Saturday, February 27, 2010

ಕಳ್ಳನನ್ನು ಪೋಲಿಸ್ ಗೆ ಹಿಡಿದು ಕೊಟ್ರೆ !!ಪೊಲೀಸರು ಕಳ್ಳನನ್ನು ಹಿಡಿದದ್ದು ನಾವೇ ಅನ್ನೋದೇ??

ಈ ಫೋಟೋದಲ್ಲಿ ಇದಾನಲ್ಲ ಇವನು ನನ್ನ ಸ್ನೇಹಿತ ಬಿಂದು ಕುಮಾರ ಅಂತ .ಇವನು ಒಂತರ ಸಮಾಜ ಸೇವಕ ,[ ಕ್ಷಮಿಸಿ ಸಾಮಾನ್ಯವಾಗಿ ದುಡ್ಡು ಮಾಡೋ ಸಮಾಜ ಸೇವಕರಂತೆ  ಇವನಲ್ಲ]ಬೆಂಗಳೂರಿನಲ್ಲಿ  ಏನಾದ್ರೂ ಸಾಹಸ ಮಾಡುತ್ತಿರುತ್ತಾನೆ ,ತುಂಬಾ ಸಾದಾ ಸೀದಾ  ಮನ್ಶ !! ಹಿಂದೊಮ್ಮೆ ರಸ್ತೆ ಬದಿಯ ಪಾನಿ ಪೂರಿ ಅಂಗಡಿಯಲ್ಲಿ  ಪಾನಿ ಪೂರಿತಿಂದು  ದುಡ್ಡು ನೀಡದೆ ಹೋಗುತ್ತಿದ್ದ  ಪೋಲಿಸ್ ನವರನ್ನು  ಬೈದು ಪಾನಿಪೂರಿ ಅಂಗಡಿಯವನಿಗೆ  ದುಡ್ಡು ಕೊಡಿಸಿದ್ದ !!! ಹಿಂದೊಮ್ಮೆನಾವು ಕೆಲವರು ಶ್ರೀ ರಂಗ ಪಟ್ಟಣದಲ್ಲಿ  ಜೀವ ಕಳೆದು ಕೊಳ್ಳಲು ಬಂದಿದ್ದ ಹುಡುಗಿಯ ರಕ್ಷಿಸಿ ಅವಳನ್ನು ಪೋಷಕರಿಗೆ ಒಪ್ಪಿಸುವ ಸಂಧರ್ಭದಲ್ಲಿ ಬೆಂಗಳೂರಿನ ಜನ ಸಾಗರದಲ್ಲಿ ಹುಡುಗಿಯ ಪೋಷಕರನ್ನು ಪತ್ತೆಹಚ್ಚಿದ್ದ !!ಜೀವನದ ನಿರ್ವಹಣೆಗೆ ಒಳ್ಳೆ  ಬಿಸಿನೆಸ್  ಇದೆ, ಮೂಲತಹ  ಸಿವಿಲ್  ಇಂಜಿನಿಯರ್ ,ಆದ್ರೆ ಸಮಾಜದಲ್ಲಿ ತಪ್ಪು ಕಂಡರೆ ತಕ್ಷಣ ಸಿಡಿಯುತ್ತಾನೆ! ಇವನ ಇತ್ತೀಚಿನ ಸಾಹಸ ಓದಿ . ಮೊನ್ನೆ ಅಂದ್ರೆ ವಾರದ ಹಿಂದೆ ೧೯/೦೨/೨೦೧೦ ರಂದು  ಬೆಂಗಳೂರು ಗಿರಿನಗರದ  ಸರ್ಕಲ್ ಬಳಿ ತನ್ನ ಬೈಕಿನಲ್ಲಿ ಹೊರಟಿದ್ದಾನೆ. ಎದುರುಗಡೆ ನಾಲ್ಕು ಹುಡುಗರು ಓಡಿಬರುತ್ತಿದ್ದಾರೆ,ಹಿಂದೆ ಸ್ವಲ್ಪ ದೂರದಲ್ಲಿ ಕೆಲವರು ಅಟ್ಟಿಸಿಕೊಂಡು ಬರುತ್ತಿರುವುದು ಕಂಡು ಓಡುತ್ತಿದ್ದವರು ಕಳ್ಳರೆಂದು ತಿಳಿದು ಒಬ್ಬನನ್ನು ಅಟ್ಟಿಸಿಕೊಂಡು ಹೋಗಿ ಹಿಡಿದ್ದಿದ್ದಾನೆ ,ಉಳಿದ ಮೂರು ಜನ ಪರಾರಿಯಾಗಿದ್ದಾರೆ. ಹಿಡಿದ ಸ್ವಲ್ಪ ಸಮಯಕ್ಕೆ ಓಡಿಬಂದ ಒಬ್ಬ ಸಾರ್ ಇವನು  ಹಾಗು ಇತರ ಮೂರುಜನ  ನನಗೆ ಚಾಕು ತೋರಿಸಿ ನನ್ನ ಚಿನ್ನದ ಚೈನು ,ಹಾಗು ಪರ್ಸನ್ನು ಕಿತ್ತುಕೊಂಡು ಓಡಿ ಬರುತ್ತಿದ್ದಾರೆ ಅಂತ ಹೇಳಿದ್ದಾನೆ.ಅದನ್ನು ಕೇಳಿ   ಸಿಕ್ಕಿ ಬಿದ್ದಿದ್ದ ಒಬ್ಬನು  ತನ್ನ ಬಳಿ ಚೈನು ಪರ್ಸು ಇರುವುದಾಗಿಯೂ ಅದನ್ನು ಕೊಡುತ್ತೇನೆ ನನ್ನು ಬಿಟ್ಟುಬಿಡಿ  ಅಂತ ಅಂಗಲಾಚಿದ್ದಾನೆ. ಆಯ್ತು ತೆಗಿ ಅಂದ್ರೆ ಜೇಬಿನಿಂದ  ಚಾಕು ತೆಗೆದು  ನನ್ನ ಸ್ನೇಹಿತನಿಗೆ ಚುಚ್ಚಲು ಪ್ರಯತ್ನಿಸಿದ್ದಾನೆ!! ನನ್ನ ಸ್ನೇಹಿತ ಬಿಂದು,ತಪ್ಪಿಸಿಕೊಂಡು  ಅವನಿಗೆ ಎರಡು ಡಿಶುಂ  ಡಿಶುಂ  ಮಾಡಿ ಬುದ್ದಿ  ಕಲಿಸಿ ಕಳ್ಳ ನಿಂದ  ಚಿನ್ನದ ಚೈನು ಹಾಗು ಪರ್ಸು ಎರಡನ್ನು ಕಳೆದು ಕೊಂಡಿದ್ದವನಿಗೆ ವಾಪಸ್ಸು ಕೊಡಿಸಿದ್ದಾನೆ ನಂತರ  ಪೋಲಿಸಿನ  ಗರುಡ ದವರಿಗೆ ಮಾಹಿತಿ ನೀಡಿ ಕಳ್ಳನನ್ನು ಪೋಲೀಸಿನವರಿಗೆ ಒಪ್ಪಿಸಿ ಕಳೆದು ಕೊಂಡಿದ್ದ ವ್ಯಕ್ತಿಗೆ  ಪೋಲಿಸ್ ದೂರು ನೀಡಲು ತಿಳಿಸಿ  ತನ್ನ ಕೆಲಸಕ್ಕೆ ಹೋಗಿ ದ್ದಾನೆ.ಸ್ವಲ್ಪ ಹೊತ್ತಿಗೆ ತನ್ನ ಬಲಕೈ ನೋವಾಗಿರುವುದು ತಿಳಿದು ವೈದ್ಯರ ಬಳಿ ಹೋದ್ರೆ ಬೆರಳಿನಮೂಳೆ ಮುರಿದಿದೆ ಶಸ್ತ್ರ ಚಿಕಿತ್ಸೆ ಮಾಡಿಸಿ ಅಂದ ಕಾರಣ  ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು  ಪೋಲಿಸ್ ಕಥೆ ಏನಾಯ್ತು ಅಂತ  ಸ್ಟೇಶನ್ ಗೆ ಹೋದ್ರೆ  ಇನ್ಸ್ಪೆಕ್ಟರ್  ಸಾಹೇಬರನ್ನ  ಏನಾಯ್ತು ಸಾರ್ ಆ ಕೇಸು  ಅಂತ ಕೇಳಿದ್ರೆ  ಅದಾ ನಾವೇ ಕಳ್ಳನನ್ನ ಹಿಡಿದು ಪಾಪ ಮಾಲಿಕರಿಗೆ ಚಿನ್ನದ ಚೈನು ಹಾಗು ಪರ್ಸನ್ನು ಕೊಡ್ಸಿದ್ವಿ ಕಣ್ರೀ ಅನ್ನೋದೇ !!! ನನ್ನ ಸ್ನೇಹಿತ ಆಶ್ಚರ್ಯದಿಂದ  ಹೌದಾ ಸಾರ್  ಅಂದ್ರೆ ನಿಮ್ಮಾಣೆಗೂ  ಸತ್ಯ ಅಂತ ಹೇಳಿದ್ದಾರೆ !! ಇನ್ನು ಚೈನು  ಪರ್ಸು ವಾಪಸ್ಸು ಪಡೆದ ಪುಣ್ಯಾತ್ಮಕೃತಜ್ಞತೆಯ ಒಂದು ಮಾತು ಹೇಳದೆ ಹೋಗಿದ್ದಾನೆ. ನನ್ನ ಸ್ನೇಹಿತ  ಅವನ ಗೆಳೆಯರಾದ  ಕೆಲವು ದಿ.ಎಸ.ಪಿ. ಹಾಗು ಇತರ ಹಿರಿಯ  ಪೋಲಿಸ್ ಅಧಿಕಾರಿಗಳಿಗೆ ಹೇಳಿ ತಮಾಷೆ ಮಾಡಿದ್ರೆ  ಗುರು ನಿಂಗೆ ಗೊತ್ತಿಲ್ವ ಕಳ್ಳನನ್ನು ಹಿಡ ಬಾಬ್ತು ದೊರೆಯುವ  ಅವಾರ್ಡ್ ಹಣಕ್ಕಾಗಿ ಅಷ್ಟೇ  ಅಂದಿದ್ದಾರೆ .  ಬೆಂಗಳೂರಿನಲ್ಲಿ ಕೆಮ್ಮಿದರೂ ಪ್ರತ್ಯಕ್ಷ ವಾಗುವ  ಟಿ.ವಿ ಗಳು ಯಾಕೋ ಇದನ್ನು ಗಮನಿಸಿಲ್ಲ !! ನನ್ನ ಸ್ನೇಹಿತನಿಗೆ ಈ ಘಟನೆ ಇಂದ ನೋವಾಗಿಲ್ಲ  ಆದರೂ ಒಂದು ಒಳ್ಳೆ ಕೆಲಸ ಮಾಡುವ ಮನಸ್ಸಿನ ವ್ಯಕ್ತಿಗೆ ಸಮಾಜದ ಕಾಣಿಕೆ ಇದೆ ತರಹ  ಆಗಭಾರದು. ನನ್ನ ಸ್ನೇಹಿತನಿಗೆ [ ಕ್ಷಮಿಸಿ  ಬ್ಲಾಗಿನಲ್ಲಿ  ಬರಿಬೇಡ ಅಂದಿದ್ದ  ಆದರೂ ಬರೆದಿದ್ದೇನೆ ] ಚೀರ್ಸ್  ಹೇಳೋಣ ಅಲ್ವ . ಅವನ ಸಂಚಾರಿ ತರಂಗಿಣಿ  ೯೮೪೫೦೬೭೧೨೯ [9845067129]  ನೀವೂ ಸಾದ್ಯ ಆದ್ರೆ ಥ್ಯಾಂಕ್ಸ್ ಹೇಳಿಬಿಡಿ.

Friday, February 26, 2010

ಮರಳಿನ ಮೇಲೆ ಆಟ ಮಕ್ಕಳಿಗೆ ತುಂಬಾ ಇಷ್ಟ !!






ಮೊನ್ನೆಬೆಂಗಳೂರಿನಲ್ಲಿ ನೆಂಟರ ಮನೆಯ ಗೃಹ ಪ್ರವೇಶ ವಿತ್ತು . ಎಲ್ಲರಿಗೂ ಸಂಬ್ರಮ ಸಡಗರ  ಓಡಾಡ ನಡೆದಿತ್ತು.ಪೂಜೆ ಮಾತುಕತೆ ಯಲ್ಲಿ ಜೊತೆಯಲ್ಲಿ ಬಂದಿದ್ದ ಮಕ್ಕಳು ಎಲ್ಲಿ ಹೋದರು ಅಂತ ನೆನಪಿನಲ್ಲಿ ಇರಲಿಲ್ಲ .ನೆನಪಿಸಿಕೊಂಡು ಮಕ್ಕಳು ಯೆಲ್ಲಿಹೊದ್ರು ಅಂತ ನೋಡಿದ್ರೆ  ಮನೆಯ ಮುಂದೆ ಅಂಗಳದಲ್ಲಿ  ಹರಡಿದ್ದ ಮರಳಿನ ಮೇಲೆ ಮಕ್ಕಳು ಆಟ ಆಡ್ತಾ  ಮಕ್ಕಳು ಆನಂದದಿಂದ ಮೈಮರೆತಿದ್ರು!!! ಮಕ್ಕಳ ಮೈ ಮೇಲೆ ಮರಳಿನ ಕಣಗಳು  ಸವಾರಿ ಮಾಡಿದ್ದವು.ಏ ಮಕ್ಕಳೇ ಇತ್ತ ಬನ್ರೋ ಮೈ ಮೇಲೆಲ್ಲಾ  ಮಣ್ಣು ಹಾಕೊಂಡು ನೋಡ್ರಿ ಬಟ್ಟೆ ಎಲ್ಲ ಕೊಲೆ ಮದ್ಕೊಂಡಿವೆ ಅಂತ ಹಲವರ ದೂರು ಬೇರೆ !! ಆದ್ರೆ  ಅಪ್ಪಂದಿರ,ದೊಡ್ಡಪ್ಪಂದಿರ ,ಚಿಕ್ಕಪ್ಪಂದಿರ  ಸಪೋರ್ಟು ಮಕ್ಕಳಿಗೆ ಸಿಕ್ಕೆ ಬಿಡೋದೇ. ನಾವು ಹೇಳಿದ್ದು ಇಷ್ಟು  ಅಲ್ರಿ ಮಕ್ಕಳಿಗೆ ಬೆಂಗಳೂರಿನಲ್ಲಿ ಮಕ್ಕಳಿಗೆ ಮರಳು ಸಿಕ್ಕಿ ಆಟ ಆಡೋದೇ ಕಷ್ಟ ಅಂತಾದ್ರಲ್ಲಿ ತಡೆಯೋದೆ ಅಂತ ವಾದಿಸಿದ್ವಿ .ಅಲ್ರಿ ನಾವೂ ಮಕ್ಕಳಾಗಿದ್ದಾಗ ಮಣ್ಣು,  ನೀರು, ಮರ ಅಂತ ಎಲ್ಲ ತಾರಾ ಆಟ ಆಡಿದ್ವಿ, ಇವರಿಗೆ ಯಾಕೆ ನಿರ್ಭಂದ ವಿಧಿಸಿ ನೀರು ಹತ್ರ ಹೋಗಬೇಡ,ಮಣ್ಣಿನಲ್ಲಿ ಆಡಬೇಡ ,ಮರ ಹತ್ತ ಬೇಡ ಅಂತ ಹೇಳಿ ಎಲ್ಲದರ ಬಗ್ಗೆ ಹೆದರಿಕೆ ಹುಟ್ಟಿಸಿ ಅವರನ್ನು  ಹೆದರಿಸಿ ಪುಕ್ಕಲ ರನ್ನಾಗಿ ಮಾಡ್ಬೇಕು ಅಂದದ್ದು ಕೆಲವರಿಗೆ ಆಶ್ಚರ್ಯ ವಾಗಿತ್ತು .ನೀವೇ ಹೇಳಿ ನಾವು ಮಾಡಿದ್ದು ಸರಿನಾ ಅಂತ ??? ಪುಟ್ಟ ಪೋರರು ಮಾಡಿದ ತುಂಟಾಟದ  ಚಿತ್ರ ನಿಮಗಾಗಿ.ಎಚ್ಚರ  ನಿಮ್ಮ ಬಾಲ್ಯ ನೆನಪಿಗೆ ಬಂದೀತು !!1

Friday, February 19, 2010

ಕಂದು ಬಣ್ಣದ ಹೆಜ್ಜಾರ್ಲೆ [ಸ್ಪಾಟ್ ಬಿಲ್ಲಡ್ ಪೆಲಿಕನ್ ]



ಕಂದು ಬಣ್ಣದ ಹೆಜ್ಜಾರ್ಲೆ ನೋಡದವರು ಯಾರು ಇಲ್ಲ !!ಸಾಮಾನ್ಯ ವಾಗಿ ಈ ಹಕ್ಕಿಯನ್ನು ಬಾತು ಕೋಳಿ  ಅಂತ ಭಾವಿಸಿ ನೋಡಿರುತ್ತೇವೆ. ಆದ್ರೆ ಇದು ಕಂದು ಹೆಜ್ಜಾರ್ಲೆ [ಸ್ಪಾಟ್ ಬಿಲ್ಲಡ್ ಪೆಲಿಕನ್] ಅಂತ ಕರೆಯುತ್ತಾರೆ.ಗಂಡು ,ಹೆಣ್ಣು ನೋಡಲು ಒಂದೇ ತರವಿದ್ದು ಸಾಮಾನ್ಯ ವಾಗಿ ಗುಂಪಿನಲ್ಲಿ ವಾಸಿಸುತ್ತವೆ . ವಾಸಕ್ಕೆ ನೀರಿನ ಆಸರೆ ಬೇಕೇ ಬೇಕು.ಇವುಗಳಲ್ಲಿ ಎರಡು ಬಗೆಯ ಪ್ರಬೇದಗಲಿದ್ದು ಇನ್ನೊಂದು ಬಿಲಿಹೆಜ್ಜಾರ್ಲೆ [ಗ್ರೇಟ್ ವೈಟ್ ಪೆಲಿಕನ್] ಉತ್ತರ ಭಾರತದಲ್ಲಿ ಹೆಚ್ಚಾಗಿ ಕಾಣಸಿಗುತ್ತವೆ.ನಮ್ಮಲ್ಲಿ ಹೆಚ್ಚಾಗಿ ಕಂದು ಹೆಜ್ಜಾರ್ಲೆ ಕಂದು ಬರುತ್ತವೆ.ಇವು ಮೀನಾ ಹಾರಿ  ಮೀನು ಬಿಟ್ಟು ಬೇರೆ ಏನನ್ನು ತಿನ್ನಲು ಒಲ್ಲವು.ಭಾನಿನಲ್ಲಿ ಅತಿ ಎತ್ತರಕ್ಕೆ ಹಾರಿ ದೂರದ ಕೆರೆಗಳಿಗೆ ಹೋಗಿ ಮೀನು ಶಿಖಾರಿ ಮಾಡಿ ಜೀವಂತ ಮೀನನ್ನು ತಾಣ ಗಂಟಲ ಬಳಿ ಇರುವ ಚೀಲದಲ್ಲಿ  ಇಟ್ಟುಕೊಂಡು ಬಂದು ತನ್ನ ಮರಿಗಳಿಗೆ ಜೀವಂತ ಮೀನಿನ ಗುಟುಕು ಕೊಡುತ್ತದೆ.ನೋಡಲು ಸುಂದರ ಮನೋಹರ ಈ ಹೆಜ್ಜಾರ್ಲೆ ನೀರಿನಲ್ಲಿ ತೇಲುವಾಗ ನೋಡಲು ಅಮೊಘವಾಗಿರುತ್ತದೆ.ನೀವು ನೋಡಿ ಆನಂದಿಸಿ.

Thursday, February 18, 2010

ಹಕ್ಕಿ ಹುಡುಕಾಟ ...೦೩ ನೀಲಿ ಮಿಂಚುಳ್ಳಿ .[ ಕಿಂಗ್ ಫಿಷೆರ್ ]


ಸಾಮಾನ್ಯ ವಾಗಿ ನಿಮ್ಮ ಊರಿನ ಕೆರೆಯ ಬಳಿ ಯಾವುದಾದರು ಮರದ ರೆಂಬೆಯ ಕವಲು, ಅಥವಾ ಕಲ್ಲು ಬಂದೆ ಯಾ ಮೇಲೆ ಇದು ಕುಳಿತಿರುವುದು ನಿಮ್ಮ ಗಮನಕ್ಕೆ ಬಂದಿರುತ್ತದೆ.ಇದರದೇ  ಜಾತಿಯ ಬೇರೆ ಹಕ್ಕಿಗಳಿಗಿಂತ ಧೈರ್ಯವಂತ ಇದು. ನೀರಮೇಲೆ  ಹೆಲಿಕಾಪ್ಟರ್ ನಂತೆ ನಿಂತು ನೀರಿನ ಒಳಗಡೆ ಮೀನು ಕಂಡು ಬಂದ ತಕ್ಷಣ ಮಿಂಚಿನಂತೆ ನೀರಿನೊಳಗೆ ನುಗ್ಗಿ ಕ್ಷಣದಲ್ಲಿ  ಮೀನು ಹಿಡಿಯುವ ಚಾಣಾಕ್ಷ ಇದು.ಕ್ಯಾಮರಾಗೆ ಅಪರೂಪಕ್ಕೆ ಸಿಗುವ ಇದು ಮಿಂಚುಳ್ಳಿ ಜಾತಿಯ ಪಕ್ಷಿಗಳಲ್ಲಿ ಇತರ ವರ್ಗದ ಹಕ್ಕಿ ಗಳಿಗಿಂತ ಚಿಕ್ಕದು. ನಿಮ್ಮೂರಲ್ಲಿ ಕಂಡರೆ ನೀವು ನೋಡಿ ಆನಂದಿಸಿ ನಮಗೂ ತಿಳಿಸಿ.

Sunday, February 14, 2010

ಮೈಸೂರಿನ ಕನ್ನಡ ಪುಸ್ತಕ ಜಾತ್ರೆ !! ಅಜ್ಞಾನದ ಜ್ವರಕ್ಕೆ ಒಳ್ಳೆಯ ಮಾತ್ರೆ!!! ಪ್ರಕಾಶಕರೇ ನಿಮ್ಮ ನಗು ಎಲ್ಲಿ??

ಮೈಸೂರಿನಲ್ಲಿ ೨೦೧೦ ರ ಫೆಬ್ರವರಿ ೧೦ ರಿಂದ ೧೪ ರವರೆಗೆ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಕನ್ನಡ ಪುಸ್ತಕ ಪ್ರದರ್ಶನ ಹಾಗು ಮಾರಾಟ ಮೇಳ ಏರ್ಪಡಿಸಲಾಗಿತ್ತು. ಕರ್ನಾಟಕದ ಪ್ರಸಿದ್ದ ಪ್ರಕಾಶಕರುಗಳು ಇಲ್ಲಿ ಭಾಗವಹಿಸಿ ಮೈಸೂರಿನ ಜನಕ್ಕೆ ಜ್ಞಾನ ಭಂಡಾರ ತೆರೆದಿಟ್ಟರು.ಸ್ವಾಮೀ ನಾನು ಸಹ ಈ ಮೇಳದಲ್ಲಿ ಪುಸ್ತಕ ಖರೀದಿಸಲು ತೆರಳಿದ್ದೆ , ಅಲ್ಲಿ ನನಗೆ ಕಂಡದ್ದು ಸೋಜಿಗವಾಗಿತ್ತು!!.






--------------------------------------------------------------------------------



ಅಲ್ಲ ಸ್ವಾಮೀ ಪುಸ್ತಕ ಪ್ರದರ್ಶಿಸಲು ಬಂದಿದ್ದ ಅಂಖಿತ ಪ್ರಕಾಶನ, ನವಕರ್ನಾಟಕ ಪ್ರಕಾಶನ , ಸ್ವಪ್ನ ಬುಕ್ ಸ್ಟಾಲ್, ಗೀತ ಬುಕ್ ಹೌಸ್ , ಸಾಹಿತ್ಯ ಭಂಡಾರ, ಪ್ರಸಾರಾಂಗ,ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಪುಸ್ತಕ ಪ್ರಾಧಿಕಾರ, ದೂರದ ಹುಬ್ಬಳ್ಳಿ,ಧಾರವಾಡ, ಬೆಳಗಾವಿ, ಮಂಗಳೂರು, ಮುಂತಾದ ಕಡೆಗಳಿಂದ ಪ್ರಕಾಶಕರು ಬಂದಿದ್ದು ಮೈಸೂರಿನ ಪುಸ್ತಕ ಪ್ರೇಮಿಗಳಿಗೆ ಹಬ್ಬವಾಗಿತ್ತು!!ಒಟ್ಟಿನಲ್ಲಿ ನಮ್ಮ ಅಜ್ಞಾನದ ಜ್ವರಕ್ಕೆ ಈ ಪುಸ್ತಕ ಜಾತ್ರೆ ಒಳ್ಳೆಯ ಮಾತ್ರೆ !!! ಖಂಡಿತ ಹೌದು. ನಾನು ಸಹ ಪುಸ್ತಕ ಲೋಕದೊಳಗೆ ಒಂದುಸುತ್ತು ಬಂದೆ!! ಒಳಬಂದ ನಾನು /ನನ್ನಂತೆ ಹಲವರು ಸ್ಟಾಲ್ ಗಳೊಳಗೆ ಹೊಕ್ಕರೆ ಮಾನ್ಯ ಪ್ರಕಾಶಕರು /ಅಥವಾ ಅಲ್ಲಿದ್ದ ಮಹನೀಯರು ಸರಿಯಾದ ಮಾಹಿತಿ ನೀಡುತ್ತಿರಲಿಲ್ಲ !!ಇನ್ನು ಹೇಳಬೇಕೆಂದರೆ ಅವರಿಗೆ ಅವರ ಪ್ರಕಾಶನದ ಪ್ರಕಟಣೆಯ ಪುಸ್ತಕಗಳನ್ನು ಓದುಗರಿಗೆ ತಲುಪಿಸುವ ಯಾವುದೇ ಉತ್ಸಾಹ ಇರಲಿಲ್ಲ [ನಾನು ಹಲವು ಭಾರಿ ಹೋದಾಗ ಕಂಡುಬಂದ ಸಾಮಾನ್ಯ ದೃಶ್ಯ ], ಅವರ ಹೆಮ್ಮೆಯ ಪ್ರಕಟಣೆಗಳ ಬಗ್ಗೆ ಅವರಿಗೆ ಹೆಮ್ಮೆ ಇರಲಿಲ್ಲ !! ಸಾಮಾನ್ಯ ಓದುಗರ ಪ್ರಶ್ನೆಗಳಿಗೆ ಅಸಹನೆಯ ಉತ್ತರ ಮಾರಾಟಗಾರರಿಂದ ಬರುತಿತ್ತು.ಇಷ್ಟೆಲ್ಲಾ ಅದ್ವಾನಗಳ ನಡುವೆಯೂ ಇದು ಒಂದು ವ್ಯವಸ್ತಿತ ಪ್ರದರ್ಶನವಾಗಿ ಮೈಸೂರಿಗರ ಮನ ಗೆದ್ದಿತು.ಪ್ರದರ್ಶನದ ಒಂದು ನೋಟ ನಿಮಗಾಗಿ.ಮರೆತು ಹೋಗುವ ಮುನ್ನ ಒಂದು ಹಾಸ್ಯ ಸನ್ನಿವೇಶ ನಿಮಗೆ ಹೇಳ್ತೀನಿ ಕೇಳಿ ನಾನು ಹಾಗೆ ಮೈಸೂರಿನ ಪ್ರಸಾರಾಂಗ ಮಳಿಗೆಯಲ್ಲಿ ಪುಸ್ತಕ ನೋಡುತ್ತಿದ್ದ ವೇಳೆ ಅಲ್ಲಿದ್ದ ಮಳಿಗೆಯವರು ''ಸಾರ್ ಪುಸ್ತಕ ತಗೊಳ್ಳಿ ಸಾರ್ ಸಾರ್ ತಗೊಳ್ಳಿ ನಮ್ಮ ಪುಸ್ತಕ !!ನಿಮಗೆ ಅರ್ಥ ಆಗದಿದ್ರೆ ಬೇರೆಯವರಿಗೆ ಗಿಫ್ಟ್ ಕೊಡಿ '' ಅಂದ್ರೂ!!ಹೇಗಿದೆ ಅವರ ಪ್ರಕಟಣೆ ಬಗ್ಗೆ ತಿಳುವಳಿಕೆ ??ಹೆಮ್ಮೆ??/ನೋಡಿ ಸಾರ್!!!



 

Wednesday, February 3, 2010

ಹುಲಿಯ ಗಣತಿ ಮುಗಿಸಿಬಂದ ಸ್ನೇಹಿತ !!! ಹೊತ್ತುತಂದ ಮಾಹಿತಿಯ !!!


--------------------------------------------------------------------------------




ನನ್ನ ಸ್ನೇಹಿತ ದತ್ತ ಹುಲಿ ಗಣತಿ. ಮುಗಿಸಿಬಂದ .ಹೊಗೊಮೊದ್ಲು ಬಾಲು ಬರ್ತಿಯೇನೋ ''ಟೈಗೆರ್ ಸೆನ್ಸಸ್ ''ಗೆ ಅಂತ ಕರೆದಿದ್ದ ಆದ್ರೆ ನನ್ನ ಕಾರ್ಯಗಳ ಒತ್ತಡ ದಿಂದ ಹೋಗಲಾಗಲಿಲ್ಲ .ಹಿಂತಿರುಗಿ ಬಂದವ ಬಾಲು ನಿಮ್ಮನೆಗೆ ಬರ್ತೀನಿ ಕಣೋ ಫೋಟೋ ನಿಂಗೆ ತೋರ್ಸ್ಬೇಕು ಅಂತ ಫೋನ್ ಮಾಡಿ ಉತ್ತರಕ್ಕೂ ಕಾಯ್ದೆ ಬಂದೇಬಿಟ್ಟ .ಹುಲಿಗಣತಿ ಪ್ರತಿ ನಾಲ್ಕು ವರ್ಷಕೊಮ್ಮೆ ನಡೆಸಲಾಗುತ್ತದೆ .ಕಾಡಿನ ರೇಂಜ್ ಗಳ ವ್ಯಾಪ್ತಿಯಲ್ಲಿ ಸುಮಾರು ಮೂರು ಅಥವ ನಾಲ್ಕು ಕಿ.ಮೀ ದೂರಕ್ಕೆ ಒಂದು ''ಬೀಟ್ ''ರೂಟ್ ಅಂತ ಮಾಡಿ ಪ್ರತಿ ಬೀಟ್ ನಲ್ಲಿ ಇಬ್ಬರು ಸ್ವಯಂಸಹಾಯಕರು ,ಒಬ್ಬ ಅರಣ್ಯ ಸಿಬ್ಬಂದಿ ಯಂತೆ ತಂದ ರಚಿಸಿ ಗಣತಿಕಾರ್ಯ ಕೈಗೊಳ್ಳುತ್ತಾರೆ.ಬೆಳಿಗ್ಗೆ ೬.30 ಗಂಟೆ ಯಿಂದ ೧೧ ಗಂಟೆ ವರೆಗೆ ಪ್ರತಿದಿನ ಈ ಕಾರ್ಯ ೨೦೦೯ ಡಿಸೆಂಬರ್ ೨೧ ರಿಂದ ೨೭ ರ ವರೆಗೆ ನಡೆದಿತ್ತು
ಗಣತಿ ದಾರರು  ತಮ್ಮ ವ್ಯಾಪ್ಪ್ತಿಯ ಬೀಟಿನಲ್ಲಿ ಕಂಡು ಬಂದ ಪ್ರಾಣಿಗಳು, ಅವಗಳು ಓಡಾಡಿದ ಜಾಗಗಳು, ಪ್ರಾಣಿಗಳ ಪಾದದ ಗುರುತು, ಪ್ರಾಣಿಗಳು ತಿಂದು ಉಳಿದ ಜೀವಿಗಳ ಅವಶೇಷಗಳು, ವನ್ಯ ಜೀವಿಗಳ ವಿಸರ್ಜಿತ ಮಲ,ಹಿಕ್ಕೆ ಅಧ್ಯಯನ ,ಇಂತಹ ಹಲವಾರು ಉಪಯುಕ್ತ ಮಾಹಿತಿಗಳನ್ನು ಸಂಗ್ರಹಿಸಿ ಅರಣ್ಯ ಇಲಾಖೆಗೆ ನೀಡಿದ್ದಾರೆ .ಇದು ವನ್ಯ ಜೀವಿಗಳ ಜೀವನ ಶೈಲಿಯ ಬಗ್ಗೆ ನಾವು ಯಾವುದೇ ವಿಶ್ವವಿದ್ಯಾಲಯ ಕಲಿಸಿಕೊಡದ ವಿಚಾರಗಳನ್ನು ತಿಳಿಯ ಬಹುದಾಗಿದೆ.ಕಾಡಿನಲ್ಲಿ ಸುತ್ತಾಟ ,ಒಳ್ಳೆಯ ಗಾಳಿ ,ಇವುಗಳು ಮನಸನ್ನು ಮುದಗೊಳಿಸುತ್ತವೆ.ನಮ್ಮ ದತ್ತ ಬಂದವನೇ ನನ್ನ ಮುಂದೆ ಕ್ಯಾಮರ ಬಿಸಾಡಿ ನನ್ನ ಫೋಟೋ ಗಳನು ಸಿ.ದಿ.ಗೆ ಹಾಕಿಕೊಡು ಅಂತ ಆರ್ಡೆರ್ ಮಾಡ್ದ .ಹಾಗೆ ಅವನ ಚಿತ್ರಗಳನ್ನು ನೋಡ್ತಾ ಒಂತರ ಖುಷಿಯಾಯ್ತು .ಲೋ ಗುರು ನಿನ್ನ ಫೋಟೋ ಉಪಯೋಗಿಸಿ ಕೊಳ್ಳೋಕೆ ಅನುಮತಿ ಕೊಡು ಅಂತ ಹೇಳಿ ಅನಾಮತ್ತಾಗಿ ಈ ಬ್ಲಾಗ್ನ ಒಳಗೆ ತೋರ್ಸಿ ಬಿಟ್ಟಿದ್ದೀನಿ .[ಆದ್ರೆ ಫೋಟೋ ತೆಗೆದ ಸ್ನೇಹಿತ ದತ್ತಾತ್ರೇಯ ನಿಗೆ  ಧನ್ಯವಾದ ಹೇಳಲೇ ಬೇಕು ]ಅವನು ಹೇಳಿದ ಮಾಹಿತಿ ನಿಮ್ಮ ಮುಂದೆ ಸುರ್ದಿದ್ದಿನಿ !!.ಬನ್ನಿ ಫೋಟೋ ನೋಡುವ...!




















Tuesday, February 2, 2010

ಸ್ವಿಫ್ಟ್ ಇದು ತುಂಬಾ ಫಾಸ್ಟ್ !!! ಗೃಹ ವೇಗಿ ಹಕ್ಕಿಯ ನಲಿದಾಟ !! ಹಕ್ಕಿ ಹುಡುಕಾಟ ..02

ಹಕ್ಕಿ ಹುಡುಕಾಟದಲ್ಲಿ ನಮಗೆ ಸಿಕ್ಕ ಈ ಸ್ವಿಫ್ಟ್ [ಕನ್ನಡದಲ್ಲಿ ಗೃಹ ವೇಗಿ ಹಕ್ಕಿ] ಗುಂಪು ವಿದ್ಯುತ್ ತಂತಿಯ ಮೇಲೆ ಕುಳಿತಿದ್ದವು . ಇವು ವಿವಿದ ಬಗೆಯ ಸಂಗೀತ ಸ್ವರಗಳ ಸರದಾರರು. ಗುಮಪಾಗಿ ವಾಸಮಾಡುವ ಇವು ಸಾಮಾನ್ಯವಾಗಿ ಭಾರತದ ಉದ್ದಗಲಕ್ಕೂ ಕಾಣಸಿಗುತ್ತವೆ,ಕೀಟಗಳ ಭಕ್ಷಿಸಿ ರೈತರಿಗೆ ಉಪಕಾರ ಮಾಡುತ್ತವೆ.ನೀವು ಸಹ ಇವನ್ನು ವಿದ್ಯುತ್ ತಂತಿಗಳ ಮೇಲೆ ಸಾಲಾಗಿ ಕುಳಿತಿರುವುದನ್ನು ನಿಮ್ಮ ಊರಲ್ಲಿ ನೋಡಬಹುದು.ನಿಮ್ಮ ಸನಿಹದ ಕೆರೆ,ಕಟ್ಟೆ, ಬಳಿ ಇವುಗಳ ಗುಂಪು  ನಿಮಗಾಗಿ  ಹಾರಾಡುತ್ತಾ  ಕಾದಿರುತ್ತವೆ.  



.