Thursday, September 30, 2010

ಒರಿಸ್ಸಾ ರಾಜ್ಯದ , ಸಂಬಾಲ್ಪುರ್ ಗೆಳೆಯ ಪ್ರದೀಪ್ ಕಳುಹಿಸಿದ ಸುಂದರ ಇ -ಮೇಲ್ !!!

ಇತ್ತೀಚಿಗೆ ಯಾಕೋ ಬ್ಲಾಗ್ ಲೋಕದಿಂದ ಸ್ವಲ್ಪ ಹೊರಗೆ ಇರಬೇಕೆಂಬ ಬಯಕೆ ಹೆಚ್ಚಾಗುತ್ತಿತ್ತು!!! ಅದಕ್ಕೆ ಸರಿಯಾಗಿ ಮನೆಯ ಮುಂದೆ ರಸ್ತೆ ಅಗಲೀಕರಣ ಮಾಡುವಾಗ ಜೆ.ಸಿ.ಬಿ. ಯಂತ್ರ ನಮ್ಮ ಮನೆಯ ಟೆಲಿಫೋನ್ ವೈರ್ ತುಂದರಿಸಿತ್ತು. ಹಾಗಾಗಿ ಒಂದೆರಡು ದಿನ ನಾನು ಈ ಬ್ಲಾಗ್ ಲೋಕದಿಂದ ದೂರ !! ಇದರಿಂದ   ನನ್ನ ಬಯಕೆ ಪರೋಕ್ಷ ವಾಗಿ  ಈಡೇರಿತ್ತು.  ಇವತ್ತು ಮತ್ತೆ ವೈರುಗಳನ್ನುಮಾಡಿ ದೂರವಾಣಿ ಇಲಾಖೆ ಯವರು ದುರಸ್ತಿ ಮಾಡಿದ ಕಾರಣ ಮತ್ತೆ ಈ ಲೋಕಕ್ಕೆ ಮರಳಿ  ಕಂಪ್ಯೂಟರ್  ನಲ್ಲಿ ನನ್ನ ಮೇಲ್ ಬಾಕ್ಸ್ ತೆಗೆದರೆ ನನ್ನ ಮಿತ್ರ ಪ್ರದೀಪ್ ರ ಮೇಲ್ ಬಂದಿತ್ತು!!!.   ಗೆಳೆಯ ಪ್ರದೀಪ ನನಗೆ ಆರ್ಕುಟ್  ಲೋಕದಲ್ಲಿ ಪ್ರಥಮವಾಗಿ ಪರಿಚಯವಾಗಿ  ಕಾಮೆಂಟ್ ಕಳುಹಿಸಿ ಸ್ನೇಹ ಹಸ್ತ ಚಾಚಿದವರು,ನಬ್ಬಿಬ್ಬರ ಸ್ನೇಹ ಕರ್ನಾಟಕ ಹಾಗು ಒರಿಸ್ಸಾ ರಾಜ್ಯಗಳ ಬಗ್ಗೆ ಪರಸ್ಪರ ಮಾಹಿತಿ ಹಂಚಿಕೆಯಿಂದ ಗಟ್ಟಿಗೊಂಡು ಇಂದು ಅವರ ಇಡೀ ಕುಟುಂಬವೇ ನನಗೆ ಪರಿಚಯವಾಗಿ ಒರಿಸ್ಸಾ ರಾಜ್ಯದ ಸಂಬಾಲಪುರದಲ್ಲಿ ನನಗೆ ಗೆಳೆಯರ ಬಹು ದೊಡ್ಡ ಗುಂಪು ಸೃಷ್ಟಿಯಾಗಿದೆ.ಇವರು ನನಗೆ ಕಳುಹಿಸುವ ಇ- ಮೇಲ್ ಗಳು ಖುಷಿಕೊಡುತ್ತವೆ. ಇತ್ತೀಚಿಗೆ ಒಂದು ಇ-ಮೇಲ್ ನಲ್ಲಿ ನನಗೆ ಮಾನವರ  ದೇಹಗಳಿಂದ  ರಚಿತವಾದ ಪುಷ್ಪ , ಹಣ್ಣು, ಗಿಡ , ಖಾಂಡ  ಮುಂತಾದ ಸುಂದರ ಚಿತ್ರಗಳನ್ನು ಈ ಪ್ರದೀಪ್ ಕಳುಸಿಸಿದ್ದಾರೆ!! ಈ ಚಿತ್ರಗಳನ್ನು ಕಲಾತ್ಮಕವಾಗಿ ನೋಡಿದರೆ ತುಂಬಾ ಖುಷಿಯಾಗುತ್ತದೆ.  ಕೆಲವೊಮ್ಮೆ ಸುಂದರ ಕ್ಷಣಗಳು ಯಾವ ಕಡೆ ಇಂದ ಬರುತ್ತದೆ  ತಿಳಿಯೋದಿಲ್ಲ !! ಈ ಚಿತ್ರಗಳನ್ನು ನೋಡಿ ಸಂತಸದ ಅಲೆ ಮನಸ್ಸಿನಲ್ಲಿ ಉಂಟಾಯಿತು.ಬನ್ನಿ ನಿರ್ಮಲ ಮನಸಿನಿಂದ ಈ ಚಿತ್ರಗಳ ಸೌಂದರ್ಯ ಸವಿಯೋಣ.""ಒಳ್ಳೆಯ ಮನಸಿದ್ದರೆ  ಜಗವೇ ಸುಂದರ " ಎನ್ನುವ ನುಡಿ ಈ ಚಿತ್ರಗಳನ್ನು ನೋಡಿ ನನಗೆ ಅನ್ನಿಸಿತು.!!! ನಿಮಗೆ ????













11 comments:

ಸೀತಾರಾಮ. ಕೆ. / SITARAM.K said...

ನನಗೂ ಈ ಅಂಚೆ ಬಂದಿತ್ತು. ಅದ್ಭುತ ಕಲಾ ಸಂಯೋಜನೆ.

ಸುಬ್ರಮಣ್ಯ said...

ಚನ್ನಾಗಿದೆ ಬಾಲು ಅಣ್ಣಾ. ಧನ್ಯವಾದ.

Dr.D.T.Krishna Murthy. said...

ಬಾಲೂ ಸರ್;ಅದ್ಭುತ ಕಲ್ಪನೆಯ ಅದ್ಭುತ ಚಿತ್ರಗಳನ್ನೂ ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

ಮನಮುಕ್ತಾ said...

ನನಗೂ ಈ ಮೇಲ್ ನಲ್ಲಿ ಇದು ಬ೦ದಿತ್ತು .ಚೆನ್ನಾಗಿದೆ.
ಬ್ಲಾಗ್ ಬರೆಯುತ್ತಿರಿ.
ವ೦ದನೆಗಳು.

sunaath said...

ತುಂಬ ಸುಂದರವಾದ ಸಂಕೀರ್ಣ ಕಲಾಕೃತಿಗಳು!

Shiv said...

ಬಾಲು ಅವರೇ,
ಸುಂದರ ಕಲಾಕೃತಿಗಳನ್ನು ಹಂಚಿಕೊಂಡಿದ್ದಕ್ಕೆ ವಂದನೆ

shivu.k said...

ಬಾಲು ಸರ್,

ಪ್ರತಿಯೊಂದು ಚಿತ್ರವೂ ಒಂದೊಂದು ಕಲಾಕೃತಿಯೇ ಸರಿ. ಗಮನವಿಟ್ಟು ನೋಡಿದಾಗ ಅದೆಷ್ಟು ಖುಷಿಯಾಗುತ್ತೆ ಅಲ್ವಾ...
ಇಂಥವನ್ನು ಕಳಿಸಿದ ನಿಮ್ಮ ಗೆಳೆಯ ಪ್ರದೀಪ್ ಮತ್ತು ಅದನ್ನು ನಮ್ಮೊಂದಿಗೆ ಹಂಚಿಕೊಂಡ ನಿಮಗು ಧನ್ಯವಾದಗಳು.

ಹಳ್ಳಿ ಹುಡುಗ ತರುಣ್ said...

super photo sir.. nangu office id ge mail bandittu adre kelsada ottadadalli sariyaagi nodirlilla... ivaga nodide sir.. ondondu photonu ondu ondu tara sundaravada kalakruti inda ive...

Sriii :-) said...

chitragalu adbutavaagive. hanchikondiddakke danyavaadagalu

Sri:-)

ಶಿವರಾಂ ಎಚ್ said...

ಬಾಲು ಅವರೇ,
ಗೆಳೆಯ ಪ್ರದೀಪ್ ಅವರ ಅಪರೂಪದ ಕಲಾಕೃತಿಗಳಳನ್ನೂ ಮತ್ತು ನಿಮ್ಮ ಚಾರಣದ ಅನುಭವವನ್ನೂ ನಮ್ಮೊಡನೆ ಹಂಚಿಕೊಂಡಿದ್ದಕ್ಕೆ ವಂದನೆಗಳು.

Ashok.V.Shetty, Kodlady said...

Baalu Sir,

Mail nalli nodidde, nammodane hanchikondiddake dhanyavadagalu...