Sunday, January 17, 2010

ಬಿಳಿಗಿರಿಯ ಬನದಲ್ಲಿ ..೦೪ ಹೊನ್ನ ಮೇಟಿ ಬೆಟ್ಟದ ಮೇಲೆ ಸಂತಸದ ಸರಮಾಲೆ!!

ಬಿಳಿಗಿರಿಯ ಬನದ ನಮ್ಮ ಓಡಾಟ ಮುಂದುವರೆದು ಮರುದಿನಕ್ಕೆ ಕಾಲಿಟ್ಟಿತು.ಮುಂಜಾನೆ ಚುಮು ಚುಮು ಚಳಿಯಲ್ಲಿ ಅಲ್ಲೇ ಹಾಕಿದ್ದ ಕ್ಯಾಂಪಿನ ಬೆಂಕಿಯಲ್ಲಿ [ರಾತ್ರಿವೇಳೆ ಕಾಡು ಪ್ರಾಣಿಗಳಿಂದ ರಕ್ಷಿಸಿ ಕೊಳ್ಳಲು ಹಾಕಿರುತ್ತಾರೆ] ಬೆಂಕಿ ಕಾಯುತ್ತಾ ಬಿಸಿ,ಬಿಸಿ, ಕಾಫಿ ಹೀರುತ್ತಾ ಹೊನ್ನ ಮೇಟಿ ಕಲ್ಲು ಬೆಟ್ಟಕ್ಕೆ ಹೋಗಲು ತೀರ್ಮಾನಿಸಿದೆವು.ಬುರುಡೆ ಕ್ಯಾಂಪಿನಿಂದ ಹೊಂನಮೆತಿಕಲ್ಲು ಬೆಟ್ಟಕ್ಕೆ ಸುಮಾರು ೨೦.ಕಿ.ಮೀ ಹಾದಿ. ಚಳಿಗೆ ಸ್ನಾನದ ಯೋಚನೆ ತೊರೆದು ಪಯಣ ಆರಂಭಿಸಿದೆವು. ಹಾದಿಯ ಎರಡೂ ಕಡೆ ಪ್ರಕೃತಿ ಮಾತೆ ಚೆಲುವಿನ ಚಿತ್ತಾರ ಬಿಡಿಸಿ ಮನಸೂರೆ ಗೊಂಡಿದ್ದಳು. ನಮ್ಮ ಕ್ಯಾಮರ ಗಳಿಗಂತೂ ಬಿಡುವಿಲ್ಲದ ಕೆಲಸಾ!!,ದಾರಿ ಯುದ್ದಕ್ಕೂ ಕಿತ್ತಳೆ,ಕಾಫಿಯ ಸವಾಸನೆ ಸೂಸುವ ಮರ ಗಿಡಗಳು., ಹಾಗೆ ಚಲನೆಗೆ ಸವಾಲಾದ ಕಡಿದಾದ ಹಾದಿ.ಎದೆ ನಡುಗಿಸುವ ಆಳವಾದ ಕಣಿವೆ ದಾಟಿ ಪಯಣ ಸಾಗಿತ್ತು.ಹೊನ್ನ ಮೆತಿಕಲ್ಲು ನಮ್ಮನ್ನು ಕೈ ಬೀಸಿ ಕರೆದಿತ್ತು. ಹೊನ್ನ ಮೇಟಿ ಕಲ್ಲು ಸಮುದ್ರ ಮತ್ತ ದಿಂದ ೯೦೦೦ ಅಡಿ ಎತ್ತರವಾಗಿದ್ದು !!ಬಿಳಿಗಿರಿ ಶ್ರೇಣಿಯ ಬೆಟ್ಟಗಳಲ್ಲಿ   ಎತ್ತರವಾದ ಬೆಟ್ಟವೆಂದು ತಿಳಿದು ಬಂತು.ಹೊನ್ನ ಮೇಟಿ ಕಲ್ಲು ಹತ್ತಿದ ನಮಗೆ ಶುದ್ದ ತಂಗಾಳಿ ಚಾಮರ ಬೀಸಿ ಸ್ವಾಗತ ಕೋರಿದ ಅನುಭವ.ಹಸಿರ ಹೊದ್ದ ಬಿಳಿಗಿರಿಯ ಬನ ಸಿಂಗಾರ ಮಾಡಿ ಕೊಂದು ನಲಿದಿತ್ತು.ಅಲ್ಲೇ ಇದ್ದ anti poaching camp ನೋಡಿದಾಗ  ನಮಗೆ ಆಶ್ಚರ್ಯ ವಾಯಿತು ಇಲ್ಲಿಯಾವ ಪ್ರಾಣಿ ಇಷ್ಟು ಎತ್ತರ ಹತ್ತಿ ಬರುತ್ತೆ ಅಂತ ಮನೆ ಕಟ್ಟಿದ್ದಾರೆ ಅಂತ!! ಅದಕ್ಕೆ ಉತ್ತರವಾಗಿ ಅಲ್ಲೇ ಸನಿಹದಲ್ಲಿದ್ದ ಒಂದು ಬೆಟ್ಟದ ಮೇಲೆ ಸಾರಂಗ ನಿಂತು ನಮ್ಮ ಪ್ರಶ್ನೆಗೆ ಉತ್ತರ ನೀಡಿ ಕ್ಯಾಮರದಲ್ಲಿ ಸೆರೆಯಾಯಿತು .ಅಲ್ಲೇ ಇದ್ದ ಒಂದು ಹಾಸು ಬಂದೆ ಹಾಗೂ ಇನ್ನೊಂದು ಎತ್ತರದ, ಇಳಿಜಾರಿಗೆ ವಾಲಿದ ಕಲ್ಲುಗಳು ಮನಸೆಳೆದು ನಮ್ಮಲ್ಲಿದ್ದ ಹುಡುಗುತನ ಜಾಗೃತವಾಗಿ ನಾವೇ ಹೀರೋಗಳು ಅಂತ ಅನ್ಕೊಂಡು ವಿವಿಧ ಬಗೆಯಲ್ಲಿ ನೆಗೆದಾಡಿ ಕೈ  ಕಾಲು ಗಳಿಗೆ ಕಸರತ್ತು ನೀಡಿದೆವು.ಹಾಗೆ ಸಾಗಿದ ನಮ್ಮ ತುಂಟಾಟ ಬಹಳ ಹೊತ್ತು ನಡೆಯದೆಹೊಟ್ಟೆ ಅಲಾರಂ ನೀಡಿದಾಗ ಮದ್ಯಾಹ್ನ ೨ ಘಂಟೆ ಆಗಲೇ ನಮಗೆ ತಿಳಿದದ್ದು ನಾವು ಬೆಳಿಗ್ಗೆ ತಿಂಡಿ ತಿಂದೆ ಇಲ್ಲಾ ಅಂತ !!ಹಸಿವ ಮರೆಸಿ ಚೆಲುವ ಸುರಿಸಿ  ಆನಂದ ನೆಡಿದ ಆ ಪ್ರಕೃತಿ ಮಾತೆಗೆ ಎಷ್ಟು ನಮಿಸಿದರೂ ಸಾಲದು.

No comments: