ನಮ್ಮ ಮನಸ್ಸು ಶುದ್ದವಿದ್ದರೆ ಜಗವೇ ಸುಂದರ!!!!{ if our heart and mind is pure everything is pure}
Thursday, January 28, 2010
ಗುಲ್ಬರ್ಗ ಮಿರ್ಜಿ ಬಜ್ಜಿ ತಿನ್ನೋಣ ಬನ್ನಿ !!! ಇಸ್ಸ್ಸ್ಸ್ ಆಆಅ ಹಹಹಹಾ !!
ನನ್ನ ಹಳೆ ಫೋಟೋ ತಿರುವಿ ಹಾಕ್ತಾ ಇದ್ದೆ ಆಗ ಕಣ್ಣಿಗೆ ಬಿದ್ದು ನೆನಪಾತು ಈ ಗುಲಬರ್ಗ ಪ್ರವಾಸ !!.ಹೌದು ಕಳೆದ ವರ್ಷ ನಾನು ಅಲ್ಲಿಗೆ ನನ್ನ ತಮ್ಮ ಅಲ್ಲಿಗೆ ಹೋಗಿದ್ವಿ. ನೀವ್ ಬಂದದ್ದು ಬಾಳ್ ಚೆನ್ನಾಯ್ತು ಬಿಡ್ರಿಯಪ್ಪ,ಅಂತ ನಮ್ಮನ್ನು ಅಶೋಕ ಕುಲಕರ್ಣಿ ಊರು ಸುತ್ತಿಸಿ ಅಲ್ಲಿ ನಮಗೆ ಗುಲಬರ್ಗ ತಿಂಡಿ ರುಚಿ ತೋರಿಸಲು ಶುರುಮಾಡಿದರು.ಬರ್ರಿ ಇಲ್ಲಿ ಒಂದ್ಕಡಿ ಮಿರ್ಚಿ ಬಜ್ಜಿ ತಿನ್ನೋನು ಬಾಳ್ ಚಾಲೂ ಮಾಡ್ತನ್ರಿ ಇವ ಅಂತ ಒಂದು ಈ ಖಾನಾವಳಿ ಕಡಿ ಕರೆದುಕೊಂಡು ಹೊಂಟ್ರು.ಮೊದಲು ಇವ್ರಿಗಿ ಒಂದು ಪ್ಲೇಟ್ ಮಿರ್ಚಿ ಬಜ್ಜಿ ಕೊಡ್ರಿ ಅಂತ ತರ್ಸೆಬಿಟ್ರು ನಾನು ಹೊಸ ಪೂಜಾರಿ ರುಚಿ ನೋದೆಬಿಡುವ ಅಂತ ತಿನ್ನಕ್ಕೆ ಶುರು ಮಾಡ್ದೆ .ಬಹಳ ರುಚಿಕಟ್ಟಾಗಿತ್ತು, ಚೆನ್ನಾಗಿದೆ ಅಂಕಲ್ ಅಂದೇ! ಈಗ ನೋಡ್ರಿ ಇನ್ನೊದು ವಿಶೇಷ ಅಂತ ಕಟ್ ಮಿರ್ಚಿ ಬಜ್ಜಿ ತರ್ಸಿ ಶುರು ಮಾಡಿ ಅಂದ್ರು ನಗು ಹುಮ್ಮಸ್ಸು ಆಯ್ತು ಅಂತ ತಿಂದೆ ಬಿಟ್ಟೆ!!! ಸ್ವಾಮೀ ಮಿರ್ಚಿ ತನ್ನ ಪ್ರತಾಪ ತೋರ್ಸೋಕೆ ಶುರುಮಾಡಿತು .. ತಿನ್ನೋವಾಗ ಇದ್ದ ಖುಷಿ ತಿಂದ ಮೇಲೆ ಇಳಿದೆ ಹೋಗಿತ್ತು.ಖಾರ ಖಾರ ಅಂತ ಲಿತೆರ್ ಗಟ್ಲೆ ನೀರ್ ಕುಡ್ದು,ಸ್ವೀಟ್ ತಿಂದು ಸುದಾರ್ಸಿ ಕೊಂಡೆ .ಆದರೂ ಅಂಕಲ್ ಪ್ರೀತಿ ತುಂಬಾ ಖಾರವಾಗಿ ಸಿಹಿಯಾಗಿ ಆತ್ಮೀಯವಾಗಿ ಉಳಿದುಕೊಂಡಿದೆ. ನೀವು ಗುಲ್ಬರ್ಗ ಗೆ ಹೋದ್ರೆ ಮಾರಿದೆ ಮಿರ್ಚಿ ಬಜ್ಜಿ ತಿನ್ನಿ ಆಯ್ತಾ.
orkut - My Music ಹೋಟೆಲ್ ಕ್ಯಾಲಿಫೋರ್ನಿಯಾ ತುಂಬಾ ಪ್ರಸಿದ್ದ ಹಾಡು.
orkut - My Music ಆಗಸದಲ್ಲಿ ಹಾರುವ ಈಗಲ್ ಹಕ್ಕಿಗೋಂದು ಸುಂದರ ಹಾಡು!!1
Monday, January 25, 2010
orkut - My Music ೭೦ ರ ದಶಕದ ಪ್ರಸಿದ್ದ ''ಅಬ್ಬ'' ಸಂಗೀತ ಕೇಳಿ ಹಾಗು ಸಾಹಿತ್ಯ ಓದಿ !!
Saturday, January 23, 2010
ನಮ್ಮ ಅಜಂತ್ ರೂಮು ಹಾಗೆ ಸುಮ್ಮನೆ!!!
ನನ್ನ ಸ್ನೇಹಿತ ಅನಿಲ್ ಮಗ ಅಜಂತ್ ಹಾಗು ನಾನು ತುಂಬಾ ವಿಶ್ವಾಸಿಗಳು. ಹಾಗಾಗಿ ತುಂಬಾ ಸಲಿಗೆ ಜಾಸ್ತಿ ! ಅವನು ಏನೆ ಮಾಡಿದ್ರು ನನಗೆ ತೋರಿಸಿ ಖುಷಿ ಪಡೋದು ಅವನಿಗೆ ಅಬ್ಯಾಸ. ಒಂದು ದಿನ ಬನ್ನಿ ನನ್ನ ರೂಂ ನೋಡಿ ಅಂತ ರೂಂ ಒಳಗೆ ಕರೆದುಕೊಂಡು ಹೋದ!! ನೋಡಿದ ನನಗೆ ಒಂದು ತರ ಅನ್ನಿಸಿ ಏನೋ ಇದು ನಿನ್ನ ಕಥೆ ಅಂದೇ !!ರೂಮಿನ ಪೂರ್ತ ಕನ್ನಡ ಚಿತ್ರ ನಟ ಗಣೇಶನ ವಿವಿಧ ಚಿತ್ರಗಳು ಗೋಡೆ ಅಲಂಕರಿಸಿದ್ದವು!! ಹಾಗು ಒಂದು ಬುರುಡೆ ಸ್ಪ್ರಿಂಗ್ ಸಹಿತ ನೇತಾಡ್ತಾ ಅಣಕಿಸುತ್ತಿತ್ತು ,ಇನ್ನೊಂದು ಗೋಡೆಗೆ ತಗುಲಿಕೊಂಡು ಹೆದರಿಸುತ್ತಿತ್ತು!! ಅಲ್ಲ ಪಿ.ಯೂ.ಸಿ. ಹುಡುಗ ಹಿಂಗಿದ್ದಾನಲ್ಲ ಅಂತ ಅನ್ಸಿತ್ತು ನಂತರ ನಾನೇ ಯೋಚಿಸಿ ಅಲ್ಲ ಅವನಿಗೆ ಇಷ್ಟವಾದಂತೆ ಇರಲಿ ಬಿಡು ಅವನೇನು ಕದ್ದು ಮುಚ್ಚಿ ಮಾಡ್ತಾ ಇಲ್ಲ ಅವನ ವಯಸ್ಸಿನಲ್ಲಿ ಹೇಗೆ ಇರಬೇಕೋ ಹಾಗೆ ಇದ್ದಾನೆ [ಎಷ್ಟೋ ಮಕ್ಕಳು ಮನೆಯವರಿಗೆ ಗೊತ್ತಿಲ್ಲದೇ ಏನೇನೊ ಮಾಡ್ತಾರೆ ]ಅನ್ಸಿ ಅಲ್ಲ ಅಜಂತ್ ನಿನ್ನ ಹವ್ಯಾಸ ವಿಚಿತ್ರವಾಗಿದೆ ಆದರೂ ನೀನು ಚೆನ್ನಾಗಿ ಓದುವೆಯಲ್ಲ ಹ್ಯಾಗೆ? ಅಂತ ತಿಳೀತಿಲ್ಲ ಅಂದೇ ಆದ ತುಂಬಾ ಗುಟ್ಟು ಅದನ್ನು ಕೇಳಬೇಡಿ ಅಂದ!!ಯಾರೇ ಆದರೂ ಇವನ ರೂಂ ನೋಡಿದ್ರೆ ಈ ಹುಡುಗ ಓದದೆ ಶೋಕಿಲಾಲಾ ತರ ಇದಾನೆ ಅಂತ ಅನ್ನಿಸುತ್ತೆ ಆದ್ರೆ ಈ ಹುಡುಗನ ಸ್ಟೈಲ್ ಬೇರೆ ಮನೆಯವರಿಗೆಲ್ಲ ಮೆಚ್ಚಿನ ಹುಡುಗ ,ಅಪ್ಪನ ಕೆಲಸದಲ್ಲಿ ಸಹಾಯ ಮಾಡುವ ಇವನು ಅಪ್ಪನ ಬೆಸ್ಟ್ ಫ್ರೆಂದೂ !! ಓದಿನಲ್ಲಿ ಜಾಣ ಚೆನ್ನಾಗಿ ಅಂಕ ಗಳಿಸಿ ಟೀಚೆರ್ಸ್ ಗೂ ಅಚ್ಚುಮೆಚ್ಚಿನ ಹುಡುಗ ,ಇವನನ್ನು ಯಾವ ತಪ್ಪಿಗೆ ಬೈಯ್ಯ ಬೇಕು ಅಂತ ಗೊತಾಗ್ದೆ ಸುಮ್ಮನೆ ಟೀ ಕುಡಿತ ಆಚೆ ಬಂದೆ!! ನೀವೇ ಹೇಳಿ ಇವನನ್ನು ನಾವು ಯಾವ ಗುಂಪಿಗೆ ಸೇರಿಸೋಣ !! ಈಗ್ಲೂ ಅಷ್ಟೇ ನನ್ನ ಸ್ನೇಹಿತ ಅನಿಲ್ ಮನೆಯಲ್ಲಿ ಇವನ ರೂಮಿಗೆ ಫ್ರೀ ಎಂಟ್ರಿ!1
Friday, January 22, 2010
ಬಿಳಿಗಿರಿಯ ಬನದಲ್ಲಿ ..೦೮ ಬನ್ನಿ ಬನದ ರಕ್ಷಕರ ನೆನೆಯೋಣ!! [ಯಾತ್ರೆಯ ಅಂತಿಮ ಘಟ್ಟ]
ನಾವು ನಮ್ಮ ಬನದ ಯಾತ್ರೆಯ ಅಂತಿಮ ಚರಣ ಮುಟ್ಟುವ ಸಮಯ ಬಂದಿತ್ತು.ಮನದ ತುಂಬಾ ಏನೋ ಬೇಸರದ ಭಾವ ತುಂಬಿತ್ತು.ಇಂತಹ ಪರಿಸರದಿಂದ ನಮ್ಮ ನರಕ ಸದೃಶ ನಗರಗಳಿಗೆ ಹಿಂದಿರುಗಬೇಕಲ್ಲ ಅಂತ ಎಲ್ಲರ ಮನದಲ್ಲೂ ಯೋಚನೆ ಬಂದು ಎಲ್ಲರ ಮುಖಗಳು ಬಾಡಿದ್ದವು.ನಮ್ಮೊಡನಿದ್ದು ನಮ್ಮನ್ನು ಪ್ರೀತಿಯಿಂದ ನೋಡಿಕೊಂಡ ಅರಣ್ಯ ಇಲಾಖಾ ಸಿಬ್ಬಂದಿಗೆ ಹೇಗೆ ಧನ್ಯವಾದ ಅರ್ಪಿಸಬೇಕೆಂಬ ಅರಿವಿಲ್ಲದೆ ತೊಳಲಾಡಿದೆವು.ನಾವೇ ಇವರ ಚಟುವಟಿಕೆ ಬಂದದಿನದಿಂದ ನೋಡಿದ್ದೆವು.ಏನೇ ಆಗ್ಲಿ ಇವರ ಶ್ರಮದ ಸೇವೆ ನಮ್ಮ ನಾಡಿನ ಕಾಡುಗಳನ್ನು ಉಳಿಸಲು ಸಹಕಾರಿಯಾಗಿದೆ .ಹೆಂಡತಿ, ಮಕ್ಕಳು, ಬಂಧುಗಳು ಎಲ್ಲರನ್ನು ಮರೆತು ದಟ್ಟ ಕಾಡಿನಲ್ಲಿ ಅಡಿಗಡಿಗೂ ಸಮಸ್ಯೆಗಳನ್ನು ಎದುರಿಸುತ್ತ ಸರ್ಕಾರಿ ಕೆಲಸ ನಿರ್ವಹಿಸುವ ಈ ಫಾರೆಸ್ಟ್ ವಾಚರ್ಸ್ ,ಗಾರ್ಡ್ ಇವರುಗಳ ಕಷ್ಟ ನೋಡಿದವರಿಗೆ ಮಾತ್ರ ಗೊತ್ತಾಗುತ್ತೆ! ದಟ್ಟ ಕಾಡಿನ anti poaching ಕ್ಯಾಂಪ್ ಗಳಲ್ಲಿ ಹಗಲೂ ರಾತ್ರಿ ಎನ್ನದೆ ಉಳಿದುಕೊಂಡು ಕಾಡಿನಲ್ಲಿ ಸುತ್ತಾಡಿ ಕಾಡ್ಗಿಚ್ಚು ಬಗ್ಗೆ, ಕಾಡು ಗಳ್ಳರ ಬಗ್ಗೆ ನಿಗಾ ಇಟ್ಟು ಮೇಲಧಿಕಾರಿಗಳಿಗೆ ಮಾಹಿತಿ ನೀಡುವುದು ,ಯಾವುದಾದರೂ ವನ್ಯ ಜೀವಿ ಸಾವನ್ನಪ್ಪಿದರೆ ಮಾಹಿತಿ ನೀಡುವುದು, ಕಾಡಿನ ಸಂಪತ್ತು ನಾಡಿಗೆ ಕಳ್ಳಸಾಗಣೆ ಮಾಡುವವರ ವಿರುದ್ದ ಕಾದಾಡುವುದು ಇವರ ಕೆಲಸ.ಎಷ್ಟೋ ಬಾರಿ ಇವ್ರೂ ಕಾಡಿನಲ್ಲಿ ಬೆಳಕಿಲ್ಲದೆ ರಾತ್ರಿವೇಳೆ ಮೈಲುಗಟ್ಟಲೆ ನಡೆಯುತ್ತಾರೆ.[ರಾತ್ರಿವೇಳೆ ಕಾಡುಗಳ್ಳರು ಬೆಳಕು ಕಂಡರೆ ಇವರತ್ತ ಗುಂಡು ಹಾರಿಸುವ ಸಂದರ್ಭ ವಿರುವ ಕಾರಣ ಕತ್ತಲಲ್ಲಿ ಬೆಳಕನ್ನು ಹಾಯಿಸದೆ ನಡೆಯುತ್ತಾರೆ.]ನೀಡಿರುವ ವೈರ್ ಲೆಸ್ ನಿಂದ ಮಾಹಿತಿ ನೀಡಲು ತರಂಗ ಸಿಗದಿದ್ದರೆ ರಾತ್ರಿ ವೇಳೆಯಲ್ಲೇ ಎತ್ತರದ ಮರ ಏರಿ ಮೇಲಧಿಕಾರಿಗಳಿಗೆ ಆ ವೇಳೆಯಲ್ಲಿನ ಮಾಹಿತಿ ನೀಡುತ್ತಾರೆ!ಕಾಡಿನ ನೀರವತೆಯಲ್ಲಿ ನೋವನ್ನು ಮರೆತು ಕರ್ತವ್ಯ ನಿರ್ವಹಿಸುವ ಇವರ ಸೇವೆ ಶ್ಲಾಘನೀಯ .ನಮ್ಮ ನಾಡಿನ ಕಾಡನ್ನು ರಕ್ಷಿಸಲು ಹೆಜ್ಜೆ ಹೆಜ್ಜೆಗೂ ಸಾಹಸದ ಕ್ಷಣಗಳನ್ನು ಎದುರಿಸಿ ಸರ್ಕಾರಿಸೇವೆ ಮಾಡುತ್ತಿರುವ ಇವರು ನಮ್ಮ ನಾಗರೀಕ?? ಸಮಾಜದಲ್ಲಿ ಎಲೆ ಮರೆಯ ಕಾಯಿಗಳಿದ್ದಂತೆ. ನಮ್ಮ ಅಮೂಲ್ಯ ಅರಣ್ಯ ಸಂಪತ್ತನ್ನು ರಕ್ಷಿಸುವ ಇವರಿಗೆ ನಮ್ಮ ಮನಃಪೂರ್ವಕ ಅಬಿನಂದನೆ ತಿಳಿಸಿ ನಾಡಿನತ್ತ ತೆರಳಿದೆವು! ಬಿಳಿಗಿರಿಯ ಬನದ ಯಾತ್ರೆಯಲ್ಲಿ ನಮ್ಮ ನೆನಪಿನ ಬುತ್ತಿಯಿಂದ ೦೮ ಕಂತುಗಳಲ್ಲಿ ಅನುಭವ ಹಂಚಿಕೊಂಡಿದ್ದೇನೆ ನಿಮಗೆ ಇಷ್ಟವಾಗಿದ್ದರೆ ನನಗೆ ಸಂತೋಷ,ಖುಷಿಯಾಗಿದ್ದರೆ ನಿಮ್ಮಿಂದ ಒಂದು ಮಾತು ಬರಲಿ ಅಲ್ವ? ಬಿಳಿಗಿರಿ ಬನದ ಯಾತ್ರೆಯ ಶುಭ ವಿದಾಯ.ವಂದನೆಗಳು
Thursday, January 21, 2010
ಬಿಳಿಗಿರಿಯ ಬನದಲ್ಲಿ ...೦೭ ಕಾಡು ಕೋಣದ ಮುಂದೆ ಕ್ಯಾಮರಾ ರೀ !!
Wednesday, January 20, 2010
ಬಿಳಿಗಿರಿಯ ಬನದಲ್ಲಿ ..೦೬ ಬನದಲ್ಲಿ ಬಾಲ್ಯ ಅರಳಿಸುವ ಮಕ್ಕಳು!!!
ಬಿಳಿಗಿರಿಯ ಬನದ ಯಾತ್ರೆ ಯಲ್ಲಿ ನಮಗೆ ಅಲ್ಲಲ್ಲಿ ಕಾನನದ ಮಧ್ಯದಲ್ಲಿ ಸೋಲಿಗರ ಮಕ್ಕಳು ಸಿಗುತ್ತಿದ್ದರು. ನಮ್ಮನ್ನು ಕಂಡೊಡನೆ, ಆಶ್ಚರ್ಯ,ತುಂಬಿದ ಭೀತಿ,ಯಿಂದ ಮರೆಯಾಗುತ್ತಿದ್ದರು. ಆ ಮಕ್ಕಳೋ ದಟ್ಟ ಕಾನನದಲ್ಲಿ ಕಾಡು ಪ್ರಾಣಿಗಳ ನಡುವೆ ಬಾಲ್ಯ ಸವೆಸುವ ಧೀರರಂತೆ ಗೋಚರಿಸಿದರು. ನಮಗೋ ಯಾವಾಗಲೋ ಒಮ್ಮೆ ಕಾಡು ಜೀವಿಗಳನ್ನು ನೋಡಿ ಖುಷಿ ಯಾದರೆ ಇವರಿಗೆ ಇದು ನಿತ್ಯದ ಜಂಜಾಟ. ತಮ್ಮ ಉಳಿವಿಗಾಗಿ ಕಾಡಿನ ಜೊತೆ ನಿತ್ಯವೂ ಹೆಣಗಾಡಿ ಬದುಕ ಬೇಕಾದ ಅನಿವಾರ್ಯತೆ.ಇವರಿಗೆ ಆನೆ, ಕಾಡೆಮ್ಮೆ,ಜಿಂಕೆ, ಕಡವೆ, ಹುಲಿ ,ಕಾಡುಹಂದಿ, ಮುಂತಾದ ಎಲ್ಲ ಪ್ರಾಣಿಗಳು ನಮ್ಮ ಪಟ್ಟಣದ ಬೀಡಾಡಿ ಪಶುಗಳಿದ್ದಂತೆ!!. ಇವರು ದೈಹಿಕವಾಗಿ ತುಂಬಾ ಚತುರರಿದ್ದು ಎಂತಹ ದಟ್ಟ ಕಾಡಿನಲ್ಲಿಯೂ ಸುಲಭವಾಗಿ [ಎಂತಹ ಸಮಯದಲ್ಲಾದರೂ] ಸಾಗಬಲ್ಲರು.ಹಾಗು ಈ ಮಕ್ಕಳ ವಾಸನೆ ಗ್ರಹಣ ಶಕ್ತಿ ಅದ್ಭುತ ವಾಗಿದ್ದು ವಾಸನೆ ಇಂದಲೇ ದೂರದಲ್ಲಿ ಯಾವ ಪ್ರಾಣಿ ಇದೆ ಎಂದು ಗುರುತಿಸ ಬಲ್ಲರು.ಶ್ರವಣ ಶಕ್ತಿ ಸಹ ಚುರುಕಾಗಿದ್ದು ಎಂತಹ ಸಣ್ಣ ಶಬ್ದವಾದರೂ ಇವರ ಕಿವಿ ಕೇಳಿಸಿ ಪ್ರಾಣಿಗಳಿಂದ ತಪ್ಪಿಸಿಕೊಲ್ಲಬಲ್ಲರು .ಇನ್ನು ಇವರ ಚುರುಕು ನೋಟದ ಬಗ್ಗೆ ಹೇಳುವುದೇ ಬೇಡ ಯಾವುದೇ ಮೂಲೆಯಲ್ಲಿನ ಪೊದೆಯಲ್ಲಿ ಯಾವ ಪ್ರಾಣಿ ಇದ್ದರೂ ಇವರ ಕಣ್ಣು ತಪ್ಪಿಸಲು ಸಾಧ್ಯವಿಲ್ಲ !! ನಾವು ನೋಡಿದ ಯಾವ ಹಾಡಿಯಲ್ಲಿಯೂ ಮಕ್ಕಳು ಕಣ್ಣಿಗೆ ಕನ್ನಡಕ ಹಾಕಿದ್ದು ನೋಡಲಿಲ್ಲ !! ಒಟ್ಟಿನಲ್ಲಿ ಕಾಡಿಗೆ ಹೋಗುವುದರಿಂದ ಮನುಷ್ಯನ ಕಣ್ಣು, ಮೂಗು, ಕಿವಿ ಚುರುಕಾಗುವುದಂತೂ ನಿಜ!!ನಮಗೆ ಆ ಅನುಭವ ಆಗಿದೆ!!! ನೀವು ಪ್ರಯತ್ನಿಸಿ. !!!
ಬಿಳಿಗಿರಿಯ ಬನದಲ್ಲಿ..೦೫ ಬನದೊಳಗೆ ನಲಿದಿಹ ವೆಂಕಟೇಶ!!
Monday, January 18, 2010
ಚಾಮಯ್ಯ ಮೇಷ್ಟ್ರು ರಾಮಾಚಾರಿ ಹಿಂಬಾಲಿಸಿಕೊಂಡು ಹೊರಟೆ ಹೋದರು!!!
ಕನ್ನಡ ಚಿತ್ರ ರಂಗದ ಶಿಸ್ತಿನ ನಟ ,ಅಜಾತ ಶತ್ರು ,ಸಹೃದಯಿ ಜೀವಿ ಶ್ರೀ ಕೆ.ಎಸ. ಅಶ್ವಥ್ ತಮ್ಮ ೮೫ ನೆ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.ರಾಮಾಚಾರಿ ಹಾಗೂ ಚಾಮಯ್ಯ ಮೇಷ್ಟ್ರು ಇಬ್ಬರು ಮೈಸೂರಿನಲ್ಲೇ ಅಂತಿಮ ಯಾತ್ರೆ ಮುಗಿಸಿದ್ದು ಕಾಕತಾಳಿಯ !! ಯಾವ ನಟನೆ ಆಗಲಿ ಇವರ ಶಿಸ್ತು ಬೆಳೆಸಿಕೊಂಡರೆ ,ಆದರ್ಶ ಬೆಳೆಸಿಕೊಂಡರೆ ಉತ್ತಮಮನುಷ್ಯರಾಗ ಬಲ್ಲರು ಎಂಬುದಕ್ಕೆ ಇವರ ಜೀವನವೇ ಸಾಕ್ಷಿ .ಕನ್ನಡ ಭಾಷೆಯ ಮೇಲಿನ ಹಿಡಿತ,ಉಚ್ಚಾರಣೆ, ಪಾತ್ರ ನಿರ್ವಹಣೆಯಲ್ಲಿ ಇವರ ತಲ್ಲೀನತೆ,ವ್ಯಕ್ತ ಪಡಿಸುವ ಭಾವನೆಗಳು, ಸಮಯ ಪಾಲನೆ, ನಟನಾ ವೃತ್ತಿಯಲ್ಲಿ,ವಯಕ್ತಿಕ ಜೀವನದಲ್ಲಿನ ಶಿಸ್ತು, ಹಲವರಿಗೆ ದಾರಿ ದೀಪ ವಾಗಿ,ಅನುಕರಣೀಯವಾಗಿ, ಉಳಿಯುತ್ತದೆ. ಕನ್ನಡ ತಾಯಿಯ ಕಿರೀಟ ದಿಂದ ಮತ್ತೊಂದು ರತ್ನ ಕೆಳಗೆ ಬಿದ್ದಿದೆ.ನನ್ನ ಹೃದಯ ತುಂಬಿದ ಕಂಬನಿಯ ಅಂತಿಮ ನಮನ ಈ ಮೇರು ನಟ ಅಶ್ವಥ್ ರವರಿಗೆ.ನಮಸ್ಕಾರ ಮೇಷ್ಟ್ರೇ ಹೋಗಿಬನ್ನಿ!!!
Sunday, January 17, 2010
ಬಿಳಿಗಿರಿಯ ಬನದಲ್ಲಿ ..೦೪ ಹೊನ್ನ ಮೇಟಿ ಬೆಟ್ಟದ ಮೇಲೆ ಸಂತಸದ ಸರಮಾಲೆ!!
ಬಿಳಿಗಿರಿಯ ಬನದ ನಮ್ಮ ಓಡಾಟ ಮುಂದುವರೆದು ಮರುದಿನಕ್ಕೆ ಕಾಲಿಟ್ಟಿತು.ಮುಂಜಾನೆ ಚುಮು ಚುಮು ಚಳಿಯಲ್ಲಿ ಅಲ್ಲೇ ಹಾಕಿದ್ದ ಕ್ಯಾಂಪಿನ ಬೆಂಕಿಯಲ್ಲಿ [ರಾತ್ರಿವೇಳೆ ಕಾಡು ಪ್ರಾಣಿಗಳಿಂದ ರಕ್ಷಿಸಿ ಕೊಳ್ಳಲು ಹಾಕಿರುತ್ತಾರೆ] ಬೆಂಕಿ ಕಾಯುತ್ತಾ ಬಿಸಿ,ಬಿಸಿ, ಕಾಫಿ ಹೀರುತ್ತಾ ಹೊನ್ನ ಮೇಟಿ ಕಲ್ಲು ಬೆಟ್ಟಕ್ಕೆ ಹೋಗಲು ತೀರ್ಮಾನಿಸಿದೆವು.ಬುರುಡೆ ಕ್ಯಾಂಪಿನಿಂದ ಹೊಂನಮೆತಿಕಲ್ಲು ಬೆಟ್ಟಕ್ಕೆ ಸುಮಾರು ೨೦.ಕಿ.ಮೀ ಹಾದಿ. ಚಳಿಗೆ ಸ್ನಾನದ ಯೋಚನೆ ತೊರೆದು ಪಯಣ ಆರಂಭಿಸಿದೆವು. ಹಾದಿಯ ಎರಡೂ ಕಡೆ ಪ್ರಕೃತಿ ಮಾತೆ ಚೆಲುವಿನ ಚಿತ್ತಾರ ಬಿಡಿಸಿ ಮನಸೂರೆ ಗೊಂಡಿದ್ದಳು. ನಮ್ಮ ಕ್ಯಾಮರ ಗಳಿಗಂತೂ ಬಿಡುವಿಲ್ಲದ ಕೆಲಸಾ!!,ದಾರಿ ಯುದ್ದಕ್ಕೂ ಕಿತ್ತಳೆ,ಕಾಫಿಯ ಸವಾಸನೆ ಸೂಸುವ ಮರ ಗಿಡಗಳು., ಹಾಗೆ ಚಲನೆಗೆ ಸವಾಲಾದ ಕಡಿದಾದ ಹಾದಿ.ಎದೆ ನಡುಗಿಸುವ ಆಳವಾದ ಕಣಿವೆ ದಾಟಿ ಪಯಣ ಸಾಗಿತ್ತು.ಹೊನ್ನ ಮೆತಿಕಲ್ಲು ನಮ್ಮನ್ನು ಕೈ ಬೀಸಿ ಕರೆದಿತ್ತು. ಹೊನ್ನ ಮೇಟಿ ಕಲ್ಲು ಸಮುದ್ರ ಮತ್ತ ದಿಂದ ೯೦೦೦ ಅಡಿ ಎತ್ತರವಾಗಿದ್ದು !!ಬಿಳಿಗಿರಿ ಶ್ರೇಣಿಯ ಬೆಟ್ಟಗಳಲ್ಲಿ ಎತ್ತರವಾದ ಬೆಟ್ಟವೆಂದು ತಿಳಿದು ಬಂತು.ಹೊನ್ನ ಮೇಟಿ ಕಲ್ಲು ಹತ್ತಿದ ನಮಗೆ ಶುದ್ದ ತಂಗಾಳಿ ಚಾಮರ ಬೀಸಿ ಸ್ವಾಗತ ಕೋರಿದ ಅನುಭವ.ಹಸಿರ ಹೊದ್ದ ಬಿಳಿಗಿರಿಯ ಬನ ಸಿಂಗಾರ ಮಾಡಿ ಕೊಂದು ನಲಿದಿತ್ತು.ಅಲ್ಲೇ ಇದ್ದ anti poaching camp ನೋಡಿದಾಗ ನಮಗೆ ಆಶ್ಚರ್ಯ ವಾಯಿತು ಇಲ್ಲಿಯಾವ ಪ್ರಾಣಿ ಇಷ್ಟು ಎತ್ತರ ಹತ್ತಿ ಬರುತ್ತೆ ಅಂತ ಮನೆ ಕಟ್ಟಿದ್ದಾರೆ ಅಂತ!! ಅದಕ್ಕೆ ಉತ್ತರವಾಗಿ ಅಲ್ಲೇ ಸನಿಹದಲ್ಲಿದ್ದ ಒಂದು ಬೆಟ್ಟದ ಮೇಲೆ ಸಾರಂಗ ನಿಂತು ನಮ್ಮ ಪ್ರಶ್ನೆಗೆ ಉತ್ತರ ನೀಡಿ ಕ್ಯಾಮರದಲ್ಲಿ ಸೆರೆಯಾಯಿತು .ಅಲ್ಲೇ ಇದ್ದ ಒಂದು ಹಾಸು ಬಂದೆ ಹಾಗೂ ಇನ್ನೊಂದು ಎತ್ತರದ, ಇಳಿಜಾರಿಗೆ ವಾಲಿದ ಕಲ್ಲುಗಳು ಮನಸೆಳೆದು ನಮ್ಮಲ್ಲಿದ್ದ ಹುಡುಗುತನ ಜಾಗೃತವಾಗಿ ನಾವೇ ಹೀರೋಗಳು ಅಂತ ಅನ್ಕೊಂಡು ವಿವಿಧ ಬಗೆಯಲ್ಲಿ ನೆಗೆದಾಡಿ ಕೈ ಕಾಲು ಗಳಿಗೆ ಕಸರತ್ತು ನೀಡಿದೆವು.ಹಾಗೆ ಸಾಗಿದ ನಮ್ಮ ತುಂಟಾಟ ಬಹಳ ಹೊತ್ತು ನಡೆಯದೆಹೊಟ್ಟೆ ಅಲಾರಂ ನೀಡಿದಾಗ ಮದ್ಯಾಹ್ನ ೨ ಘಂಟೆ ಆಗಲೇ ನಮಗೆ ತಿಳಿದದ್ದು ನಾವು ಬೆಳಿಗ್ಗೆ ತಿಂಡಿ ತಿಂದೆ ಇಲ್ಲಾ ಅಂತ !!ಹಸಿವ ಮರೆಸಿ ಚೆಲುವ ಸುರಿಸಿ ಆನಂದ ನೆಡಿದ ಆ ಪ್ರಕೃತಿ ಮಾತೆಗೆ ಎಷ್ಟು ನಮಿಸಿದರೂ ಸಾಲದು.
Subscribe to:
Posts (Atom)