Thursday, October 28, 2010

ಕನ್ನಡ ಹಬ್ಬ ಬಂದಿದೆ ನೋಡಾ !! ಕನ್ನಡ ಮನವು ನಲಿದು ಹಾಡಿದೆ ಹಾಡ !!!

ಕನ್ನಡ ನಾಡಿನ ಪ್ರತೀ ಕಾನನದಲ್ಲಿಯೂ ಪ್ರಕೃತಿ ಕನ್ನಡ ಕಂಪನ್ನು ಬೀರಿ ವನ ಸಿರಿಯ ಮೂಲೆಮೂಲೆಗಳಲ್ಲಿ ವನ್ಯ ಜೀವಿಗಳು ನಲಿದಿರಲು , ಕಣ್ಣಾರೆ ಕಂಡ ನನ್ನ ಜೀವನ ಪಾವನ ವಾಗಿದೆ."ಉದಯವಾಗಲಿ  ನಮ್ಮ  ಚೆಲುವಕನ್ನಡ ನಾಡು"  ಎಂದು  ಪಿ .ಕಾಳಿಂಗರಾಯರು  ಹಾಡಿದ  ಗೀತೆ  ಚಿಕ್ಕಂದಿನಲ್ಲಿ ಕೇಳುತ್ತಾ ಬೆಳೆದವನು  ನಾನು. ಕನ್ನಡದ ಕವಿಗಳ ಕವಿತೆಗಳು , ಕನ್ನಡ ಲೇಖಕರ ಕಥೆಗಳು  ,ಕನ್ನಡ ಸಂಸ್ಕೃತಿ , ಕನ್ನಡ ಭಾಷೆ ,ಕನ್ನಡ ಮಣ್ಣಿನ ಅನ್ನ, ನೀರು , ಕನ್ನಡ ನಾಡಿನ ಕಾನನ   ಕನ್ನಡ ಮಾತು ಇವೆಲ್ಲವೂ ನನ್ನನ್ನುಹೆಮ್ಮೆಯ  ಕನ್ನಡಿಗನನ್ನಾಗಿ ಮಾಡಿವೆ .ಇದು ನನ್ನ ಹೃದಯದಿಂದ ಬಂದ ಮಾತುಗಳು.ಕನ್ನಡ ಹಬ್ಬ ಬರುತ್ತದೆ  ಹೋಗುತ್ತದೆ  ಕನ್ನಡ ಮಾತಿಗೆ ನಲಿವ ನನ್ನ  ನಾಲಿಗೆ ನಿರಂತರ ಉಳಿಯುತ್ತದೆ.ನನ್ನ ಕನಸಿನಲ್ಲಿ ರಂಗನ್ನು ನೀಡುವ ಭಾಷೆ ನನ್ನ ಮುದ್ದಿನ ಕನ್ನಡ ಭಾಷೆ.ನನ್ನ ತಾಯಿ ನನಗೆ  ಕಲಿಸಿದ ಮಾತೃ ಹೃದಯದ  ಭಾಷೆ ಕನ್ನಡ ಭಾಷೆ, ಇವುಗಳಿಂದ ನಾನು ಕನ್ನಡಿಗ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆಯಿದೆ. ಎಂದು ಒಂದು ಸಮಾರಂಭದಲ್ಲಿ  ಕನ್ನಡ ದಲ್ಲಿ ಭಾಷಣ ಬಿಗಿಯುತ್ತಿದ್ದೆ ನೆರೆದಿದ್ದ  ಜೋರಾಗಿ ಚಪ್ಪಾಳೆ  ಹೊಡೆಯುತ್ತಿದ್ದರು . ಇನ್ನೇನು ನನಗೆ ಸನ್ಮಾನ ವಾಗಬೇಕು ಎನ್ನುವ ಸಮಯದಲ್ಲಿ ನನ್ನ ಪತ್ನಿ ರೀ ಎದ್ದೇಳಿ ಒಳ್ಳೆ ಮದ್ಯಾಹ್ನ ಮಲಗಿದ್ದೀರಲ್ಲಾ ಊಟ ಮಾಡಲ್ವಾ !! ಅಂತ ಎಬ್ಬಿಸಿ ನನಗೆ ಕನಸಿನಲ್ಲಿ  ನಡೆಯುತ್ತಿದ್ದ ಸನ್ಮಾನಕ್ಕೂ ಕಲ್ಲು ಹಾಕಿದಳು.ಎಂತಹ ಒಳ್ಳೆಯ ಕನಸು ಸ್ವಾಮೀ ಎಲ್ಲಾ ಹಾಳು ಮಾಡಿಬಿಟ್ಟಳೂ ಅಂತಾ ಮನದಲ್ಲಿ ಹೆಂಡತಿಯನ್ನು ಶಪಿಸಿಕೊಂಡು ಕ್ಯಾಲೆಂಡರ್ ನೋಡಿದ್ರೆ ಇನ್ನು ನಾಲ್ಕೇ ದಿನಕ್ಕೆ ನಮ್ಮ ನೆಚ್ಚಿನ ಕನ್ನಡ ಹಬ್ಬ ಬರುತ್ತಿದೆ. ಇದು ಎಷ್ಟನೆಯ ರಾಜ್ಯೋತ್ಸವ ಎಂಬ ಬಗ್ಗೆ ತಲೆಕೆಡಿಸಿಕೊಂಡು ಆಹ್ವಾನ ಪತ್ರಿಕೆ ಪ್ರಿಂಟ್ ಮಾಡಿಸಲು ಕೆಲವು  ಜನ ಒದ್ದಾಡುತ್ತಿದ್ದಾರೆ . ಅರೆ ಇದೇನು ??ಕನ್ನಡ  ರಾಜ್ಯೋತ್ಸವ ಬಂದೆ ಬಿಟ್ಟಿದೆ ಹೌದು ರೀ ಮರ್ತೆ ಬಿಟ್ಟಿದ್ದೆ ನಾನು!!! ನನ್ನ ಬ್ಲಾಗಿನ ಮಿತ್ರರಿಗೆ ಕನ್ನಡ ಹಬ್ಬದ ಶುಭಾಶಯಗಳನ್ನು ಈ ಕೆಳಗಿನ ನನ್ನ ಇಷ್ಟದ ವೀಡಿಯೊ ಮೂಲಕ ಅರ್ಪಿಸುತ್ತಿದ್ದೇನೆ. ಬ್ಲಾಗ್ ಮಿತ್ರರೇ ದಯಮಾಡಿ ಸ್ವೀಕರಿಸಿ . ತನು ಕನ್ನಡ ಮನ ಕನ್ನಡ ವಾಗಿ ಕನ್ನಡ ಕೀರ್ತಿ ಪತಾಕೆ ಹಾರಿಸಿ ಅನುದಿನವೂ ಕನ್ನಡಿಗರಾಗಿ ಬಾಳೋಣ. ಕನ್ನಡ ತಾಯಿಯ ಮಡಿಲಲ್ಲಿ ಎಷ್ಟೊಂದು ಪಡೆದ ನಾವು ಕನ್ನಡ ಭಾಷೆ ಮರೆತು , ನೆಲ ಮರೆತು ನಮ್ಮ ನೆಲದ ಸಂಸ್ಕೃತಿಯನ್ನು ಹಾಳು ಮಾಡುವುದು  ಉತ್ತಮ ಕನ್ನಡಿಗರ ಲಕ್ಷಣವಲ್ಲ.ಕನ್ನಡ ಸವಿ  ಭಾಷೆ ಮನದಲ್ಲಿ ಎಂದೆಂದೂ ಉಳಿಯಲಿ ನಮ್ಮ ನಾಲಿಗೆ ಮೇಲೆ ನಲಿಯಲಿ. ಇಲ್ಲಿ ಪ್ರಕಟಿಸಿರುವ ವೀಡಿಯೊ ಗಳು ನನಗೆ ತುಂಬಾ ಇಷ್ಟವಾದವು ಬಹುಷಃ ನಿಮಗೂ ಇಷ್ಟವಾಗುತ್ತವೆ. ಹೆಚ್ಚು ಪ್ರಚಾರವಿಲ್ಲದ ಈ ವೀಡಿಯೊ ಗಳು ಬಹಳ ಸುಂದರವಾಗಿ ಚಿತ್ರೀಕರಣ ಗೊಂಡು ಕರ್ನಾಟಕದ ಸೌಂದರ್ಯವನ್ನು ಉಣಬಡಿಸಿವೆ ಬನ್ನಿ ನೋಡಿ ನಲಿದು ಕನ್ನಡ ಹಬ್ಬದ ಸಂತಸ ಸವಿದು ನಿಜದ ಕನ್ನಡಿಗರಾಗೋಣ ಬನ್ನಿ.ಕನ್ನಡ ತಾಯಿಗೆ ನಮಿಸುತ್ತಾ ತಮ್ಮೆಲ್ಲರಿಗೂ ಮತ್ತೊಮ್ಮೆ ಕನ್ನಡ ರಾಜ್ಯೋತ್ಸವದ ಶುಭಾಶಗಳನ್ನು ಅರ್ಪಿಸಲು ಸಂತಸ ಪಡುತ್ತೇನೆ.ನಿಮ್ಮೆಲ್ಲರಿಗೂ ಕನ್ನಡ ಹಬ್ಬದ ಶುಭಾಶಯಗಳು.                                                                                                                                          

18 comments:

ಮನದಾಳದಿಂದ............ said...

ಬಾಲು ಸರ್,
ನಿಮಗೂ ಕನ್ನಡ ರಾಜ್ಯೊತ್ಸವದ ಶುಭಾಶಯಗಳು.
ಕನ್ನಡ ರಾಜೋತ್ಸವ ಕೇವಲ ಆಚರಣೆಯಾಗಿರುವ ಇಂದಿನ ಸಂದರ್ಭದಲ್ಲಿ ನಿಮ್ಮ ಕನ್ನಡ ಪ್ರೇಮ ಮೆಚ್ಚುವಂತದ್ದು. ವೀಡಿಯೊಗಳು ತುಂಬಾ ಇಷ್ಟವಾದವು.
ಧನ್ಯವಾದಗಳು.

Dr.D.T.Krishna Murthy. said...

ಬಾಲೂ ಸರ್;ನಿಮ್ಮ ಕನ್ನಡ ಅಭಿಮಾನಕ್ಕೆ ಜಯವಾಗಲಿ.ಅದ್ಭುತ ವಿಡಿಯೋಗಳು.ತುಂಬಾ ಸಂತೋಷವಾಯಿತು.ಪ್ರೀತಿಯಿಂದ,ಅಭಿಮಾನದಿಂದ ನಿಮ್ಮನ್ನೊಮ್ಮೆ 'ಬಾಲಣ್ಣ'ಎಂದು ಬಿಡುತ್ತೇನೆ.ನಮ್ಮೆಲ್ಲರ ಕನ್ನಡಾಭಿಮಾನ ಮತ್ತಷ್ಟು ಜಾಗೃತ ಗೊಳ್ಳಲಿ.ಜೈ ಕರ್ನಾಟಕ ಮಾತೇ.ಎಲ್ಲೆಡೆ ಮೊಳಗಲಿ ನಿನ್ನದೇ ಗೀತೆ.

Ittigecement said...

ಬಾಲು ಭಾಯ್...

ನಮ್ಮೆಲ್ಲರ ಧ್ವನಿಗೆ ನೀವು ಹಾಡಾಗಿದ್ದೀರಾ...

ಎಲ್ಲವೂ ತುಂಬಾ ಸೊಗಸಾಗಿದೆ...

ರಾಜ್ಯೋತ್ಸವದ ಸಂದರ್ಭದಲ್ಲಿ ಸಕಾಲಿಕವಾಗಿದೆ...
ಎಲ್ಲವೂ ಒಂದಕ್ಕಿಂತ ಒಂದು ಸೊಗಸು....

ಮತ್ತೆ ಕನ್ನಡ ಅಭಿಮಾನ ಜಾಗ್ರತವಾಯಿತು..

ಕನ್ನಡ ಪ್ರೀತಿ ಯಾವಾಗಲೂ ಇದ್ದೇ ಇರುತ್ತದೆ. ಆದರೂ..

ತುಂಬಾ ಖುಷಿ ಆಯಿತು...

ಜೈ ಕನ್ನಡಾಂಬೆ....

PARAANJAPE K.N. said...

ನಿಮಗೂ ಕನ್ನಡ ರಾಜ್ಯೋತ್ಸವದ ಶುಭಾಶಯ. ನೀವು ಕೊಟ್ಟ ವಿಡಿಯೋ ಚಿತ್ರಣ ಗಳು ತು೦ಬಾ ಚೆನ್ನಾಗಿವೆ.

ದೀಪಸ್ಮಿತಾ said...

ನಮ್ಮ ಬ್ಲಾಗ್ ಮಿತ್ರರೆಲ್ಲರಿಗೂ ಕನ್ನಡ ಹಬ್ಬದ ಶುಭಾಷಯಗಳು

Shashi jois said...

ನಿಮಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು...

ಅಪ್ಪ-ಅಮ್ಮ(Appa-Amma) said...

ಬಾಲು ಅವರೇ,
ಕನ್ನಡದ ಸುಂದರ ನುಡಿ-ನೆಲ-ಜನದ ಬಗೆಗಿನ ನಿಮ್ಮ ಸವಿ ಮಾತುಗಳು ಮನಕ್ಕೆ ಹಿಡಿಸಿದವು.ನಿಮ್ಮ ಕನ್ನಡತನಕ್ಕೆ ವಂದನೆ.

ಕನ್ನಡ ರಾಜ್ಯೋತ್ಸವದ ಶುಭಾಶಯಗಳು

sunaath said...

ಬಾಲು,
ಬರುತ್ತಿರುವ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ನಿಮ್ಮ ಕನ್ನಡ ಪ್ರೀತಿ ನನ್ನನ್ನು ಪುಳಕಿತಗೊಳಿಸುತ್ತದೆ. ‘ಕನ್ನಡವೆನೆ ಕುಣಿದಾಡುವದೆನ್ನೆದೆ, ಕನ್ನಡವೆನೆ ಕಿವಿ ನಿಮಿರುವದು’ ಎನ್ನುವ ಕವಿವಾಣಿ ನೆನಪಾಗುತ್ತಿದೆ.

ಅನಂತ್ ರಾಜ್ said...

ರಾಜ್ಯೋತ್ಸವಕ್ಕೆ ಉತ್ತಮ ಲೇಖನ ಮತ್ತು ವಿಡಿಯೋ ಚಿತ್ರಗಳು ಬಾಲು ಸರ್...ತಮಗೂ ರಾಜ್ಯೋತ್ಸವದ ಶುಭಾಶಯಗಳು.

ಅನ೦ತ್

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...

ನೀವು ಕೊಟ್ಟ ವಿಡಿಯೋ ಚಿತ್ರಣ ಗಳು ತು೦ಬಾ ಚೆನ್ನಾಗಿವೆ.ಕನ್ನಡ ರಾಜೋತ್ಸವ ಕೇವಲ ಆಚರಣೆಯಾಗದೆ .ಕನ್ನಡವೇ ಎಲ್ಲೆಡೆ ಮೊಳಗಲಿ. ಷುಭಾಶಯಗಳೊ೦ದಿಗೆ ಅಭಿನ೦ದನೆಗಳು.

ಮನಮುಕ್ತಾ said...

ನಿಮಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು..ಬಾಲು ಅವರೆ.

shivu.k said...

ಬಾಲು ಸರ್,

ನೀವು ಹಾಕಿರುವ ವಿಡಿಯೋಗಳಲ್ಲಿ ಮೊದಲನೆಯದು ಫೋಟೋಗಳನ್ನು ಜೋಡಿಸಿ ಮಾಡಿರುವ ವಿಡಿಯೋ. ತುಂಬಾ ಚೆನ್ನಾಗಿ ಮಾಡಿದ್ದಾರೆ. ಅದನ್ನು ನಮಗೆ ನೋಡಲು ಕೊಟ್ಟ ನಿಮಗೆ ಧನ್ಯವಾದಗಳು.
ನಿಮಗೂ ಕನ್ನಡ ರಾಜ್ಯೊತ್ಸವದ ಶುಭಾಶಯಗಳು.

ಹಳ್ಳಿ ಹುಡುಗ ತರುಣ್ said...

baalu sir kannada rajyostavada shubhashayagalu... videos elle chenagi ive sir..

Unknown said...

Rajyotsava wishes.
Very nice collection of videos for the occasion.

Unknown said...

ಕನ್ನಡ ರಾಜ್ಯೋತ್ಸವದ ಶುಭಾಶಯಗಳು..

Shiv said...

ಬಾಲು ಅವರೇ,
ಕನ್ನಡ ರಾಜ್ಯೋತ್ಸವದ ಶುಭಾಶಯಗಳು !

balasubramanya said...

ಪ್ರೀತಿಯಿಂದ ಆಗಮಿಸಿ ಕನ್ನಡ ರಾಜ್ಯೋತ್ಸವದ ಶುಭಾಷಯ ಸ್ವೀಕರಿಸಿದ ಹಾಗು ಬೆನ್ನು ತಟ್ಟಿದ ಎಲ್ಲಾ ಬ್ಲಾಗ್ ಗೆಳೆಯರಿಗೆ ವಂದನೆಗಳು.

Unknown said...

ನೀವು ಸಿದ್ದರಾಗಿ ಕನ್ನಡ ರಾಜ್ ಉತ್ಸವದ ಸಂದರ್ಭದಲ್ಲಿ ಒಂದು ಪ್ರಮುಖ ಭಾಷೆ ಕನ್ನಡ ಸಾಹಿತ್ಯ ದ ಬಗ್ಗೆ ಮಾಹಿತಿ ಮತ್ತು ಅದರ ಬಗ್ಗೆ ಒಂದು ಪ್ರಮುಖ ಘಟ್ಟಗಳ ಮೂಲಕ ತಮ್ಮ ಸ್ವಂತ ಪಾತ್ರದ ಕುರಿತು ತಿಳಿಸಿ.