Wednesday, January 20, 2010

ಬಿಳಿಗಿರಿಯ ಬನದಲ್ಲಿ ..೦೬ ಬನದಲ್ಲಿ ಬಾಲ್ಯ ಅರಳಿಸುವ ಮಕ್ಕಳು!!!






ಬಿಳಿಗಿರಿಯ ಬನದ ಯಾತ್ರೆ ಯಲ್ಲಿ ನಮಗೆ ಅಲ್ಲಲ್ಲಿ ಕಾನನದ ಮಧ್ಯದಲ್ಲಿ ಸೋಲಿಗರ   ಮಕ್ಕಳು  ಸಿಗುತ್ತಿದ್ದರು. ನಮ್ಮನ್ನು ಕಂಡೊಡನೆ, ಆಶ್ಚರ್ಯ,ತುಂಬಿದ ಭೀತಿ,ಯಿಂದ  ಮರೆಯಾಗುತ್ತಿದ್ದರು. ಆ ಮಕ್ಕಳೋ ದಟ್ಟ ಕಾನನದಲ್ಲಿ  ಕಾಡು ಪ್ರಾಣಿಗಳ ನಡುವೆ ಬಾಲ್ಯ ಸವೆಸುವ  ಧೀರರಂತೆ ಗೋಚರಿಸಿದರು. ನಮಗೋ ಯಾವಾಗಲೋ  ಒಮ್ಮೆ ಕಾಡು ಜೀವಿಗಳನ್ನು ನೋಡಿ ಖುಷಿ ಯಾದರೆ ಇವರಿಗೆ ಇದು ನಿತ್ಯದ  ಜಂಜಾಟ. ತಮ್ಮ ಉಳಿವಿಗಾಗಿ ಕಾಡಿನ ಜೊತೆ  ನಿತ್ಯವೂ ಹೆಣಗಾಡಿ ಬದುಕ ಬೇಕಾದ ಅನಿವಾರ್ಯತೆ.ಇವರಿಗೆ ಆನೆ, ಕಾಡೆಮ್ಮೆ,ಜಿಂಕೆ, ಕಡವೆ, ಹುಲಿ ,ಕಾಡುಹಂದಿ, ಮುಂತಾದ ಎಲ್ಲ ಪ್ರಾಣಿಗಳು ನಮ್ಮ ಪಟ್ಟಣದ ಬೀಡಾಡಿ ಪಶುಗಳಿದ್ದಂತೆ!!. ಇವರು ದೈಹಿಕವಾಗಿ ತುಂಬಾ ಚತುರರಿದ್ದು  ಎಂತಹ ದಟ್ಟ ಕಾಡಿನಲ್ಲಿಯೂ ಸುಲಭವಾಗಿ [ಎಂತಹ ಸಮಯದಲ್ಲಾದರೂ]  ಸಾಗಬಲ್ಲರು.ಹಾಗು ಈ ಮಕ್ಕಳ ವಾಸನೆ ಗ್ರಹಣ ಶಕ್ತಿ ಅದ್ಭುತ ವಾಗಿದ್ದು  ವಾಸನೆ ಇಂದಲೇ ದೂರದಲ್ಲಿ ಯಾವ ಪ್ರಾಣಿ ಇದೆ ಎಂದು ಗುರುತಿಸ ಬಲ್ಲರು.ಶ್ರವಣ ಶಕ್ತಿ ಸಹ ಚುರುಕಾಗಿದ್ದು ಎಂತಹ ಸಣ್ಣ ಶಬ್ದವಾದರೂ  ಇವರ ಕಿವಿ ಕೇಳಿಸಿ ಪ್ರಾಣಿಗಳಿಂದ ತಪ್ಪಿಸಿಕೊಲ್ಲಬಲ್ಲರು .ಇನ್ನು ಇವರ ಚುರುಕು ನೋಟದ ಬಗ್ಗೆ ಹೇಳುವುದೇ ಬೇಡ  ಯಾವುದೇ ಮೂಲೆಯಲ್ಲಿನ ಪೊದೆಯಲ್ಲಿ  ಯಾವ ಪ್ರಾಣಿ ಇದ್ದರೂ ಇವರ ಕಣ್ಣು ತಪ್ಪಿಸಲು ಸಾಧ್ಯವಿಲ್ಲ !! ನಾವು ನೋಡಿದ ಯಾವ ಹಾಡಿಯಲ್ಲಿಯೂ ಮಕ್ಕಳು ಕಣ್ಣಿಗೆ ಕನ್ನಡಕ ಹಾಕಿದ್ದು ನೋಡಲಿಲ್ಲ !! ಒಟ್ಟಿನಲ್ಲಿ ಕಾಡಿಗೆ ಹೋಗುವುದರಿಂದ ಮನುಷ್ಯನ ಕಣ್ಣು, ಮೂಗು, ಕಿವಿ ಚುರುಕಾಗುವುದಂತೂ ನಿಜ!!ನಮಗೆ ಆ ಅನುಭವ ಆಗಿದೆ!!! ನೀವು ಪ್ರಯತ್ನಿಸಿ. !!!

7 comments:

ಸಾಗರದಾಚೆಯ ಇಂಚರ said...

ತುಂಬಾ ಸುಂದರ ವಿವರಣೆ
ಆ ಮಕ್ಕಳ ಕಂಗಳಲ್ಲಿ ಶಾಶ್ವತ ಆನಂದ ನೆಲೆಸಬೇಕು

ಆಗಲೇ ಮಾನವೀಯತೆಗೊಂದು ಅರ್ಥ

ಗೌತಮ್ ಹೆಗಡೆ said...

ivannella blog lokakke tandaddakke tamage dhanyavada sir..

shivu.k said...

ಸರ್,

ಬಿಳಿಗಿರಿಯ ಬನದಲ್ಲಿ ಸೋಲಿಗರ ಫೋಟೊಗಳು ಚೆನ್ನಾಗಿವೆ. ಮಕ್ಕಳ ಕತೆಯನ್ನು ಓದಿ ಮನಕಲಕಿತು.

Nisha said...

kadu hagu allina makkala varnane chennagide. Prakruthi matheya araike idda mele makkalu chennage irtharalva?

ಜಲನಯನ said...
This comment has been removed by the author.
ಜಲನಯನ said...

ಬಾಲು, ಹಳ್ಳಿಯ ಮುಗ್ಧ ಮಕ್ಕಳ ಚಿತ್ರ ಮತ್ತು ವಿವರಣೆ ಚೆನ್ನಾಗಿದೆ...ನಿಮ್ಮ ಚಿತ್ರ ಬಳಸಿ ಕವನ ರಚಿಸಲು ಅನುಮತಿಯೇ..? ನನ್ನ ಮಿಂಚೆಗೆ ನಿಮ್ಮ ಸಮ್ಮತಿ ತಿಳಿಸಿ..azadis@hotmail.com.

balasubramanya said...

ನನ್ನ ಚತ್ರಗಳನ್ನು ಬಳಸಿ ಕವಿತೆ ರಚಿಸಲು ಜಲ ನಯನ ರವರಿಗೆ ಅನುಮತಿ ನೀಡಿದ್ದೇನೆ.ಕವಿತೆ ಬರೆಯುವವರು ಕವಿತೆ ಗಳಿಗಾಗಿ ಮೀಸಲಿರುವ ನನ್ನ ಬ್ಲಾಗ್ ಮನದ ಮಂಥನ ದಲ್ಲಿ ಬರೆಯಬಹುದು.ಮೆಚ್ಚಿಕೊಂಡು ಸಂತೋಷ ಪಟ್ಟ ಎಲ್ಲರಿಗೂ ಬಿಳಿಗಿರಿಯ ಬನದ ಹಾಗು ಅಲ್ಲಿನ ಜೀವಿಗಳ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ.