ಯಾಕೋ ಕಾಣೆ ಕಾಡಿನ ಕಥೆಗಳಿಗೆ ನೂರೆಂಟು ವಿಘ್ನ ,ಕಾಡಿನ ನೆನಪುಗಳ ಮಾಲಿಕೆ ಯಲ್ಲಿ ಸ್ವಲ್ಪ ವಿರಾಮ ಪಡೆದು ವೈಧ್ಯರ "ಗೀತ ಗಾತಾ ಚಲ್" ಕಾರ್ಯಕ್ರಮ ಹಾಕುವ ಅನಿವಾರ್ಯ ಉಂಟಾಯಿತು. ತಾಳು ಮತ್ತೆ ಕಾಡಿನ ನೆನಪಿಗೆ ಜಾರೋಣ ಅಂತಾ ಕಂಪ್ಯೂಟರ್ ಮುಂದೆ ಕೂತರೆ ಅರೆ ಇದೇನು ಕಂಪ್ಯೂಟರ್ ನಲ್ಲಿದ್ದ ಅಮೂಲ್ಯವಾದ ಫೋಟೋಗಳೇ ಮಾಯಾ !!!ನೋಡಿದ್ರೆ ಹಾರ್ಡ್ ಡಿಸ್ಕ್ ತೊಂದರೆಯಾಗಿ ಫೋಟೋ ಎಲ್ಲಾ ಅಳಿಸಿಹೊಗಿತ್ತು.ಮತ್ತೆ ಅವನ್ನು ಕಲೆಹಾಕಿ ಮತ್ತೆ ಕಾಡಿನ ನೆನಪಿನ ಯಾನಕ್ಕೆ ಸ್ವಲ್ಪ ವಿಳಂಭ ವಾಗುತ್ತೆ , ಆ ಕಾರಣದಿಂದ ಏನ್ ಮಾಡೋದು ಅಂತಾ ಕೂತಿದ್ದೆ.ನನ್ನ ಸ್ನೇಹಿತ ಅನಿಲ್ ಅದಕ್ಕೆ ಪರಿಹಾರ ಹೇಳಿಬಿಡೋದೇ.ಅಲ್ಲ ಕಣ್ಲಾ ನಿನ್ ಬ್ಲಾಗ್ ನಲ್ಲಿ ಯಾವದೇ ಲೇಖನ ನೋಡಿದರೂ ಚಿತ್ರಗಳೇ ಇವೆ.ಅಲ್ಲಾ ನಿಂಗೆ ಚಿತ್ರ ಇಲ್ದೆ ಲೇಖನ ಬರಿಯೋಕೆ ಬರಲ್ವಾ?? ಈ ಸರಿ ಚಿತ್ರ ಹಾಕದೆ ಹಾಸ್ಯವಾಗಿ ಬರಿ ನೋಡೋಣ !! ಅಂತಾ ಕೆಣಕಿದ.ಅದಕ್ಕೆ ಈ ಹಾಸ್ಯ ರಸಾಯನ ನಿಮಗಾಗಿ. .. !!! ನಮ್ಮ ಕಚೇರಿಯಲ್ಲಿ ರಂಗಯ್ಯ ಅಂತಾ ಒಬ್ಬ ಗ್ರೂಪ್ '' ಡಿ'' ನೌಕರ ಇದ್ದ.ಗಿಡ್ಡನೆಯ ಇವನು ,ಒಳ್ಳೆಯ ಕೆಲಸ ಗಾರ ಕೆಲವರು ಇವನನ್ನು ಗುಳ್ಳೆ ನರಿ ಅಂತಾ ಕರೀತಿದ್ರು.ಆದರೂ ಇವನು ಒಮ್ಮೊಮ್ಮೆ ಇದ್ದಕ್ಕಿದಂತೆ ಎರಡು ,ಮೂರು ದಿನಗಳು ಪತ್ತೆ ಇರುತ್ತಿರಲಿಲ್ಲ , ನಂತರ ಕಚೇರಿಗೆ ಬಂದು " ಹೇ ಹೇ ಹೇ ಸಾ ನಾನು ದೇವಸ್ಥಾನಕ್ಕೆ ಒಗಿದ್ದೆ ಸಾ" ಅಂತಾ ತಲೆಕೆರೀತಾ ಬಂದು , "ಸಾ ಪರಸಾದ ತಂದೀವ್ನಿ ತಗಳಿ ಸಾ" ಅಂತಾ , ಎಲ್ಲರಿಗೂ ಪರಸಾದ ಹಂಚೋವ್ನು.ಇಷ್ಟೆಲ್ಲಾ ಇದ್ರೂ ತಾನು ಕಚೇರಿಯಲ್ಲಿ ಡ್ಯೂಟಿಯಲ್ಲಿ ಇದ್ದಾಗ ಬೇಗ ಕೆಲಸ ಮುಗಿಸೋವ್ನು . ಹೀಗೆ ಸಾಗಿತ್ತು ಇವನ ಕಾರ್ಯ ವೈಖರಿ.ಒಮ್ಮೆಯಂತೂ ಒಂದು ವಾರ ಪತ್ತೆ ಇಲ್ಲದೆ ನಂತರ ಆಫಿಸ್ ಗೆ ಬಂದೂ ಸಾ ಮನೆವ್ರಾ ಕೂಡ ತಿರುಪತಿ ಗೆ ಹೋಗಿದ್ದೆ " ಹಿ ಹಿ ಹಿ ಬೇಜಾರ್ ಮಾಡ್ಕಾ ಬ್ಯಾಡಿ" ಅಂತಾ ಪೂಸಿಹೊಡೆದು ಗೋಗರೆದು ಆಫಿಸ್ನವ್ರ್ಗೆಲ್ಲಾ ಲಡ್ಡೂ ಜೊತೆ ಮೈಸೂರ್ ಪಾಕು ಹಂಚಿದಾ !! ನಾವು ಕೆಲವರು ಅಲ್ಲಾ ರಂಗಯ್ಯ ತಿರುಪತಿಯಲ್ಲಿ ಲಡ್ಡೂ ಜೊತೆ ಮೈಸೂರು ಪಾಕು ಕೊಡೋಕೆ ಯಾವಾಗ ಶುರುಮಾಡಿದರೂ ಅಂತಾ ಹಾಸ್ಯ ಮಾಡಿ ನಕ್ಕೆವು. " ಹೇ ಹೇ ಬುಡಿ ಸಾ ತಮಾಸೆ ಮಾಡ್ಬ್ಯಾಡಿ" ಅಂತಾ ಆಚೆ ಹೋದ.ನಂತರ ಯಥಾ ಸ್ಥಿತಿ . ಹಾಗೆ ಒಮ್ಮೆ ನಾನು ನನ್ನ ಸ್ನೇಹಿತನ ಸಹೋದರಿ ಮದುವೆ ಗಾಗಿ ರಜಾ ಹಾಕಿ ತೆರಳಿದ್ದೆ . ಮದುವೆ ಮನೆಯಲ್ಲಿ ಯಾಂತ್ರಿಕವಾಗಿ ಉಡುಗೊರೆ ನೀಡಿ ಊಟಕ್ಕೆ ಬಂದು ಕುಳಿತೆ , ಅರೆ ಇದೇನಿದು ಅಂತಾ ನೋಡಿದರೆ ನಮ್ಮ ರಂಗಯ್ಯ ನನ್ನ ಮುಂದಿನ ಸಾಲಿನ ತುದಿಯಲ್ಲಿ ಊಟಕ್ಕೆ ಕುಳಿತಿದ್ದ.ಪಕ್ಕದಲ್ಲಿ ಒಂದು ಬ್ಯಾಗು ಬೇರೆ ಇತ್ತು.ಪಾಪ ಇಲ್ಯಾಕೆ ಇವನನ್ನು ಮಾತಾಡಿಸಿ ತೊಂದ್ರೆ ಕೊಡೋದು ಅಂತಾ ಯೋಚಿಸಿ ಊಟ ಮಾಡಲು ಶುರು ಮಾಡಿದೆ. ಊಟ ಎಲ್ಲಾ ಸಾಂಗವಾಗಿ ಮುಗಿತೂ . ಕೈತೊಳೆಯುವ ಸರದಿ ಬಂದು ಅಲ್ಲಿ ರಶ್ ಆಗುವ ಮೊದಲು ಕೈ ತೊಳಿಯೋಣ ಅಂತಾ ಬೇಗ ಕೈ ತೊಳೆಯುವ ಕೆಲಸ ಮುಗಿಸಿದೆ. ಅಲ್ಲೇ ಇದ್ದ ಸ್ನೇಹಿತ " ಬಾರೋ ಲೋ ಯಾಕೆ ಓಡ್ತಿಯಾ" ಅಂತಾ ತಡೆದು ಮಾತಾಡ್ತಾ ನಿಲ್ಲಿಸಿಕೊಂಡ . ಊಟ ಮಾಡಿದ ಎಲ್ಲಾ ಜನರು ಊಟ ಮುಗಿಸಿ ತೆರಳಿದ್ದರು ,ಆದ್ರೆ ಒಬ್ಬ ವ್ಯಕ್ತಿ ಮಾತ್ರಾ ಎಲ್ಲಾ ಎಲೆಗಳಲ್ಲಿ ಉಳಿದಿದ್ದ ಲಡ್ಡು ತೆಗೆದು ತನ್ನಾ ಬ್ಯಾಗಿಗೆ ತುಂಬಿ ಕೊಳ್ಳುತ್ತಿದ್ದಾ!!. ಅರೆ ಇದೇನು ಅಂಥಾ ನೋಡಿದ್ರೆ ಅವನೇ ನಮ್ಮ ಕಚೇರಿ ರಂಗಯ್ಯ !! ಅವನ ಜೊತೆ ಇದ್ದ ಬ್ಯಾಗು ಆಗಲೇ ಹೊಟ್ಟೆ ತುಂಬಾ ಲಡ್ಡು ಗಳನ್ನೂ ತುಂಬಿಕೊಂಡು ಜೋಲಾಡುತಿತ್ತು. ನಾನು ಅವನಿಗೆ ತಿಳಿಯದಂತೆ ನೋಡ್ತಾ ಇದ್ದೆ !! ಎಲಾ ಇವನ ಅಂದು ಕೊಂಡು, ಮನದಲ್ಲಿ ಶಪಿಸುತ್ತಾ ಮನೆಹಾದಿ ಹಿಡಿದೇ.ಮಾರನೆದಿನ ಯಥಾ ಸ್ತಿತಿ "" ಹಿ ಹಿ ಹಿ ಸಾ ನಿನ್ನೆ ಚಾಮುಂಡಿ ಬೆಟ್ಟಕ್ಕೆ ಹೋಗಿದ್ದೆ ಸಾ!!! ತಕಳಿ ಪರ್ಸಾದ" ಅಂತಾ ಒಳಗೆ ಬಂದಾ .ಬಂದಿತ್ತು ಕೆಟ್ಟ ಸಿಟ್ಟು!!! ಆದರೂ ಇವನಿಗೆ ಬುದ್ದಿ ಕಲಿಸೋಣ ಅಂದು ಕೊಂಡು "ಇರು ರಂಗಯ್ಯ ಎಲ್ಲರ ಜೊತೆ ತಿನ್ನೋಣ!!" ಅಂದು ಎಲ್ಲರನ್ನೂ ಬರಹೇಳಿ ಒಟ್ಟಿಗೆ ಸೇರಿಸಿದೆ ,"ಈಗ ಬಾ ರಂಗಯ್ಯ ನಿನ್ ಪರ್ಸಾದ ಹಂಚುವಂತೆ ಅಂಥಾ ಅಂದೇ. "ಅವನು ಖುಷಿಯಾಗಿ ಬ್ಯಾಗಿನಿಂದಾ ತೆಗೆದು ಪೇಪರ್ ಮೇಲೆ ಸುರಿದ !!! ಅರೆ ಅದೇ ನಿನ್ನೆ ಮದುವೆ ಮನೆ ಲಡ್ಡು ಗಳ ಕರಾಮತ್ತು ಇಲ್ಲಿ ಬಂದಿತ್ತು !! "ಸಾ ಪರ್ಸಾದ ಕೊಡ್ಲಾ "ಅಂದಾ , " ತಡಿ ರಂಗಯ್ಯ ನಿನ್ ಪರ್ಸಾದದ ಮಹಿಮೆ ಹೇಳ್ತೀನಿ ಆಮೇಲೆ ಕೊಡಿವಂತೆ" ಅಂದು, ಕಚೇರಿ ಸ್ನೇಹಿತರಿಗೆ "ನೋಡ್ರಯ್ಯ ನಮ್ಮ ರಂಗಯ್ಯ ಪಾಪ ಇಷ್ಟು ದಿನಾ ಪುಣ್ಯ ಕ್ಷೇತ್ರ ದರ್ಶಿಸಿ ನಮಗೆ ಪರ್ಸಾದ ಕೊಟ್ಟಿದ್ದಾನೆ. ಇವತ್ತು ಅವನ ಪುಣ್ಯಕ್ಕೆ ನಮ್ಮ ಕಾಣಿಕೆಕೊಡೋಣ" ಎಂದೇ. ಅವನಿಗೆ ಅಚ್ಚರಿಯಾಗಿ "ಹೇ ಹೇ ಹೇ ಯಾನು ಬ್ಯಾಡ ಬುಡಿ ಸಾ ಅಂದಾ !!." "ಇರು ರಂಗಯ್ಯ ಅಂತಾ ಹೇಳಿ ಅವನು ನಿನ್ನೆ ಮಧುವೆ ಮನೆಯಲ್ಲಿ ಮಾಡಿದ ಘನ ಕಾರ್ಯದ ವಿವರಣೆಯನ್ನು ಎಲ್ಲರಿಗೂ ದರ್ಶನ ಮಾಡಿಸಿ ರಂಗಯ್ಯನ ಪರ್ಸಾದದ ಮಹಿಮೆ ಸಾರಿದೆ. ಇಷ್ಟುದಿನ ಎಲ್ಲರನ್ನೂ ಮಂಗಗಳನ್ನಾಗಿ ಮಾಡಿದ್ದ ರಂಗಯ್ಯ ಇಂದು ತಾನೇ ಮಂಗಯ್ಯ ಆಗಿದ್ದಾ !! ಆಗ ನೋಡಬೇಕಿತ್ತು ಎಲ್ಲರ ಮುಖವನ್ನು !! ಆಹಾ ಪ್ರಸಾದ ಅಂಥಾ ಭಕ್ತಿ ಇಂದ ಕಣ್ಣಿಗೆ ಒತ್ತಿಕೊಂಡು ಸ್ವೀಕರಿಸಿ ದೇವರ ಪ್ರಸಾದವೆಂದು ತಿಳಿದು ಮನೆಗೂ ತೆಗೆದುಕೊಂಡು ಹೋಗಿ ಧನ್ಯತೆ ಮೆರೆಯುತ್ತಿದ್ದ ಆ ಮಖಗಳು ಕಿವುಚಿಕೊಂಡು ಅವನಿಗೆ ಶಾಪಾ ಹಾಕಿ ಎರಡೆರಡು ತದುಕಲು ಮುಂದಾಗಿದ್ರೂ . ಅವನಿಗೂ ಈ ಅನಿರೀಕ್ಷಿತ ಬೆಳವಣಿಗೆ ಇಂದಾಗಿ ಸರಿಯಾದ ಮಂಗಳಾರತಿ ಎತ್ತಿಸಿಕೊಳ್ಳುವ ಸರದಿಯಾಗಿತ್ತು. ಇನ್ಮುಂದೆ ಹೀಗೆ ಮಾಡುವುದಿಲ್ಲ ವೆಂದು ಪ್ರಮಾಣ ಮಾಡಿ ಕ್ಷಮೆಕೋರಿದ .ಏನೋ ಹಾಳಾಗ್ಲಿ ಅಂತಾ ಎಲ್ಲರು ತಲಾ ಒಂದೊಂದು ಮಾತಾಡಿ ತಮಗೆ ತಾವೇ ಸಮಾಧಾನ ಪಟ್ಟುಕೊಂಡರು. ಆದರೂ ಈ ಪುಣ್ಯಾತ್ಮಾ ಪ್ರತೀಭಾರಿ ನಮಗೆ ಚಳ್ಳೆ ಹಣ್ಣು ತಿನ್ನಿಸಿ ಇಂತಹ ಪರ್ಸಾದ ತಿನ್ನಿಸಿ ತನ್ನ ಮಹಿಮೆ ಸಾರಿ ನಮ್ಮನ್ನು ಮೂರ್ಖ ರನ್ನಾಗಿ ಮಾಡಿದ್ದ. ಹಿಂಗಿತ್ತು ನೋಡಿ ನಮ್ಮ ರಂಗಯ್ಯನ ಲಡ್ಡೂ ಪರ್ಸಾದ ಪುರಾಣ.
14 comments:
ಬಾಲೂ ಸರ್...
ಎಂಥಾ ಪ್ರಸಾದ ಮಾರಾಯ್ರೆ.. !!
ನಮಗೆಲ್ಲ ವಾಂತಿ ಬರುವಂತಾಯಿತು !!
ಭಕ್ತ್ಯನ್ನು ಜನ ಹೇಗೆಲ್ಲ ದುರುಪಯೋಗ ಪಡಿಸಿಕೊಳ್ತಾರೆ ನೋಡಿ.. !!
ನಕ್ಕು .. ನಕ್ಕೂ ಹೊಟ್ಟೆ ಹುಣ್ಣಾಯಿತು !!
ಹ್ಹೆ.. ಹ್ಹೇ...
ನಿಜ ಹೇಳಿ ಪ್ರಸಾದ ರುಚಿಯಾಗಿತ್ತು ತಾನೆ? ಹ್ಹಾ ಹ್ಹಾ.. !!
ಬಾಲು ಸರ್,
ಹ್ಹ ಹ್ಹ ಹ್ಹಾ..........
ಒಳ್ಳೆ ಅಸಾಮಿ ನಿಮ್ಮ ರಂಗಯ್ಯ, ಚಳ್ಳೆಹಣ್ಣಿನ ಜೊತೆಗೆ ಲಡ್ಡು ಮೈಸೂರು ಪಾಕೂ ತಿನ್ನಿಸಿದ್ದಾನಲ್ಲ! ಭಲೆ! ಬುದ್ಧಿಗೆ ಮೆಚ್ಚಬೇಕು ಬಿಡಿ!
ಅನತಾ ಬಾವಿಸಬೇಡಿ, ಬರವಣಿಗೆಯಲ್ಲಿ ಸ್ವಲ್ಪ ವ್ಯಾಕರಣ ತಪ್ಪಿದೆ ಅನಿಸುತ್ತೆ. ಉದಾ: ಮಧುವೆ=ಮದುವೆ, ದೇವಸ್ತಾನ=ದೇವಸ್ಥಾನ, ಲದ್ದುಗಳ=ಲಡ್ಡುಗಳ......
ಹಾಸ್ಯ ಬರೆಯಬೇಕೆಂಬ ಬಹಳ ದಿನಗಳ ಬಯಕೆ ಇಂದು ಜಾರಿಗೆ ಬಂತು.ಹೋದು ಪ್ರಕಾಶಣ್ಣ ಈ ಪುಣ್ಯಾತ್ಮಾ ??? ಹೀಗೆ ಎಲ್ಲರಿಗೂ ಚಳ್ಳೆಹಣ್ಣು ತಿನ್ನಿಸಿದ್ದ . ನಿಮ್ಮ ಪ್ರೀತಿಯ ಮಾತುಗಳಿಗೆ ಕೃತಜ್ಞ .
ಮನದಾಳದಿಂದ ಪ್ರವೀಣ್ ಸರ್ ಚಳ್ಳೆಹಣ್ಣು ತಿನ್ನಿಸುವ ಕಲೆ ಅವನಿಗೆ ತಿಳಿದಿತ್ತು.ತಿನ್ನುವ ಕರ್ಮ ನಮಗೂ ಬಂದಿತ್ತು !!! ನಿಮ್ಮ ಸಲಹೆಯಂತೆ ತಪಾಗಿ ಕುಟ್ಟಿದ್ದ ಪದಗಳನ್ನು ಸರಿಪಡಿಸಿದ್ದೇನೆ. ನಿಮ್ಮ ಅಮೂಲ್ಯ ಸಲಹೆಗೆ ಸ್ವಾಗತ. ಪ್ರೀತಿಯ ಮಾತುಗಳಿಗೆ ಕೃತಜ್ಞ.
ಬಾಲೂ ಸರ್;ರಂಗಯ್ಯನ ಲಡ್ಡೂ ಪುರಾಣ ಸಖತ್ತಾಗಿದೆ.ತಮ್ಮ ಸ್ವಾರ್ಥ ಸಾಧನೆಗೆ ಜನ ಏನೆಲ್ಲಾ ದಾರಿಗಳನ್ನು ಕಂಡುಕೊಳ್ಳು ತ್ತಾರಲ್ಲವೇ !?ನಿಮ್ಮ ರಂಗಯ್ಯ ನಿಜಕ್ಕೂ ಗುಳ್ಳೆ ನರಿಯೇ!
ಬಾಲು ಸರ್,
ರಂಗಯ್ಯನ ಲಡ್ಡು ಪ್ರಸಾದ ಪುರಾಣ ಓದಿ ನಗು ಬಂತು..ಒಳ್ಳೆ ರೀತಿಯಲ್ಲಿ ಮಂಗ ಮಾಡಿದ ಅಲ್ವ !!!
ನಾನು ಸ್ವಲ್ಪ ಗಂಭೀರ ಸ್ವಭಾವದವನು-ನಗುವುದು ಕಡಿಮೆ-ಆದರೂ-ನಿಜ ಹೇಳ್ಲಾ ಬಾಲು ಅಣ್ಣ-ನಿಜಕ್ಕೂ ನನಗೆ ನಗು ಬರಿಸಿತು ಈ ನಿಮ್ಮ ಲೇಖನ.
@Dr.D.T.ಕೃಷ್ಣ ಮೂರ್ತಿ ಸರ್ ನಿಮ್ಮ ಮಾತು ನಿಜ . ನಿಮ್ಮ ಮೆಚ್ಚುಗೆ ಮಾತಿಗೆ ಧನ್ಯ.
@ ಶಶಿ ಜೋಯಿಸ್ ಕಾಮೆಂಟಿಗೆ ಥ್ಯಾಂಕ್ಸ್ . ನಕ್ಕಿದ್ದಕ್ಕೆ ಡಬಲ್ ಥ್ಯಾಂಕ್ಸ್.
@ ಸುಬ್ರಮಣ್ಯ ಮಾಚಿಕೊಪ್ಪ . ನೀವು {ನಾನು ಸ್ವಲ್ಪ ಗಂಭೀರ ಸ್ವಭಾವದವನು-ನಗುವುದು ಕಡಿಮೆ-ಆದರೂ-ನಿಜ ಹೇಳ್ಲಾ ಬಾಲು ಅಣ್ಣ-ನಿಜಕ್ಕೂ ನನಗೆ ನಗು ಬರಿಸಿತು ಈ ನಿಮ್ಮ ಲೇಖನ.} ಪ್ರೀತಿಯಿಂದ ನಕ್ಕಿದ್ದಕ್ಕೆ ನನಗೆ ಸಂತಸವಾಯ್ತು.ನಗು ನಗುತ್ತಾ ಇರಿಸಾರ್. ಅಣ್ಣಾ ಅಂತಾ ಕರೆಯುವ ನಿಮ್ಮ ಹೃದಯ ವೈಶಾಲ್ಯತೆಗೆ ಮೂಕನಾಗಿದ್ದೇನೆ.
Ayyo.. devre.. balu... hegella manga madtarenri jana....
Channagi nagisitu.. innnu halavarihe heli nagiside...
Rangannige ittrio Anvartha nama sariyagiye ide bidi...
Rangannana Manganna katha prasanga channagi moodi bandide..
@ ದೀಪು , ಹೌದು ಹೀಗೂ ಜನ ಇರ್ತಾರೆ.ನಾವೇ ಅಂತವರನ್ನ ಸರಿ ಮಾಡ್ಬೇಕು. ನೀವು ನಕ್ಕಿದ್ದಕ್ಕೆ ಹಾಗು ಇತರರನ್ನು ನಗಿಸಿದ್ದಕ್ಕೆ ಥ್ಯಾಂಕ್ಸ್.
hegu unte! sadhya navu hushaaraagirabeku.
@ಸೀತಾರಾಂ ಸರ್, ನಿಮ್ಮ ಅನಿಸಿಕೆ ತಲುಪಿದೆ ವಂದನೆಗಳು.
Post a Comment