ನಮ್ಮ ಮನಸ್ಸು ಶುದ್ದವಿದ್ದರೆ ಜಗವೇ ಸುಂದರ!!!!{ if our heart and mind is pure everything is pure}
Thursday, September 16, 2010
1970 ರ ದಶಕದಲ್ಲಿ ವಿಶ್ವವನ್ನು ಅಬ್ಬಬ್ಬಾ ಎನ್ನಿಸಿತ್ತು ಸ್ವೀಡನ್ ದೇಶದ ಈ"ABBA '' ಸಂಗೀತಗಾರರ ಮೋಡಿ.!!!
ಸ್ವೀಡನ್ ದೇಶದ ಹೆಮ್ಮೆಯ ಸಂಗೀತಗಾರರು.
ನಾನು ಪ್ರೌಡಶಾಲೆಯಲ್ಲಿ ಓದುತ್ತಿದ್ದ ಸಮಯ ಹಳ್ಳಿ ಹೈದ ನಾನು ದಸರಾ ಹಾಗು ಬೇಸಿಗೆ ರಜೆಯಲ್ಲಿ ರಜೆಕಳೆಯಲು ಮೈಸೂರಿಗೆ ನನ್ನ ನೆಂಟರ ಮನೆಗೆ ಬರುತ್ತಿದ್ದೆ.ನನ್ನ ಸಂಬಂದಿ ರವಿ ಆಗಾಗ ಟೇಪ್ ರೆಕಾರ್ಡರ್ ನಲ್ಲಿ ಇಂಗ್ಲೀಷ್ ಹಾಡು ಕೇಳುತ್ತಿದ್ದ . ನನಗೆ ಅರ್ಥವಾಗದಿದ್ದರೂ ಹಾಡಿನ ವಾಧ್ಯಗಳ ಮೋಡಿಗೆ ಒಳಗಾಗಿ ಈ ಹಾಡುಗಳನ್ನು ಕೇಳಲು ಶುರುಮಾಡಿದ್ದೆ.ಇಂಗ್ಲೀಷ್ ಹಾಡು ಹಾಡುವುದೂ ಅಂದಿನ ಜಮಾನದ ಒಂದು ಫ್ಯಾಶನ್ ಆಗಿತ್ತು . ನಾನು ಸಹ ಹಳ್ಳಿಹೈದ ಎಂಬುದನ್ನು ಮರೆತು ಪ್ಯಾಟೆ ಗಂಡು ಅಂಥಾ ತೋರಿಸಿ ಕೊಳ್ಳೋಕೆ ಶುರುಮಾಡಿದ್ದೆ. ಹಾಡಿನ ಭಾಷೆ ಅರ್ಥ ವಾಗದೆ ಬೆಪ್ಪಾಗಿದ್ದೆ!!ಹಾಗೂ ಹೀಗೂ ಹಾಡುಗಳ ಅರ್ಥ ಗ್ರಹಿಸಲು ಶುರುಮಾಡಿದ ನನಗೆ ಇಂಗ್ಲೀಷ್ ಹಾಡುಗಳಲ್ಲಿಯೂ ಅರ್ಥವಿದೆ ಅನ್ನಿಸ ತೊಡಗಿತು.
ಪ್ರಪಂಚದಲ್ಲಿ ಅತೀ ಪ್ರಸಿದ್ಧಿ ಪಡೆದ ದಿನಗಳು
ಆ ಸಮಯದಲ್ಲಿ ನಾನು ಬಹುಷಃ ಇಂಗ್ಲೀಷ್ ಹಾಡುಗಾರರ ಪೋಸ್ಟರ್
ಅಂದು ಹೀಗಿದ್ವಿ
ಗಳನ್ನೂ ಸಂಗ್ರಹಿಸಲು ಆಂಗ್ಲ ಭಾಷೆಯ " ಸನ್,"" ವೀಕ್ ಎಂಡ್ " ಮುಂತಾದ ವಾರ ಪತ್ರಿಕೆಗಳನ್ನು ಪೋಸ್ಟರ್ ಸಲುವಾಗಿ ತಂದು ಪೋಸ್ಟರ್ ಇಟ್ಟುಕೊಂಡು ಉಳಿದ ಪತ್ರಿಕೆಯನ್ನು ಹಾಗೆ ಓದದೆ ಬಿಸಾಕಿದ್ದೂ ಉಂಟು.ನಂತರ ಓದಲು ಶುರುಮಾಡಿದೆ ಅನ್ನಿ. ನನ್ನ ಕೋಣೆಯ ಗೋಡೆಯ ತುಂಬಾ ಈ ಹಾಡುಗಾರರದೆ ಪೋಸ್ಟರ್ ಹಾಕಿಕೊಂಡು ನಾನು ಇವರಂತೆ ಸಂಗೀತಗಾರ ಆಗ್ತೀನಿ ಅಂತಾ ಬೊಗಳೆ ಬಿಟ್ಟಿದ್ದೆ.[ ನಂತರ ಆಗಿದ್ದೆ ಬೇರೆ ಬಿಡಿ.]ಅಂಥಹ ಸಮಯದಲ್ಲಿ ಅಬ್ಬ ಬೋನಿ.. ಎಂ , ಒಸಿಬೀಸ್ಸ, ದ .ಪೋಲಿಸ್ , ಶೆಕಿನ್ಸ್ ಸ್ಟೀವನ್ಸ್ , ಬೀಟಲ್ಸ್, ಜಾಪ್ನೀಸ್ ಬಾಯ್, ಮೆನ್ ಅಟ್ ವರ್ಕ್ , ಬೀಟಲ್ಸ್, ದೊನ್ನಾ ಸಮ್ಮರ್ ಹೀಗೆ ಇನ್ನೂ ಬಹಳಷ್ಟು ಗುಂಪಿನ ಹಾಡುಗಳನ್ನು ಕೇಳುತ್ತಿದ್ದೆ.ಇವುಗಳಲ್ಲಿ ನನ್ನ ಮೆಚ್ಚಿನ " ಅಬ್ಬಾ "ಗ್ರೂಪಿನ ಸಂಗೀತ ಮನ ಮೋಹಕ ವಾಗಿತ್ತು. ಇಂದಿಗೂ ಮನದ ಮೂಲೆಯಲ್ಲಿ ಕುಳಿತು ಹಾಡುಗಳು ನೆನಪಿನಲ್ಲಿ ಉಳಿದಿವೆ.ಇವರೂ ಇಂಗ್ಲೀಷ್ ಪ್ರಾಬಲ್ಯ ವಿರುವ ದೇಶಗಳ ಹಾಡುಗಾರಿಕೆಗೆ ಸವಾಲಾಗಿ ಪ್ರಪಂಚದಾದ್ಯಂತ ಅಭಿಮಾನಿಗಳನ್ನು ತಮ್ಮ ಹಾಡು ಸಂಗೀತದಿಂದ ರಂಜಿಸಿ ಕುಣಿಸಿದ್ದಾರೆ. ಆಸ್ಟೇಲಿಯಾ ದಲ್ಲಂತೂ ಊರಿಗೊಂದು ಅಬಿಮಾನಿಗಳ ಗುಂಪು ಕಾಣಿಸಿಕೊಂಡಿತ್ತು. ABBA ಎಂಬ ಹೆಸರಲ್ಲೇ ಒಂದು ವಿಶೇಷವಿದೆ ತಂಡದ ನಾಲ್ಕೂ ಸದಸ್ಯ ಹೆಸರಿನ ಮೊದಲ ಅಕ್ಷರಗಳನ್ನು ಸೇರಿಸಿ ಈABBA ಎಂಬ ಗುಂಪಾಗಿ ಶುರುವಾದ ಈ ಗುಂಪಿನಲ್ಲಿ[ Björn Ulvaeus, Benny Andersson, Agnetha Fältskog, and Anni-Frid Lyngstad ಎಂಬ ನಾಲ್ವರು ಪ್ರಮುಖ ಸದಸ್ಯರು . ಮತ್ತೊಂದು ವಿಶೇಷ ಅಂದರೆ ಈ ಗುಂಪು ಇಂಗ್ಲೀಷ್ ಮಾತನಾಡದ ದೇಶ ಸ್ವೀಡನ್ ನಿಂದ ಉದ್ಭವಿಸಿದ್ದು.1970 ರ ದಶಕದಲ್ಲಿ ಸ್ಟಾಕ್ ಹೋಂ ನಲ್ಲಿ ನಿರ್ಮಿಸಿಕೊಂಡ ತಮ್ಮ ಸ್ಟುಡಿಯೋ ದಲ್ಲಿ ಬಹಳಷ್ಟು ಹಾಡುಗಳನ್ನು ಬರೆದು ಧ್ವನಿಮುದ್ರಿಸಿ ಯೂರೋಪ್, ಅಮೇರಿಕ , ಆಸ್ಟ್ರೇಲಿಯಾ , ಜಪಾನ್,ಮುಂತಾದ ದೇಶಗಳಲ್ಲಿ ತಮ್ಮ ಹಾಡುಗಳಿಂದ ಪಾಪ್ ಸಂಗೀತ ಲೋಕದಲ್ಲಿ ಬಿರುಗಾಳಿ ಎಬ್ಬಿಸಿ ಮೆರೆದರು.ಇವರ ಹಾಡುಗಳೋ ಇಂದಿಗೂ ಜನಪ್ರೀಯತೆ ಕಳೆದುಕೊಳ್ಳದೆ ಇಂಗ್ಲೀಷ್ ಪಾಪ್ ಲೋಕದಲ್ಲಿ ಲೆಜೆಂಡ್ ಆಗಿ ಉಳಿದಿವೆ.ಇವರ ಹಾಡುಗಳ ಪಟ್ಟಿ ನೋಡಿಬನ್ನಿ
.
ಇನ್ನು ಇವರ ಎಲ್ಲಾ ಹಾಡುಗಳಲ್ಲಿ ಉತ್ತಮ ಸಾಹಿತ್ಯ , ಪ್ರಚಲಿತ ಘಟನೆಗಳ ಬಗ್ಗೆ ಹಾಡುಗಳು, ಪರಿಸರ , ಜೀವನ , ಹಕ್ಕಿ ಮುಂತಾದವುಗಳ ಬಗ್ಗೆ ಇದ್ದು ಇವುಗಳಿಗೆ ಸಂಗೀತ ಒದಗಿಸುವಲ್ಲಿಯೂ ಸಹ ಇವರದೇ ಚಾಪಿತ್ತು.ಇಂದು ಈ ಗುಂಪು ಅಸ್ತಿತ್ವದಲ್ಲಿ ಇಲ್ಲ ದಿದ್ದರೂ ಇವರ ಇಂಪಾದ ಹಾಡುಗಳು ಅಸ್ತಿತ್ವ ಉಳಿಸಿಕೊಂಡು ವಿಶ್ವದಲ್ಲಿ ಇಂದಿಗೂ ಮೆರೆದಿವೆ.ಬನ್ನಿ ನಿಮ್ಮ ಕುತೂಹಲ ತಣಿಸಲು ಕೆಲವು ಹಾಡುಗಳ ದೃಶ್ಯ ಕೊಟ್ಟಿದ್ದೇನೆ ನೋಡಿ ಆನಂದಿಸಿ. ಇಂಗ್ಲೀಷ್ ಕಲಿಯಲು ಪ್ರೇರೇಪಿಸಿದ ಒಂದು ಸಂಗೀತಗಾರರ ಗುಂಪಿಗೆ ನನ್ನ ಥ್ಯಾಂಕ್ಸ್ ಅನ್ನು ಈ ಒಂದು ಬ್ಲಾಗ್ ಸಂಚಿಕೆ ಮೂಲಕ ಅರ್ಪಿಸುತ್ತೇನೆ.ಈ ಕೆಳಗಿನ ಹಾಡುಗಳನ್ನು ನೋಡಿ ಕೇಳಿ ನಂತರ ನೀವೇ ಹಾಡುಗಳ ಮಾಧುರ್ಯಕ್ಕೆ ಮಾರು ಹೋಗುವಿರಿ. ಎಚ್ಚರ ನೀವು ಇವರ ಅಭಿಮಾನಿಗಳಾದರೆ ನಾನು ಜವಾಬ್ದಾರನಲ್ಲ.!!!!
ಬಾಲು ಚನ್ನಾಗಿದೆ ನಿಮ್ಮ ಲೇಖನ. ನಾವು ಕಾಲೇಜ್ ದಿನಗಳಲ್ಲಿ ನಮ್ಮ ಬಳ್ಳಾರಿ ರೆಡ್ಡಿ ಸ್ನೇಹಿತನೊಬ್ಬನ "ಅಕಾಯ್" ಸ್ಟೀರಿಯೋ ಟೇಪ್ ರೆಕಾರ್ಡರ್ ನಲ್ಲಿ ಕೇಳಿದ ಕ್ರೇಜಿು...ಹಾಡ್ುಗಳು..."ಅಬ್ಬಾ" ಎನ್ನುವಂತಿದ್ದವು
8 comments:
good Information, really marvelous!
ಬಾಲು ಸರ್,
ಎಂತಹ ಸೊಗಸಾದ ಸಂಗೀತದ ಬಗ್ಗೆ ನಮಗೆ ಮಾಹಿತಿಯನ್ನು ನೀಡಿದ್ದೀರಿ. ನಿಮ್ಮ ಕಾಲೇಜು ದಿನಗಳ ನೆನಪುಗಳೊಂದಿಗೆ ಬರೆದ ಲೇಖನ ತುಂಬಾ ಚೆನ್ನಾಗಿದೆ.
ಮಾಹಿತಿಗಳಿಗೆ ಧನ್ಯವಾದಗಳು.
ಲೋಡಿ೦ಗ್ ಸಮಸ್ಯೆ ಇರುವುದರಿ೦ದ ವೀಡಿಯೊ ನೋಡಿ ಕೇಳ್ಲಿಕ್ಕ್ಕಾಗ್ತಾ ಇಲ್ಲ. ಮತ್ತೆ ಪ್ರಯತ್ನಿಸುತ್ತೇನೆ.
ಬಾಲು ಚನ್ನಾಗಿದೆ ನಿಮ್ಮ ಲೇಖನ. ನಾವು ಕಾಲೇಜ್ ದಿನಗಳಲ್ಲಿ ನಮ್ಮ ಬಳ್ಳಾರಿ ರೆಡ್ಡಿ ಸ್ನೇಹಿತನೊಬ್ಬನ "ಅಕಾಯ್" ಸ್ಟೀರಿಯೋ ಟೇಪ್ ರೆಕಾರ್ಡರ್ ನಲ್ಲಿ ಕೇಳಿದ ಕ್ರೇಜಿು...ಹಾಡ್ುಗಳು..."ಅಬ್ಬಾ" ಎನ್ನುವಂತಿದ್ದವು
ಬಾಲು ಸರ್,
ಸಂಗೀತ ಪ್ರಿಯರಿಗೊಂದು ಉಪಯುಕ್ತ ಲೇಖನ, ಉತ್ತಮ ಮಾಹಿತಿ ಒದಗಿಸಿದ್ದಿರಿ, ಧನ್ಯವಾದಗಳು.
ಬಾಲು ಅವರೇ,
ಈಗಲೂ 'Friday night and the lights are low' ಅಂತಾ ಹಾಡು ಬಂದರೆ, ಹೆಜ್ಜೆ ಹಾಕಬೇಕಿನಿಸುತ್ತದೆ.
ಅತ್ಯುತ್ತಮ ಅಬ್ಬಾ ವಿಷಯಸಂಗ್ರಹಣೆ
ಮಾಹಿತಿಗೆ ಧನ್ಯವಾದಗಳು.ಹಾಡು ಚೆನ್ನಾಗಿವೆ.
ಬಾಲು ಸರ್....
ನಿಮ್ಮ ಅಭಿರುಚಿ ಮೆಚ್ಚಬೇಕು... ಹಿಸ್ಟರೀ ಟು ಮಿಸ್ಟರೀ ಎನ್ನುವ೦ತ ಲೇಖನವಿದು...:) Quite Informative!!! Liked It :)
Post a Comment