Thursday, January 21, 2010

ಬಿಳಿಗಿರಿಯ ಬನದಲ್ಲಿ ...೦೭ ಕಾಡು ಕೋಣದ ಮುಂದೆ ಕ್ಯಾಮರಾ ರೀ !!
  1. ಯಾರ್ರಿ  ನೀವು ?ಹೌದು ನಮ್ಮ ಕೊನೆಯ ದಿನದ ಸುತ್ತಾಟ ನಡೆದಿತ್ತು .ಆದರೂ ಇನ್ನೊಂದುಚೂರು  ಕಾಡು ಸುತ್ತೋ ಚಪಲ/ದುರಾಸೆ ನಮಗೆ.ಅಲ್ಲೇ ಇದ್ದ ಇಲಾಖಾ ಸಿಬ್ಬಂದಿ ಯವರನ್ನು ವಿಶ್ವಾಸದಿಂದ ಪೀಡಿಸಿ ಕಾಡು ಸುತ್ತಲು ಹೊರಟೆ ಬಿಟ್ವಿ  .ಬುರುಡೆ ಕ್ಯಾಂಪಿನಿಂದ ಸುಮಾರು ೧೦ ಕಿ.ಮೀಕ್ರಮಿಸಿದ ನಮಗೆ ಬುರುಡೆ -ಕೆ.ಗುಡಿ ಹಾದಿ ಮದ್ಯೆ ಒಂದು ಸುಂದರ ನೀರಿನ ಕಟ್ಟೆ ಸಿಕ್ಕಿತು .ಪ್ರಶಾಂತ ವಾದ ಆ ಪರಿಸರದಲ್ಲಿ ಸಂಜೆವೇಳೆ ಯಾದ ಕಾರಣ ನೀರು ಕುಡಿಯಲು ಯಾವುದಾದರೂ ಪ್ರಾಣಿ ಬರುತ್ತದೆಂಬ ನಮ್ಮ ನೀರಿಕ್ಷೆ ಸುಳ್ಳಾಗಲಿಲ್ಲ .ಅಲ್ಲಿ ಒಂದು ಕಾಡು ಕೋಣ ಆರಾಮವಾಗಿ ಕತ್ತೆಯ ಆಚೆ ದಡದಲ್ಲಿ ಮೇಯುತ್ತಿತ್ತು .ನಮಗೋ ಖುಷಿಯೋ ಖುಷಿ !!,ನಿಶ್ಯಬ್ಧವಾಗಿ  ನಮ್ಮ ವಾಹನದಿಂದ ಇಳಿದು ನಮ್ಮ ಕ್ಯಾಮರಾಗಳನ್ನು ಸಿದ್ದ ಮಾಡಿಕೊಂಡೆವು. ಹಾಗೂ ಹೀಗೂ ಫೋಟೋ ತೆಗೆಯುವ ಜಾಗ ಹುಡುಕಿ ತಯಾರಾದೆವು.ನಿಶ್ಯಬ್ದ ವಾಗಿದ್ದ ಆ ಕಾಡಿನ ಪರಿಸರದಲ್ಲಿ ಮೌನವೇ ಮಾತಾಗಿತ್ತು  ಕಾಡು ಕೋಣ ಸೆರೆ ಹಿಡಿಯಲು ನಮ್ಮ ಕ್ಯಾಮರ ಸಿದ್ದವಾಗಿ ತನ್ನ ಕಾರ್ಯ ಆರಂಭಿಸಿತ್ತು.,ಜೊತೆಗೆ ನಾವಿದ್ದ  ತಾಣದ ಸುತ್ತ ಮುತ್ತ ಇನ್ನೇನಾದರೂ ಪ್ರಾಣಿಗಳ ಸುಳಿವಿದೆಯೋ ಎಂಬ ನಮ್ಮ ಮನಸೂ ಜಾಗೃತವಾಗಿತ್ತು.ಮೈಯೆಲ್ಲಾ ಕಣ್ಣಾಗಿ ಎಚ್ಚರದಿಂದ ಕಾಡು ಕೋಣದ ಫೋಟೋ ತೆಗೆಯಲಾರಂಭಿಸಿದೆವು[ಆಗ ಕೋಣನ ಮುಂದೆ ಕಿನ್ನರಿ ಭಾರಿಸಿದಂತೆ ಎಂಬ  ಗಾದೆ ನೆನಪಿಗೆ ಬಂದದ್ದು ಆಶ್ಚರ್ಯ !]ಇಲ್ಲಿಯೂ ಸಹ ನಮ್ಮ ಚಲನ ವಲನ ಗಮನಿಸಿದ್ದು ತಾನು ನಮ್ಮನ್ನು ನಡಇಲ್ಲ ಎಂಬಂತೆ ಆ ಕೋಣ ತಾಣ ಪಾಡಿಗೆ ನಿಂತಿತ್ತು.ಈ ಕೋಣದ ಮುಂದೆ ನಮ್ಮ ಕ್ಯಾಮರ ಹಿಡಿದು ನಮಗೆ ಬೇಜಾರಾದರೂ ಕೋಣ ಕ್ಕೆ ಬೇಜಾರಾಗಿರಲಿಲ್ಲ! ಕೊನೆಗೆ ನಾವೇ ಸೋತು ವಾಪಸ್ಸು ಬಂದೆವು.ಅದಕ್ಕೆ ಹೇಳಿದ್ದೂ ಕಾಡು ಕೋಣದ ಮುಂದೆ ಕ್ಯಾಮರ ಹಿಡಿದಂತೆ ಅಂತ. ನೀವೆನಂತಿರಾ!!ಬನ್ನಿ ಕೋಣ ನೋಡಿ!!