Wednesday, January 5, 2011

ಕಾನನದ ವಿಸ್ಮಯ ಸಾಮ್ರಾಜ್ಯದಲ್ಲಿ !! ನಾವರಿಯದ ಲೋಕ !!!

ಕಾಡಿನ ಆಭರಣಗಳು


ಅಪ್ಪಚ್ಚಿಯಾದ ಟೈರ್ ಅನ್ನು  ಜೀಪಿನಲ್ಲಿ ಹಾಕಿಕೊಂಡು  ನಾವಿದ್ದ ಜಾಗದಿಂದ ಕೇರಳದ  ಮಾನಂದವಾಡಿಗೆ ಬಂದೆವು.ಒಂದು ಟೈರ್ ಷೋ ರೂಂ ಬಳಿಬಂದು  ನಮ್ಮ ಎರಡೂ  ಟೈರ್ ಪಂಚರ್ ಕಥೆ  ಹೇಳಿದಾಗ   ನಮ್ಮನ್ನು ನೀವು ಮನುಷ್ಯರೇ?? ಅನ್ನುವಹಾಗೆ ನೋಡಿ ಅಚ್ಚರಿಪಟ್ಟರು.ಅಲ್ಲಿದ್ದ ಒಬ್ಬರು ಒಂದು   ಟೈರ್ ಬಿಚ್ಚಿ ನೋಡಿದರೆ ಒಳಗಿದ್ದ ಟ್ಯೂಬೆ ಮಾಯ !!!ಅವರಿಗೆ ಅಚ್ಚರಿ" ಏನ್ ಸಾರ್ ಇದು ಟ್ಯೂಬು ರವೆ ಆದಂಗೆ ಆಗಿದೆ" ಅಂತಾ ಮಾತಾಡಿ "ಏನ್ ಮಾಡೋದು"?? ಅಂತಾ ನಮ್ಮ ಕಡೆ ನೋಡಿ ಟೈರ್ ನೋಡಿದ್ರೆ ಅದರ ಆಯಸ್ಸೂ ಮುಗಿದೆಹೊಗಿತ್ತು. ಆಗ ವೇಣು" ಹೋಗ್ಲಿ ಹೊಸ ಟೈರ್ ಟ್ಯೂಬು ಸಿಗುತ್ತಾ???" ಅಂತಾ ಕೇಳಿದ್ರೆ ಟೈರ್ ನೋಡಿ "ನಿಮ್ದೂ ಹೊಸ ಅಳತೆಯ ರೇಡಿಯಲ್ ಟೈರು ಇಲ್ಲಿ ಲಭ್ಯವಿಲ್ಲ ,ತಾಳಿ ಬೇರೆಡೆ ವಿಚಾರಿಸುತ್ತೇನೆ "ಅಂತಾ ಹೇಳಿ ಸುಮಾರು ಹತ್ತು ಕಡೆ ಫೋನ್ ಮಾಡಿ ವಿಚಾರಿಸಿ" ಸಾರಿ ಸರ್ ನಿಮಗೆ ಕೇರಳದಲ್ಲಿ ಈಗ ಈ ಹೊಸ ನಮೂನೆ ಟೈರ್ ಟ್ಯೂಬ್ ಸಿಗಲ್ಲಾ ನೀವು ಮೈಸೂರು ಅಥವಾ ಬೆಂಗಳೂರ್ ನಲ್ಲೆ ಪ್ರಯತ್ನಿಸಿ ಅಂದ್ರೂ !!," "ಅದ್ಸರಿಯಪ್ಪಾಈಗೇನು ಮಾಡೋದು"? ಅಂತಾ ಕೈಚೆಲ್ಲಿ ಕುಳಿತಾಗ "ತಾಳಿ ಮತ್ತೊಂದು ಟೈರ್ ನೋಡ್ತೀನಿ" ಅಂತಾ ಹೇಳಿ ಅದನ್ನೂ ಸಹ ಪರೀಕ್ಷಿಸಿ "ಇದನ್ನು ತಾತ್ಕಾಲಿಕವಾಗಿ ರಿಪೇರಿ ಮಾಡ್ತೀನಿ ನಿಧಾನವಾಗಿ ಹೋದ್ರೆ ಮೈಸೂರು ತಲುಪಲು ಆಗುತ್ತೆ" ಅಂತಾ ಹೇಳಿ ಒಂದು ಟೈರ್ ಹಾಗು ಟ್ಯೂಬನ್ನು ಸರಿಪಡಿಸಿಕೊಟ್ಟರು.ನಾವು ವಾಪಸ್ಸು ಬಂದು ಸರಿಯಾಗಿದ್ದ ಟೈರನ್ನು ಕಾರಿಗೆ ಹಾಕಿದ್ವಿ.ಮತ್ತೆ ಕಾರನ್ನು   ಡಿ.ಬಿ.ಕುಪ್ಪೆಗೆ ತಂದು ನಿಲ್ಲಿಸಿ  ಅರಣ್ಯ ಇಲಾಖೆ ಸಿಬ್ಬಂದಿ ಒದಗಿಸಿದ ಬಾಡಿಗೆಯ ಜೀಪ್ನಲ್ಲಿ ಕಾಡಿನಲ್ಲಿ ಸುತ್ತಾಟ ಮಾಡಿದ್ವಿ .ಹಿಂದೆ  ಕೈಮರ ನೋಡಿದ್ದ  ನಾವು ಈಗ  " ಕುದುರೆ ಸತ್ತ ಹಳ್ಳ " ಸುತ್ತಿನ ಹಳ್ಳ  ಕ್ಯಾಂಪ್ಕ್ಯಾಂಪ್ ಕಡೆ ಹೊರಟೆವು ಇದೊಂದು ದಟ್ಟ ಅರಣ್ಯದ ಮಧ್ಯೆ ಇರುವ ಕಾಡು ಕಳ್ಳರ ನಿಗ್ರಹ  ಕ್ಯಾಂಪ್ ಆಗಿದೆ. ಹಿಂದೊಮ್ಮೆ ಮಹಾರಾಜರು ಈ ಜಾಗಕ್ಕೆ ಬೇಟೆಗಾಗಿ ಬಂದ ಸಮಯದಲ್ಲಿ  ಅವರ ಕುದುರೆ ಮರಣ ಹೊಂದಿದ ಕಾರಣ ಈ ಕ್ಯಾಂಪಿಗೆ " ಕುದುರೆ ಸತ್ತ ಹಳ್ಳ " ಕ್ಯಾಂಪ್ ಎಂದು ನಾಮಕರಣ ಮಾಡಲಾಗಿದೆ.ಇಂತಹ ಕ್ಯಾಂಪ್ಗಳಲ್ಲಿ ಅರಣ್ಯ ಇಲಾಖೆಯ " ಫಾರೆಸ್ಟ್ ವಾಚರ್ಸ್ "  ಉಳಿದು ಹಗಲುರಾತ್ರಿ ಕರ್ತವ್ಯ ನಿರ್ವಹಿಸುವ ರೀತಿ ಅಚ್ಚರಿ ಹುಟ್ಟಿಸುತ್ತದೆ. ಈ ಕ್ಯಾಂಪುಗಳಲ್ಲಿ ಕುಡಿಯುವ ನೀರಿನ ಸೌಲಭ್ಯ , ವಿಧ್ಯುತ್ ಬೆಳಕಿನ ಸೌಲಭ್ಯ ಇರುವುದಿಲ್ಲ ,ಕುಡಿಯುವ ನೀರನ್ನು ತರಲು ಹಲವು ಕಿ.ಮಿ.ದೂರ ನಡೆದು ತರಬೇಕು. ರಾತ್ರಿವೇಳೆಕಾಡಿನಲ್ಲಿ ಗಸ್ತು ತಿರುಗುವ ಇವರು ಎತ್ತರದ ಮರ ಏರಿ ಕಾಡಿನಲ್ಲಿ ಬೆಂಕಿ ಬಿದ್ದಿರುವ ಬಗ್ಗೆ ಹಾಗು ಬೇಟೆಗಾರರ ಬಗ್ಗೆ ವೀಕ್ಷಣೆ ನಡೆಸಿ ಇಲಾಖೆಯ ಅಧಿಕಾರಿಗಳಿಗೆ ವೈರ್ ಲೆಸ್ ಮೂಲಕ  ವರಧಿ ನೀಡಬೇಕು. ಕತ್ತಲಲ್ಲಿ ಬೆಳಕು ಹರಿಸದೆ ಅರಣ್ಯ ಕಳ್ಳರ ಚಲನ ವಲನ ಗಳ ಮಾಹಿತಿ ತಿಳಿಯುತ್ತಾರೆ. ಬೆಳಕಿದ್ದಾಗಲೇ ಅರಣ್ಯದಲ್ಲಿ ನೆಟ್ಟಗೆ ನಡೆಯಲಾಗದ ನಾವು ಇವರ ಕಾರ್ಯ ಶ್ಲಾಘಿಸಲೇ  ಬೇಕು. ಒಮ್ಮೊಮ್ಮೆ ಇವರು ಕಾಡಿನ ಕಳ್ಳರ ಬಂದೂಕದ ಗುಂಡಿನಿಂದ  ಗಾಯಗೊಂಡಿದ್ದು  ಉಂಟೆಂದು ತಿಳಿದುಬರುತ್ತದೆ ..ಕಾಡು ಪ್ರಾಣಿಗಳ ಮದ್ಯೆ  ಧೈರ್ಯದಿಂದ ಕಾಡು ಗಳ್ಳರ  ವಿರುದ್ದ  ಪ್ರತಿಕ್ಷಣವೂ ಕಾರ್ಯ ನಿರ್ವಹಣೆ ಮಾಡುತ್ತಿರುವ ಇವರು ಯಾವ ಯೋಧನಿಗೂ ಕಮ್ಮಿ ಇಲ್ಲವೆನ್ನಿಸುತ್ತದೆ. ಪಾಪ ನಮ್ಮ ಸಮಾಜ ಇಂತಹ ಸಿಬ್ಬಂದಿ ಗಳನ್ನೂ ಗುರುತಿಸಲು ವಿಫಲವಾಗಿರುವುದು ವಿಷಾದನೀಯ.ನಾವಿದ್ದಾಗ ಒಮ್ಮೆ ವೈರ್ ಲೆಸ್ ಲಿಂಕ್ ಸಿಕ್ತಿಲ್ಲಾ ಅಂತಾ ಒಬ್ಬರು ರಾತ್ರಿವೇಳೆ  ಕಗ್ಗತ್ತಲಿನಲ್ಲಿ ಸರ ಸರನೆ ಎತ್ತರದ ಮರ ಏರಿ ವೈರ್ ಲೆಸ್  ಮೂಲಕ ಯಾವುದೇ ತೊಂದರೆ ಇಲ್ಲವೆಂದು ಮಾಹಿತಿ ನೀಡಿದರು.ಅಚ್ಚರಿಯೆಂದರೆ ಆ ಮರ ಸುಮಾರು ಐನೂರು ಅಡಿಗಳಿಗೂ ಮೀರಿದ ಎತ್ತರ ವಾಗಿತ್ತು. ನಾವು ನೋಡಿದ ಈ ಕ್ಯಾಂಪ್ ಕಾಡಿನ ಮಧ್ಯದಲ್ಲಿದ್ದು ಒಂದು ಹಳೆಯ ಅರ.ಸಿ.ಸಿ ಕಟ್ಟಡ ಹೊಂದಿತ್ತು,[ಕೆಲವು ಕ್ಯಾಂಪ್   ಗಳಲ್ಲಿ ಹರಿದ ಟಾರ್ಪಾಲಿನಿಂದ  ಮಾಡಿದ ಶೆಡ್ದೆ ಗತಿ !!]ಅದರ  ಸುತ್ತಲು ಆನೆಗಳಿಂದ ರಕ್ಷಣೆ ಪಡೆಯಲು  ಹಳ್ಳ ತೆಗೆಯಲಾಗಿತ್ತು.  ಸನಿಹದಲ್ಲಿ ""ಮಸಾಲೆ ಬೆಟ್ಟ"" ವಿದ್ದು ಅಲ್ಲಿ ಗಂಧದ ಗುಡಿ ಚಿತ್ರದ ಕೆಲವು ದೃಶ್ಯಗಳನ್ನು  ಚಿತ್ರೀಕರಿಸಿರುವುದಾಗಿ ತಿಳಿದು ಬಂತು.ನಾವು ಸಹ ಅಲ್ಲಲ್ಲಿ ಕೆಲವುಜಾಗಗಳ ಬಗ್ಗೆ ತಿಳಿದುಕೊಂಡೆವು ಅರಣ್ಯ ಸಿಬ್ಬಂದಿ ಪ್ರೀತಿಯಿಂದ ಜಾಗಗಳ ಪರಿಚಯ ಮಾಡಿಕೊಟ್ಟರು.
ಯಾರದು..... ?


ಸನಿಹದಲ್ಲೇ ಮೇಯುತ್ತಿದ್ದ ಕಾಡೆಮ್ಮೆಯ ಚಿತ್ರ ತೆಗೆದು ಅಲ್ಲಿನವರು ಕಾಡು ಪ್ರಾಣಿಗಳ ಬಗ್ಗೆ ತಮ್ಮ ಅನುಭವ ಹೇಳುವುದನ್ನು ಕೇಳಿದೆವು.ನಮ್ಮ ಪಯಣ ಹಾಗೆ ಸಾಗಿತ್ತು ದಾರಿಯಲ್ಲಿ ನಮಗೆ ಜಿಂಕೆಗಳ

ಇಲ್ಲಿ ನಮ್ಮದೇ ದರ್ಭಾರ್ಹಾಗು ಲಾಂಗೂರ್  ಗಳ ದರ್ಶನ ಅಲ್ಲಲ್ಲೇ ಆಗುತ್ತಿತ್ತು.ಮುಂದುವರೆದು ಎಂಟನೆ ಮೈಲಿಕಲ್ಲು ಕ್ಯಾಂಪ್ಗೆ ಬಂದೆವು  ಈ ಕ್ಯಾಂಪ್ ವಿಶೇಷವೆಂದರೆ


anti poaching camp

ಇದು ಸಂಪೂರ್ಣ ಮರದ ಅಟ್ಟಣಿಗೆ ಸುತ್ತಲೂ ರಮಣೀಯ ಪ್ರದೇಶದಿಂದ ಕೂಡಿದ್ದು


ಕ್ಯಾಂಪಿನ ಒಳಗೆ ನಾವೆಲ್ಲಾಮೇಲೆ ಹತ್ತಿ ನೋಡಿದರೆ ಸುಂದರ ದೃಶ್ಯಾವಳಿಗಳು ಕಾಣುತ್ತದೆ.ಮುಂದೆ ಸಾಗಿದ ನಾವು ಕಾಡಿನ ಮರಗಳ ಬಗ್ಗೆ ಹಲವು ವಿಚಾರಗಳನ್ನು ಅರಿತು ಕೊಂಡೆವು ನಮ್ಮ ಜೊತೆಯಲ್ಲಿದ್ದವರು ಅಲ್ಲೇ ಇದ್ದ ಒಂದು ಮರವನ್ನೂ ನಾವು ನಾಲ್ಕೂ ಜನರೂ ತಬ್ಬಿಕೊಳ್ಳಲು ಹೇಳಿದರು!! ನಾವು ನೋಡಿದ ಮರ ಸಣ್ಣದಾಗಿ ಕಂಡರೂ  ನಾವು ನಾಲ್ಕೂ ಜನ ಕೈಗಳಸರಪಣಿ ನಿರ್ಮಿಸಿ ಆ ಮರವನ್ನು ತಬ್ಬಿದರೂ ಪೂರ್ಣ ಮರವನ್ನು ಬಳಸಲು ನಿಮ್ಮಿಂದ ಆಗಲಿಲ್ಲ .ಮತ್ತೊಂದು ಮರವನ್ನು ತೋರಿಸಿದಾಗ ಆ ಮರದಲ್ಲಿ ಗುಹೆಯಂತೆ ಬಾಗಿಲು ಉಂಟಾಗಿರುವುದನ್ನು ನೋಡಲು ಹತ್ತಿರ ಹೋಗಿ ಕ್ಯಾಮರಾ ಮೂಲಕ ಮರದಲ್ಲಿ ಇಣುಕಿ

ವಿಸ್ಮಯದ ಮರ
ನೋಡಿದರೆ ಕಣ್ಣು ಹಾಯಿಸಿದಷ್ಟೂ ದೂರ  ಸುರಂಗ ದಂತೆ ಮರದಲ್ಲಿ ಟೊಳ್ಳು ಇತ್ತು. ಹಲವು ಮರಗಳ ಪರಿಚಯ ಮಾಡಿಕೊಂಡು ಧನ್ಯರಾದ ನಾವು ಡಿ.ಬಿ.ಕುಪ್ಪೆಯ ಮಾರ್ಗ  ಹಿಡಿದೆವು. ದಾರಿಯ  ನಡುವೆ ಸಿಕ್ಕ ಊರಿನಲ್ಲಿ


ಕಾಡಿನಲ್ಲಿ ಬದುಕಲು ಬೇಕಾದ ವಿಧ್ಯೆಒಬ್ಬ ಗಿರಿಜನ ವ್ಯಕ್ತಿ  ಬಿದಿರಿನ ಬೊಂಬು ಕಡಿದು ಏನೋ ಮಾಡುತ್ತಿದ್ದರು  ಅಚ್ಚರಿಯೆಂದರೆ  ಅವರ   ಸಮೀಪ ನಿಂತೊಡನೆ ಕಲಾತ್ಮಕವಾಗಿ  ಬಿದಿರಿನ ಬೊಂಬಿನ ಅಂದ ಕೆಡದಂತೆ ಪರಿಸರಕ್ಕೆ ಹಾನಿಯಾಗದ ಒಂದು ಕಲಾತ್ಮಕ ಕುಡಿಕೆ ಮಾಡಿಕೊಟ್ಟರು.ಮಾಡುವ ಕೆಲಸವನ್ನು ನಗು ನಗುತ್ತಾ ಮಾಡಿ
 ಇಂತಹ ಕುಡಿಕೆಗಳನ್ನು ಕಾಡಿನ ಕ್ಯಾಂಪ್ ಗಳಲ್ಲಿ ಧಾನ್ಯ ಸಂರಕ್ಷಣೆಗೆ, ನೀರು ಉಪಯೋಗಿಸಲು  ಬಳಸುತ್ತಿದ್ದುದು ಜ್ಞಾಪಕಕ್ಕೆ ಬಂದಿತ್ತು. ಆ ವ್ಯಕ್ತಿಯ ನಗು ಮುಖ ಯಾಕೋ ಕಾಣೆ ನನ್ನನ್ನು ಸೆಳೆದು ಬಿಟ್ಟಿತು.ನಿಷ್ಕಲ್ಮಶ ಪ್ರೀತಿಯಿಂದ ಅವರು  ನನಗೆ ನೀಡಿದಕಾಣಿಕೆ ಸುಮಾರು ತಿಂಗಳು ನನ್ನ ಜೊತೆಯಲ್ಲಿದ್ದು ಇವರ ಪ್ರೀತಿಯನ್ನು ಜ್ಞಾಪಿಸುತ್ತಿತ್ತು.!!!!!

ಕಾನನದ  ನಟ್ಟ ನಡುವಿನ ಹಾದಿ
ಕಾಡಿನ ಸುಂದರ ದೃಶ್ಯಗಳು ಅಂದಿನ ಕನಸಿನಲ್ಲಿ ಪದೇ ಪದೆ ಬಂದ್ದಿದ್ದವು.

34 comments:

Dr.D.T.krishna Murthy. said...

ಬಾಲೂ ಸರ್;ಸುಂದರ ಚಿತ್ರಗಳು ಹಾಗೂ ಸುಂದರ ಬರಹ.ನಿಮ್ಮ ಕಾಡಿನ ಇನ್ನಷ್ಟು ಬರಹಗಳು ಬರಲಿ.

ವಿ.ಆರ್.ಭಟ್ said...

ಚಿತ್ರಗಳು ಮನೋಹರವಾಗಿವೆ, ಬರಹ ಹಿಡಿಸಿತು, ಇನ್ನೂ ಒಂದಷ್ಟು ಚಿತ್ರಗಳಿದ್ದರೆ ನೋಡುವ ಆಸೆ!

ಸಾಗರದಾಚೆಯ ಇಂಚರ said...

sundara chitragalu balu sir
tumbane khushi aytu baraha nodi

ಜಲನಯನ said...

ಬಾಲು..ಕಾಡಿನ ದೃಶ್ಯಾವಳಿ ಚನ್ನಾಗಿ ಮೂಡಿ ಬಂದಿದೆ...
ಹಾಗೇ ನಿಮ್ಮ ವಿವರಣೆ ಸಹಾ..ಆಸಕ್ತಿ ಮೂಡಿಸುತ್ತೆ.....ಕೀಪ್ ಟ್ರ್ಯಾಕಿಂಗ್...ಅಂಡ್ ಬ್ಲಾಗಿಂಗ್ ಬಾಲು...ಜೈ ಹೋ...!!೧

nimmolagobba said...

@ದಿ.ಟಿ.ಕೆ.ಮೂರ್ತಿ ಸರ್,ಪ್ರೀತಿಯ ಮಾತಿಗೆ ಜೈ.ಹೋ

nimmolagobba said...

@ ವಿ.ಆರ್.ಭಟ್ ಸರ್ , ನಿಮ್ಮ ಮೆಚ್ಚುಗೆಯ ಮಾತುಗಳು ಹೃದಯ ಸೇರಿವೆ. ನೀವು ನಮ್ಮೂರಿಗೆ ಬಂದಾಗ ಇನ್ನೂ ಬಹಳಷ್ಟು ಚಿತ್ರಗಳನ್ನು ನೋಡಬಹುದು.

nimmolagobba said...

@,ಗುರುಮೂರ್ತಿ ಸರ್, ಅಂಬೇಗಾಲಿಡುತ್ತಾ ಸಾಗಿರುವ ಈ ಅಜ್ಞಾನಿಗೆ ನಿಮ್ಮೆಲ್ಲರ ಪ್ರೋತ್ಸಾಹ ಇನ್ನೂ ಕಲಿಯಲು ಉತ್ಸಾಹ ನೀಡುತ್ತದೆ . ನಿಮ್ಮ ಪ್ರೀತಿ ಪೂರ್ವಕ ಪ್ರೋತ್ಸಾಹ ಹೀಗೆ ಇರಲಿ.

nimmolagobba said...

ಅಜಾದ್ ಸರ್ ,ಮೆಚ್ಚಿಕೊಂಡ ಬರೆದ ಮಾತುಗಳು ಈ ಅಜ್ಞಾನಿಯ ಹುಮ್ಮಸ್ಸನ್ನು ಇಮ್ಮಡಿಗೊಳಿಸಿದೆ.ಪ್ರೀತಿಯ ಭೇಟಿ ಮುಂದುವರೆಸಿ ಹೀಗೆ ತಿದ್ದಿತೀಡಿ ಹರಸಿ.

PARAANJAPE K.N. said...

ಚಿತ್ರ-ಲೇಖನ ಚೆನ್ನಾಗಿದೆ. ನಿಮ್ಮ ಕಾಡು ಸುತ್ತುವ ಹವ್ಯಾಸ ನಿರ೦ತರ ಸಾಗಲಿ. ನಿಮ್ಮಿ೦ದ ನಮಗೂ ಕಾಡಿನ ಅನುಭವ ಓದುವ , ಅಪರೂಪ ಛಾಯಾಚಿತ್ರ ನೋಡುವ ಭಾಗ್ಯ ಸಿಗಲಿ. ಬರುವ ಬೇಸಿಗೆಯಲ್ಲಿ ನಮ್ಮ ಜೊತೆ ಒ೦ದು ಚಾರಣಕ್ಕೆ ನೀವು ಬರಬೇಕು. (ನಮ್ಮೂರ ಕಡೆ)

ಜಿ.ಎಸ್.ಶ್ರೀನಾಥ said...

ನಮಸ್ಕಾರ ಬಾಲು,

ನಿಮ್ಮ ಕಾಡಿನ ಅನುಭವ ಚೆನ್ನಾಗಿದೆ,

ಈ "ಮಸಾಲೆ ಬೆಟ್ಟ" ಏನದು? ಸ್ವಲ್ಪ ತಿಳಿಸಿ,

Shashi jois said...

ಚಿತ್ರ ತುಂಬಾ ಸೊಗಸಾಗಿದೆ ಸರ್.ಹಾಗು ವಿವರಣೆ ಕೂಡ ಸೊಗಸಾಗಿದೆ..

Sum said...

ಚಿತ್ರಗಳು ಹಾಗು ಚಿತ್ರಣ ಬಹಳ ಸುಂದರವಾಗಿವೆ :)

nimmolagobba said...

@ ಪರಾಂಜಪೆ ಸರ್, ಹ ಹ ಹ ವನವಾಸಕ್ಕೆ ಆಶೀರ್ವದಿಸಿ ಹರಸಿದ್ದೀರಿ ಸ್ವೀಕರಿಸಿದ್ದೇನೆ. ಹಾಗೆ ಬೇಸಿಗೆಗೆ ನಿಮ್ಮೊಂದಿಗೆ ಚಾರಣ !!!! ವಾವ್ ಒಪ್ಪಿದ್ದೇನೆ ಸರ್ ಹೋಗೋಣ.ಆದ್ರೆ ಎಲ್ಲಿಗೆ ಅಂತಾ ತಿಳಿಸಿ ಸರ್ ಪ್ಲಾನ್ ಮಾಡ್ಕೊಬೇಕೂ >

shivu.k said...

ಬಾಲು ಸರ್,

ಕಾಡಿನ ಆಳವನ್ನು ಮತ್ತಷ್ಟು ಪರಿಚಯ ಮಾಡಿಸುವುದರ ಜೊತೆಗೆ ನಿಮ್ಮ ಟೈರಿನ ತಾಪತ್ರಯ ಕಂಡಾಗ ಒಮ್ಮೆ ದಿಗಿಲಾಯಿತು. ಆರಣ್ಯ ಸಿಬ್ಬಂದಿಯ ವೀಕ್ಷಕ ಕೆಲಸಗಾರರ ಬಗ್ಗೆ ಓದಿದಾಗ ಹೆಮ್ಮೆ ಎನಿಸುತ್ತದೆ..ಮುಂದುವರಿಸಿ ಸರ್...

nimmolagobba said...

@ ಜಿ. ಎಸ .ಶ್ರೀನಾಥ , ನಿಮ್ಮ ಪ್ರಥಮ ಭೇಟಿಗೆ ಸ್ವಾಗತ ಮೆಚ್ಚುಗೆಯ ಮಾತುಗಳು ಹಿತವಾಗಿವೆ. ಮಸಾಲೆ ಬೆಟ್ಟ ಅನ್ನೋದು ಒಂದು ಜಾಗ ಅದನ್ನು ಅಲ್ಲಿನ ಜನ ಹಾಗೆ ಕರೀತಾರೆ.ಬಹುಷಃ ಅಲ್ಲಿ ಗಿರಿಜನರು ಸಂಬಾರ ಪದಾರ್ಥಗಳನ್ನು ಸಂಗ್ರಹಣೆ ಮಾಡುತ್ತಿದ್ದಿರಬಹುದು. ನೆನಪಿರಲಿ ಕಾಡಿನಲ್ಲಿ ಕೆಲವು ಸಂಬಾರ ಪದಾರ್ಥಗಳು ಉತ್ಪತ್ತಿಯಾಗುತ್ತವೆ. ಕರಿಮೆಣಸು,ಚಕ್ಕೆ,ಗೆಡ್ಡೆ ಗೆಣಸು,ಇತ್ಯಾದಿ ಹಾಗಾಗಿ ಮಸಾಲೆ ಬೆಟ್ಟವಾಗಿರಬಹುದು.ನಾವು ಈಬಗ್ಗೆ ವಿಚಾರ ಮಾಡಿದಾಗ ತಿಳಿದುಬಂದ ವಿವರಗಳಿವು. ನಿಮ್ಮ ಭೇಟಿ ಮುಂದುವರೆಸಿ ಥ್ಯಾಂಕ್ಸ್.

nimmolagobba said...

@ ಶಶಿ ಜೋಯಿಸ್ , ಮೇಡಂ ನಿಮ್ಮ ಮೆಚ್ಚುಗೆಯ ನುಡಿಗೆ ಸ್ವಾಗತ. ಭೇಟಿ ಮುಂದುವರೆಯಲಿ. ಥ್ಯಾಂಕ್ಸ್.

nimmolagobba said...

@ ಸುಮನ , ನಿಮ್ಮ ಭೇಟಿ ಖುಷಿಯಾಗಿದೆ. ಪ್ರೀತಿಯ ಮಾತುಗಳು ಮನಸೇರಿವೆ.ಭೇಟಿ ಮುಂದುವರೆಸಿ .ಥ್ಯಾಂಕ್ಸ್.

nimmolagobba said...

ಕೆ.ಶಿವೂ , ಬಹಳ ದಿನಗಳ ನಂತರ ಭೇಟಿ ಖುಷಿಯಾಗಿದೆ.ನಿಮ್ಮ ಅನಿಸಿಕೆ ಸರಿ ಕಾಡಿನ ಸಹವಾಸವೇ ಹಾಗೆ ಯಾವುದೇ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು , ಕಾಡನ್ನು ಕಾಯುವವರ ಜೀವನ ಬಹಳ ಕಷ್ಟಕರವಾಗಿದೆ. ಹತ್ತಿರದಿಂದ ನೋಡಿದಾಗ ಅರಿವಿಗೆ ಬರುತ್ತದೆ. ಕಾಡನ್ನು ನೋಡಲು ಹೋಗುವ ನಾವುಗಳು ಇವರಬಗ್ಗೆ ಯೋಚಿಸದೆ ಕಾಡಿಗೆ ಮಜಾ ಮಾಡಲು ಹೋಗುವುದು ಎಷ್ಟು ಸರಿ ಆಲ್ವಾ ??. ನಿಮ್ಮ ಅರ್ಥ ಪೂರ್ಣ ಅನಿಸಿಕೆಗೆ ಥ್ಯಾಂಕ್ಸ್.

jithendra hindumane said...

ಬಾಲು ಸರ್‍, ಅದ್ಭುತ ಅನುಭವಗಳು.. ಒಳ್ಳೆ ಬರಹ... ಧನ್ಯವಾದಗಳು

nimmolagobba said...

@ಜಿತೇಂದ್ರ ಹಿಂಡುಮನೆ , ಸರ್ ನಿಮ್ಮ ಆತ್ಮೀಯ ಅನಿಸಿಕೆ ನನಗೆ ಸ್ಪೂರ್ತಿದಾಯಕವಾಗಿದೆ.ಥ್ಯಾಂಕ್ಸ್.

ಸುಬ್ರಮಣ್ಯ ಮಾಚಿಕೊಪ್ಪ said...

:-)

nimmolagobba said...

@ ಸುಬ್ರಹ್ಮಣ್ಯ ಮಾಚಿಕೊಪ್ಪ , :-), ಥ್ಯಾಂಕ್ಸ್.

ಅಪ್ಪ-ಅಮ್ಮ(Appa-Amma) said...

ಬಾಲು ಅವರೇ,

ಕಾನನದ ವಿಸ್ಮಯ ಸಾಮ್ರಾಜ್ಯದಲ್ಲಿ ನಮ್ಮನ್ನು ಕರೆದುಕೊಂಡು ಹೋಗಿದ್ದಕ್ಕೆ ವಂದನೆಗಳು.

ಅರಣ್ಯ ಇಲಾಖೆಯ ವಾರ್ಚಸ್ ಕೆಲಸದ ಬಗ್ಗೆ ತಿಳಿದಿರಲಿಲ್ಲ. ಅವರಿಗೊಂದು ನಮನ.

nimmolagobba said...

@ಅಪ್ಪ ಅಮ್ಮ ,ನಿಮ್ಮ ಅನಿಸಿಕೆಗೆ ಥ್ಯಾಂಕ್ಸ್. ಹೌದು ಕಾಡಿನ ವಾಚರ್ಸ್ ಕೆಲಸದ ಬಗ್ಗೆ ಹೆಚ್ಚುಜನರಿಗೆ ಗೊತ್ತಿಲ್ಲ , ಆದರೆ ಅವರು ಮಾಡುತ್ತಿರುವ ಕೆಲಸ ಯಾವುದೇ ಸೈನಿಕನಿಗೂ ಕಡಿಮೆಇಲ್ಲ , ಅವರನ್ನು ಸಮಾಜ ಗೌರವಿಸುದನ್ನು ಕಲಿಯಬೇಕಾಗಿದೆ. ಹೇಳಿಕೊಳ್ಳಲು ಹಲವಾರು ಹಲವಾರು ಸಂಘ ಸಂಸ್ಥೆಗಳಿದ್ದರೂ ಯಾರ ಕಣ್ಣಿಗೂ ಇವರು ಬಿದ್ದಿಲ್ಲ .ನಿಮ್ಮ ಅಭಿಪ್ರಾಯಕ್ಕೆ ಮತ್ತೊಮ್ಮೆ ಥ್ಯಾಂಕ್ಸ್.

Badarinath Palavalli said...

good photos sir, nice write up.

nimmolagobba said...

@ಭಾದರಿನಾಥ್ ಪಲವಳ್ಳಿ, ನಿಮ್ಮ ಅನಿಸಿಕೆಗೆ ವಂದನೆಗಳು.

ವಾಣಿಶ್ರೀ ಭಟ್ said...

nice one!!!!

nimmolagobba said...

@ ವಾಣಿಶ್ರೀ ಭಟ್ , ನನ್ನ ಬ್ಲಾಗಿಗೆ ನಿಮ್ಮ ಪ್ರಥಮ ಭೇಟಿಯಾಗಿದೆ. ನಿಮಗೆ ಸ್ವಾಗತ .ಅನಿಸಿಕೆಗೆ ಥ್ಯಾಂಕ್ಸ್. ನಿಮ್ಮ ಭೇಟಿ ಮುಂದುವರೆಯಲಿ.

ಸಿಮೆಂಟು ಮರಳಿನ ಮಧ್ಯೆ said...

ಬಾಲೂ ಸರ್...

ನಿಮ್ಮ ಸಾಹಸಗಳು "ಸಿಂದಾಬಾದನ" ಸಾಹಸಗಳ ಥರಹ ಇದೆ...

ಈ ಹುಡುಕಾಟ..
ಓಡಾಟಗಳು ಜೀವನದಲ್ಲಿ ಹೊಸ ಹುರುಪು ಕೊಡತ್ತವೆ ಅಲ್ಲವೆ?

ದೈನಂದಿನ ಯಾಂತ್ರಿಕ ಜೀವನದ ಮಧ್ಯದಲ್ಲಿ ಇಂಥಹ ಬದಲಾವಣೆ ಇರಬೇಕು..

ನಿಮ್ಮ ಫೋಟೊಗಳು...
ಅದಕ್ಕೆ ತಕ್ಕ ವಿವರಣೆಗಳು... ಸೊಗಸಾಗಿವೆ...

ನಮ್ಮನ್ನೂ ಪುಕ್ಕಟೆಯಾಗಿ ಕಾಡಿಗೆ ಕರೆದು ಕೊಂಡು ಹೋಗಿದ್ದಕ್ಕೆ ಧನ್ಯವಾದಗಳು ಜೈ ಹೋ !

nimmolagobba said...

@ಪ್ರಕಾಶ್ ಜಿ , ಅಪರೂಪದ ಭೇಟಿ ಮತ್ತೊಮ್ಮೆ ಸ್ವಾಗತ.ನಿಮ್ಮ ಪ್ರೀತಿಯ ಮಾತಿಗೆ ನಮನಗಳು. ಜೈ.ಹೋ.

ಕಲರವ said...

baalu sir kaadina sundaravaada chitragalu mattu nimma anubhavagala baraha kuuda ashte sundaravaagide.kaadina drushyagalu namage tumbaa ishtavaayitu.hige innashtu barali.vandanegalu.

nimmolagobba said...

@ ಕಲಾವತಿ ಮೇಡಂ ನಿಮ್ಮ ಪ್ರೀತಿಯ ಮಾತುಗಳಿಗೆ ವಂದನೆಗಳು. ನಿಮ್ಮ ಭೇಟಿ ಮುಂದುವರೆಯಲಿ. ಶುಭಾಶಯಗಳೊಂದಿಗೆ ವಂದನೆಗಳು.

ಸೀತಾರಾಮ. ಕೆ. / SITARAM.K said...

adbhuta chitra mattu anubhavagala rochaka vivarane baalanna.
namma ballaari sanduru vanapaalakarannu nodi hesikondidda nanage avara bagge gourava muduvante aayitu, alli ashttondu kashta paduva vanapaalakaru - ill meyuva... hogali bidi illiyavarannu swalpa dina allige haakabeku ashtte.

nimmolagobba said...

@ಸೀತಾರಾಂ ಸರ್ ಎಲ್ಲಾ ಇಲಾಖೆಯಲ್ಲಿಯೂ ನೀವು ಹೇಳಿರುವ ತರಹದ ಜನರಿದ್ದಾರೆ. ಆದರೆ ಇನ್ನು ಕೆಲವು ಪ್ರಮಾಣಿಕರಿಗೆ ಪ್ರೋತ್ಸಾಹ ಬೇಕು ,ನಾವು ಕಾಣದ ದೃಶ್ಯಗಳನ್ನು ನಿಮ್ಮ ಮುಂದಿಟ್ಟಿದ್ದೇವೆ.ನೀವು ಮೆಚ್ಚಿಕೊಂಡಿದ್ದೀರಿ ಧನ್ಯವಾದಗಳು.