



ಮೊನ್ನೆಬೆಂಗಳೂರಿನಲ್ಲಿ ನೆಂಟರ ಮನೆಯ ಗೃಹ ಪ್ರವೇಶ ವಿತ್ತು . ಎಲ್ಲರಿಗೂ ಸಂಬ್ರಮ ಸಡಗರ ಓಡಾಡ ನಡೆದಿತ್ತು.ಪೂಜೆ ಮಾತುಕತೆ ಯಲ್ಲಿ ಜೊತೆಯಲ್ಲಿ ಬಂದಿದ್ದ ಮಕ್ಕಳು ಎಲ್ಲಿ ಹೋದರು ಅಂತ ನೆನಪಿನಲ್ಲಿ ಇರಲಿಲ್ಲ .ನೆನಪಿಸಿಕೊಂಡು ಮಕ್ಕಳು ಯೆಲ್ಲಿಹೊದ್ರು ಅಂತ ನೋಡಿದ್ರೆ ಮನೆಯ ಮುಂದೆ ಅಂಗಳದಲ್ಲಿ ಹರಡಿದ್ದ ಮರಳಿನ ಮೇಲೆ ಮಕ್ಕಳು ಆಟ ಆಡ್ತಾ ಮಕ್ಕಳು ಆನಂದದಿಂದ ಮೈಮರೆತಿದ್ರು!!! ಮಕ್ಕಳ ಮೈ ಮೇಲೆ ಮರಳಿನ ಕಣಗಳು ಸವಾರಿ ಮಾಡಿದ್ದವು.ಏ ಮಕ್ಕಳೇ ಇತ್ತ ಬನ್ರೋ ಮೈ ಮೇಲೆಲ್ಲಾ ಮಣ್ಣು ಹಾಕೊಂಡು ನೋಡ್ರಿ ಬಟ್ಟೆ ಎಲ್ಲ ಕೊಲೆ ಮದ್ಕೊಂಡಿವೆ ಅಂತ ಹಲವರ ದೂರು ಬೇರೆ !! ಆದ್ರೆ ಅಪ್ಪಂದಿರ,ದೊಡ್ಡಪ್ಪಂದಿರ ,ಚಿಕ್ಕಪ್ಪಂದಿರ ಸಪೋರ್ಟು ಮಕ್ಕಳಿಗೆ ಸಿಕ್ಕೆ ಬಿಡೋದೇ. ನಾವು ಹೇಳಿದ್ದು ಇಷ್ಟು ಅಲ್ರಿ ಮಕ್ಕಳಿಗೆ ಬೆಂಗಳೂರಿನಲ್ಲಿ ಮಕ್ಕಳಿಗೆ ಮರಳು ಸಿಕ್ಕಿ ಆಟ ಆಡೋದೇ ಕಷ್ಟ ಅಂತಾದ್ರಲ್ಲಿ ತಡೆಯೋದೆ ಅಂತ ವಾದಿಸಿದ್ವಿ .ಅಲ್ರಿ ನಾವೂ ಮಕ್ಕಳಾಗಿದ್ದಾಗ ಮಣ್ಣು, ನೀರು, ಮರ ಅಂತ ಎಲ್ಲ ತಾರಾ ಆಟ ಆಡಿದ್ವಿ, ಇವರಿಗೆ ಯಾಕೆ ನಿರ್ಭಂದ ವಿಧಿಸಿ ನೀರು ಹತ್ರ ಹೋಗಬೇಡ,ಮಣ್ಣಿನಲ್ಲಿ ಆಡಬೇಡ ,ಮರ ಹತ್ತ ಬೇಡ ಅಂತ ಹೇಳಿ ಎಲ್ಲದರ ಬಗ್ಗೆ ಹೆದರಿಕೆ ಹುಟ್ಟಿಸಿ ಅವರನ್ನು ಹೆದರಿಸಿ ಪುಕ್ಕಲ ರನ್ನಾಗಿ ಮಾಡ್ಬೇಕು ಅಂದದ್ದು ಕೆಲವರಿಗೆ ಆಶ್ಚರ್ಯ ವಾಗಿತ್ತು .ನೀವೇ ಹೇಳಿ ನಾವು ಮಾಡಿದ್ದು ಸರಿನಾ ಅಂತ ??? ಪುಟ್ಟ ಪೋರರು ಮಾಡಿದ ತುಂಟಾಟದ ಚಿತ್ರ ನಿಮಗಾಗಿ.ಎಚ್ಚರ ನಿಮ್ಮ ಬಾಲ್ಯ ನೆನಪಿಗೆ ಬಂದೀತು !!1
6 comments:
ಬಾಲು ಸರ್
ಬಾಲ್ಯ ನೆನಪಾಯಿತು
ಎಷ್ಟು ಆಟ ಆಡ್ತಿದ್ವಿ, ಮನೇಲಿ ಬೈದರೂ ನಾವು ಆಡೋದು ಬಿಡ್ತಾ ಇರ್ಲಿಲ್ಲ
ಮರಳ ಆಟ ಮಕ್ಕಳಿಗೆ ಇಷ್ಟ ಅಗೋಕ್ಕೆ ಕಾರಣ-
೧. ಬಟ್ಟೆಗೆ ಮತ್ತು ಮೈಗೆ ಅ೦ಟಿದರೆ ಕೊಳೆಯಾಗೊಲ್ಲ ಮತ್ತು ಜ಼ಾಡಿಸಿದರೇ ಉದುರಿ ಬಿಡುವದು.
೨. ಬೇಕಾದ ಆಕಾರಗಳನ್ನು ಹಸಿ ಇದ್ದಾಗ ಮಾಡಬಹುದು ಮತ್ತು ಒಣಗಿದ ನ೦ತರ ಅಕಾರಗಳು ಸು೦ದರವಾಗಿ ಕಾಣುತ್ತವೆ.
೩. ಬಟ್ಟೆ ಕೊಳೆಯಾಗದ ಕಾರಣ ಹಿರಿಯರು ಬೈಯುವ ಕೆಲಸ ಮಾಡೊಲ್ಲ.
ಹೀಗಾಗಿ ಮಕ್ಕಳಿಗೆ ಪ್ರಿಯವಾದ ಮತ್ತು ಹಿರಿಯರಿಗೆ ಸಹಿಸಿಕೊಳ್ಳಬಹುದಾದ ಆಟ ಈ ಮರಳಾಟ.
ಚೆ೦ದದ ಲೇಖನ ಹಾಗೂ ಚಿತ್ರಗಳು.ನಮ್ಮ ಬಾಲ್ಯ ನೆನಪಿಸಿದ ನಮ್ಮೊಳಗೊಬ್ಬರಾದ ಬಾಲುರವರಿಗೆ ಧನ್ಯವಾದಗಳು.
ತಮ್ಮ ಲೇಖನ ಬರೆವ ಅವಸರದಲ್ಲಿ ಆದ ಕೆಳಗಿನ ಕಾಗುಣಿಕ ತಪ್ಪುಗಳು ಖುಷಿ ಕೊಟ್ಟವು-"ಮಕ್ಕಳು ಯೆಲ್ಲಿಹೊದ್ರು", "ಬಟ್ಟೆ ಎಲ್ಲ ಕೊಲೆ ಮದ್ಕೊಂಡಿವೆ","ತಾರಾ ಆಟ"
ಬಾಲು ಸರ್,
ಫೋಟೋ ನೋಡಿದರೆ ಖಂಡಿತ ಬಾಲ್ಯದ ನೆನಪಾಗುತ್ತದೆ...ಖುಷಿಯಾಗುತ್ತದೆ.
ಸಾಗರದಾಚೆಯ ಇಂಚರ ರವರೆ ನಿಮ್ಮ ಬಾಲ್ಯದ ನೆನಪಾದ ಬಗ್ಗೆ ಖುಸಿಯಾಗಿದೆ. ಸ್ವಾಮೀ ಕೆ. ಸೀತಾರಾಮ ರವರೆ ನನ್ನ ತಪ್ಪನ್ನು ಹೆಕ್ಕಿ ತೋರಿಸಿದ್ದೀರಿ , ಇಂಗ್ಲಿಷಿನಿಂದ ಕನ್ನಡ ಟೈಪಿಸಲು ಬೆರಳು ತಪ್ಪಾಗಿ ಟೈಪಿಸಿದೆ .ತಾರಾ ಆಟದ್ದೂ ಇದೆ ಕಥೆ . ಹಿರಿಯರು ಮನ್ನಿಸಿ ಮುನ್ನಡೆಸಿ . ಕೆ.ಶಿವೂ ಸರ್ ನಿಮ್ಮ ಬಾಲ್ಯದ ನೆನಪಾಗಿದ್ದು ಸಂತೋಷವಾಗಿದೆ.ಎಲ್ಲರ ಮುಕ್ತ ಅನಿಸಿಕೆಗಳಿಗೆ ಧನ್ಯವಾದಗಳು.
Post a Comment