಪ್ರತಿಪಾದಿಸಿದ   ದ್ವೈತ  ಸಿದ್ಧಾಂತ ತಳಹದಿಯ  ವಾಧಿರಾಜಮಠ, ಇವುಗಳನ್ನು  ಅಕ್ಕರೆಯಿಂದ ಪೊರೆದದ್ದು  ಈ ಹೆಮ್ಮೆಯ ನೆಲ. ಇವತ್ತಿಗೂ ಕೂಡ ಇಲ್ಲಿಯ ಜನ ತಮ್ಮ ಪಾಡಿಗೆ ತಾವು  ನಂಬಿದ  ಧರ್ಮ ಸಿದ್ದಾಂತ ಗಳಿಗೆ ಅನುಗುಣವಾಗಿ ಶಾಂತಿಯಿಂದ ನಡೆದುಕೊಂಡು ಯಾವುದೇ ಘರ್ಷಣೆ ಇಲ್ಲದೆ  ಪರಸ್ಪರ ಗೌರವದಿಂದ  ಸೌಹಾರ್ಧವಾಗಿ ಜೀವಿಸಿದ್ದಾರೆ. ಇಂತಹ ನೆಲದ ಮಣ್ಣಿನಲ್ಲಿ ನಮ್ಮನಡಿಗೆ  ಸಾಗಿತ್ತು, ಮನದಲ್ಲಿ ಇಲ್ಲಿನ ಜನರ ಬಗ್ಗೆ , ಮಣ್ಣಿನ ಬಗ್ಗೆ ಗೌರವ ಮೂಡಿತ್ತು.



ಶ್ರೀ ಮದ್  ವಾದಿರಾಜರು


 ಎಲ್ಲಾ ಪುಣ್ಯ ಕ್ಷೇತ್ರಗಳಿಗೂ ಇರುವಂತೆ ಈ  ಕ್ಷೇತ್ರಕ್ಕೂ ತನ್ನದೇ ಆದ ವಿಶೇಷವಾದ ಇತಿಹಾಸವಿದೆ. ಈ ಕ್ಷೇತ್ರವನ್ನು ಆಳಿದ ಅರಸರ ಬಗ್ಗೆ ಈಗಾಗಲೇ ಹಿಂದಿನ ಸಂಚಿಕೆಗಳಲ್ಲಿ ಹೇಳಿದ್ದೇನೆ  , ಬನ್ನಿ  ವಾಧಿರಾಜರ  ಬಗ್ಗೆ ತಿಳಿಯೋಣ. ಶ್ರೀ ಮದ್ ವಾಧಿರಾಜರ  ಜನನ ಕ್ರಿ. ಶ . 1480 ರಲ್ಲಿ ದಕ್ಷಿಣ ಕನ್ನಡ ದ   ಉಡುಪಿ ಜಿಲ್ಲೆಯ "ಹೂವಿನ ಕೆರೆ" ಎಂಬಲ್ಲಿ ಆಗುತ್ತದೆ. ಬಡ ಕುಟುಂಬದಲ್ಲಿ ಹುಟ್ಟಿದ ಕೂಸಿಗೆ  "ಭೂವರಾಹ" ಎಂಬ ಹೆಸರನ್ನು ಇತ್ತು ಪೋಷಿಸುತ್ತಾರೆ. 5 ವರ್ಷ  ಕಳೆದು ಉಪನಯನ ಮಾಡಿ ಜ್ಞಾನ ಹಾದಿಯಲ್ಲಿ ಮಗುವು ಸಾಗಲಿ ಎಂಬ ಆಸೆಯಿಂದ  ಮಗುವನ್ನು ತಂದೆ ತಾಯಿಗಳು "ಶ್ರೀ ವಾಗಿಶ ತೀರ್ಥ" ರಿಗೆ   ಒಪ್ಪಿಸುತ್ತಾರೆ.    ಶ್ರೀ ವಾಗಿಶತೀರ್ಥರ ಶಿಷ್ಯರಾದ "ವಿದ್ಯಾನಿಧಿತೀಥ೯" ರ  ಬಳಿ  ಮಗುವು ತನ್ನ ಜ್ಞಾನದ ಹಣತೆಗೆ ಬೆಳಕನ್ನು ಪಡೆಯುತ್ತದೆ .ಶ್ರಿ ವಾಗಿಶತೀರ್ಥರು  ತಮ್ಮ ಬಳಿ   ಜ್ಞಾನ ದರ್ಶನ ಪಡೆದ ಬಾಲಕನಿಗೆ  ಸನ್ಯಾಸವಿತ್ತರು. "ವಾದಿರಾಜ ತೀರ್ಥ " ಎ೦ದು ಕರೆದು ತಮ್ಮ ಸ೦ಸ್ಥಾನದ ಉತ್ತರಾಧಿಕಾರಿಯನ್ನಾಗಿ ಮಾಡುತ್ತಾರೆ.. ಸನ್ಯಾಸನ೦ತರವೂ ಕೆಲವು ಕಾಲದ ವರೆಗೆ   ''ಶ್ರೀ ವಾಗಿಶತೀರ್ಥ'' ರಲ್ಲಿ ವಿದ್ಯಾಬ್ಯಾಸ ಮುಂದುವರೆಯುತ್ತದೆ.


ಹಯಗ್ರೀವ  ಮೂರ್ತಿ [ ಚಿತ್ರ ಕೃಪೆ  ಅಂತರ್ಜಾಲ ವಾಧಿರಾಜ ಮಠ]




ನಂತರ ಗುರುಗಳ ಅನುಮತಿ ಪಡೆದು ಜ್ಞಾನ ಸಂಚಾರ ಮಾಡುತ್ತಾರೆ. ಆ ಸಮಯದಲ್ಲಿ ವಣ೯ಕಾರನೂಬ್ಬನು ಪ೦ಚಲೋಹದ ಗಣೇಶನನ್ನು ರಚನೆ ಮಾಡುವ ವೇಳೆ  ಎಷ್ಟೇ ಪ್ರಯತ್ನಿಸಿದರೂ  ಗಣೇಶನ ರೂಪ ತಾಳದೆ ಅದುವರೆಗೂ ಕಾಣದ ಒಂದು ರೂಪವನ್ನು ತಾಳುತ್ತಿರುತ್ತದೆ. ಅವನ  ಬಹಳಷ್ಟು ಪ್ರಯತ್ನ ವ್ಯರ್ಥವಾಗಿ   ಆ ಪ್ರತಿಮೆಯನ್ನು ಒ೦ದು ಮೂಲೆ ಯಲ್ಲಿಟ್ಟು ಚಿ೦ತಾಕ್ರಾ೦ತನಾಗಿ ಸುಮ್ಮನಿದ್ದನು. ವಾದಿರಾಜರು ಅಕಸ್ಮಾತ್ತಾಗಿ ಆ ಊರಿಗೆ  ಬರುತ್ತಾರೆ . ಆ ಸಮಯದಲ್ಲಿ , ಒ೦ದು ರಾತ್ರಿ ಹಯಗ್ರೀವ ದೇವರು ಸ್ವಣ೯ಕಾರನ ಕನಸಿನಲ್ಲಿ ಬ೦ದು "ಇಲ್ಲಿಗೆ ಬ೦ದಿರುವ ಯತಿಗಳಿಗೆ ನನ್ನನ್ನು ಕೊಟ್ಟುಬಿಡು" ಎ೦ದು ಹೇಳಿದಂತೆ ಆಗುತ್ತದೆ.. ವಾದಿರಾಜರಿಗೂ ಸ್ವಪ್ನದಲ್ಲಿ ಹಯಗ್ರೀವ ದೇವರು ದಶ೯ನ ಕೊಟ್ಟು "ನಾನು ನಿನ್ನಿ೦ದ ಪೂಜೆಯನ್ನು ಸ್ವೀಕರಿಸಲು ಬರುವೆನು" ಎ೦ದರು. ಮರುದಿನ ಸ್ವಣ೯ಕಾರನು  ಹಯಗ್ರೀವ ದೇವರನ್ನು ತ೦ದೊಪ್ಪಿಸಿದನು. ಆ ಪ್ರತಿಮೆಯನ್ನು  ಸ್ವೀಕರಿಸಿ  ಆವಾಹಿಸಿ ಪೊಜೆ ಮಾಡಲು ಪ್ರಾರಂಭ ಮಾಡುತ್ತಾರೆ... ಅವರ ಭಕ್ತಿಗೆ ಮೆಚ್ಹಿದ ಹಯಗ್ರೀವ ದೇವನು, ಅವರು ಕೊಟ್ಟ ಕಡಲೆಯ ಹೊರಣದ ಭಕ್ವ್ಯವನ್ನು ಕುದುರೆಯ ರೂಪದಿ೦ದ ಬ೦ದು ಮೆಲ್ಲುತ್ತಿದ್ದನು. ಆ ಭಕ್ಷ್ಯವನ್ನೇ  ಇಂದಿಗೂ "ಹಯಗ್ರೀವ"  ಎಂಬ ಹೆಸರಿನಿಂದ ಕರೆಯುತ್ತಾರೆ. ವಿಶೇಷ ದಿನಗಳಲ್ಲಿ "ಮಧ್ವ ಪಂಥದ ಬ್ರಾಹ್ಮಣರು "  ತಮ್ಮ ಮನೆಗಳಲ್ಲಿ ಈ " ಹಯಗ್ರೀವ " ಭಕ್ಷ್ಯವನ್ನು  ತಯಾರಿಸಿ ದೇವರಿಗೆ  ನೈವೆಧ್ಯ ಮಾಡುತಾರೆ. ಹಯಗ್ರೀವ ದೇವರು ತನ್ನ ಮು೦ಗಾಲುಗಳನ್ನು ವಾದಿರಾಜರ ಹೆಗಲುಗಳಲ್ಲಿಟ್ಟು "ಹಯಗ್ರೀವ ಭಕ್ವ್ಯವನ್ನು" ಸ್ವೀಕರಿಸಿ ಸ್ವಲ್ಪ ಪ್ರಸಾದ ಉಳಿಸಿ ಹೋಗುತ್ತಿದ್ದರು.  ಫಾಲ್ಗುಣ ಕ್ರಷ್ಣ ದ್ವಿತಿಯ ತಿಥಿಯಲ್ಲಿ ಶ್ರೀವಾದಿರಜರು  ಶಾಲಿವಾಹನ ಶಕ ೧೫೨೨ ನೇ ಶಾವ೯ರಿ ಫಾಲ್ಗುಣ ಕ್ರುಷ್ಣ ಪಕ್ಷ ತ್ರತಿಯ ಬುಧವಾರ ಸ್ವಾತಿ ನಕ್ಷತ್ರದಲ್ಲಿ ಶ್ರೀಮದ್ವಾದಿರತಿಥ೯ರು ವೃಂದಾವನ ಪ್ರವೇಶ ಮಾಡಿ ದೇಹತ್ಯಾಗ ಮಾಡುತ್ತಾರೆ. .ಎಂಬ ಪೌರಾಣಿಕ ಇತಿಹಾಸವನ್ನು ನೀವಿಲ್ಲಿ ಕೇಳಬಹುದು


ಸೋಂದೆ  ದೇವಾಲಯದ  ರಥದ ದರ್ಶನ 


ಗರುಡ ಗಂಬ 
ನಾವು ಇಲ್ಲಿಗೆ ಕಾಲಿಟ್ಟಾಗ  ನಮಗೆ ಕಾಣ ಸಿಕ್ಕಿದ್ದು ಸುಂದರವಾಗಿ ಅಲಂಕರಿಸಿದ್ದ  ರಥ , ಅದರ ದರ್ಶನ ಪಡೆದು ಸಾಗಿದ ನಮಗೆ   ಕಾಣ ಸಿಕ್ಕಿದ್ದು ಸುಮಾರು 70 ಅಡಿಗೂ ಮೀರಿದ "ಗರುಡಗಂಬ"  ಅದರಲ್ಲಿ ಗಮಸಿದರೆ ಹಂಸವಾಹಾರ ರಾಜರ ವಿಗ್ರಹ, ಹಾಗು ತುದಿಯಲ್ಲಿ ನಿರ್ಮಿಸಲಾಗಿರುವ ಮಂಟಪದಲ್ಲಿ ಸರುದ ದೇವರ ಮೂರ್ತಿ  ಕಾಣ ಸಿಗುತ್ತದೆ.

ಐತಿಹಾಸಿಕ ದೇವಾಲಯ
ದೇವಾಲಯ ಪ್ರವೇಶ ದ್ವಾರ 



ನಂತರ ದೇವಾಲಯ ಬಳಿ  ಬಂದ ನಮಗೆ  ಕಂಡಿದ್ದು ಪುರಾತನ ದೇವಾಲಯ ಕಟ್ಟಡ. ಪ್ರವೇಶ ದ್ವಾರದಲ್ಲಿ ಪ್ರಶಾಂತವಾದ ವಾತಾವರಣದ ಸ್ವಾಗತ . ಮಧ್ವ ಮಠದ ಭಕ್ತರ ಪುಣ್ಯ ಕ್ಷೇತ್ರ ಆದ ಕಾರಣ  ಭಕ್ತರು ದರ್ಶನ ಪಡೆದು ಹೊರಬರುತ್ತಿದ್ದರು. ದೇವಾಲಯದ  ಮುಂಬಾಗ ಭಕ್ತರನ್ನು  ಸ್ವಾಗತಿಸಲು ನಿಂತಿದ್ದ ಎರಡು ದೊಡ್ಡ ಬೊಂಬೆಗಳು ದೇವಾಲಯದ ಅಲಂಕಾರ ಹೆಚ್ಚಿಸಿದ್ದವು, ಒಳಗೆ ಹೋದ ನಾವು ವಾಧಿರಾಜರ ಬೃಂದಾವನ ದರ್ಶನ ಪಡೆದು  ಪುನೀತರಾಗಿ ಹೊರಬಂದೆವು.




 ಹೊರಗೆ ಬಂದ ನಮಗೆ  ಹಸಿವು ಕಾಡತೊಡಗಿ  ಹೊಟ್ಟೆ ತುಂಬಿಸಿಕೊಳ್ಳಲು  ಹೊರಟೆವು.  ಬಿಸಿಲಿನ ತಾಪಕ್ಕೆ  ಧಣಿದ ದೇಹ  ನೆರಳಿನ ಆಸರೆ ಬಯಸಿತ್ತು.  , ಹಾಗೆ ನಡೆಯುತ್ತಾ ಬಂದು ಅಲ್ಲೇ ಇದ್ದ ಒಂದು ಸಣ್ಣ ಹೋಟೆಲ್  ಬಳಿ ಬಂದೆವು., ಸಾರ್ ಈಗ ಮೂರು ಘಂಟೆ ಊಟ ಇಲ್ಲಾ , ಇಡ್ಲೀ ಇದೆ ಕೊಡಲಾ ಅಂದರು  ಹೋಟೆಲ್ ನವರು,  ಸರಿ ಎಂದು ಅದನ್ನೇ ಕೊಡಿ ಎಂದು ಹೇಳಿ  ಇಡ್ಲೀ ಸಾಂಬಾರ್ ತಿನ್ನಲು  ಆರಂಭಿಸಿದೆವು, ಹಸಿದ ಹೊಟ್ಟೆ ಆ ಇಡ್ಲೀ ಬೆಳಿಗ್ಗೆ  ಮಾಡಿದ್ದು   ಎಂಬ ಸತ್ಯ ಗೊತ್ತಾಗಿದ್ದರೂ  ಉಸಿರು ಬಿಚ್ಚದೆ ಅದನೆ ತನ್ನ ಒಡಲಿಗೆ ಸೇರಿಸಿಕೊಂಡಿತ್ತು , ಸೋಂದೆ ವಾಧಿರಾಜರ  ಕ್ಷೇತ್ರದಲ್ಲಿ ನೋಡುವ ಮತ್ತಷ್ಟು ಜಾಗಗಳನ್ನು  ನೋಡುವ ಹುಮ್ಮಸ್ಸು ಇಳಿದು  ಮಾತೊಮ್ಮೆ ಇಲ್ಲಿಗೆ ಪ್ರತ್ಯೇಕವಾಗಿ ಬಂದು  ವಿವರವಾಗಿ ನೋಡೋಣ ಎಂದು ತೀರ್ಮಾನಿಸಿ  ಅಲ್ಲಿಂದ  ಹರ್ಷನ  ಬೈಕ್ ಏರಿ ಹೊರಟೆ, ........ ಯಾವತ್ತೂ ಈ ರೀತಿ ಮಾಡದ ನಾನು  ಈ ತೀರ್ಮಾನಕ್ಕೆ ಬಂದೆ ,  ಆ ತೀರ್ಮಾನದ ಹಿಂದೆ ನನಗಿದ್ದ ಅಲ್ಪ ಸಮಯದಲ್ಲಿ ನೋಡ ಬೇಕಾದ  ಹಲವು ಜಾಗಗಳನ್ನು ನೋಡುವ ದುರಾಸೆ  ಮನೆಮಾಡಿತ್ತು.  ಆ ದುರಾಸೆಯಲ್ಲಿ ಪ್ರಥಮ  ಸ್ಥಾನ ಪಡೆದಿತ್ತು  ..............ಬನವಾಸಿ !!!ಹರ್ಷನಿಗೆ ಹೇಳಿದ್ದೆ ತಡ  ಬನ್ನಿ ಸಾರ್ ಈಗಲೇ ಹೊರಡೋಣ ಅಂತಾ  ಬೈಕ್ ಏರಿ ಸ್ಟಾರ್ಟ್ ಮಾಡಿದ .  ವೇಗವಾಗಿ ಹೋಗುತ್ತಿತ್ತು ಬೈಕು . ......................... "ಆರ್ ಅಂಕುಶ vittodam  ನೆನೆವುದೆನ್ನ ಮನಂ  ಬನವಾಸಿ ದೇಶವಂ" ಎಂಬ   ಮಾತನ್ನು ಮನದಲ್ಲಿ  ನೆನೆಯುತ್ತಾ  ಕಾತರದಿಂದ  ಬನವಾಸಿ ನೋಡಲು ಉಸಿರು ಬಿಗಿ ಹಿಡಿದು ಬೈಕಿನಲ್ಲಿ ಕುಳಿತಿದ್ದೆ.  ................!!!!   

11 comments:

Srikanth Manjunath said...

"ಮಹೇಶ..ನಿನಗೆ ಪುಸ್ತಕದ ಜ್ಞಾನ ಹೆಚ್ಚು..ಮಸ್ತಕದ ಜ್ಞಾನ ಕಮ್ಮಿ" ಕನ್ನಡ ಚಿತ್ರರಂಗದ ಭೀಷ್ಮ ಶ್ರೀ. ಆರ್.ನಾಗೇಂದ್ರ ರಾಯರು ಸಾಕ್ಷಾತ್ಕಾರ ಚಿತ್ರದಲ್ಲಿ ಹೇಳುವ ಸಂಭಾಷಣೆ..ಮಸ್ತಕದ ಜ್ಞಾನ ಹೆಚ್ಚಾಗ ಬೇಕಾದರೆ ದೇಶ ಸುತ್ತಬೇಕು..ಸ್ಥಳ ಪುರಾಣ ತಿಳಿಯಬೇಕು..ಹಂಚಬೇಕು..ಇದೆ ಸುಂದರ ಜೀವನದ ರಹಸ್ಯ..ಬಾಲು ಸರ್ ನಿಮ್ಮ ಸೋಂದೆ ಸ್ಥಳ ಪರಿಚಯ..ಈ ಮೇಲಿನ ಮಾತನ್ನು ನನಗೆ ತಿಳಿಸಿತು..ಎಂತಹ ಮಾಹಿತಿ ಸಂಗ್ರಹ..ಮತ್ತು ಚೂರು ಚೂರು ಉಣಬಡಿಸುವ ವಿಧಾನ ನಿಜಕ್ಕೂ ಶ್ಲಾಘನೀಯ...ಮಠ, ಸುಂದರ ಪರಿಸರ, ಅದರ ಇತಿಹಾಸ, ಶ್ರೀ ವಾದಿರಾಜರ ಸ್ಥೂಲ ಜೀವನ ಪರಿಚಯ, ದೇವರ ಸಾಕ್ಷಾತ್ಕಾರ ಎಲ್ಲವು ಸೊಗಸಾಗಿ ಮೂಡಿ ಬಂದಿದೆ..ಭಕ್ತಿ ರಸ ಉಕ್ಕಿಸುತ್ತ...ಕನ್ನಡ ನಾಡಿನ ಹೆಮ್ಮೆಯ ಆದಿ ಕವಿಯ ಹಾಗು ಮೊದಲ ರಾಜ ಪುರುಷ...ಇಂತಹವರು ಮೆಟ್ಟಿದ ಭೂಮಿಯ ಪರಿಚಯಕ್ಕೆ ಇಡ್ಲಿ ಸಾಂಬಾರಿಗೆ ಕಾದ ಹೊಟ್ಟೆಯ ರೀತಿ ನಾವು ಕಾಯುತ್ತಿದ್ದೇವೆ...
ಅರೆ ದೋಸೆ ಬಂತು, ಚಟ್ನಿ ಬಂತು, ಸಾಂಬಾರ್ ಬಂತು, ಪಲ್ಯ ಬಂತು...ಆಹಾ...ಬಜ್ಜಿಯೂ ಬಂತು...ತೆಳ್ಳನೆ ನೀರು ದೋಸೆ ಬಂತು...ಮೀಸಲ್ ಬಾಜಿ ಬಂತು..ಬೇಕು..ನಮ್ಮೂರ ಊಟ ರೆಡಿ ಇದೆಯಾ...ದಯವಿಟ್ಟು ಬರಲಿ... :-)

ದಿನಕರ ಮೊಗೇರ said...

Navu nimma jote saaguttaa ennuva haage barediddiri sir...

hogi munde.... hinde naaviddeve...mundina stop elli....

Ittigecement said...

ಬಾಲಣ್ಣ...

ಇಲ್ಲಿ ನಾನು ಹಲವಾರು ಬಾರಿ ಹೋಗಿದ್ದರು ಈ ಮಾಹಿತಿಗಳು ನನಗೆ ಗೊತ್ತಿರಲಿಲ್ಲವಾಗಿತ್ತು...
ಬಹಳ ಉಪಯುಕ್ತ ಮಾಹಿತಿಗಳು...

ಅಲ್ಲಿನ ಪ್ರಶಾಂತ ವಾತವರಣ...
ಭಕ್ತಿಯ ಅನನ್ಯತೆ ಅಲ್ಲಿ ಕಾಣಬಹುದು...

ಮುಂದಿನ ಕಂತಿಗಾಗಿ ಕಾಯುತ್ತಿರುವೆವು .....................

umesh desai said...

yes ur article is good i am reviving my memories too

Santosh Hegde Ajjibal said...

ಬಾಲಣ್ಣಾ ತುಂಬಾ ಚನ್ನಾಗಿದೆ ನಿಮ್ಮ್ವ್ ಮುಂದಿನ ಸಂಚಿಕೆಗೆ ಕಾಯ್ತಾ ಇದ್ದಿನಿ

ಗಿರೀಶ್.ಎಸ್ said...

ಸರ್,ಈ ಮಠದ ಬಗ್ಗೆ ಕೇಳಿದ್ದೆನಾದರೂ ಇದರ ಹಿನ್ನೆಲೆ ತಿಳಿದಿರಲಿಲ್ಲ....ಎಂದಿನ ಹಾಗೆ ಮುಂದಿನ ಕಂತಿಗೆ ಕಾಯುವ ಹಾಗೆ ಕುತೂಹಲ ಕೆರಳಿಸಿದ್ದಿರಾ..ಅದರಲ್ಲೂ ಬನವಾಸಿ ಬಗ್ಗೆ ಆದ್ದರಿಂದ ಸ್ವಲ್ಪ ಜಾಸ್ತಿಯೇ ಕುತೂಹಲ ಇದೆ ಅನ್ನಬಹುದು..

ಚಿನ್ಮಯ ಭಟ್ said...

ಬಾಲಣ್ಣ,

ಪ್ರವಾಸ ಮಾಡುವುದನ್ನು,ಅದನ್ನು ಸಾರ್ಥಕಗೊಳಿಸುವುದನ್ನು ನಮಗೆಲ್ಲಾ ತಿಳಿಸಿಕೊಡುತ್ತಿದ್ದೀರಿ..ವಂದನೆಗಳು ನಿಮಗೆ ಅದಕ್ಕಾಗಿ..

ಹಾಂ ಈ ಸಲದ ಪರೀಕ್ಷೆ ಮುಗಿದು ರಜೆಯಲ್ಲಿ ನಾನೂ ವಾದಿರಾಜ ಮಠಕ್ಕೆ ಹೋಗಿದ್ದೆ..ಅಲ್ಲಿಯೇ ಒಂದು ರಾತ್ರಿ ತಂಗಿದ್ದೆ..ತುಂಬಾ ಆಹ್ಲಾದಕವಾದ ವಾತಾವರಣ..

ಅಲ್ಲಿ ಇನ್ನೊಂದು ವಿಶೇಷವೆಂದರೆ ಶ್ರೀ ಭೂತರಾಜರಿಗೆ ಕಾಯಿಗಳನ್ನು ಉರುಳಿಸುವ ಸಂಪ್ರದಾಯ..ಎಲ್ಲರೂ ಒಂದೊಂದು ತೆಂಗಿನಕಾಯಿಯನ್ನು ತಂದು ದೇವರ ಬಳಿಯಿರುವ ಕಂಡಿಯಲ್ಲಿ ಉರುಳಿಸುತ್ತಾರೆ..
ಆ ಮೇಲೆ ಇನ್ನೊಂದೆಂದರೆ ಸಂಜೆ ಸುಮಾರು ೬:೪೫-೭ ಕ್ಕೆ ಶುರುವಾಗುವ ಪೂಜೆಯಲ್ಲಿ ಅಲ್ಲಿರುವ ಎಲ್ಲರೂ ಬಂದಿರುತ್ತಾರೆ..

ಅದಾದ ಮೇಲೆ ಊಟಕ್ಕೆ ಹೋದೆವು..ಅವತ್ತು ಅಮಾವಾಸ್ಯೆಯಾದುದರಿಂದ ಪಳಾರ(ಫಲಾಹಾರ)ವಿತ್ತು.. ಊಟದ ವ್ಯವಸ್ಥೆಯೂ ಕೂಡ ಇದ್ದುದರಿಂದ ನಾವು ಅಲ್ಲಿಗೇ ಹೋಗಿದ್ದೆವು.....ಇಲ್ಲಿ ಪ್ರವಾಸಿಗರಿಗೆ ತಂಗಲು ಅತ್ಯುತ್ತಮವಾದ ವಸತಿ ವ್ಯವಸ್ಥೆ ಇದೆ...ಇಲ್ಲಿಗೆ ಬರಲು ಉತ್ತಮ ಸಾರಿಗೆ ವ್ಯವಸ್ಥೆಯೂ ಕೂಡ ಇದೆ..ಬೆಂಗಳೂರಿನಿಂದ ಬಂದ ಒಂದು ಬಸ್ಸು ೬.೩೦ರ ಮುಂಜಾನೆ ಅಲ್ಲಿ ಕಾಣಿಸಿಕೊಂಡಿತ್ತು...

ಬಾಲು ಸರ್ ಲೇಖನ ಓದುತ್ತಾ ಹೋದಂತೇ ಇವೆಲ್ಲಾ ನೆನಪಾಯ್ತು...
ಧನ್ಯವಾದ ...
ಬರಿತಾ ಇರಿ...
ಹಾಂ..ಅಲ್ಲಿ ಕೊನೆಯಲ್ಲಿ " vittodam" ಅಂತ ಬರೆದಿದ್ದೀರಲ್ಲಾ,ಅದು ಬೆರಳಚ್ಚು ದೋಷವೋ ಅಥವಾ ಅದಕ್ಕೇನಾದರೂ ವಿಶೇಷ ಅರ್ಥವಿದೆಯೋ ತಿಳಿಯುತ್ತಿಲ್ಲ.. ದಯವಿಟ್ಟು ತಿಳಿಸಿ...

ನಮಸ್ತೆ....

ಸಂಧ್ಯಾ ಶ್ರೀಧರ್ ಭಟ್ said...

ತುಂಬಾ ಚೆನ್ನಾಗಿದೆ ಬಾಲಣ್ಣ ... ಮುಂದಿನ ಕಂತಿಗಾಗಿ ಕಾಯುತ್ತಿದ್ದೇನೆ

ಸೀತಾರಾಮ. ಕೆ. / SITARAM.K said...

same as Sandhya

shivu.k said...

ಬಾಲು ಸರ್,
"ಶ್ರಿಮದ್ ವಾದಿರಾಜ" ಮತ್ತು ಮಠದ ಇತಿಹಾಸವನ್ನು ಓದಿ ತುಂಬಾ ಸಂತೋಷವಾಯ್ತು. ನಾಲ್ಕು ಬಾರಿ ಸಿರಸಿಗೆ ಹೋಗಿದ್ದರೂ ಒಮ್ಮೆಯೂ ಸೋಂದ ಮಠಕ್ಕೆ ಹೋಗಿರಲಿಲ್ಲ. ಮುಂದಿನ ಭಾರಿ ಖಂಡಿತ ಹೋಗಬೇಕೆನ್ನಿಸುತ್ತಿದೆ...

Anonymous said...

That's really interesting. Thanks for posting all the great information! Had never thought of it all that way before.