ಬಾಲು ಬನ್ನಿ ಡಿ.ಬಿ. ಕುಪ್ಪೆಗೆ ಹೋಗಬೇಕಂತೆ ಅಂತಾ ವೇಣು ಕರೆದಾಗನೆನಪಿನ ಲೋಕದಿಂದ ಜಾರಿ ವಾಸ್ತವಕ್ಕೆ ಬಂದೆ
" ಬಳ್ಳೆ"
ಕ್ಯಾಂಪ್ ಬಿಟ್ಟು ಡಿ.ಬಿ.ಕುಪ್ಪೆ ಯಲ್ಲಿರುವ ಐ.ಬಿ.ಯಲ್ಲಿ ಸಾಮಾನ್ಯ ವಾಗಿ ನಮಗೆ ವಾಸ್ತವ್ಯಕ್ಕೆ ನೀಡಲಾಗುತ್ತದೆ.ಹೊರಡಲು ನಮ್ಮಲಗ್ಗೇಜುಗಳನ್ನು ಕಾರಿನಲ್ಲಿ ತುಂಬಿಸಿ ಹೊರಡಲು ಅನುವಾದೆವು. ಅಡಿಗೆ ಮನೆಯಲ್ಲಿ ಆನೆಗಳಿಗೆ ಮುದ್ದೆ ತಯಾರಿಸುವ ತಯಾರಿ ನಡೆದಿತ್ತು ಇನ್ನೂ ಊಟ ರೆಡಿ ಇಲ್ವಾ ಅನ್ನೋತರಹ ಒಂದು ಸಾಕಿದ ಆನೆ ಅಡಿಗೆ ಮನೆ ಹತ್ತಿರ ಬಂದು ನಿಂತಿತ್ತು !! ಅತ್ತ ಅಡಿಗೆ ಮನೆಯಲ್ಲಿ ಆನೆಗೆ ಅಡಿಗೆ ತಯಾರಿ ನಡೆದಿತ್ತು.
ಏನಪ್ಪಾ ಅಡಿಗೆ ಆಗಿಲ್ವಾ |
ಅಡಿಗೆ ಮನೆ |
ಇನ್ನೇನು ನಮ್ಮ ಕಾರು ಹೊರಡ ಬೇಕು ಎನ್ನುವ ಸಮಯ ಇಬ್ಬರು ವ್ಯಕ್ತಿಗಳು ನಾವಿದ್ದಲ್ಲಿಗೆ ಬಂದು ಮಲಯಾಳಂ ನಲ್ಲಿ ಪ್ರಶ್ನೆ ಕೇಳಲು ಶುರು ಮಾಡಿದರು!! ನಾವು ಕನ್ನಡ ದಲ್ಲಿ ನಿಮಗೆ ಏನು ಬೇಕು ಎಂದು ಕೇಳಿದಾಗಇಂಗ್ಲೀಶ್ ನಲ್ಲಿ ಮಾತಾಡಿ ತಾವು "ಮಲೆಯಾಳ ಮನೋರಮಾ" ನ್ಯೂಸ್ ಚಾನಲ್ ರವರೆಂದು ಪರಿಚಯ ಮಾಡಿ ಕೊಂಡರು.ನಂತರ ನಾನು ಇಲ್ಲಿ ಯಾವ ವಿಚಾರ ದ ವರದಿ ಬಗ್ಗೆ ನೀವು ಬಂದಿದ್ದೀರಿ ಎಂದು ಕೇಳಿದೆ [ ನನ್ನ ಉದ್ದೇಶ ಇವರು ಇಂತಹ ಕಾಡಿನ ಬಗ್ಗೆ ಜನರಿಗೆ ಮಾಹಿತಿ ನೀಡಲು ಬಂದಿರಬಹುದೆಂದು ಅನ್ನಿಸಿತ್ತು ] ಅದಕ್ಕೆ ಅವರು ನೋಡಿ ಈ ಊರಿನ ಮೂಲಕ ಹೋಗುವ ರಸ್ತೆ ಎಷ್ಟು ಕೆಟ್ಟದಾಗಿದೆ ಇದರಿಂದ ಪ್ರತಿದಿನಾ ಕೇರಳದಿಂದ ಕರ್ನಾಟಕಕ್ಕೇ ಬರುವ ಜನರಿಗೆ ತುಂಬಾ ತೊಂದರೆಯಾಗಿದೆ.ನಮ್ಮ ಸರ್ಕಾರ ಎಷ್ಟೊಂದು ಮನವಿ ಮಾಡಿ ಕೊಂಡಿದೆ ಗೊತ್ತ .... ಅಂತಾ ? ಒಂದೇ ಸಮನೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಎಸೆಯುತ್ತಾ ಬಂದರು .
ಇಲ್ಲೂ ಹಾಜರ್ ನಾವು |
ಇದು ಹೇಗಿದ್ದರೆ ಚೆನ್ನ |
ಮುಂದುವರೆದು ಒಂದೇ ಸಮನೆ ಕೇಳುತ್ತಾ , ಸಾರ್ವಜನಿಕರ ತೊಂದರೆ ಬಗ್ಗೆ ಯಾರಿಗೂ ಕಾಳಜಿ ಇಲ್ಲ ಇದರಬಗ್ಗೆ ನೀವೇನಂತೀರಾ ??? ಅಂತ ನನ್ನ ಹತ್ತಿರ ಕ್ಯಾಮರ ತಿರುಗಿಸಿ ಮೈಕ್ ಹಿಡಿದ , ಕೆಟ್ಟ ಸಿಟ್ಟು ಬಂದರೂ ತಡೆದು ಕೊಂಡು ಅಲ್ಲಾ ನೀವು ಕೇರಳದ ಜನರ ಕಷ್ಟದ ಬಗ್ಗೆ ವರದಿ ಮಾಡಲು ಬಂದಿರುವುದು ಸ್ಪಷ್ಟವಾಯಿತು. ಆದರೆ ಈ ರಸ್ತೆಗೆ ಪರ್ಯಾಯವಾಗಿ ಮಾನಂದವಾಡಿ ಯಿಂದ ಕಾಟಿಕುಲಂ ,ಕುಟ್ಟ, ಗೋಣಿಕೊಪ್ಪ ,ತಿತಿಮತ್ತಿ, ಹುಣಸೂರು ಮೂಲಕ ಮೈಸೂರಿಗೆ ಬರಲು ದಾರಿಯಿದೆ.ಇಲ್ಲಿ ರಸ್ತೆ ಚೆನ್ನಾಗಿ ಮಾಡಿ ವಾಹನ ದಟ್ಟಣೆ ಹೆಚ್ಚಾದರೆ ಇಲ್ಲಿನ ಪ್ರಾಣಿಗಳ ಚಲನೆಗೆ ತೊಂದರೆ ಯಾಗದೆ ಅಂದೇ !!! ಇಲ್ಲ ಸಾರ್ "ನಮ್ಮ ರಾಜ್ಯದ ಸಾರ್ವಜನಿಕರಿಗೆ ಇಂದನ ಹಾಗು ಸಮಯ ಎಷ್ಟು ವೇಸ್ಟ್ ಆಗುತ್ತೆ ಗೊತ್ತ!!!!" ಅಂದ. "ಇಷ್ಟೆಲ್ಲಾ ನಿಮ್ಮ ರಾಜ್ಯದ ನಾಗರೀಕರ ಬಗ್ಗೆ ಕಾಳಜಿ ಇರುವ ನೀವು ಇಲ್ಲಿ ಇರುವ ವನ್ಯ ಜೀವಿಗಳ ಬಗ್ಗೆ ಯಾಕೆ ಯೋಚಿಸುತ್ತಿಲ್ಲಾ"!!!! ಅಂದೇ.ಆದ್ರೆ ಆ ಮಾತು ಕೇಳುವ ಸ್ಥಿತಿಯಲ್ಲಿ ಆ ಪುಣ್ಯಾತ್ಮ ಇರಲಿಲ್ಲ ." ಕ್ಯಾಮರ ಆಫ್ ಮೈಕ್ ಗಾನ್". ಕಾಡಿನಲ್ಲಿ ಟಿ. ವಿ ಗೆ ಸಂದರ್ಶನ ನೀಡಿದ ಹಿಗ್ಗು ಇತ್ತಾದರೂ ಅದು ಪ್ರಸಾರ ವಾಗುವ ಸಾಧ್ಯವೇ ಇಲ್ಲವೆಂದು ಗೊತ್ತಾಗಿತ್ತು. ಅಲ್ಲಿಂದ ಡಿ.ಬಿ.ಕುಪ್ಪೆ ಗೆ ಹೊರಟೆವು."ಸಾ ಹುಸಾರು ಮುಂದೆ ದಾರಿಲೀ ಒಂದು ಆನೆ ಅದೆ!! ಚಾರ್ಜ್ ಮಾಡ್ತದೆ ನಿದಾನಕ್ಕೆ ಹೋಗಿ "ಅಂದ ಅಲ್ಲಿದ್ದ ಒಬ್ಬ ವ್ಯಕ್ತಿ. ನಾವು ನಕ್ಕು ಮುಂದುವರೆದೆವು ನಾವು ಬರುವ ವೇಳೆಗೆ ಆ ಆನೆ ದಾರಿಯಲ್ಲಿ ಸಿಗಲಿಲ್ಲ. ದಾರಿಯಂತೂ ಅಸಾಧ್ಯ ವಾಗಿತ್ತು ಆದರೆ ಎರಡೂ ಬದಿಯಲ್ಲಿ ಕಾಡು ಇದ್ದ ಕಾರಣ ನಿಧಾನ ವಾಗಿಚಲಿಸಿ ಡಿ.ಬಿ.ಕುಪ್ಪೆಗೆ ಬಂದಿಳಿದೆವು. ಡಿ.ಬಿ.ಕುಪ್ಪೆ [ ದೊಡ್ಡ ಬ್ಯಾಡರ ಕುಪ್ಪೆ ] ಕರ್ನಾಟಕದ ಗಡಿಯ ಅಂಚಿನ ಗ್ರಾಮ ಕಾಡಿನ ಸಮೀಪ ವಿದೆ. ಈ ಊರಿನ ಸಮೀಪದಲ್ಲೇ ಕಬಿನಿ ಹರಿದು ಕರ್ನಾಟಕ ಹಾಗು ಕೇರಳ ರಾಜ್ಯದ ಕಬಿನಿ ನದಿ ಎರಡೂ ರಾಜ್ಯಗಳ ಗಡಿಯಾಗಿ ಪರ್ವರ್ತಿತ ವಾಗಿದೆ. ಐ.ಬಿ. ತಲುಪಿದ ನಮಗೆ
ಆಶ್ರಯ ತಾಣ |
ಅಲ್ಲಿನ ಮೇಟಿ ಶ್ರೀಧರ್ ರಿಂದ ಆತ್ಮೀಯ ಸ್ವಾಗತ . "ಸಾ ಚೆನ್ನಾಗಿದ್ದೀರಾ!! ಖುಸಿಯಾಯ್ತು ಬನ್ನಿ ಸಾ" ಅಂತಾ ಹೇಳಿ ನಮ್ಮ ಲಗ್ಗೆಜನ್ನು ಚಕ ಚಕನೆ ಇಳಿಸಲು ಸಹಾಯ ಮಾಡಿ ತಕ್ಷಣ ಕಾಫಿ ತಂದಿಡುವ ಆಸಾಮಿ.ಯಾವಾಗಲೂ ನಗುಮುಖ ಒಳ್ಳೆಯ ರುಚಿಕಟ್ಟಾದ ಅಡಿಗೆ ಮಾಡುವ ಬಾಣಸಿಗ,ಕಾಡಿನ ಮಾಹಿತಿ ನೀಡುವ ಗೈಡು ಎಲ್ಲಾ ಅವರೇ. ಕಾಫಿಕುಡಿದು ಆಡಿಗೆ ಆಗುವ ತನಕ ನಾವು ಊರು ಸುತ್ತುವ ಕಾಯಕ ಶುರು ಮಾಡುತ್ತೇವೆ ಬನ್ನಿ ಡಿ.ಬಿ.ಕುಪ್ಪೆ ಫೋಟೋಗಳನ್ನು ನೋಡೋಣ.
ಡಿ .ಬಿ . ಕುಪ್ಪೆ ಹಳ್ಳಿ ಯಾ ಒಂದು ನೋಟ |
ಡಿ .ಬಿ ಕುಪ್ಪೆ [ದೊಡ್ಡ ಬ್ಯಾಡರ ಕುಪೆ ] ಕರ್ನಾಟಕ ರಾಜ್ಯದ ಗಡಿಯಲ್ಲಿರುವ ಕಬಿನಿ ನದಿ ದಡ ದ ಒಂದು ಚಿಕ್ಕ ಹಳ್ಳಿ . ಈ ಊರು ಕೇರಳದ ಕೆಲವು ಹಳ್ಳಿಗಳಿಗೆ ಸಂಪರ್ಕ ಸೇತು ಇದ್ದಂತೆ . ಕೇರಳದ ಗಡಿಯ ಕೆಲವು ಹಳ್ಳಿ ಜನ ಬೆಂಗಳೂರು,ಮಾನಂದವಾಡಿ,ಮುಂತಾದ ಊರುಗಳಿಗೆ ಹೋಗಲು ದೋಣಿಯಲ್ಲಿ ನದಿ ದಾಟಿ ಈ ಊರಿಗೆ ಬಂದೇ ಹೋಗಬೇಕು . ಹೆಸರಿಗೆ ಈ ಊರು ಕರ್ನಾಟಕ ದಲ್ಲಿದ್ದರೂ ಈ ಊರಿನಲ್ಲಿರುವ ಅಂಗಡಿ, ವಾಹನ , ಇತರ ಸಾರ್ವಜನಿಕ ಫಲಕಗಳಲ್ಲಿ ಮಲಯಾಳಂ ಭಾಷೆ ರಾರಾಜಿಸುತ್ತಿದೆ.ಇಲ್ಲಿನ ಹೆಚ್ಚು ವಾಹನಗಳು ಕೇರಳ ನೋಂದಣಿ ಹೊಂದಿವೆ !!!ಇಲ್ಲಿನ ಹೆಚ್ಚು ಜನ
ಇದು ಕರ್ನಾಟಕದ ಗಡಿಯಲ್ಲಿನ ಹಳ್ಳಿ |
ಮಾತಾಡೋದು ಮಲಯಾಳಂ ಆದುದರಿಂದ ಈ ಊರು ಕರ್ನಾಟಕದ್ದೂ ಅಂತಾ ಅನ್ನಿಸಲು ಬಹಳ ಸಮಯ ಹಿಡಿಯುತ್ತೆ. ನಾವು ಅಚ್ಚರಿ ಪಡುತ್ತಾ ಈ ಊರನ್ನು ಸುತ್ತುಹಾಕಿ ಕಬಿನಿಯ ದಡಕ್ಕೆ ಬಂದೆವು
ಒಡಲು ತುಂಬಿಕೊಂಡ ಕಬಿನಿ |
ಅಲ್ಲೇ ಇದ್ದ ದೋಣಿಯವನನ್ನು ಮಾತಾಡಿಸಿ ದೋಣಿಯಲಿ ಕರ್ನಾಟಕದಿಂದ ಕೇರಳ
ಕಡೆಗೆ ಹೊರಟೆವು.
ದೋಣಿ ಸಾಗಲಿ ಮುಂದೆ ಹೋಗಲಿ |
ನಿಮ್ಮ ಪಕ್ಕದ ರಾಜ್ಯದವರು ನಾವು ಎಂದವು ಈ ಮಕ್ಕಳು |
ತುಂಬಿದ ಕಬಿನಿಯಲ್ಲಿ ನೀರಿನ ಆಳ ಸುಮಾರು ಇನ್ನೂರಕ್ಕೂ ಹೆಚ್ಚು ಅಡಿ ಇರುತ್ತದೆಂದು ಅಲ್ಲಿಯವರು ಹೇಳುತ್ತಾರೆ.ಕಬಿನಿಯ ಮದ್ಯ ಭಾಗಕ್ಕೆ ಬಂದ ನಮಗೆ ಬಹಳ ಸಂತಸ ವಾಗಿ ಕರ್ನಾಟಕ ಹಾಗು ಕೇರಳ ರಾಜ್ಯಗಳ ಸುಂದರ ದೃಶ್ಯಗಳನ್ನು ಒಟ್ಟಿಗೆ ಕಾಣುವ ಸೌಭಾಗ್ಯ ಒದಗಿತ್ತು.ಅಲ್ಲೇ ಸನಿಹದಲ್ಲಿ ನದಿಯ ದಡ ದಲ್ಲಿ ಕೆಲವು ಮಕ್ಕಳು ಕೇರಳ ಭಾಗದಿಂದ ನಮ್ಮ ನ್ನು ನೋಡುತಿದ್ದರು. ಅಲ್ಲೇ ಸನಿಹದಲ್ಲಿ
ಕೇರಳದಿಂದ ಕರ್ನಾಟಕ ಕಂಡದ್ದು ಹೀಗೆ |
ಕರ್ನಾಟಕದ ಗಡಿಯ ತುತ್ತ ತುದಿ |
14 comments:
ವಾಹ್..!! ಫೋಟೋಗಳು ತುಂಬಾ ಚೆನ್ನಾಗಿದೆ ಸರ್, ವಿವರಣೆ ಸಹ ಅಷ್ಟೇ ಚೆನ್ನಾಗಿ ನೀಡಿದ್ದೀರಿ.... ಟಿವಿ ಚಾನೆಲ್ ರವರಿಗೆ ಒಳ್ಳೆ ಅಭಿಪ್ರಾಯವನ್ನೇ ಹೇಳಿದ್ದೀರಿ.... ಧನ್ಯವಾದಗಳು ಮತ್ತಷ್ಟು ಪ್ರವಾಸ ಕೈಗೊಳ್ಳಿ ನಮಗೆ ನಿಮ್ಮ ಅನುಭವವನ್ನು ಹೇಳುತ್ತಲಿರಿ.
ವಂದನೆಗಳು
ಸರ್,
ನಿಮ್ಮ ಕಾಡಿನ ಅನುಭವ ಮತ್ತು ಫೋಟೊಗಳು ಚೆನ್ನಾಗಿವೆ. ಟಿವಿಯವರಿಗೆ ಸರಿಯಾಗಿಯೇ ಹೇಳಿದ್ದೀರಿ. ಮತ್ತಷ್ಟು ಬರೆಯಿರಿ..
ಬರಹ ಚೆನ್ನಾಗಿದೆ. ಮುಂದಿನ ಭಾಗ ಕಾಯುವಂತಾಗಿದೆ... ಬೇಗ ಬರೆಯಿರಿ...!
ಬಾಲೂ ಸರ್..
ನನಗೂ ಒಮ್ಮೆ ಹೋಗಿಬರಬೇಕು ಅಂತ ಆಸೆ ಆಗ್ತ ಇದೆ..
ಚಂದದ ಫೋಟೊ ಲೇಖನ...
@ ಮನಸು [ಸುಗುಣ ] ರವರೆ ,ಹೌದು ಅವರು ಕೇರಳ ಜನರ ಹಿತಾಸಕ್ತಿ ಕಾಪಾಡಲು ಬಂದಿದ್ದರು.ಯಾರೇ ಆಗ್ಲಿ ಕಾಡಿನಲ್ಲಿ ಅತಿಕ್ರಮಿಸಿ ವನ್ಯ ಜೀವಿಗಳ ಬಾಳನ್ನು ಹಾಳು ಮಾಡುವುದು ಸರಿ ಯಾದ ಕ್ರಮವಲ್ಲಾ.ನಮಗೆ ಈ ಬಗ್ಗೆ ಪ್ರಾಥಮಿಕ ಜ್ಞಾನದ ಅವಶ್ಯಕತೆ ಇದೆ .ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್.
@ ಶಿವೂ ಸರ್ ನಿಮ್ಮ ಪ್ರೋತ್ಸಾಹ ಇರುವವರೆಗೆ ಬರವಣಿಗೆ ಇರುತ್ತದೆ. ಪ್ರೀತಿಯ ಮೆಚ್ಚುಗೆ ಮಾತಿಗೆ ವಂದನೆಗಳು .
ಜಿತೇಂದ್ರ ಹಿಂಡುಮನೆ , ಸರ್ ನಿಮಗೆ ಸ್ವಾಗತ , ನಿಮ್ಮ ಪ್ರೀತಿಯ ಮಾತುಗಳು ಹೃದಯ ಸೇರಿವೆ. ಬರ್ತಾಯಿರಿ.
@ ಪ್ರಕಾಶ್ ಅಣ್ಣ ಅಲಿಯಾಸ್ ಪಕ್ಕೇಶ್ ಹೆಗ್ಡೆ !!!!, ಜೈ ಹೋ ಶೀಘ್ರ ಮೇವ ಇಷ್ಟಾರ್ಥ ಪ್ರಾಪ್ತಿರಸ್ತು .[ವನವಾಸ ಪ್ರಾಪ್ತಿಯಾಗಲಿ ] . ನಿಮ್ಮ ಪ್ರೀತಿಯ ಮಾತುಗಳು ನನ್ನ ಹೃದಯದಲ್ಲಿ ಜಮೆಯಾಗಿವೆ.
ಬಾಲು ಅವರೇ,
ಕುಪ್ಪೆಯ ಪ್ರವಾಸ ಮಜವಾಗಿತ್ತು..ನೀವು ದೋಣಿಯಲ್ಲಿ ಎರಡು ರಾಜ್ಯಗಳ ಮಧ್ಯೆ ತೇಲಿದ್ದು ಸಹ.
leKhana channagi bandide balu..
Mallu MamagaLige sariyagiye helidderi..
Huliyannada katha prasanga channagide..
@ಅಪ್ಪ -ಅಮ್ಮ ನಿಮ್ಮ ಪ್ರೀತಿಯ ಮಾತುಗಳು ಸ್ಪೂರ್ತಿದಾಯಕವಾಗಿ ಇದೆ .ನಿಮಗೆ ವಂದನೆಗಳು.ನಿಮ್ಮ ಆಗಮನ ಮುಂದುವರೆಸಿ
@ ಥ್ಯಾಂಕ್ಸ್ ದೀಪು ನಿಮ್ಮ ಪ್ರೀತಿಯ ಮಾತುಗಳು ತಲುಪಿವೆ.
chennagide vivarane mattu chitra, ultaa odtaa iddene kshame irali
@ ಸೀತಾರಾಂ ಸರ್,ಹ ಹ ಹ ನೀವು ಉಲ್ಟಾ ಓದಿದರೂ ಕಾಡಿನ ಕಥೆಗಳು ಕನ್ಫ್ಯೂಸ್ ಆಗಲ್ಲಾ ಬಿಡಿ.ಪ್ರೇತಿ ಮಾತುಗಳಿಗೆ ಧನ್ಯ.
Post a Comment