Sunday, February 14, 2010

ಮೈಸೂರಿನ ಕನ್ನಡ ಪುಸ್ತಕ ಜಾತ್ರೆ !! ಅಜ್ಞಾನದ ಜ್ವರಕ್ಕೆ ಒಳ್ಳೆಯ ಮಾತ್ರೆ!!! ಪ್ರಕಾಶಕರೇ ನಿಮ್ಮ ನಗು ಎಲ್ಲಿ??

ಮೈಸೂರಿನಲ್ಲಿ ೨೦೧೦ ರ ಫೆಬ್ರವರಿ ೧೦ ರಿಂದ ೧೪ ರವರೆಗೆ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಕನ್ನಡ ಪುಸ್ತಕ ಪ್ರದರ್ಶನ ಹಾಗು ಮಾರಾಟ ಮೇಳ ಏರ್ಪಡಿಸಲಾಗಿತ್ತು. ಕರ್ನಾಟಕದ ಪ್ರಸಿದ್ದ ಪ್ರಕಾಶಕರುಗಳು ಇಲ್ಲಿ ಭಾಗವಹಿಸಿ ಮೈಸೂರಿನ ಜನಕ್ಕೆ ಜ್ಞಾನ ಭಂಡಾರ ತೆರೆದಿಟ್ಟರು.ಸ್ವಾಮೀ ನಾನು ಸಹ ಈ ಮೇಳದಲ್ಲಿ ಪುಸ್ತಕ ಖರೀದಿಸಲು ತೆರಳಿದ್ದೆ , ಅಲ್ಲಿ ನನಗೆ ಕಂಡದ್ದು ಸೋಜಿಗವಾಗಿತ್ತು!!.






--------------------------------------------------------------------------------



ಅಲ್ಲ ಸ್ವಾಮೀ ಪುಸ್ತಕ ಪ್ರದರ್ಶಿಸಲು ಬಂದಿದ್ದ ಅಂಖಿತ ಪ್ರಕಾಶನ, ನವಕರ್ನಾಟಕ ಪ್ರಕಾಶನ , ಸ್ವಪ್ನ ಬುಕ್ ಸ್ಟಾಲ್, ಗೀತ ಬುಕ್ ಹೌಸ್ , ಸಾಹಿತ್ಯ ಭಂಡಾರ, ಪ್ರಸಾರಾಂಗ,ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಪುಸ್ತಕ ಪ್ರಾಧಿಕಾರ, ದೂರದ ಹುಬ್ಬಳ್ಳಿ,ಧಾರವಾಡ, ಬೆಳಗಾವಿ, ಮಂಗಳೂರು, ಮುಂತಾದ ಕಡೆಗಳಿಂದ ಪ್ರಕಾಶಕರು ಬಂದಿದ್ದು ಮೈಸೂರಿನ ಪುಸ್ತಕ ಪ್ರೇಮಿಗಳಿಗೆ ಹಬ್ಬವಾಗಿತ್ತು!!ಒಟ್ಟಿನಲ್ಲಿ ನಮ್ಮ ಅಜ್ಞಾನದ ಜ್ವರಕ್ಕೆ ಈ ಪುಸ್ತಕ ಜಾತ್ರೆ ಒಳ್ಳೆಯ ಮಾತ್ರೆ !!! ಖಂಡಿತ ಹೌದು. ನಾನು ಸಹ ಪುಸ್ತಕ ಲೋಕದೊಳಗೆ ಒಂದುಸುತ್ತು ಬಂದೆ!! ಒಳಬಂದ ನಾನು /ನನ್ನಂತೆ ಹಲವರು ಸ್ಟಾಲ್ ಗಳೊಳಗೆ ಹೊಕ್ಕರೆ ಮಾನ್ಯ ಪ್ರಕಾಶಕರು /ಅಥವಾ ಅಲ್ಲಿದ್ದ ಮಹನೀಯರು ಸರಿಯಾದ ಮಾಹಿತಿ ನೀಡುತ್ತಿರಲಿಲ್ಲ !!ಇನ್ನು ಹೇಳಬೇಕೆಂದರೆ ಅವರಿಗೆ ಅವರ ಪ್ರಕಾಶನದ ಪ್ರಕಟಣೆಯ ಪುಸ್ತಕಗಳನ್ನು ಓದುಗರಿಗೆ ತಲುಪಿಸುವ ಯಾವುದೇ ಉತ್ಸಾಹ ಇರಲಿಲ್ಲ [ನಾನು ಹಲವು ಭಾರಿ ಹೋದಾಗ ಕಂಡುಬಂದ ಸಾಮಾನ್ಯ ದೃಶ್ಯ ], ಅವರ ಹೆಮ್ಮೆಯ ಪ್ರಕಟಣೆಗಳ ಬಗ್ಗೆ ಅವರಿಗೆ ಹೆಮ್ಮೆ ಇರಲಿಲ್ಲ !! ಸಾಮಾನ್ಯ ಓದುಗರ ಪ್ರಶ್ನೆಗಳಿಗೆ ಅಸಹನೆಯ ಉತ್ತರ ಮಾರಾಟಗಾರರಿಂದ ಬರುತಿತ್ತು.ಇಷ್ಟೆಲ್ಲಾ ಅದ್ವಾನಗಳ ನಡುವೆಯೂ ಇದು ಒಂದು ವ್ಯವಸ್ತಿತ ಪ್ರದರ್ಶನವಾಗಿ ಮೈಸೂರಿಗರ ಮನ ಗೆದ್ದಿತು.ಪ್ರದರ್ಶನದ ಒಂದು ನೋಟ ನಿಮಗಾಗಿ.ಮರೆತು ಹೋಗುವ ಮುನ್ನ ಒಂದು ಹಾಸ್ಯ ಸನ್ನಿವೇಶ ನಿಮಗೆ ಹೇಳ್ತೀನಿ ಕೇಳಿ ನಾನು ಹಾಗೆ ಮೈಸೂರಿನ ಪ್ರಸಾರಾಂಗ ಮಳಿಗೆಯಲ್ಲಿ ಪುಸ್ತಕ ನೋಡುತ್ತಿದ್ದ ವೇಳೆ ಅಲ್ಲಿದ್ದ ಮಳಿಗೆಯವರು ''ಸಾರ್ ಪುಸ್ತಕ ತಗೊಳ್ಳಿ ಸಾರ್ ಸಾರ್ ತಗೊಳ್ಳಿ ನಮ್ಮ ಪುಸ್ತಕ !!ನಿಮಗೆ ಅರ್ಥ ಆಗದಿದ್ರೆ ಬೇರೆಯವರಿಗೆ ಗಿಫ್ಟ್ ಕೊಡಿ '' ಅಂದ್ರೂ!!ಹೇಗಿದೆ ಅವರ ಪ್ರಕಟಣೆ ಬಗ್ಗೆ ತಿಳುವಳಿಕೆ ??ಹೆಮ್ಮೆ??/ನೋಡಿ ಸಾರ್!!!



 

3 comments:

ಜಲನಯನ said...

ಬಾಲು, ಪುಸ್ತಕ ಕೊಳ್ಳುವವರು ಇದ್ದಾರೆಯೇ? ಎನಿಸುವಂತಾಗಿಬಿಟ್ಟಿದೆ..ಇಂತಹ ಸ್ಮಯದಲ್ಲಿ ಪುಸ್ತಕ ಜಾತ್ರೆಯ ಬಗ್ಗೆ ಚಿತ್ರಮಾಲಿಕೆ ಚನ್ನಾಗಿದೆ. ಇದಕ್ಕೆ ಹೆಚ್ಚು ಪ್ರಚಾರ ಸಿಗಬೇಕು...

ಸುಬ್ರಮಣ್ಯ said...

ಆ ಜಾತ್ರೆ ಈಗ ಮುಗಿದಿದೆಯೇ? ಮತ್ತೊಮ್ಮೆ ಶುರುವಾದರೆ ಅಲ್ಲಿಗೆ ಹೋಗುವುದಕ್ಕಿಂತ ಮೊದಲು ನನಗೆ ಹೇಳಿ. ನನಗೆ 'ಸತ್ಯಾರ್ತ ಪ್ರಕಾಶನ' ಪುಸ್ತಕ ಬೇಕಾಗಿತ್ತು.

ಸೀತಾರಾಮ. ಕೆ. / SITARAM.K said...

ಮೊನ್ನೆ ಹ೦ಪೆ ಉತ್ಸವದಲ್ಲೂ ನಡೆದ ಪುಸ್ತಕ ಪ್ರದರ್ಶನ ನೆನಪಾಯಿತು. ಅಲ್ಲಿ ಜನ ಜ೦ಗುಳಿಯೂ ಇತ್ತು. ಕೊಳ್ಳುವರು ಇದ್ದರು- ನಾನೂ ಭೈರಪ್ಪನವರ "ನೆಲೆ" ತೆಗೆದುಕೊ೦ಡೆ.