
ಸಾಮಾನ್ಯ ವಾಗಿ ನಿಮ್ಮ ಊರಿನ ಕೆರೆಯ ಬಳಿ ಯಾವುದಾದರು ಮರದ ರೆಂಬೆಯ ಕವಲು, ಅಥವಾ ಕಲ್ಲು ಬಂದೆ ಯಾ ಮೇಲೆ ಇದು ಕುಳಿತಿರುವುದು ನಿಮ್ಮ ಗಮನಕ್ಕೆ ಬಂದಿರುತ್ತದೆ.ಇದರದೇ ಜಾತಿಯ ಬೇರೆ ಹಕ್ಕಿಗಳಿಗಿಂತ ಧೈರ್ಯವಂತ ಇದು. ನೀರಮೇಲೆ ಹೆಲಿಕಾಪ್ಟರ್ ನಂತೆ ನಿಂತು ನೀರಿನ ಒಳಗಡೆ ಮೀನು ಕಂಡು ಬಂದ ತಕ್ಷಣ ಮಿಂಚಿನಂತೆ ನೀರಿನೊಳಗೆ ನುಗ್ಗಿ ಕ್ಷಣದಲ್ಲಿ ಮೀನು ಹಿಡಿಯುವ ಚಾಣಾಕ್ಷ ಇದು.ಕ್ಯಾಮರಾಗೆ ಅಪರೂಪಕ್ಕೆ ಸಿಗುವ ಇದು ಮಿಂಚುಳ್ಳಿ ಜಾತಿಯ ಪಕ್ಷಿಗಳಲ್ಲಿ ಇತರ ವರ್ಗದ ಹಕ್ಕಿ ಗಳಿಗಿಂತ ಚಿಕ್ಕದು. ನಿಮ್ಮೂರಲ್ಲಿ ಕಂಡರೆ ನೀವು ನೋಡಿ ಆನಂದಿಸಿ ನಮಗೂ ತಿಳಿಸಿ.
1 comment:
ಕಿ೦ಗ್ ಫ಼ಿಶರ್ ಗೆ ಮಿ೦ಚುಳ್ಳಿ ಅನ್ನುತಾರೆ೦ದು ತಮ್ಮಿ೦ದ ತಿಳಿಯಿತು. ನಮ್ಮ ಗಣಿಯ ಹತ್ತಿರ ಗಿಡವೊ೦ದರಲ್ಲಿ ಸಾಮಾನ್ಯವಾಗಿ ನೋಡುತ್ತಿದ್ದೆ. ಫೋಟೊ ತೆಗೆಯಬೆಕೆನ್ನುವಷ್ಟರಲ್ಲಿ ಮಿ೦ಚಿನ೦ತೆ ಮಾಯವಾಗಿಬಿಡುತ್ತಿತ್ತು. ಮಾಹಿತಿಗೆ ಮತ್ತು ಚೆ೦ದದ ಚಿತ್ರಕ್ಕೆ ಧನ್ಯವಾದಗಳು.
Post a Comment