Monday, January 18, 2010

ಚಾಮಯ್ಯ ಮೇಷ್ಟ್ರು ರಾಮಾಚಾರಿ ಹಿಂಬಾಲಿಸಿಕೊಂಡು ಹೊರಟೆ ಹೋದರು!!!

ಕನ್ನಡ ಚಿತ್ರ ರಂಗದ ಶಿಸ್ತಿನ ನಟ ,ಅಜಾತ ಶತ್ರು ,ಸಹೃದಯಿ ಜೀವಿ ಶ್ರೀ ಕೆ.ಎಸ. ಅಶ್ವಥ್  ತಮ್ಮ ೮೫ ನೆ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.ರಾಮಾಚಾರಿ ಹಾಗೂ ಚಾಮಯ್ಯ ಮೇಷ್ಟ್ರು ಇಬ್ಬರು ಮೈಸೂರಿನಲ್ಲೇ ಅಂತಿಮ ಯಾತ್ರೆ ಮುಗಿಸಿದ್ದು ಕಾಕತಾಳಿಯ !! ಯಾವ ನಟನೆ ಆಗಲಿ ಇವರ ಶಿಸ್ತು ಬೆಳೆಸಿಕೊಂಡರೆ ,ಆದರ್ಶ ಬೆಳೆಸಿಕೊಂಡರೆ  ಉತ್ತಮಮನುಷ್ಯರಾಗ ಬಲ್ಲರು ಎಂಬುದಕ್ಕೆ ಇವರ ಜೀವನವೇ ಸಾಕ್ಷಿ .ಕನ್ನಡ ಭಾಷೆಯ ಮೇಲಿನ ಹಿಡಿತ,ಉಚ್ಚಾರಣೆ, ಪಾತ್ರ ನಿರ್ವಹಣೆಯಲ್ಲಿ ಇವರ ತಲ್ಲೀನತೆ,ವ್ಯಕ್ತ ಪಡಿಸುವ ಭಾವನೆಗಳು, ಸಮಯ ಪಾಲನೆ, ನಟನಾ ವೃತ್ತಿಯಲ್ಲಿ,ವಯಕ್ತಿಕ ಜೀವನದಲ್ಲಿನ ಶಿಸ್ತು, ಹಲವರಿಗೆ ದಾರಿ ದೀಪ ವಾಗಿ,ಅನುಕರಣೀಯವಾಗಿ, ಉಳಿಯುತ್ತದೆ. ಕನ್ನಡ ತಾಯಿಯ ಕಿರೀಟ ದಿಂದ ಮತ್ತೊಂದು ರತ್ನ ಕೆಳಗೆ ಬಿದ್ದಿದೆ.ನನ್ನ ಹೃದಯ ತುಂಬಿದ ಕಂಬನಿಯ ಅಂತಿಮ ನಮನ ಈ ಮೇರು ನಟ ಅಶ್ವಥ್ ರವರಿಗೆ.ನಮಸ್ಕಾರ ಮೇಷ್ಟ್ರೇ ಹೋಗಿಬನ್ನಿ!!!

4 comments:

ಸಾಗರದಾಚೆಯ ಇಂಚರ said...

ಆ ಮೇರು ನಟನಿಗೆ ನಮ್ಮ ನುಡಿ ನಮನ

balasubramanya said...

ಗುರುಮೂರ್ತಿ ಸರ್ ತುಂಬಾ ಧನ್ಯವಾದಗಳು. ನೀವು ಸ್ವೀಡನ್ನಿನಲ್ಲಿ ಇದ್ದೀರಿ ,ದಯಮಾಡಿ ಅಲ್ಲಿನ ಪಾಪ್ ಸಂಗೀತದ ಐತಿಹಾಸಿಕ abba ಗ್ರೂಪ್ ಬಗ್ಗೆ ಬರೆಯಿರಿ ,ಆ ಹಾಡುಗಾರರ angel eye, eagle song, money money, honey honey, ಇನ್ನೂಮುಂತಾದ ಸಾವಿರಾರು ಹಾಡುಗಳಿಂದ ವಿಶ್ವಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಈ ಗಾಯಕರು ಸ್ವೀಡನ್ ದೇಶದವರು ಇವರಬಗ್ಗೆ ಹಾಗು ಇವರ ಹಾಡಿನ ನಿಮ್ಮಿಂದ ಒಂದು ಮಾಲಿಕೆ ಹೊಮ್ಮಿ ಬರಲಿ.

ಗೌತಮ್ ಹೆಗಡೆ said...

nannadoo ondu namana aa mahan natanige..

shivu.k said...

ಆಂಥ ಮಹಾನ್ ನಟನಿಗೆ ನನ್ನ ಸಾವಿರ ನಮನಗಳು ಸರ್...