Friday, March 5, 2010

ಚಂದದ ಅಡುಗೆ ಕಲಿಸುವ ಸುಮ್ಸ್ ಕಸಿನ್ [sum's cuisine] ನೀವು ನೋಡಿ ಕಲಿಯಿರಿ !!! ಒಂದು ಚಂದದ ಬ್ಲಾಗ್ ಸ್ವಾಮೀ!!!




ಬ್ಲಾಗ್ಸ್ಪಾಟಿನ  ಗೆಳೆಯರೇ. ಬಾಗ್ಸ್ಪಾಟಿನ ಬ್ಲಾಗುಗಳಲ್ಲಿ  ಹಲವಾರು ವಿಚಾರಗಳು  ಹರಿದು ಬರುತ್ತಿರುವ ಸಮಯದಲ್ಲಿ ,ಇಲ್ಲೊಂದು ಬ್ಲಾಗು ಅಡಿಗೆಗೆ ಮೀಸಲಾಗಿ ಉತ್ತರ ಹಾಗು ದಕ್ಷಿಣ ಭಾರತದ  ವಿವಿಧ ಬಗೆಯ ಅಡುಗೆಗಳ ಪರಿಚಯ ,ತಯಾರಿಸ್ಸುವ ವಿಧಾನ ,ಅಡಿಗೆಗೆ ಬೇಕಾಗುವ ಸಾಮಗ್ರಿಗಳ  ಮಾಹಿತಿ , ಮುಂತಾದ ಸಮಗ್ರ ವಿವರಗಳನ್ನು ನೀಡುತ್ತಾ  ತನ್ನದೇ ದಾರಿಯಲ್ಲಿ ನಡೆದು ಬರುತ್ತಿದೆ. ಮೂಲತಹ ಸಾಫ್ಟ್ ವೇರ್ ಎಂಜಿನೀರ್ ಆದ  ಸಹೋದರಿ  ಸುಮನ ದೀಪಕ್  ಅಡಿಗೆಮನೆಯಲ್ಲಿ  ಅಡಿಗೆ ಕಲೆಯ ಅನಾವರಣ ಗೊಳಿಸಿ ಪೋಷಿಸಿ  ಬ್ಲಾಗ್ ಲೋಕಕ್ಕೆ ಹಂಚುತ್ತಿದ್ದಾರೆ  ಅದಕ್ಕೆ ಪೂರಕವಾಗಿ  ಅಡಿಗೆಯ ರುಚಿನೋಡಿ ,ಅಡಿಗೆ ತಯಾರಿಯ ವಿವಿಧ ಹಂತದ  ಛಾಯ ಚಿತ್ರ ತೆಗೆದು ಹೆಂಡತಿಯ ಮೆಚ್ಚಿನ ಗಂಡನಾಗಿ ಬ್ಲಾಗಿನಲ್ಲಿ ಪ್ರಕಟಿಸಲು  ಸಹಕರಿಸುತ್ತಿರುವ ಗೆಳೆಯ ದೀಪಕ್ ವಸ್ತಾರೆ  ಸಹ ಅಭಿನಂದನಾರ್ಹರು .ಇವರೂ ಸಹ ಸಾಫ್ಟ್ ವೇರ್  ಇಂಜಿನಿಯರ್  ಆಗಿದ್ದು  ಟೆಕ್ಕಿಗಳ ಲೋಕದಲ್ಲಿ ಬೇರೆಯದೇ  ಸಾಧನೆ ತೋರುತ್ತಿದ್ದಾರೆ. ಕೆಲಸದ ಒತ್ತಡದ ನಡುವೆಯೂ ಅಡಿಗೆಯವರನ್ನು ನೇಮಿಸದೆ ತಮ್ಮ ಮನೆಯ ಅಡಿಗೆಯ ಕಾರ್ಯ ತಾವೇ ಮಾಡಿಕೊಂಡು ಸಂತಸದ ಜೀವನ ನಡೆಸುತ್ತಿರುವ ಇವರು ಮೇಡ್ ಫಾರ್  ಈಚ್ ಅದರ್ಸ್  ಅನ್ನಲು ಅಡ್ಡಿಯಿಲ್ಲ. ಒಮ್ಮೆ ಇವರ ಬ್ಲಾಗನ್ನು ಹೊಕ್ಕಿನೋಡಿ  ನೀವು ಅಡಿಗೆ ತಯಾರಿಸಿ ರುಚಿ ನೋಡಿ ಆನಂದಿಸಿ.ನಿಮಗಾಗಿ ಕೆಲವು  ಅಡಿಗೆ ಚಿತ್ರಗಳು !! ಇವರ  ಬಾಗ್ ಸ್ಪಾಟಿನ   ಸುಮ್ಸ್  ಕಸಿನ್              ತಾಣಕ್ಕೆ ಭೇಟಿಕೊಡಿ  ನಿಮ್ಮ ಬಾಯಲ್ಲಿ ನೀರೂರಿಸದಿದ್ದರೆ  ಕೇಳಿ !!!

5 comments:

ಸೀತಾರಾಮ. ಕೆ. / SITARAM.K said...

varieties are there Balu sir. I visit often there

ಸೀತಾರಾಮ. ಕೆ. / SITARAM.K said...

Link :http://sumscuisine.blogspot.com/?spref=gr

ಸುಬ್ರಮಣ್ಯ said...

ಬಾಲು ಅಣ್ಣ
ಅದೇ ರೀತಿ ಇನ್ನೊಂದು ಬ್ಲಾಗ್-
http://ruchiruchiadige.blogspot.com/

shivu.k said...

ಬಾಲು ಸರ್,

ಅವರ ಬ್ಲಾಗು ಚೆನ್ನಾಗಿದೆ. ನಮ್ಮ ಕನ್ನಡದಲ್ಲೂ ವನಿತಾರವರ ನನ್ನ ಪ್ರಪಂಚದಲ್ಲಿ ಅವರು ಆಗಾಗ ಹೊಸ ರುಚಿಗಳನ್ನು ಬ್ಲಾಗಿಗೇರಿಸುತ್ತಾರೆ ನೋಡಿ.ಚೆನ್ನಾಗಿರುತ್ತದೆ.

Sum said...

Ohhh.... nanna blog bagge sundaravagi barediralu tumbaa dhanyavadagalu!
:)