Sunday, August 11, 2013

ಪ್ರೀತಿ ಎಂಬ ಉಳಿತಾಯ ಖಾತೆ ............. !!

ಪ್ರೀತಿ ಎಂಬ ಮಾಯೆ

"ಪ್ರೀತಿಯೆಂಬ  ಉಳಿತಾಯ ಖಾತೆ " ಒಂದು ಕಥೆಯನ್ನಾಗಿ ಮೂಡಿಸಲು, ಸಹಾಯ ಮಾಡಿದ್ದು , ನನ್ನ ತಮ್ಮ ಭಾನು ಪ್ರಸಾದ್ , ಅವನು ಕೆಲವು ಘಟನೆಗಳನ್ನು ಹೆಕ್ಕಿ ನನಗೆ ಮೇಲ್ ಮಾಡಿ ಬರೆಯಲು ಪ್ರೇರಣೆ ನೀಡುತ್ತಾನೆ, ಈ ಕಥೆಯೂ ಅಷ್ಟೇ ಜೀವನದ ಯಾವುದೋ ಸಂದರ್ಭದಲ್ಲಿ ನೀಡಲಾದ ಒಂದು ಉಡುಗೊರೆ ವಹಿಸುವ ಪಾತ್ರ ಬಹಳ ಅಮೂಲ್ಯವಾದದ್ದು , ಅಂತಹ ಒಂದು ಸುಂದರ ಕಥೆ ನಿಮಗಾಗಿ.

 "ಸನ್ಮಿತ"   ತಾನು ಬಹಳ ಇಷ್ಟಪಟ್ಟು ಪ್ರೀತಿಸಿದ ಹುಡುಗ  ಸುಪ್ರೀತ್ ನನ್ನು ಜೀವನ ಸಂಗಾತಿಯಾಗಿ ಬಯಸುತ್ತಾಳೆ, ಇಬ್ಬರೂ ಪರಸ್ಪರ ಬಿಟ್ಟಿರಲಾರದಷ್ಟು  ಹತ್ತಿರವಾಗಿ,  ಮನೆಯವರ ಒಪ್ಪಿಗೆ ಪಡೆದು  ಹೊಸ ಬಾಳಿಗೆ ಹೆಜ್ಜೆ ಇಡಲು ಸಿದ್ದರಾಗಿದ್ದಾರೆ. ಹೌದು ಅವರಿಬ್ಬರ ಮದುವೆಗೆ ಯಾರ ಅಡ್ಡಿಯೂ ಇರಲಿಲ್ಲ. ಎರಡೂ ಮನೆಯವರೂ ಸಂತೋಷದಿಂದ ಒಪ್ಪಿಗೆ ನೀಡಿ ಇವರ ಜೀವನ ಪಥಕ್ಕೆ ಬೆಳಕಾಗುತ್ತಾರೆ, ಸುಂದರ ಕಲ್ಪನೆಯ ಕನಸುಗಳು ಮಾಗಿ ನನಸಾಗುವ ಕಾಲ ಹತ್ತಿರವಾಗುತ್ತದೆ .

ಹೌದು ಬಂದೆಬಿಟ್ಟಿತು ಇವರಿಬ್ಬರ ನಿಶ್ಚಿತಾರ್ಥ , ಬಹಳ ಖುಷಿಯಾಗಿ  ಬಂದುಗಳು, ಸ್ನೇಹಿತರು ಪಾಲ್ಗೊಂಡು ಶುಭ  ಹಾರೈಸಿದ ದಿನ ಅದು, ನಗು ಹರಟೆ, ಗೆಳೆಯರ  ಕೀಟಲೆ, ಒಂದಷ್ಟು ಆಟಗಳು, ಅಂದಿನ ಸಂಜೆ  ಎಲ್ಲರೂ ಸಂತಸದ ಶಿಖರ ಏರಿ ನಲಿದಾಡಿದರು, ಹೌದು ಇಂದಿಗೆ ಇನ್ನೆರಡು ತಿಂಗಳಿಗೆ ವಿವಾಹ ವೆಂದು ನಿಶ್ಚಯ  ಆಯ್ತು,ಸನ್ಮಿತ ಸುಪ್ರೀತ್ ಪರಸ್ಪರ  ಉಂಗುರ ಬದಲಾವಣೆ ಮಾಡಿಕೊಂಡು ವಿವಾಹ ದಿನದ ಬಗ್ಗೆ ಜಾತಕ ಪಕ್ಷಿಗಳಂತೆ ಕಾಯಲು ಸಿದ್ಧವಾದರು . ಇನ್ನು "ಸನ್ಮಿತ" ಅಮ್ಮ  ಶಾಲಿನಿ ಯವರಂತೂ ಇದೇ ಕಾರ್ಯಕ್ರಮದ ರುವಾರಿಯಾಗಿ  ಸಂಭ್ರಮದ  ಒಡತಿಯಾಗಿದ್ದರು, ಹೌದು ಅವರ ಹಾಗು ಮಗಳ ಮಧ್ಯೆ  ತಾಯಿ ಮಗಳ  ಸಂಬಂಧಕ್ಕಿಂತಲೂ  ಮಗಳಿಗೆ ಒಬ್ಬ ಆಪ್ತ ಗೆಳತಿಯಾಗಿ ಮಗಳ ಯಶಸ್ಸಿನ ಭಾಗವಾಗಿದ್ದರು. ಅಂದೂ ಸಹ ನಿಶ್ಚಿತಾರ್ಥ ಕಾರ್ಯ ಮುಗಿದ ನಂತರ  ಮಗಳು ಹಾಗು ಅಳಿಯನ ಬಳಿ ತೆರಳಿ, ಇಬ್ಬರ ಕೈಹಿಡಿದು  ಒಂದು ಬ್ಯಾಂಕ್  ಉಳಿತಾಯ ಖಾತೆಯ ಪುಸ್ತಕ ನೀಡಿದರು .

ಸನ್ಮಿತ :- "ಅಮ್ಮಾ ಏನಿದೆಲ್ಲಾ ಹೊಸದಾಗಿದೆ", ಈ  ಸಮಯದಲ್ಲಿ   ಈ ಬ್ಯಾಂಕ್  ಉಳಿತಾಯ ಖಾತೆ ಪುಸ್ತಕ ಏಕೆ ?        ಇನ್ನೂ          ನಿನ್ನ     ವ್ಯವಹಾರ  ಬಿಟ್ಟಿಲ್ವಾ ...??? "ಅದಕ್ಕೆನಾ  ಅವತ್ತು ನನ್ನಿಂದ ಬಲವಂತವಾಗಿ  ಸಹಿ ಪಡೆದು ಒಂದು ಖಾತೆ ತೆರೆದದ್ದೂ" "ಅವತ್ತು ಯಾಕೋ ಇರಲಿ ಅಂತಾ ಸಹಿ ಮಾಡಿಕೊಟ್ಟೆ",  "ಇವತ್ತು ನನಗೆ ಪಾಸ್ ಬುಕ್ ಕೊಡ್ತಾ ಇದ್ದೀಯ"  "ಇದೇನಮ್ಮಾ ವಿಚಿತ್ರಾ"  ಅಂದಳು 

ಶಾಲಿನಿ :- "ನೋಡು ಮಗಳೇ ಇಂದಿನಿಂದ ನಿಮ್ಮಿಬರ ಜೀವನದಲ್ಲಿ  ಈ ಪಾಸ್ ಪುಸ್ತಕ  ಹೊಸ ಪಾತ್ರ ವಹಿಸುತ್ತದೆ "," ಹಾಗಾಗಿ ಇಂದಿನ  ಈ ಶುಭ ದಿನಕ್ಕೆ ನಿಮ್ಮಿಬ್ಬರ ನಿಶ್ಚಿತಾರ್ಥದ ಬಗ್ಗೆ ನನ್ನ ಪುಟ್ಟ ಕೊಡುಗೆ ಇದು ಮಗಳೇ"

ಸುಪ್ರೀತ್ :- " ಅತ್ತೆಯವರೇ , ನಮ್ಮಿಬ್ಬರ ಬಳಿಯಲ್ಲೂ ಬಹಳ ಹಣ ಇದೆ , ಈಗ ಇದರ ಅವಶ್ಯಕತೆ  ಇದೆಯಾ ?? ಯೋಚಿಸಿ,..

ಶಾಲಿನಿ :- "ನೀವಿಬ್ಬರು ಬುದ್ದಿವಂತರು, ನಿಮ್ಮಲ್ಲಿ ಬಹಳ ವಿಧ್ಯೆ ಇದೆ, ಒಳ್ಳೆಯ ಕೆಲಸ ಇದೆ, ಹಾಗು ಬಹಳಷ್ಟು ಹಣ ಇದೆ,"  "ಆದರೆ ನಾನು ಕೊಡುವ ಈ ಬ್ಯಾಂಕ್ ಪಾಸ್ ಪುಸ್ತಕದಲ್ಲಿ  ನಿಮ್ಮಿಬರ ಬಗ್ಗೆ ನನಗಿರುವ ಕಾಳಜಿ ಇದೆ, " "ಇದನ್ನು  ತಿರಸ್ಕರಿಸುವ ಹಕ್ಕು ನಿಮ್ಮಿಬ್ಬರಿಗೂ ಇಲ್ಲಾ"  , "ಆದರೆ ಒಂದು ಷರತ್ತು,  ನಿಮ್ಮ ಈ ಪಾಸ್ ಪುಸ್ತಕಕ್ಕೆ  ನಿಮಗೆ ನೂರಕ್ಕೆ ನೂರು ಸಂತೋಷ ಕೊಟ್ಟ ದಿನಗಳಲ್ಲಿ ಮಾತ್ರ  ಇಬ್ಬರೂ ಸೇರಿ ಒಂದು ನೂರು ರುಪಾಯಿ ಹಾಕಬೇಕು, ಯಾವುದೇ ಕಾರಣಕ್ಕೂ ಒಂದು ನೂರಕ್ಕಿಂತ ಕಡಿಮೆ ಹಾಗು ಅದಕ್ಕಿಂತ ಜಾಸ್ತಿ ಹಣ ಹಾಕ ಕೂಡದು, ಇದು ನನ್ನ ಪ್ರೀತಿಯ ಕೋರಿಕೆ ಎಂದು ಬೇಕಾದರೆ ಅಂದುಕೊಳ್ಳಿ ,"   "ಹಾಗಾಗಿ ಈ ಉಳಿತಾಯ ಖಾತೆಯಲ್ಲಿ ಇಂದಿನ ಸಂತಸದ ಕುರುಹಾಗಿ ನಾನೇ ಒಂದುನೂರು ರೂಪಾಯಿ ಹಾಕಿ  ಉಳಿತಾಯ ಖಾತೆ ತೆರೆದಿದ್ದೇನೆ, ತೆಗೆದುಕೊಳ್ಳಿ" ಇದನ್ನು  ಎಂದು ಹೇಳಿ ಅಳಿಯ ಹಾಗು ಮಗಳಿಗೆ ಸಿಹಿ ತಿನ್ನಿಸಿ ಹಾರೈಸಿ  ಪಾಸ್ ಪುಸ್ತಕ ನೀಡಿದಳು,

ಸುಪ್ರೀತ್ ಹಾಗು ಸನ್ಮಿತ  ನಗುತ್ತಾ ಆ ಉಡುಗೊರೆ ಸ್ವೀಕರಿಸಿ  , ತಮಗೂ  ಈ ಸಲಹೆ ಇಷ್ಟವಾಗಿ, ತಾವು ಹಣ ಹಾಕಿದಂದು  ಯಾವ ಕಾರಣಕ್ಕೆ ಹಣ ಹಾಕಿದ್ದೇವೆಂದು  ಒಂದು ಡೈರಿಯಲ್ಲಿ ನಮೂದಿಸಲು  ನಿರ್ಧಾರ ಮಾಡಿದರು,

ದಿನಾಂಕ ೧೨-೦೬ - ೨೦೦೦ :- ಅಮ್ಮ ನೀಡಿದ ಕೊಡುಗೆ  ವಿವಾಹ ನಿಶ್ಚಿತಾರ್ಥದ ಅಂಗವಾಗಿ.
ದಿನಾಂಕ ೨೨-೦೬-೨೦೦೦:- ಸುಪ್ರೀತ್  ಜನುಮದಿನ ಹಾಗಾಗಿ  ಅವನಿಗೆ ನಾ ಕೊಟ್ಟ ಗಿಫ್ಟ್ ಇಷ್ಟವಾದ ಕಾರಣ
ದಿನಾಂಕ ೧-೦೭-೨೦೦೦:-  ಸನ್ಮಿತ  ತನ್ನ ಹುದ್ದೆಯಲ್ಲಿ ಪ್ರಮೋಶನ್ ಗಿಟ್ಟಿಸಿದ  ಕಾರಣ , ಅವಳಿಗೆ ನೀಡಿದ  ಸಿಹಿ ಮುತ್ತಿನ    ನೆನಪಿಗೆ

ಹೀಗೆ ಸಾಗಿತ್ತು  ಸಂತಸದ ದಿನಗಳ ಲೆಕ್ಕಾಚಾರ , ಜೀವನ ಪಯಣದಲಿ  ಸಂತಸದ ದಿನಗಳು  ಸಾಗೊದೆ ಗೊತ್ತಾಗೊಲ್ಲ , ಹಾಗೆ ಎರಡು ತಿಂಗಳು ಮುಗಿದು  ವಿವಾಹ  ಕಾರ್ಯ  ಅದ್ದೂರಿಯಾಗಿ ನೆರವೇರಿತು, ಆ ಮದುವೆ  ನಿಜವಾಗಿಯೂ ಸ್ವರ್ಗದಲ್ಲೇ ನಡೆಯಿತು . ಅಷ್ಟರಲ್ಲಾಗಲೇ ಉಳಿತಾಯ ಖಾತೆಯಲ್ಲಿ ಪ್ರತೀ ಸಂತೋಷದ ದಿನಕ್ಕೂ ನೂರು ರೂಪಾಯಿಯಂತೆ ಜಮಾ ಆಗಿ ಸುಮಾರು ಹತ್ತು ಸಾವಿರ ಜಮಾ ಆಗಿತ್ತು.

ಮಧುಚಂದ್ರಕ್ಕೆ ವಿದೇಶ ಗಳ  ಪ್ರಸಿದ್ಧ ತಾಣಗಳಲ್ಲಿ ಇವರ ಸಂತೋಷದ ಸಿಂಚನ ಪಸರಿಸಿತ್ತು, ಪ್ರತೀ ಕ್ಷಣದ , ಪ್ರತೀ ಘಟನೆಯೂ ಸಂತಸದ ಹೊಳೆ ಹರಿಸಿತ್ತು. ರಜವೆಲ್ಲಾ ಮುಗಿದು, ಇಬ್ಬರು ಹೊರಟರು ತಮ್ಮ ಕಾರ್ಯ ಕ್ಷೇತ್ರಕ್ಕೆ , ಜೀವನದ ಬಂಡಿ ಚಲಿಸಿತ್ತು.ಮೂರು  ವರ್ಷಗಳು ಕಳೆದಿದ್ದವು, ಇಬ್ಬರಲ್ಲೂ  ಯಾಕೋ ಹೊಂದಾಣಿಕೆ ಕೊರತೆ ಉಂಟಾಗಿ , ಸಿಹಿಯಾದ ಅಮೃತ   ಮೊಸರು ಆಗುವ ಹಂತ ತಲುಪಿತ್ತು, ಸರಿ ಇಬ್ಬರೂ ತೆಗೆದು ಕೊಂಡಿದ್ದು ಒಮ್ಮತದ  ತೀರ್ಮಾನ , "ನಾವು  ಪರಸ್ಪರ  ಒಪ್ಪಿಗೆಯಾಗಿ  ಡಿವರ್ಸ್  ಪಡೆಯೋಣ "

ಅಂತು ಇಬ್ಬರ ತೀರ್ಮಾನ  ಅನುಷ್ಠಾನ ಗೊಳಿಸಲು  ಹಿರಿಯರ ಒಪ್ಪಿಗೆ ಪಡೆಯ ಬೇಕಲ್ಲಾ , ಹಾಗಾಗಿ " ಸನ್ಮಿತ " ತನ್ನ ತಾಯಿ ಗೆ ವಿಚಾರ ತಿಳಿಸಿ  ತಮ್ಮ ನಿರ್ಧಾರವನ್ನು  ತಿಳಿಸಿದಳು . "ಅಮ್ಮಾ ಆ ಸುಪ್ರೀತ್ ಎಂಬ  ಜೀವಿಯನ್ನು ನಾಗು ಹೇಗೆ ಪ್ರೀತಿಸಿದೆ ಅನ್ನೋದೇ ನನ್ನ ಜೀವನದಲ್ಲಿ ಅರ್ಥವಾಗದ ಪ್ರಶ್ನೆಯಾಗಿದೆ," '' ಅದೇನು ಮಂಕು ಕವಿದಿತ್ತೋ ಕಾಣೆ ಅಂದು ಪ್ರೀತಿಸಿ ಬಿಟ್ಟೆ '.'

"ಶಾಲಿನಿ" ಯವರಿಗೆ ತಮ್ಮ ಮಗಳು ಅಳಿಯನ ತೀರ್ಮಾನ ಕೇಳಿ ಒಮ್ಮೆಗೆ  ನೋವು ಉಂಟಾದರೂ ಅದನ್ನು ತೋರ್ಪಡಿಸದೆ  "ಮಗಳೇ ನೀನು  ತಿಳಿದವಳು",  "ನಿನಗೂ ಒಬ್ಬ ಪುಟ್ಟ ಮಗಳಿದ್ದಾಳೆ" " ಪ್ರಪಂಚ ನೋಡಿದ್ದೆಯೇ " , "ಮೇಲಾಗಿ ನೀನು ನನ್ನ ಮಗಳು, ನಿನಗೆ ಸರಿ ತಪ್ಪುಗಳ ಅರಿವಿದೆ,ನಿನಗೆ ಸರಿ ಎನ್ನಿಸಿದ್ದನ್ನು ಮಾಡಲು ನೀನು ಸ್ವತಂತ್ರಳು'',  'ಆದರೆ ಒಂದು ಮಾತು, ನಾನು ನಿನಗೆ ಒಂದು ಬ್ಯಾಂಕ್  ಉಳಿತಾಯ ಖಾತೆ ಪುಸ್ತಕ ನೀಡಿದ್ದೆ, ಮೊದಲು ಅದನ್ನು  ಬ್ಯಾಂಕಿನಲ್ಲಿ ಕ್ಲೋಸ್ ಮಾಡಿಬಿಡು ಮಗಳೇ''  ಎಂದರು.

 ಸನ್ಮಿತ :-  ..... ಆ ಪಾಸ್ ಬುಕ್ ಕ್ಲೋಸ್  ಮಾಡ್ಲಾ ??
ಶಾಲಿನಿ:= "ಹೌದು ಮಗಳೇ , ಆ ಪಾಸ್ ಬುಕ್ ನಿನ್ನ ಬಾಳಿನ ಸಂತೋಷದ ಉಳಿತಾಯ ಖಾತೆ ಮಗಳೇ"," ಬಹುಷಃ ನಿನ್ನ ಸಂತಸದ ದಿನಗಳು ಖಾಲಿಯಾಗಿರ ಬಹುದು"  , "ಹಾಗಾಗಿ  ಅದನ್ನು ಮೊದಲು  ಕ್ಲೋಸ್ ಮಾಡು "
ಸನ್ಮಿತ :-  "ಅಮ್ಮಾ  ಯಾಕೋ ಅದನ್ನು ನೋಡಿದರೆ  ಕ್ಲೋಸ್ ಮಾಡಲು ಮನಸು ಬರುತ್ತಿಲ್ಲಾ",  "ಆದ್ರೂ ಪ್ರಯತ್ನ ಮಾಡುತ್ತೇನೆ "

ಎಂದು ಹೇಳಿದ ಸನ್ಮಿತ ನೇರವಾಗಿ ಮನೆಗೆ ಬಂದು ಬ್ಯಾಂಕ್ ಉಳಿತಾಯ ಖಾತೆಯ ಪುಸ್ತಕ ಹಾಗು  ಅದರಬಗ್ಗೆ  ತಾವಿಬ್ಬರು ಬರೆದಿದ್ದ  ಡೈರಿ ನೋಡುತ್ತಾ ಕುಳಿತಳು,  ಆದರು ಮನಸಿನ ಮೂಲೆಯಲ್ಲಿದ್ದ  ಡಿವರ್ಸ್  ರಕ್ಕಸ  ಕುಣಿಯ ತೊಡಗಿದ , ಬ್ಯಾಂಕ್ ಕಡೆಗೆ  ಹೆಜ್ಜೆ ಹಾಕಿದಳು .

ಬ್ಯಾಂಕ್ ಆವರಣ ಹೊಕ್ಕಿದ  ಒಡನೆ ಅಸಾಧ್ಯ ವೆನ್ನಿಸುವಂತಹ  ಜನ ಜಂಗುಳಿ  , ಹಾಗು ಹೀಗೂ ಕೌಂಟರ್  ಬಳಿ  ಹೋಗಿ ತನ್ನ ಖಾತೆ ರದ್ದು ಪಡಿಸುವುದಾಗಿ ಹೇಳಿ  ತನ್ನ ಪಾಸ್ ಬುಕ್  ನಮೂದನ್ನು ಸರಿಪಡಿಸಿಕೊಡಲು  ಕೋರಿದಳು, ಸಿಬ್ಬಂದಿ ಸ್ವಲ್ಪ ಸಮಯ ಕಾಯುವಂತೆ ತಿಳಿಸಿದ ಕಾರಣ  , ಅಲ್ಲೇ ಇದ್ದ ಒಂದು ಕುರ್ಚಿಯಲ್ಲಿ   ಕುಳಿತಳು, ಹಾಗೆ ಸುಮ್ಮನೆ ತನ್ನ ಬಳಿ  ಯಿದ್ದ ಡೈರಿ ಓದಲು ಶುರುಮಾಡಿದಳು,
   ದಿನಾಂಕ :೧೫-೦೮-೨೦೦೦ :- ವಿವಾಹ ಮಹೋತ್ಸವ  , ಪ್ರೀತಿಯ ಧಾರೆ ಎರೆದ  ಸುಪ್ರೀತ್  ನಿನಗೆ  ನನ್ನ ಪ್ರೀತಿಯ ಸಿಹಿ ಮುತ್ತುಗಳು,  ೧೦೦%  ಖುಷಿ
ದಿನಾಂಕ :- ೨೦-೦೮-೨೦೦ರಿಂದ  ೧೦- ೦೯- ೨೦೦೦ ವರೆಗೆ  ಹನಿ ಮೂನ್ ಪ್ರವಾಸ  ಯೂರೋಪಿಗೆ    ವಃ ವಾಹ್ ಸುಂದರ ಕ್ಷಣಗಳು  ಪ್ರತೀ ಕ್ಷಣಕ್ಕೂ  ೧೦೦% ಖುಶಿ.
ದಿನಾಂಕ :-೨೨-೦೯-೨೦೦೦ :-  ಸುಪ್ರೀತ್   ಪ್ರಮೋಶನ್ ಪಡೆದ ದಿನ  ಖುಷಿಯಾಗಿ ಅಂದು ನನ್ನ ಬಹಳ ಮುದ್ದಾಡಿ ಬಿಟ್ಟ
   ೧೦೦% ಖುಷಿ
ದಿನಾಂಕ :- ೨೨-೧೨-೨೦೦೦ : - ನಾನು ತಾಯಿ ಆಗುವುದಾಗಿ ಡಾಕ್ಟರ್ ಹೇಳಿದ ದಿನ , ೧೦೦% ಖುಷಿ

ಹೀಗೆ ಸಾಗಿತ್ತು, ಖುಷಿಯ ಉಳಿತಾಯ ಖಾತೆಯ  ಇತಿಹಾಸ , ಯಾಕೋ  ಸನ್ಮಿತ  ಮನಸಿಗೆ  ನನ್ನಲ್ಲಿದ್ದ ಪಾಪ ಪ್ರಜ್ಞೆ  ಕಾಡಲು ತೊಡಗಿತು, ಅಷ್ಟರಲ್ಲಿ  ಬ್ಯಾಂಕ್ ಸಿಬ್ಬಂದಿ ಕರೆದು ಪಾಸ್ ಬುಕ್ ಅಪ್ಡೇಟ್ ಮಾಡಿ ಕೊಟ್ಟಿದ್ದರು,  ಹಾಗು ಬ್ಯಾಂಕ್ ಕಾತೆ ಕ್ಲೋಸ್  ಮಾಡಲು ದಾಖಲೆ  ನೀಡಿದರು, ಖಾತೆ  ಕ್ಲೋಸ್ ಮಾಡಲು ಬರೆಯಲು ಮನಸ್ಸೇ ಬರುತ್ತಿಲ್ಲ, ಇಷ್ಟೆಲ್ಲಾ ಪ್ರೀತಿ ಗಳಿಗೆ ನೆನಪಿಸಿದ ಈ ಬ್ಯಾಂಕ್ ಉಳಿತಾಯ ಖಾತೆ  ಕ್ಲೋಸ್ ಮಾಡಿದರೆ ನನ್ನನ್ನೇ ನಾನು ಕೊಂದುಕೊಂಡಂತೆ  ಎನ್ನಿಸಿತು, ದಾರಿಯಲ್ಲಿ ಎಳನೀರು ಕುಡಿದು, ಮನೆಗೆ ಬಂದಳು, ಆತ್ಮ ವಿಮರ್ಶೆ ಮಾಡ ತೊಡಗಿತು, ಹಾಗು ತಾಯಿ ನಿಶ್ಚಿತಾರ್ಥದ ಸಮಯದಲ್ಲಿ ಹೇಳಿದ ಮಾತುಗಳು  ನೆನಪಿಗೆ ಬಂದು, ತನ್ನ ತಪ್ಪಿನ ಅರಿವಾಯ್ತು.

ಅಲ್ಲೇ ಇದ್ದ ಫೋನ್  ರಿಂಗ್  ಆಯಿತು, ಅತ್ತಕಡೆಯಿಂದ  ಅಮ್ಮ ಕೇಳುತ್ತಿದ್ದಳು, "ಮಗಳೇ  ಆ ಬ್ಯಾಂಕ್ ಖಾತೆ ಕ್ಲೋಸ್ ಮಾಡಿದೆಯ ?? "
ಸನ್ಮಿತ :-: "ಅಮ್ಮಾ ನನ್ನನ್ನು ಕ್ಷಮಿಸಿ ಬಿಡು  ನಾನು ಅದನ್ನು ಕ್ಲೋಸ್ ಮಾಡಲ್ಲಾ"
  ಎಂದು ಫೋನ್ ಇಟ್ಟಳು

ಅಂದು ಸಂಜೆಯವರೆಗೆ ತನ್ನದೇ ತಾಕಲಾಟದಲ್ಲಿ ಕಳೆದಳು,  ಸಂಜೆ ಮನೆಗೆ  ಆಗಮಿಸಿದ  ಸುಪ್ರೀತ್ ," ಸನ್ಮಿತ  ಲಾಯರ್ ಫೋನ್ ಮಾಡಿದ್ರು" , "ಇವತ್ತು ಸಂಜೆ ನಾವಿಬ್ಬರು ಹೋಗಿ, "ಡಿವರ್ಸ್ ಪೇಪರ್ಗೆ ಸೈನ್ ಮಾಡಬೇಕಂತೆ " ಬೇಗ ರೆಡಿ ಆಗು ಹೋಗೋಣ  ಅಂದ

ಸನ್ಮಿತ :- ಓಡಿ  ಬಂದು ಸುಪ್ರೀತ್  ದಯವಿಟ್ಟು ನನ್ನನ್ನು ಕ್ಷಮಿಸಿಬಿಡು, ಜೀವನ ಅರಿಯದೆ  ನಿನ್ನ ಬಗ್ಗೆ ತಪ್ಪಾಗಿ ಭಾವಿಸಿ ದುಡುಕಿದ್ದೆ,  "ನನ್ನ ಜೀವನದ ಸಿಹಿ ಸಂತಸದ ಕ್ಷಣಗಳ  ಉಳಿತಾಯ ಖಾತೆಯ  ಯಜಮಾನ ನೀನು," "ನಿನ್ನನ್ನು ಕಳೆದು ಕೊಂಡರೆ  ಅದಕ್ಕಿಂದ ದೊಡ್ಡ ಅಪರಾಧ ಇನ್ನಿಲ್ಲಾ,"  "ನಾವಿಬ್ಬರು  ಮತ್ತೆ ಜೊತೆಯಾಗಿ ಸಾಗಲು  ಸಹಕರಿಸು ಪ್ಲೀಸ್"  ಎಂದಳು,

ಸುಪ್ರೀತ್ :- "ನೋಡು ಹುಚ್ಚಿ  ನಿನ್ನ ದುಡುಕುತನ ನನಗೆ ಹೊಸದಲ್ಲಾ," "ಅದರಿಂದ ಕೋಪಗೊಂಡು , ನಾನೂ ನಿನಗೆ ಡಿವರ್ಸ್  ಕೊಡಲು ಯೋಚಿಸಿದ್ದು ನಿಜ", "ಆದರೆ ನಿನ್ನ ಅಮ್ಮ ನಿಶ್ಚಿತಾರ್ಥದಲ್ಲಿ  ನೀಡಿದ್ದ ಪಾಸ್ ಬುಕ್, ಹಾಗು ನಾವಿಬ್ಬರೂ ಬರೆದ ಡೈರಿ  ನನ್ನ ನಿರ್ಧಾರ ಬದಲಿಸಲು ಕಾರಣವಾಯಿತು," "ನಿಜವಾಗಿಯೂ ನಿನ್ನ ಅಮ್ಮ ಗ್ರೇಟ್  ಕಣೆ", "ಆಗಲಿ ನಾವಿಬ್ಬರು  ಡಿವರ್ಸ್  ಯೋಚನೆ ಬಿಟ್ಟು,  ಪ್ರೀತಿಯ ಉಳಿತಾಯ ಖಾತೆಗೆ ಪ್ರೀತಿ ಜಮಾ ಮಾಡೋಣ" ಎಂದು ಹೇಳಿ ಸನ್ಮಿತ ಳನ್ನು ಎತ್ತಿಕೊಂಡು   ಹೊರಟೇಬಿಟ್ಟ .

ಇತ್ತ ಸೋಫಾ ಮೇಲೆ ಪವಡಿಸಿದ್ದ  ಬ್ಯಾಂಕ್ ಉಳಿತಾಯ ಖಾತೆ ಪುಸ್ತಕ , ಹಾಗಿ ಡೈರಿ ಪರಸ್ಪರ   ನಗುತ್ತಿದ್ದವು.

ಅಂದಹಾಗೆ ನಿಮಗೆಲ್ಲರಿಗೂ  ೬೭ ನೆ ಭಾರತ ಸ್ವಾತಂತ್ರ್ಯ ಹಬ್ಬದ  ಶುಭಾಶಯಗಳು , ಏನಾದರೂ ಆಗಿ ಮೊದಲು ಭಾರತೀಯರಾಗಿ

14 comments:

Unknown said...

ಬಾಲೂ ನಿಜವಾಗಿಯೂ ತುಂಬಾನೇ ಚೆನ್ನಾಗಿದೆ. ಈ ಧಾವಂತದ ಕಾಲದ ಸ್ವಾರ್ಥ ಪರ ಜೀವಿಗಳಿಗೆ ನಿಜವಾಗಿಯೂ ಒಂದು ವರದಾನವೆಂಬಂತೆ ಈ ವಿಶಿಷ್ಟ ನೋಟದ ಹರವಿದೆ. ಒಂದು ಅದ್ಭುತ ಕಲಿಕೆ

ಶ್ರೀವತ್ಸ ಕಂಚೀಮನೆ. said...

ಪ್ರತಿ ಜೋಡಿಗೂ ಹೀಗೊಂದು ಉಳಿತಾಯ ಖಾತೆ ಪುಸ್ತಕ ದೊರಕಿದರೆ...
ಪ್ರೀತಿ ಅಮ್ಮನಾಗಿ ಸಲಹೀತು ಬದುಕುಗಳ...
ಚಂದ ಬರಹ ಬಾಲು ಜೀ...

ಸವಿಗನಸು said...

ಉಳಿತಾಯ ಖಾತೆ ತುಂಬಾ ಚೆನ್ನಾಗಿದೆ...

Unknown said...

uncle tumbha channagide.. worth a read..

Badarinath Palavalli said...

ಅತ್ಯ್ತ್ತಮ ಬರಹ ಇದು. ಮಾತಾಪಿತೃಗಳು ಮಕ್ಕಳಿಗೆ ಸನ್ಮಾರ್ಗದ ಪ್ರೇರಕರಾದರೆ ಸಮಾಜವು ಎಂದೆಂದಿಗೂ ಸಕಾರಾತ್ಮಕವೇ.

ಉಳಿತಾಯ ಸರ್ವತ್ರ ಒಳಿತು ಸಾಧನ. ಆಟ್ಟ ಸರ್ಕಾರಕ್ಕೆ ಅಥವಾ ಸದರಿ ಬ್ಯಾಂಕಿಗೆ ಬಂಡವಾಳವಾಗುವ ಮೊತ್ತ, ಆಪತ್ಕಾಲದಲ್ಲಿ ನಮಗೂ ಜೀವಧಾನಿ.

100ಕ್ಕೆ 100 ಸಂತೃಪ್ತ ದಿನ 100 ರೂಪಾಯಿ ಖಾತೆಗೆ ಈ ಆಲೋಚನೆಗೇ ನಮ್ಮ 100 ಅಂಕಗಳು.

ಬಹುಶಃ ಇನ್ನೆರಡು ದಿನದಲ್ಲಿ ನಾನೂ ನನ್ನ ಪತ್ನಿ ಸೇರಿ ಇಂತದೊಂದು ಖಾತೆ ತೆರೆದೇವು. ಆಶೀರ್ವಾದವಿರಲಿ.

mshebbar said...

g8

Srikanth Manjunath said...

ಬಳಸುವುದಾ ಇಲ್ಲಾ ಬೆಳೆಸುವುದಾ ಇದನ್ನ ಅರ್ಥ ಮಾಡಿಕೊಂಡರೆ ಮಾನವ ಜೀವನದ ಖಾತೆಯಲ್ಲಿ ನೋವಾಗಲೀ ನಲಿವಾಗಲಿ ಸಮಾನವಾಗಿ ನೆರಳಿನಂತೆ ಹಿಂಬಾಲಿಸುತ್ತದೆ. ಕೋಪ ಬಂದಾಗ ಹತ್ತು ಎಣಿಸು, ನೀರು ಕುಡಿ, ಆಕಾಶ ನೋಡು ಹೀಗೆಲ್ಲ ಹೇಳುವ ಪದಗಳು, ಹಿತವಚನಗಳು ನಿಜಕ್ಕೂ ನಮ್ಮ ಜೀವನವನ್ನು ತುಂಬಾ ಸಂತಸದಿಂದ ಇಡಲು ಸಹಕಾರಿಯಾಗುತ್ತದೆ. ಅಮ್ಮ ತೋರಿದ ಪ್ರೀತಿಯ ಹಾದಿಯಿಂದ ಕೆಲವು ಬೆನ್ನು ಮಾಡಿ ನಡೆದದ್ದಕ್ಕೆ ಸಂತಾಪ ಪಟ್ಟು ಮತ್ತೆ ತನ್ನ ಹೂವಿನ ಹಾದಿಗೆ ಜೀವನವನ್ನು ಕೊಂಡೊಯ್ದ ನಾಯಕಿಯ ವರ್ತನೆ ಇಷ್ಟವಾಯಿತು. ಸೂಪರ್ ಕಥೆ ಸರ್ಜಿ ಸೂಪರ್

umesh desai said...

ಚೆನ್ನಾಗಿದೆ ಬಾಲು ಸರ್ ನಿಮ್ಮೊಳಗೊಬ್ಬ ಅದ್ಭುತ ಕತೆಗಾರನಿದ್ದಾನೆ ಆಗಾಗ ಅವನ ದರ್ಶನ ಲಭಿಸಲಿ..

Unknown said...

Amma oodi tumbha ishta pattaru Uncle. :)

Unknown said...

Amma oodi tumba ishta pattaru Uncle. :)

Harini Narayan said...

ಇಂದಿನ ಜನಾಂಗಕ್ಕೆ ಈ ರೀತಿಯ ' ಮಾದರಿ ಅಮ್ಮ ' ಸಿಗಬೇಕು. ನಿರ್ಧಾರ ತೆಗೆದುಕೊಳ್ಳುವ ಪ್ರತಿಯೊಬ್ಬನೂ ಓದಬೇಕಾದ ವಿಚಾರ. ಬ್ಯಾಂಕಿನಲ್ಲಿ ಕಾಯುವಂತಾದ ಸನ್ನಿವೇಶ, ಕಾಲವೇ ಎಲ್ಲವನ್ನೂ ನಿರ್ಧರಿಸುವುದು - ಎಂಬುದನ್ನು ತಿಳಿಸುತ್ತದೆ. ಒಳ್ಳೆಯ ಕಥೆ !

Joshi Vanishree said...

tuuuuuuuuuuumba chennagide boss. very impressive and adorable...

UMESH VASHIST H K. said...

ಕಣ್ಣು ಗಳಲ್ಲಿ ನೀರು ಜಿನುಗುತು ಸಂತೋಷಕೆ.....ಚೆನ್ನಾಗಿದೆ ಬಾಲು ಜಿ.....:) :)

Unknown said...

ಸುಂದರ ಬರಹ ಬಾಲಾಜಿ....