Tuesday, October 5, 2010

ಅಡಗಿಕೊಂಡು ಕುಳಿತಿರುವ ವಿಸ್ಮಯ!!!! ಈ "ಭೀಮನಖಿಂಡಿ " ಕಲ್ಲಿನ ಕಮಾನು!!!




ಭೀಮನ ಖಿಂಡಿ ಬೆಟ್ಟದ ಸುಂದರ ನೋಟ.












ಗೂಗಲ್ ಆರ್ಥ್ ನಲ್ಲಿ ಭೀಮನ ಕಿಂಡಿಯ ಕಲ್ಲಿನ ಕಮಾನು ಕಾಣುವುದು ಹೀಗೆ!!
ಭೀಮನ ಖಿಂಡಿ ಬೆಟ್ಟದ ಪ್ರದೇಶ ದ ವಿವರ !!!
ಭೀಮನ  ಖಿಂಡಿ  ಬೆಟ್ಟದ ಲೋಕೇಶನ್ ಗೂಗಲ್ ಅರ್ಥ್ ನಲ್ಲಿ ಕಂಡಂತೆ.
ಶನಿವಾರ ಗಾಂಧೀ ಜಯಂತಿ ಮನೆಯ ಸನಿಹದಲ್ಲಿ ಗಾಂಧೀಜಿ ಪುತ್ತಳಿಗೆ ಮಾಲಾರ್ಪಣೆ ನಡೆಯುತ್ತಿತ್ತು.ಸಧ್ಯ ಇವತ್ತಾದ್ರೂ ಇವರನ್ನು ನೆನೆಯುತ್ತೆವಲ್ಲಾ ಅನ್ನಿಸಿ ಮನೆಗೆ ಬಂದೆ. ನನ್ನ ತಮ್ಮ ಅಣ್ಣ ರೆಡಿನಾ!!  ಅಂತಾ ಹೇಳಿ ನಮ್ಮ ಮನೆಗೆ ಬಂದೇಬಿಟ್ಟ.ನಾನು ರೆಡಿ ವಿನಯ್ ಅಂದು ಸಿದ್ದನಾದೆ. ಜೊತೆಗೆ ಅವನ ಇಬ್ಬರು ಸ್ನೇಹಿತರು ಗುರು ಹಾಗು ಉತ್ತಮ್  ನಮ್ಮ ಜೊತೆಗೂಡಿದರು .ಗೊತ್ತು ಗುರಿ ಇಲ್ಲದಪ್ರಯಾಣಕ್ಕೆ ಸಿದ್ದರಾದೆವು. ಅಣ್ಣ ಯಾವ್ ಕಡೆ ಅಂತಾ  ವಿನಯ್ ಹೇಳಿದಾಗ  ಸ್ವಲ್ಪ ಕಾರು ನಿಲ್ಸು ಹೇಳ್ತೀನಿ ಅಂತಾ ಹೇಳಿ ಯಾವ ಕಡೆಗೆ ಅಂತಾ ಯೋಚಿಸಿದೆ ,ಆಗ ಜ್ಞಾಪಕಕ್ಕೆ ಬಂದಿದ್ದು ಬಹಳ ಹಿಂದೆ ಹೋಗಿದ್ದ ಈ " ಭೀಮನ ಖಿಂಡಿ ಬೆಟ್ಟ " ಸರಿ ಅಲ್ಲಿಗೆ ಹೋಗಲು ತೀರ್ಮಾನಿಸಿ ಮೈಸೂರುನಿಂದ  ಬನ್ನೂರು,ಕಿರುಗಾವಲು,ಮಳವಳ್ಳಿ, ಹಲಗೂರು ಮಾರ್ಗವಾಗಿ ಲಿಂಗ ಪಟ್ಟಣ ಗ್ರಾಮದ ಸಮೀಪದ ಕಂಚನಹಳ್ಳಿ ಗ್ರಾಮ ತಲುಪಿದೆವು.ಈ ಗ್ರಾಮ ಕನಕಪುರ ತಾಲೂಕಿನ ಸಾತನೂರ್ ಹೋಬಳಿ ಗೆ ಸೇರಿದ್ದರೂ ಮಳವಳ್ಳಿ ತಾಲೂಕಿನ ಹಲಗೂರಿಗೆ ಕೇವಲ ಹತ್ತು ಕಿ.ಮಿ.ಇದೆ.ಕಂಚನಹಳ್ಳಿ ಯಲ್ಲಿ ಗ್ರಾಮಸ್ಥರನ್ನು ಭೇಟಿ ಮಾಡಿ ನಾವು ಭೀಮನ ಖಿಂಡಿ ಬೆಟ್ಟ ನೋಡಲು ಬಂದಿರುವುದಾಗಿ ತಿಳಿಸಿದೆವು. ಬಹಳ ಆತ್ಮೀಯವಾಗಿ ಬರಮಾಡಿಕೊಂಡ ಗ್ರಾಮದ ಜನರು ನಮ್ಮ ಕಾರನ್ನು ನಿಲ್ಲಿಸಲು ನೆರಳು ನೀಡಿ ,ಬೆಟ್ಟ ತೋರಿಸಲು ಇಬ್ಬರು ಶಾಲಾ ಬಾಲಕರನ್ನು ಜೊತೆಗೆ ಕಳುಹಿಸಿಕೊಟ್ಟು ತಮ್ಮ ಹಿರಿಮೆ ಸಾರಿದರು.ಗ್ರಾಮದಿಂದ ನಮ್ಮ ನಡಿಗೆ ಬೆಟ್ಟ ದೆಡೆಗೆ  ಸಾಗಿತು. ಗ್ರಾಮದ ದಾರಿಯಲ್ಲಿ ಸಾಗುತ್ತಿದ್ದಾಗ ಅಲ್ಲೇ ಇದ್ದ ಒಂದು ಸಣ್ಣ ಕೆರೆಯ ಸನಿಹ ಗೀಜಗ ಹಕ್ಕಿಗಳ ಗೂಡು ಕಣ್ಣಿಗೆ ಬಿತ್ತು. ಹೆಚ್ಚು ಸಮಯ ವಿಲ್ಲದ ಕಾರಣ ತರಾತುರಿಯಲ್ಲಿ ಗೀಜಗನ ಗೂಡಿನ ಕೆಲವು ಫೋಟೋ ತೆಗೆದೆ!!  ಮುಂದೆ ಜೋಳದಹೊಲ , ತೆಂಗಿನ ತೋಟಗಳ ನಡುವೆ ನಮ್ಮ ಚಾರಣ ಸಾಗಿತು.ಜೊತೆಗೆ ಬಂದಿದ್ದ ಇಬ್ಬರು ಮಕ್ಕಳು ನಮಗೆ ಮಾರ್ಗ ದರ್ಶಕರಾದರು.ಈ ಮಕ್ಕಳು ಬೆಟ್ಟ ಏರ ಬಲ್ಲರೆ ???ಎಂಬ ಅನುಮಾನ ನನ್ನನ್ನು ಕಾಡಿತ್ತು. ನಂತರ ಅವರೇ   ನಾವು    ಬೆಟ್ಟ ಹತ್ತಲು  ಏದುಸಿರು ಬಿಡುವುದನ್ನು ನೋಡಿ ನಕ್ಕರು ಬಿಡಿ !!ಅವರ ಉತ್ಸಾಹ ನಮಗೆ ಸ್ಪೂರ್ತಿಯಾಗಿತ್ತು.ನಡೆ ಮುಂದೆ ನಡೆ ಮುಂದೆ ಅನ್ನುವಂತೆ ನಮ್ಮ ನಡಿಗೆ ಸಾಗಿತು.ಪ್ಯಾಟೆ ಹೈಕಳ ಉತ್ಸಾಹ ಆರಂಭ ದಲ್ಲಿ ವೇಗ ಪಡೆದಿತ್ತು!!!ನಡಿಗೆಯ ಸಮಯದಲ್ಲಿ ಸೂರ್ಯ ತನ್ನ ಪ್ರತಾಪ ತೋರಿಸಲು ಶುರುಮಾಡಿದ. ದೇಹಕ್ಕೋ ಬೆವರಿನ ಸ್ನಾನ ವಾಗಿತ್ತು.ಬಿಸಲಿನ ತಾಪ ನಡಿಗೆಯನ್ನು ನಿಧಾನ ಗೊಳಿಸಲು ಶುರುಮಾಡಿತು, ದೂರದಲ್ಲಿ ಬೆಟ್ಟಗಳು ಸುಂದರವಾಗಿ ಗೋಚರಿಸಿ ಕೈಬೀಸಿ ಕರೆದಿದ್ದವು .       ಮೋಹಕ ಬೆಟ್ಟಗಳ ಸನಿಹ ಹೋಗಲು ನಡಿಗೆಯ ವೇಗ ಹೆಚ್ಚಿಸಿದೆವು.ಜೋಳದ ಮದ್ಯದ ದಾರಿಯಲ್ಲದ ದಾರಿಯಲ್ಲಿ ಪ್ರಕೃತಿಯ ಸೊಬಗ ನಡುವೆ ಬಿಸಿಲ ಜಾಲದಲ್ಲಿ ನಮ್ಮ ನದಿಗೆ ಸಾಗಿತ್ತು.ಜೋಳದ ಹೊಲದ ನಡುವೆ ನಡೆಯುವಾಗ ನನ್ನ ಬಾಲ್ಯ ನೆನಪಾಗಿ ಹಳ್ಳಿ ಹುಡುಗನಾಗಿ ಸಂಭ್ರಮಿಸಿದ್ದೆ.ತಮಾಷಿಯಾಗಿ ಮಾತನಾಡುತ್ತಾ ಬೆಟ್ಟದ ತಪ್ಪಲಿಗೆ ತಲುಪಿದ್ದು ತಿಳಿಯಲೇ ಇಲ್ಲ . ಸಾ ನಿಮ್ಮ ಸೂ ,ಚಪ್ಲಿ ಇಲ್ಲೇ ಬಿಡಬೇಕು!! ಅಂತ ನಮ್ಮ ಜೊತೆ ಬಂದಿದ್ದ ಮಕ್ಕಳು ಹೇಳಿದಾಗ  ನಮ್ಮ ಪ್ಯಾಟೆ ಹೈಕಳು ಆಅ!!! ಯಾಕೆ ಅಂದ್ರೂ ಹೌದು ಸಾ ಈ ಬೆಟ್ಟ ಹತ್ತಕ್ಕೆ ಬರಿ ಕಾಲಿನಿಂದ ಮಾತ್ರ ಪ್ರವೇಶ ಅಂದಾಗ ಒಲ್ಲದ ಮನಸಿನಿಂದ ಪಾದ ರಕ್ಷೆಗಳನ್ನು ಒಂದೆಡೆ ಬಿಟ್ಟರು.[ ನನಗೆ ಮೊದಲೇ ಈ ಅನುಭವ ಆಗಿತ್ತು]ಕಲ್ಲು ಮುಳ್ಳಿನ ಹಾದಿಯಲ್ಲಿ ,ಬೆಟ್ಟ ಹತ್ತೋದು ಹೇಗಪ್ಪಾ ಅಂತಾ ಎಲ್ಲರಿಗೂ ಪ್ರಶ್ನೆ ಕಾಡಿತ್ತು.ಬೆಟ್ಟದ ತಪ್ಪಲಿನಲ್ಲಿ ಮೊದಲು ಸಿಕ್ಕಶಿವನ ಪಾದುಕೆಗಳಿಗೆ ನಮಿಸಿ ಅಲ್ಲೇ ಇದ್ದ ಸಣ್ಣ ಗುಡಿಯ ದರ್ಶನ ಪಡೆದು ಸನಿಹದ ಕಟ್ಟೆಯಲ್ಲಿ ಕಲ್ಲುಗಳ ರಾಶಿ ನೋಡಿ ಏನೆಂದು ಕೇಳಿದಾಗ ಬೆಟ್ಟ ಇಳಿದು ವಾಪಸ್ಸು ಬರುವಾಗ ಅಲ್ಲಿ ಮೂರು ಕಲ್ಲುಗಳನ್ನು ಪ್ರತಿಯೊಬ್ಬರೂ ಹಾಕಬೇಕೆಂದು ಮಕ್ಕಳು ಹೇಳಿದರು. ಯಾಕೆ ಎಂದು ಮಕ್ಕಳುಹೇಳಲಿಲ್ಲ ನಾವೂ ಕೇಳಲಿಲ್ಲ.[ಅಲ್ಲಿನ ಆಚರಣೆ ಹಾಗೆ ಇರಲಿ ಬಿಡಿ ] ಮುಂದೆ ಶುರುವಾಯಿತು ಬೆಟ್ಟ ಹತ್ತುವ ಪರ್ವ.ಆಳೆತ್ತರ ಬೆಳೆದ ಹುಲ್ಲು ಅಲ್ಲಲ್ಲಿ ಸಿಗುವ ಬಂಡೆ ಕಲ್ಲುಗಳು, ಕರಡಿ ಗುಹೆಗಳು ಇವುಗಳ ನಡುವೆ ನಮ್ಮ ಬೆಟ್ಟ ಹತ್ತುವ ಕಾಯಕ !!ಸುಂದರ ಹಸಿರ ಮಡಿಲಲ್ಲಿ ಅಲ್ಲಲ್ಲಿ ಸಿಗುವ ಸುಂದರ ಹೂ ಗಳ                            ನೋಟ ಮೋಹಕವಾಗಿತ್ತು.ಏದುಸಿರು ಬಿಡುತ್ತ ಸಾಗುವ ನಾವು ಅಲ್ಲಲ್ಲಿ ಸಿಗುವ ಬಂಡೆಗಳ ನೆರಳಲ್ಲಿ ವಿಶ್ರಾಂತಿಪಡೆದು ಸಾಗಿದ್ದೆವು.ಧಣಿದ ದೇಹಕ್ಕೆ ಬಂಡೆಗಳ ನೆರಳು       ಆಸರೆ ನೀಡಿತ್ತು.ಅಂತೂ ಇಂತೂ ಬೆಟ್ಟ ಹತ್ತಿದ  ನಾವು ಭೀಮನ ಕಿಂಡಿ  ಪ್ರವೇಶ ಮಾಡಿದೆವು.ನಮ್ಮ ಹೈಕಳಂತೂ ಅಲ್ಲಿನ ದೃಶ್ಯ ನೋಡಿ ಪುಳಕಿತರಾಗಿ ಕುಣಿದು ಕುಪ್ಪಳಿಸಿದರು.ಅದ್ಭುತ ವಾತಾವರಣ  ತಣ್ಣನೆಯ ಗಾಳಿ ನಮ್ಮ ಧಣಿವನ್ನು ಮಾಯ  ಮಾಡಿತ್ತು.ಅಲ್ಲಿನ  ದೃಶ್ಯ  ಮನ ಮೋಹಕವಾಗಿ ಬೆಟ್ಟ ಹತ್ತಿದ್ದಕ್ಕೂ ಸಾರ್ಥಕ ಅನ್ನಿಸಿತು.ಸುಂದರ ಬೃಹದಕಾರವಾದ ಕಲ್ಲಿನ ಕಮಾನು ಅಚ್ಚರಿ ಹುಟ್ಟಿಸಿತ್ತು.ಮನದಣಿಯ ಅದರ ರಚನೆ ನೋಡಿ ಅಚ್ಚರಿ ಪಟ್ಟೆವು ಬನ್ನಿ ನೀವೂ ನೋಡಿ                                                                ಆಳೆತ್ತರದ ಬೃಹತ್ ಕಮಾನು ಸಣ್ಣ ದೇವಾಲಯ ಸುಂದರ ಪ್ರಶಾಂತ ಜಾಗ ಸ್ವರ್ಗ ಇಲ್ಲೇ ಇದೆ ಅನ್ನಿಸಿತ್ತು.     ವಾವ್ ಎಂಥಹ ಸುಂದರ ಲೋಕ ಆಲ್ವಾ !! ಬಹಳ ಹೊತ್ತು ಅಲ್ಲಿದ್ದ ನಗಾರಿ ಭಾರಿಸಿಕೊಂಡು ಹಾಡಿ  ಕುಣಿದು ತಂದಿದ್ದ ತಿಂಡಿ ತಿನಿಸು ಖಾಲಿ ಮಾಡಿ ಬೆಟ್ಟ ಇಳಿದೆವು ಆದರೂ ಈ ಕಲ್ಲಿನ ಕಮಾನು ಪೂರ್ತಿ ಯಾಗಿ ಫೋಟೋ ತೆಗೆಯುವ ಬಯಕೆ ಯಾಗಿ ಲೆಕ್ಕಾಚಾರ ಹಾಕಲಾರಂಭಿಸಿದ್ದೆ. ಗ್ರಾಮಕ್ಕೆ ವಾಪಸ್ಸು ಬಂದ ನಾವು ಸಹಕಾರ ನೀಡಿದ ಮಕ್ಕಳಿಗೆ ಹಾಗು ಗ್ರಾಮಸ್ಥರಿಗೆ ಕೃತಜ್ಞತೆ ಅರ್ಪಿಸಿ ಅಲ್ಲಿಂದ ಹೊರಟೆವು.ಮುಖ್ಯ  ರಸ್ತೆಗೆ ಬಂದ ನನಗೆ ಪಕ್ಕದ ಬೆನುಮನ ಹಳ್ಳಿ  ಗ್ರಾಮದಿಂದ ಈ ಕಲ್ಲಿನ ಕಮಾನಿನ ಪೂರಣ ಫೋಟೋ ತೆಗೆಯಬಹುದು ಅನ್ನಿಸಿ ನಮ್ಮ ಹುಡುಗರಿಗೆ ತಿಳಿಸಿದೆ. ಪಾಪ ಮೊದಲೇ ಧಣಿವು ಹಸಿವಿನಿಂದ ಕಂಗಾಲಾಗಿದ್ದ ಅವರು ಒಲ್ಲದ ಮನಸ್ಸಿನಿಂದ ನನ್ನ ಜೊತೆ ಬಂದರು.ಪಕ್ಕದ ಬೆನುಮನ ಹಳ್ಳಿ ಗ್ರಾಮ   ಪ್ರವೇಶಿಸಿ ಸುಮಾರು ಮೂರು ಕಿ.ಮಿ.ಕ್ರಮಿಸಿದ ನಮಗೆ ಸಿಕ್ಕ ದೃಶ್ಯ ಅಮೋಘ ವಾಗಿತ್ತು ಇಡೀ ಬೆಟ್ಟ ವಿವಿಧ ಆಕಾರದಲ್ಲಿ ಗೋಚರಿಸಲು ಸಿಕ್ಕಿತ್ತು.                     ಒಂದು ಹೆಬ್ಬುಲಿ ಬಾಯ್ತೆರೆದು ಏನನ್ನೋ ತಿನ್ನುತ್ತಿರುವಂತೆ ಕಂಡ ಈ ದೃಶ್ಯ ಮರೆಯಲಾಗದೆ ಉಳಿಯಿತು ಈ ಬೆಟ್ಟದ ಮಹಿಮೆಯೇ ಹೀಗೆ ಹಿಂದೊಮ್ಮೆ ಇಲ್ಲಿಗೆ ಬಂದಿದ್ದಾಗ ನನಗೆ ಸಿಕ್ಕ ದೃಶ್ಯ ಮರೆಯಲಾಗದ್ದು ಬನ್ನಿ ನೋಡೋಣ ಒಬ್ಬ ಹುಡುಗಿ ತನ್ನ ಪುರುಷನ ಹೆಗಲಮೇಲೆ ತನ್ನ ಕುತ್ತಿಗೆ ಇಟ್ಟಿರುವಂತೆ ಕಾಣುವ ಈ ವಿಚಿತ್ರ ಎಲ್ಲಿ ಸಿಕ್ಕೀತು ??? ಮತ್ತೊಂದು ವಿಶೇಷ ಇಲ್ಲಿಯವರೆಗೂ ಯಾವುದೇ ವೃತ್ತ ಪತ್ರಿಕೆಯಲ್ಲಿ, ವಾರ ,ಮಾಸಿಕ ಪತ್ರಿಕೆ ಗಳಲ್ಲಿ  ಟಿ.ವಿ.ಯಲ್ಲಿ ಈ ಭೀಮನ ಖಿಂಡಿ ಬೆಟ್ಟದ ಬಗ್ಗೆ  ಯಾವುದೇ ಮಾಹಿತಿ ಬಂದಿಲ್ಲ !!! ವರ್ಷಕ್ಕೊಮ್ಮೆ ಮೈಸೂರಿನಿಂದ ಯೂತ್ ಹಾಸ್ಟೆಲ್ ನಿಂದ ಚಾರಣ ಹೊರಟರೂ ಈ ಬೆಟ್ಟದ ಪೂರ್ಣ ಚಿತ್ರ ಎಲ್ಲೂ ಪ್ರಕಟವಾಗಿಲ್ಲ .ಅಂತರ್ಜಾಲದಲ್ಲೂ ಇದರಬಗ್ಗೆ ವಿಕಿ ಪೀಡಿಯ ಸೇರಿದಂತೆ ಮಾಹಿತಿ ಇಲ್ಲ. ಪ್ರವಾಸಿಗಳಿಗೆ ಮಾಹಿತಿಯೇ ಇಲ್ಲ !! ಈ ಭೀಮನ ಖಿಂಡಿ ಬೆಟ್ಟದ ಬಗ್ಗೆ ಮೊದಲ ಮಾಹಿತಿ ಎಲ್ಲರಿಗೂ ನೀಡುತ್ತಿರುವ ಬಗ್ಗೆ ನನಗಂತೂ ಹೆಮ್ಮೆ ಇದೆ .ಬಿಡುವಾದಾಗ ನೀವು ಒಮ್ಮೆ ಹೋಗಿ ಬನ್ನಿ. [ ಬೆಂಗಳೂರಿನಿಂದ ಹೋಗ ಬೇಕಾದವರು  ಬೆಂಗಳೂರು-ಕನಕಪುರ - ಸಾತನೂರು -ಹಲಗೂರು-[ಹಲಗೂರಿನಿಂದ ಚೆನ್ನಪಟ್ಟಣ ರಸ್ತೆ ಮೂಲಕ ] ಲಿಂಗ ಪಟ್ಟಣ -ಕಂಚನ ಹಳ್ಳಿ  ಅಡ್ಡ ರಸ್ತೆ -ಕಂಚನ ಹಳ್ಳಿ ]. ಎಚ್ಚರ ಆದರೆ ಈ ಬೆಟ್ಟವನ್ನು ಬರಿ ಕಾಲಿನಿಂದ ಮಾತ್ರ ಇರಬೇಕು !!! ಒಂದು ದಿನದ ಚಾರಣಕ್ಕೆ ಹೇಳಿ ಮಾಡಿಸಿದ ಪ್ರದೇಶ .ಬನ್ನಿ ನೋಡಿ ಆನಂದ ಪಡಿ !!! ನಮಸ್ಕಾರ.ಹೆಚ್ಚಿನ ಮಾಹಿತಿಗಾಗಿ ಗೂಗಲ್  ಅರ್ಥ್ ನಲ್ಲಿ ಭೀಮನ ಖಿಂಡಿ ಜಾಗ ಗುರುತಿಸಿದ್ದು  ಅದರ ಫೋಟೋ ಕೂಡ ನೀಡಿದ್ದೇನೆ.                                   ಗೂಗಲ್  ಅರ್ಥ್ ನಲ್ಲಿಯೂ ಈ ಬಗ್ಗೆ ಮಾಹಿತಿ ಈಗ  ಲಭ್ಯ ವಾಗಿದೆ.ನೀವು ಒಮ್ಮೆ ಹೋಗಿ ಬನ್ನಿ . ಅಡಗಿಕೊಂಡು ಕುಳಿತಿರುವ ವಿಸ್ಮಯ  ಭೀಮನ ಖಿಂಡಿ ವಿಚಾರ ಪ್ರಪಂಚಕ್ಕೆ ತಿಳಿಯಲಿ.
















20 comments:

Ittigecement said...

ಬಾಲು ಜೀ...

ಅಂದು ನನಗೆ ಫೋನ್ ಮಾಡಿ ಹೋಗಿದ್ದು ಇದೇ ಸ್ಥಳಕ್ಕಾ?

ಮಸ್ತ್ ಇದೇರಿ...

ನಿಮ್ಮ ಕೆಲವು ಫೋಟೊಗಳು ( ಹೂಗಳದ್ದು) ಮನಮೋಹಕವಾಗಿವೆ..

ಎಲ್ಲ ವಿವರಗಳನ್ನು ಒಳಗೊಂಡು..
ಎಲ್ಲೂ ಬೋರ್ ಆಗದ ಹಾಗೆ ನಿರೂಪಣೆ ಕೊಟ್ಟು..
ನಮಗೂ ಅಲ್ಲೊಮ್ಮೆ ಹೋಗಿ ಬರುವ ಕನಸು ಕಟ್ಟಿಕೊಟ್ಟಿದ್ದೀರಿ...

ಅಭಿನಂದನೆಗಳು...
ಚಂದದ ಫೋಟೊಗಳಿಗೆ... ನಿರೂಪಣೆಗೆ..

ಜೈ ಹೋ...

ಪ್ರಗತಿ ಹೆಗಡೆ said...

ಬಾಲು ಅವರೇ, ತುಂಬಾ ಚೆನ್ನಾಗಿ ಮೂಡಿಬಂದಿದೆ ನಿಮ್ಮ ಲೇಖನ... ಸುಂದರ ಚಿತ್ರಗಳು...

sunaath said...

ಬಾಲು,
ನನಗೆ ಅಲ್ಲಿ ಹೋಗಲು ಸಾಧ್ಯವಾಗಲಾರದು. ಆದರೆ ನೀವು ನೀಡಿದ ಅದ್ಭುತ ಚಿತ್ರಗಳನ್ನು ನೋಡಿ ಹಾಗು ವಿವರಣೆ ಓದಿ ತುಂಬ ಸಂತೋಷವಾಯಿತು.

ಮನಮುಕ್ತಾ said...

ಸು೦ದರ ಚಿತ್ರಗಳೊಡನೆ ಚೆ೦ದದ ಮಾಹಿತಿ...
ನಿಜ ..ನೋಡಲೇ ಬೇಕೆನ್ನಿಸುವ೦ತಹ ಸ್ಥಳ..

Shiv said...

ಬಾಲು ಅವರೇ,

ಭೀಮನಖಿಂಡಿ ಬಗ್ಗೆ ಸಚಿತ್ರ ವರದಿಗೆ ಧನ್ಯವಾದಗಳು !
ಚೆನ್ನಾಗಿ ಮೂಡಿಬಂದಿದೆ ಚಿತ್ರಗಳು

ಸಾಗರದಾಚೆಯ ಇಂಚರ said...

ನಾನು ಒಮ್ಮೆ ಹೋಗ್ಬೇಕು ಸರ್

ನಿಮ್ಮ ವಿವರಣೆ ರಸವತಾಗಿದೆ

ಸುಬ್ರಮಣ್ಯ said...

ಬಾಲು ಅಣ್ಣ
ಚೆನ್ನಾಗಿದೆ
ಲೇಖನ ಮತ್ತು ಫೋಟೊ.

UMESH VASHIST H K. said...

ಅಚ್ಚರಿ ಮೂಡಿಸುವ ಫೋಟೋಗಳು , ಭೀಮನ ಖಿಂಡಿ ಪರಿಚಿಸಿದ್ದಕ್ಕಾಗಿ ಬಾಲು ಸುಬ್ಬು ಅವರಿಗೆ ಅಬಿನಂದನೆಗಳು

Unknown said...

ಸೂಪರ್ ಬಾಲೂ
ಸಚಿತ್ರ ವಿವರಣೆಗಾಗಿ
ತುಂಬಾ ತುಂಬಾ ಧನ್ಯವಾದಗಳು
ಸಮಯ ಸಿಕ್ಕಿದಾಗ ಖಂಡಿತಾ ನೋಡಬೇಕು

shivu.k said...

ಬಾಲು ಸರ್,

ಬೀಮನ ಖಿಂಡಿಯ ನಿಮ್ಮ ಚಾರಣ ಪ್ರವಾಸ ಸೂಪರ್..ನೀವು ಹೊರಟಾಗಿನಿಂದ ಮುಗಿಯುವವರೆಗೆ ಇಂಚಿಂಚು ವಿವರಿಸಿ ನಮಗೂ ಆಸೆ ತೋರಿಸಿದ್ದೀರಿ..ಜೊತೆಗೆ ಗೂಗಲ್ ಅರ್ಥ ಮ್ಯಾಪ್, ನೀವು ತೆಗೆದ ಚಿತ್ರಗಳು ಕಣ್ಸೆಳೆಯುತ್ತವೆ...
ಉತ್ತಮ ಮಾಹಿತಿ ಮತ್ತು ಚಿತ್ರಗಳಿಗಾಗಿ ತುಂಬಾ ಧನ್ಯವಾದಗಳು.

ಸೀತಾರಾಮ. ಕೆ. / SITARAM.K said...

ಅಭಿನಂದನೆಗಳು. ಅಪರೂಪದ ಹೊಸತಾಣವೊಂದರ ಪರಿಚಯ ಮತ್ತು ಸಮಗ್ರ ಮಾಹಿತಿ ನೀಡಿದ್ದೀರಾ...
ನಿಮ್ಮ ಮಾರ್ಗದರ್ಶನದಲ್ಲೇ ಇದರ ಚಾರಣ ಮಾಡಬೇಕೆ೦ದುಕೊಂಡಿರುವೆ. ನೀವು ಹೋಗುವಾಗ ತಿಳಿಸಿ.
ಧನ್ಯವಾದಗಳು.

Deep said...

Baalu sir..

chanagive photo and Lekhana..

Idu Bheemana kindi ge estane trip sir?

Omme nimma jote Bhemmana kindige Mini charana vagali..

ಕ್ಷಣ... ಚಿಂತನೆ... said...

ಬಾಲು ಸರ್‍, ಫೋಟೋ ಮತ್ತು ಲೇಖನ ಓದಿದೆ. ಕನಕಪುರ ಎಂದಾಕ್ಷಣ ನನಗೆ ಮೇಕೆದಾಟಿಗೆ ಹೋಗಿದ್ದ ನೆನಪುಗಳು ಬಂದವು.

ನಿಜಕ್ಕೂ ವಿಸ್ಮಯಲೋಕ ನೋಡಿದೆವು (ಕುಳಿತಲ್ಲಿಂದಲೇ). ಇಂತಹ ವಿಸ್ಮಯ ವಿಷಯದ ವಿವರವನ್ನು ಕೊಟ್ಟಿದ್ದಕ್ಕಾಗಿ ಧನ್ಯವಾದಗಳು.
ಸ್ನೇಹದಿಂದ,

Ashok.V.Shetty, Kodlady said...

Baalu Sir,

Photo haagu lekhanada moolaka ne purna Darshanane maadisibitri, Tumbba uttama lekhana, Dhanyavadagalu.

Badarinath Palavalli said...

ವಾವ್,

ಅಮೋಘವಾದ ಸಚಿತ್ರ ಬರಹ ಸಾರ್. ಬರಿ ಕಾಲಲ್ಲಿ ಬೆಟ್ಟ ಹತ್ತುವ ರೋಚಕತೆ ನೆನಸಿಕೊಂಡೇ ನನ್ನ ಕಾಲುಗಳು ಈಗಲೇ ಪದ ಹಾಡಿದವು.

ಮಾಹಿತಿಯು ಮತ್ತು ತಾಣವನ್ನು ತಲುಪುವ ವಿವರವೂ ಸಹಕಾರಿಯಾಗಿದೆ.

Srikanth Manjunath said...

ಬಾಲು ಸರ್..ತಾಣ ಬಹು ಮೋಹಕ..ನೀವು ನನಗೆ ಈ ಸ್ಥಳದ ಬಗ್ಗೆ ಹೇಳಿದಾಗ ಕುತೂಹಲವಿತ್ತು..ನಿಮ್ಮ ಬ್ಲಾಗ್ ಖಂಡಿತ ನನಗೆ ದಾರಿ ದೀಪ..ನಮ್ಮ "ಅಲೆಮಾರಿಗಳ" ತಂದ..ಖಂಡಿತ ಈ ಜಾಗವನ್ನು ಮುತ್ತಿಗೆ ಹಾಕಿ ಬರುತ್ತೇವೆ...ಧನ್ಯವಾದಗಳು.ಒಳ್ಳೆಯ ಮಾಹಿತಿ..ಸುಂದರ ಲೇಖನ...

Harini Narayan said...

ಅಪರೂಪದ ಮಾಹಿತಿ ನೋಡಿ ನಾಳೇನೇ ಹೋಗೋಣಾ ಅಂದ್ಕೊಂಡೆ. ಬಸ್ ರೂಟ್ನಲ್ಲೇ ಸಿಗಬಹುದು ಅನ್ಕೊಂಡಿದ್ದೆ. ಕೊಂಡಿ ಓದ್ತಾ ಓದ್ತಾ ಯಾಕೋ ಸುಸ್ತಾದ ಅನುಭವ . ನಂ ಕೈಲಾಗೋಲ್ಲಪ್ಪಾ ಅನ್ಕೊಂಡು, ನಾಲ್ಕು ಸಲ ಇದನ್ನೇ ಓದಿ, ನೋಡಿ ಸಂತೋಷಪಟ್ಟೆ ... Thanks for the nice info... !!

bilimugilu said...

Balu Sir,
Thank you for sharing this again on FB :) So well expressed....

meg said...
This comment has been removed by the author.
meg said...

Nature is the architect of this world. Beautiful place and very well written Balu Uncle.