Saturday, February 27, 2010

ಕಳ್ಳನನ್ನು ಪೋಲಿಸ್ ಗೆ ಹಿಡಿದು ಕೊಟ್ರೆ !!ಪೊಲೀಸರು ಕಳ್ಳನನ್ನು ಹಿಡಿದದ್ದು ನಾವೇ ಅನ್ನೋದೇ??

ಈ ಫೋಟೋದಲ್ಲಿ ಇದಾನಲ್ಲ ಇವನು ನನ್ನ ಸ್ನೇಹಿತ ಬಿಂದು ಕುಮಾರ ಅಂತ .ಇವನು ಒಂತರ ಸಮಾಜ ಸೇವಕ ,[ ಕ್ಷಮಿಸಿ ಸಾಮಾನ್ಯವಾಗಿ ದುಡ್ಡು ಮಾಡೋ ಸಮಾಜ ಸೇವಕರಂತೆ  ಇವನಲ್ಲ]ಬೆಂಗಳೂರಿನಲ್ಲಿ  ಏನಾದ್ರೂ ಸಾಹಸ ಮಾಡುತ್ತಿರುತ್ತಾನೆ ,ತುಂಬಾ ಸಾದಾ ಸೀದಾ  ಮನ್ಶ !! ಹಿಂದೊಮ್ಮೆ ರಸ್ತೆ ಬದಿಯ ಪಾನಿ ಪೂರಿ ಅಂಗಡಿಯಲ್ಲಿ  ಪಾನಿ ಪೂರಿತಿಂದು  ದುಡ್ಡು ನೀಡದೆ ಹೋಗುತ್ತಿದ್ದ  ಪೋಲಿಸ್ ನವರನ್ನು  ಬೈದು ಪಾನಿಪೂರಿ ಅಂಗಡಿಯವನಿಗೆ  ದುಡ್ಡು ಕೊಡಿಸಿದ್ದ !!! ಹಿಂದೊಮ್ಮೆನಾವು ಕೆಲವರು ಶ್ರೀ ರಂಗ ಪಟ್ಟಣದಲ್ಲಿ  ಜೀವ ಕಳೆದು ಕೊಳ್ಳಲು ಬಂದಿದ್ದ ಹುಡುಗಿಯ ರಕ್ಷಿಸಿ ಅವಳನ್ನು ಪೋಷಕರಿಗೆ ಒಪ್ಪಿಸುವ ಸಂಧರ್ಭದಲ್ಲಿ ಬೆಂಗಳೂರಿನ ಜನ ಸಾಗರದಲ್ಲಿ ಹುಡುಗಿಯ ಪೋಷಕರನ್ನು ಪತ್ತೆಹಚ್ಚಿದ್ದ !!ಜೀವನದ ನಿರ್ವಹಣೆಗೆ ಒಳ್ಳೆ  ಬಿಸಿನೆಸ್  ಇದೆ, ಮೂಲತಹ  ಸಿವಿಲ್  ಇಂಜಿನಿಯರ್ ,ಆದ್ರೆ ಸಮಾಜದಲ್ಲಿ ತಪ್ಪು ಕಂಡರೆ ತಕ್ಷಣ ಸಿಡಿಯುತ್ತಾನೆ! ಇವನ ಇತ್ತೀಚಿನ ಸಾಹಸ ಓದಿ . ಮೊನ್ನೆ ಅಂದ್ರೆ ವಾರದ ಹಿಂದೆ ೧೯/೦೨/೨೦೧೦ ರಂದು  ಬೆಂಗಳೂರು ಗಿರಿನಗರದ  ಸರ್ಕಲ್ ಬಳಿ ತನ್ನ ಬೈಕಿನಲ್ಲಿ ಹೊರಟಿದ್ದಾನೆ. ಎದುರುಗಡೆ ನಾಲ್ಕು ಹುಡುಗರು ಓಡಿಬರುತ್ತಿದ್ದಾರೆ,ಹಿಂದೆ ಸ್ವಲ್ಪ ದೂರದಲ್ಲಿ ಕೆಲವರು ಅಟ್ಟಿಸಿಕೊಂಡು ಬರುತ್ತಿರುವುದು ಕಂಡು ಓಡುತ್ತಿದ್ದವರು ಕಳ್ಳರೆಂದು ತಿಳಿದು ಒಬ್ಬನನ್ನು ಅಟ್ಟಿಸಿಕೊಂಡು ಹೋಗಿ ಹಿಡಿದ್ದಿದ್ದಾನೆ ,ಉಳಿದ ಮೂರು ಜನ ಪರಾರಿಯಾಗಿದ್ದಾರೆ. ಹಿಡಿದ ಸ್ವಲ್ಪ ಸಮಯಕ್ಕೆ ಓಡಿಬಂದ ಒಬ್ಬ ಸಾರ್ ಇವನು  ಹಾಗು ಇತರ ಮೂರುಜನ  ನನಗೆ ಚಾಕು ತೋರಿಸಿ ನನ್ನ ಚಿನ್ನದ ಚೈನು ,ಹಾಗು ಪರ್ಸನ್ನು ಕಿತ್ತುಕೊಂಡು ಓಡಿ ಬರುತ್ತಿದ್ದಾರೆ ಅಂತ ಹೇಳಿದ್ದಾನೆ.ಅದನ್ನು ಕೇಳಿ   ಸಿಕ್ಕಿ ಬಿದ್ದಿದ್ದ ಒಬ್ಬನು  ತನ್ನ ಬಳಿ ಚೈನು ಪರ್ಸು ಇರುವುದಾಗಿಯೂ ಅದನ್ನು ಕೊಡುತ್ತೇನೆ ನನ್ನು ಬಿಟ್ಟುಬಿಡಿ  ಅಂತ ಅಂಗಲಾಚಿದ್ದಾನೆ. ಆಯ್ತು ತೆಗಿ ಅಂದ್ರೆ ಜೇಬಿನಿಂದ  ಚಾಕು ತೆಗೆದು  ನನ್ನ ಸ್ನೇಹಿತನಿಗೆ ಚುಚ್ಚಲು ಪ್ರಯತ್ನಿಸಿದ್ದಾನೆ!! ನನ್ನ ಸ್ನೇಹಿತ ಬಿಂದು,ತಪ್ಪಿಸಿಕೊಂಡು  ಅವನಿಗೆ ಎರಡು ಡಿಶುಂ  ಡಿಶುಂ  ಮಾಡಿ ಬುದ್ದಿ  ಕಲಿಸಿ ಕಳ್ಳ ನಿಂದ  ಚಿನ್ನದ ಚೈನು ಹಾಗು ಪರ್ಸು ಎರಡನ್ನು ಕಳೆದು ಕೊಂಡಿದ್ದವನಿಗೆ ವಾಪಸ್ಸು ಕೊಡಿಸಿದ್ದಾನೆ ನಂತರ  ಪೋಲಿಸಿನ  ಗರುಡ ದವರಿಗೆ ಮಾಹಿತಿ ನೀಡಿ ಕಳ್ಳನನ್ನು ಪೋಲೀಸಿನವರಿಗೆ ಒಪ್ಪಿಸಿ ಕಳೆದು ಕೊಂಡಿದ್ದ ವ್ಯಕ್ತಿಗೆ  ಪೋಲಿಸ್ ದೂರು ನೀಡಲು ತಿಳಿಸಿ  ತನ್ನ ಕೆಲಸಕ್ಕೆ ಹೋಗಿ ದ್ದಾನೆ.ಸ್ವಲ್ಪ ಹೊತ್ತಿಗೆ ತನ್ನ ಬಲಕೈ ನೋವಾಗಿರುವುದು ತಿಳಿದು ವೈದ್ಯರ ಬಳಿ ಹೋದ್ರೆ ಬೆರಳಿನಮೂಳೆ ಮುರಿದಿದೆ ಶಸ್ತ್ರ ಚಿಕಿತ್ಸೆ ಮಾಡಿಸಿ ಅಂದ ಕಾರಣ  ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು  ಪೋಲಿಸ್ ಕಥೆ ಏನಾಯ್ತು ಅಂತ  ಸ್ಟೇಶನ್ ಗೆ ಹೋದ್ರೆ  ಇನ್ಸ್ಪೆಕ್ಟರ್  ಸಾಹೇಬರನ್ನ  ಏನಾಯ್ತು ಸಾರ್ ಆ ಕೇಸು  ಅಂತ ಕೇಳಿದ್ರೆ  ಅದಾ ನಾವೇ ಕಳ್ಳನನ್ನ ಹಿಡಿದು ಪಾಪ ಮಾಲಿಕರಿಗೆ ಚಿನ್ನದ ಚೈನು ಹಾಗು ಪರ್ಸನ್ನು ಕೊಡ್ಸಿದ್ವಿ ಕಣ್ರೀ ಅನ್ನೋದೇ !!! ನನ್ನ ಸ್ನೇಹಿತ ಆಶ್ಚರ್ಯದಿಂದ  ಹೌದಾ ಸಾರ್  ಅಂದ್ರೆ ನಿಮ್ಮಾಣೆಗೂ  ಸತ್ಯ ಅಂತ ಹೇಳಿದ್ದಾರೆ !! ಇನ್ನು ಚೈನು  ಪರ್ಸು ವಾಪಸ್ಸು ಪಡೆದ ಪುಣ್ಯಾತ್ಮಕೃತಜ್ಞತೆಯ ಒಂದು ಮಾತು ಹೇಳದೆ ಹೋಗಿದ್ದಾನೆ. ನನ್ನ ಸ್ನೇಹಿತ  ಅವನ ಗೆಳೆಯರಾದ  ಕೆಲವು ದಿ.ಎಸ.ಪಿ. ಹಾಗು ಇತರ ಹಿರಿಯ  ಪೋಲಿಸ್ ಅಧಿಕಾರಿಗಳಿಗೆ ಹೇಳಿ ತಮಾಷೆ ಮಾಡಿದ್ರೆ  ಗುರು ನಿಂಗೆ ಗೊತ್ತಿಲ್ವ ಕಳ್ಳನನ್ನು ಹಿಡ ಬಾಬ್ತು ದೊರೆಯುವ  ಅವಾರ್ಡ್ ಹಣಕ್ಕಾಗಿ ಅಷ್ಟೇ  ಅಂದಿದ್ದಾರೆ .  ಬೆಂಗಳೂರಿನಲ್ಲಿ ಕೆಮ್ಮಿದರೂ ಪ್ರತ್ಯಕ್ಷ ವಾಗುವ  ಟಿ.ವಿ ಗಳು ಯಾಕೋ ಇದನ್ನು ಗಮನಿಸಿಲ್ಲ !! ನನ್ನ ಸ್ನೇಹಿತನಿಗೆ ಈ ಘಟನೆ ಇಂದ ನೋವಾಗಿಲ್ಲ  ಆದರೂ ಒಂದು ಒಳ್ಳೆ ಕೆಲಸ ಮಾಡುವ ಮನಸ್ಸಿನ ವ್ಯಕ್ತಿಗೆ ಸಮಾಜದ ಕಾಣಿಕೆ ಇದೆ ತರಹ  ಆಗಭಾರದು. ನನ್ನ ಸ್ನೇಹಿತನಿಗೆ [ ಕ್ಷಮಿಸಿ  ಬ್ಲಾಗಿನಲ್ಲಿ  ಬರಿಬೇಡ ಅಂದಿದ್ದ  ಆದರೂ ಬರೆದಿದ್ದೇನೆ ] ಚೀರ್ಸ್  ಹೇಳೋಣ ಅಲ್ವ . ಅವನ ಸಂಚಾರಿ ತರಂಗಿಣಿ  ೯೮೪೫೦೬೭೧೨೯ [9845067129]  ನೀವೂ ಸಾದ್ಯ ಆದ್ರೆ ಥ್ಯಾಂಕ್ಸ್ ಹೇಳಿಬಿಡಿ.

3 comments:

ಸೀತಾರಾಮ. ಕೆ. / SITARAM.K said...

ತಮ್ಮ ಸ್ನೇಹಿತನ೦ಥವರೂ ಇರುವದರಿ೦ದ ಇನ್ನು ಅಷ್ಟಿಷ್ಟು ಮಳೆ ಬೆಳೆ ಇದೆ. ಅವರಿಗೆ ನಮ್ಮ ಧನ್ಯವಾದಗಳು ಹಾಗೂ ಅಭಿನ೦ದನೆಗಳು. ಪೋಲಿಸರ ಕಥೆ ಗೊತ್ತೆ ಇದ್ದದ್ದೇ ಅದರ ಬಗ್ಗೆ ಮಾತಾಡುವ ಬದಲು ಬಿಡುವದೇ ಒಳಿತು. ವಿಷಯ ಹ೦ಚಿಕೊ೦ಡಿದ್ದಕ್ಕೆ ತಮಗೂ ವ೦ದನೆಗಳು.

shivu.k said...

ಸರ್,

ನಿಮ್ಮ ಗೆಳಯ ನಿಜಕ್ಕೂ ಹೀರೋ. ಯಾವುದೇ ಅಪೇಕ್ಷೆಯಿಲ್ಲದೇ ಹೀಗೆ ಸಹಾಯ ಮಾಡುವವರು ಸಿಗುವುದು ಕಡಿಮೆ..ಅವರಿಗೆ ಖಂಡಿತ ನನ್ನ ಅಭಿನಂದನೆಗಳು.

Anonymous said...

priya snehita Bindu, ninna sahasa karyakkae ninna geleya srikanthana abhinandanedgalu. heege anyayavannu edurisi nillutiru