Monday, October 11, 2010

10 -10 - 10 ರ ಆಟ !!ಅತ್ತ ಶಿವೂ ಜೊತೆ ಸುಂದರ ನೋಟ !!!ಇತ್ತಾ ಪ್ರಕಾಶ್ ಹೆಗ್ಡೆ ಹಾಗು ಗೆಳೆಯರ ಜೊತೆ ಆತ್ಮೀಯ ಊಟ !!!!

ಶಿವೂ ಹಾಗೂ ಆಯೋಜಕರು.
ಕಳೆದ ಭಾನುವಾರ ಒಂಥರಾ ಬಂಪರ್ ಕಣ್ರೀ !! ಬೆಂಗಳೂರಿನಲ್ಲಿ ನಾನು ಬ್ಯುಸಿಯೋ ಬ್ಯುಸಿ . ಒಂದು ಕಡೆ ಶಿವೂ ಮತ್ತೊಂದು ಕಡೆ ಪ್ರಕಾಶ್ ಹೆಗ್ಡೆ. ಒಬ್ಬರು ಬೆಂಗಳೂರಿನ ಒಂದು ತುದಿಯಲ್ಲಿ ಮತ್ತೊಬ್ಬರು ಬೆಂಗಳೂರಿನ ಮತ್ತೊಂದು ತುದಿಯಲ್ಲಿ. ಈ ಮಧ್ಯೆ ಬೆಂಗಳೂರಿನ ಭಾನುವಾರದ ಟ್ರಾಫಿಕ್ ನಲ್ಲಿ ಸಿಲುಕಿ ಒದ್ದಾಟ ಮಾಡಿದ್ದು ವಿಶೇಷ.ಇದೆಲ್ಲಾ ನಾನು ಸೃಷ್ಟಿಸಿಕೊಂಡ ಎಡವಟ್ಟು ಅನ್ನಿ.ಮೈಸೂರಿನಿಂದ ಶನಿವಾರ ಬೆಂಗಳೂರಿಗೆ ಪಯಣ ಆರಂಭ .ದಾರಿಯಲ್ಲಿ ನೆನಪಾಗಿ  ಛಾಯ ಕನ್ನಡಿ ಶಿವೂಗೆ ಮೊಬೈಲ್ ಫೋನ್ ಗೆ ಟ್ರೈ ಮಾಡಿದರೆ ಶಿವೂ ವ್ಯಾಪ್ತಿ ಪ್ರದೇಶದಿಂದ ಹೊರಗೆ!! ಇನ್ನು ಇಟ್ಟಿಗೆ ಸಿಮೆಂಟಿನ ಪ್ರಕಾಶ್ ಹೆಗ್ಡೆ ಗೆ  ಫೋನ್ ಮಾಡಿದರೆ ಜೈ ಹೋ!!!   ಮಾರಾಯ್ರೆ ಸ್ವಲ್ಪ ಬುಸ್ಸಿ ಶನಿವಾರದ ಪೇಮೆಂಟು ಮತ್ತೆ ಕಾಲ್ ಮಾಡ್ತೀನಿ ಅಂದ್ರೂ !!ಸರಿ ಬೆಂಗಳೂರಿಗೆ ತಲುಪಿ ನನ್ನ ಬಳಗದವರ ಮನೆಯಲ್ಲಿ ಉಳಿದು ನನ್ನ ಕೆಲಸ ಮಾಡಿಕೊಂಡೆ. ಮಾರನೆಯ ದಿನ ಪ್ರಕಾಶ್        
ಈ ಜೀವನ ಬೇವು ಬೆಲ್ಲ !!1


ಹೆಗ್ಡೆ ಫೋನ್ ಬಾಲೂ ನಮ್ಮ ಮನೆಗೆ ಬರ್ರಿ ಮರೆಯದೆ ಊಟಕ್ಕೆ ಬರಬೇಕೂ ಅಂತ ಒತ್ತಾಯ.ತಾಳು ನಮ್ಮ ಶಿವೂ ಜೊತೇಲೆ ಹೋಗೋಣ ಅಂತ ತೀರ್ಮಾನಿಸಿ ಅವರಿಗೆ ಫೋನ್ ಮಾಡಿದ್ರೆ ಸಾರ್ ಚಿತ್ರ ಕಲಾ ಪರಿಷತ್ ನಲ್ಲಿ ಫೋಟೋಗ್ರಫಿ ವರ್ಲ್ಡ್ ಕಪ್ ಇದೆ ಬನ್ನಿ!! ತುಂಬಾ ಒಳ್ಳೆಯ ಅವಕಾಶ ಅಂದ್ರೂ.ನಾನು ಕೇಳೋ ಮುಂಚೆ ಸಾರ್ ಅಲ್ಲಿಂದ ಗೊತ್ತಲ್ಲ ನಮ್ಮ ಮನೆಯಲ್ಲಿ ಊಟ ಅನ್ನೋದೇ!!! ಶಿವೂ ಸರ್ ಪ್ರಕಾಶ್ ಮನೇಲೂ ಊಟ ಇದೆ ಅವರೂ ಕರ್ದಿದ್ದಾರೆ ಅಂದೇ.ನಿಮ್ಮಜೊತೆ ನೋಟ ನೋಡಿ ನಂತರ ಪ್ರಕಾಶ್ಮನೆಗೆ ಹೋಗುತ್ತೇನೆ ಅಂತಾ ಶಿವುಗೆ ಹೇಳಿ  ಸಮಾದಾನ    ಮಾಡಿಕೊಂಡೆ.   ಈ ಮದ್ಯೆ ಪ್ರಕಾಶ್ ಹೆಗ್ಡೆ ಫೋನ್ ಬಂತು ಬಾಲೂ ಜಿ ಪರಾಂಜಪೆ ಅವರೂ ನಮ್ಮ ಮನೆಗೆ ಬರ್ತಾರೆ ಅವರ ಜೊತೆ ಬನ್ನಿ ಅಂದ್ರೂ.ತಕ್ಷಣ ಪರಾಂಜಪೆ ಫೋನು ಅವರೂ ಸಹ ಪ್ರಕಾಶ್ ಹೆಗ್ಡೆ ಮನೆಗೆ ಹೋಗೋ ಬಗ್ಗೆ ತಿಳಿಸಿ ನಾನಿದ್ದ ಬಸವನ ಗುಡಿ ಕಾಮತ್ ಬ್ಯೂಗಲ್ ರಾಕ್ ಹೋಟೆಲ್ ಬಳಿ ಬರೋದಾಗೆ ಹೇಳಿದ್ರೂ.ಹೀಗೆ ಹಲವಾರು ಎಡವಟ್ಟುಗಳ ಮದ್ಯೆ  ಪರಾಂಜಪೆ ಸಾರ್ ಅವರಿಗೆ ಬದಲಾದ ಕಾರ್ಯದ ಬಗ್ಗೆ ತಿಳಿಸಿ ನಾನು ನೇರವಾಗಿ ಪ್ರಕಾಶ್ ಹೆಗ್ಡೆ ಮನೆಗೆ ಬರುವುದಾಗಿ ತಿಳಿಸಿ.ನನ್ನ ತಮ್ಮ [ಮರಿ ಬಾಲೂ ]ನ ಜೊತೆ ಚಿತ್ರಕಲಾ ಪರಿಷತ್ ಗೆ ದೌಡಾಯಿಸಿದೆ.ಹನ್ನೊಂದು ವರೆಗೆ ಬರುವುದಾಗಿ ಶಿವೂ ಗೆ ಹೇಳಿದ್ದ ಜೀವ ಬೆಂಗಳೂರಿನ ಟ್ರಾಫಿಕ್ ನಲ್ಲಿ ನಲುಗಿ  ಹನ್ನೆರಡಕ್ಕೆ ತಲುಪಿತ್ತು.ಶಿವೂ ಭೇಟಿ ಮಾಡಿದ ನಾನು ಪರಸ್ಪರ ಮಾತು ಕತೆ ನಡೆಸಿ ಪ್ರದರ್ಶನಕ್ಕೆ ಇಟ್ಟಿದ್ದ ಛಾಯ ಚಿತ್ರಗಳ ಲೋಕದಲ್ಲಿ ಲೀನವಾದೆ.ಬನ್ನಿನನಗೆ ಇಷ್ಟವಾದ ಕೆಲವು ಚಿತ್ರಗಳನ್ನು ನಿಮ್ಮೊಂದಿಗೆ ಹಂಚಿ ಕೊಳ್ಳುತ್ತೇನೆ !!                                             
                                                                                                                                             


       ಹಲವು ದೇಶಗಳ ಅದ್ಭುತ ಚಾಯಚಿತ್ರಗಾರರ ಅಪರೂಪದ  ಚಿತ್ರಗಳ ಮೋಹಕ ಜಾಲದಲ್ಲಿ ನಾ ಸಿಲುಕಿದ್ದೆ!!   ಚಿತ್ರಕಲಾ ಪರಿಷತ್ ಗ್ಯಾಲರಿಯಿಂದ ಹೊರಗೆ ಬಂದ ನನಗೆ ಛಾಯ ಲೋಕದಿಂದ ಹೊರಗೆ ಬರಲು ಬಹಳ ಸಮಯ ಬೇಕಾಯಿತು. ಅದ್ಭುತ ಛಾಯ ಚಿತ್ರಗಳು. ಅದರಲ್ಲೂ ಕಾಡು ಪ್ರಾಣಿ ಪಕ್ಷಿಗಳ , ಪರಿಸರದ ಚಿತ್ರಗಳ ಸೆರೆ ಹಿಡಿಯಲು ಛಾಯಾ ಚಿತ್ರ ಗಾರರಿಗೆ ಒದಗಿರಬಹುದಾದ ಆತಂಕದ ಕ್ಷಣಗಳು,ಪ್ರಕೃತಿ ವೈಪರಿತ್ಯ , ಛಾಯ ಗ್ರಾಹಕರು ಕ್ಲಿಕ್ಕಿಸಲು  ತೆಗೆದು ಕೊಂಡಿರ ಬಹುದಾದ ಸಮಯ ,ಅದರ ಹಿಂದಿನ ಶ್ರಮ ಇವುಗಳು ಕಣ್ಣಿನ ಪರದೆಯಲ್ಲಿ ಮೂಡಿಬಂದವು. "ಸುಂದರ ಚಿತ್ರ ಛಾಯಾಗ್ರಹಣ ಮಾಡಲು ಛಾಯಗ್ರಾಹಕನೂ ಕವಿಯಾಗ ಬೇಕು" ಎಂಬ ಮಾತಿನಲ್ಲಿ ಸತ್ಯ ವಿದೆ ಅನ್ನಿಸಿತು.


           
     ಹೊರಗೆ ಬಂದರೆ ಕರ ಕುಶಲ ವಸ್ತುಗಳ ಮಾರಾಟ ಭರ್ಜರಿಯಾಗಿ ಸಾಗಿತ್ತು. ಆಗಲೇ ಸ್ವಲ್ಪ ಗಾಳಿ ಬೀಸಿ ವಾಸ್ತವದೆಡೆಗೆ ಬಂದೆವು.ಮುಂದೆ ಈ ತುದಿಯಿಂದ ಮತ್ತೊಂದು ತುದಿಗೆ ಪಯಣ ಸ್ವಲ್ಪ ಕಟ್ ಮಾಡಿದ್ರೆ ಪ್ರಕಾಶ್ ಹೆಗ್ಡೆ ಮನೆ ಪ್ರವೇಶದ ಸೀನು !!!                 

ಅರೆ ಇದೇನಿದು ನಮ್ಮ ಪರಾಂಜಪೆ ಸರ್ ಜೊತೆ ಚಂದ್ರು ಕ್ಷಣ ಚಿಂತನೆ ಮಾಡುತ್ತಿದ್ದಾರೆ!! ಬನ್ನಿ ಬನ್ನಿ ಅಂಥಾ" ನಮ್ಮನೆ " ಯ ಬಳಗದವರಿಂದ ನಗು ಮೊಗದ ಸ್ವಾಗತ .ಬನ್ನಿ ಕುಡಿಯಲು ಏನ್ ಕೊಡ್ಲಿ ಅಂತಾ ಮನೆಯೊಡತಿ ಕೇಳಿದರು ಸ್ವಲ್ಪ ನೀರು ಕುಡಿದು ಊಟದ ಮನೆಗೆ ತೆರಳಿದೆವು !!!  . ಪಾಯಸ, ಅಮಟೆಕಾಯಿ ಗೊಜ್ಜು, ಕೆಸುವಿನೆಲೆಯ ಚಟ್ಟಿ, ಬದನೆಕಾಯಿ ಪಲ್ಯ, ಹುಣಸೆ ತೊಕ್ಕು, ತಂಬುಳಿ, ತೊವ್ವೆ ಮತ್ತು ಹಪ್ಪಳ ಎಲ್ಲ ವ್ಯಂಜನಗಳನ್ನೂ ಸವಿದದ್ದಾಯಿತು   ಊಟದ ಮದ್ಯೆ ಆತ್ಮೀಯವಾದ ಪ್ರೀತಿ ತುಂಬಿದ ಉಪಚಾರ  ನಾನಂತೂ ದಿನನಿತ್ಯಕ್ಕಿಂತ ಸ್ವಲ್ಪ ಜಾಸ್ತಿ ತಿಂದೆ ಬಿಡಿ!! ಸಕ್ಕರೆಯ ಮಾತುಗಳ ನಡುವೆ ಅಕ್ಕರೆಯ ಊಟ ಮಾಡಿ ಈ  ಮ್ಯಾನ್ ನಲಿದಿತ್ತು.ಹಾಗೆ ಉತ್ತರ ಕನ್ನಡ ದ "ಅಪ್ಪೆ ಹುಳಿ "ನೆನಪಿಗೆ ಬಂದು ಅದರ ಬಗ್ಗೆ ಮಾತು ಮುಗಿಸಿ ಊಟ ಪೂರೈಸಿದೆವು .ನಂತರ ಉಭಯ ಕುಶಲೋಪರಿ ಮಾತಿನಲ್ಲಿ ಪ್ರಪಂಚಗಳ ವಿಧ್ಯಾಮಾನ ,ಸಾಹಿತಿಗಳ ಬಗ್ಗೆ ಸ್ವಾರಸ್ಯಕರ  ಮಾತುಗಳು ಪ್ರಕಾಶಣ್ಣನ             ಕಾಲೇಜು ದಿನಗಳಲ್ಲಿ ಕಡಲ ತೀರದ ಭಾರ್ಗವ 'ಶಿವರಾಮ ಕಾರಂತರ "ಒಡನೆ ಜರುಗಿದ ಘಟನಾವಳಿಗಳ ಮೆಲುಕು !!  ಹೊರಡುವ ವೇಳೆಗೆ ಮನೆಗೆ ಬಂದ ಆತ್ಮೀಯರನುಡಿ  ಬರೆಯಲು  ಪುಸ್ತಕ ಬಂತು ಇದು ನಾ ಕಂಡ ಅನುಕರಣೀಯ  ಹೊಸ ನಡವಳಿಕೆ ಏಕೆಂದರೆ ನಮ್ಮ ಭೇಟಿ ಬರಿ ನೆನಪಾಗಿ ಕಳೆದು ಹೋಗದಿರಲು ಇದು ಸಹಕಾರಿ .ಜೊತೆಗೆ ಪುಸ್ತಕ ದ ಉಡುಗೊರೆ ಬೇರೆ!!! ಸರಿ ಸ್ವಾಮೀ ನಿಮ್ಮ ಬಳಿ ಕಳೆದ ಸಮಯ ಅಮೂಲ್ಯ ಅಂತಾ ಹೊರಡುವ ತಯಾರಿಯಲ್ಲಿದ್ದ ನಮಗೆ ಪ್ರಕಾಶ್ ಹೆಗ್ಡೆ ಶ್ರೀಮತಿಯವರಿಂದ  ಅಲ್ಲ ಏನು ಕುಡೀದೆ ಹೊರಡೋದ  ನಿಮಗೆ ಕಾಫಿನೋ ,ಟೀನೋ ಅತ್ವ ಕಷಾಯ ಕೊಡಲೋ ಅನ್ನೋದೇ.!!!ಸರಿ ಮೇಡಂ ಕಶಾಯನೆ ಕೊಡಿ ಅಂದೇ. ಖಾರ ಮಿಕ್ಸ್ಚರ್ ಜೊತೆ ಕಷಾಯ ಹಾಜರ್ !!! ಕೃತಜ್ನತೆ ಇಂದ ಸ್ವೀಕರಿಸಿ ಹೊರಡಲು ಅನುವಾಗಲು ಹೊರಟಾಗ ಊಟ  ಬಡಿಸಿದ ಮಾನ್ಯ ಸದಸ್ಯರ ಫೋಟೋ ತೆಗೆದಿಲ್ಲ ಅನ್ನುವ ವಿಚಾರ          
ಜ್ಞಾಪಕಕ್ಕೆ ಬಂದಿತು ಬನ್ನಿ ಪ್ರಕಾಶಣ್ಣನ ಕುಟುಂಬ ನೋಡೋಣ!!
ನಮ್ಮ ಸಂಸಾರ  ಆನಂದ ಸಾಗರ .
ಪ್ರಕಾಶಣ್ಣನ  ಮನೆಯ ಸದಸ್ಯರ ನಗುಮುಖದ ಪ್ರೀತಿಗೆ ಕರಗಿ ಭಾರವಾದ ಹೊಟ್ಟೆಗಳನ್ನು ಹೊತ್ತು  ಸುಂದರ ವಾದ ಕ್ಷಣಗಳನ್ನು ಮನದಲ್ಲಿ ತುಂಬಿ ಕೊಂಡು ಹೊರ ಬಂದೆವು.ಆಗ  ಮನದಲ್ಲಿ ಮೂಡಿದ ಒಂದೇ ಪ್ರಶ್ನೆ ????? ಪ್ರಶ್ನೆ ಹೀಗೂ ಉಂಟೆ !!! ಬೆಂಗಳೂರಿನ ಸುಂದರ ಹೃದಯಗಳ ಮಧ್ಯದಿಂದ "ನಿಮ್ಮೊಳಗೊಬ್ಬ ಬಾಲೂ" ಮೈಸೂರು. [ ಶಿವೂ ಹಾಗು ಪ್ರಕಾಶಣ್ಣ ,ಪರಾಂಜಪೆ, ಚಂದ್ರು ಎಲ್ಲರಿಗೂ ನಮನಗಳು.ನಿಮ್ಮ ಸ್ನೇಹಕ್ಕೆ ನಾನು ಋಣಿ .]
                                                                                                                                                                                                                                                                                                                                                                                                                                                                                                                                                                                                

9 comments:

ಜಲನಯನ said...

ಬಾಲು ಹೊಟ್ಟೆಗೆ ಹಾಕಿಕೊಂಡು ನಮಗೆ ಕಿಚ್ಚು ಹಚ್ಚುವುದು...ತರವೇ...ಹಹಹ...ಒಳ್ಲೆಯ ಅವಕಾಶ ಶಿವು ಚಿತ್ರಗಳ ಕಣ್ಣಿಗೆ ಊಟ...ಪ್ರಕಾಶನ ಮನೆಯಲ್ಲಿ ಪರಾಂಜಪೆ, ಚಂದ್ರು ಜತೆ ಹೊಟ್ಟೆಗೆ ಊಟ....ಹಹಹ ಚನ್ನಾಗಿದೆ ನಿಮ್ಮ ವಾರಾಂತ್ಯ ಕಾರ್ಯಕ್ರಮ...ಡಿಸೆಂಬರ್ ಮೊದಲವಾರ ಶಾರ್ಟ್ ವಿಸಿಟ್ ಬರ್ತಿದ್ದೀನಿ ಸಾಧ್ಯವಾದ್ರೆ ಎಲ್ಲಾ ಸೇರೋಣ,,,,

ಅಪ್ಪ-ಅಮ್ಮ(Appa-Amma) said...

ಬಾಲು,

ಸಕತ್ ಟ್ರಿಪ್ !
ಸುಂದರ ನೋಟಗಳನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು

prabhamani nagaraja said...

ಅಬ್ಬ! ನಿಮ್ಮ ಲೇಖನದಿ೦ದ ಕಣ್ಣಿಗೆ ಹಾಗೂ ಮನಸ್ಸಿಗೆ ಹಬ್ಬವಾಯಿತು. ಬರವಣಿಗೆಯ ಧಾಟಿ ಚೆನ್ನಾಗಿದೆ. ಧನ್ಯವಾದಗಳು. ನನ್ನ ಬ್ಲಾಗ್ ಗೆ ಒಮ್ಮೆ ಬನ್ನಿ.

ಕಲರವ said...

baaluravare serehididiruva caayaa chitragalu bahala sundaravaagive.tamma anubhava kuuda.abhinandanegalu.

ಕ್ಷಣ... ಚಿಂತನೆ... bhchandru said...

ಸರ್‍, ನನಗೆ ತಪ್ಪಿಹೋಗಿದ್ದ ವಿಶ್ವಕಪ್ ಛಾಯಾಚಿತ್ರಗಳನ್ನು ಕೊಟ್ಟಿದ್ದೀರಿ. ನಾನು ಅಲ್ಲಿಗೆ ಹೊರಟವನು, ಇಲ್ಲಿಗೆ ಬಂದಿದ್ದೆ (ಪ್ರಕಾಶಣ್ಣ ಮನೆಗೆ). ಒಟ್ಟಿನಲ್ಲಿ ಒಂದು ಸುಂದರವಾದ ದಿನದೊಂದಿಗೆ, ಸುಂದರ ಚಿತ್ರಗಳೊಂದಿಗೆ, ರುಚಿಯಾದ ಊಟದೊಂದಿಗೆ ಚೆನ್ನಾಗಿತ್ತು.

ಸ್ನೇಹದಿಂದ,

PARAANJAPE K.N. said...

ಹೌದು, ಅ೦ದು ನೀವು "ನಮ್ಮೊಳಗೊಬ್ಬ ಬಾಲು" ಆಗಿ ಪ್ರಕಾಶರ ಮನೆಯಲ್ಲಿ ಸಿಕ್ಕಿದಿರಿ. ನಿಮ್ಮ ಮತ್ತು ಪ್ರಕಾಶರ ಜೊತೆ ಮಾತುಕತೆ, ಪ್ರಕಾಶರ ಮನೆಮ೦ದಿಯ ಆತಿಥ್ಯ ಮರೆಯಲಾಗದ್ದು. ಜೊತೆಗೆ ನಾನು ನೋಡದ ಚಿತ್ರಕಲಾ ಪರಿಷತ್ ಫೋಟೋ ಗಳನ್ನೂ ಬೇರೆಬ್ಲಾಗಿಗೇರಿಸಿ ಉಪಕರಿಸಿದ್ದೀರಿ. ಎಲ್ಲವೂ ಚೆನ್ನಾಗಿವೆ.

ಸುಬ್ರಮಣ್ಯ ಮಾಚಿಕೊಪ್ಪ said...

:-)

shivu.k said...

ಬಾಲು ಸರ್,

ಇಡೀ ದಿನದ ಕಾರ್ಯಕ್ರಮವನ್ನು ನೀವು ಚೆನ್ನಾಗಿ enjoy ಮಾಡಿದ್ದೀರಿ ಅನ್ನೋದು ನಿಮ್ಮ ಬರಹ ಮತ್ತು ಚಿತ್ರಗಳನ್ನು ನೋಡಿದಾಗ ತಿಳಿಯುತ್ತದೆ. ನನ್ನ ಬ್ಲಾಗಿನಲ್ಲಿ ಹಾಕಿದ್ದಕ್ಕಿಂತ ಉತ್ತಮ ಚಿತ್ರಗಳನ್ನು ಹಾಕಿದ್ದೀರಿ..ಅದಕ್ಕಾಗಿ ಥ್ಯಾಂಕ್ಸ್.

ಮನದಾಳದಿಂದ............ said...

ಬಾಲು ಸರ್,
ಬಹಳ ಹೊಟ್ಟೆ ಉರಿಸ್ತಾ ಇದ್ದೀರಾ........!
ಇರ್ಲಿ ಬಿಡಿ,
ಚಂದ ಚಿತ್ರಗಳನ್ನು ಕೊಟ್ಟು ಕಣ್ಣು ತುಂಬಿಸಿದ್ದೀರಾ........