ನನಗೆ ಬೇಜಾರಾದಾಗ ಬಹಳ ಅಪರೂಪಕ್ಕೆ ಕೈಗೆ ಸಿಕ್ಕಿದ ಯಾವುದಾದರೂ ಅಪರೂಪದ ಸಿನಿಮಾ ನೋಡುವುದು ವಾಡಿಕೆ. ಇತ್ತೀಚಿಗೆ ಹೀಗೆ ಆಕಸ್ಮಿಕವಾಗಿ ಸಿಕ್ಕ ಒಂದು ಅಪರೂಪದ ಚಲನ ಚಿತ್ರವೇ 'the sound of music" 1965 ರಲ್ಲಿ ತೆರೆ ಕಂಡ ಈ ಚಿತ್ರ ವಿಶ್ವಾದ್ಯಂತ ಜನ ಮನ ಸೂರೆಗೊಂಡು ಐದು ಆಸ್ಕರ್ ಪ್ರಶಸ್ತಿ ಬಾಚಿಕೊಂಡಿತು. ಈ ಚಿತ್ರ ಮಾಡಿದ ದಾಖಲೆ ಅಪಾರ.ಈ ಚಿತ್ರ ಚಿತ್ರೀಕರಣ ಗೊಂಡ ಆಸ್ತ್ರೀಯ ದೇಶದ ಹಲವು ಸುಂದರ ಜಾಗಗಳು ಇಂದಿಗೂ ಪ್ರವಾಸಿಗಳನ್ನು ಸೆಳೆಯುತ್ತಲೇ ಇವೆ.ಬಹುಷಃ ಈ ಚಿತ್ರದ ಸಂಗೀತವನ್ನು ಅನುಕರಿಸದ /ಕಾಪಿ ಮಾಡದ ಚಿತ್ರರಂಗವೇ ವಿಶ್ವದಲ್ಲಿ ಇಲ್ಲವೇನೋ ಎಂಬಷ್ಟು ಈ ಚಿತ್ರದ ಹಾಡುಗಳ ಸಂಗೀತ ಇಂದಿಗೂ ನಲಿದಿದೆ. ಇಂತಹ ಒಂದು ಚಿತ್ರ ಸಂಗೀತ ಪ್ರಧಾನವಾಗಿ , ಪ್ರತೀ ಕಲಾವಿದರ ನೈಜ ನಟನೆಯಿಂದ ಬಹು ಕಾಲ ನೆನಪಿನಲ್ಲಿ ಉಳಿಯುತ್ತದೆ. ನೀವೂ ಈ ಚಿತ್ರವನ್ನು ನೋಡಿಲ್ಲವೇ ಹಾಗಿದ್ದರೆ ಕೂಡಲೇ ನಿಮ್ಮ ಮನೆಯ ಸಮೀಪವಿರುವ ಸಿ.ಡೀ. ಪಾರ್ಲರ್ ಗೆ ಹೋಗಿ ತಂದು ನೋಡಿ. ಒಳ್ಳೆಯ ಚಿತ್ರ ನೋಡಲು ಯಾರ ಹಂಗು ಏಕೆ ಬೇಕು ಅಲ್ವ.!!! ಬನ್ನಿ ಕೆಲವು ಹಾಡುಗಳು ನಿಮಗಾಗೀಲ್ಲಿವೆ ನೋಡೋಣ ಬನ್ನಿ.[ನಮ್ಮಲೂ ಸಂಗೀತ ಪ್ರಧಾನ ಚಿತ್ರಗಳಾದ ಉಪಾಸನೆ, ಹಂಸಗೀತೆ,ಆನಂದ ಭೈರವಿ ಮುಂತಾದ ಚಿತ್ರಗಳು ಯಶಸ್ವಿಯಾಗಿರುವುದು ನಮ್ಮ ನೆನಪಿನಲ್ಲಿ ಉಳಿಯುತ್ತದೆ ] ಈ ಚಿತ್ರ ನನ್ನ ಮನದಲ್ಲಿ ಬಹುಕಾಲ ನಿಂತು ಈ ಲೇಖನವಾಗಿ ಹೊಮ್ಮಿಬಂದಿದೆ.!!! ಬನ್ನಿ ನಿಮಗೆ ಸಂಗೀತದ ರಸದೌತಣ ಕಾದಿದೆ.
6 comments:
ನೈಸ್ ಮಾಹಿತಿ. ಹಾಡು ಚೆನ್ನಾಗಿವೆ.
ಬಾಲು ಸರ್,
ನನ್ನ ಬಳಿ ಈ ಸಿನಿಮಾ ಡಿವಿಡಿ ಇದೆ. ನೋಡಲು ಸಮಯವಾಗಿಲ್ಲ. ಸಾದ್ಯವಾದಷ್ಟು ಬೇಗನೇ ನೋಡುತ್ತೇನೆ...ನೆನಪಿಸಿದ್ದಕ್ಕೆ ಥ್ಯಾಂಕ್ಸ್.
ನಾನು ಈ ಚಿತ್ರ ನೋಡಿಲ್ಲ... ಮಾಹಿತಿಗಾಗಿ ಧನ್ಯವಾದಗಳು.
Baalu Sir,
Naanu ee cinemaa nodiddini...tumbaa chennagide, nenapannu asiru golisiddakke dhanyavadagalu.
Sound of Music ನೋಡಿದ್ದೇನೆ. ತುಂಬ ಸುಂದರವಾದ ಚಿತ್ರ. ಈ ಚಿತ್ರವನ್ನು ಅನುಕರಿಸಿ, ಹಿಂದೀಯಲ್ಲಿ
‘ಪರಿಚಯ’ ಎನ್ನುವ ಚಿತ್ರವನ್ನು ನಿರ್ಮಿಸಲಾಯಿತು. Sound of Musicಅನ್ನು ಮತ್ತೊಮ್ಮೆ ಆನಂದಿಸುವ ಅವಕಾಶ ಮಾಡಿಕೊಟ್ಟಿರಿ. ಧನ್ಯವಾದಗಳು.
ಅದ್ಭುತ ಬಾಲು ಸರ್. ಹಳೆಯ ಮಾಧುರ್ಯವನ್ನು ಮತ್ತೆ ನೆನಪಿಸಿದ್ದೀರಿ. ಧನ್ಯವಾದಗಳು.
ಅನ೦ತ್
Post a Comment