Monday, February 1, 2010

ಮಿಂಚಿನ ಬಳ್ಳಿ ಈ ಬಿಳಿ ಮಿಂಚುಳ್ಳಿ !!! ಹಕ್ಕಿ ಹುಡುಕಾಟ ....01



ನಾನು ಚಿಕ್ಕವಯಸ್ಸಿನಿಂದ ಹಳ್ಳಿಯಲ್ಲಿ ಬೆಳೆದೆನಾದರೂ ಹಕ್ಕಿಗಳ ಮಧ್ಯೆ ಇದ್ದರೂ ಇವುಗಳ ಬಗ್ಗೆ ತಿಳಿವಳಿಕೆ ಅಷ್ಟಕ್ಕಷ್ಟೇ !!.ಆದ್ರೆ ಪುಸ್ತಕಲೋಕ ಹೊಕ್ಕಾಗ ನನಗೆ ಪಕ್ಷಿಲೋಕ ತೆರೆದುಕೊಂಡಿತು.ನನ್ನ ಸ್ನೇಹಿತರೂ ಕೂಡ ಈ ತರಹದ ಹಕ್ಕಿ ಹುಡುಕೋ ನೆಪದಲ್ಲಿ ಮೈಸೂರಿನ ಸುತ್ತಮುತ್ತ  ಗಬ್ಬು ತುಂಬಿದ ಕೆರೆಗಳ [ನಮ್ಮ [ಅ]ನಾಗರೀಕತೆ ಕೊಡುಗೆ ಅಲ್ವೇ] ಸುವಾಸನೆ? ಕುಡಿಯುತ್ತ ಹಕ್ಕಿ ನೋಡೋ ಕಾರ್ಯ ನಡೆಸುತ್ತಾ ಅಲೆದಾಡುತ್ತಾರೆ.ನಾನು ಸಹ ಇತ್ತೀಚಿಗೆ ಸಮಯ ಇದ್ದಾರೆ ಹೋಗೋಕೆ ಶುರುಮಾಡಿದ್ದೇನೆ. ಹಾಗೆ ಕೈಗೊಂಡ ಮೊದಲ ಭೇಟಿಯೇ ಹುಣಸೂರು ತಾಲೂಕಿನ ರತ್ನಪುರಿ ಕೆರೆ .ಊರಿನಪಕ್ಕದಲ್ಲೇ ಇರುವ ಈ ಕೆರೆ ಜೋನ್ದಿನಿಂದ ಕೂಡಿ ಅವಸಾನದ ಅಂಚಿಗೆ ಸಾಗಲು ಸಿದ್ದವಾಗುತ್ತಿದೆ. ಆದರು ಹಾಲಿ ಕೆಲವು ಭಗೆಯ ಪಕ್ಷಿಗಳು ಕಾಣಸಿಗುತ್ತವೆ. ಹಾಗೆ ನಮ್ಮನ್ನು ಸ್ವಾಗತಿಸಿದ ಪಕ್ಷಿಯೇ ಈ ಬಿಳಿ ಮಿಂಚುಳ್ಳಿ [pied kingfisher]ಬಿಳಿ ಹಾಗು ಕಪ್ಪು ಬಣ್ಣಗಳ ಸಿನ್ಗಾರವುಲ್ಲ ಈ ಹಕ್ಕಿ ನೀಲಿ ಮಿನ್ಚುಲ್ಲಿಗಿಂತ ಗಾತ್ರದಲ್ಲಿ ದೊಡ್ಡದಿದೆ.ತಲೆಯಮೇಲೆ ಬಿಳಿ ಜುಟ್ಟನ್ನು  ಹೊಂದಿದ್ದು  ಮೀನು ಹಿಡಿಯುವುದರಲ್ಲಿ ಚಾಣಾಕ್ಷ  !ಇದು ಹೆಲಿಕಾಪ್ಟರ್ ನಂತೆ ಹೆಚುಹೊತ್ತು ಗಾಳಿಯಲ್ಲಿ ಒಂದೇಕಡೆ ನಿಂತು ನೀರಿನೊಳಗೆ ಮೀನನ್ನು ಕಂಡರೆ ತಕ್ಷಣ ಹೊಕ್ಕಿ ಮೀನನ್ನು ಹಿಡಿಯುವ ಚಾತಿಗಾರ ಇದು. ಇದು ಸಾಮಾನ್ಯವಾಗಿ ಕೆರೆ ಅಕ್ಕಪಕ್ಕ ಕಾಣಸಿಗುತ್ತವೆ .ನಿಮ್ಮೂರಲ್ಲಿ ಕೆರಇದ್ದರೆ ಇವನು ನಿಮ್ಮ ಕಣ್ಣಿಗೆ ಬಿದ್ದಾನು ಪ್ರಯತ್ನಿಸಿ ನೋಡಿ!!!

2 comments:

ಸುಬ್ರಮಣ್ಯ said...

ನಮಸ್ಕಾರ ಬಾಲು ಅಣ್ಣ.
ನೀವು ಯಾವ ಕ್ಯಾಮರದಲ್ಲಿ ಫೋಟೋ ತೆಗೆದಿದ್ದು?

ಸಾಗರದಾಚೆಯ ಇಂಚರ said...

ಸ್ವಲ್ಪ Focus ಆಗಬೇಕಿತ್ತು ಅನಿಸ್ತ ಇದೆ ಆಲ್ವಾ?
ಆದ್ರೆ ನಿಮ್ಮ ಸಹನೆಗೆ Hatsoff