Friday, August 27, 2010

ಆಸ್ಟ್ರೇಲಿಯಾ ಖಂಡದ ಸಮೀಪ ಶ್ರೀರಂಗಪಟ್ಟಣ[seringapattam ] ದ್ವೀಪ !!!ಆಸ್ಟ್ರೇಲಿಯ ದಿಂದ ಪಶ್ಚಿಮಕ್ಕೆ ಹಿಂದೂ ಸಾಗರದಲ್ಲಿ ನೆಲೆಗೊಂಡ  seringapattam  ದ್ವೀಪ [ಕನ್ನಡಿಗರ ಹೆಮ್ಮೆ]
ಈ ಕನ್ನಡ ನಾಡಿನ ಕೀರ್ತಿಪತಾಕೆ  ಹಿಂದೂ ಮಹಾ ಸಾಗರದಲ್ಲಿ ನೆಲೆಸಿರುವುದು ಹೀಗೆ.
ನಮಸ್ಕಾರ ಬನ್ನಿ ಈ ಸಂಚಿಕೆಯಲ್ಲಿ ನಿಮಗೆ ಒಂದು ಆಶ್ಚರ್ಯಕರ ವಿಚಾರ ತಿಳಿಸಿಕೊಡುತ್ತೇನೆ. ನಮಗೆಲ್ಲಾ ಗೊತ್ತು  ಕರ್ನಾಟಕದ ಮಂಡ್ಯ ಜಿಲ್ಲೆಯ ಒಂದು ಸಣ್ಣ ತಾಲೂಕು ಶ್ರೀರಂಗಪಟ್ಟಣ ಇತಿಹಾಸ ಪ್ರಸಿದ್ದ ಅಂತ.ಈ ಊರನ್ನು ಹಿಂದೆ ಆಂಗ್ಲರು serigapattam  ಅಂತಾನು ಕರೀತಿದ್ರು.ಈಗ ನೋಡಿ ಆಸ್ಟ್ರೇಲಿಯ ದೇಶದ ಪಶ್ಚಿಮ ದಿಕ್ಕಿಗೆ ಸಮೀಪ ಒಂದು ಕೊರಾಲ್ ದ್ವೀಪಕ್ಕೆ seringapattam ಅಂತಾ ಹೆಸರಿಟ್ಟು ಕನ್ನಡ ನಾಡಿನ ಈ ಊರಿನ ಹೆಸರು ಮೆರೆಯುವಂತೆ ಮಾಡಲಾಗಿದೆ. ಅಂತರ್ಜಾಲ ಜಾಲಾಡಿದಾಗ ಈ ಹಿಂದೆ  ಟಿಪ್ಪೂ ಸುಲ್ತಾನ್ ಕಾಲದಲ್ಲಿ ನಡೆದ ಮೈಸೂರಿನ ಅಂತಿಮ ಯುದ್ದ [೧೭೯೯] ದಲ್ಲಿ ಭಾಗವಹಿಸಿ ನಂತರ ಆಸ್ತ್ರೆಲಿಯಗೆ ತೆರಳಿದ ಸ್ಕಾಟ್ ಕುಟುಂಬ ಒಂದು ಈ ದ್ವೀಪವನ್ನು ಖರೀದಿಸಿಶ್ರೀ  ರಂಗ ಪಟ್ಟಣದಲ್ಲಿ ನಡೆದ ಅಂತಿಮ ಕಾಳಗದ ನೆನಪಾಗಿ ಆ ದ್ವೀಪಕ್ಕೆ seringapattam  ಅಂತಾ ಹೆಸರನ್ನು ನಾಮಕರಣ ಮಾಡಿ,ಸಂಭ್ರಮಿಸಿದೆ.ಬಹುಷಃ ಈ ದೇಶದ ಯಾವುದೇ ಊರಿನ /ಪಟ್ಟಣದ ಬಗ್ಗೆ ಇಂಥಹ ಘಟನೆ ಇರುವುದಿಲ್ಲ .ಬನ್ನಿ ಇದರ ಬಗ್ಗೆ ಕೆಲವು ಚಿತ್ರಗಳನ್ನು ಅಂತರ್ಜಾಲ  ಕೃಪೆ  ಇಂದ  ನಿಮಗಾಗಿ ಕೆಲವು ಚಿತ್ರಗಳನ್ನು ಡೌನ್ ಲೋಡ್ ಮಾಡಿದ್ದೇನೆ ನೋಡಿಬಿಡೋಣ ಬನ್ನಿ
ಉಪಗ್ರಹ ಚಿತ್ರ ದಲ್ಲಿ ಸೇರಿಂಗ ಪಟ್ಟಂ [ಶ್ರೀ ರಂಗ ಪಟ್ಟಣ ]ದ್ವೀಪ ಕಾಣುವುದು ಹೀಗೆ!!
   
ದ್ವೀಪದ ಮತ್ತೊಂದು ಸುಂದರ ನೋಟ .
Scott and Seringapatam Reefs is a group of atoll-like reefs in the Timor Sea more than 300 km northwest of Cape Leveque, Western Australia, on the edge of the continental shelf. There are three or four separate reef structures, depending on whether Scott Reef Central is counted separately. The group is just one of a number of reef formations off the northwest coast of Australia and belongs to Western Australia. Further to the northeast are Ashmore and Cartier Islands, and to the southwest are the Rowley Shoals......................................................

Tuesday, August 24, 2010

ಬ್ಲಾಗ್ ಲೋಕದ ಹಕ್ಕಿಗಳು ಸುಂದರ ಭಾನುವಾರ ಸೃಷ್ಟಿಸಿದ ಹಾಸ್ಯ ಲೋಕ.!!!!


ಆ ದಿನ ಭಾನುವಾರ ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿನ ಕನ್ನಡ ಭವನದಲ್ಲಿ ಸಡಗರದ  ಸಂಭ್ರಮ .ಪ್ರೀತಿಯ ಗೆಳೆಯರಾದ ಶ್ರೀ ಕೆ.ಶಿವೂ ಹಾಗೂ ಆಜಾದ್ ರವರ ಗುಬ್ಬಿ ಎಂಜಲು, ಜಲ ನಯನ ಪುಸ್ತಕಗಳ  ಬಿಡುಗಡೆ. ಜೊತೆಗೆ ಬ್ಲಾಗ್ ಲೋಕದ ಹಕ್ಕಿಗಳ ಮೇಳ  ಆಯೋಜಿಸಲಾಗಿತ್ತು.ಎಲ್ಲರೂ ಅವರದೇ ಲೋಕದಲ್ಲಿ ವಿಹರಿಸುವವರೇ  . ಬನ್ನಿ ಸುಂದರ ಭಾನುವಾರದ ಸುಂದರ ಕ್ಷಣಗಳನ್ನು ಹಾಸ್ಯ ವಾಗಿ ಸವಿಯೋಣ !!!! ಈ ಚಿತ್ರಗಳನ್ನುನೋಡಿ ನೀವು  ನಕ್ಕು ಬಿಟ್ಟರೆ ಪ್ರತಿ ನಗುವಿಗೆ ದಂಡ ವಿಧಿಸಲಾಗುವುದು .ನಗದಿದ್ದವರಿಗೆ ಬ್ಲಾಗಿನ ಚಿತ್ರನೋಡುವ ಶಿಕ್ಷೆಯಂತೂ ಖಾಯಂ.ಇದು ಹಾಸ್ಯಕ್ಕಾಗಿ ಬರೆಯಲಾಗಿದೆ. ಯಾರೂ ತಪ್ಪಾಗಿ  ಭಾವಿಸದೆ ನಕ್ಕು ಸುಂದರ ಭಾನುವಾರ ವನ್ನು ನೆನಪಿನಲ್ಲಿ ಉಳಿಸಿಕೊಳ್ಳಿ !![ವಿಶೇಷ :-ಬೀಡಿ ಸೇದಿದ ಇಬ್ಬರು ಮಹನೀಯರ ಚಿತ್ರಗಳನ್ನು ಅವರ ಕೋರಿಕೆ ಮೇರೆಗೆ ಪ್ರಕಟ ಗೊಳಿಸಿಲ್ಲ !!!] ಉಳಿದಂತೆ ಇತರ ಎಲ್ಲಾ  ಮಸಾಲೆ ಸೇರಿದೆ.ಬನ್ನಿ ಕಾರ್ಯಕ್ರಮ   ಹೀಗೂ ಉಂಟೆ!!!!!!!ಅಲ್ಲ ಅಲ್ಲಾ ಹೀಗೆ  ಉಂಟೂ !!!!!!!!! ರೆಡಿ ಒಂದು ಎರಡು ಮೂರು ........ಶುರು!!! 

ಬೇಗ ರೆಡಿ ಮಾಡ್ರೀ ಹೊತ್ತಾಯ್ತು !!! ಯೆಜಮಾನ್ರೂ ಬರ್ತಾರೆ ಈಗ!!!
   
ನಾನೀಗ ರೆಡಿ !!ಯಾರು ಬರ್ತೀರೀ ಬನ್ರೀ !!ಮಾತಾಡಿ.
ನಾನು ಬರ್ಲಾ!!! ಪರದೆ ಇಂದಾ ಇಳ್ದೂ!!!!
ನೋಡ್ರೀ!!! ಇದು ಪರದೆ ಇಂದಾ  ಇಳಿಯುತ್ತಂತೆ  !!!!!
ಬನ್ನಿ ಸಾರ್!!! ಅಂತಾ ಜೋರಾಗಿ ಕೈ ಎಳಿತಾರೆ ನೋಡ್ರೀ!!!
ಯಾರಾದ್ರೂ ಬರಲಿ ಪರವಾಗಿಲ್ಲ !!ನನ್ ಕರಾಮತ್ತು ತೋರ್ತೀನಿ!!!!
ಆಹಾ !!ಆಹಾ !!ನೋಡ್ರೀ ಹೆಂಗೆ ನಗುತ್ತಾರೆ !!!ನಗಿ ನಿಮಗೆ ಮುಂದೆ ಇದೆ!!
ನಿದ್ದೆ ಹಾಗು ಆಕಳಿಕೆ ಮಾಡೋರ ಮುಖ ಈ ಪರದೇಲಿ ಹಾಕೋಣ!!! 
ನಾವು ವೇದಿಕೆಲಿದ್ರೂ  ಮಾತಾಡೋ ಹಂಗಿಲ್ವಂತೆ !!!
ಹಲೋ  ನಿಮ್ದೊಂದು ಫೋಟೋ ಕ್ಲಿಕ್ ಮಾಡ್ಲಾ ಮೇಡಂ???
"ಗುಬ್ಬಿ ಎಂಜಲು" ತಿಂಡಿ ನೀವು ತಿನ್ದಿದೀರ ??? ಸಾರ್ !!!
ಏನಾದರೂ  ಮಾಡ್ಕೊಳ್ಳಿ ನನ್ನ ನನ್ ಪಾಡಿಗೆ ಬಿಟ್ಬಿಡಿ !!!ಅಂದ ಈ ಹುಡುಗ ???
"ಗುಬ್ಬಿ ಎಂಜಲು "ಮಾಡ್ ತೋರ್ಸಿ ಅಂದ್ರೆ ಸಭಾ ತ್ಯಾಗ  !!!ಸ್ವಪಕ್ಷದವರ ಸಾಂತ್ವನ !!!
ಯುವರ್ ಆನರ್ ನಾನು ಹೇಳೋದೇನಂದ್ರೆ !!!ತಿಂಡಿ ಬರ್ತಾಯಿದೆ...........!!!!!!!!
ರೀ ಗುಬ್ಬಿ ಎಂಜಲು ಮಾಡೋಣ ??ಬೇಡ ಸುಮ್ನಿರು  ಎಲ್ಲಾ ನೋಡ್ತಾರೆ.
ಹೋಗ್ರೀ ನಂಗೆ ಕೋಪ ಬಂದಿದೆ!!
ಇವರೂ  ಎಷ್ಟು ಅಡಿ ಇರಬಹುದು ??ಅಂತಾಒಬ್ಬರು ಅಂದುಕೊಂಡರೆ ಕೂತಿದ್ದ ಹುಡುಗ ಆಕಳಿಸುತ್ತಾ ನಂಗೆ ಗೊತ್ತಿಲ್ಲಾ.....ಅಂದಾ.!!!
ಹಿರಿಯರ ಸುತ್ತ ,ಕಿರಿಯರ ಪ್ರೀತಿಯ  ವೃತ್ತ .ಇದಕ್ಕೆ ವೈಜ್ಞಾನಿಕ ಕಾರಣ ಬೇಡ ಅಂದ್ರೂ ಸುಧೀಂದ್ರ !!!
ನೋಡ್ರಪ್ಪಾ ನನ್ ಪಾಡಿಗೆ ನನ್ನ ಬಿಡಿ ,ನನ್ ಮಾತ್ ಕೇಳಿ!!!
ಫೋಟೋ ತೆಗೆಯಲು ನಾವ್ ರೆಡಿ !!1
ನೀವು ಇವ್ರಲ್ವಾ !!!ನಿಮ್ ಬ್ಲಾಗ್ ಯಾವ್ದು ???
ನೀವು ಹಾಡಬೇಕು ರಾಯರೆ !!! ಇಲ್ಲಾಂದ್ರೆ ತಿಂಡಿ ಕೊಡಲ್ಲಾ!!
ನಾನಿದೀನಿ ಬಿಡಿ ಹಾಡಿಸ್ತೀನಿ !! ಯೋಚನೆ ಬೇಡಾ .
ಈ ಕ್ಯಾಮರಾ ಹಾಗು ನಾನು ಸಿಮೆಂಟು ಮರಳಿನ ಹಾಗೆ!!
ಸಾರ್ ನೀವು ಮುಕ್ತಾ ಮುಕ್ತಾ ದಲ್ಲಿ ಇರೋತರಾನೆ ಇದೀರಾ !! ನೀವು ತುಂಬಾ ಮೃದು ಮನಸ್ಸಿನವರು ಬಿಡ್ರೀ !!!!
ಇನ್ನೂ ಏನಾದರೂ ಮರ್ತೊಯ್ತಾ !! ಏನೂ ಬಿಟ್ಟಿಲ್ಲಾ ಆಲ್ವಾ?
ಕಾರ್ಯಕ್ರಮದಲ್ಲಿ ಏನ್ ಮಾತಾಡೋಣಾ ಸಾರ್ ??
ಇನ್ನೂ ಗೆಸ್ಟ್ ಬಂದಿಲ್ವಾ ??? ಸುಧೀಂದ್ರ !!
ಗೆಸ್ಟ್ ಬಂದಾಗ ಒಳ್ಳೆ ಫೋಟೋ ತೆಗೀಬೇಕು.!!
ಗೆಸ್ಟ್ ಬಂದ್ರೂ ಜಾಗ ಬಿಡೀ !!!
ಕಾರ್ಯಕ್ರಮ ಶುರು ಆಯ್ತಾ ????
ಈ ಗಂಡುಸ್ರೂ ಸ್ವಾರ್ಥಿಗಳು  ಕಂಡ್ರಿ!!ಹೆಂಗಸರೂ ಇದಾರೆ ಅನ್ನೋದನ್ನೂ ಮರೆತು ತಾವೇ ತಿಂಡಿ ತಿಂತಾ  ಇದಾರೆ!!
ನಾನು ಸ್ವಾರ್ಥಿ ಅಲ್ಲ ರೀ !!! ತಾಳಿ ತಿಂಡಿ ಕೊಡಿಸ್ತೇನೆ.
ನಾನು ತಿಂಡಿ ತಿನ್ನೋದೇ ಹೀಗೆ!!ಸ್ಪೂನು ಸೇರ್ಸಿ ತಿಂದರೆ ಮಜಾ ಗೊತ್ತ!!
ಸಧ್ಯ  ನಾನು ಎರಡನೇ ಸಾರಿ ಹಾಕಿಸಿಕೊಂಡಿದ್ದು ಯಾರಿಗೂ ಗೊತ್ತಾಗ್ಲಿಲ್ಲ !!!
ಈ ತಿಂಡಿ ತಟ್ಟೆಯಲ್ಲಿ ಬ್ಲಾಗ್ ಗೆ ಏನ್ ಸಿಗುತ್ತೆ ?? ಅಂತಾ ಹುಡುಕಿದರೂ ಪಾಪ!!
ತಿಂಡೀ ಚೆನ್ನಾಗಿದೆ, ಆದ್ರೆ ಅಲ್ನೋಡಿ ???? ವಯಸ್ಸಿನ ತುಮುಲಗಳು.
ಯಾರ್ಗೆ ಬೇಕೂ ಸಾರ್ ಎರಡನೇ ಸರಿ.!!!!
ಸಾರ್ ನೀವು ಯಾವ್ ಎಣ್ಣೆ ಹಾಕ್ತೀರಿ ???ಅಂತ ಅವ್ರಂದ್ರೆ ..........ತಲೆಗಾ ?/ಅಂತಾ ಇವ್ರನ್ದ್ರೂ !!!!
ಎಣ್ಣೆ ನ  ..................!!!! ಅಂತಾ ಅವ್ರು ನಕ್ರೂ ,         ತಾಳಿ ಸ್ವಾಮೀ ನಗಬೇಡಿ ,ಅಂತಾ ಇವ್ರನ್ದ್ರೂ !!!
ತಿಂಡೀ ಜೊತೆ ನಗು !!! ನಾಲಿಗೆಯಲ್ಲಿ ತುಟಿ ಸವರಿದ ಒಬ್ಬರು  ಉಪಹಾರ ಚೆನಾಗಿತ್ತು!!!ಅಂದ್ರೂ ...............????
ಸುಮ್ನಿರು ಕಂದಾ !! ಇಲ್ದಿದ್ರೆ ಮನುಷ್ಯರಿಗೆ ಹಿಡಿದು ಕೊಡ್ತೀನಿ!!ನೋಡು.
ಶಿವೂ ಮೇಲೆ ಫೋಟೋ ತೀರಿಸಿಕೊಂಡ ಸೇಡು???
ಮಾತೆಲ್ಲೋ !!!!ನೋಟವೆಲ್ಲೋ !!! ಯಾಕಿಂಗೆ ??
ಏನ್ರೀ ತ್ರಿವಳಿಗಳ ಕಾಟ !!! ಅಂತಾ ಹುಡ್ಗೀರ ಕಂಪ್ಲೇಂಟು !!!
ನಾನ್ಮಾತ್ ಶುರು ಮಾಡಿದರೂ ಯಾಕ್ರೀ ಗಲಾಟಿ.??ಈಗ ಕಾರ್ಯಕ್ರಮ ಪ್ರಾರಂಭ .
ಮಾತಾಡಿ ಸುಸ್ತಾಗಿದೆ !!!ಈಗ ತಗೋಳಿ ಒಂದು ಬ್ರೇಕ್ .
ಅರೆ ಉಳಿದ ಗಣ್ಯರು ಎಲ್ಲಿ??
ಸಧ್ಯಾ ನೀವು ಬಂದ್ರಲಾ!!ಜೊತೆಗೆ.
ಲೇಟಾಯ್ತು  ನಿಮ್ಮೇಲೆ ಒಂದು ಚುಟುಕ ಬರೀಲಾ ಸಾರ್ ???ಆದ್ರೆ ನೀವು  ಕೆಮ್ಮನ್ಗಿಲ್ಲಾ !!!
ಯಾರ್ ಫೋಟೋ ತೆಗೀಲಿ ??  ಬೆಕ್ಕು !! ಹೊಂಚಿಹಾಕಿತ್ತು.
ಡುಂಡಿರಾಜರ  ಚುಟುಕು ಕಾರ್ಯಾಚರಣೆ.!!
 ಅಜಾದ್ ಜೈಅನ್ನಿಸಿ ಬಿಟ್ವಿ !!! ಅಲ್ವ ಶಿವೂ !! ಅಂದ್ರೆ ಹೌದು ಅಜಾದ್  ಸರ್ ಅಂದ್ರೂ ಶಿವೂ !!
ಈಗ ಮಾತಾಡವ್ರೂ>>>>>>!! ಅಂತಾ ಅಂತಾ  ತಾವು ಮಾತಾಡಿದ್ರೂ !!!
ನೋಡ್ರೀ ಪಾಕೆಟ್ ಒಳಗೆ ಇದ್ದವು ಇವೆ ಪುಸ್ತಕ !!!!! ಬಿಟ್ಟಿ ಓದ್ಬ್ಯಾಡಿ ಮತ್ತೆ!!
ಯಾವ್ ಚುಟುಕ ಇಲ್ಲಿಗೆ ಸೂಕ್ತಾ ???
ಪರವಾಗಿಲ್ಲಾ ರೀ  ನನ್ ಚುಟುಕ  ಪರಿಣಾಮ ಬೀರ್ತಿದೆ.
ಕವಿತಾ  ಪಡ್ನೆದೋ ಹಂ ಕೋ !!!ಆಮೇಲ್ ಬೇಕಾರ್ ಕೆಮ್ಕೋ !!!!!!.........ಅಂದ್ರೂ ಇವ್ರು . ಅದ್ಕೆ ಸಭೆನಲ್ಲಿ ಯಾರೂ ಕೆಮ್ಮಲಿಲ್ಲಾ .
ಅವ್ರ್ನಾ ತೆಗೆದಾಯ್ತಾ ?? ಈಗ ಇವರನ್ನ ತೆಗೀರಿ !! ಅಂಥಾ ಸ್ಕೆಚ್ಚು???
ಕಾರ್ಯ ಕ್ರಮದಲ್ಲಿ ಲೀನವಾದವರು.
ಹುಷಾರ್ ರೀ!! ಬೇಟೆ ಮುಂದುವರೆಸಿದೆ ಬೆಕ್ಕು !!!!
ಅಲ್ನೋಡ್ರೀ.... ಕಾರ್ಯಕ್ರಮದಲ್ಲಿ ಇಣುಕಿ ನೋಡೋರ್ನ!!!!!!
ಸಾರ್ ನೀವ್ ಸ್ವಲ್ಪ ಮಾನ್ಯ ಯಡಿಯೂರಪ್ಪಾ ಅವರ ತಾರಾ ಕಾಣ್ತೀರ ಆಲ್ವಾ??
ಹೌದೇನ್ರೀ ???
ಹಾಸ್ಯ ಬದುಕಿಗೆ ಅನಿವಾರ್ಯ !!ಇದಕ್ಕೆ ವೈಜ್ಞಾನಿಕ ಪುರಾವೆ ಇದೆ.
ಥೂ ಹೋಗ್ರೀ !!!ಯಾವ ಸುಂದ್ರೀನೂ ಫೋಟೋಗೆ ಸಿಗ್ತಿಲ್ಲಾ !!!
ತಾಳಿ ಸ್ವಲ್ಪ ಕೆಮ್ಮ ಬೇಡಿ !!ಚುಟುಕು ಕವಿತೆ  ಹೇಳ್ತೀನಿ 
ನನ್ನ ಹಿಂದೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು.!!!!!೧.....ಹಿಂದೆ???
ಹೌದ್ರೀ....... ಹಿಂದೆ ಸಹಕರಿಸಿದವರು ಇವರೇ !!!
ಯಾಕ್ ಸ್ವಾಮೀ ಪ್ರೇಕ್ಷಕರನ್ನು ಹಿಂಗ್ ನೋಡ್ತೀರಾ ??? ಏನ್ ವಿಶೇಷ ??
ಮುಕ್ತಾ ಮುಕ್ತಾದ" ಮಂಗಳ ಅತ್ತೆ "ನನ್ನ ಕಾಮರಮೇಲೆ ಸಿಟ್ಟಾಗಿದ್ದು ಹೀಗೆ !!!
ದುಂಡಿರಾಜ್ ತಮಗೆ ನೀಡಿದ ಸನ್ಮಾನದ ಶಾಲಿನಲ್ಲಿ ಚುಟುಕು ಹುಡುಕುತ್ತಿರುವುದು.!!!
ಈ ಶಾಲಿನ ಹಿಂದೆ ಗೌರವ ಹಾಗು  ಪ್ರೀತಿಯ ವಿಜ್ನಾನಿಕ ಕಾರಣವಿದೆ!!!
ಇಲ್  ಕೇಳ್ರೀ ಅಕ್ಕೊರೆ !!!
ಮಹಾ ಮಾತೆಯರೇ ಗಲಾಟೆ ಮಾಡಬ್ಯಾಡ್ರೀ !!!
ನಿಂಗಿ.. ನಿಂಗಿ.. ನಿಂಗಿ      ಅಂತಾ         ಹಾಸ್ಯವಾಗಿ ಎದೆ  ತುಂಬಿ ಹಾಡಿದ ಪ್ರೀತಿಯಕಲಾವಿದ !!
ಕಾರ್ಯಕ್ರಮ ಬೊಂಬಾಟ್ ರೀ !!!!
ರೀ ನಂಗೆ ನಾಚ್ಕೆ ಆಗುತ್ತಪ್ಪಾ !!!
ಸಾರ್ ಹಿಂದಿ ಹಾಡು ಸೂಪರ್ !!!
ನಿಂಗಿ ..ನಿಂಗೀ  ಹಾಡಿನ ಸುರ್ ಅಲ್ಲೋಯ್ತು ರೀ !! ನಾನ್ ಹೇಳ್ದೆ ನೀವ್ ಕೇಳಿಲ್ಲ !!!!
ಅಜಾದ್ ಬನ್ನಿ ನಿಮ್ಮನ್ನ ನಮ್ಮ ಸ್ನೇಹದ ಪೆಟ್ಟಿಗೆಯಲ್ಲಿ ಕೂಡಿ ಹಾಕ್ತೀವಿ.
ಯಾರ್ಯಾರ್ ಎಷ್ಟ್ ಗಿಡಾ ಬೆಳೆಸಿದ್ದೀರಿ ಸ್ವಾಮೀ!!!
ಗಿಫ್ಟ್ ಪ್ಯಾಕ್ ಓಪನ್ ಮಾಡೋಕೆ" ಒನ್  ಪೈಸೆ ಪರ್ ಸೆಕೆಂಡ್ "ಗೊತ್ತಾ!!
"ಒನ್ ಪೈಸಾ ಪರ್ ಸೆಕೆಂಡ್"  ಸಿಮ್ಕಾರ್ಡ್ ಜೊತೆಗೆ 60 ಪೆರ್ಸೆಂಟ್ ನಲ್ಲಿ ನಾನು ಕಾಮ್ಪ್ಲಾನ್ ಬಾಯ್!!!!!
ಗಿಫ್ಟ್ ನಲ್ಲೂ ಇಟ್ರೂ ಬತ್ತಿ ನೋಡಿ ಸಾರ್ !!!!
ಏನಿದೆ ಇದ್ರಲ್ಲಿ??
ಐಯ್ಯೊ  ಇದಾ!!!
 ಹೋಗ್ಲಿ ಬಿಡಿ !! ಜೊತೆ ಜೊತೆಯಾಗಿ ಪೀಪಿ  ಊದೋಣ,ಬನ್ನಿ!!!
ನಾನು ಚೆನ್ನಾಗಿ ಪೀಪಿ ಊದಿದೆ  ಅಲ್ವ??? ಹೌದ !! ಥ್ಯಾಂಕ್ಸ್.
ಅಕ್ಷರ ಕಲಿಯುವ ಬನ್ನಿ !!
ಶಾಂಪೂ  ಹಾರ ಆಯ್ತು ಮುಂದೆ??
ನನ್ನ ಪ್ರೀತಿಯ ಬಾಚಣಿಕೆ !! ಇದೆ ಗುಡ್
ಕೊಂಬು ಇಡೋಕೂ ಮಂದಿ ಅದಾರೆ !!!
ತುಂಬಾ ಚೇಷ್ಟೆ ಗುಂಪು ಕಣ್ರೀ !!
ನಕ್ಕೂ ನಕ್ಕೂ ಸುಸ್ತಾಗಿ !!!!ಗುಂಪಿನಲ್ಲಿ  ಕಷ್ಟ ಪಟ್ಟು  ನಕ್ಕ ಕೆಲವರು.
ನಿಮ್ಮೊಳಗೊಬ್ಬ  ಅಂತೀರಾ ಬನ್ನಿ ನಮ್ಮೊಳಗೇ ಅಂತಾ ಮಧ್ಯ ಕ್ಕೆ ಹಾಕಿ ಪ್ರೀತಿಯಿಂದ ನಲುಗಿಸಿದ ಆ ಕ್ಷಣ !!!
ಪಾಪ !! ಫೋಟೋ  ಗ್ರಾಫಾರ್ ಆದ್ರೆ ಹಿಂಗೆ ಸ್ವಾಮೀ ??ಜನ ತಮ್ಮ ಕಾಮರನೂ ನೇತಾಕ್ತಾರೆ.
ಪ್ರಕ್ಕೂ ಮಾಮನಿಗೆ  ಅವಿವಾಹಿತ ಹೈಕಳ ಲಗ್ಗೆ !!!
ಪ್ರಕ್ಕೂ ಮಾಮ ಪ್ಲೀಸ್ ನಂಗೂ  ಹೆಲ್ಪ್ ಮಾಡಿ  ಮದ್ವೆ ಮಾಡ್ಸಿ !!!
ತಾಳ್ರಪ್ಪ ಸ್ವಲ್ಪಾ !!!ಎಲ್ಲಿ ನಿಮ್ಮ biodata ಕೊಡಿ .ಯಾವ ಇಟ್ಟಿಗೆಗೆ ಯಾವ ಸಿಮೆಂಟ್ ಅಂತ ಯೋಚಿಸೋಣ.
ಬ್ಲಾಗಿನ ಕೈಗಳು ಸೇರಿದಾಗ !!ಶುಭ ವಿದಾಯ ....
ಈ ಚಿತ್ರಗಳನ್ನು ನೋಡಿ ಆನಂದಿಸಿ ಯಾರೂ ವಯಕ್ತಿಕವಾಗಿ ತೆಗೆದುಕೊಳ್ಳುವುದು ಬೇಡ . ನಿಮಗೆ ಸಂತೋಷವಾದರೆ ನನಗೆ ತಿಳಿಸಿ. ಓ.ಕೆ . ಎಲ್ಲರಿಗೂ ನಮಸ್ಕಾರ.