Monday, December 27, 2010

ಕೈಮರದ ಹಾದಿ !! ಕಾನನದ ಮಡಿಲಲ್ಲಿ ಹೀಗೂ ಉಂಟೆ !!!

ಓಡುತಿರುವ  ಜಿಂಕೆಗಳು


ಕಳೆದ ಸಂಚಿಕೆಯಲ್ಲಿ  ಡಿ.ಬಿ.ಕುಪ್ಪೆ ಬಗ್ಗೆ [ಎರಡೂ ರಾಜ್ಯಗಳ ನಡುವೆ ತೇಲಾಡಿದ ] ಬರೆದವನೇ , ಮತ್ತೆ ಕಾಡಿಗೆ ಎಸ್ಕೇಪ್ ಆಗಿದ್ದೆ.ಹೊಸ ಹುರುಪು ಉತ್ಸಾಹ ತುಂಬಿಕೊಂಡು ನಿಮ್ಮ ಮುಂದೆ ಹಾಜರಾಗಿದ್ದೇನೆ.ಬನ್ನಿ ಕೈಮರ ಎಂಬ ಕಾನನದ ಪ್ರದೇಶಕ್ಕೆ ಹೋಗೋಣ.


ಕೈಮರ  ಬಂಗಲೆ


ಈ ಪ್ರದೇಶ ಯಾಕೋ ಕಾಣೆ ಪ್ರತೀಬಾರಿಯೂ ನಮಗೆ  ವಿಚಿತ್ರ ಅನುಭವ ನೀಡಿದೆ.ಸುಮಾರು ಮೂರು ಬಾರಿ ಹೋದಾಗಲೂ ನಮ್ಮ ಕಾರು ಕೆಟ್ಟಿರುವುದು ವಿಶೇಷ ಹಾಗು ವಿಚಿತ್ರ




ಕೈಮರ ಬಂಗಲೆಯ ಒಂದು ನೋಟ



.ಕೈಮರ ಎಂಬ ಜಾಗ ದಲ್ಲಿ 1932 ರಲ್ಲಿ ನಿರ್ಮಿತವಾದ ಒಂದು ಹಳೆಯ ಬಂಗಲೆ ಇದ್ದು ಇದರಲ್ಲಿ ಹಿಂದೆ ಮಹಾರಾಜರು /ಆಂಗ್ಲ ಅಧಿಕಾರಿಗಳು  ಬೇಟೆಯಾಡಲು ಬಂದಾಗ  ಉಳಿಯುತ್ತಿದ್ದರೆಂದು ತಿಳಿದುಬಂತು.ದಟ್ಟ ಕಾನನದಲ್ಲಿ ಅಡಗಿ ಕುಳಿತಿರುವ ಇದು ಇಂದು ಒಂದು " anti poaching camp '' ಆಗಿದ್ದು ಕೇರಳ ರಾಜ್ಯದ ಗಡಿ ಇಲ್ಲಿಂದ ಸುಮಾರು ಇಪ್ಪತ್ತು ಅಡಿ ಅಷ್ಟೇ  ಇದಕ್ಕೆ ಪೂರಕವಾಗಿ ಬಹಳ ಹಿಂದೆ ಗಡಿ ಗುರುತಿಸಿ ನೆಟ್ಟ ಕಲ್ಲಿದ್ದು




ಎರಡು ಪ್ರಾಂತಗಳ ಗುರುತಿಸಲು  ಗಡಿ ಕಲ್ಲು


ಅದರಲ್ಲಿ ಕನ್ನಡ ಹಾಗು ಆಂಗ್ಲ ಭಾಷೆಯಲ್ಲಿ ವಿವರಣೆ ನೀಡಲಾಗಿದೆ. ಅದರಲ್ಲಿ ಕನ್ನಡದಲ್ಲಿ  "ಮೈಸೂರು ಹಾಗು ಮಲಬಾರು ಸೀಮೆ ಗಡಿ "ಎಂದಿದ್ದರೆ , ಇಂಗ್ಲೀಶ್ ನಲ್ಲಿ " boundary stone between mysore and malabaar " ಎಂದು ಬರೆಯಲಾಗಿದೆ. ಆದ್ರೆ ಅಚ್ಚರಿ ಎಂದರೆ ಇಲ್ಲಿ ಮಲೆಯಾಳಂ  ಭಾಷೆ ನಾಪತ್ತೆ!!!. ನಾವು ಸುಮ್ಮನೆ ಹಾಗೆ ನಡೆಯುತ್ತಾ  ಕೈಮರದಿಂದ ಈ ಗಡಿ ಗುರುತನ್ನು ದಾಟಿ ನಮಗೆ ಅರಿವಿಲ್ಲದೆ ಕೇರಳ ರಾಜ್ಯದ ಕಾಡಿಗೆ ಹೋಗಿದ್ದೆವು.ನಂತರ  ಸ್ವಲ್ಪ ದೂರ ಕ್ರಮಿಸಿ ವಾಪಸ್ಸು ಬಂದೆವು. ಈ ಪ್ರದೇಶದಲ್ಲಿ ಸುತ್ತ ಮುತ್ತ ಹಲವಾರು   "anti poaching camp"  ಅವುಗಳ ಹೆಸರು ವಿಚಿತ್ರವಾಗಿವೆ " ಕುದುರೆ ಸತ್ತ ಹಳ್ಳ ಕ್ಯಾಂಪು " "ಹತ್ತನೇ ಮೈಲಿ ಕ್ಯಾಂಪು" ಇತ್ಯಾದಿ .ಇನ್ನು ಇಲ್ಲಿಗೆ ಹೋಗಲು ಅಸಾಧ್ಯವಾದ ಕಾಡಿನ ದಾರಿ ಇದೆ. ಮೊದಲ ಬಾರಿ ಇಲ್ಲಿಗೆ ಬರುವಾಗ   ನಮ್ಮ ಜೀಪು ಕೆಟ್ಟು , ಹುಲಿಯ ಸನಿಹ  ಜೀಪಿನಲ್ಲಿ ಕುಳಿತು ಅನುಭವಿಸಿದ  ಅನುಭವದ ವಿವರ ಈಗಾಗಾಗಲೇ ನಿಮಗೆ ಹೇಳಿದ್ದೇನೆ. ಇನ್ನು ಎರಡನೇ ಸಾರಿಯದು ಮೊದಲನೆಯದಕ್ಕಿಂತ ಸ್ವಲ್ಪ ವಿಭಿನ್ನ . ನಮ್ಮ ಪ್ರತೀ ಭೇಟಿಯಲ್ಲೂ   ನಾವುಗಳು ಕೈಮರ ಜಾಗಕ್ಕೆ ಬರಲು ಪ್ರಯತ್ನಿಸುತ್ತೇವೆ. ಹಾಗೆ ಇಲ್ಲಿಗೆ  ಒಮ್ಮೆ ಬಂದಾಗ  ಇಲ್ಲಿ ಸಂಜೆಯಾಗಿತ್ತು.  .ಹಾಗೆ ಅಡ್ಡಾಡಿ ವಾಪಸ್ಸು ನಮ್ಮತಂಗುದಾಣ ತಲುಪಲು ಹೊರಟೆವು. ಕಾಡಿನ ಕತ್ತಲಲ್ಲಿ  ನಿಧಾನವಾಗಿ ದಾರಿಯಲ್ಲದ ದಾರಿಯಲ್ಲಿ ನಮ್ಮ ವಾಹನ ಚಲಿಸುತ್ತಿತ್ತು. ಸುಮಾರು ದೂರ ಕಾಡಿನ ಹಾದಿ ಸವೆಸಿದ್ದ ನಮಗೆ "ಬಾಲು, ಯಾಕೋ ಗಾಡಿ ಒಂದೇ ಕಡೆ ಎಳಿತಾ ಇದೆ "  ಅಂತಾ ವೇಣು ಕಾರನ್ನು ನಿಲ್ಲಿಸಿದಾಗಲೇ  ವಾಸ್ತವದ ಅರಿವಾಗಿದ್ದು. ನಮ್ಮ ಜೊತೆ ಇದ್ದ ಫಾರೆಸ್ಟ್ ಗಾರ್ಡ್  ಮೊದಲು ನಂತರ ನಾವು ಕಾರಿನಿಂದ ಇಳಿದು  ನೋಡಿದರೆ ಕಾರಿನ ಎಡಗಡೆ  ಮುಂದಿನ ಚಕ್ರ  ಅಪ್ಪಚ್ಚಿ ಯಾಗಿ ನಿಂತಿದೆ !!!,ಏನ್ಮಾಡೋದು  ಕಗ್ಗತ್ತಲೇ ಕಾಡಿನಲ್ಲಿ ನಿಧಾನವಾಗಿ ಸುತ್ತ ಮುತ್ತ ಪರೀಕ್ಷಿಸಿ ನಮ್ಮಲ್ಲಿದ್ದ  ಟಾರ್ಚ್ ಬೆಳಕನ್ನು ಹತ್ತಿಸಿ , ಕಾರಿನಲ್ಲಿದ್ದ ಸ್ಪೇರ್ ಚಕ್ರ ಬದಲಿಸಲು ಶುರು ಮಾಡಿದೆವು,ಮೂರು ಜನ ಚಕ್ರ ಬದಲಿಸುವ ಕಾರ್ಯ ಕೈಗೊಂಡರೆ ನಾನು ಹಾಗು ಫಾರೆಸ್ಟ್ ಗಾರ್ಡ್ ಇಬ್ಬರೂ  ಕಾವಲು ನಿಂತೆವು.ದಟ್ಟ ಕಾಡಿನಲ್ಲಿ  ನಮ್ಮ ವೀಕ್ಷಣೆ ಸಾಗಿತ್ತು. ನಮ್ಮ ಕಾರು ನಿಂತಿದ್ದ ಕಡೆ   ಕಗ್ಗತ್ತಲ ಕೋಟೆಯಂತೆ ಭಾರಿ ಮರಗಳಿದ್ದು  ಯಾವ ಮರದಲ್ಲಿ ಯಾವ ಪ್ರಾಣಿ ಇದೆಯೋ ಎನ್ನುವ ಯೋಚನೆ ಒಂದೆಡೆ, ಅಪ್ಪಿತಪ್ಪಿ ಮರದ  ಮೇಲಿಂದ  ಹೆಬ್ಬಾವು ಬಿದ್ದರೆ ಗತಿ ಏನು?? ಎನ್ನುವ , {ನಾವು ನಿಂತ ಜಾಗ ಆನೆ ಹುಲ್ಲಿನಿಂದ ಕೂಡಿದ್ದು ಪೊದೆಗಳಿಂದ ಸುತ್ತುವರೆದಿತ್ತು,ಅಪ್ಪಿತಪ್ಪಿ ಯಾವುದೇ ಪ್ರಾಣಿ ಅಲ್ಲಿ ಬಂದರೂ ನಮಗೆ ತಿಳಿಯುತ್ತಿರಲಿಲ್ಲಾ }ದೂರದಲ್ಲಿ ನಮ್ಮ ಟಾರ್ಚ್ ಬೆಳಕಿಗೆ ಹೊಳೆಯುವ  ಜಿಂಕೆಗಳ ಕಣ್ಣುಗಳು ಕಾಡಿಗೆ ಸೀರಿಯಲ್ ಲೈಟ್ ಹಾಕಿದಂತೆ ಅನೀಸಿದರೂ ಎಲ್ಲೋ ಮನದ ಮೂಲೆಯಲ್ಲಿ ಅಳುಕಿದ್ದರೂ ಸಹ ,ಯಾವುದೇ ಪ್ರಸಂಗ ಬಂದರೂ ಎದುರಿಸಲು ಸಿದ್ದವಾಗಿ ನಿಂತಿದ್ದೆ. ಸುಮಾರು ಅರ್ಧ ಘಂಟೆಗೂ ಮೀರಿ ಕಷ್ಟಪಟ್ಟು ಕಾರಿಗೆ ಜಾಕ್ ಹಾಕಿ ಮುಂದಿನ ಚಕ್ರ ಬದಲಿಸಿ  ಖುಷಿಯಿಂದ ಹೊರಟೆವು  ಸುಮಾರು ನೂರು ಅಡಿಗಳು ಮುಂದೆ ಹೋಗಿದ್ದೆವೂ ಅಷ್ಟೇ ಮತ್ತೆ ಕಾರು ಎಡಗಡೆ ಎಳೆಯಲು ಶುರು ಮಾಡಿತ್ತು!!!,ಒಳ್ಳೆ ರಾಮಾಯಣ ಆಯ್ತು ಅಂತಾ ಮತ್ತೆ ನಿಲ್ಲಿಸಿ ನೋಡಿದರೆ  ಎಡಗಡೆ ಹಿಂದಿನ ಚಕ್ರವೂ ಅಪ್ಪಚ್ಚಿಯಾಗಿತ್ತು.ಇದ್ದ ಒಂದು ಸ್ಪೇರ್ ಚಕ್ರ ಆಗಲೇ ಮುಂದೆ ಫಿಟ್ ಆಗಿಹೋಗಿತ್ತು , ಎರಡನೇ ಸ್ಪೇರ್ ಎಲ್ಲಿಂದ ತರೋದು,??ಅಂತಾ ಯೋಚಿಸಿದೆವು, ಈಗ ಏನು ಮಾಡಬೇಕೂ ಅಂತಾ ತಿಳಿಯದೆ ಬೆಪ್ಪಾಗಿ ನಿಂತೆವು. ರಾತ್ರಿವೇಳೆ ಕಾಡಿನಲ್ಲಿ ವಾಹನ ಇಲ್ಲೇ  ಬಿಟ್ಟು  ನಾವು ನಡೆದು ಹೋಗೋದೇ ?[  ಹೀಗೆ ಮಾಡಿದಲ್ಲಿ  ಆನೆಗಳ ಹೊಡೆತಕ್ಕೆ  ಸಿಕ್ಕಿ ಕಾರು ನಜ್ಜು ಗುಜ್ಜಾಗುವ ಸಂಭವ ಇತ್ತು ]ಅಥವಾ ನಾವು ಕಾರಿನ ಜೊತೆ ಇಲ್ಲೇ ಮಲಗುವುದೇ ? [ ಹೀಗಾಗಿದ್ದಲ್ಲಿ ಕೊರೆಯುವ ಚಳಿಯಲ್ಲಿ ನಮ್ಮ ಕಥೆ ಏನ್ ಆಗ್ತಿತ್ತೋ ಗೊತ್ತಿಲ್ಲಾ!! ]ಹೀಗೆ ಚರ್ಚೆಗಳ ಸರಮಾಲೆ, ಆಗಲೇ ರಾತ್ರಿ ಒಂಭತ್ತು ಸಮೀಪಿಸಿ ನಾವು ಏನಾದರೂ ಮಾಡಲೇ ಬೇಕಿತ್ತು.ಸರಿ ಆದದ್ದು ಆಗಲಿ ಅಂತಾ ಪಂಚರ್ ಆದ ಕಾರನ್ನು ನಿಧಾನವಾಗಿ ಚಲಾಯಿಸುತ್ತಾ ಸುಮಾರು ಎಂಟು ಕಿ.ಮಿ. ಕ್ರಮಿಸಿ  " ಬಳ್ಳೆ"   ಗೇಟಿನ ಹತ್ತಿರ ಬಂದು ಕಾರನ್ನು ನಿಲ್ಲಿಸಿದೇವು.



ನಮ್ಮನ್ನು ಎಲ್ಲ ಕಾಡಿಗೂ ಕರೆದುಕೊಂಡು ಹೋದ ಗೆಳೆಯ ಇವನು
 


ಅಲ್ಲೇ  ಇದ್ದ ಅರಣ್ಯ ಸಿಬ್ಬಂದಿ ಅವರ ಜೀಪಿನಲ್ಲಿ ನಮ್ಮನ್ನು ಡಿ.ಬಿ.ಕುಪ್ಪೆ  ಐ.ಬಿ.  ಗೆ ನಮ್ಮನ್ನು ತಲುಪಿಸಿದರು. ಮಾರನೆದಿನ ಒಂದು ಜೀಪನ್ನು ಬಾಡಿಗೆಗೆ ಪಡೆದು  ಬಂದು ನಮ್ಮ ಕಾರಿನ ಬಳಿ ಬಂದು ನೋಡಿದರೆ  ಹಿಂದಿನ ಚಕ್ರ ಅಪ್ಪಚ್ಚಿ ಯಾಗಿತ್ತು!!,ಅದರಲ್ಲಿ ನ ಟ್ಯೂಬು  ಪುಡಿ ,ಪುಡಿಯಾಗಿ ಹೋಗಿತ್ತು . ಸರಿ ಅಂತಾ ಚಕ್ರವನ್ನು ಜೀಪಿನಲ್ಲಿ ಹಾಕಿಕೊಂಡು ಕೇರಳದ  ಮಾನಂದವಾಡಿ ಕಡೆ ಹೊರಟೆವು !!!! ಕಾಡಿನ ಪಯಣದಲ್ಲಿ ಇಂತಹ ಹಲವಾರು ಘಟನೆಗಳು ಎದುರಾಗುವುದು ಸಾಮಾನ್ಯ ಇದನ್ನು ಎದುರಿಸಿ ಮುಂದೆ ಸಾಗಿದರೆ


ವನ ಸಿರಿಗಳು



ಕಾಡನ್ನು ನೋಡಲು ಸಾಧ್ಯ.  .............!!!!!!  ನಮ್ಮ ಕಾರಿಗೆ ಟೈರ್ ಬದಲಾಯಿಸಿ ನಂತರ ಮತ್ತೆ ಸಿಗುತ್ತೇನೆ ಓ.ಕೆ.             

28 comments:

PARAANJAPE K.N. said...

ಈ ಚಳಿಯಲ್ಲೂ ಕಾಡು ಸುತ್ತುವ ನಿಮ್ಮ ಹವ್ಯಾಸಕ್ಕೆ ಜೈ ಹೋ, ನನಗೂ ಚಾರಣ ಇಷ್ಟ. ಅವಕಾಶವಾದರೆ ಒಮ್ಮೆ ನಾವು-ನೀವು ಜತೆಯಾಗಿ ಎಲ್ಲಿಗಾದರೂ ಹೋಗೋಣ. ಚಿತ್ರ-ಲೇಖನ ಚೆನ್ನಾಗಿದೆ.

Anonymous said...

Nice experience Balu. I Like it. Thanks for sharing

-Sunil (this time from India)

ಕ್ಷಣ... ಚಿಂತನೆ... said...

Sir, ಚಿತ್ರ-ಲೇಖನ ಚೆನ್ನಾಗಿದೆ.

Dr.D.T.Krishna Murthy. said...

Baaloo sir;an exciting experience indeed.looking for more.

V.R.BHAT said...

I repeat Mr.Paraanjape's word! Jai hO !

ಸುಬ್ರಮಣ್ಯ said...

ಕೊಡಗಿನ ಕಡೆ ಹೋಗುವುದಾದರೆ ಹೇಳಿ-ನಾನೂ ಪ್ರಯತ್ನಪಡುತ್ತೇನೆ!!!

ಮನದಾಳದಿಂದ............ said...

ಬಾಲು ಸರ್,
ಕಾಡಿನ ನಡುವೆ ಸುತ್ತಾಡಿ ರೋಚಕ ಅನುಭವಗಳನ್ನು ಪಡೆಯುತ್ತಿದ್ದೀರಾ, ನಿಮ್ಮೊಂದಿಗೆ ನಮಗೂ ಸ್ವಲ್ಪ ಆ ರುಚಿಯನ್ನು ಅನುಭವಿಸಲು ಅವಕಾಶ ಮಾಡಿಕೊಡಿ ಸ್ವಾಮಿ................

balasubramanya said...

@ ಪರಾಂಜಪೆ ,ಸರ್ ನನ್ನ ಜೊತೆಯಲ್ಲಿ ಶೀಘ್ರ ಮೇವ ವನವಾಸ ಪ್ರಾಪ್ತಿರಸ್ತು !!! ಈ ಬಗ್ಗೆ ಪ್ರಯತ್ನಿಸೋಣ.

balasubramanya said...

@ ಸುನಿಲ್ ನಿನ್ನ ಕಾಮೆಂಟಿಗೆ ಥ್ಯಾಂಕ್ಸ್ ಕಣೋ.

balasubramanya said...

@ಕಸನ ಚಿಂತನೆ ಚಂದ್ರು , ಪ್ರೀತಿಯ ಮಾತುಗಳು ತಲುಪಿವೆ . ಥ್ಯಾಂಕ್ಸ್.

balasubramanya said...

ವಿ.ಆರ್.ಭಟ್ ಸರ್ ಸರ್ ನನ್ನ ಜೊತೆಯಲ್ಲಿ ಶೀಘ್ರ ಮೇವ ವನವಾಸ ಪ್ರಾಪ್ತಿರಸ್ತು !!! ಈ ಬಗ್ಗೆ ಪ್ರಯತ್ನಿಸೋಣ.[ ಪರಾಂಜಪೆ ಸರ್ ಜೊತೆಯಲ್ಲಿ ]

balasubramanya said...

ಪ್ರವೀಣ್ ಸರ್ ನಿಮ್ಮ ಮನದಾಳದ ಪ್ರೀತಿಯ ಮಾತುಗಳು ತಲುಪಿವೆ.ಪ್ರಕೃತಿ ಇರುವುದು ಎಲ್ಲರಿಗಾಗಿ ಆಲ್ವಾ ಸಾರ್ .

balasubramanya said...

@ ಡಾ// ಡಿ.ಟಿ ಕೃಷ್ಣಮೂರ್ತಿ ಸರ್ ನಿಮ್ಮ ಪ್ರೀತಿಯ ಮಾತುಗಳೇ ನನಗೆ ಸ್ಫೂರ್ತಿ.ನಿಮ್ಮ ಪ್ರೋತ್ಸಾಹ ಇರಲಿ ಸಾರ್ .

balasubramanya said...

@ ಸುಬ್ರಮಣ್ಯ ಮಾಚಿಕೊಪ್ಪ ,ಕೊಡಗಿನ ಕಡೆ ಹೊರಟಾಗ ನಿಮಗೆ ಖಂಡಿತ ಹೇಳುತ್ತೇನೆ .ಹಾಗೆ ನಿಮ್ಮ ಕಡೆ ಜಾಗಗಳನ್ನು ನನಗೂ ತೋರ್ಸಿ ಸರ್.

ಅಪ್ಪ-ಅಮ್ಮ(Appa-Amma) said...

ಬಾಲು ಅವರೇ,

ರೋಚಕ ಅನುಭವಗಳು !

ಮುಂದಿನ ಕಂತಿಗೆ ಕಾಯುತ್ತಾ

balasubramanya said...

@ಅಪ್ಪ -ಅಮ್ಮ , ನಿಮ್ಮ ಅನಿಸಿಕೆಗೆ ಥ್ಯಾಂಕ್ಸ್.

shridhar said...

ನಿಮ್ಮ ಲೇಖನಗಳಲ್ಲಿನ ಅನುಭವಗಳು ಚೆನ್ನಾಗಿರುತ್ತವೆ ...
ನಿಮ್ಮ ಹವ್ಯಾಸಗಳು ಸಹ ಚೆನ್ನಾಗಿವೆ .. ಇನ್ನಷ್ಟು ಇಂತಹ ಮಾಹಿತಿಯುಕ್ತ ಲೇಖನಗಳು ಬರಲಿ .

balasubramanya said...

@ ಶ್ರೀಧರ್ ನಿಮಗೆ ನನ್ನ ಬ್ಲಾಗ್ ಗೆ ಸ್ವಾಗತ . ನಿಮ್ಮ ಅನಿಸಿಕೆಗೆ ಥ್ಯಾಂಕ್ಸ್.

prabhamani nagaraja said...

ಚಿತ್ರಗಳು ಹಾಗೂ ಲೇಖನ ಚೆನ್ನಾಗಿದೆ. ಬಹಳ ಕುತೂಹಲ ಘಟ್ಟದಲ್ಲಿ ನಿಲ್ಲಿಸಿಬಿಟ್ಟಿದ್ದೀರಿ. ಬೇಗ ಮು೦ದುವರಿಸಿ.

balasubramanya said...

@ಪ್ರಭಾಮಣಿ ನಾಗರಾಜ್ , ನಮಸ್ಕಾರ ೨೦೧೧ ರ ಹಾರ್ದಿಕ ಶುಭಾಶಯಗಳು. ನಿಮ್ಮ ಕಾಮೆಂಟಿಗೆ ಥ್ಯಾಂಕ್ಸ್ .

Deep said...

Anubhava kathana channgide balu :-)

Hosa varshada shubashayagalu

balasubramanya said...

@ ದೀಪು ನಿಮ್ಮ ಅನಿಸಿಕೆ ತಲುಪಿದೆ. ನಿಮಗೂ ಹಾಗೂ ಸುಮನಾ ರವರಿಗೂ 2011 ರ ಶುಭಾಶಯಗಳು.

V.R.BHAT said...

ಬಾಲು ಸರ್ ತಮಗೆ ಹೊಸ ಕ್ಯಾಲೆಂಡರ್ ವರ್ಷದ ಹಾರ್ದಿಕ ಶುಭಾಶಯಗಳು

balasubramanya said...

ವಿ ಆರ್. ಭಟ್ ಸಾರ್ ನಿಮ್ಮ ಆಶೀರ್ವಾದ ತಲುಪಿದೆ.ತಮಗೂ ಕೂಡ ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಗಳು.

ಮನಸಿನಮನೆಯವನು said...

munduvaresi...

balasubramanya said...

@ ಕತ್ತಲೆ ಮನೆ , ಥ್ಯಾಂಕ್ಸ್.

ಸೀತಾರಾಮ. ಕೆ. / SITARAM.K said...

nimma anubhavagalu rochakavagive. tamma baravanige shaili jotege chitragalu naavu nimma jote kaadige hodante bhaasavaaguvasttu aaptavaagide lekhana baalanna.

balasubramanya said...

@ ಸೀತಾರಾಂ ಸರ್ , ಪ್ರೀತಿಯ ಮಾತುಗಳಿಗೆ ನನ್ನ ನಮನಗಳು.