Sunday, April 25, 2010

ಮೈಸೂರು ಬೆಂಗಳೂರು ಪಯಣದ ಹಾದಿಯಲ್ಲಿ !!!ನೋಡಿಸ್ವಾಮಿ ನಾವಿರೋದೆ ಹೀಗೆ!!!ಭಾಗ -೦೧











ಬ್ಲಾಗಿನ ಬರಹಗಳ ಹುಚ್ಚು ಹತ್ತಿದ ನನಗೆ ನನ್ನ ಸುತ್ತಲಿನ ಪ್ರಪಂಚ ನೋಡುವ ರೀತಿಯೇ ಬದಲಾಗಿ ಹೋಗಿದೆ. ನೋಡಿದ್ದನ್ನು ನಿಮಗೆ ತಲುಪಿಸಬೇಕೆಂಬ ಹಂಬಲ ಹೆಚ್ಚಾಗಿ ನನ್ನ ತಲೆಗೆ ಹಾಗು ಕ್ಯಾಮರಾಗೆ ಬಿಡುವಿಲ್ಲದ ಕೆಲಸ!!! ಬಹಳ ದಿನಗಳಿಂದ ನಾವು ಓಡಾಡುವ ಹೆದ್ದಾರಿಯಲ್ಲಿನ ವಾಹನ ಚಾಲಕರ ಬವಣೆ ,ಅಡಿಗಡಿಗೆ ಚಾಲನೆ ಮಾಡುವ ವಾಹನ ಚಾಲಕರು ಎದುರಿಸುವ ಸಮಸ್ಯೆ ಗಳು, ಹೆದ್ದಾರಿಯಲ್ಲಿನ ಅನಿರೀಕ್ಷಿತ ಘಟನೆಗಳು , ಇವುಗಳಬಗ್ಗೆ ಲೇಖನ ಬರೆಯಬೇಕೆಂಬ ಹಂಬಲ ಹಲವುಭಾರಿ ಅನ್ನಿಸಿತ್ತು.ಅದಕ್ಕೆ ಕಾಲ ಕೂದಿಬಂದು ಈ ಲೇಖನ ರೂಪುಗೊಂಡಿದೆ.ಮೊನ್ನೆ ಶನಿವಾರ ೨೪/೦೪/೨೦೧೦ ರಂದು ಕಾರ್ಯನಿಮಿತ್ತ  ಕುಟುಂಬ ದೊಡನೆ ಕಾರಿನಲ್ಲಿ  ಮೈಸೂರಿನಿಂದ ಬೆಂಗಳೂರಿಗೆ  ಪಯಣಶುರುವಾಯಿತು ,ಕಾರಿನ ಚಾಲಕ ಮಿತ ಭಾಷಿ !! ಸುಮ್ಮನೆ ಎಫ್.ಎಂ ನಲ್ಲಿ  ಹಾಡು ಹಾಕಿಕೊಂಡು ಚಾಲನೆ ಶುರುಮಾಡಿದ ,  ಹಾಗೆ  ಮನೆಯವರಜೊತೆ  ಮಾತಾಡುತ್ತಾ  ಮುಂದೆಸಾಗಿದ್ದ ನಾನು ಸ್ವಲ್ಪ ಸಮಯ ಕಳೆದು ಹಿಂದೆ ತಿರುಗಿ ನೋಡಿದರೆ ಎಲ್ಲ ನಿದ್ರಾದೇವಿಯ ವಶವಾಗಿದ್ದರು!!.ಇನ್ನೇನು ಮಾಡ್ಲಿ ಅಂತ ಕ್ಯಾಮರ ತೆಗೆದು ಕ್ಲಿಕ್ಕಿಸಲು ಸಿದ್ದತೆ ಮಾಡಿದೆ ,ಇಲ್ಲೇನು ಸಿಗ್ತದೆ ಅಂತ ಕ್ಯಾಮರ ತೆಗಿತೀರಿ ಸಾರ್ !!ಬರಿ ದರಿದ್ರ ಬಸ್ಸು,ಲಾರಿ  ಕಾರೆ ಸಿಗ್ತವೆ !!!ಅಂತ ಡ್ರೈವರ್ ಹೇಳಿ ನನ್ನನ್ನು ಚಕಿತ ಗೊಳಿಸಿದ .ನೋಡೋಣ ತಡೀರಿ ಅಂತ ಹೇಳಿ ಅಂತ ನನ್ನ ಕ್ಯಾಮರ ಕ್ಲಿಕ್ಕಿಸಲು  ತಯಾರಿ ಮಾಡಿದೆ.ಏನೆ ಹೇಳಿ , ಚಲಿಸುವ ಕಾರಿನಲ್ಲಿ  ಸುಮಾರು ಅರವತ್ತರಿಂದ ಎಂಭತ್ತು ಕಿ.ಮಿ. ವೇಗದಲ್ಲಿ ಕ್ಯಾಮರ ಕ್ಲಿಕ್ಕಿಸುವುದು ಸವಾಲೇ ಸರಿ.!!!! ನಿಮಗೆ ಏನೂ ಸ್ವಾತಂತ್ರ ಇರಲ್ಲ ಕ್ಲಿಕ್ಕಿಸಿದ ಎಲ್ಲ ಚಿತ್ರಗಳೂ ಚೆನ್ನಾಗಿಬರಲ್ಲಾ!!! ಆದರೂ ನನ್ನ ಹಠ ಬಿಡದೆ ಮುಂದುವರೆಸಿದೆ.ನಂತರ ನೋಡಿದ್ರೆ ಆಶ್ಚರ್ಯಕರ ಸಂಗತಿಗಳು ಸೆರೆಯಾಗಿ ಹರಡಿಕೊಂಡವು!!!.
ಮುಂಜಾನೆ  ನಿರ್ಜನ ವಾಗಿದ್ದ ರಸ್ತೆಯಲ್ಲಿ ಜನಜೀವನ ನಿಧಾನವಾಗಿ ತೆರೆದುಕೊಳ್ಳುತಿತ್ತು!!.ರಸ್ತೆಯ ಅಕ್ಕಪಕ್ಕದ ಹಳ್ಳಿಯ ಜನ ರಸ್ತೆಯಲ್ಲಿ ಅಡ್ಡಾಡಿ ದಿನದ ಪ್ರಾರಂಭ ಮಾಡುತ್ತಿದ್ದರು.[ಚಿತ್ರ -೦೨].ಬಸ್ಸೂ, ಲಾರಿ,ಬೈಕು ಇತ್ಯಾದಿ ಬೆಳಗಿನ ಹುಮ್ಮಸ್ಸಿನಲ್ಲಿ ಸಾಗಿದ್ದವು.ಜನಗಳು ಇದಕ್ಕೂ ನಮಗೂ ಸಂಭಂದ ಇಲ್ಲವೆಂದು ತಮ್ಮ ಲೋಕದಲ್ಲಿ ಜೀವನ ಶುರುಮಾಡಿದ್ದರು.ಮುಂಜಾವಿನ ಭರಾಟೆಯಲ್ಲಿ ಹಕ್ಕಿಗಳ ಕಲರವ  ಮರೆಯಾಗಿ ದಿನ ಪ್ರಾರಂಭವಾಗಿತ್ತು.ರೈತರು  ತಮ್ಮ ಎತ್ತಿನ ಗಾಡಿ ಹಾಗುಎತ್ತು ಗಳೊಡನೆ  ಹೆದ್ದಾರಿಯಲ್ಲಿ ಸಾಗುತ್ತ ತಮ್ಮ ಹೊಲಗಳ ಕಡೆಗೆ ಸಾಗಿದ್ದರು.[ಚಿತ್ರ-೦೩]. !....ಹಾಗೆ ಸಾಗಿದ್ದ ನಮಗೆ ಮದ್ದೂರು ಬಂದಿದ್ದೆ ಗೊತ್ತಾಗಲಿಲ್ಲ !ಮದ್ದೂರಿನಲ್ಲಿ ದನಗಳ ಜಾತ್ರೆ ಇತ್ತೂ ಅಂತ ಕಾಣುತ್ತೆ ರಸ್ತೆಯ ಅಕ್ಕ ಪಕ್ಕದಲ್ಲಿ ದನಗಳನ್ನು ಸಾಲಾಗಿ ಕಟ್ಟಿಹಾಕಿದ್ದರು.ದನಗಳ ಮಾರುವವರ ಹಾಗು ಕೊಳ್ಳುವವರ ಮಧ್ಯೆ ವ್ಯವಹಾರ ಜಾರಿಯಲ್ಲಿತ್ತು.ಮಾರಾಟವಾದ ಕೆಲವು ದನಗಳು ಮಿನಿ ಲಾರಿಯೇರಿ ಪಯಣ ಬೆಳೆಸಲು ಸಿದ್ದವಾಗಿದ್ದವು.[ಚಿತ್ರ-೦೪]ದನಗಳಿಗೆ ತಂದಿದ್ದ ಒಣ ಹುಲ್ಲು ರಸ್ತೆಯಲ್ಲಿ ಚೆಲ್ಲಾಡಿತ್ತು.ರೈತನ ಬಾಳಿನ
ಒಂದು ಅಧ್ಯಾಯ ರಸ್ತೆಯಲ್ಲಿ ಅನಾವರಣ ಗೊಂಡು, ರಸ್ತೆಗಳುಮನುಷ್ಯನ ಜೀವನದಲ್ಲಿ ಯಾವ ಪಾತ್ರ  ವಹಿಸುತ್ತಿವೆ ಎಂಬ ವಿಚಾರ ಗೋಚರವಾಗಿ ಅಚ್ಚರಿಯಾಯಿತು.

Sunday, April 18, 2010

ಖಾಜಿ ರಂಗ ನ್ಯಾಷನಲ್ ಪಾರ್ಕ್ ಅಡವಿಯಲ್ಲಿ ಹುಲಿ ಮಾಡಿದ ಅನಾಹುತ !!! ಸತ್ಯ ದರ್ಶನ !!

ಭಾರತದ ಖಾಜಿರನ್ಗ ಅಭಯಾರಣ್ಯ ದಲ್ಲಿ ದಿನಾಂಕ ೧೯ /೦೫/೨೦೦೪ ರಂದು ಒಂದು ಹೆಬ್ಬುಲಿ ಆನೆಯ ಮಾವುತನ ಮೇಲರಗಿ ಮಾಡಿದ ಅನಾಹುತದ ದರ್ಶನ ಇಲ್ಲಿದೆ. ಕಾಡಿನಲ್ಲಿ ಹುಲಿ ಹೇಗೆ ಚಾಣಾಕ್ಷ ತಾಣದಿಂದ ತನಗೆ ಒದಗಿಬರುವ ಅಪಾಯವನ್ನು ಎದುರಿಸುತ್ತದೆ ಎಂಬ ಬಗ್ಗೆ ಈ ವೀಡಿಯೊ ಚಿತ್ರಣ ನೀಡಿದೆ. ಕ್ಷಣಾರ್ಧದಲ್ಲಿ ಮೇಲೆರಗಿ ಆನೆಯ ಮೇಲೆ ಕುಳಿತಿದ್ದ ಮಾವುತನ ಮೇಲೆ ನಡೆಸಿದ ಹಲ್ಲೆ ನಿಜಕ್ಕೂ ಭಯಂಕರವಾಗಿದೆ. ಹುಲಿ ಎಷ್ಟಾದರೂ ಹುಲಿಯೇ ಅದಕ್ಕೆ ಧೈರ್ಯವನ್ತರನ್ನು ಹುಲಿಗೆ ಹೋಲಿಸುತ್ತಾರೆ ಆಲ್ವಾ!! ಬನ್ನಿ ನೀವು ನೋಡಿ ಈ ಹುಲಿಯ ಪ್ರತಾಪ!!

Wednesday, April 14, 2010

ಭೂಮಿಯ ಮೇಲಿನ ಅತ್ಯಂತ ಅಪಾಯಕಾರಿ ರಸ್ತೆ !!!!! ಇದಕ್ಕೆ ಸರಿಸಾಟಿ ಯಾವುದೂ ಇಲ್ಲಾ !!!

ಮಾಚಿಕೊಪ್ಪ ಬ್ಲಾಗಿನ ಗೆಳೆಯ ,ಸುಬ್ರಮಣ್ಯ ಮಾಚಿ ಕೊಪ್ಪ ಇತ್ತೀಚಿಗೆ ಈ ರಸ್ತೆಯ ಬಗ್ಗೆ ಒಂದು ಸುಂದರ ಚಿತ್ರ ಲೇಖನ ತಮ್ಮ ಬ್ಲಾಗಿನಲ್ಲಿ ಪ್ರಕಟಿಸಿದ್ದರು.ನನಗೆ ಆಶ್ಚರ್ಯ !!! ಅಲ್ಲ ಈ ಯಪ್ಪಾ ನಾನು ಹೇಳ್ಬೇಕಾಗಿದ್ದ ರಸ್ತೆ ಬಗ್ಗೆ ಬರ್ದೇ ಬಿಟ್ರಲ್ಲಾ ಅಂತ ಅನ್ಕೊಂಡೆ.ಆದರೂ ಅದನ್ನೇ ಇನ್ನೊಂತರ ಹೇಳಬೇಕೂ ಅಂತ ಭಂಡ ಧೈರ್ಯ ಮಾಡಿ ಯೂ ಟ್ಯೂಬಿನಿಂದ ಕಾಪಿ ಮಾಡಿ ಈ ಐದು ಮುಕ್ಕಾಲು ನಿಮಿಷದ ವೀಡಿಯೊ ಹಾಕಿದ್ದೇನೆ.ನಿಜಕ್ಕೂ ಅದ್ಭುತವಾದ ಮಾಹಿತಿ ಈ ರಸ್ತೆಯ ಬಗ್ಗೆ ಇದೆ. ರಸ್ತೆಯ ಭೀಕರತೆ ,ಸೌಂದರ್ಯ ತುಂಬಿದ ನಿಸರ್ಗದ ಮಧ್ಯೆ ಚಲಿಸುವ ವಾಹನಗಳು ಅಡಿಗಡಿಗೆ ಸಾವು ಬದುಕಿನ ಆಟಾ ಆಡುತ್ತಾ ಹೋಗಬೇಕಾದ ಅನಿವಾರ್ಯತೆ. ಸತ್ತ ಜನರ ಬಗ್ಗೆ ಸಾಕ್ಷಿನುಡಿಯಲು ನಿಂತಿರುವ ಶಿಲುಬೆಗಳು ಹಲವಾರು ನಿಘೂಡ ಕಥೆಗಳನ್ನು ಒಡಲಲ್ಲಿ ಇಟ್ಟುಕೊಂಡು ಮೂಕವಾಗಿ ನಿಂತಿರುವ ರೀತಿ , ವಿಸ್ಮಯ ಗೊಳಿಸಿ ಎದೆ ಜ್ಹಲ್ ಎನ್ನಿಸುವ ಅನುಭವ ನೀಡುತ್ತದೆ.ಬನ್ನಿ ಒಮ್ಮೆ ನೋಡಿ ಅನುಭವ ಪಡೆಯುವ.!!!!!!!!!!!

Tuesday, April 13, 2010

ಶಾಲೆಯ ಮುಖ ನೋಡದ ಈ ಪೋರ ಜಗತ್ತಿನ ಹಲವು ಭಾಷೆ ಮಾತಾಡುತ್ತಾನೆ!!~!!!ಅಂತರ್ಜಾಲದಲ್ಲಿ ಜಗತ್ತಿನ ಜನರ ಮನಸೆಲೆದಿದ್ದಾನೆ!!!

ಇವನು ರವಿ ಉತ್ತರ ಭಾರತದ ಹುಡುಗ ತನ್ನ ಊರಿನಲ್ಲಿ ನವಿಲುಗರಿಯ ಬೀಸಣಿಗೆ ಮಾರುತ್ತಾನೆ.ಯಾವ ದೇಶದ ಜನ ಬಂದರೂ ಅವರ ಭಾಷೆಯಲ್ಲಿ ಮಾತನಾಡಿ ಅವರಿಗೆ ತನ್ನ ಬೀಸಣಿಗೆ ಮಾರುತ್ತಾನೆ.ಯಾವನನ್ನು ಅಂತರ್ಜಾಲ ಸಂಸ್ಥೆ ಯೂ ಟ್ಯೂಬ್
ತನ್ನ ಜಾಲದಲ್ಲಿ ಇವನ ಬಗ್ಗೆ ಹೆಮ್ಮಯಿಂದ ವೀಡಿಯೊ ಸಂದರ್ಶನ ಮಾಡಿ ಪ್ರಕಟಸಿದೆ. ಬನ್ನಿ ಇವನ ಪ್ರತಿಭೆ ನೋಡೋಣ.ಇವನನ್ನು ಅಭಿನಂದಿಸೋಣ!!!

Monday, April 12, 2010

ಸಣ್ಣ ಮನಸ್ಸಿನ ದೊಡ್ಡ ಮನುಷ್ಯರು !!! ಇವರಿಗೆ ಬುದ್ದಿ ಹೇಳೋರು ಯಾರು???

 
 
 
Posted by Picasa
ಅಂದು ಹಾಗೆ ನನ್ನ ಕೆಲಸದ ನಿಮಿತ್ತ ಹೊರಟಿದ್ದೆ , ಮೈಸೂರಿನ ಸರಸ್ವತಿಪುರಂ ದಾಟಿ ನನ್ನ ಆಕ್ಟಿವ ಸ್ಕೂಟರ್ ರಾಮಸ್ವಾಮಿ ವೃತ್ತದ ಕಡೆ ಹೊರಟಿತ್ತು !!! ಮುಂದೆ ಒಂದು ಬಿಳಿಬಣ್ಣ ದ ಮಾರುತಿ ಹೋಗುತ್ತಿತ್ತು ಅದರೊಳಗಿಂದ ಒಂದು ಕೈ ದಾರಿ ಉದ್ದಕ್ಕೂ ಸಿಗರೇಟಿನ ಕಿಡಿ ಹಾಗು ಭೂದಿ ಹೊಗೆ ಹರಡಿಕೊಂಡು ಚಲಿಸಿತ್ತು. ಸ್ಕೂಟರಿನಲ್ಲಿದ್ದ ನನ್ನ ಕಣ್ಣಿಗೆ ಕಿಡಿ ಬಂದು ತಗುಲಿ ಸ್ವಲ್ಪ ಉರಿಯಿತು , ಹಾಗೆ ಮುಂದೆ ರಾಮ ಸ್ವಾಮೀ ಸರ್ಕಲ್ ಸಿಗ್ನಲ್ ಹತ್ತಿರ ಈ ಪುಣ್ಯಾತ್ಮನಿಗೆ ಸ್ವಲ್ಪ ಪೂಜೆ ಮಾಡಿದೆ ಅನ್ನಿ !! ಆದ್ರೆ ಆ ಪುಣ್ಯಾತ್ಮನಿಗೆ ಏನು ಅನ್ನಿಸಿದ ಹಾಗೆ ಕಾಣಲಿಲ್ಲ !!! ಹಾಗೆ ನನ್ನ ಮೊಬೈಲ್ ನಿಂದ ಅವನ ಕೈ ಮಾಡಿದ ಕೆಲಸ ಸೆರೆಯಾಗಿತ್ತು . ಇಂತಹ ಸಣ್ಣ ಮನಸ್ಸಿನ ದೊಡ್ಡ ಮನುಷ್ಯರಿಗೆ ತಮ್ಮ ಇಂತಹ ಕ್ರಿಯೆ ಯಿಂದ ಅದರಲ್ಲೂ ವಾಹನ ಚಾಲನೆ ಮಾಡುವಾಗ ಹಿಂದಿನ ದ್ವಿಚಕ್ರ ಸವಾರರಿಗೆ ,ಪಾದ ಚಾರಿಗಳಿಗೆ ಸಿಗರೇಟಿನ ಕಿಡಿ, ಬೂದಿ ಹಾರಿ ಆಗುವ ಹಾನಿಯ ಅರಿವು ಇಲ್ಲದೆ ಇರುವುದು ಶೋಚನೀಯ .ಕೆಲವೊಮ್ಮೆ ವೇಗವಾಗಿ ಬರುವ ಇಂತಹ ಕಿಡಿಗಳು ಕಣ್ಣನ್ನು ಹಾಳು ಮಾಡಬಹುದು ಆದ್ದರಿಂದ ಬ್ಲಾಗಿಗರೇ ನೀವು ಧೂಮಪಾನಿಗಳಾಗಿದ್ದರೆ ದಯಮಾಡಿ ಇವನಂತೆ ದಾರಿ ಉದ್ದಕ್ಕೂ ಹೀಗೆ ಸಿಗರೇಟಿನ ಕಿಡಿ,ಭೂದಿ ಉದುರಿಸಿಕೊಂಡು ಹೋಗಿ ಬೇರೆಯವರ ಕಣ್ಣು ಕೀಳದಿರಿ !!!ಏನಂತಿರಾ ಸ್ವಾಮೀ???

ಕನ್ನಡವೇ ಸತ್ಯ ಎಂದು ಬದುಕಿದ ಡಾ// ರಾಜ್ ಕುಮಾರ್ ನೆನಪು.

ಅದು ಯಾವುದೇ ಪಾತ್ರವಾಗಲಿ ಅದರಲ್ಲಿ ಲೀನವಾಗಿ ಅಭಿನಯಿಸಿ  ಕನ್ನಡ ಚಿತ್ರರಂಗದ ಹೆಮ್ಮೆಯ ನಕ್ಷತ್ರವಾಗಿ  ಕನ್ನಡವೇ ಸತ್ಯ ಅನ್ನುತ್ತ  ಕನ್ನಡ ತಾಯಿಯ ನೆಚ್ಚಿನ ಮಗನಾಗಿ ಮೆರೆದ ಕನ್ನಡಿಗರ ಮೆಚ್ಚಿನ ರಾಜಣ್ಣ ನೆನಪಿನಿಂದ ಮರೆಯಾಗುವುದು  ಸಾಧ್ಯವಿಲ್ಲದ ಮಾತು.ಅದಕ್ಕೆ ಪೂರಕವಾಗಿ ಒಂದು ಅಪರೂಪದ  ವಿಡಿಯೋ  ಇಲ್ಲಿದೆ ನೋಡಿ !!! ಇದನ್ನು ನೋಡಿಯೂ ನಾವು ರಾಜಣ್ಣನ ಮರೆಯಲು ಸಾಧ್ಯವೇ ನೀವೇ ಹೇಳಿ!!!

ಸರ್ವಾಧಿಕಾರಿ ಹಿಟ್ಲರ್ ನನ್ನು ಅಣಕಿಸುವ ತಾಕತ್ತು ಇದ್ದದ್ದು ಇವನಿಗೆ ಮಾತ್ರ !!!

ಬಹುಷಃ  ಚಾರ್ಲಿ ಚಾಪ್ಲಿನ್ ತನ್ನ ಒಂದೊಂದು ಚಿತ್ರದಲ್ಲಿಯೂ  ವಿಶ್ವದ ಪುಟಗಳನ್ನೂ ತೆರೆದಿಟ್ಟಿದ್ದಾನೆ!!!.ದಿ ಗ್ರೇಟ್ ಡಿಕ್ಟೇ ಟರ್  ಚಿತ್ರದಲ್ಲಿ ಹಿಟ್ಲರ್ ನ ಹುಚ್ಚಾಟಗಳನ್ನು  ಎಳೆಯಾಗಿ ಬಿಡಿಸಿಟ್ಟು ಅವನ ಸರ್ವಾಧಿಕಾರವನ್ನು ಗೇಲಿ ಮಾಡಿ ಅಣಕಿಸಿದ್ದಾನೆ.ಈ  ಸಂಧರ್ಭವನ್ನೇ ನೋಡಿ ಇಡಿ ವಿಶ್ವವನ್ನೇ ಹಿಟ್ಲರ್ ತನ್ನ ಹಿಡಿತಕ್ಕೆ ತೆಗೆದುಕೊಳ್ಳಬೇಕೆಂಬ  ದುರಾಸೆ ಇಂದ  ವಿಶ್ವವನ್ನು ಚೆಂಡಿನಂತೆ  ಆಟವಾಡಿಸುವ  ರೀತಿ  ಹಾಗು ಅವನ ಆಸೆ ಭಗ್ನವಾಗಿ  ಪರಿತಪಿಸುವ ಸ್ತಿತಿಯನ್ನು  ಅಭಿನಯಿಸಿ  ವಿಶ್ವದ ಪ್ರೇಕ್ಷಕರಿಂದ  ಸೈ ಅನ್ನಿಸಿ ಕೊಂಡ್ಡಿದ್ದಾನೆ.ಬನ್ನಿ  ಹಿಟ್ಲರ್ ಹುಚ್ಚಾಟಗಳ ದೃಶ್ಯ ನೋಡಿ ನಾವೂ ನಲಿಯುವ!!! ಸ್ವಾಮೀ ....... ಇಂದಿನ ಸೂಪರ್ ಸ್ಟಾರ್  ಗಳೇ ನಿಮಗೆ ಈ ತಾಕತ್ತು ಇದೆಯೇ????

Friday, April 9, 2010

ಮನುಷ್ಯ ಯಂತ್ರಗಳ ದಾಸನಾದಾಗ ಆಗುವ ಅನಾಹುತ ತೋರಿಸುವ ಈ ಊಟ ಮಾಡಿಸುವ ಯಂತ್ರ!!!

ಜಗತ್ತಿಗೆ ನಗು ನಗು ತ್ತಲೇ  ದುರಂತಗಳ ಧುಕ್ಕ ತೋರಿದ ಈ ಮಹಾನುಭಾವ  ಚಾರ್ಲಿ ಚಾಪ್ಲಿನ್ ೧೯೩೬ ರಲ್ಲಿ ಮಾಡರ್ನ್ ಟೈಮ್ಸ್  ಚಿತ್ರದ ಮೂಲಕ  ಜಗತ್ತಿಗೆ ಮನುಷ್ಯ ಯಂತ್ರಗಳ ದಾಸನಾದರೆ ಆಗುವ ಅನಾಹುತಗಳ ಬಗ್ಗೆ  ವಿಡಂಬನಾತ್ಮಕವಾಗಿ ವಿವರಿಸಿದ್ದಾನೆ. ಚಲನ ಚಿತ್ರವೆಂದರೆ  ಜಗತ್ತಿಗೆ ಹಾಗು ಸಮಾಜಕ್ಕೆ ಪೂರಕವಾದ  ಮಾಹಿತಿ ಸಂದೇಶ  ನೀಡಬೇಕಾದ  ಮಾಧ್ಯಮ ಎಂಬುದನ್ನು  ತೋರಿಸಿಕೊಟ್ಟ ಮಹನೀಯ. ಇವನೆಂದರೆ ಸತ್ಯವಾಗಿಯೂ ಹೌದು.ಈ  ವೀಡಿಯೊ ನೋಡಿ ಇಲ್ಲಿ  ಸಮಯ ಉಳಿಸಲು  ನೌಕರನಿಗೆ  ಆಹಾರ ತಿನ್ನಿಸುವ ಯಂತ್ರ ತಯಾರಿಸಿದ್ದಾರೆ. ಯಂತ್ರದ ತಾಂತ್ರಿಕ ದೋಷದಿಂದ  ಉಂಟಾಗುವುದರಿಂದ  ಚಾರ್ಲಿ ಪಡುವ ಪಾಡಿನ ಅಭಿನಯ  ನಿತ್ಯ ನೂತನ .ಈಗಿನ ಕಾಲದ ವಿಶ್ವದ  ಯಾವುದೇ ಭಾಷೆಯ ಚಲನ ಚಿತ್ರದಲ್ಲಿ  ಕಾಣಸಿಗದ ಕಥೆ ,ಅಭಿನಯ , ಹಾಗುಯಂತ್ರಗಳನ್ನು ಹೆಚ್ಚು ಅವಲಂಬಿಸಿದರೆ  ವಿಶ್ವಕ್ಕೆ ಒದಗಬಹುದಾದ  ವಿಪತ್ತು ಇವುಗಳ ಮುನ್ಸೂಚನೆ ಯನ್ನು ಸರ್ವಕಾಲಕ್ಕೂ ಸಲ್ಲುವಂತೆ  ಈ ಚಲನ ಚಿತ್ರದಲ್ಲಿ ತಿಳಿಸಿ ಚಾರ್ಲಿ ಚಾಪ್ಲಿನ್ ಅಮರನಾಗಿ ಉಳಿದ್ದಿದ್ದಾನೆ.ನೀವು ಒಮ್ಮೆ ನೋಡಿ ಅಚ್ಚರಿಪಡಿ!!!! ಹಾಗು ಇಂದು ನಾವು ನಿರ್ಮಿಸಿರುವ ಯಂತ್ರಗಳು ಮಾಡುತ್ತಿರುವ ಅನಾಹುತ ಎಷ್ಟುಜನರ ಬದುಕ ಹಾಳುಮಾದುತ್ತಿವೆ ಗಮನಿಸಿ.ಇಂದು ಉಪಯೋಗಿಸುವ ಒಂದು ಜೆ.ಸಿ.ಬಿ.ಯಂತ್ರ ಕನಿಷ್ಠ ಹತ್ತು ಕುಟುಂಬಗಳ ಆನ್ನ ಕಸಿದಿದೆ ,ಮುಂದೊಮ್ಮೆ ಯಂತ್ರಗಳೇ ನಮ್ಮನ್ನು ಹುರಿದು ಮುಕ್ಕುವ ಮುನ್ನ ಎಚ್ಚರಗೊಳ್ಳುವುದು ಒಳಿತು!!!ಅಲ್ವ ???

Wednesday, April 7, 2010

ಕಬಿನಿಯ ಕಾಡಿಗೆ ಕನ್ನಡ ಚಿತ್ರದ ಹಾಡಿನ ನಮನ !!! ಕಾಡಿನ ವೈಭವ ನೋಡಿಬನ್ನಿ!!!

ಕನ್ನಡದ  ಆಸ್ತಿ ಮಾಸ್ತಿ ಅವರ ಕಾಕನಕೋಟೆ  ಕಥೆ ಚಲನಚಿತ್ರವಾಗಿ ಸುಂದರವಾಗಿ ಮೂಡಿಬಂದಿದ್ದು ಇತಿಹಾಸ . ಆದರೆ ಆ ಚಿತ್ರದ ಹಾಡುಗಳು ಜನರ ಮನದಲ್ಲಿ ಮರೆಯಾಗದೆ ಉಳಿದಿವೆ.ಈ ಹಾಡಿನ ಸಾಹಿತ್ಯ ,ಸಂಗೀತ , ಹಾಗು ಸಿ.ಅಶ್ವಥ್ ರವರ ಹಾಡುಗಾರಿಕೆ  ಒಂದಕೊಂದು ಪೂರಕವಾಗಿ ಮೇಳೈಸಿ ಮೆರೆದಿದೆ. ಹಾಡಿನ ಚಿತ್ರೀಕರಣ ಸುಂದರವಾಗಿದ್ದು  ಮನಸೆಳೆಯುತ್ತದೆ. ಸುಂದರ ಹಾಡನ್ನು ಕೇಳುತ್ತಾ ಕಾಡನ್ನು ನೋಡುವ ಬನ್ನಿ !!!

ಕಾಕನಕೋಟೆ ಚಿತ್ರದ ಈ ಹಾಡು ಎಂಥ ಮಧುರ !!! ನೇಸಾರ ನೋಡು

ಮಾಸ್ತಿ ವೆಂಕಟೇಶ್ ಅಯಂಗಾರ್ ರವರ ಈ ಕಥೆ ಕಾಕನಕೋಟೆ  ಅದೇ ಹೆಸರಿನಿಂದ ಚಿತ್ರವಾಗಿ ಮೂಡಿಬಂತು !!! ಅದರಲ್ಲಿನ ಮಧುರ ಹಾಡುಗಳು  ಕನ್ನಡಿಗರ ಮನಸೂರೆಗೊಂಡು ಹಾಡು ಕೇಳಿದವರು ಗುನುಗುವಂತೆ ಮಾಡುವ ಮೋಡಿ ಇಂದಿಗೂ ಚಾಲ್ತಿಯಲ್ಲಿದೆ .ಮಧುರ ಹಿತವಾದ ಸಂಗೀತ  ಈ ಹಾಡುಗಳನ್ನು ಅಮರವಾಗಿಸಿದೆ ಕೇಳಿ ನೋಡಿ ನಲಿಯಿರಿ.