Friday, September 24, 2010

ಡಾ// ರಾಜ್ ಕುಮಾರ್ ಹಾಗೂ ಬಿ. ಸರೋಜಾದೇವಿ ಆಕಾಶವೇ ಬೀಳಲಿ ಮೇಲೆ ಎಂದು ಹಾಡಿದ್ದು ಇಲ್ಲೇ !!!

ಕಲ್ಲಿರಲಿ ಮುಳ್ಳೇ ಇರಲಿ ನಾ ಮೊದಲು ಮುನ್ನಡೆವೆ !!!

ಹೆದರಿಕೆಯ ನೋಟವೇಕೆ ಒಡನಾಡ ನಾನಿರುವೆ !!1

ಹೊಸ ಬಾಳಿನ ಹಾದಿಯಲ್ಲಿ  ಜೊತೆ ಗೂಡಿ ನಾ ಬರುವೆ!!

ಇಂದೀಗ ಎರಡೂ ಜೀವ ಬೆರೆತೂ ಸ್ವರ್ಗ ವಾಯ್ತು!!

   
                                                                                                                                                                                                          ಹಾಗೆ ಸಿ.ಡಿ.ಯಲ್ಲಿ ಈ ಹಾಡು ಕೇಳುತ್ತಿದ್ದೆ .ಅರೆ ತಾಳು ಈ ಹಾಡನ್ನು ಯೂ ಟ್ಯೂಬ್ ನಲ್ಲಿ ನೋಡೋಣ ಅಂತ ಅಲ್ಲಿಗೆ ಹೋದೆ.ಆಶ್ಚರ್ಯ ಕಾದಿತ್ತು!!! ತೆಲುಗಿನ ನಿರ್ದೇಶಕ  ಜಯಂತ್ ಪರಾಂಜಿ ಎನ್ನುವರು ತಮ್ಮ ಕಾಮೆಂಟ್ ಹಾಕಿ ಈ ಹಾಡು  ತಮಗೆ ತೆಲುಗಿನಲ್ಲಿ ಒಳ್ಳೆಯ ಚಿತ್ರಗಳನ್ನು ನೀಡಲು ಪ್ರೇರೇಪಿಸಿತು ಅಂತ ಹೇಳಿದ್ದಾರೆ.ಹಾಗೆ ನೋಡ್ತಾ ನೋಡ್ತಾ ಇದು ನಮ್ಮ ಕರಿಘಟ್ಟ ದಲ್ಲಿ ಚಿತ್ರಿಕರಿಸಿರೋದು ಕಾಣಿಸಿತು.ಸರಿ ಅಂತ ಭಾನುವಾರ ಅಲ್ಲಿಗೆ ಹೊರಟೆ..ಅಲ್ಲಿ ನನಗೆ ಕೆಲವು ತಾಣಗಳನ್ನು ನೋಡಿ ಹಾಡು ಜ್ಞಾಪಕ ಬಂತು. ಸುಮದುರ ಹಾಡನ್ನು ಚಿತ್ರೀಕರಿಸಿದ ಜಾಗ ನನ್ನ ಕ್ಯಾಮರಾ ದಲ್ಲಿ ಸೆರೆಯಾಯ್ತು!!!ದೂರದಲ್ಲಿ ಡಾ//ರಾಜ್ ಕುಮಾರ್  ಸರೋಜಾದೇವಿ  ಹಾಡು ಹೇಳುತ್ತಾ ಓಡಿ ಬರುತ್ತಿರುವಂತೆ ಭಾಸವಾಯಿತು !!!.ಇದರ ಶ್ರೇಯಸ್ಸು ಹಾಡು ರಚಿಸಿದ ಚಿ.ಉದಯ ಶಂಕರ್ , ಸಂಗೀತ ನೀಡಿದ ರಾಜನ್ ನಾಗೇಂದ್ರ , ಹಾಡು ಹೇಳಿದ ಪಿ.ಬಿ. ಶ್ರೀನಿವಾಸ್ , ಹಾಡಿನಲ್ಲಿ  ನಟಿಸಿದ ಡಾ//ರಾಜ್ ಕುಮಾರ್ ಬಿ.ಸರೋಜಾ ದೇವಿ  ಹಾಗು ನಿರ್ದೇಶಕ ಸಿದ್ದಲಿಂಗಯ್ಯ ಅವರಿಗೆ  ನಮ್ಮ ಕನ್ನಡ ಚಿತ್ರರಂಗದ ಕೀರ್ತಿ ಹಬ್ಬಲು ಕಾರಣರಾದ ಇವರೆಲ್ಲರಿಗೆ ಈ ನೆನಪಿನ ಕಾಣಿಕೆ. ತೆಲಗು ನಿರ್ದೇಶಕರ ಅಭಿಪ್ರಾಯ ಹೀಗಿದೆ ನೋಡಿ.








  • What a song !!! I am a telugu film director and this is the song that inspired me to make films ! I grew up in Bangalore and this song is closest to my heart ! What lyrics !!!






  • beautiful :)!!



9 comments:

Dr.D.T.Krishna Murthy. said...

Baaloo sir;it is a great song!thanks for reminding such a lovely song.

sunaath said...

ನನಗೆ ತುಂಬ ಇಷ್ಟವಾದ ಹಾಡು. ಇಲ್ಲಿ ನೀಡಿದ್ದಕ್ಕೆ ಧನ್ಯವಾದಗಳು.

ಅಪ್ಪ-ಅಮ್ಮ(Appa-Amma) said...

ಬಾಲು ಅವರೇ,

ಅದ್ಭುತ ಹಾಡು !
ಅದನ್ನು ಚಿತ್ರಿಕರಿಸಿದ ಸ್ಥಳ ಪರಿಚಯಿಸದಕ್ಕೆ ಧನ್ಯವಾದಗಳು.
ನೀವು ಹೇಳಿದ ಸ್ಥಳ ಬೆಂಗಳೂರಿನಿಂದ ಎಷ್ಟು ದೂರ?

ಮನಮುಕ್ತಾ said...

ಒಳ್ಳೆಯ, ಚೆ೦ದದ ಹಾಡು..ಸು೦ದರ ಫೋಟೊಗಳೊ೦ದಿಗೆ ಉತ್ತಮ ಮಾಹಿತಿ...ಧನ್ಯವಾದಗಳು.

ಮನದಾಳದಿಂದ............ said...

ಬಾಲು ಸರ್,
ಸುಂದರ ಹಾಡಿನ ಚಿತ್ರೀಕರಣದ ಸ್ಥಳದ ಚಿತ್ರದೊಂದಿಗೆ ಹಾಡಿನ ವೀಡಿಯೋ ಕೂಡಾ ಹಾಕಿದ್ದು ತುಂಬಾ ಸಂತೋಷವಾಯ್ತು. ಅದ್ಬುತ ಗೀತೆ.........
ನೆನಪಿಸಿದ್ದಕ್ಕೆ ಧನ್ಯವಾದಗಳು.

balasubramanya said...

ಅಪ್ಪಾ -ಅಮ್ಮ ರವರೆ ಈ ಸುಂದರ ಹಾಡಿನ ಚಿತ್ರೀಕರಣ ಶ್ರೀ ರಂಗ ಪಟ್ಟಣ ದ ಸಮೀಪ ವಿರುವ ಕರಿಘಟ್ಟ ಎಂಬ ಸ್ಥಳದಲ್ಲಿ ನಡೆದಿದೆ.ಬೆಂಗಳೂರಿನಿಂದ ಸರಿಯಾಗಿ 140 ಕಿ.ಮಿ. ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಶ್ರೀ ರಂಗ ಪಟ್ಟಣ ಕ್ಕೆ ಮೊದಲು ನಿಮಗೆ ಕ.ಶೆಟ್ಟಿಹಳ್ಳಿ ಎಂಬ ಒಂದು ಹಳ್ಳಿ ದಾಟಿದ ನಂತರ ಎಡಗಡೆಗೆ ಶ್ರೀ ರಂಗಪಟ್ಟಣ ಬನ್ನೂರು ರಸ್ತೆ ಸಿಗುತ್ತದೆ ಅದೇ ರಸ್ತೆಯಲ್ಲಿ 2 ಕಿ.ಮಿ. ಸಾಗಿದರೆ ರಸ್ತೆಯ ಪಕ್ಕದಲ್ಲಿ ಒಂದು ಬೆಟ್ಟ ಸಿಗುತ್ತದೆ. ಅದೇ ಕರಿಘಟ್ಟ. ಅಲ್ಲೇ ಅಡ್ಡಾಡಿದರೆ ನಿಮಗೆ ಈ ಜಾಗ ಸಿಗುತ್ತದೆ.ಒಂದು ಭಾನುವಾರ ಕಳೆಯಲು ಸುಂದರ ವಾದ ಜಾಗ.

Deep said...

ballu.. one of my fav song..

You made me remember our outing in the jungle, where in we all sang old melogies..

ಸೀತಾರಾಮ. ಕೆ. / SITARAM.K said...

ನಮ್ಮೊಳಗಿನ ಬಾಲುರವರೆ,
ಇದು ನನ್ನ ಮೆಚ್ಚಿನ ಹಾಡು. ಆ ಹಾಡಿನ ಚಿತ್ರೀಕರಣದ ಜಾಗನ್ನು ಕೆಕ್ಕಿದ್ದಕ್ಕೆ ಅಭಿನಂದನೆಗಳು.
ಜೈ ಹೋ!

Ashok.V.Shetty, Kodlady said...

ಎವರ್ಗ್ರೀನ್ ಹಾಡು ಬಾಲು ಸರ್ .. ಇಂತಹ ಸುಂದರ ಹಾಡ ನ್ನು ಚಿತ್ರೀಕರಿಸಿದ ಸ್ಥಳವನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು ... ಮುಂಬಯಿ ಜಾಲಾಡುವುದು ಯಾವಾಗ ?