Wednesday, December 8, 2010

ಕಾಡಿನ ನೆನಪಿಗೆ ಸ್ವಲ್ಪ ವಿರಾಮ.!! ಈಗ ಗೀತ್ ಗಾತಾ ಚಲ್!!!ಮೈಸೂರಿನಲ್ಲಿ ವೈಧ್ಯರ ಕಲರವ. !!! ಚಿತ್ರನಟಿ ಸುಮಲತಾ ಅಂಬರೀಶ್ ಹಾಡ್ತಾರೆ ಗೊತ್ತ!!!





ಪ್ರತಿನಿತ್ಯ ರೋಗಿಗಳ ಒಡನೆ ಮಿಂದು ಅವರ ನೋವಿಗೆ ಮಿಡಿದ ವೈಧ್ಯರು ಮೈಸೂರಿನಲ್ಲಿ ಪ್ರತೀವರ್ಷ "" ಗೀತ ಗಾತಾ ಚಲ್ "" ಅಂತಾ ಹಾಡಿ ಕುಣಿದು, ಸುಮಧುರ ಹಾಡುಗಳ  ರಸದೌತಣವನ್ನು ಮೈಸೂರ ಜನರಿಗೆ ನೀಡುತ್ತಾರೆ.ಈ ಕಾರ್ಯ ಕಳೆದ ಹತ್ತು ವರ್ಷಗಳಿಂದ  ನಿರಂತರವಾಗಿ ನಡೆದುಕೊಂಡು ಬಂದಿದೆ.ಬನ್ನಿ ಈ ಬಾರಿಯ ವಿಶೇಷವನ್ನು ಸವಿಯುವ. ಅಚ್ಚರಿಯ ವಿಷಯವೆಂದರೆ ಈ ಬಾರಿ ವೈಧ್ಯರ ಮಕ್ಕಳೂ ಸಹ ವೇದಿಕೆ ಏರಿದ್ದು.ಜೊತೆಗೆ ತಾರಾ ಸ್ಪರ್ಶ .ಕಳೆದ ಭಾನುವಾರ ಸಂಜೆ ನನ್ನ ಪಾಲಿಗಂತೂ ಗಾನದ ಸ್ವರ ಮಾಧುರ್ಯದ  ಸವಿ ಸಂಜೆಯಾಗಿ ಬಂದಿತ್ತು  
.   ಕಾರ್ಯಕ್ರಮ ಅಚ್ಚುಕಟ್ಟಾಗಿ ಆಯೋಜಿಸಿದ್ದು ಒಂದು  ಹೆಗ್ಗಳಿಕೆ. ಸರಿಯಾಗಿ ಆರು ಘಂಟೆಗೆ ಕಾರ್ಯಕ್ರಮ   ನಾಡಗೀತೆ ಯೊಂದಿಗೆ  ಶುರು, "ಭಾರತ ಜನನಿಯ ತನುಜಾತೆ" ನಾಡ ಗೀತೆ ಯನ್ನು ಮೈಸೂರಿನ ದಂತ ವೈಧ್ಯೆ ಡಾ// ಸ್ನೇಹಶ್ರೀ  ಹಾಡಿದರೆ ಸಭಿಕರು ಎದ್ದು ನಿಂತು ಗೌರವ ಸಲ್ಲಿಸಿದರು.ನಂತರ ವೇದಿಕೆ ಗೆ ಪ್ರವೇಶ ಪಡೆದವರು ಮೈಸೂರಿನ ಮುಖೇಶ್ ಅಂತಾ ಕರೆಸಿಕೊಳ್ಳುವ [ಇವ್ರು ಮಾತಾಡಿದ್ರೆ  ಹಿಂದಿ ಗಾಯಕ ಮುಖೇಶ್ ಮಾತಾಡಿದಂತೆ ಆಗುತ್ತೆ.]ಡಾ // ನಟ ಶೇಖರ್ [ ಇವರು ಮೈಸೂರಿನ ಪ್ರಸಿದ್ದ ಇ.ಏನ್.ಟಿ. ಸ್ಪೆಷಲಿಸ್ಟ್ ] ಅದ್ಭತ ಹಾಡುಗಾರ ಮುಖೇಶ್ ಹಾಡುಗಳನ್ನು ಲೀಲಾ ಜಾಲವಾಗಿ ಹಾಡಿ ಸೈ ಅನ್ನಿಸಿಕೊಂಡಿದ್ದಾರೆ. ಇವರು ಶುರು ಮಾಡಿದ್ದು ಕನ್ನಡ  " ವಿಜಯನಗರ  ವೀರ ಪುತ್ರ "  ಚಿತ್ರದ " ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು " ಎಂದು ಹಾಡಿ  ಕನ್ನಡ ನುಡಿಗೆ ನಮಿಸಿ  ರಾಜ್ ಕಪೂರ್  ಅಭಿನಯದ ಸಂಗಂ ಹಿಂದಿ ಚಿತ್ರದಲ್ಲಿ ರಫಿ  ಹಾಡಿರುವ '"  ಏ ಮೇರ ಪ್ರೇಂ ಪತ್ರ ಪಡ್ಕರ್" ಹಾಡನ್ನು ಹಾಡಿದರು.ಪ್ರೇಮ ಪತ್ರದ ಹಾಡಿನ ನಂತರ ಡಾ // ನಟಶೇಖರ್  ಮತ್ತೊಬ್ಬ ಅದ್ಭುತ ಹಾಡುಗಾರ್ತಿ  ಡಾ// ಹೇಮಲತಾ [ಮೈಸೂರು ಕೆ.ಆರ್ ಆಸ್ಪತ್ರೆ ಯಲ್ಲಿ ಪ್ರಸಿದ್ದ ಪೆತಾಲಾಜಿಸ್ಟ್ ಲತಾಮಂಗೇಶ್ಕರ್ ಹಾಡುಗಳನ್ನು ಸುಮಧುರವಾಗಿ ಹಾಡುತ್ತಾರೆ.] ರವರೊಂದಿಗೆ "ಬೆಳ್ಳಿ ಮೋಡದ ಅಂಚಿನಿಂದ" ಹಾಡನ್ನು ಹಾಡಿ    ಸುಂದರ  ಸಂಜೆಗೆ ಮೆರಗು ನೀಡಿದರು. ನಂತರ ಡಾ// ನಟ ಶೇಖರ್  ಜೊತೆಗೂಡಿದ್ದು ಅವರ ಪುತ್ರಿ ಅಪೂರ್ವ ನಟ ಶೇಖರ್ ತಂದೆ ಮಗಳು ಸೇರಿ " ಹಾಲ್ ಕೈಸಾ ಹೇ ಜನಾಬ್ ಕ , ಕ್ಯಾ ಕಯಾಲ್  ಹೇ ಆಪುಕ " ಹಾಡನ್ನು ಹಾಡುತ್ತಿದ್ದರೆ  ಕೇಳುಗರು ತಾಳಾ ಹಾಕಿ ನಲಿಯುತ್ತಿದ್ದರು. ಹಾಡಿನ ನಂತರ ಲತಾ ಮಂಗೇಶ್ಕರ್ ಹಾಡಿರುವ " ಅನಾರ್ಕಲಿ ' ಚಿತ್ರದ "ಏ ಜಿಂದಗೀ ಉಸೀಕಿ ಹೈ" ಹಾಡನ್ನು ಡಾ// ಹೇಮಲತಾ ರವರು ಹಾಡಿ ಗಾನ ಸುಧೆ ಪ್ರಸರಿಸಿದರು.ನಂತರದ ಸರದಿ "ಕು.ಸ್ಪರ್ಶಾ  ಶೆಣೈ" ಇವರು "ಮಿಸ್ಟರ್ ಇಂಡಿಯಾ '' ಚಿತ್ರದ "ಹವಾ ಹವಾ ಹೈ " ಹಾಡನ್ನು    ನರ್ತಿಸುತ್ತಾ ಹಾಡಿ ಚಪಾಳೆ ಗಿಟ್ಟಿಸಿದರು.ಡಾ// ಯೂ.ಜಿ.ಶೆಣೈ "ಹೃದಯ  ಗೀತೆ ' ಚಿತ್ರದ "ಯುಗ ಯುಗಗಳೇ ಸಾಗಲಿ" ಹಾಡನ್ನು ಹಾಡಿ ರಂಜಿಸಿದರು. "ಹುಲಿಯ ಹಾಲಿನ ಮೇವು " ಚಿತ್ರದ " ಬೆಳದಿಂಗಳಾಗಿ ಬಾ  ತಂಗಾಳಿಯಾಗಿ ನಾನು"ಎಂದು ಲಹರಿ ಹರಿಸಿ ವಾತಾವರಣವನ್ನು ಡಾ// ಎಂ.ಎ. ಶೇಖರ್   ಪ್ರೀತಿಮಯಗೊಳಿಸಿದರು . ಕಿಕ್ಕಿರಿದು ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದ ಮತ್ತೊಬ್ಬರೆಂದರೆ ನಿರೂಪಕ "ಸೈಯದ್ ಅಲ್ತಾಫ್ ಅಹಮದ್ " ಉತ್ತಮ ನಿರೂಪಣೆ ಯೊಂದಿಗೆ ಪ್ರೇಕ್ಷಕರನ್ನು ರಸಪ್ರಶ್ನೆಗಳ ಮೂಲಕ ಕಾರ್ಯಕ್ರಮಕ್ಕೆ ಎಳೆದುತಂದ ಮಾಂತ್ರಿಕ ರಾಗಿ ಮಿಂಚಿದರು.ಶುರುವಾಯ್ತು ನೋಡಿ ಮುಖೇಶ್ ಹಾಡಿದ "ಸಂಗಂ" ಚಿತ್ರದ "ದೋಸ್ತು ದೋಸ್ತು ನಾ ರಹ"  ಡಾ// ಗುಣಶೇಖರ್ ಹಾಡುತ್ತಿದ್ದರೆ ಚಿತ್ರದಲ್ಲಿ ರಾಜ್ಕಪೂರ್ ಅನುಭವಿಸುವ ನೋವನ್ನು  ಅವಾಹಿಸಿಕೊಂಡ ಪ್ರೇಕ್ಷಕರು ಮೌನವಾಗಿ ಮೂಕರಾದರು.ನೋವಿನ ಸನ್ನಿವೇಶದಿಂದ ಹೊರಕ್ಕೆ ತಂದವರು ಕು .ಪ್ರೀತಿ ಪ್ರಭು ಈಕೆ ನಿಜಕ್ಕೂ ಅಪ್ಪಟ ಪ್ರತಿಭೆ "ಮನ್ನಾಡೆ ಹಾಡಿದ " ಶಾಸ್ತ್ರೀಯ ಸಂಗೀತ ಪ್ರಧಾನ "ಲಾಗಾ ಚುನರಿ ಮೇ ದಾಗ್ " ಹಾಡನ್ನು[ "ದಿಲ್ ಹಿ ತೊ ಹೈ "ಚಿತ್ರದಿಂದ ] ಅದ್ಭುತವಾಗಿ ಹಾಡಿದರು.ಅತ್ಯಂತ ಕಷ್ಟಕರ ವಾದ    ಈ ಹಾಡಿನಲ್ಲಿ ಬರುವ ಸ್ವರ ಸಂಚಾರಗಳನ್ನು ಏರಿಳಿತಗಳನ್ನು ಸಮರ್ಥವಾಗಿ ನಿರ್ವಹಿಸಿ ಎಲ್ಲರ ಮನಸಿನ ಸ್ಟಾರ್ ಆಗೆಬಿಟ್ಟರು !!.ಪ್ರೇಕ್ಷಕರಿಂದ ವಾಹ್ ವಾಹ್ ಎನ್ನುವ ಶಭಾಶ್ ಗಿರಿ .ನಂತರ ಡಾ// ಹೇಮಲತಾ ಅವರು " ಭಾಯಿ ಭಾಯಿ "ಚಿತ್ರದ "ಹೇ ವಿಲ್ ಮುಜೆ ಬತಾದೆ "ಹಾಡಿಗೆ ಹಾಡುಗಾರರ ಕರೆಯ ಮೇರೆಗೆ       ವೇಧಿಕೆಗೆ ಬಂದ ಕೆಲವರು ಹೆಜ್ಜೆ ಹಾಕಿ ನಲಿದರು. ವೇದಿಕೆ ಮೇಲೆ ಹೆಜ್ಜೆ ಹಾಕಿದ ಡಾ // ಕುಶಾಲಪ್ಪ  ಅವರು ಕು. ರಾಧಿಕಾ ವಿಶ್ವೇಶ್ವರ ಅವರೊಂದಿಗೆ "ಪಿಯ ಬೋಲೆ ಪಿಯ ಬೋಲೆ " ಹಾಡನ್ನು ಮಧುರವಾಗಿ ಹಾಡಿದರು.ಉತ್ತಮ ಸಂಯೋಜಿತ ಗಾಯನ ಹಾಗು ಕು. ರಾಧಿಕ ವಿಶ್ವೇಶ್ವರ ಶ್ರೇಯಾ ಘೋಶಾಲ್ ಳಂತೆ ಸ್ವರ ನೀಡಿದ್ದು  ವಿಶೇಷವಾಗಿತ್ತು. "ಚಿನ್ನ ಚಿನ್ನ ಆಸೈ" ಹಾಡಿನೊಂದಿಗೆ ಬಂದ ಡಾ // ಸ್ನೇಹಶ್ರೀ ರೋಜ ಚಿತ್ರದ ನೆನಪನ್ನು ಮೂಡಿಸಿದರು ಏ.ಆರ್.ರೆಹಮಾನ್ ಸಂಗೀತ  ವಿರುವ ಹಾಡನ್ನು ಅಮೋಘವಾಗಿ ಹಾಡಿ ಮಿಂಚಿದರು. ಇನ್ನೊಂದು  ವಿಶೇಷ ಈ ಡಾಕ್ಟ್ರು ನೋಡೋಕೆ "ಕವಿತಾ ಕೃಷ್ಣ ಮೂರ್ತಿ " ತರಾ ಹಾಡೋದು ಲತಾ ಮಂಗೇಶ್ಕರ್ ತರಾ ಅಂತಾ ಹೋದ ವರ್ಷ ಅಲ್ತಾಫ್ ನಿರೂಪಣೆ ಮಾಡಿದ್ದ ಮಾತುಗಳು ನೆನಪಿಗೆ ಬಂದವು.ಇಷ್ಟೆಲ್ಲಾ ಆದ್ಮೇಲೆ ಮತ್ತೊಬ್ಬ ಗಾಯಕ ಡಾ // ಗಣೇಶ್ ರಾವ್ ಅವರ ಸ್ವರವನ್ನು ನೆನೆಯಲೇ ಬೇಕು ಪಾದರಸದಂತ ಇವರು ಬಹುಮುಖ ಪ್ರತಿಭೆ ನಿರೂಪಣೆ ಜೊತೆಗೆ ಹಾಡು ಹಾಡಿದರು ಇವರು ಹಾಡಿದ " ತುಂ  ದಿಲ್ ಕಿ ಧಡಕನ್ ಮೇ " ಹಾಡನ್ನು ಹಾಡುತ್ತಿದ್ದರೆ ಅಭಿಜಿತ್ ಕಣ್ಣ ಮುಂದೆ ಬರುತ್ತಾರೆ. ಹಾಡು ಸೊಗಸಾಗಿ ಮೂಡಿಬಂತು.ಈ ಕಾರ್ಯಕ್ರಮದ  ಮದ್ಯದಲ್ಲಿ  ವೈಧ್ಯರ ಹಾಡು ಕೇಳಲು ಚಿತ್ರ ನಟಿ ಸುಮಲತಾ ಅಂಬರೀಶ್ .ಆಗಮನ ವಾಗಿ ಸಂಚಲನ ಮೂಡಿಸಿತ್ತು.ಬಹಳ ಕಾಲ ಹಾಡುಗಳನ್ನು ಕೇಳಿದ ಸುಮಲತಾ ತುಂಬಾ ಖುಷಿಯಾಗಿ ತಾವು ಹಾಡಲು ಮುಂದಾದದ್ದು ವಿಶೇಷ.ನನಗೆ ಗೊತ್ತಿದಂತೆ ಚಿತ್ರ ನಟಿಯರು ಉತ್ತಮವಾಗಿ ಹಾಡುವುದು ಅಪರೂಪ ಆದ್ರೆ ಸುಮಲತಾ ಮೈಕ್ ಹಿಡಿದು  ಲತಾ ಹಾಡಿರುವ " ಅಜೀಬ್ ದಾಸುತಾಹು ಮೇ ,ಕಹಾ ಶುರು  ಕಹಾ ಖತಂ " ಅಂತಾ ಹಾಡಲು ಶುರು ಮಾಡಿದರೂ   ನೋಡಿ       ಪಕ್ಕ ದಲ್ಲಿದ್ದವರು ರೀ ಆಶ್ಚರ್ಯ ಆಲ್ವಾ ಈಕೆ  ತುಂಬಾ ಚೆನ್ನಾಗಿ ಹಾಡ್ತಾರೆ ಕಣ್ರೀ ಅನ್ನುತ್ತಾ ಚಪ್ಪಾಳೆ ತಟ್ಟಿದರು. ಹೌದ್ರೀ ಇವ್ರುಗಳು  ಹಾಡ್ತಾ ಹಾಡ್ತಾ ಸಮಯ ಕಳೆದದ್ದೇ ಗೊತಾಗ್ಲಿಲ್ಲಾ ಹಾಡುಗಳ ರಸದೌತಣದ ಮಧ್ಯೆ ಹಾಯಾಗಿ ಪುಸ್ತಕ ಓದುವ  ಒಬ್ಬರು  ಪುಸ್ತಕ ಓದುತ್ತಾ ಸಂಗೀತ ಕೇಳಿದ್ದು ವಿಚಿತ್ರವಾಗಿತ್ತು. ಹಾಗು ನನ್ನ ಕ್ಯಾಮರಾ ಕಣ್ಣಿಗೆ ಸೆರೆಯಾಗಿ ನೋಡಿ ಇಲ್ಲಿ ಸಿಕ್ಕಿಬಿದ್ದಿದ್ದಾರೆ. ಮುಂದಿನ ಬಾರಿ ನಮ್ಮ ಊರಿನ ವೈಧ್ಯರ "ಗೀತ್ ಗಾತಾ ಚಲ್ " ಕಾರ್ಯ ಕ್ರಮಕ್ಕೆ ನೀವೂ ಬನ್ನಿಜೊತೆಯಾಗಿ ಖುಷಿ ಹಂಚಿಕೊಳ್ಳೋಣ !!! ಆಲ್ವಾ?? .ಮುಂದಿನ ಸಂಚಿಕೆಯಲ್ಲಿ ಮತ್ತೆ ಕಾಡಿಗೆ ಮರಳೋಣ.ಓ.ಕೆ.ನಾ ಬಾಯ್

29 comments:

ಸಾಗರದಾಚೆಯ ಇಂಚರ said...

wow great sir
tumbaa sundara photogalannu sere hididu namge unabadisiddiraa

khushi ayitu

ಮಂಜುಳಾದೇವಿ said...

’ಮೈಸೂರಿನಲ್ಲಿ ವೈದ್ಯರ ಕಲರವ ’- ಕೇಳಲೇ ಅಚ್ಚರಿ ಎನ್ನಿಸಿತು. ವೃತ್ತಿ ಯಾವುದಾದರೇನು ಪ್ರವೃತ್ತಿ ಮನಸ್ಸಿಗೆ ಮುದ ನೀಡಬಲ್ಲುದು.ನಿಮ್ಮ ನಿರೂಪಣೆ ಮತ್ತು ಛಾಯಾ ಚಿತ್ರಗಳು ಚೆನ್ನಾಗಿ ಮೂಡಿಬಂದಿದೆ.

-ವಿನ್ಯಾಸ(ಮಂಜುಳಾ ದೇವಿ)

Anonymous said...

Nice post Balu. However, I did not see my picture

Thanks Balu.

Sunny

ಸುಬ್ರಮಣ್ಯ said...

ತುಂಬಾ ಚನ್ನಾದ ಲೇಖನ ಬಾಲು ಅಣ್ಣ.

Dr.D.T.Krishna Murthy. said...

Balu sir;excellent article and very nice photos.How I wish I was there on the stage singing old hindi and kannada hits!

ಚುಕ್ಕಿಚಿತ್ತಾರ said...

sundara lekhana.

aneka haadugaararannu parichayisiddeeri.

thanks

ಅನಂತ್ ರಾಜ್ said...

’ಮೈಸೂರಿನಲ್ಲಿ ವೈದ್ಯರ ಕಲರವ ’- ಮನ ತು೦ಬಿಸಿತು. ಉತ್ತಮ ಚಿತ್ರಗಳು ಮತ್ತು ಚಿತ್ರ ಲೇಖನ.

ಶುಭಶಯಗಳು
ಅನ೦ತ್

Shashi jois said...

ಮೈಸೂರಿನಲ್ಲಿ ವೈದ್ಯರ ಕಲರವ ಕೇಳಿ ಖುಷಿ ಆಯ್ತು..ಚಿತ್ರದೊಟ್ಟಿಗೆ ನಿಮ್ಮ ನಿರೂಪಣೆ ಸೊಗಸಾಗಿದೆ ಸರ್..

balasubramanya said...

@ ಸಾಗರದಾಚೆಉಅ ಇಂಚರ. ಗುರುಮೂರ್ತಿ ಸರ್ ನಿಮ್ಮ ಅನಿಸಿಕೆಗೆ ಥ್ಯಾಂಕ್ಸ್.

balasubramanya said...

@ಮಂಜುಳಾದೇವಿ., ಹೌದು ಮೇಡಂ ಯಾವ ವೃತ್ತಿ ಯಾದರೇನು ಪ್ರವೃತ್ತಿ ಮನಸ್ಸಿಗೆ ಮುದ ನೀಡಬಲ್ಲದು.ಒಳ್ಳೆಯ ಮಾತಿಗಾಗಿ ನಿಮಗೆ ಥ್ಯಾಂಕ್ಸ್.

balasubramanya said...

@ ಸುನಿಲ್ ನಿನ್ನ ಫೋಟೋ ಹಾಕಿದ್ದೀನಿ ನೋಡು .ಪ್ರತಿಕ್ರಿಯೆಗೆ ವಂದನೆಗಳು.

balasubramanya said...

@ಸುಬ್ರಮಣ್ಯ ಮಾಚಿಕೊಪ್ಪ , ಏನ್ ಸಾರ್ ತುಂಬಾ ದಿನ ಆಯ್ತು ನಿಮ್ಮ ದರ್ಶನ ಆಗಿರಲಿಲ್ಲ.ನನ್ನನ್ನು ಪ್ರೀತಿಯಿಂದ ಬಾಲು ಅಣ್ಣ ಎಂದು ಕರೆದು ಲೇಖನಕ್ಕೆ ಶಭಾಶ್ ಹೇಳಿದ್ದೀರ , ವಂದನೆಗಳು.

balasubramanya said...

@ ಡಿ.ಟಿ.ಕೆ. ಮೂರ್ತಿ ಸರ್ ನೀವು ಮೈಸೂರಿಗೆ ಬಂದು ನೆಲೆಸಿದಾಗ ಖಂಡಿತಾ ನಿಮಗೂ ಇಂತಹ ಅವಕಾಶ ದೊರೆಯುತ್ತದೆ. ನಿಮ್ಮ ಕಾಂಪ್ಲಿಮೆಂಟ್ ತಲುಪಿದೆ ಧನ್ಯವಾದಗಳು.

balasubramanya said...

@ ಚುಕ್ಕಿ ಚಿತ್ತಾರದ ವಿಜಯ ಶ್ರೀ ಮೇಡಂ ನೀವು ಲೇಖನ ಮೆಚ್ಚಿ ಪ್ರತಿಕ್ರಿಯೆ ನೀಡಿದ್ದಕ್ಕೆ ವಂದನೆಗಳು.

balasubramanya said...

@ ಅನಂತರಾಜ್ , ಸರ್ ನಿಮ್ಮ ಪ್ರೋತ್ಸಾಹದ ನುಡಿಗಳಿಗೆ ನನ್ನ ಸಲಾಂ.

balasubramanya said...

@ಶಶಿ ಜೋಯಿಸ್ , ಮೇಡಂ ನಿಮ್ಮ ಮೆಚ್ಚುಗೆಯ ಮಾತುಗಳಿಗೆ ಥ್ಯಾಂಕ್ಸ್.

Ittigecement said...

ಬಾಲೂ ಸರ್...

ಹೊಟ್ಟೆ ಉರಿಸಿ ಬಿಟ್ರಿ ಮಾರಾಯರೆ..

ಮುಂದಿನ ಸಾರಿ ನಾವೂ ಬರುತ್ತೇವೆ...

ಕಾರ್ಯಕ್ರಮಕ್ಕೆ ನಾವೂ ಹೋದಂತಿತ್ತು ನಿಮ್ಮ ಸಚಿತ್ರ ವರದಿ ಮತ್ತು ವಿವರಣೆ...

ಈ ಡಾಕ್ಟರುಗಳೆಲ್ಲರೂ ಯಾಕೆ ಇಷ್ಟು ಚೆನ್ನಾಗಿ ಹಾಡುತ್ತಾರೆ ಅಂತ ಕುತೂಹಲ ನನ್ನಲ್ಲಿದೆ...

ನಮ್ಮೆಲ್ಲರ ಮೆಚ್ಚಿನ ಡಾಕ್ತ್ರೂ ಕೂಡ ಉತ್ತಮ ಗಾಯಕರು ಅನ್ನುವದು ನೆನಪಾಯಿತು...

ಜೈ ಹೋ... ಬಾಲೂ ಸರ್ !!

balasubramanya said...

ಪ್ರಕಾಶಣ್ಣ ನಿಮಗೆ ಹೊಟ್ಟೆ ಉರಿದದ್ದಕ್ಕೆ ವಿಷಾದಿಸುತ್ತೇನೆ.ಮುಂದಿನ ಸಾರಿ ನೀವು ಬರಲೇಬೇಕು [ಇಂತಹ ಮತ್ತೊಂದು ಕಾರ್ಯಕ್ರಮ 05 ನೆ ಜನವರಿ 2011 ರಂದು ಮೈಸೂರಿನಲ್ಲಿದೆ.] ನಿಮ್ಮ ಪ್ರೀತಿಯ ಮಾತುಗಳಿಗೆ ಥ್ಯಾಂಕ್ಸ್. ನನಗೂ ಅಚ್ಚರಿ ಈ ಡಾಕ್ಟರ ಗಳು ಯಾಕೆ ಇಷ್ಟು ಚೆನ್ನಾಗಿ ಹಾಡ್ತಾರೆ ಅಂತ !!! ನಮ್ಮ Dr.D.T.krishna Murthy. ಅವರೂ ಸಹ ಅಷ್ಟೇ. ಬಹುಷಃ ಪ್ರತಿನಿತ್ಯ ಆಸ್ಪತ್ರೆಗಳಲ್ಲಿ ಕಾಣುವ ರೋಗಿಗಳ ನೋವು ನಲಿವು ಇವರುಗಳಲ್ಲಿ ವಿವಿಧ ಭಾವನೆಗಳ ಹಾಡನ್ನು ಹೊಮ್ಮಿಸಬಹುದು. ಜೈ ಹೋ.

V.R.BHAT said...

ಓಹೊಹೋ ಬಾಲು ಸರ್, ಬಾಳಾ ಜೋರಾಗಿ ಬಿಟ್ರಿ ಬಿಡಿ, ಟಿ.ವಿಗಿಂತ ಜೋರಾದ ವರದಿ! ಫೋಟೊಗಳನ್ನು ನೋಡಿ ಮತ್ತು ಮೈಸೂರಿನ ವೈದ್ಯರುಗಳ ಬಗ್ಗೆ ತಿಳಿದು ಖುಷಿಯಾಯ್ತು.ಸುಂದರ ನಿರೂಪಣೆ ! ಮತ್ತಷ್ಟು ಬರುತ್ತಲೇ ಒರಲಿ.

balasubramanya said...

@ ವಿ.ಆರ್.ಭಟ್ ಸರ್ ನಿಮ್ಮ ಪ್ರೀತಿಯ ಮಾತುಗಳು ,ಪ್ರೋತ್ಸಾಹ ಹೀಗೆ ಇರಲಿ.ನಿಮ್ಮ ಸ್ನೇಹ ಪೂರ್ವಕ ಮಾತುಗಳಿಗೆ ಧನ್ಯ ನಾನು.

ಜಲನಯನ said...

ಬಾಲು ಕಣ್ಣಿಗೆ ಕಟ್ಟುವಂತಿದೆ ನಿಮ್ಮ ವಿವವರೆಣೆ...ಧನ್ಯವಾದ ..ಹೌದು ಒಮ್ಮೆ ಟಿ.ವಿ. ಕಾರ್ಯಕ್ರಮವೊಂದರಲ್ಲಿ ಅವರನ್ನ ಯಾರೋ ಕೇಳಿದ್ದು ನೆನಪಿದೆ...

balasubramanya said...

ಅಜಾದ್ ಸರ್ ನಿಮ್ಮ ಪ್ರೀತಿಯ ಮಾತುಗಳು ಹೃದಯಕ್ಕೆ ತಲುಪಿವೆ.ವಂದನೆಗಳು.

Deep said...

Channagi moodi bandide.. nimma lekhana nammannu "flash back" ge karedoitu:-)

Nenne innu naanu, mukesh, kishore hagu rafiyavara kelvalu collectiongalannu kondu tande..

Kadina Nenapina madhye banda break channagittu.

balasubramanya said...

@ದೀಪಕ್ ವಸ್ತಾರೆ , ಪ್ರೀತಿಯ ಮಾತುಗಳಿಗೆ ಥ್ಯಾಂಕ್ಸ್.

ಅಪ್ಪ-ಅಮ್ಮ(Appa-Amma) said...

ಬಾಲು ಅವರೇ,

ಕಾರ್ಯಕ್ರಮದಲ್ಲಿ ನಾವೇ ಭಾಗವಹಿಸಿದ ಅನುಭವವಾಯ್ತು ನಿಮ್ಮ ಲೇಖನ ಓದಿ. ಇಂತಹ ಬಿನ್ನ ಕಾರ್ಯಕ್ರಮದ ಬಗ್ಗೆ ತಿಳಿಸಿದ್ದಕ್ಕೆ ವಂದನೆಗಳು.

balasubramanya said...

@ ಅಪ್ಪಾ ಅಮ್ಮಾ , ನಿಮ್ಮ ಪ್ರೀತಿಯ ಮಾತುಗಳಿಗೆ ಕೃತಜ್ಞತೆಗಳು.

preeti prabhu said...

nanna haadannu mecchhi olleyadagi baredidakke tumba tumba thanks!!
preeti

balasubramanya said...

@ ಪ್ರೀತಿ ಪ್ರಭು , ಬ್ಲಾಗ್ ಗೆ ಭೇಟಿ ನೀಡಿದ ನಿಮಗೆ ಸ್ವಾಗತ. ನಿಮ್ಮ ಹಾಡುಗಳ ಲೋಕದಲ್ಲಿ ವಿಹರಿಸಿ ಬರೆದ ಈ ಲೇಖನ ಉತ್ತಮ ಪ್ರತಿಕ್ರಿಯೆಗಳಿಗೆ ಕಾರಣವಾಯ್ತು. ನಿಮ್ಮ ಪ್ರತಿಭೆ ಬೆಳೆಯಲಿ ಎಂದು ಶುಭ ಹಾರೈಸುತ್ತೇನೆ , ವಂದನೆಗಳು.

balasubramanya said...

@ ಸೀತಾರಾಂ ಸರ್ ಥ್ಯಾಂಕ್ಸ್.