ನನ್ನ ಸ್ನೇಹಿತ ದತ್ತ ಹುಲಿ ಗಣತಿ. ಮುಗಿಸಿಬಂದ .ಹೊಗೊಮೊದ್ಲು ಬಾಲು ಬರ್ತಿಯೇನೋ ''ಟೈಗೆರ್ ಸೆನ್ಸಸ್ ''ಗೆ ಅಂತ ಕರೆದಿದ್ದ ಆದ್ರೆ ನನ್ನ ಕಾರ್ಯಗಳ ಒತ್ತಡ ದಿಂದ ಹೋಗಲಾಗಲಿಲ್ಲ .ಹಿಂತಿರುಗಿ ಬಂದವ ಬಾಲು ನಿಮ್ಮನೆಗೆ ಬರ್ತೀನಿ ಕಣೋ ಫೋಟೋ ನಿಂಗೆ ತೋರ್ಸ್ಬೇಕು ಅಂತ ಫೋನ್ ಮಾಡಿ ಉತ್ತರಕ್ಕೂ ಕಾಯ್ದೆ ಬಂದೇಬಿಟ್ಟ .ಹುಲಿಗಣತಿ ಪ್ರತಿ ನಾಲ್ಕು ವರ್ಷಕೊಮ್ಮೆ ನಡೆಸಲಾಗುತ್ತದೆ .ಕಾಡಿನ ರೇಂಜ್ ಗಳ ವ್ಯಾಪ್ತಿಯಲ್ಲಿ ಸುಮಾರು ಮೂರು ಅಥವ ನಾಲ್ಕು ಕಿ.ಮೀ ದೂರಕ್ಕೆ ಒಂದು ''ಬೀಟ್ ''ರೂಟ್ ಅಂತ ಮಾಡಿ ಪ್ರತಿ ಬೀಟ್ ನಲ್ಲಿ ಇಬ್ಬರು ಸ್ವಯಂಸಹಾಯಕರು ,ಒಬ್ಬ ಅರಣ್ಯ ಸಿಬ್ಬಂದಿ ಯಂತೆ ತಂದ ರಚಿಸಿ ಗಣತಿಕಾರ್ಯ ಕೈಗೊಳ್ಳುತ್ತಾರೆ.ಬೆಳಿಗ್ಗೆ ೬.30 ಗಂಟೆ ಯಿಂದ ೧೧ ಗಂಟೆ ವರೆಗೆ ಪ್ರತಿದಿನ ಈ ಕಾರ್ಯ ೨೦೦೯ ಡಿಸೆಂಬರ್ ೨೧ ರಿಂದ ೨೭ ರ ವರೆಗೆ ನಡೆದಿತ್ತು
ಗಣತಿ ದಾರರು ತಮ್ಮ ವ್ಯಾಪ್ಪ್ತಿಯ ಬೀಟಿನಲ್ಲಿ ಕಂಡು ಬಂದ ಪ್ರಾಣಿಗಳು, ಅವಗಳು ಓಡಾಡಿದ ಜಾಗಗಳು, ಪ್ರಾಣಿಗಳ ಪಾದದ ಗುರುತು, ಪ್ರಾಣಿಗಳು ತಿಂದು ಉಳಿದ ಜೀವಿಗಳ ಅವಶೇಷಗಳು, ವನ್ಯ ಜೀವಿಗಳ ವಿಸರ್ಜಿತ ಮಲ,ಹಿಕ್ಕೆ ಅಧ್ಯಯನ ,ಇಂತಹ ಹಲವಾರು ಉಪಯುಕ್ತ ಮಾಹಿತಿಗಳನ್ನು ಸಂಗ್ರಹಿಸಿ ಅರಣ್ಯ ಇಲಾಖೆಗೆ ನೀಡಿದ್ದಾರೆ .ಇದು ವನ್ಯ ಜೀವಿಗಳ ಜೀವನ ಶೈಲಿಯ ಬಗ್ಗೆ ನಾವು ಯಾವುದೇ ವಿಶ್ವವಿದ್ಯಾಲಯ ಕಲಿಸಿಕೊಡದ ವಿಚಾರಗಳನ್ನು ತಿಳಿಯ ಬಹುದಾಗಿದೆ.ಕಾಡಿನಲ್ಲಿ ಸುತ್ತಾಟ ,ಒಳ್ಳೆಯ ಗಾಳಿ ,ಇವುಗಳು ಮನಸನ್ನು ಮುದಗೊಳಿಸುತ್ತವೆ.ನಮ್ಮ ದತ್ತ ಬಂದವನೇ ನನ್ನ ಮುಂದೆ ಕ್ಯಾಮರ ಬಿಸಾಡಿ ನನ್ನ ಫೋಟೋ ಗಳನು ಸಿ.ದಿ.ಗೆ ಹಾಕಿಕೊಡು ಅಂತ ಆರ್ಡೆರ್ ಮಾಡ್ದ .ಹಾಗೆ ಅವನ ಚಿತ್ರಗಳನ್ನು ನೋಡ್ತಾ ಒಂತರ ಖುಷಿಯಾಯ್ತು .ಲೋ ಗುರು ನಿನ್ನ ಫೋಟೋ ಉಪಯೋಗಿಸಿ ಕೊಳ್ಳೋಕೆ ಅನುಮತಿ ಕೊಡು ಅಂತ ಹೇಳಿ ಅನಾಮತ್ತಾಗಿ ಈ ಬ್ಲಾಗ್ನ ಒಳಗೆ ತೋರ್ಸಿ ಬಿಟ್ಟಿದ್ದೀನಿ .[ಆದ್ರೆ ಫೋಟೋ ತೆಗೆದ ಸ್ನೇಹಿತ ದತ್ತಾತ್ರೇಯ ನಿಗೆ ಧನ್ಯವಾದ ಹೇಳಲೇ ಬೇಕು ]ಅವನು ಹೇಳಿದ ಮಾಹಿತಿ ನಿಮ್ಮ ಮುಂದೆ ಸುರ್ದಿದ್ದಿನಿ !!.ಬನ್ನಿ ಫೋಟೋ ನೋಡುವ...!
4 comments:
ಫೋಟೋ ಚನ್ನಾಗಿದೆ ಬಾಲು ಅಣ್ಣ.
ಕಾಡಿನಲ್ಲಿ ಹುಲಿ ಕೂಗುವುದು ಯಾವತ್ತಾದರೂ ನೀವು ಕೇಳಿದ್ದೀರಾ?
ಮಾಚಿಕೊಪ್ಪ ಅವರೇ ನಾನು ಕಾಡಿನಲ್ಲಿ ಹುಲಿ ಘರ್ಜಿಸುವುದನ್ನು ಕೇಳಿದ್ದೇನೆ!!! ನೀವು ?!!!ಸುಮ್ನೆ ತಮಾಷಿಗೆ ಹೇಳ್ತೀನಿ ಹುಲಿ ಕೂಗಲ್ಲ!! ಅಲ್ವ??
sir chennagide photo jote e lekhana....
nice article &photos
Post a Comment