Monday, March 1, 2010

ಈ ಮೇಲ್ ನಲ್ಲಿ ಟೋಪಿ ಹಾಕುವ ಖದೀಮರು.!!! ಎಚ್ಚರ ಹಳ್ಳಕ್ಕೆ ಬಿದ್ದೀರಿ !!

೨೦೧೦ ರ ಫೆಬ್ರವರಿ ೨೭ ರಂದು ನನಗೆ ಒಂದು ಮೇಲ್ ಬಂತು .ಪಕ್ಕದಲ್ಲಿ ಇದ್ದ ನನ್ನ ಹೆಂಡತಿ ಖುಷಿಯಿಂದ ಅಭಿನಂಧನೆ ಹೇಳಿ ಸಂಭ್ರಮಿಸಲು  ಶುರು ಮಾಡಿದಳು.ವಿಷಯ  ಏನೂ ಅಂತ ಕೇಳ್ತಿರ ಬನ್ನಿ ಹೇಳ್ತೀನಿ . ಕ್ಲೈಮ್ಸ್ಗ್ ಗ್ರೂಪ್ ೨೦೧೦ @ಯಾಹೂ .ಕಾಮ್. ಯು.ಕೆ. [ದೂರವಾಣಿ  +೪೪ ೭೦೧೦೦೩೩೮೯೨]  ಇವರಿಂದ ನನಗೆ ಯು.ಕೆ. ನ್ಯಾಷನಲ್  ಲಾಟರಿ  ಮೂಲಕ ಒಂದು ಮಿಲಿಯನ್ ಯು.ಕೆ. ಪೌಂಡ್ಸ್  ಬಂದಿರುವುದಾಗಿಯೂ  ಅದನ್ನು ಕ್ಲೈಂ ಮಾಡಲು ಹೆಸರು ವಿಳಾಸ , ಇತ್ಯಾದಿ ನೀಡಿ  ಸಂಪರ್ಕಿಸಲು ತಿಳಿಸಲಾಗಿತ್ತು. ನನಗೆ  ಆಶ್ಚರ್ಯ  ನಾನು ಮೊದಲೇ ಲಾಟರಿ ವಿರೋಧಿ  ಅಂಥದ್ರಲ್ಲಿ ನಾನು ಯಾವಾಗ ಲಾಟರಿ ಖರೀದಿ ಮಾಡಿದ್ದೆ ತಿಳಿಯಲಿಲ್ಲ,ಅದೂ  ವಿದೇಶಿ ಲಾಟರಿ ನನಗೆ ಗೊತ್ತಿಲ್ಲದ ವಿಚಾರ.ಆದರೂ ತಲೆ ಕೆಡಿಸಿಕೊಂಡು ಮೂಲ ಹುಡುಕಲು  ಅಂತರ್ಜಾಲ ಹೊಕ್ಕು  ಯು.ಕೆ ನ್ಯಾಷನಲ್ ಲಾಟರಿ  ಅಧಿಕೃತ  ತಾಣ ನೋಡಿದ್ರೆ  ಮೇಲ್ನಲ್ಲಿ ತಿಳಿಸಿದ ಯಾವುದೇ ವಿಚಾರ ನಾಪತ್ತೆ .ಜೊತೆಗೆ  ನಮ್ಮ ವಿಳಾಸಹಾಕಿಕೊಂಡು  ಜನರನ್ನು ಮೋಸ ಮಾಡುವವರ ಬಗ್ಗೆ  ಎಚ್ಚರ ಅಂತ ಬುದ್ದಿವಾದದ  ವಿವರ ತಿಳಿಸಿ  ಮೊಸಹೊಗದಂತೆ ತಿಳಿಸಿದ್ದಾರೆ!!ನನ್ನ ಹೆಂಡತಿಯ ಆಸೆಯ ಬಲೂನು ತುಸ್ಸೆನ್ದಿತ್ತು...!!! ಆದ್ರೆ ನಾನು ದೊಡ್ಡ ಹಳ್ಳಕ್ಕೆ ಬೀಳುವ ಅವಾಂತರ ತಪ್ಪಿತ್ತು. ಎಲ್ಲಾ ಬ್ಲಾಗಿಗರ ಮಾಹಿತಿಗೆ ಮೇಲ್ ನ  ಪ್ರತಿ  ಫೋಟೋ ಮೂಲಕ ನೀಡಿದ್ದೇನೆ. ನಿಮಗೂ  ಈ ತರ ಮೇಲ್ ಬಂದರೆ  ಸುಮ್ನೆ  ನಕ್ಕು  ಮೇಲ್ ಡಿಲಿಟ್  ಮಾಡಿ ಆಯ್ತಾ!!

5 comments:

ಸುಬ್ರಮಣ್ಯ said...

ನಾವು ಆರ್ಕುಟ್ ನಲ್ಲಿ ಒಮ್ಮೆ ಟೊಪ್ಪಿ ಬಿದ್ದಾಗಿದೆ.

shivu.k said...

ನನಗೂ ಇದೇ ಮೇಲ್ ಬಂದಿತ್ತು. ಡಿಲಿಟ್ ಮಾಡಿದ್ದೆ.

ಸೀತಾರಾಮ. ಕೆ. / SITARAM.K said...

ಇ೦ಥಾ ಮೇಲ್-ಗಳು ಸಾಮನ್ಯ. ತಾವೂ ಹುಶಾರಿಯಗಿದ್ದು ಸ೦ತೋಷವಾಯಿತು.

ಸಾಗರದಾಚೆಯ ಇಂಚರ said...

ಇದೆಲ್ಲ ಸುಮಾರು ಎಲ್ಲರಿಗೂ ಕಳಿಸ್ತ ಇರುತ್ತಾರೆ
ಬಹಳ ಎಚ್ಚರಿಕೆಯಿಂದ ಇರುವುದು ಒಳ್ಳೆಯದು

ಗೌತಮ್ ಹೆಗಡೆ said...

intha msg ondarinda orkut account hack aagittu:)