ಹಸಿರು ಹೊದ್ದು ಮಲಗಿದ ಕಬಿನಿ ಹಿನ್ನೀರು |
ನನ್ನ ಹಾಡು ನನ್ನ ಪಾಡು |
ಇದು ನನ್ನ ಮನೆ |
ಹಿಂದಿನ ದಿನ ಹುಲಿಯ ದರ್ಶನ ಮಾಡಿದ ನಾವು ಮುಂಜಾನೆ ಎದ್ದು ಸಿದ್ದತೆ ನಡೆಸಿ ತಯಾರಾದೆವು.ಮುಂಜಾವಿನ ಕಾನನದ ತಂಗಾಳಿ ಮನಸ್ಸನ್ನುಉಲ್ಲಾಸ ಗೊಳಿಸಿ ಮುದ ನೀಡಿತು. ಹಾಗೆಯೇ " ಬಳ್ಳೆ" ಎಂಬ ಮಾಯಾ ಲೋಕದ ನೆನಪಿನಾಳಕ್ಕೆ ಜಾರಿದೆ. ಅಯ್ಯೋ ಕ್ಷಮಿಸಿ
ಒಮ್ಮೆ ನಿಲ್ಲಿ ಇಲ್ಲಿ ತಪಾಸಣೆಗಾಗಿ |
ನಿಮಗೆ " ಬಳ್ಳೆ" ಎಂಬ ಮಾಯಾಲೋಕ ಪರಿಚಯಿಸುತ್ತೇನೆ ಬನ್ನಿ .ಈ ಜಾಗ ಕಾಕನ ಕೋಟೆಯ ಕಾಡಿನ ಒಂದು ಮುಖ್ಯ ಆನೆ ಶಿಭಿರ.ಇಲ್ಲಿ ಒಂದು ಚೆಕ್ ಪೋಸ್ಟ್ ಇದ್ದು ಕರ್ನಾಟಕ -ಕೇರಳ ನಡುವೆ ಓಡಾಡುವ ವಾಹನಗಳನ್ನು ತಪಾಸಣೆ ಮಾಡುತ್ತಾರೆ. ಕರ್ನಾಟಕದ ಹೆಗ್ಗಡದೇವನ ಕೋಟೆ ಯಿಂದ ಕೇರಳ ರಾಜ್ಯದ ಮಾನಂದವಾಡಿ ಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ಚಲಿಸುವುದು ಒಂದು ಸವಾಲೇ ಸರಿ .ರಸ್ತೆಯಲ್ಲಿ ಹಳ್ಳ ಕೊಳ್ಳಗಳಿದ್ದು ವಾಹನಗಳ ಚಕ್ರಗಳ ಸಂಕಟ ಹೇಳ ತೀರದು.ಈ ಮಧ್ಯೆ ಎಲ್ಲಿಂದಲೋ ಇದ್ದಕ್ಕಿದಂತೆ
ಸಂತಸ ಅರಳುವ ಸಮಯ |
ಇದು ನಮ್ಮದೇ ರಾಜ್ಯ |
ಸ್ವಚ್ಚಂದ ವಿಹಾರ |
ಆನೆಗಳು ಹಳ್ಳಿಯಲ್ಲಿ ರಸ್ತೆಗೆ ಅಡ್ಡ ಬರುವ ಎಮ್ಮೆಗಳನ್ನು ನೆನಪಿಗೆ ತರುತ್ತವೆ. ವಾಹನ ಚಾಲನೆ ಮಾಡುವಾಗ ಇವುಗಳನ್ನು ನೆನಪಿನಲ್ಲಿ ಇಟ್ಟುಕೊಂಡೆ ಚಲಿಸಬೇಕಾಗುತ್ತದೆ.ನಾವುಗಳೂ ಸಹ ಇಲ್ಲಿಗೆ ಬರುವಾಗ ಹಲವಾರು ಬಾರಿ ಇಂತಹ ಸಂದರ್ಭ ಎದುರಿಸಿದ್ದೇವೆ .ಇನ್ನೂ ಒಂದು ತಮಾಷೆ ಅಂದ್ರೆ ಇಲ್ಲಿರುವ ಒಂದು ಕುಂಡಾ ಅಂತ ಕರೆಯುವ[ ಕುರುಡು ಆನೆ ಎಂದು ಹೇಳುತ್ತಾರೆ ] ಆನೆಯದು !!! ಇದು ರಸ್ತೆಯಲ್ಲಿ ಬರುವ ಲಾರಿಗಳನ್ನು ಅಡ್ಡ ಹಾಕಿ ಲಾರಿಯಲ್ಲಿ ಲೋಡ್ ಆಗಿರುವ ತಿನ್ನುವ ಪದಾರ್ಥ ಗಳನ್ನೂ ಸೊಂಡಿಲಿನಲ್ಲಿ ಹುಡುಕಿ ತಿಂದು ನಂತರ ಲಾರಿಯನ್ನು ಬಿಡುತ್ತದೆ .ಈ ಚಾಣಾಕ್ಷ ಆನೆಯ ಬಗ್ಗೆ ಇಲ್ಲಿ ಹಲವಾರು ಕಥೆಗಳು ಹರಿದಾಡಿವೆ. " ಬಳ್ಳೆ"ಕ್ಯಾಂಪ್ ಗೆ ನಾವು ಬಂದಾಗಲೆಲ್ಲ ನಮ್ಮನ್ನು ಎದುರುಗೊಂಡು ಸ್ವಾಗತ ನೀಡಲು ನಮ್ಮ ಗೆಳೆಯರೊಬ್ಬರು ಇರುತ್ತಾರೆ. ಅವರಿಗಾಗಿ ನಾವು ಪ್ರೀತಿಯಿಂದ ಕ್ಯಾರೆಟ್ ತೆಗೆದು ಕೊಂದು ಹೋಗಿರುತ್ತೇವೆ. ಎಲ್ಲಿರುತ್ತದೋ ಗೊತ್ತಿಲ್ಲ ನಾವು ಇಳಿದ ಕೂಡಲೇ ಓಡಿಬಂದು ಈ " ಜಿಂಕೆ " ನಿಲ್ಲುತ್ತದೆ
ಇಂತೀ ನಿಮ್ಮ ಪ್ರೀತಿಯ |
ನಿಮ್ಮ ಕ್ಯಾಮರಾಗೆ ನನ್ನದೊಂದು ಪೋಸು |
ನಾವು ನೀಡುವ ಕ್ಯಾರೆಟ್ ತಿಂದು ನಮ್ಮ ಕಾರಿನ ಅಕ್ಕ ಪಕ್ಕ ಸುಳಿದಾಡಿ ನಂತರ ಕಾಡಿಗೆ ದೌಡಾಯಿಸುತ್ತದೆ.ಇದು ಸುಮಾರು ಐದಾರು ವರ್ಷಗಳಿಂದ ನಡೆದುಕೊಂಡು ಬಂದ ಗೆಳೆತನ ವಾಗಿದೆ. ನಮ್ಮ ಕಣ್ಣುಗಳೂ ಸಹ ಅಲ್ಲಿಗೆ ಹೋದೊಡನೆ ಈ ಗೆಳೆಯನಿಗಾಗಿ ಹುಡುಕುತ್ತವೆ. ಇಲ್ಲೇ ಪಕ್ಕದಲ್ಲೇ ಇದೆ ಕಾಡಿನ ದೇವಿಯ ಒಂದು ದೇವಾಲಯ
ಕಾಡಿನ ತಾಯಿ ನಿನಗೆ ವಂದನೆ |
ಈ ದೇವರಿಗೆ ಇಲ್ಲಿನ ಪ್ರತಿಯೊಬ್ಬರೂ ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಹಾಗೆ ಸ್ವಲ್ಪ ಮುಂದೆ ಬಂದರೆ
ಕಾಡಿನ ಮಕ್ಕಳು ನಾವೆಲ್ಲಾ |
ನನ್ನ ಭವಿಷ್ಯ ಎಲ್ಲಿದೆ |
ಇಲ್ಲಿದೆ ಒಂದು ಗಿರಿಜನರ ಒಂದು ಹಾಡಿ.[ ಕಾಡಿನ ವಾಸಿಗಳು ವಾಸಿಸುವ ಗುಡಿಸಿಲುಗಳ ಗುಂಪು ] ಮಣ್ಣಿನ ಗೋಡೆ ಹಾಕಿದ ಬಿದುರಿನ ಗಳುಗಳ ಜೊತೆಗೆ ಜೊಂಡು ಹುಲ್ಲನ್ನು ಹೊದಿಸಿದ ಚಾವಣಿಯ ಈ ಪುಟ್ಟ ಗುಡಿಸಿಲಿನಲ್ಲಿ ವನ್ಯ ಜೀವಿಗಳ ಜೊತೆಯಲ್ಲಿ ಪ್ರತಿ ಕ್ಷಣಗಳನ್ನೂ ಕಳೆವ ಜೀವಿಗಳು. ನಾವು ಭೇಟಿ ನೀಡಿದಾಗ ಅಲ್ಲಿ ಆಟ ಆಡುತ್ತಿದ್ದ ಮಕ್ಕಳನ್ನು ನೋಡಿ ಮನಸು ಮರುಗಿತು. ಇವರೂ ಸಹ ನಮ್ಮ ದೇಶದ ಆಸ್ತಿ ಅಲ್ಲವೇ?? ಎನ್ನುವ ಪ್ರಶ್ನೆ ಮನದಲ್ಲಿ ಮೂಡಿಸಿತು. ಅರೆ ಇದೇನಿದು ಆನೆ ರಾಯರು
ನನಗೂ ಬೇಕು ಇಂತಹ ಆರೈಕೆ |
ವಿಶ್ರಾಂತಿಯ ಸಮಯ |
ನನ್ನ ಹೆಸರು ಅರ್ಜುನ |
ಇಲ್ಲಿ ವಿರಮಿಸಿದ್ದಾರೆ ದೂಳಿನ ಸ್ನಾನ ಅವರಿಗೆ ನಡೆಯುತ್ತಿದೆ !!! ಹೌದು ನೋಡ್ರೀ ಆನೆ ರಾಯರಿಗೆ ನೀರಿನ ಸ್ನಾನಕ್ಕೆ ಮೊದಲು ಮಣ್ಣಿನ ಧೂಳಿನ ಮಜ್ಜನ ಆಗಲೇ ಬೇಕೆಂದು ತಿಳಿಯಿತು.ಸುಮಾರು ಅರ್ಧ ಘಂಟೆ ನಡೆದ ಈ ಕೆಲಸದ ನಂತರ ಮಾವುತರು ಆನೆಯನ್ನು ಕಬಿನಿ ಹಿನ್ನೀರಿನ ಕಾಲುವೆಗೆ ಕರೆತರಲು ಸಿದ್ದವಾದರು. ನಾವು ಹೊರಟೆವು. ಅಗೋ ನೋಡಿ
ಗಜ ನಡಿಗೆ |
ಆನೆ ನಡೆದು ಬರುವ ನೋಟವನ್ನು ಆನೆಯ ಮೇಲೆ ಕುಳಿತ ಮಾವುತರು ಆನೆಯನ್ನು ಕರೆದುಕೊಂಡು ಬರುವ ಆ ದೃಶ್ಯ ''ಗಂಧದ ಗುಡಿಯ '' ಸನ್ನಿವೇಶಗಳನ್ನು ನೆನಪಿಸಿತು. ಬನ್ನಿ ಆನೆಯ ಜಳಕ ನೋಡೋಣ
ಈಗ ಸ್ನಾನದ ಸಮಯ |
ನೀರಿನಲ್ಲಿ ಮಲಗೋದು ಅಂದ್ರೆ ಖುಷಿ ಕಣ್ರೀ |
ಸರಿಯಾಗಿ ಕ್ಲೀನ್ ಮಾಡಪ್ಪ |
ಸ್ನಾನ ಆಯ್ತು ಒಂದು ಫೋಟೋ ಪ್ಲೀಸ್ |
ಅಬ್ಭ ಸುಮಾರು ಒಂದು ಘಂಟೆಗೂ ಹೆಚ್ಚು ಕಾಲ ಆನೆಯ ಮೈಯನ್ನು ಉಜ್ಜಿ ಧೂಳಿನಿಂದ ಕೊಳೆಯಾಗಿದ್ದ ಆನೆಯನ್ನು ಫಳ ಫಳ ಹೊಳೆಯುವಂತೆ ಮಾಡಿದ ಆ ಮಾವುತನ ಶ್ರಮಕ್ಕೆ ಜೈ ಹೋ ಎನ್ನದೆ ಇರಲಾಗಲಿಲ್ಲ. ಅಂದ ಹಾಗೆ ಈ ಆನೆ ಯಾವುದು ಗೊತ್ತ ??? ನಮ್ಮ ಮೈಸೂರಿನ ದಸರಾಕ್ಕೆ ಪ್ರತೀ ವರ್ಷ ಆಗಮಿಸುವ " ಅರ್ಜುನ " ಎಂಬ ಗಂಡಾನೆ. ತುಂಟ ಸ್ವಭಾವದವನಾದ ಇವನು ಆಗಾಗ ಎಡವಟ್ಟು ಮಾಡಿಕೊಳ್ಳುವುದು ಸಾಮಾನ್ಯ. ಅಂತಾ ಅಂದು ಕೊಳ್ಳುತಿದ್ದಂತೆ ವೇಣು ಬನ್ನಿ ಬನ್ನಿ ಡಿ.ಬಿ. ಕುಪ್ಪೆ ಗೆ ಹೋಗ್ಬೇಕು ಲೇಟಾಗುತ್ತೆ ಅಂದ್ರು . ಬರ್ತೀನಿ ಲೇಟಾಯ್ತು.ಮುಂದಿನ ಸಂಚಿಕೆಯಲ್ಲಿ ...ಅತ್ತ ಕೇರಳ ಇತ್ತ ಕರ್ನಾಟಕ !!!!
33 comments:
ಬಾಲು ಸರ್;'ಬಳ್ಳೆಯ ಒಳ್ಳೇ ದರ್ಶನ ಮಾಡಿಸಿದಿರಿ.ಅನಂತ ಧನ್ಯವಾದಗಳು.
olle darshana namgoo koodaa\thanks sir
ಇದು ನಿಜವಾಗಿಯೂ ಮಾಯಾಲೋಕ!
@ ಡಿ.ಟಿ.ಕೃಷ್ಣ ಮೂರ್ತಿ ಸರ್ ವಂದನೆಗಳು.
@ ಗುರು ಮೂರ್ತಿ ಸರ್ ನಿಮ್ಮ ಅನಿಸಿಕೆ ಗೆ ಥ್ಯಾಂಕ್ಸ್.
ಸುನಾತ್ ಸರ್ ನಿಮ್ಮ ಅನಿಸಿಕೆಗೆ ಥ್ಯಾಂಕ್ಸ್.
ಬಾಲು ಸರ್.
ಕುರುಡು ಆನೆ, ಆಹಾರಕ್ಕಾಗಿ ಬರುವ ಜಿಂಕೆ, ಬಳ್ಳೆ ಇತ್ಯಾದಿಗಳನ್ನೊಳಗೊಂಡ ಲೇಖನ ಕಾಡಿನ ದರ್ಶನವನ್ನು ಮಾಡಿಸುತ್ತದೆ. ಇದು ನಿಜಕ್ಕೂ ಮಾಯಾಲೋಕವೇ ಸರಿ.
ಬಾಲು ಸರ್, ಬಳ್ಳೆ ಕಾನನದ ದೃಶ್ಯಗಳು ಮತ್ತು ಅಲ್ಲಿನ ಜನಜೀವನ, ಪ್ರಾಣಿಸಂಕುಲದ ಬಗ್ಗೆ ಚಿತ್ರ ಬರಹ ಚೆನ್ನಾಗಿತ್ತು. ನಮಗೂ ಕಾಡಿನಲ್ಲಿ ಅಲೆದ ಸಂತಸವಾಯಿತು.
ಧನ್ಯವಾದಗಳು.
ಮಾಯಾಲೋಕ ಚನ್ನಾಗಿದೆ..! ಫೋಟೋಗಳು ಚನ್ನಾಗಿ ಮೂಡಿವೆ..
ಶಿವೂ ನಿಮ್ಮ ಅನಿಸಿಕೆ ತುಲುಪಿದೆ ವಂದನೆಗಳು.
ಚಂದ್ರು ಸರ್ ನಿಮ್ಮ ಅನಿಸಿಕೆ ಖುಶಿನೀಡಿದೆ.
@ಚುಕ್ಕಿ ಚಿತ್ತಾರ ನಿಮ್ಮ ಅನಿಸಿಕೆಗೆ ಧನ್ಯವಾದಗಳು.ಆಗಾಗ ಈ ಪುಟಕ್ಕೆ ಬರ್ತಾಯಿರಿ.
ಬಾಲುರವರೆ,
ಕಾನನದೊಳಗೆ ನಮ್ಮನ್ನು ಕರೆದೊಯ್ದು ಅಲ್ಲಿಯ ಪ್ರಾಣಿ ಸ೦ಕುಲವನ್ನು ದರುಶನ ಮಾಡಿಸಿದ್ದಕ್ಕಾಗಿ ಧನ್ಯವಾದಗಳು.
ಪ್ರಭಾಮಣಿ ನಾಗರಾಜ್ ಮೇಡಂ ನಿಮ್ಮ ಅನಿಸಿಕೆ ತಲುಪಿದೆ ಥ್ಯಾಂಕ್ಸ್.
ನಿಮ್ಮ ಈ ಸಚಿತ್ರ ಬರಹ ಖುಷಿ ನೀಡಿತು. ಧನ್ಯವಾದಗಳು.
ಮಂಜುಳಾ ದೇವಿ ಮೇಡಂ ನನ್ನ ಬ್ಲಾಗಿಗೆ ಸ್ವಾಗತ . ನಿಮ್ಮ ಅನಿಸಿಕೆಗೆ ಧನ್ಯವಾದಗಳು . ನಿಮ್ಮ ಭೇಟಿ ಆಗಾಗ ಆಗುತ್ತಿರಲಿ.
Sogasagide.. Arjuna haagu Kurudu aneya.. darshana galu...
Munde.. Masale bettavo???
Kayutteve...
ಲೇಖನ ಚೆನ್ನಾಗಿದೆ, ಚಿತ್ರಗಳು ಕಣ್ಣಿಗೆ ಮುದನೀಡಿದವು, ಧನ್ಯವಾದ ಸರ್, ತಮ್ಮ ಪ್ರಯತ್ನ ಅಮೋಘ!
ಬಾಲು ಅವರೇ,
ಮಾಯಾಲೋಕದ ಸುಂದರ ವಿವರಣೆಗೆ ವಂದನೆಗಳು.
ದೀಪು ಸರ್ ನಿಮ್ಮ ಅನಿಸಿಕೆಗೆ ಥ್ಯಾಂಕ್ಸ್. ಮುಂದೆ ನೀವು ಜೋತೆಯಲ್ಲಿ ಇದ್ದರೆ ಬರುತ್ತದೆ ಡಿ.ಬಿ.ಕುಪ್ಪೆ, ಮಸಾಲೆ ಬೆಟ್ಟ , ಕುದುರೆ ಸತ್ತ ಹಳ್ಳ ಇತ್ಯಾದಿ.
ವಿ. ಆರ್ .ಭಟ್ ಸರ್ ನಿಮ್ಮ ಪ್ರೀತಿಯ ಅನಿಸಿಕೆಗೆ ವಂದನೆಗಳು.
ಅಪ್ಪ ಅಮ್ಮ ರವರೆ ನಿಮ್ಮ ಪ್ರೀತಿಯ ಮಾತುಗಳು ತಲುಪಿವೆ. ನಿಮ್ಮಪ್ರೋತ್ಸಾಹ ಹೀಗೆ ಇರಲಿ. ಮುಂದಿನ ಸಂಚಿಕೆಗಳ ಬಗ್ಗೆಯೂ ನಿಮ್ಮ ಪ್ರೀತಿಯ ಭೇಟಿ ಸಾಗುತ್ತಿರಲಿ , ನಿಮಗೆ ವಂದನೆಗಳು.
ಪ್ರವಾಸ ಕಥನ ಚೆನ್ನಾಗಿದೆ. ನಿಸರ್ಗಕ್ಕೆ ಅದರದ್ದೆ ಸೌಂದರ್ಯವಿದೆ. ಅದನ್ನು ಎಷ್ಟು ವರ್ಣಿಸಿದರೂ ಸಾಲದು
ದೀಪಸ್ಮಿತ ನಿಮ್ಮ ಪ್ರೀತಿಯ ಅನಿಸಿಕೆಗೆ ಥ್ಯಾಂಕ್ಸ್.ನಿಮ್ಮ ಭೇಟಿ ಮುಂದುವರೆಯಲಿ .
nice pictures and nice write up. ur love towards nature is great. is there any surgical assistance to blind elephents by Govt.,?
thanks for visiting my new blog.
ಬದರಿನಾಥ್ ಪಲವಲ್ಲಿ ಸರ್ ನಿಮ್ಮ ಪ್ರೀತಿ ಪೂರ್ವಕ ಅನಿಸಿಕೆ ತಲುಪಿದೆ. ಕುರುಡು ಕಾಡಾನೆಗಳ ಬಗ್ಗೆ ನೀವು ಹೇಳಿದ ಯೋಜನೆ ಇರಲಾರದು ಅನ್ಸುತ್ತೆ. ಕಾಡಿನ ಪ್ರಾಣಿಗಳು ಕಾಡಿನ ಒಳಗೆ ಏನೇ ಒಳ್ಳೆಯದು /ಕೆಟ್ಟದ್ದು ಆದರೂ ಅಲ್ಲೇ ಅನುಭವಿಸಬೇಕು ಅದಕ್ಕೆ ಮಾನವರ ಪ್ರವೇಶವನ್ನು ನಿರಾಕರಿಸುತ್ತವೆ.ಒಂದು ಪ್ರಾಣಿ ಸತ್ತರೆ ಇನ್ನೊಂದು ಪ್ರಾಣಿಗೆ ಆಹಾರ ಎನ್ನುವ ನಿಯಮ ಅವುಗಳದು. ನಿಮ್ಮ ಅಭಿಪ್ರಾಯ ಚೆನ್ನಾಗಿದೆ.
Tumba chennagide photo mattu vivarane.
ಬಾಲು ಸರ್,
ನಿಮ್ಮ ಕಾಡಿನ ಲೇಖನ ಹಾಗು ಫೋಟೋ ಕೂಡ ಸುಂದರವಾಗಿದೆ.ಮಾಯಾಲೋಕಕ್ಕೆ ಕರೆದು ಕೊಂಡು .ಹೋಗಿದ್ದಕ್ಕೆ ಧನ್ಯವಾದಗಳು
@ಶಶಿ ಜೋಯಿಸ್ ರವರೆ ನನ್ನ ಬ್ಲಾಗಿಗೆ ಸ್ವಾಗತ . ನಿಮ್ಮ ಅನಿಸಿಕೆಗೆ ಥ್ಯಾಂಕ್ಸ್. ನಿಮ್ಮ ಭೇಟಿ ಮುಂದುವರೆಸಿ.
@ಕವಿತಾ , ನಿಮ್ಮ ಅನಿಸಿಕೆಗೆ ಥ್ಯಾಂಕ್ಸ್.ನನ್ನ ಹಿಂದಿನ ಕಾಮೆಂಟಿನಲ್ಲಿ ನಿಮ್ಮ ಅನ್ನುವ ಬದಲಾಗಿ ನಿನ್ನ ಎಂದು ತಪ್ಪಾಗಿ ಬರೆದಿದ್ದೆ .ಅದಕ್ಕಾಗಿ ವಿಷಾದಿಸುತ್ತೇನೆ .ನಿಮ್ಮ ಭೇಟಿ ಮುಂದುವರೆಯಲಿ ಅನಿಸಿಕೆಗಳು ಹರಿದುಬರಲಿ.
chitragalu adbhutavaagive jotege rochaka vivarane.
@ ಸೀತಾರಾಂ ಸರ್, ನಿಮ್ಮ ಅನಿಸಿಕೆಗಳಿಗೆ ಜೈಹೋ .
Post a Comment