Friday, October 12, 2012

ಸಿರ್ಸಿ [ ಶಿರಸಿ ] ನೆನಪು ಕಾಡ್ತಾ ಇದೆ.....ಪಯಣ.7,ಸ್ವರ್ಣವಲ್ಲಿ ಮಠದ ಸನ್ನಿಧಿಯಲ್ಲಿ.!!!

ಶ್ರೀ ಸೋಂದಾ ಸ್ವರ್ಣವಲ್ಲಿ ಮಠದ ಸನ್ನಿಧಿ.


 ಸೋಂದೆ ಅರಸರ ಕೋಟೆಯ ನೋಡಿ ಒಮ್ಮೆ ನಿಟ್ಟುಸಿರು ಬಿಟ್ಟು   ನಾನೂ ಹರ್ಷ  ಹೊರಟೆವು................ನಮ್ಮನ್ನು ಬೀಳ್ಕೊಟ್ಟ ಕೋಟೆ   ಮತ್ತೆ ಯಾವಾಗ  ಬರುವೆ ಎಂಬಂತೆ  ಕೇಳಿದಂತೆ ಆಯಿತು.  ನಮ್ಮ ಪಯಣ ಮುಂದೆ ಸಾಗಿತು..............ಮುಂದೆ ಸಾಗಿದ ನಮ್ಮ ಬೈಕು  ನಿಂತಿದ್ದು   ದಾರಿಯಲ್ಲಿ ಸಿಕ್ಕ ಒಂದು ಮ್ಯೂಸಿಯಮ್ಮಿನ  ಬಳಿ.................!!!! ಸೋಂದೆ ಕೋಟೆಯಿಂದ ಸ್ವರ್ಣವಲ್ಲಿ ಮಠದ ಕಡೆ ನಮ್ಮ ಬೈಕ್ ತೆರಳುತ್ತಿತ್ತು. ದಾರಿಯಲ್ಲಿ ಕಣ್ಣಿಗೆ  ಮ್ಯೂಸಿಯಂ  ಎಂಬ ಫಲ ನೋಡಿ , ಹರ್ಷ ಸ್ವಲ್ಪ ನಿಲ್ಲಿ  ಮ್ಯೂಸಿಯಂ  ನೋಡೋಣ ಎಂದೇ, ಇಬ್ಬರೂ ಮ್ಯೂಸಿಯಂ  ನೋಡಲು ಒಳ ಹೊಕ್ಕೆವು, ಅಲ್ಲಿದ್ದ ವ್ಯಕ್ತಿ ಒಬ್ಬರು  ನಮ್ಮನ್ನು ನೋಡಿ ಪತ್ರಕರ್ತರೆಂದು ತಿಳಿದು, ನಗು ಮುಖದಿಂದ ಸ್ವಾಗತಿಸಿದರು. ಮ್ಯೂಸಿಯಂ  ಒಳ ಹೊಕ್ಕ ನಮಗೆ ಅಂತಹ ವಿಶೇಷವೇನೂ ಕಾಣಲಿಲ್ಲ, "ಇನ್ನೂ ಸಾಕಷ್ಟು ಬರಬೇಕಿದೆ ಸಾರ್ , ಈಗಷ್ಟೇ ಎಲ್ಲಾ ತಯಾರಿ ನಡೆದಿದೆ" ಎಂದರು  , ಹಾಗೆ ಒಮ್ಮೆ ಕಣ್ಣಾಡಿಸಿ ಹೊರಬಂದೆ, ವಿಶೇಷವನ್ನು ಕಾಣಲು ಹಾತೊರೆದಿದ್ದ ನನಗೆ  ನಿರಾಸೆ ಆಗಿತ್ತು.
ಬನ್ನಿ ನಿಮಗೆ ಸ್ವಾಗತ.


ಅಲ್ಲಿಂದ ಮುಂದೆ ಸಾಗಿ  ಶ್ರೀ ಸೋಂದಾ ಸ್ವರ್ಣವಲ್ಲಿ  ಮಠದ  ಸನ್ನಿಧಿ ತಲುಪಿದೆವು. ಶ್ರೀ ಸೋಂದಾ ಸ್ವರ್ಣವಲ್ಲಿ ಮಠಕ್ಕೆ ತನ್ನದೇ ಆದ ಭವ್ಯ. ಇತಿಹಾಸವಿದೆ. ಬನ್ನಿ ಸ್ವಲ್ಪ ತಿಳಿಯೋಣ."ಆದಿ ಜಗದ್ಗುರು ಶಂಕರಾಚಾರ್ಯ" ಪರಂಪರೆಯಲ್ಲಿ   ಸ್ವರ್ಣವಲ್ಲಿ ಮಠದ ಉಗಮ ಕಾಶಿಯ [ವಾರಣಾಸಿ] "ದಶಾಶ್ವ ಘಾಟ್ " ನಲ್ಲಿ ಆಗುತ್ತದೆ. ಇದರ ಮೊದಲ ಸ್ವಾಮಿಗಳಾಗಿ "ಶ್ರೀ ವಿಶ್ವವಂಧ್ಯ ಸರಸ್ವತಿ" ಯವರು ಪ್ರಥಮವಾಗಿ ಶ್ರೀ  ಮಠದ ಚುಕ್ಕಾಣಿ  ಹಿಡಿಯುತ್ತಾರೆ. ಆನಂತರ ವಿವಿಧ ಕಾಲಕ್ಕೆ ಅನುಗುಣವಾಗಿ  ಶ್ರೀ ಮಠವು" ಕಾಶಿಯಿಂದ ಉಜ್ಜಯಿನಿ" , "ಉಜ್ಜಯಿನಿ ಇಂದ ಗೋಕರ್ಣ"  "ಗೋಕರ್ಣದಿಂದ ಕಡತೋಕೆ"  "ಕಡತೋಕೆ ಯಿಂದ ಸಹಸ್ರಲಿಂಗ" ಕೊನೆಗೆ  "ಸಹಸ್ರ ಲಿಂಗದಿಂದ  ಈಗ ಇರುವ ಸೋಂದೆ ಸ್ವರ್ಣವಲ್ಲಿ" ಗೆ ಸ್ಥಳಾಂತರ  ಗೊಂಡಿದೆ.

ಶ್ರೀ ಮಠದ ಬೆಳವಣಿಗೆಯಲ್ಲಿ ಶ್ರೀ ಮಠ ಇದ್ದ ಪ್ರದೇಶದ  ಆಳ್ವಿಕೆ ನಡೆಸಿದ  "ಕಾಶಿ ರಾಜ"  "ಉಜ್ಜಯಿನಿ ವಿಕ್ರಮಾದಿತ್ಯ"  "ವಿಜಯನಗರ ಅರಸರು" " ಚಂದಾವರದ ಚಂದ್ರ ಸೇನ" "ಸುಧಾಪುರದ  ನರಸಿಂಹ ಭೂಪಾಲ" "ಮಂಜುಗುಣಿ ಅರಸರು" ಸೋಂದೆ  ಅರಸರು, ಕೆಳದಿಯ ಅರಸರು, ಈ ಪ್ರದೇಶವನ್ನು ಆಳಿದ  ನಾಯಕ ವಂಶಸ್ಥರು  ಸ್ವರ್ಣವಲ್ಲಿ ಮಠಕ್ಕೆ  ತಮ್ಮ ಸೇವೆ ಮಾಡಿ  ಭೂದಾನ, ಆರ್ಥಿಕ ಸಹಾಯ ,ಆಶ್ರಯ ಕೊಟ್ಟು ಪೋಷಿಸಿದ್ದಾರೆ.ಆನಂತರ  ಟಿಪ್ಪೂ ಕಾಲದಲ್ಲಿ, ಬ್ರಿಟೀಷರ ಕಾಲದಲ್ಲಿಯೂ  ಈ ಶ್ರೀ ಮಠದ ಆಡಳಿತಕ್ಕೆ, ಸಂಪ್ರದಾಯಗಳಿಗೆ ತಕ್ಕ ಮನ್ನಣೆ ದೊರಕಿದೆ. ಸೋಂದಾ ಅರಸ ನರಸಪ್ಪ ನಾಯಕರು ಕ್ರಿ.ಶ .1556 ರಲ್ಲಿ ಈ ಮಠಕ್ಕೆ  ಭೂದಾನ ಮಾಡಿ ದೇಗುಲಗಳನ್ನು ಕಟ್ಟಿಸಿಕೊಟ್ಟು ತಮ್ಮ ಭಕ್ತಿ ಮೆರೆದಿದ್ದಾರೆ .

ಶ್ರೀ ಮಠದ  ಸ್ವಾಮಿಗಳು.


ಈ ಮಠದ  ಅನುಯಾಯಿಗಳಾದ  "ಹವ್ಯಕ ಬ್ರಾಹ್ಮಣರ"  ಇತಿಹಾಸವೂ  ಸಹ ಈ ಮಠದ ಪರಿಸರದ ಬೆಳವಣಿಗೆಯ ಜೊತೆಯಲ್ಲೇ ಸಾಗಿದೆ. ಅದರಂತೆ ಹವ್ಯಾಕರೂ ಸಹ  ಈ ಶ್ರೀ ಮಠಕ್ಕೆ ಗೌರವದಿಂದ ನಡೆದುಕೊಳ್ಳುತ್ತಾರೆ .  ಹವ್ಯಕರು ಈ" ಶ್ರೀ ಮಠ"  ವನ್ನು "ಹೊನ್ನಳ್ಳಿಮಠ"  ಎಂದು ಕರೆಯುತ್ತಾರೆ.

ಭವ್ಯವಾದ ಸುಧರ್ಮ ಸಭಾಂಗಣ 




ಸುಧರ್ಮ ಸಭಾ ಭವನದ ಒಳನೋಟ.

ಹಾಲಿ ಶ್ರೀ ಮಠವು ಸಮಾಜಮುಖಿ  ಕಾರ್ಯದಲ್ಲಿ ತೊಡಗಿದ್ದು, ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ತಿಳಿದುಬರುತ್ತದೆ, ಮಠದ ಒಳ ಹೊಕ್ಕ ನಾವು, ಸುಧರ್ಮ ಸಭಾಂಗಣ  ನೋಡಿ  ಅಚ್ಚರಿಯಾಯಿತು,  ಸಾವಿರಾರು ಜನರು ಕುಳಿತುಕೊಳ್ಳಬಹುದಾದ  ವಿಶಾಲ ಸಭಾಂಗಣ ಅದು. ಅಲ್ಲೇ ವೇದಿಕೆಯ ಮೇಲೆ ಇಡಲಾಗಿದ್ದ ಮರದ ಆಸನ  ಗಮನ ಸೆಳೆಯಿತು. ಮುಂದುವರೆದು ಶ್ರೀ ಮಠದ ಆವರಣದಲ್ಲಿರುವ "ಶ್ರೀ ಚಂದ್ರಮೌಳೇಶ್ವರ  ಸ್ವಾಮೀ"  ದರ್ಶನ ಪಡೆದೆವು. ಅಲ್ಲಿನ ಸಂಪ್ರದಾಯ ಗೌರವಿಸಬೇಕಾದ  ಕಾರಣ  ಮೂಲ ದೇವರ ಛಾಯಾಚಿತ್ರ ತೆಗೆಯಲಿಲ್ಲ. ಅಲ್ಲೇ ಸನಿಹದಲ್ಲಿ ಕೆಲವು ವಟುಗಳು ವೇಧ ಘೋಷ  ಮಾಡಿದ್ದರು , ಭಕ್ತಿ ಮೂಡಿಸುವ ಆ ಸನ್ನಿವೇಶ  ಮನಕ್ಕೆ ಮುದನೀಡಿತು.


ಅಡಿಕೆ ಹಣ್ಣು [ ಅಡಿಕೆ ಗೋಟು ]


ಅಡಿಕೆ ಬೇಯಿಸುವ  ಒಲೆ 
 ,
ಚಂದ್ರ ಮೌಳೇಶ್ವರ  ಸನ್ನಿಧಿಯಿಂದ ಹೊರ ಬಂದ ನಾವು  ಗೋಶಾಲೆ ಕಡೆಗೆ ತೆರಳಿದೆವು. ಹಾದಿಯಲ್ಲೇ ಅಡಿಕೆ ಹಣ್ಣು [ ಗೋಟು ಅಡಿಕೆ ] ತುಂಬಿದ ಬಿದಿರಿನ  ಬುಟ್ಟಿಗಳು ಕಂಡವು ಹಾಗು  ಅಡಿಕೆ  ಬೇಯಿಸಲು ಬಳಸುವ ಒಲೆ  ಕಣ್ಣಿಗೆ ಬಿತ್ತು , ಹೌದು   ಶ್ರೀ ಮಠದ ವತಿಯಿಂದ ಅಡಿಕೆ ಬೆಳೆ  ಕಾರ್ಯ ಮಾಡುತಿದ್ದು,  ಉತ್ತಮ ಪ್ರಯೋಗ ಮಾಡುತ್ತಿರುವುದಾಗಿ ತಿಳಿದುಬಂತು. ಹಾಗೆ ಸಾಗಿ ಗೋಶಾಲೆ  ಒಳಗೆ ಕಾಲಿಟ್ಟೆವು,

ಗೋಶಾಲೆಯ ದರ್ಶನ 




 ಅಚ್ಚರಿ ನಮಗೆ ದರ್ಶನ ನೀಡಿದ್ದು  ವಿವಿಧ ಬಗೆಯ ತಳಿಯ ಆರೋಗ್ಯಕರ ಹಸುಗಳು, ಪ್ರತೀ ಹಸುವಿಗೂ ಸುಂದರ ಹೆಸರುಗಳನ್ನೂ ಇಡಲಾಗಿದೆ,  ಭಾಗೀರತಿ, ಶಾಲ್ಮಲೆ , ಕಾಮಧೇನು ಇತ್ಯಾದಿ, ಗೋಶಾಲೆ ತುಂಬಾ ವ್ಯವಸ್ತಿತವಾಗಿತ್ತು, ಅಲ್ಲಿನಹೋರಿಗಳು,  ಹಸುಗಳು, ಹಸುವಿನ ಕರುಗಳು  ನಿರಾಳವಾಗಿ ಮೇವು ತಿಂದು  ಜೀವಿಸಲು ಬಹಳ ಆಧುನಿಕ ವ್ಯವಸ್ಥೆ ಮಾಡಲಾಗಿದೆ, ಶುಚಿತ್ವ ಕಾಪಾಡಲಾಗಿದೆ. ಹೈನುಗಾರಿಗೆಯಲ್ಲಿ  ತನ್ನದೇ ಕ್ರಾಂತಿ ಮಾಡುವತ್ತ ಸಾಗುತ್ತಿದೆ ಈ  ಶ್ರೀ ಮಠ. ಹಾಗು ತಳಿ ಅಭಿವೃದ್ಧಿಯಲ್ಲೂ ಸಹ  ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ . ದೇವಾಲಯ ನಿರ್ಮಿಸಿ  ಪೂಜೆ ಮಾಡುವುದಷ್ಟೇ ಕಾರ್ಯವಲ್ಲಾ  ತಾನೂ ಸಹ ಸಮಾಜ ಮುಖಿ ಕಾರ್ಯ ನಡೆಸಿ  ವ್ಯವಸಾಯ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಾ ಸಾಗಿದೆ ಈ ಸನ್ನಿಧಿ.  ಸೋಂದೆ ಸ್ವರ್ಣವಲ್ಲಿ  ಮಠದ  ದರ್ಶನ  ಮನಕ್ಕೆ ಮುಧ ನೀಡಿತ್ತು,  ಮನ ತುಂಬಿ "ಹರ್ಷ ತುಂಬಾ ಥ್ಯಾಂಕ್ಸ್ ಕಣ್ರೀ, ನನ್ನನ್ನೂ ಈಜಾಗಕ್ಕೆ  ಕರೆದುಕೊಂಡು ಬಂದಿದ್ದಕ್ಕೆ " ಅಂತಾ ನನ್ನ ಕೃತಜ್ಞತೆ ತಿಳಿಸಿದೆ.  "ಅಯ್ಯೋ ಅದಕ್ಯಾಕೆ ಇಷ್ಟೊಂದು  ಭಾವುಕರಾಗ್ತೀರಿ ಬಾಲಣ್ಣ  ಬನ್ನಿ ಮುಂದೆ ಹೋಗೋಣ" ಹೇಳಿದ.

ಮಠದ  ಅಂಗಳದಲ್ಲಿ  ಜಿಂಕೆಗಳ ದರ್ಶನ 


ಅಲ್ಲೇ ಕಂಡಿದ್ದು ಒಂದು ಕಡೆ ಜಿಂಕೆಗಳ ದರ್ಶನ ವಾಯ್ತು. ಪ್ರೀತಿಯಿಂದ  ಹತ್ತಿರ ಹೋಗಿ ಮೈಮುಟ್ಟಿ ಸಂತಸ ಪಟ್ಟೆವು. ನಮಗೆ ಇಲ್ಲೇನು ಕೊರತೆ ಇಲ್ಲಾ  ಎನ್ನುವಂತೆ ಅವುಗಳು ಓಡಾಡುತ್ತಿದ್ದವು. ನಮ್ಮ ಪ್ರೀತಿ ಸಲ್ಲಿಸಿ  ಅಲ್ಲಿಂದ ತೆರಳಿದ ನಾವು  ಬೈಕ್ ಹತ್ತಿ    ಸಾಗಿದೆವು...................ಐದು ಕಿ.ಮೀ. ದೂರದ  ಶ್ರೀ ವಾಧಿರಾಜ ಮಠದ  ಸನ್ನಿಧಿ  ನೋಡಲು.

12 comments:

umesh desai said...

ಬಹಳದಿನಗಳ ಹಿಂದೆ ಸ್ವರ್ಣವಲ್ಲಿಯಲ್ಲಿ ಒಂದು ರಾತ್ರಿ ಕಳೆಯುವ ಯೋಗಬಂದಿತ್ತು ಕುಟುಂಬ ಸಮೇತವಾಗಿ..
ಅಲ್ಲಿಯ ವಾತಾವರಣವೇ ವಿಶಿಷ್ಟವಾಗಿದೆ.ಅಲ್ಲಿಯ ವಟುಗಳ ವೇದಘೋಷ ಇನ್ನೂ ಕಿವಿಯಲ್ಲಿದೆ..
ನನ್ನ ಬ್ಲಾಗಿಗೂ ಬನ್ನಿ..ಹೊಸ ಕಥೆ ಇದೆ

Srikanth Manjunath said...

"ಸ್ನಾನ ಗೀನ ಎಲ್ಲ ದೇಹಕ್ಕಲ್ಲ ಕಂದ ಮನಸಿಗೆ" ಅರೆ ಇದು ಕವಿರತ್ನ ಕಾಳಿದಾಸದಲ್ಲಿ ಅಣ್ಣಾವ್ರು ಹೇಳಿದ ಸಂಭಾಷಣೆ...ಮೊದಲ ಆರು ಕಂತುಗಳಲ್ಲಿ ಕಣ್ಣಿಗೆ ತಂಪನ್ನು ಕೊಡುತಿದ್ದ ಲೇಖನ..ತಿರುವು ತೆಗೆದುಕೊಂಡು ಮನಸಿಕೆ ತಂಪನ್ನು ಕೊಡಲು ಬಂದಿದೆ...ಹೌದು (ಕೆಲವು) ಮಠಗಳು /ದೇವಸ್ಥಾನಗಳು ಕೊಡುವ ಮನಶಾಂತಿ ಅಪರೂಪವಾದದ್ದು..ಸೊಂದೆಯ ಮಠದ ವಿವರಗಳು ಸುಂದರವಾಗಿವೆ..ಅದರ ಚಿತ್ರಗಳು, ಅದರ ವಿವರಣೆಗಳು ಸೊಗಸು..ಆ ಪ್ರಶಾಂತ ಪರಿಸರದಲ್ಲಿ, ಆ ಹಸಿರು ಉಸಿರಿನಲ್ಲಿ ಮೀಸಲ ಬಾಜಿ ತಿನ್ನುವ ಬಯಕೆ ಕಾಡುತ್ತಿದೆ..
ಬರಲಿ ಬರಲಿ..ಮೀಸಲ ಬಾಜಿ..
ಅರೆ ದೋಸೆ ಬಂತು, ಚಟ್ನಿ ಬಂತು, ಸಾಂಬಾರ್ ಬಂತು, ಪಲ್ಯ ಬಂತು...ಆಹಾ...ಬಜ್ಜಿಯೂ ಬಂತು...ತೆಳ್ಳನೆ ನೀರು ದೋಸೆ ಬಂತು...ಮೀಸಲ ಬಾಜಿ ಬೇಕು..:-)

Badarinath Palavalli said...

ಮಠವು ಕಾಲಾಂತರದಲ್ಲಿ ಅಲ್ಲಲ್ಲಿ ಸ್ಥಿತಿಗೊಂಡು ಇಲ್ಲಿ ನೆಲೆಸಿದ್ದು ವಿಚಿತ್ರವಾಗಿದೆ. ಇಂತಹ ಇತಿಹಾಸ ಬೇರೆ ಯಾವ ಮಠಕ್ಕಿದೆ ಹುಡುಕ ಬೇಕು.

ಹವ್ಯಕ ಭಾಷಾ ಸೊಗಡು ಕೇಳಿದ್ದೇನೆ.

ಮಠದ ಕೈಂಕರ್ಯ ಚೆನ್ನಾಗಿದೆ.

ಅಡಿಕೆ ಚಿತ್ರಗಳೂ ಸೂಪರ್ರು.

ಗೋ ಸಂರಕ್ಷಣೆ ಮಾಡುತ್ತಿರುವ ಮಟದ ಔಧಾರ್ಯ ಮೆಚ್ಚ ತಕ್ಕದ್ದು.

ನಮ್ಮನ್ನು ವಾಧಿರಾಜರ ಮಠ ಕಾಯುತ್ತಿದೆ.

shivu.k said...

ಬಾಲು ಸರ್,
ಸೋಂದೆ ಮಠದ ಇತಿಹಾಸವನ್ನು ಓದಿ ತುಂಬಾ ಖುಷಿಯಾಯ್ತು...ಅದರ ಚಿತ್ರಗಳು ಕೂಡ ಖುಷಿಕೊಟ್ಟವು.

ಎ ವಿ ಜಿ ವಿಚಾರಲಹರಿ said...

ಸುಮಾರು 9-10 ವರ್ಷಗಳ ಹಿಂದಿನ ಮಾತು.ಈ ಮಠದವರು ಪ್ರಾಯೋಜಿಸಿದ್ದ ಅಲ್ಲಿಯೇ ಜರಗಿದ ೨ ದಿನದ ತರಬೇತಿ ಶಿಬಿರವೊಂದಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಹೋಗಗಿದ್ದಾಗಿನ ಅನುಭವಗಳನ್ನು ಪುನಃ ಮೆಲುಕು ಹಾಕುವಂತೆ ಮಾಡಿತು.

vandana shigehalli said...

ಸುಂದರ ಬರಹ ... ಇಷ್ಟ ವಾಯಿತು ಬೇರೆ ಬೇರೆ ಪ್ರವಾಸಿ ತಾಣಗಳ ಬೇಟಿ ಮಾಡುವವರಿಗೆ ನಿಮ್ಮ ಬ್ಲಾಗ್ ಸಹಕಾರಿ ಯಾಗಿದೆ ....

ಸುಬ್ರಮಣ್ಯ said...

ಇನ್ನಷ್ಟು ಇನ್ನಷ್ಟು!!!

nagaraj hegde said...

very nice sir,,,,

Unknown said...

nice photos.....religious identity

ಸಾಗರದಾಚೆಯ ಇಂಚರ said...

Superb sir, sakattagide

Manjunatha Kollegala said...

Nice narratives... you must be having a very nice time roaming around... Nice pictures as well

Anonymous said...

I found your website perfect for my needs. It helped me, and I'll certainly install what you recommend. You have something good going here, keep it up!