Thursday, March 25, 2010

ಆಶಾ ಭೋಂಸ್ಲೆ ಹಾಡಿದ ಮೊದಲ ಕನ್ನಡ ಹಾಡು ಇದು ಸ್ವಾಮೀ!!...

ಇತ್ತೀಚಿಗೆ ಹಿಂದಿಯ ಪ್ರಖ್ಯಾತ ಗಾಯಕಿ ಆಶಾ ಭೋಂಸ್ಲೆ ಇದುವರೆಗೂ ಕನ್ನಡದಲ್ಲಿ ಹಾಡಿರಲಿಲ್ಲವೆಂದೂ ತಾವು ಅವರನ್ನು ಸಂಪರ್ಕಿಸಿ ಅವರಿಂದ ಕನ್ನಡ ಹಾಡನ್ನು ಹಾಡಿಸಿ ಕನ್ನಡ ಚಿತ್ರರಂಗವನ್ನು ಪಾವನ ಗೊಳಿಸಿದವರು ನಾವೆಂದು ಬೀಗುತ್ತಾ ಮೂರ್ಖರ ಪೆಟ್ಟಿಗೆಯ ಕೆಲವು ವಾಹಿನಿಗಳಲ್ಲಿ ಹೇಳಿ ಕುಣಿದರು. ಆಶಾ ಭೋಂಸ್ಲೆ ದೇಶದ ಉತ್ತಮ ಗಾಯಕರು ಎಂಬ ಬಗ್ಗೆ ಅನುಮಾನವಿಲ್ಲ .ಆದ್ರೆ ಈ ವಿಚಾರದಲ್ಲಿ ಕನ್ನಡಿಗರ ಕಿವಿಗೆ ಹೂ ಇದುವ ಸಾಹಸ ಎಷ್ಟು ಸರಿ ?? ಆಶಾ ಭೋಂಸ್ಲೆ ರಾಜ್ಕುಮಾರ್ ಭಾರತಿ ಅಭಿನಯದ ದೂರದ ಬೆಟ್ಟ ಚಿತ್ರದಲ್ಲಿ ಈಗಾಗಲೇ ಹಾಡಿ ಆ ಹಾಡು ಜನಪ್ರೀಯವಾಗಿತ್ತು ಎಂಬುದು ಕನ್ನಡಿಗರಿಗೆ ಗೊತ್ತಿದೆ. ಕನ್ನಡ ಚಿತ್ರಗಳಲ್ಲಿ ಮೊಹಮದ್ ರಫಿ,ಮನ್ನಾಡೆ, ಕಿಶೋರ್ ಕುಮಾರ್ , ಲತಾ ಮಂಗೇಶ್ಕರ್ , ಸುಮನ್ ಕಲ್ಯಾನ್ಪುರ್,ಹಾಡಿದ್ದಾರೆ. ಆದ್ರೆ ಮಹೇಂದ್ರ ಕಪೂರ್, ಮುಕೇಶ್,ಸೈಗಾಲ್, ಮುಂತಾದ ಇವರುಗಳು ಹಾಡಿಲ್ಲ ಈಗ ಮುಕೇಶ್ ಸೈಗಾಲ್,ಇಲ್ಲ ಬಿಡಿ, ಆದ್ರೆ ಮಹೇಂದ್ರ ಕಪೂರ್ ಇದ್ದಾರೆ ಸಾಧ್ಯಾ ಆದ್ರೆ ಸ್ವಾಮೀ ಅವರಿಂದ ಹಾಡಿಸಿ ದಾಖಲೆ ಬರೆದು ನಲಿಯಿರಿ!!! ಕನ್ನಡದಲ್ಲೂ ಅವರ ಗಾನ ಸುಧೆ ಹರಿದು ಬರಲಿ!!!

1 comment:

ಸೀತಾರಾಮ. ಕೆ. said...

Nice song. This is the Ashaa Bhonsle's first kannada song. You are right. The media which you are mentioned?