ಹಾಯ್ !! ನಾನು ಅನಘ !!! |
ಅಲ್ಲ ಮೈಸೂರಿನಲ್ಲಿ ಇದ್ದುಕೊಂಡು ದಸರಾ ಬಗ್ಗೆ ಬರೆಯಲ್ವಾ !! ಅಂತಾ ಕೆಲವು ಗೆಳೆಯರ ಹಕ್ಕೊತ್ತಾಯ . ಅದಕ್ಕೆ ಅವ್ರ ಹತ್ತಿರ ಹೇಳ್ದೆ ಅಲ್ಲಾ ಕಣ್ರಯ್ಯ ಯಾವ ಪೇಪರ್ ತೆಗೆದರೂ , ಟೀ.ವಿ ಚಾನಲ್ ಹಾಕಿದರೂ ದಸರಾ ದಸರಾ ಅಂಥಾ ವಿಶೇಷ ಮಾಹಿತಿ ಬರುತ್ತಿರುವಾಗ ಮದ್ಯದಲ್ಲಿ ನನ್ನ ತುತ್ತೂರಿಲೂ ದಸರಾ ಅಂದ್ರೆ ಇಂದೇ ಕೊನೆ ಆಟ ನಾಳೆ ಅದೇ ಆಟ ಅನ್ನೋ ಹಾಗೆ ಓದುಗರಿಗೆ ಬೇಸರ ವಾಗುತ್ತೆ !! ಈಗ ಬೇಡ ಸುಮ್ಮನಿರು ಅಂತಾ ಅಂದೇ .ಹಾಗೆ ಮಾತಾಡ್ತಾ ಲೋ ಕಳೆದವಾರ ಬೆಂಗಳೂರಿಗೆ ಹೋಗಿದ್ಯಲ್ಲ ಆ ಮಗೂ ಬಗ್ಗೆ ಒಂದು ಸಾರಿ ಬರಿ, ಚಿತ್ರಗಳು ಚೆನ್ನಾಗಿವೆ ಅಂದಾ ಗೆಳೆಯ.ಸರಿ ಬಿಡಪ್ಪಾ ಸಧ್ಯಕ್ಕೆ ನನ್ನ ತಲೇನೂ ಖಾಲಿ ಅದನ್ನೇ ಬರೀತೀನಿ ಅಂತಾ ಶುರುಮಾಡಿದೆ . ಹೌದು ನಮ್ಮ ಸುತ್ತ ಮುತ್ತ ಹಲವು ಮಕ್ಕಳು ಕಾಣ ಸಿಗುತ್ತವೆ . ಒಂದೊಂದು ಮಗುವಿಗೂ ಅದರದೇ ಆದ ವಿಶೇಷ ಗುಣಗಳಿರುತ್ತದೆ.ಆದರೆ ನಾವು ಮಾತ್ರ ಅದನ್ನು ಗಮನಿಸಿರುವುದಿಲ್ಲ.ಕೆಲವು ಮಕ್ಕಳು ಚಿನಕುರುಳಿ ಯಂತೆ ಪಟ ಪಟ ಅಂತಾ ಮಾತಾಡಿನಲಿದರೆ., ಇನ್ನು ಕೆಲವು ಮಕ್ಕಳು ಸೈಲೆಂಟಾಗಿ ತಮ್ಮ ಕಣ್ಣು ಗಳಲ್ಲೇ ಮಾತಾಡಿ ಅಚ್ಚರಿ ಮೂಡಿಸುತ್ತವೆ. ಇಂತಹ ಒಂದು ವಿಶೇಷದ ಮಗು ನನಗೆ ಕಳೆದವಾರ ಬೆಂಗಳೂರಿನಲ್ಲಿ ಸಿಕ್ಕಿತು
ಈ ಪೌಡರು ನಂಗಿಷ್ಟ !! |
.ಅವಳೇ ನಮ್ಮ ಮುದ್ದಿನ ಕೂಸು ಅನಘ .ಈ ಮುದ್ದಿನ ಕಂದ ಕಣ್ಣಿನಲ್ಲೇ ಮಾತನಾಡಿ ಎಲ್ಲರ ಮನ ಗೆಲ್ಲುತ್ತದೆ . ಮನೆಯ ಎಲ್ಲರ ಮುದ್ದಿನ ಕೂಸು . ತನ್ನ ತಾಯಿಯೊಡನೆ ಸೈಲೆಂಟಾಗಿ ಭಾವನೆಗಳ ಸಂಭಾಷಣೆ ನಡೆಸಿದ ಕೆಲವು ಅಮೂಲ್ಯ ಕ್ಷಣಗಳು . ನನ್ನ ಕ್ಯಾಮರ ದಲ್ಲಿ ಸೆರೆಸಿಕ್ಕಿದ್ದು ಹೀಗೆ .
ನಮ್ಮಮ್ಮ ನಂಗೆ ಲ್ಯಾಪ್ ಟಾಪ್ ಕೊಡಲ್ಲಾ ಗೊತ್ತ !! |
ದೊಡ್ಡವರೆಲ್ಲಾ ಜಾಣರಲ್ಲಾ !!! |
ಅಮ್ಮನಿಗೆ ನಾನೇ ಗುಡ್ ಮಾರ್ನಿಂಗ್ ಹೇಳೋದು ಗೊತ್ತ !! |
ಅಮ್ಮ ಏಳಲ್ವಾ ನಿನ್ ಸಂಗಾ ಟೂ ಟೂ !! |
ಅಮ್ಮ ಒಂದು ಉಮ್ಮ ಕೊಡ್ಲಾ ?? |
ನಮ್ಮಮ್ಮ ಒಳ್ಳೆವ್ರೂ!! |
ಬೇಡ ದೊಡ್ಡಪ್ಪಾ ನಂಗೆ ನಾಚ್ಕೆ ಆಗುತ್ತೆ !!! |
ಅಮ್ಮ ಏತ ಏತ ಆಟ ಆಡಿಸ್ತಾರೆ ಗೊತ್ತ !!!!! |
"ಅಮ್ಮ ನಿನ್ನ ತೋಳಿನಲ್ಲಿ ಕಂದಾ ನಾನು" ಅಂತಾ ಲಾಲಿ ಹಾಡ್ಲಾ ಅಮ್ಮ !! |
ಅಮ್ಮ ಪಾಪ ಸುಸ್ತಾಗಿದೆ ದೊಡ್ಡಪ್ಪಾ !!! |
ಅಮ್ಮ ಏನಾಯ್ತು ಗೊತ್ತ ??? |
ಪ್ರೀತಿಯ ನಮ್ಮಮ್ಮ ನಂಗಿಷ್ಟ !!! |
ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು !!! |
ಹೆಂಗಿತ್ತು ನಮ್ಮಮ್ಮನ ಜೊತೆ ನನ್ನ ಆಟ??? |
8 comments:
ಬಾಲೂ ಸರ್;ಅನಘಾಳ ಭಾವ ಪೂರ್ಣ ಚಿತ್ರಗಳು ಬಹಳ ಮುದ್ದಾಗಿವೆ.ನಿಮ್ಮ ಬರಹ ಕೂಡ ತುಂಬಾ ಇಷ್ಟವಾಯಿತು.ನಮಸ್ಕಾರ
tumba chennagidaLe paapu, nimma lekhanavu aste chennagide..
ಸರ್, ಭಾವತುಂಬಿದ ಚಿತ್ರಗಳು ಚೆನ್ನಾಗಿವೆ.
ಸರ್ ಅನಘಳ ತುಂಟಾಟದ ಫೋಟೋ ಅದಕ್ಕೆ ತಕ್ಕ ಹಾಗೆ ನಿಮ್ಮ ಮಾತು ಇಷ್ಟ ಆಯ್ತು.
ಮುದ್ದಾಗಿದೆ ಫೋಟೋಗಳು
ಚಿತ್ರ ಲೇಖನ ಸೊಗಸಾಗಿದೆ.
ಅನಘ ತುಂಬಾ ಮುದ್ದಾಗಿದೆ. ಸುಂದರ ಚಿತ್ರಗಳು.
Anaghala Photo channgi bandive balu:-)
Avarappa avarammanige Drusti tegeyalu helidderi taane :-)
Post a Comment