ಕಳೆದ ಹದಿನಾರು ಸಂಚಿಕೆಗಳಲ್ಲಿ ಶಿರಸಿ ಪ್ರವಾಸದ ಚಿತ್ರ ಸಹಿತ ಲೇಖನ ಕೊಟ್ಟು ನಿಮ್ಮನ್ನು ಕಾಡಿದ್ದು ಸಾಕಾಯ್ತು ರೀ, ಅದಕ್ಕೆ ಪ್ರಾಯಶ್ಚಿತ್ತವಾಗಿ ಈ ಲೇಖನ ಚಿತ್ರವಿಲ್ಲದೆ ಬರೆಯುವ ಪ್ರಯತ್ನ . ಓದಿ ಒಂತರಾ ಇಷ್ಟಾ ಆಗುತ್ತೆ. ಬನ್ನಿ ಶುರುಮಾಡೋಣ ನಮ್ ಪುರಾಣ.
ಪಟ್ಟಣದ ಸಹವಾಸ ಮಾಡಿ ಬಹಳ ವರ್ಷವೇ ಆಯ್ತು ಬಿಡಿ. ಹಳ್ಳಿಯಲ್ಲಿ ಹುಟ್ಟಿ, ಬಾಲ್ಯ ಸವೆಸಿ , ನಂತರ ಉದರ ನಿಮಿತ್ತಂ ಪಟ್ಟಣ ಸೇರಿದವ ನಾನು. ಮೊದಲು ಪಟ್ಟಣಕ್ಕೆ ಬಂದ ಹೊಸದರಲ್ಲಿ ಪಪಾಯ ಹಣ್ಣು, ಮಜ್ಜಿಗೆ, ಮೊಸರು, ಇವುಗಳನ್ನು ಮಾರಾಟ ಮಾದುತ್ತಿದ್ದುದ್ದನ್ನು ನೋಡಿ ನಗು ಬರುತ್ತಿತ್ತು. ಹಳ್ಳಿಯಲ್ಲಿ ಪ್ರತೀ ಮನೆಯಲ್ಲೂ ಹೇರಳವಾಗಿದ್ದ ಇವುಗಳನ್ನು ಯಾರೂ ಮಾರುತ್ತಿರಲಿಲ್ಲ ಸಾಕಾಗುವಷ್ಟು ಬಳಸಿ ನಂತರ ಕಲಗಚ್ಚು ಮಾಡುತ್ತಿದ್ದರು, ಇವುಗಳನ್ನು ಹಸುಗಳು, ಎಮ್ಮೆಗಳು ಕುಡಿದು ಬಾಯಾರಿಕೆ ನಿವಾರಿಸಿ ಕೊಳ್ಳುತ್ತಿದ್ದವು .ಇಂತಹ ಪ್ರದೇಶದಿಂದ ಬಂದ ನನಗೆ ಇವುಗಳನ್ನು ಮಾರಾಟ ಮಾಡಿದರೆ ನಗು ಬರದೆ ಇರುತ್ತದೆಯೇ. ಆದರೆ ಬರ್ತಾ ಬರ್ತಾ ಜ್ಞಾನ ಪ್ರಸಾರಣೆ ಪತ್ರಿಕೆ, ಟಿ .ವಿ. , ಕೇಬಲ್, ಮುಂತಾದವುಗಳಿಂದ ಹಳ್ಳಿಗೆ ನುಗ್ಗಿತು. ಜ್ಞಾನದ ಜೊತೆ ಕೆಟ್ಟ ಸಂಪ್ರದಾಯಗಳೂ ನುಸುಳಿಕೊಂಡು ಹಳ್ಳಿಯಲ್ಲಿನ ಜೀವನ ಏರುಪೇರಾಯಿತು. ಅಲ್ಲಿನ ಜನರೂ ಬದಲಾವಣೆ ಗಾಳಿಗೆ ತೂರಿಕೊಂಡರು.
ಬನ್ನಿ ನಮ್ಮ ಕಥೆಗೆ . ಪಟ್ಟಣದ ನಮ್ಮ ಮನೆಯ ಪಕ್ಕ ಒಂದು ಕುಟುಂಬವಿತ್ತು, ನಮ್ಮ ಕುಟುಂಬದೊಡನೆ ಒಳ್ಳೆಯ ಸಂಬಂಧವಿತ್ತು.ಎಲ್ಲರೂ ದೊಡ್ಡ ಡಿಗ್ರೀ ಓದಿದವರೇ , ತಮ್ಮ ಮನೆಗೆ ಏನೇ ಬಂದರೂ ಫ್ರೆಶ್ ಆಗಿ ಬರಬೇಕೂ ಅನ್ನೋ ಆಸೆ. ಇನ್ನು ಹಣ್ಣು ತರಕಾರಿಯನ್ನು ಪ್ರತೀ ಭಾನುವಾರ ಸುತ್ತ ಮುತ್ತಲಿನ ಹಳ್ಳಿಗಳಿಂದ ತಂದರೆ ಚೆನ್ನಾಗಿರುತ್ತೆ ಅಂತಾ ಹಳ್ಳಿಗಳಿಂದ ತರುತ್ತಿದ್ದರು. ಇನ್ನು ಮನೆಗೆ ಅಗತ್ಯ ವಿರುವ ಹಾಲು, ಹಾಗು ಬೆಣ್ಣೆಯನ್ನು ಹಳ್ಳಿಯವರಿಂದ ಪಡೆಯುತ್ತಿದ್ದರು. ಇದನ್ನು ಹೆಮ್ಮೆಯಿಂದ ಹೇಳಿ ಕೊಳ್ಳುತ್ತಿದ್ದರು.
ಒಮ್ಮೆ ಹೀಗಾಯ್ತು ನಮ್ಮ ತಾಯಿಯ ಬಳಿ ಬಂದ ಪಕ್ಕದ ಮನೆಯಾಕೆ " ಅಜ್ಜಿ ನೋಡಿ ಹಳ್ಳಿಯಿಂದ ಬೆಣ್ಣೆ ಬಂದಿದೆ , ಎಷ್ಟು ಗಮ್ ಅಂತಾ ವಾಸನೆ ಬರ್ತಿದೆ ಆಲ್ವಾ"!! ಅಂತಾ ಬೆಣ್ಣೆ ಸಹಿತ ಬಂದರು, ಅದನ್ನು ನೋಡಿದ ನನ್ನ ತಾಯಿ " ನೋಡಿ ಭಾರತಿ ಈ ಬೆಣ್ಣೆ ನಾಡ ಬೆಣ್ಣೆ ಅಲ್ಲಾ ಇದು ಕಲಬೆರಕೆ ಅನ್ನಿಸುತ್ತೆ" ಅಂದರು, ಆಕೆಗೆ ಯಾಕೋ ಒಂತರಾ ಆಯ್ತು. ನಮ್ಮ ತಾಯಿ ಹಳ್ಳಿಯಲ್ಲಿ ಹತ್ತಾರು , ಹಸು, ಎಮ್ಮೆ ಗಳಿಂದ ಹಾಲು ಕರೆದು ಮೊಸರು, ಬೆಣ್ಣೆ ಮಾಡುತ್ತಿದ್ದರು. ಹಾಗಾಗಿ ಅವರಿಗೆ ಅದರ ಅಸಲಿಯತ್ತು ಗೊತ್ತಾಗುತ್ತಿತ್ತು. ಇನ್ನು ಅವರ ಮನೆಯ ಹಾಲಿನ ಬಗ್ಗೆ ಅವರ ಹೆಮ್ಮೆ ಬಹಳವಿತ್ತು. ಯಾರೇ ಅವರ ಮನೆಗೆ ಹೋದರೂ ಅವರಿಗೆ ಅವರ ಮನೆಗೆ ಬರುವ ಹಳ್ಳಿ ಹಾಲಿನ ವರ್ಣನೆ ಆಗುತ್ತಿತ್ತು. ''ರೀ ನಮ್ಮನೆ ಹಾಲೂ ಹಳ್ಳಿದೂ ಗೊತ್ತಾ ???'' ಅಂತಾ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು
ಒಮ್ಮೆ ನಾನೂ ಸಹ ಅವರ ಮನೆಯಲ್ಲಿನ ಕಾರ್ಯಕ್ರಮಕ್ಕೆ ಹಾಜರಾಗಬೇಕಾಯಿತು. ಅಲ್ಲಿ ಅವರ ವಿವರಣೆ ಹೀಗಿತ್ತು, "ಬಾಲೂ ಸಾರ್ ಪಟ್ಟಣದಲ್ಲಿ ಸಿಗುವ ಡೈರೀ ಹಾಲೂ ಆರೋಗ್ಯಕ್ಕೆ ಒಳ್ಳೆದಲ್ಲಾ ರೀ ....... ....." "ನೋಡಿ ನಮ್ಮ ಮನೆಗೆ ಸುಮಾರು ಐದು ವರ್ಷಗಳಿಂದ ಹಳ್ಳಿಯಿಂದ ಹಾಲು ಬರುತ್ತೆ", "ಟಕ್ ಅಂತಾ ಬೆಳಿಗ್ಗೆ ಎಂಟು ಘಂಟೆಗೆ ತಂದು ಬಿಡುತ್ತಾಳೆ ನಮ್ಮ ನಿಂಗಮ್ಮ." "ನಾಡ ಹಸುವಿನ ಹಾಲೂ ರೀ !! ಒಳ್ಳೆ ಕೆಂಡ ಸಂಪಿಗೆ ಬಣ್ಣ ಇರುತ್ತೆ " , "ವರ್ಷದಲ್ಲಿ ಒಂದು ದಿನವೂ ತಪ್ಪಿಲ್ಲಾ ರೀ ಅದೇ ಕ್ವಾಲಿಟಿ ಹಾಲೂ ರೀ " "ನೋಡಿ ನೀವೂ ಸಹ ಅವಳ ಬಳಿ ವರ್ತನೆಗೆ ಹಾಲು ಹಾಕಿಸಿ ಕೊಳ್ಳಿ " ಅಂತಾ ಶಿಫಾರಸ್ಸು ಮಾಡಿದರು. ಆದರೂ ನನಗೆ ಒಂದು ಪ್ರಶ್ನೆಗೆ ಉತ್ತರ ಸಿಗಲಿಲ್ಲ, ಹಳ್ಳಿಯಲ್ಲಿದ್ದ ನಮ್ಮ ಮನೆಯ ಹಸು ಎಮ್ಮೆಗಳು ಯಾವುವೂ ವರ್ಷ ಪೂರ್ತಿ ಹಾಲು ನೀಡುತ್ತಿರಲಿಲ್ಲ.. ಅವುಗಳೂ ಸಹ ಗಬ್ಬ ಧರಿಸ ಬೇಕೂ, ಕರು ಹಾಕಬೇಕೂ , ಕರು ಹಾಕಿದ ತಕ್ಷಣ ಹಾಲೂ ಸಿಗುವುದಿಲ್ಲ, ಮೊದಲ ಕೆಲವು ದಿನ ಅದು ಗಿಣ್ಣು ಹಾಲು ಆಗಿರುತ್ತೆ, ಹಾಲಿನಂತೆ ಬಳಸಲು ಆಗುವುದಿಲ್ಲ ಆದರು ಒಂದು ದಿನವೂ ತಪ್ಪದೆ ಹೇಗೆ ಹಾಲನ್ನು ನೀಡಲು ಸಾಧ್ಯ ವೆಂದು ಅನ್ನಿಸುತ್ತಿತ್ತು. ನಾನು ಅವರಿಗೆ "ಇಲ್ಲಾ ಮುರಳಿ ಸಾರ್ ನನ್ನ ದೈನಂದಿನ ಜೀವನ ಕ್ರಮಕ್ಕೆ ಎಂಟು ಘಂಟೆ ತನಕ ಕಾಯಲು ಆಗೋಲ್ಲಾ." " ಹಾಗಾಗಿ ನಮ್ಮ ಕುಟುಂಬ ನಂದಿನಿ ಹಾಲೂ ,ಬೆಣ್ಣೆ, ಇವುಗಳಿಗೆ ಹೊಂದಿಕೊಂಡಿದ್ದೇವೆ , ನೋಡೋಣ ಮುಂದೆ ಅಂತಾ ಮಾತು ತೇಲಿಸಿದೆ" ಆದರೆ ಅವರು "ನೋಡಿ ಮಿಸ್ಟರ್ ಬಾಲೂ ಡೈರೀ ಹಾಲೂ ಪ್ರಯೋಜನ ಇಲ್ಲಾ ರೀ ವಿಟಮಿನ್ಸ್ ಎಲ್ಲಾ ತೆಗೆದು ಹಾಕಿರ್ತಾರೆ ಅದಕ್ಕೆ ನಾವೂ ಹಳ್ಳಿ ಹಾಲು ಇಷ್ಟಾ ಪಡೋದು " ಅಂತಾ ಬುದ್ದಿ ಹೇಳಿದರು. ಪಾಪ ಅವರು ಹೇಳಿದ್ದು ನಮ್ಮ ಮೇಲಿನ ಕಾಳಜಿಯಿಂದ ಆಗಿತ್ತು.
ನಮ್ಮ ಮನೆಗೆ ಹಾಲು ತರುವ ಕಾಯಕ ನನ್ನದು ಬೆಳಿಗ್ಗೆ ವಾಕಿಂಗ್ ಮುಗಿಸಿ ಬರುವಾಗ ದಾರಿಯಲ್ಲಿ ಸಿಗುವ ನಂದಿನಿ ಮಳಿಗೆಯಲ್ಲಿ ಹಾಲೂ ಮೊಸರು, ಬೆಣ್ಣೆ ತರುತ್ತೇನೆ. ಹಾಗಾಗಿ ನಮ್ಮ ಮನೆಗೆ ಮುಂಜಾನೆ 6.30 ಗೆಲ್ಲಾ ಹಾಲಿನ ಆಗಮನ ವಾಗುತ್ತೆ. ಒಮ್ಮೆ ಹೀಗಾಯ್ತು. ಬೆಂಗಳೂರಿಗೆ ಹೋಗ ಬೇಕಾಗಿದ್ದ ಕಾರಣ ಮುಂಜಾನೆ ವಾಕಿಂಗ್ ಬದಲು ನೇರವಾಗಿ ನಂದಿನಿ ಹಾಲಿನ ಮಳಿಗೆ ಕಡೆ ಹೆಜ್ಜೆ ಹಾಕಿದೆ. ಹಾಲಿನ ಮಳಿಗೆ ಬಳಿ ಮೂರು ಜನ ಹಳ್ಳಿ ಹೆಂಗಸರು ನಂದಿನಿ ಹಾಲಿನ ಪ್ಯಾಕೆಟ್ ಖರೀದಿಸಿ ತಮ್ಮ ಬುಟ್ಟಿಯಲ್ಲಿದ್ದ ಪಾತ್ರೆಗೆ ಸುರಿದುಕೊಳ್ಳುತ್ತಿದ್ದರು !! ಹತ್ತಿರ ತೆರಳಿದ ನನ್ನನ್ನು ನೋಡಿ ತಕ್ಷಣ ಏನೋ ಮಾತಾಡುವಂತೆ ನಟನೆ ಮಾಡುತ್ತಿದ್ದರು. ನನಗೂ ಅಚ್ಚರಿ ನಾನು ದಿನಾಲು ವಾಕಿಂಗ್ ಹೋಗುವ ಕಡೆ ಸಿಗುವ ಬಸ್ ನಿಲ್ದಾಣದಲ್ಲಿ ಹಲವಾರು ಹಳ್ಳಿ ಗಳಿಂದ ಹೆಂಗಸರು ನಮ್ಮ ನಗರಕ್ಕೆ ಹಳ್ಳಿ ಗಳಿಂದ ಹಾಲು, ಮೊಸರು, ತರಕಾರಿ ಮಾರಲು ಮುಂಜಾನೆಯೇ ಬಂದು ಜಮಾಯಿಸುವುದನ್ನು ಗಮನಿಸುತ್ತಿದ್ದೆ. ಇವರೂ ಸಹ ಅವರ ಗುಂಪಿಗೆ ಸೇರಿದ ಮಹಿಳೆಯರೇ ಆಗಿದ್ದರು. ನಾನೂ ಇದನ್ನು ಗಮನಿಸಿಲ್ಲ ಅನ್ನುವ ಹಾಗೆ ನನ್ನ ಪಾಲಿನ ಹಾಲು ಖರೀದಿಸಿ ದೂರದಲ್ಲಿ ಅವರಿಗೆ ಕಾಣದಂತೆ ನಿಂತು ಅವರ ಚಟುವಟಿಕೆ ಗಮನಿಸಿದೆ. ಮತ್ತೆ ಚಟುವಟಿಕೆ ಶುರು ಆಯ್ತು ಅವರಲ್ಲಿ ಒಬ್ಬಳು " ರತ್ನಿ ಬಿರಬಿರನೆ ಸುರಕೋ ಹೊತ್ತಾಯ್ತು , ಆ ಮಾಡಿ ಮನೆಯವಳು ಬಯ್ತಾಳೆ ಲೇಟಾದರೆ" ಅಂದ್ಲೂ..........,ಮತ್ತೊಬ್ಬಳು " ಏ ನಿಂಗಿ ಸುಮ್ಕಿರು ನಂಗೆ ಗೊತ್ತಿಲ್ವಾ ಯಾರಾದ್ರೂ ನೋಡ್ತಾವ್ರಾ ಅಂತಾ ನನ್ ಎದ್ರುಕೆ ನಿನಗೆನ್ ಗೊತ್ತು". ಅಂತಾ ಆಕಡೆ ಈಕಡೆ ನೋಡಿ ತನ್ನ ಪಾತ್ರೆಗೆ ಐದು ಪ್ಯಾಕೆಟ್ ನಂದಿನಿ ಹಾಲನ್ನು ಸುರಿದು ಕೊಂಡಳು. ನಂತರ ಆ ಹಾಲಿಗೆ ಪಕ್ಕದ ಕೊಳಾಯಿಯ ನೀರನ್ನು ಬೆರೆಸಿ ಅದಕ್ಕೆ ಸ್ವಲ್ಪ ಕೇಸರಿ ಬಣ್ಣದ ಪುಡಿ ಸೇರಿಸಿ ಕೆಂಡ ಸಂಪಿಗೆ ಬಣ್ಣ ನೀಡಿದರು. ಆಗ ನೋಡಿದೆ ಹಳ್ಳಿ ಹಾಲಿನ ಬಣ್ಣ ಬಯಲಾಯಿತು.
ಮನೆಗೆ ಬಂದವನೇ ಇರುವ ವಿಚಾರವನ್ನು ನನ್ನ ಪತ್ನಿಗೆ ತಿಳಿಸಿದೆ . "ಹೋಗ್ಲಿ ಬಿಡೀ ಅವರ ಕರ್ಮ ನಾವೇನು ಮಾಡೋಕೆ ಆಗುತ್ತೆ " ಅಂದ್ಲೂ , ಯಾಕೋ ಮನಸು ತಡೆಯಲಿಲ್ಲ.ಹೊರಗೆ ಬಂದೆ ಮನೆಯ ಮುಂದೆ ಪಕ್ಕದ ಮನೆಯವರು ನಿಂತಿರುವುದನ್ನು ಕಂಡು 'ನಮಸ್ತೆ ಮುರಳಿ ಸರ್ " ಎಂದೇ ಅವರೂ ಸಹ ನಮಸ್ತೆ "ಬಾಲೂ ಸರ್ ಏನ್ ಬ್ಯುಸೀನಾ" ಅಂತಾ ಹತ್ತಿರ ಬಂದರು. ನಾನೂ "ತಪ್ಪು ತಿಳೀಬೇಡಿ ಮುರಳಿ ಸರ್" ಅಂತಾ ಹೇಳಿ ಇವತ್ತು ಹಾಲಿನ ಕಥೆ ಹೀಗಿತ್ತು ಅಂತಾ ವರದಿ ಒಪ್ಪಿಸಿದೆ . ಅವರಿಗೂ ಮೊದಲು ನಂಬಿಕೆ ಬರಲಿಲ್ಲ . ಆದರೂ ನನ್ನ ಮಾತನ್ನು ತೆಗೆದು ಹಾಕಲು ಮನಸಿಲ್ಲ ಹಾಗಾಗಿ "ಸಾರ್ ನಿಮ್ಮ ಜೊತೆ ನಾಳೆ ಬರುತ್ತೇನೆ ಸ್ವಲ್ಪ ತೋರಿಸಿ ಸಾರ್ ನಾನೂ ನೋಡ್ತೇನೆ" ಅಂದ್ರೂ ಮತ್ತೆ ಮಾರನೆಯ ದಿನ ನಾ ಕಂಡ ಸೀನು ಪುನರಾವರ್ತನೆ ಆಗಿತ್ತು, ಜೊತೆಗೆ ಅವರ ಮನೆಗೆ ಹಾಲು ತಂದು ಹಾಕುತ್ತಿದ್ದ ಹೆಂಗಸೂ ಸಹ ಅಲ್ಲಿದ್ದಳು. ಮುರಳಿ ಯವರಿಗೆ ಕೋಪ ಬಂದು ಪ್ಯಾಕೆಟ್ ಹಾಲನ್ನು ಪಾತ್ರೆಗೆ ಸುರಿಯುತ್ತಿದ್ದ ಹೆಂಗಸಿನ ಬಳಿ ಬಂದು" ಏನಮ್ಮಾ ನಿನ್ನ ಕರಾಮತ್ತು ನಿಂದು ನಮಗೆಲ್ಲಾ ಹಳ್ಳಿ ಹಾಲು ಅಂತಾ ಹೇಳಿ ಮೋಸಾ ಮಾಡ್ತಾ ಇದ್ದೀಯ?' ಅಂತಾ ರಂಪಾಟ ಮಾಡಿ ಇವತ್ತಿನಿಂದಲೇ ನಮ್ಮ ಮನೆಗೆ ಹಾಲು ತರಬೇಡ ನಮಗೆ ನಂದಿನಿ ಹಾಲು ಸಾಕು" ಅಂತಾ ಸರಸರನೆ ಹೋಗಿ ಮೂರು ಪ್ಯಾಕೆಟ್ ನಂದಿನಿ ಹಾಲನ್ನು ಮಳಿಗೆಯಲ್ಲಿ ಕೊಂಡರು . ದಾರಿಯಲ್ಲಿ ಬರುವಾಗ " ನೋಡಿ ಸಾರ್ ನಾವೋ ಎಂತಾ ಮೋಸ ಹೋಗಿದ್ವೀ , ನಿಮ್ಮ ಮಾತನ್ನು ಮೊದಲೇ ಕೇಳಬೇಕಿತ್ತು," ಅಂತಾ ಪಶ್ಚಾತ್ತಾಪ ಪಟ್ಟರು. ಅಂದಿನಿಂದ ಅವರ ಮನೆಯಲ್ಲಿ " ರೀ ನಮ್ಮನೆ ಹಾಲೂ ಹಳ್ಳಿದೂ ಗೊತ್ತಾ??" ಅನ್ನೋ ಮಾತು ನಿಂತು ಹೋಗಿದೆ. .........!!! ಅಂದಹಾಗೆ ನಿಮ್ಮ ಮನೆ ಹಾಲು ಯಾವುದು??

8 comments:
ಹಾ ಹಾ ಬಾಲು ಸರ್..
ಕ್ಷಿರ ಪುರಾಣ..ಹಮ್..ಬೇರೆ ಊರಿನ ಕಥೆ ಬರೆದ ಮೇಲೆ ಮನೆ ಒಳಗಿನ ಕಥೆ ಬರೆದಿದ್ದೀರಿ..
ಒಮ್ಮೆ ನಕ್ಕು ಹಗುರಾದೆ..
ಬರೆಯುತ್ತಿರಿ..
ಉಲೂಚಿ "ಬಭ್ರುವಾಹನ..ಬಾಹುಬಲದ ಪರೀಕ್ಷೆಯಾಗಬೇಕು...ಎಲ್ಲಿ ಅಲ್ಲಿರುವ ಏಳು ಲೋಹದ ಬೊಂಬೆಗಳ ತಲೆಯನ್ನು ಒಂದೇ ಬಾಣದಲ್ಲಿ ಉರುಳಿಸು ನೋಡೋಣ..."
"ಮಾತೆ..ಅದಕ್ಕೇನಂತೆ ನಾನು ಬಾಲೂ ಸರ್ ತರಹ ಒಂದೇ ಉಸಿರಿನಲ್ಲಿ ಚಿತ್ರಗಳಿಲ್ಲದೇ ಕಥೆ ಹೇಳುವಂತೆ....ನೀನು ಹೇಳಿದಹಾಗೆ ಮಾಡುತ್ತೇನೆ.." ಉಳಿದದದ್ದು ಬಭ್ರುವಾಹನದಲ್ಲಿ ನೋಡಿ..
ಪ್ರವಾಸ ಇರಲಿ, ಚಿತ್ರ ಕತೆ ಇರಲಿ, ಪ್ರಸಂಗ ಇರಲಿ..ಪ್ರತಿಯೊಂದನ್ನು ಸುಲಲಿತವಾಗಿ ಹೇಳುವ ಪರಿ ಸುಂದರ ಎನಿಸುತ್ತದೆ..ಹಾಲಿನ ಪುರಾಣ...ನನ್ನ ರೂಮಿನಲ್ಲೂ ಕೂತು ಆನಂದಿಸಿದೆ..ಸೂಪರ್ ಸರ್...ಸಿರ್ಸಿಯಿಂದ ಏಕ್ದಂ ಹಾಲಿಗೆ ಇಳಿದದ್ದು ಸೂಪರ್...
nammadoo nandini haale.... :)
nammadu NANDINI haale...
naanu dairy outlet nindale kharid maaDodu...
ತುಂಬಾ ಚೆನ್ನಾಗಿದೆ ಸರ್...ತಮಾಷೆಯಾಗಿತ್ತು... :)
ನಿಜ ಸಾರ್, ಮನೆ ಮುಂದೆ ಎಮ್ಮೆ ಕರೆದುಕೊಂಡು ಹಾಲು ಹಿಂಡುವವರೇ ಹೇಗೇಗೆ ಯಾಮಾರಿಸುತ್ತಾರೆ ಅಂತ ಕಣ್ಣಾರೆ ನೋಡಿದ್ದೇವೆ. ಈ ಹಳ್ಳಿ ಹೆಣ್ಣೂ ಮಕ್ಕಳು ಹಾಲು ಸುರಿದುಕೊಂಡು ಕಾಸು ಮಾಡಿಕೊಳ್ಳುವ ಪರಿ ಸೋಜಿಗ ಅನಿಸಿತು.
"ರೀ ನಮ್ಮನೆ ಹಾಲೂ ಹಳ್ಳಿದೂ ಗೊತ್ತಾ??" ಅನ್ನುವ ನಮ್ಮಂತಹ ಬುದ್ಧಿವಂತರಿಗೆ ಒಳ್ಳೆಯ ಬರಹ ಇದು.
ಹಾಲು ಎಷ್ಟು ಗಟ್ಟಿ ಅನ್ನೋದು ನಮ್ಮೂರ ಹಳ್ಳಿಲಿ ಬೈಯ್ಯಮ್ಮ ಅನ್ನೋ ವಯಸ್ಸಾದ ಹೆಂಗಸು ಹಿಂಗೈ (ಅಂಗೈ ಹಿಂಭಾಗ) ಮೇಲೆ ಒಂದು ತೊಟ್ಟು ಬಿಟ್ಟು ಹೇಳಿಬಿಡ್ತಿದ್ಳು... ಅವರಿಗೆ ಅನುಭವವೇ ದೊಡ್ಡ ಪಾಠ ಕಲಿಸಿರುತ್ತೆ...
ಚನ್ನಾಗಿದೆ ಕಥೆ ಬಾಲು-ಹಾಲು ದು.
ಕೆಟ್ಟು ಪಟ್ನ ಸೇರು - ಅಂತ ಗಾದೇನೆ ಇದೆ. ಅದರ ಮೇಲೆ ಪಟ್ಟಣದವರ ಮೋಸ ವಂಚನೆಗೂ ರೆಡಿ ಇರ್ಬೇಕು. ನೀವು ಹೇಳಿದ್ದೂ ಸರಿ. ಹಳ್ಳಿಗಳಲ್ಲಿ ಮಾವು, ಬೇವು, ಗಳನ್ನೂ ಯಾರೂ ಕಾಸ್ಕೊಟ್ಟು ಕೊಂಡ್ಕೋಳೋ ಪ್ರಮೇಯವಿಲ್ಲ. ಎಲ್ಲಾ ಪ್ರಕೃತಿ ತಾನಾಗಿ ಕೊಡುತ್ತೆ. ಪಟ್ಟಣದಲ್ಲಷ್ಟೇ ಅದಕ್ಕೆ ಕಾಸು. :)
Post a Comment