Wednesday, January 13, 2010

ಬಿಳಿಗಿರಿಯ ಬನದಲ್ಲಿ ,ದೊಡ್ಡ ಸಂಪಿಗೆ ಮರದ ಸನಿಹದಲ್ಲಿ !!!

ಬಿಳಿಗಿರಿಯ ಬನದಲ್ಲಿ ನಮ್ಮ ಕಲ್ಪನೆಗೆ ನಿಲುಕದ ಎಷ್ಟೋ ಕೌತುಕಗಳು ಅಡಗಿವೆ.!! ಅಂತ ಒಂದು ಕೌತುಕದ ಬಗ್ಗೆ ತಿಳಿಯೋಣ ಬನ್ನಿ.ಬಿಳಿಗಿರಿ ರಂಗನ ಬೆಟ್ಟ ಶ್ರೇಣಿಯ ಕಾಡುಗಳು ದಟ್ಟವಾಗಿದ್ದು ವನ್ಯಜೀವಿಗಳಿಂದ ತುಂಬಿದೆ.ಇಂತಹ ಒಂದು ದಟ್ಟ ಕಾನನದ ಮಧ್ಯೆ ಸುಮಾರು ೨೦೦೦ ವರ್ಷ!!![ಅರಣ್ಯ ಇಲಾಖೆಯ ಮಾಹಿತಿಯಂತೆ}ಗಳಿಂದ  ಭಾರ್ಗವಿ ನದಿ [ ಈ ಸಣ್ಣ ನದಿ ಕಾವೇರಿಯ ಉಪನದಿ!! ಬಿಳಿಗಿರಿಯ ಬನದ  ಹಲವಾರು ಸಣ್ಣ ಜರಿಗಳು ಸೇರಿ ಆಗಿರುವ   ನದಿ!ಇದು ಕಾವೇರಿ ನದಿಯ ಉಪನದಿಯೂ ಹೌದು ,] ತೀರದಲ್ಲಿ ಸಂಪಿಗೆ ಸುವಾಸನೆ ಬೀರುತ್ತಿದೆ.ದೊಡ್ಡ ಸಂಪಿಗೆ ಮರದ ವಿಶೇಷ ವೆಂದರೆ ಒಂದೆಮರದಲ್ಲಿ ಕೆಂಪು ಹಾಗು ಹಳದಿ ಬಣ್ಣದ ಹೂ ಗಳನ್ನ ಬೆಳಸುವುದು!!ಈ ಮರದ ಸನಿಹ ಹರಿವ ನದಿ ಜಮದಗ್ನಿ ಮಹರ್ಷಿಯ ಪತ್ನಿ ರೇಣುಕ ದೇವಿಯ ಅವತಾರವೆಂದೂ,ಈ ಪ್ರದೇಶದಲ್ಲೇ ವಾಸಿಸುತ್ತಿದ್ದರೆಂದೂ, ಪ್ರತೀತಿ [ಇದು ಕರ್ನಾಟಕ ಗೆಜೆತೀರ್ನಲ್ಲಿ ದಾಖಲಾಗಿದೆ]ದೊಡ್ಡ ಸಂಪಿಗೆ ಮರದ  ಸುತ್ತ ಲಿಂಗ ಗಳೆಂದು ಪೂಜಿಸುವ ಸುಮಾರು ಒಂದು ನೂರಕ್ಕೂ ಹೆಚ್ಚಿನ ಶಿಲೆಗಳಿದ್ದು ,ಮರದ ಸುತ್ತಳತೆ ೨೦ ಮೀಟರ್ ಇರುತ್ತದೆ!!! ಮರದ ಎತ್ತರ ೧೩೦ ಅಡಿ ಇದ್ದು ಗಗನ ಚುಂಬಿಯಾಗಿದೆ!!ಇಲ್ಲಿಗೆ ತೆರಳಲು ಅರಣ್ಯ ಇಲಾಖೆಯ ಅನುಮತಿ ಬೇಕಿದ್ದು, ಕೆ .ಗುಡಿ ಇಂದ ಬಿ.ಆರ್. ಹಿಲ್ಲ್ಸ್ ದಾರಿಯ ಮಧ್ಯೆ ಸಿಗುವ ಅರಣ್ಯ ಇಲಾಖೆಯ ಗೇಂ ರೂಟ್ ನಲ್ಲಿ ಸಾಗಬೇಕು.ದಟ್ಟ ಕಾಡಿನಲ್ಲಿನ ಪ್ರದೇಶ ವಾದ ಕಾರಣ ಆನೆ, ಕಾಟಿ, ಕಾಡು ಹಂದಿ, ,ಹುಲಿ,ಸಾರಂಗ, ಮುಂತಾದ ಜೀವಿಗಳು ಅದೃಷ್ಟವಿದ್ದರೆ ಸಿಗಬಹುದು !!!. ನೆನಪಿಡಿ ಇದು  ಕಾಡುಗಳ್ಳ ವೀರಪ್ಪನ್  ಓಡಾಡಿದ ಪ್ರದೇಶ !!!.ಇಲ್ಲಿನ ಗಾಳಿ ,ನೀರು ಸಂಪೂರ್ಣ ಶುದ್ದ ವಾಗಿದ್ದು ಮನಸ್ಸಿಗೆ ಉಲ್ಲಾಸ ನೀಡುತ್ತದೆ.ಅವಕಾಶ ಸಿಕ್ಕರೆ ಅರಣ್ಯ ಇಲಾಖೆಯ ಅನುಮತಿ ಪಡೆದು ಹೋಗಿಬನ್ನಿ.

2 comments:

shivu.k said...

ಉತ್ತಮ ಮಾಹಿತಿ ನೀಡಿದ್ದೀರಿ...ಧನ್ಯವಾದಗಳು.

ಮತ್ತೆ ಅದೇ ರೀತಿ ನಾವು ಮುನ್ನಾರಿಗೆ ಹೋಗಿದ್ದ ಪ್ರವಾಸ ಕಥನ ನನ್ನ ಬ್ಲಾಗಿನಲ್ಲಿ ಬರೆದಿದ್ದೇನೆ. ಬಿಡುವಾದಾಗ ಓದಿ ಇಷ್ಟವಾದರೆ ಕಾಮೆಂಟಿಸಿ.

Manju M Doddamani said...

ಬಿಳಿಗಿರಿ ಬನ ಅಂತ ಕೇಳಿದ್ದೆ ಆದ್ರೆ ದೊಡ್ಡ ಸಂಪಿಗೆ ಬಗ್ಗೆ ಈಗ ಗೊತ್ತಾಯ್ತು ಒನ್ ಟೈಮ್ ನಾನು ನೋಡ್ಕೊಂಡು ಬರ್ತೀನಿ ಧನ್ಯವಾದಗಳು


http://doddamanimanju.blogspot.com/

http://manjukaraguvamunna.blogspot.com/