ಮಂಗಳೂರಿನ ಇನ್ಫೋಸಿಸ್ ಕ್ಯಾಂಪಸ್ ಗೆ ಐದು ತಲೆ ನಾಗರ ಹಾವು ಬಂದಿತ್ತಂತೆ ಎಂಬ ಈ ಮೇಲ್ ನನಗೆ ನನ್ನ ಸ್ನೇಹಿತ ಶರತ್ ಕಳುಹಿಸಿದ್ದರು , ಆಶ್ಚರ್ಯವಾಯಿತು.ಅಲ್ಲ ಗುರು ಎರಡು ತಲೆ ಹಾವು ಮನೆನಲ್ಲಿ ಇತ್ತು ಕೊಂಡರೆ ಅದೃಷ್ಟ ಬರುತ್ತೆ ಅಂಥಾ ಸಿಕ್ಕ ಸಿಕ್ಕ ಕಡೆ ಹುಡುಕಿ ಕೈಗೆ ಸಿಕ್ಕ ಮಣ್ಣಿನ ಹಾವನ್ನು ಹಿಡಿದು ಕಾಸು ಮಾಡ್ಕೋತಾ ಇದಾರೆ ಅಂಥಾದ್ರಲ್ಲಿ ಇದೇನಪ್ಪ
ಐದು ತಲೆ ಹಾವು ಅಂದ್ರೆ ಕೇಳ್ಬೇಕಾ ಅಂಥಾ ಯೋಚಿಸಿ ತಾಳು ಅಂತರ್ಜಾಲ ಹುಡುಕೋಣ ಅಂಥಾ ಹುಡುಕಿದರೆ ತಗಳಿ ಸ್ವಾಮೀ!!! ಇದೆ ವಿಚಾರ ಎಲ್ಲ ನಿಜಾ ಅಂತ ಸತ್ಯದ ತಲೆ ಮೇಲೆ ಹೊಡೆದಂತೆ ಹೇಳ್ತಾ ಇದಾರೆ. ಅದಕ್ಕೆ ಪೂರಕವಾಗಿ ಐದು ಫೋಟೋಗಳು ಬೇರೆ ಇದೆ. ನಂಬಲೇ ಬೇಕು ಅಂಥಾ ಅನ್ನಿಸಲು ಪ್ರಾರಂಭವಾಯಿತು. ಅಂತರ್ಜಾಲದಲ್ಲಿ ಎಲ್ಲೂ ನಂಬ ಬೇಡಿ ಎಂದು ಕಾರಣಸಹಿತ ವಿವರಿಸಿದ ಮಾಹಿತಿ ಸಿಗಲಿಲ್ಲ . ಹುಡುಕಾಟ ನಡದೇ ಇತ್ತು
ಆದರೂ ಈ ಐದುತಲೇ ಹಾವು ಕಾಡುತ್ತಲೇ ಇತ್ತು !!! ತಡಿ ಇದು ನಡೆದದ್ದು ಮಂಗಳೂರಿನ ಇನ್ಫೋಸಿಸ್ ಕ್ಯಾಂಪಸ್ ನಲ್ಲಿ ನಡೆದಿರುವುದಾಗಿ ಎಲ್ಲರೂ ಬರೆದಿದ್ದಾರಲ್ವಾ ಇನ್ಫೋಸಿಸ್ ಅಧಿಕೃತ ಜಾಲವನ್ನೇ ಹುಡುಕೋಣ ಅಂಥಾ ಅಲ್ಲಿ ಜಾಲಾಡಿದರೆ ಈ ಘಟನೆಯ ಬಗ್ಗೆ ಮಾಹಿತಿಯೇ ಇಲ್ಲ .ಆಗ ಇದು ಸುಳ್ಳು ಈ ಮೇಲ್ ಅಂಥಾ ಗೊತಾಯ್ತು. ಅಲ್ಲ ಒಂದುವೇಳೆ ಇದು ನಡೆದದ್ದು ನಿಜವಾಗಿದ್ದರೆ ಸುವರ್ಣ ನ್ಯೂಸ್,ಟೀ.ವಿ.೯ರವರು ಬಿಡತಿದ್ರಾ ಇದರಲ್ಲೇ ವಾರಕ್ಕಾಗುವಷ್ಟು ಕಾರ್ಯಕ್ರಮ ತಯಾರಿಸಿ ಬೆಳಗಿನಿಂದ ಸಂಜೆವರೆಗೆ ಐದು ತಲೆ ಹಾವಿನ ಎಲ್ಲಾ ರೀತಿಯ ಮಾಹಿತಿ ಸುರ್ದಿರವ್ರು .........!!!! ಈಗ ಹೇಳಿ ಈ ಮೇಲ್ ನಿಮಗೂ ಬಂದಿತ್ತ !!!!! ನಂಬ ಬೇಕೂ ಅನ್ನುವವರು / ನಂಬಬಾರದು ಅನ್ನುವವರು ಸರಿಯಾದ ವೈಜ್ಞಾನಿಕ ಕಾರಣ ಕೊಟ್ಟು ನಿಮ್ಮ ಅನಿಸಿಕೆಬರೆಯಿರಿ. ಎರಡೂ ವರ್ಗ ಕ್ಕೆ ಸೇರದ ನನ್ನಂತವರೂ ಸಹ ತಮ್ಮ ಅನಿಸಿಕೆ ಬರೆಯಲು ಅಡ್ಡಿಯಿಲ್ಲ ಸ್ವಾಮೀ.................!!!!!!!!!!!!!!!!!!!!!!..ನೀವು ಏನಂತಿರಾ .................????????
2 comments:
ಈ ಮಿಂಚಂಚೆ ನಮಗೂ ಬಂದಿತ್ತು ಆದರೆ ನನಗೆ ಬಂದದ್ದು ಕುಕ್ಕೆ ಸುಬ್ರಮಣ್ಯದಲ್ಲಿ ಕಂಡ ಐದು ತಲೆ ಹಾವೆಂದು. ಓದಿದ ತಕ್ಷಣ ಸುಳ್ಳೆಂದು ನಿರ್ಧರಿಸಿದ್ದೆ. ಹಾಗಾಗಿ ತಮ್ಮ ಹಾಗೆ ಅ೦ತರ್ಜಾಲದಲ್ಲಿ ಸಮಯ ಹಾಳು ಮಾಡಲಿಲ್ಲ. ನಿಜವಿದ್ದರೆ ನೀವೆಳಿದ ಹಾಗೆ ೩-೪ ದಿನ ಟಿವಿ ಜನ ಕುಣೀತಾ ಇರ್ತಾ ಇದ್ದರು.
nanagu ii taraha mail bandittu..... naavu nambidare ... mundondu dina... hattu taleya pics kalstaare.... !
Post a Comment