Wednesday, September 1, 2010

ಒಮ್ಮೆ ನಮ್ಮನ್ನು ಕ್ಷಮಿಸಲಾರೆಯ ಸಹೋದರಿ !!! ನಾವು ನಾಗರೀಕರು ???

ಅಂದು ಮುಂಜಾನೆ ಸುಮಾರು ಆರು ಗಂಟೆ ಇರಬಹುದು. ನಮ್ಮ ಮನೆಯ ಮೇಲಿನ ಚಾವಣಿ ಏರಿಹಕ್ಕಿಗಳ ಚಿತ್ರ ತೆಗೆಯಲು ಸಿದ್ದತೆ ನಡೆಸಿದ್ದೆ.ಯಾಕೋ ಕಾಣೆ ನನಗೆ ಅರಿವಿಲ್ಲದೆ ಮನೆಯ ಸಮೀಪ ವಿರುವ ಬಸ್/ಆಟೋ ನಿಲ್ದಾಣ ದ ಕಡೆ ನನ್ನ ಕ್ಯಾಮರ ಹೊರಳಿತು.ಯಾರೋ ಪಾಪ ಮಹಿಳೆ ಒಬ್ಬರು ಬೀದಿಯಲ್ಲಿ ತನ್ಮಯತೆ ಇಂದ ಪಟ್ಟಣದ ನಾಗರೀಕರು ??
  ರಸ್ತೆ ಬದಿಯಲ್ಲಿ ಚೆಲ್ಲಾಡಿದ್ದ  ಕಸವನ್ನು ಉದ್ದನೆಯ ಬರಲಿನಿಂದ ಒಟ್ಟುಮಾಡಿ ಸಂಗ್ರಹ ಮಾಡುತ್ತಿದ್ದರು.ಆ ಕಸದಲ್ಲಿ ನಾವುಗಳು ಏನನ್ನು ಬಿಸಾಕಿರಬಹುದೆಂಬ ಬಗ್ಗೆ ಯೋಚಿಸಿದೆ  ಅದರಲ್ಲಿ ಬೀಡಿ,ಸಿಗರೇಟು  ತುಂಡುಗಳು,ಪ್ಲಾಸ್ಟಿಕ್ ಕವರುಗಳು,ಪಾನಿಪುರಿ ತಿಂದ  ಗ್ರಾಹಕರು ಉಗಿದ ಪದಾರ್ಥಗಳು,ಹಾಗು ಬೀದೀ ಬದಿಯ ಮಾರಾಟಗಾರರು ಚೆಲ್ಲಾಡಿದ ತರಕಾರಿ ,ತಿಂಡಿ, ಇದರ ಮಧೆ,ಪಾನ್ ತಿಂದು ಉಗಿದ ಚೂರುಗಳು, ಹಳೆ ಕಾಗದದ ಚೂರುಗಳು  ನಾಯಿ ಮುಂತಾದ ಪ್ರಾಣಿಗಳ ಮಲ , ಇನ್ನೂ ಇಲ್ಲಿ ಬರೆಯಲು ಆಗದಷ್ಟು ಕಸದ ವಿವಿದ ಪದಾರ್ಥಗಳು.ಸ್ವಲ್ಪ ಕೈ ಕೊಳೆ ಯಾದರೂ ಹ್ಯಾಂಡ್ ವಾಶ್ ಬಳಸಿ ಕ್ರಿಮಿ ಮುಕ್ತ ವಾಗುವ ನಾವು ನಾಗರೀಕ ಪ್ರಪಂಚದಲ್ಲಿ ಇವರ ಆರೋಗ್ಯದ ಕಡೆ ಗಮನ ಹರಿಸಿಲ್ಲವೆಂದು ತೋರಿ ನನಗೆ ನಾಚಿಕೆಯಿಂದ  ಮನ ಕರಗಿತು.ಮೇಲೆ ಹೇಳಿದ ಎಲ್ಲ ರೀತಿಯ ಕಸವನ್ನು ಪಾಪ ಈ ಮಹಿಳೆ ತನ್ನ ಕೈ ನಿಂದ ಸ್ವಲ್ಪವೂ ಅಸಹ್ಯ ಪಡದೆ ತಾಳ್ಮೆಯಿಂದ ತಾನು ತಂದಿದ್ದ ಬುಟ್ಟಿ ಯಲ್ಲಿ ಹಾಕಿಕೊಳ್ಳುತ್ತಿದ್ದರು[.ಆರೋಗ್ಯದ ಬಗ್ಗೆ ಅವರಿಗೆ ಅರಿವಿರಲಿಲ್ಲ ಕನಿಷ್ಠ ಅವರಿಗೆ ಕೈಗೆ ಗ್ಲವಸನ್ನಾದರೂ ನೀಡಬೇಕಾಗಿತ್ತು !!!]ನಾಗರೀಕ ಪ್ರಪಂಚ ಇದರ ಅರಿವಿಲ್ಲದೆ ಸಿಹಿ ನಿದ್ದೆಯಲ್ಲಿ ವಿಹರಿಸುತ್ತಿತ್ತು.ಅದಿರಲಿ ಸಮಾಜವನ್ನು ಉದ್ದಾರ ಮಾಡುತ್ತೇವೆಂದು ಬೊಬ್ಬೆ ಹೊಡಿಯುವ ಹಲವಾರು  ಸ್ವಯಂ ಸೇವಾ ಸಂಸ್ಥೆ ಗಳು ಇಂತಹವರ ಬಗ್ಗೆ ಯೋಚಿಸುವುದಿಲ್ಲ ಯಾಕೆ ಎಂಬ ಪ್ರಶ್ನೆಗೆ ಉತ್ತರ ಸಿಗದೇ ನಿರಾಶನಾಗಿ ಮನದಲ್ಲಿ" "ಸಹೋದರಿ ನಮ್ಮ ನಾಗರೀಕ???? ಸಮಾಜವನ್ನು ಒಮ್ಮೆ ಕ್ಷಮಿಸಿಬಿಡು" ಎಂದು ಕೊಂಡೆ. ನೀವೇನಂತೀರಾ ???

7 comments:

ಸೀತಾರಾಮ. ಕೆ. / SITARAM.K said...

ನಾವು ಬಿಸಾಕುವ ಕಸ ಕಡ್ಡಿ ತ್ಯಾಜ್ಯಗಳನ್ನು ಇಇ ಜನ ತೆಗೆಯುತ್ತಿರುವದರಿ೦ದ ಸ್ವಲ್ಪವೇ ಕಾನುವೆವು. ಇವರಿಲ್ಲದಿದ್ದಲ್ಲಿ ಕುತ್ತಿಗೆವರೆಗೆ ಸಾರ್ವಜನಿಕ ಸ್ಥಳದಲ್ಲಿ ಹೊಲಸು ತು೦ಬಿರೋದು.
ನನ್ನದು ಒ೦ದು ನಮನ.

ಸುಬ್ರಮಣ್ಯ ಮಾಚಿಕೊಪ್ಪ said...

:-(

ಹಳ್ಳಿ ಹುಡುಗ ತರುಣ್ said...

ondu olle manakalakuva leKana sir... nijavaagiyu elli bekendaralli kasa hakuva navu swalpa atma vimarshe madkolluvudu agatya ide sir....

sunaath said...

ನಾಗರಿಕ ಸಮಾಜ ಎಂದು ನಾವು ನಮ್ಮನ್ನು ಏಕೆ ಕರೆದುಕೊಳ್ಳಬೇಕೊ ತಿಳಿಯುತ್ತಿಲ್ಲ.

Dr.D.T.krishna Murthy. said...

ನಾವು ನಾಗರೀಕರೇ?ಒಂದು ಚಿತ್ರ ಸಾವಿರ ಕತೆ ಹೇಳುತ್ತದೆ.

ಕ್ಷಣ... ಚಿಂತನೆ... bhchandru said...

ಸರ್‍,
ಚಿತ್ರಗಳನ್ನು ನೋಡಿದೆ. ಇದು ದಿನನಿತ್ಯದ ವಹಿವಾಟು (?) ಎನ್ನಬಹುದು. ಇದಕ್ಕಿಂತಲೂ ಕಸದ ಲಾರಿಯಲ್ಲಿ ಕಸವನ್ನು ತುಂಬುವವರ ಸ್ಥಿತಿಯನ್ನು ನೆನಸಿಕೊಂಡರೇ ಭಯಂಕರವಾಗಿರುತ್ತದೆ. ಕೈಗವಸು ಇರುವುದಿಲ್ಲ.. ಕಾಲಿಗೆ ಚಪ್ಪಲಿಯಿರುವುದಿಲ್ಲ (ಏಕೆಂದರೆ ಕಸದಲ್ಲಿ ತುಕ್ಕು ಹಿಡಿದ ಕಬ್ಬಿಣ ಒಂದು ತಾಗಿ ವ್ರಣವಾದರೂ ತಿಳಿಯದು), ಇನ್ನು ಮೂಗಿಗೆ ಬೇಕಾದ ಕವಚವೂ ಇರುವುದಿಲ್ಲ. ಯಾರಿಗೇನಾದರೆ ನನಗೇನು ಎಂಬ ಮನೋಧರ್ಮವೇ ಈ ಸ್ಥಿತಿಗತಿಗಳಿಗೆ ಕಾರಣವೆನ್ನಬಹುದು. ಸಹಾಯಕ್ಕಿಂತ ಅಸಹಾಯಕತೆಯೇ ಇಲ್ಲಿ ಮನೆಮಾಡಿರುತ್ತದೆ.

ಶಿವಪ್ರಕಾಶ್ said...

:( :( :(