Friday, March 12, 2010

ಕಮಲನಾಥ್ ಪಟೇಲ್ ಕಾಲಿಲ್ಲದ ಡಾನ್ಸ್ ಪಟು.!!ಸಾಧಿಸುವ ಛಲ ವಿರಲು ಅಂಗವಿಕಲತೆ ಅಡ್ಡಿ ಬರಲಿಲ್ಲ ಇವರಿಗೆ!!!

ಕೈ ಕಾಲು ಎಲ್ಲ ಸರಿ ಯಿದ್ದರೂ  ಸೋಮಾರಿಗಳಾಗಿ , ಏನೂ ಸಾಧಿಸದೆ  ಯಾರಿಗೂ ಮಾಧರಿ ಯಾಗದ  ನನ್ನಂತವರ  ನಡುವೆ ಇವರೂ ಮಹಾಪುರುಷರಾದಾಗ  ಆಶ್ಚರ್ಯ ದಿಂದ  ನೋಡಿ ನಾಚಬೇಕಾದ  ಸರದಿ ನಮ್ಮದಾಗುತ್ತದೆ.ಹೌದು ಇಂತಹ ಸಾಲಿನಲ್ಲಿ ಇತ್ತೀಚಿಗೆ ನಿಂತ ವ್ಯಕ್ತಿ ಇವರೇ ಶ್ರೀ ಕಮಲನಾಥ್ ಪಟೇಲ್.ಗುಜರಾತ್ ರಾಜ್ಯದ ಬರೋದ ಇವರು ಕಾಲಿಲ್ಲದ ನೃತ್ಯಪಟು.ಐದು ವರ್ಷದ  ಬಾಲ್ಯ ದಲ್ಲಿ ಅನಾರೋಗ್ಯದ ನಿಮಿತ್ತ ಸ್ಥಳೀಯ  ವೈದ್ಯರು  ನೀಡಿದ ಚುಚ್ಚುಮದ್ದು ಪಡೆದು ಮನೆಗೆ ಬಂದ ಸ್ವಲ್ಪ ಕಾಲಕ್ಕೆ ಎರಡೂ ಕಾಲುಗಳ  ಸ್ವಾಧೀನ ತಪ್ಪಿ ವಿಕಲತೆ ಹೊಂದಿದರು.ಬೆಂಗಳೂರೂ ಸೇರಿದಂತೆ ದೇಶವೆಲ್ಲ ಅಲೆದರೂ ಗುಣ ಕಾಣದೆ ಕಡೆಗೆ ಅಂಗವಿಕಲ ಕಾಲುಗಳ ಜೊತೆ ರಾಜಿಯಾಗಿ  ಸಾಧನೆಯ ಕಿಚ್ಚು ಹತ್ತಿಸಿಕೊಂಡರು.ಜೀವನದಲ್ಲಿ ಏನನ್ನಾದರೂ  ಸಾಧಿಸಿಯೇ ತೀರಬೇಕೆಂಬ ಛಲದಲ್ಲಿ ನಯೂತ್ಯಾ ಕಲಿಯ ತೊಡಗಿ  ಪ್ರಾವೀಣ್ಯತೆ ಪಡೆದು ದೇಶಾದ್ಯಂತ ಸುಮಾರು ಒಂದು ಸಾವಿರಕ್ಕೂ ಹೆಚ್ಚಿನ ಡಾನ್ಸ್ ಕಾರ್ಯಕ್ರಮ ನೀಡಿ ಸಾಧನೆಯ ದಾರಿಯಲ್ಲಿ ಮುನ್ನಡೆದರು.ಇವರ ಸಾಧನೆ ಜಗ ಜಾಹೀರಾಗಿದ್ದು  ಹಿಂದಿಯ ಜೇ ಟಿ.ವಿ ಯಾ ಡಾನ್ಸ್ ಇಂಡಿಯಾ ಡಾನ್ಸ್  ಕಾರ್ಯಕ್ರಮದಲ್ಲಿ  ಇವರ ಹಂ ಹೇ ಹಿಂದುಸ್ತಾನಿ ಹಾಡಿನ ಡಾನ್ಸ್ ನೋಡಿ ಬೆರಗಾಗಿ  ಹೀಗೂ ನರ್ತಿಸ ಬಹುದೇ ಅಂತ ದೇಶಾದ್ಯಂತ ಜನ ವಿಸ್ಮಯ ಪಟ್ಟರು.ಇವರ ಸಾಧನೆ ಬಗ್ಗೆ ಈಗ  ಮಾನವ ಸಂಪನ್ಮೂಲದ ,ತರಬೇತಿ ನೀಡುವ ಹಲವಾರು ಸಂಸ್ಥೆ ಗಳು  ಉದಾಹರಿಸಿ ಇವರ ಡಾನ್ಸ್ ವೀಡಿಯೊ ವನ್ನು ಪಟ್ಯ ಕ್ರಮದಲ್ಲಿ ಅಳವಡಿಸಿಕೊಂಡಿವೆ.ಇಂತಹ ಸಾಧನೆಗೈದ ಈ ಧೀರ ಭಾರತೀಯ ಕಮಲ್ ನಾಥ್ ಪಟೇಲ್ ಗೆ ನೀವು ಜೈ ಹೋ  ಅನ್ನಿ.http://www.youtube.com/watch?v=w1giVyFW7Kk ನ್ನು ಕ್ಲಿಕ್ಕಿಸಿ   ಇವರ ವೀಡಿಯೊ ನೋಡಿ  ಆಶ್ಚರ್ಯ ಪಡಿ . ಇವರ ಸಾಧನೆ ನಮಗೆ ಸ್ಪೂರ್ತಿಯ ಸೆಲೆಯಾಗಲಿ.ಮೇಲಿನ ಪುಟದಲ್ಲಿ ಕಮಲನಾಥ್ ಪಟೇಲ್ ಡಾನ್ಸ್ ನ ಮೋಡಿ ನೋಡಿ ಆನಂದಿಸಿ.ಹೆಮ್ಮೆಯ ಭಾರತಿಯನಿಗೆ ಸಲಾಂ ಮಾಡೋಣ !!1

No comments: