Thursday, January 14, 2010

ಬಿಳಿಗಿರಿಯ ಬನದಲ್ಲಿ ..02 ಗುಂದಾಳು ಅಣೆಕಟ್ಟಿನಿಂದ ಬುರುಡೆ ಕ್ಯಾಂಪಿನ ಕಾನನದ ಹಾದಿಯಲ್ಲಿ !!!

೨೦೦೯ ರ ಡಿಸೆಂಬರ್ ೨೫ ರಿಂದ ೨೮ ರವರೆಗೆ ಎಲ್ಲಾದರೂ ಪ್ರವಾಸ ಹೋಗುವ ಪ್ಲಾನ್ ನಡೆದಿತ್ತು!ಹೋಗೋದು ಎಲ್ಲಿಗೆ ?ರಜದಲ್ಲಿ ಎಲ್ಲಿ ಹೋದ್ರೂ ಜನಗಳ ಸಂತೆ !! ಜನಗಳ ಧಾಳಿ ಇಂದ ಪ್ರವಾಸಿ ತಾಣಗಳಲ್ಲಿ ಊಟ, ತಿಂಡಿ, ವಸತಿ ಎಲ್ಲಕ್ಕೂ ಪರದಾಟ ವಾಗಿ ಪ್ರವಾಸ ಪ್ರಯಾಸ ವಾಗಿ ನಿಜವಾದ ಉತ್ಸಾಹ ಇಳಿದು ಸಂಕಟ ಪಡುವ ಕ್ರಮ ಬೇಡವೆಂದು ತೀರ್ಮಾನಿಸಿ ಕಾಡಿಗೆ ಹೋಗಲು ತಯಾರಿ ನಡೆಯಿತು.ಸ್ನೇಹಿತರನ್ನು ಗೋಳಾಡಿಸಿ ಮಾಹಿತಿ ಪಡೆದು ಅರಣ್ಯಾಧಿಕಾರಿಗಳ ಅನುಮತಿ ಪಡೆದು ೨೫ ನೆ ತಾರೀಖು ಟಾ.ಟಾ. ಸಫಾರಿ ಕಾರು ವೇಣು ಚಾಲನೆಯಲ್ಲಿ ನಮ್ಮನ್ನು [ನಾನು,ಶ್ರೀಧರ್,ವೇಣು,ನಾರಾಯಣ ರಾವ್,ರಘು,ದೀಪಕ್ ]ಹೊತ್ತು ಸಾಗಿತು.ಯಾವ ಜಾಗ ವೆಂದು ತೀರ್ಮಾನವಾಗದ ಕಾರಣ ನಮ್ಮನ್ನು ಅಂತಿಮವಾಗಿ ಗುಂಡಾಲ್ ಅಣೆಕಟ್ಟೆ ಮುಖಾಂತರ ಬುರುಡೆ ಕ್ಯಾಂಪಿಗೆ ಕಳುಹಿಸಿ ಕೊಡಲಾಯಿತು.[ನಮ್ಮನ್ನು ಆತ್ಮೀಯವಾಗಿ ಕಂಡ ಅರಣ್ಯಾಧಿಕಾರಿ ಶ್ರೀ ಬೋರಯ್ಯ ರವರನ್ನು ನೆನೆಯದಿದ್ದರೆ ತಪ್ಪಾಗುತ್ತೆ!!ಅವರ ಸಹಕಾರ ತುಂಬಾ ದೊಡ್ಡದು.]ಗುಂಡಾಲ್ ಅಣೆಕಟ್ಟೆ ತಲುಪಿದೆವು[ಚಿತ್ರ 02,ಹಾಗು 03 ಗುಂಡಾಲ್ ಡ್ಯಾಮಿನ ನೋಟ]ಗುಂದಾಲ್ ದ್ಯಾಮಿನಿಂದ ಬುರುಡೆ ಕ್ಯಾಂಪಿಗೆ ಸುಮಾರು ೨೩ ಕಿ.ಮೀ  ದೂರದ ದಟ್ಟ ಕಾನನದ ಹಾದಿ !! ಒಂದು ಬದಿ ಆಳವಾದ ಕಣಿವೆ ಇನ್ನೊದು ಬದಿ ಕಾಡಿನ ಬೆಟ್ಟದ ಗೋಡೆ ಮಧ್ಯೆ ಸಾಗಿದ ನಮ್ಮ ಕಾರು ಸುಮಾರು ೧೦ ಕಿ.ಮೀ/ಘಂಟೆಗೆ  ವೇಗದಿಂದ ತೆವಳುತ್ತಿತ್ತು !! ಮೊದಲ ಸ್ವಾಗತ ನೀಡಿದ ಸಾರಂಗಗಗಳ  ಜೋಡಿ ಮೊಡಿಮಾಡಿತ್ತು!!![ಚಿತ್ರ 04]ಹಾಗೆ ತೆವಳಿದ ನಾವು ಕಾಡಿನೊಳಗೆ ಲೀನವಾಗಿ ಸಾಗಿದೆವುಮುಂದೆ ಲಾಂಗೂರ್ ಕೋತಿಯೊಂದು ಮರದಿಂದ ಇನ್ನೊಂದು ಮರಕ್ಕೆ ಹಾರುವ ಸಾಹಸ ಕಂಡು ವಿಸ್ಮಯ ವಾಯಿತು [ಚಿತ್ರ 01].ದಾರಿಯಲ್ಲಿ  ಕಡಿದಾದ   ಬಂಡೆಗಳು  ನೀರಿನ  ಜಾರಿಯಲ್ಲಿ  ಅಡಗಿ ವಾಹನಗಳು ತೊಂದರೆಗೆ ಈಡಾಗುವ ಸಂಭವ ವಿದ್ದು[ಚಿತ್ರ ೦೫ ,೦೬]ಆತಂಕದಲ್ಲೇ ಸಾಗಿ ಗುರಿ ಮುಟ್ಟಿದೆವು. ಕಾನನದ ಹಾದಿಯ ಪಯಣ ನಮ್ಮನ್ನು ಮುಧಗೊಳಿಸಿ  ಮೋಡಿ ಮಾಡಿತ್ತು !!!


ಕಾನನದಲ್ಲಿ   ಸಾಗಿದ  ನಮಗೆ  ಸಿಕ್ಕ ದಾರಿ !!!


No comments: