ಕಂದು ಬಣ್ಣದ ಹೆಜ್ಜಾರ್ಲೆ ನೋಡದವರು ಯಾರು ಇಲ್ಲ !!ಸಾಮಾನ್ಯ ವಾಗಿ ಈ ಹಕ್ಕಿಯನ್ನು ಬಾತು ಕೋಳಿ ಅಂತ ಭಾವಿಸಿ ನೋಡಿರುತ್ತೇವೆ. ಆದ್ರೆ ಇದು ಕಂದು ಹೆಜ್ಜಾರ್ಲೆ [ಸ್ಪಾಟ್ ಬಿಲ್ಲಡ್ ಪೆಲಿಕನ್] ಅಂತ ಕರೆಯುತ್ತಾರೆ.ಗಂಡು ,ಹೆಣ್ಣು ನೋಡಲು ಒಂದೇ ತರವಿದ್ದು ಸಾಮಾನ್ಯ ವಾಗಿ ಗುಂಪಿನಲ್ಲಿ ವಾಸಿಸುತ್ತವೆ . ವಾಸಕ್ಕೆ ನೀರಿನ ಆಸರೆ ಬೇಕೇ ಬೇಕು.ಇವುಗಳಲ್ಲಿ ಎರಡು ಬಗೆಯ ಪ್ರಬೇದಗಲಿದ್ದು ಇನ್ನೊಂದು ಬಿಲಿಹೆಜ್ಜಾರ್ಲೆ [ಗ್ರೇಟ್ ವೈಟ್ ಪೆಲಿಕನ್] ಉತ್ತರ ಭಾರತದಲ್ಲಿ ಹೆಚ್ಚಾಗಿ ಕಾಣಸಿಗುತ್ತವೆ.ನಮ್ಮಲ್ಲಿ ಹೆಚ್ಚಾಗಿ ಕಂದು ಹೆಜ್ಜಾರ್ಲೆ ಕಂದು ಬರುತ್ತವೆ.ಇವು ಮೀನಾ ಹಾರಿ ಮೀನು ಬಿಟ್ಟು ಬೇರೆ ಏನನ್ನು ತಿನ್ನಲು ಒಲ್ಲವು.ಭಾನಿನಲ್ಲಿ ಅತಿ ಎತ್ತರಕ್ಕೆ ಹಾರಿ ದೂರದ ಕೆರೆಗಳಿಗೆ ಹೋಗಿ ಮೀನು ಶಿಖಾರಿ ಮಾಡಿ ಜೀವಂತ ಮೀನನ್ನು ತಾಣ ಗಂಟಲ ಬಳಿ ಇರುವ ಚೀಲದಲ್ಲಿ ಇಟ್ಟುಕೊಂಡು ಬಂದು ತನ್ನ ಮರಿಗಳಿಗೆ ಜೀವಂತ ಮೀನಿನ ಗುಟುಕು ಕೊಡುತ್ತದೆ.ನೋಡಲು ಸುಂದರ ಮನೋಹರ ಈ ಹೆಜ್ಜಾರ್ಲೆ ನೀರಿನಲ್ಲಿ ತೇಲುವಾಗ ನೋಡಲು ಅಮೊಘವಾಗಿರುತ್ತದೆ.ನೀವು ನೋಡಿ ಆನಂದಿಸಿ.
3 comments:
nice information with beautyful photos.
' nimmolagobba' ಅವ್ರೆ..,
ನಾನೂ ನೋಡಿದ್ದೇನೆ.. ಹೆಸರು ಗೊತ್ತಿರಲಿಲ್ಲ..
Blog is Updated:http:/manasinamane.blogspot.com
ಬಾಲು ಸರ್
ಸುಂದರ ಫೋಟೋಗಳು
ವಿವರಣೆ ಹಿತವಾಗಿದೆ
Post a Comment